"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 3 July 2020

•► ️ಜುಲೈ 03 ರ (03 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು : (Important facts from the current events of 03 July 2020)

•► ️ಜುಲೈ 03 ರ (03 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು :
(Important facts from the current events of  03 July 2020)
━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು
(current affairs notes)


• ಜುಲೈ 03 : ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನ

• ವರ್ಷದ ಮೂರನೇ ಮತ್ತು ಅಂತಿಮ ಚಂದ್ರಗ್ರಹಣ ಜುಲೈ 5ರಂದು ನಡೆಯಲಿದೆ.

• ಅಸ್ಸಾಂನ 22 ಜಿಲ್ಲೆಗಳಲ್ಲಿ ಮಳೆ ಮುಂದುವರೆದದ್ದು, ಬ್ರಹ್ಮಪುತ್ರ ನದಿ ಪಾತ್ರದಲ್ಲಿ ಭೀಕರ ಪ್ರವಾಹ.
— ಅಸ್ಸಾಂ :
- ರಾಜಧಾನಿ : ದಿಸ್ಪುರ್.
- ಮುಖ್ಯ ಮಂತ್ರಿ :  - ತರುಣ್ ಗೊಗೋಯ್
- ರಾಜ್ಯಪಾಲ : ಸಯ್ಯದ್ ಸಿಬ್ತೆ ರಜಿ.
- ಬೋಡೋ ಹೋರಾಟದ ನಾಡು.
- ಪ್ರತಿ ವರ್ಷ ಮಳೆಗಾಲದಲ್ಲಿ ಬ್ರಹ್ಮಪುತ್ರಕ್ಕೆ ಬರುವ ನೆರೆ,
- ಕಾಜಿರಂಗಾ ವನ್ಯಧಾಮ - ಘೇಂಡಾ ಮೃಗಗಳು.
- ಸಂಗೀತಕಾರ ಭೂಪೆನ್ ಹಜಾರಿಕಾ ಅವರ ನಾಡು,
- ಬಿಹೊ ನತ್ಯಕ್ಕೆ ಹೆಸರುವಾಸಿಯಾದ ಪ್ರದೇಶ.


— ಬ್ರಹ್ಮಪುತ್ರ ನದಿ : ( 2900 ಕಿ. ಮಿ. ಉದ್ದ ಹರಿಯುವ   ನದಿ)
- ಹಿಮಾಲಯದ ಕೈಲಾಸಪರ್ವತದ ಹಿಮನದಿಗಳಲ್ಲಿ, ಮಾನಸ ಸರೋವರದಲ್ಲಿ ತಿಬ್ಬತ್‌ನಲ್ಲಿ ಇದರ ಉಗಮ.
- ಮಾನಸ ಸರೋವರ ಸಿಂಧೂ ಹಾಗೂ ಬ್ರಹ್ಮಪುತ್ರ ನದಿಗಳ ಉಗಮಸ್ಥಾನ.
- ಈ ನದಿಗೆ ಪ್ರತಿ ಪ್ರದೇಶದಲ್ಲಿ ಬೇರೆ ಹೆಸರು.
ಟಿಬೆಟ್-ಚೀನಾದಲ್ಲಿ — ಯರ್ಲು ಟ್ಸಾಂಗ್‌ಪೋ, ಅರುಣಾಚಲ ಪ್ರದೇಶ — ಸಿಯಾಂಗ್.
ಅಸ್ಸಾಂನ ಉತ್ತರ ಭಾಗದಲ್ಲಿ — ಲೋಹಿತ್ ಅಥವಾ ಕೆಂಪು ನದಿ ಎಂದೂ,
ಬಾಂಗ್ಲಾ ದೇಶದಲ್ಲಿ — ಜಮುನಾ ಎಂದು ಕರೆಯುತ್ತಾರೆ.
- ಇದು ಗಂಗಾ ನದಿ ಜತೆ ಸೇರಿದ ನಂತರ ಸಮುದ್ರ ಸೇರುತ್ತದೆ.
- ಈ ನದಿಯ ಹೆಚ್ಚಿನ ಹರಿವು 1625 ಕಿ.ಮಿ ಟಿಬೆಟ್‌ನಲ್ಲಿ, ಭಾರತದಲ್ಲಿ 918 ಹಾಗೂ ಬಾಂಗ್ಲಾ ದೇಶದಲ್ಲಿ 357 ಕಿ.ಮಿ ಹರಿಯುತ್ತದೆ.
- ಬ್ರಹ್ಮಪುತ್ರೆಯ ಉಪನದಿಗಳಾದ ಸಿಯಾಂಗ್, ದಿಭಾಂಗ್ ಹಾಗೂ ಲೋಹಿತ್ ಅರುಣಾಚಲ ಪ್ರದೇಶದ ಗುಡ್ಡಗಾಡಿನಲ್ಲಿ ಹರಿದು ನಂತರ ಅಸ್ಸಾಂನ ಬಯಲಿನಲ್ಲಿ ಸೇರುತ್ತದೆ.


• ಪ್ರಸ್ತುತ ರಷ್ಯಾ ಅಧ್ಯಕ್ಷ : ವ್ಲಾಡಿಮಿರ್‌ ಪುಟಿನ್
(ಮಾರ್ಚ್ 19, 2018 ರಂದು ಪುಟಿನ್ ಅವರು ರಷ್ಯಾ ಅಧ್ಯಕ್ಷರಾಗಿ ನಾಲ್ಕನೇ ಬಾರಿ ಮರು ಆಯ್ಕೆಯಾದರು)‌


• ದೆಹಲಿಯಲ್ಲಿ ದೇಶದ ಮೊದಲ ಪ್ಲಾಸ್ಮಾ ಬ್ಯಾಂಕ್'ಗೆ ಚಾಲನೆ.
- ದೆಹಲಿಯ ಪ್ರಸ್ತುತ ಮುಖ್ಯಮಂತ್ರಿ : ಅರವಿಂದ ಕೇಜ್ರಿವಾಲ್.
- ದೆಹಲಿಯ ಇನ್ಸ್'ಟಿಟ್ಯೂಟ್ ಆಫ್ ಲಿವರ್ ಆ್ಯಂಡ್ ಬಿಲಿಯರಿ ಸೈನ್ಸಸ್ (ಐಎಲ್'ಬಿಎಸ್)ನಲ್ಲಿ ಈ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆಗೊಂಡಿದೆ.

• ಭಾರತದ ದೇಸಿ ನಿರ್ಮಿತ ಸಬ್‍ಸೋನಿಕ್ ಕ್ರೂಸ್ ಕ್ಷಿಪಣಿ : ನಿರ್ಭಯ್ ಕ್ಷಿಪಣಿ .
— ಇದು ದೇಶೀಯವಾಗಿ ನಿರ್ಮಿಸಿದ ಮೊದಲ ದೂರಗಾಮಿ ಖಂಡಾಂತರ ಕ್ಷಿಪಣಿಯಾಗಿದ್ದು, 2004ರಲ್ಲಿ ಸುಮಾರು 48 ಕೋಟಿ ರು.ಗಳ ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು.
— 290 ಕೆಜಿ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ, ಆರು ಮೀ.ಉದ್ದ ಮತ್ತು 0.52 ಮೀ.ವ್ಯಾಸ ಹೊಂದಿರುವ 1,500 ಕೆಜಿ ತೂಕದ ನಿರ್ಭಯ್ ಕ್ಷಿಪಣಿಯು 1,000 ಕಿ.ಮೀ.ದಾಳಿ ವ್ಯಾಪ್ತಿಯನ್ನು ಹೊಂದಿರುವುದು.

• ಆಕಾಶದಿಂದ ಆಕಾಶಕ್ಕೆ ಚಿಮ್ಮಿಸಬಹುದಾದ ಅಸ್ತ್ರ ಕ್ಷಿಪಣಿ, ಸಾಫ್ಟ್‌ವೇರ್‌ ಆಧರಿತ ರೇಡಿಯೊ, ಪಿನಾಕ ಶ್ರೇಣಿಯ ಕ್ಷಿಪಣಿ, ಭೂದಾಳಿ ಕ್ಷಿಪಣಿಗಳೆಲ್ಲವೂ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಸಮರ ಸಾಧನಗಳು.
— ಪ್ರಸ್ತುತ ಡಿಆರ್‌ಡಿಒ (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ದ ಅಧ್ಯಕ್ಷ : ಜಿ. ಸತೀಶ್‌ ರೆಡ್ಡಿ


• ಭಾರತದ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಲ್‌ಸಿಎ) :  ತೇಜಸ್.‌

• (UNCLOS) : ಸಾಗರ ಕಾನೂನುಗಳ ವಿಶ್ವಸಂಸ್ಥೆಯ ನ್ಯಾಯಮಂಡಳಿ (United Nations Convention on the Law of the Sea)‌
- ಕೇಂದ್ರ ಕಚೇರಿ : ಮಾಂಟೆಗೊ ಕೊಲ್ಲಿ, ಜಮೈಕಾ.

• ಟೊಂಗಾ ದೇಶದ ರಾಜಧಾನಿ : ನುಕುಲೋಫಾ

• ವಿತ್ತೀಯ ಕೊರತೆ ಪ್ರಮಾಣ & ವಿತ್ತೀಯ  ಕ್ರೋಡೀಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರಚಿಸಿದ ಸಮಿತಿ :  ಎನ್.ಕೆ. ಸಿಂಗ್ ನೇತೃತ್ವದ ಸಮಿತಿ

• 'ಡ್ರಗ್‌ ಡಿಸ್ಕವರಿ ಹ್ಯಾಕಥಾನ್’ ಎಂಬುದು ಕೋವಿಡ್–19 ವಿರುದ್ಧದ ಹೋರಾಟಕ್ಕೆ ಔಷಧ ಕಂಡು ಹಿಡಿಯುವ ಉದ್ದೇಶದಿಂದ ಆರಂಭಿಸಲಾಗಿದ್ದ ಕಾರ್ಯಾಗಾರ.
— ಈ ಯೋಜನೆಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ & ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್‌) ಜಂಟಿಯಾಗಿ ಪ್ರಾರಂಭಿಸಿವೆ.

• (ಐಸಿಎಐ) : ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ.
(ICAI - The Institute of Chartered Accountants of India)
— ಇದರ ಪ್ರಸ್ತುತ ಅಧ್ಯಕ್ಷ : ಅತುಲ್ ಕುಮಾರ್ ಗುಪ್ತಾ.

• (ಐಎನ್‍ಎಸ್‍) : ಭಾರತೀಯ ವೃತ್ತಪತ್ರಿಕೆಗಳ ಸಂಸ್ಥೆ
— ಇದರ ಪ್ರಸ್ತುತ ಅಧ್ಯಕ್ಷ : ಶೈಲೇಶ್‍ ಗುಪ್ತಾ,


• ಕೊರಿಯೋಗ್ರಾಫರ್‌ಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದ ಬಾಲಿವುಡ್‌ನ ಹಿರಿಯ (71 ವರ್ಷ)  ಕೊರಿಯೋಗ್ರಾಫರ್ ಸರೋಜ್ ಖಾನ್ ನಿಧನ.
— ಮಾಧುರಿ ದೀಕ್ಷಿತ್ ಹಾಗೂ ಐಶ್ವರ್ಯ ರೈ ಅಭಿನಯಿಸಿದ ದೇವದಾಸ ಚಿತ್ರದ ಡೋಲಾ ರೆ ಡೋಲಾ, ತಮಿಳಿನ ಶೃಂಗಾರಂ ಚಿತ್ರದ ಎಲ್ಲ ಗೀತೆಗಳು ಸಹಿತ ಹಲವು ಚಿತ್ರಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.


• ಅಮೆರಿಕದ ಸ್ವಾತಂತ್ರ್ಯದ ದಿನ ನೆನಪಿಗಾಗಿ ಅಲ್ಲಿನ ಅಮೆರಿಕ ಫೌಂಡೇಷನ್‍ ನೀಡುವ ಪ್ರತಿಷ್ಠಿತ ‘ಸಾಧಕ ವಲಸಿಗರು’ ಪ್ರಶಸ್ತಿಯ ಗೌರವಕ್ಕೆ ಈ ವರ್ಷ ಭಾರತ ಮೂಲದ ಇಬ್ಬರು ಪಾತ್ರರಾಗಿದ್ದಾರೆ.
— ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತರಾದ, ಭಾರತ ಮೂಲದ ಸಿದ್ಧಾರ್ಥ ಮುಖರ್ಜಿ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ರಾಜ್‍ ಶೆಟ್ಟಿ ಈ ಪ್ರಶಸ್ತಿಗೆ ಆಯ್ಕೆಯಾದವರು. ನ್ಯೂಯಾರ್ಕ್‍ನ ಕಾರ್ನೀಜ್ ಕಾರ್ಪೊರೇಷನ್ ಈ ಇಬ್ಬರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.


• ಪ್ರಸ್ತುತ ಆಸ್ಟ್ರೇಲಿಯಾ ದೇಶದ ಪ್ರಧಾನಿ : ಸ್ಕಾಟ್‌ ಮಾರಿಸನ್‌.


• ವಿಶ್ವದ ಪ್ರಥಮ ಕೊರೊನಾ ಸೋಂಕು ಮುಕ್ತ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದ ರಾಷ್ಟ್ರ : ನ್ಯೂಜಿಲೆಂಡ್‌.
— ಪ್ರಸ್ತುತ ನ್ಯೂಜಿಲೆಂಡ್ ದೇಶದ ಪ್ರಧಾನಿ : ಜಸಿಂಡಾ ಅರ್ಡೆರ್ನ್.


• ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಅಣ್ಣನ ಮಗಳು ಮೇರಿ ಟ್ರಂಪ್ ಬರೆದಿರುವ ಹಾಗೂ ಡೊನಾಲ್ಡ್ ಟ್ರಂಪ್ ಬಗ್ಗೆ ಸ್ಫೋಟಕ ಮಾಹಿತಿಗಳನ್ನು ಒಳಗೊಂಡಿದೆ ಎನ್ನಲಾದ ಪುಸ್ತಕ : ‘ಟೂ ಮಚ್ ಆ್ಯಂಡ್ ನೆವರ್ ಇನಫ್: ಹೌ ಮೈ ಫ್ಯಾಮಿಲಿ ಕ್ರಿಯೇಟಡ್ ದ ವರ್ಲ್ಡ್ಸ್ ಮೋಸ್ಟ್ ಡೇಂಜರಸ್ ಮ್ಯಾನ್’.


• ಉಯಿಘರ್ ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯ ಇರುವುದು : ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ.


• ಪ್ರಸ್ತುತ ನೇಪಾಳ ದೇಶದ ಪ್ರಧಾನಿ : ಕೆ.ಪಿ. ಶರ್ಮ ಒಲಿ

• ಪ್ರಸ್ತುತ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ : ಟಿ.ಎಂ ವಿಜಯಭಾಸ್ಕರ್

• ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ಪರಿಷ್ಕರಣೆ ಸಂಬಂಧ ರಚಿಸಿದ್ದ ಆಯೋಗ : ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗ.
— ಪರಿಶಿಷ್ಟ ಜಾತಿಗೆ ಪ್ರಸ್ತುತ ಶೇ.15ರಷ್ಟು ಮೀಸಲಾತಿ ಇದ್ದು, ಅದನ್ನು ಶೇ.17ಕ್ಕೆ ಹೆಚ್ಚಳ ಮಾಡಬೇಕು ಮತ್ತು ಪರಿಶಿಷ್ಟ ಪಂಗಡಕ್ಕೆ ಹಾಲಿ ಶೇ.3ರಷ್ಟು ಇದೆ. ಅದನ್ನು ಶೇ.7ರಷ್ಟು ಹೆಚ್ಚಳ ಮಾಡಬಹುದು ಎಂದು ಸರಕಾರಕ್ಕೆ ಶಿಫಾರಸ್ಸು ಮಾಡಿದೆ.

No comments:

Post a Comment