"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 9 July 2020

•► ️ಕೆಎಎಸ್ (ಪ್ರಿಲಿಮ್ಸ್‌ ಪೇಪರ್) ಪೂರ್ವಭಾವಿ ಪರೀಕ್ಷೆ ಪತ್ರಿಕೆ -2 ಗೆ ಹೇಗೆ ತಯಾರಿ ನಡೆಸಬೇಕು? (How to Prepare for KAS Prelims Paper 2 Exam)

 •► ️ಕೆಎಎಸ್ (ಪ್ರಿಲಿಮ್ಸ್‌ ಪೇಪರ್) ಪೂರ್ವಭಾವಿ ಪರೀಕ್ಷೆ ಪತ್ರಿಕೆ -2 ಗೆ ಹೇಗೆ ತಯಾರಿ ನಡೆಸಬೇಕು?
(How to Prepare for KAS Prelims Paper 2 Exam)

━━━━━━━━━━━━━━━━━━━━━

★ ಕೆಎಎಸ್  ಪೂರ್ವಭಾವಿ ಪರೀಕ್ಷೆ
(KAS Preliminary Exam)


ಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್‌ ಪ್ರೊಬೆಷನರಿ ಅಧಿಕಾರಗಳ ನೇಮಕಕ್ಕೆ ಕೆಎಎಸ್  ಪೂರ್ವಭಾವಿ ಪರೀಕ್ಷೆ ನಡೆಸುವುದು.

ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮವನ್ನು ಅಧಿಸೂಚನೆಯಲ್ಲಿಯೇ ನೀಡಲಾಗಿದೆ. ಇದನ್ನು ನೋಡಿಕೊಂಡು ಸೂಕ್ತ ಪುಸ್ತಕವನ್ನು ಆಯ್ಕೆ ಮಾಡಿಕೊಂಡೇ ಪರೀಕ್ಷೆಗೆ ಓದಿ. ಯಾವುದೇ ವಿಷಯವನ್ನು ಓದಿಕೊಳ್ಳುವ ಮೊದಲು ಇದು ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮದಲ್ಲಿ ಸೇರ್ಪಡೆಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ಬಗ್ಗೆ ಹೆಚ್ಚು ಸ್ಪಷ್ಟತೆ ಅವಶ್ಯವಿದ್ದಲ್ಲಿ ಈ ಹಿಂದೆ ನಡೆದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಗಮನಿಸಿ. ಋುಣಾತ್ಮಕ ಮೌಲ್ಯಮಾಪನ ಸ್ಫರ್ಧಾತ್ಮಕ ಪರೀಕ್ಷೆಯ ಅವಿಭಾಜ್ಯ ಅಂಗವಾಗಿರುವುದರಿಂದ ಈ ಬಗ್ಗೆ ಆತಂಕ ಬೇಡ. ಆದರೆ ಎಚ್ಚರಿಕೆ ಇರಲಿ. ಉತ್ತರವನ್ನು ಬ್ಲೈಂಡ್‌ ಆಗಿ ಗೆಸ್‌ ಮಾಡುವ ಅನಿವಾರ್ಯತೆಯನ್ನು ನೀವೇ ಸೃಷ್ಟಿಸಿಕೊಳ್ಳಬೇಡಿ.


• ಕೆಎಎಸ್‌ ಪ್ರಿಲಿಮ್ಸ್‌ ಪೇಪರ್-2 ಪರೀಕ್ಷೆ ವಿಶ್ಲೇಷಣೆ :
━━━━━━━━━━━━━━━━━━━━━
1) ಅಂತರಾಷ್ಟ್ರೀಯ ಪ್ರಚಲಿತ ಘಟನೆಗಳು: ಈ ವಿಷಯಕ್ಕೆ ಸಂಬಂಧ ಪಟ್ಟಂತೆ 40 ಪ್ರಶ್ನೆಗಳು ಇರುತ್ತವೆ. ಇದರಲ್ಲಿದೇಶ-ದೇಶಗಳ ಮಧ್ಯದಲ್ಲಿನ ದ್ವಿಪಕ್ಷೀಯ ಒಪ್ಪಂದ, ಗಡಿವಿವಾದಗಳು, ಅಂತರಾಷ್ಟ್ರೀಯ ಸಮ್ಮೇಳನ, ವಿಶ್ವಸಂಸ್ಥೆಯ ಸುದ್ದಿಗಳು, ಪ್ರಮುಖ ಅಂತರರಾಷ್ಟ್ರೀಯ ಪ್ರಶಸ್ತಿಗಳು, ಕ್ರೀಡೆ ಹಾಗೂ ಕ್ರೀಡಾಪಟುಗಳ ಸಾಧನೆ, ದೇಶಗಳ ಆರ್ಥಿಕ ಸುದ್ದಿಗಳು, ಆವಿಷ್ಕಾರಗಳು ಪ್ರಮುಖ ರಾಜಕೀಯ ಸುದ್ದಿಗಳು ಇವೇ ಮುಂತಾದವುಗಳನ್ನು ಒಳಗೊಂಡಿರುತ್ತದೆ.

2) ವಿಜ್ಞಾನ ಮತ್ತು ತಂತ್ರಜ್ಞಾನ :
ಈ ವಿಭಾಗದಲ್ಲಿಜೀವಶಾಸ್ತ್ರ, ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರದೊಂದಿಗೆ ತಂತ್ರಜ್ಞಾನದ ಬೆಳವಣಿಗೆ ಮತ್ತು ಪರಿಣಾಮಗಳನ್ನು ನೋಡಬೇಕು.

ಕರ್ನಾಟಕ ಹಾಗೂ ಭಾರತದಲ್ಲಿನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಕೃಷಿ ತಂತ್ರಜ್ಞಾನ, ಡಿಜಿಟಲ್‌ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ, ಇವುಗಳ ಕೊಡುಗೆ ಹಾಗೂ ಅವುಗಳಿಗೆ ಸಂಬಂಧಪಟ್ಟ ಸಂಸ್ಥೆಗಳನ್ನು ನೋಡಬೇಕು. ಅಲ್ಲದೆ ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತೆ ಸರಕಾರದ ನೀತಿಗಳು ಹಾಗೂ ಕಾರ್ಯಕ್ರಮಗಳನ್ನು ಓದಬೇಕು.

3) ಪರಿಸರ ಅಧ್ಯಯನ :
ಇತ್ತೀಚಿನ ದಿನಗಳಲ್ಲಿಜಗತ್ತಿಗೆ ಕಾಡುತ್ತಿರುವ ಮುಖ್ಯ ಸಮಸ್ಯೆ. ಪರಿಸರ ಸಮಸ್ಯೆಯಾಗಿದೆ. ನಾಳೆ ಅಧಿಕಾರಿಯಾದವನಿಗೆ ಪರಿಸರ ಪರಿಚಯ ಇರಬೇಕೆಂಬ ಕಾರಣಕ್ಕಾಗಿ ಪರಿಸರ ಅಧ್ಯಯನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಇಲ್ಲಿಪರಿಸರ ವ್ಯವಸ್ಥೆ, ನೈಸರ್ಗಿಕಸಂಪನ್ಮೂಲಗಳು, ಜೀವ ವೈವಿಧ್ಯ ಮತ್ತು ಅದರ ಸಂರಕ್ಷಣೆ, ಪರಿಸರ ಮಾಲಿನ್ಯ ಹವಾಗುಣದ ಬದಲಾವಣೆ, ಪರಿಸರಕ್ಕೆ ಸಂಬಂಧಪಟ್ಟ ಕಾಯ್ದೆಗಳು ಹಾಗೂ ಸಂಸ್ಥೆಗಳನ್ನು ಓದಬೇಕು.

4) ದತ್ತಾಂಶಗಳನ್ನು ವಿಶ್ಲೇಷಣೆ :
ಈ ವಿಭಾಗದಲ್ಲಿವರ್ಗೀಕರಣ ಹಾಗೂ ತಾಲೀಕರಣ, ಚಿತ್ರ ಹಾಗೂ ಆಲೇಖ ನಿರೂಪಣೆ, ಕೇಂದ್ರೀಯ ಪ್ರವೃತ್ತಿಯ ಮಾಪನಗಳು, ಸೂಚ್ಯಾಂಕಗಳು, ಜಾಬ್‌ ಚಾರ್ಟ್‌, ಪೈ ಚಾರ್ಟ್‌, ಟೇಬಲ್‌ ಚಾರ್ಟ್‌, ಲೈನ್‌ ಚಾರ್ಟ್‌ ಇವೇ ಮುಂತಾದವುಗಳ ಮೇಲೆ ಪ್ರಶ್ನೆ ಕೇಳಲಾಗುತ್ತದೆ. ಹೈಸ್ಕೂಲ್‌ ಹಾಗೂ ಪಿಯುಸಿಯಲ್ಲಿಇರುವ ಸಂಖ್ಯಾಶಾಸ್ತ್ರ ಆಧಾರವಾಗಿಟ್ಟುಕೊಂಡು ತಯಾರಿ ಮಾಡಿಕೊಳ್ಳಬೇಕು.

5) ಸಮಾನ್ಯ ಮೆಂಟಲ್‌ ಎಬಿಲಿಟಿ :
ರಕ್ತ ಸಂಬಂಧ, ಕೋಡಿಂಗ್‌-ಡಿ-ಕೋಡಿಂಗ್‌ ಸಂಬಂಧಗಳ ಕೋಡಿಂಗ್‌, ದಿಕ್ಕುಗಳು, ಪಜಲ್‌ ಟೆಸ್ಟ್‌, ಸರಣಿಗಳು, ವೆನ್‌ ರೇಖಾಚಿತ್ರಗಳು, ವರ್ಗೀಕರಣ ಇವುಗಳನ್ನು ಓದಬೇಕು.

6) ಸಾಮಾನ್ಯ ಗಣಿತ :
ಸಂಭವನೀಯತೆ, ಕೆಲಸ ಮತ್ತು ಸಮಯ, ವಯಸ್ಸಿನ ಸಮಸ್ಯೆಗಳು, ಪ್ರತಿಶತ, ಸರಾಸರಿ ಪಾಲುಗಾರಿಕೆ, ಸರಳ ಮತ್ತು ಚಕ್ರಬಡ್ಡಿ, ಕಾಲ ಮತ್ತು ಸಮಯ, ಅನುಪಾತ, ರೈಲ್ವೆ, ಗಡಿಯಾರ ಸಮಸ್ಯೆಗಳು, ಕ್ಷೇತ್ರಫಲ ಇವು ಕೂಡಾ ಹೈಸ್ಕೂಲ್‌ ಮಟ್ಟದ ಪ್ರಶ್ನೆಗಳು ಇರುತ್ತವೆ.


7) ತಾರ್ಕಿಕ ವಿವೇಚನೆ ಕಾರಣೀಕರಿಸುವಿಕೆ :
ಈ ವಿಷಯಕ್ಕೆ ಸಂಬಂಧಪಟ್ಟಂತೆ ಅಭ್ಯರ್ಥಿಗಳು ಗಮನ ಹರಿಸುವದಿಲ್ಲ. ಕಾರಣ ಈ ವಿಷಯದಿಂದ ಪ್ರಶ್ನೆಗಳು ಬರುವದಿಲ್ಲಎಂಬ ಭಾವನೆ ಇರುವದು. ಪೂರ್ವಭಾವಿ ಪರೀಕ್ಷೆಗೆ ಈ ವಿಷಯವು ಮೂಖ್ಯವಾಗಿದೆ.

- ಇದರಲ್ಲಿಬರುವ ಅಂಶಗಳೆಂದರೆ;

*ಹೇಳಿಕೆ ಮತ್ತು ಊಹೆಗಳು

*ಹೇಳಿಕೆ ಮತ್ತು ತೀರ್ಮಾನಗಳು

*ವಾದ ಮತ್ತು ಪ್ರತಿವಾದಗಳು

*ಹೇಳಿಕೆಯನ್ನು ವಿಶ್ಲೇಷಣೆ ಮಾಡುವದು

*ತೀರ್ಮಾನ ಕೈಗೊಳ್ಳುವಿಕೆ

*ಅರ್ಥಗ್ರಹಿಸುವುದು (ಓದಿನ ಗ್ರಹಿಕೆ)

*ಪ್ರತಿಪಾದನೆ ಮತ್ತು ಕಾರಣ

*ಕ್ರಿಯೆ ಮತ್ತು ಪ್ರತಿಕ್ರಿಯೆ


• ಪತ್ರಿಕೆ -2ಕ್ಕೆ ಸಂಬಂಧಪಟ್ಟ ಅಧ್ಯಯನದ ತಂತ್ರಗಳು
━━━━━━━━━━━━━━━━━━━━━

1) 2019 ಜನವರಿಯಿಂದ ಪೂರ್ವಭಾವಿ ಪರೀಕ್ಷೆ ದಿನಾಂಕದವರಿಗೆ ಅಂತತರಾಷ್ಟ್ರೀಯ ಮಟ್ಟದಲ್ಲಿ ನಡೆದ ಘಟನೆಗಳನ್ನು ಸಮಗ್ರವಾಗಿ ಓದಬೇಕು.

2) ಭಾರತ ಸರಕಾರ ಪ್ರಕಟಿಸಿದ India 2020 ಪುಸ್ತಕವನ್ನು ಕಡ್ಡಾಯವಾಗಿ ಓದಬೇಕು ಈ ಪುಸ್ತಕದಲ್ಲಿವಿಜ್ಞಾನ, ತಂತ್ರಜ್ಞಾನ, ಪರಿಸರಕ್ಕೆ ಸಂಬಂಧಪಟ್ಟ ಸರಕಾರದ ನೀತಿ ಹಾಗೂ ಕಾರ್ಯಕ್ರಮಗಳ ಪರಿಚಯ ಇರುತ್ತದೆ. ಭಾರತ ಸರಕಾರ ಪ್ರಕಟಿಸುವ ಸೈನ್ಸ್‌ ರಿಪೋರ್ಟರ್‌ ಪತ್ರಿಕೆಯಲ್ಲಿಇತ್ತೀಚಿನ ವಿಜ್ಞಾನ ಮತ್ತು ತಂತ್ರಜ್ಞಾನ ಸುದ್ದಿಗಳು ಇರುತ್ತವೆ.

3) ಕರ್ನಾಟಕ ಆರ್ಥಿಕ ಸಮೀಕ್ಷೆ ಎಂಬುದು ಹಿಂದಿನ ಆರ್ಥಿಕ ವರ್ಷದಲ್ಲಿ ನಡೆದ ಕರ್ನಾಟಕ ಸರ್ಕಾರದ ಎಲ್ಲ ಇಲಾಖೆಗಳ, ಎಲ್ಲ ಕಾರ್ಯಕ್ರಮಗಳ ವಿಸ್ತೃತ ವಾರ್ಷಿಕ ವರದಿಯಾಗಿದೆ. ಈ ಸಮೀಕ್ಷೆಯಿಂದ ನೇರವಾಗಿ ಅಥವಾ ಪರೋಕ್ಷವಾಗಿ ಪ್ರಶ್ನೆಗಳು ಬರುವ ಸಾಧ್ಯತೆಗಳು ಇರುತ್ತದೆ.

4) ಮೆಂಟಲ ಎಬಿಲಿಟಿ, ಗಣಿತ ಹಾಗೂ ದತ್ತಾಂಶಗಳ ವಿಶ್ಲೇಷಣೆ ಸಂಬಂಧಪಟ್ಟಂತೆ ಪ್ರತಿನಿತ್ಯ ಅವುಗಳನ್ನು ಪ್ರ್ಯಾಕ್ಟಿಸ್‌ ಮಾಡಬೇಕು. ಪ್ರ್ಯಾಕ್ಟಿಸ್‌ ಇದ್ದಾಗ ಮಾತ್ರ ವೇಗವಾಗಿ ಬಿಡಿಸಲು ಸಾಧ್ಯ ಹಾಗೂ ಕೆಎಎಸ್‌ ಮತ್ತು ಐಎಎಸ್‌ ಪರೀಕ್ಷೆಯಲ್ಲಿಈ ಹಿಂದೆ ಕೇಳಿದ ಪ್ರಶ್ನೆಗಳನ್ನು ಬಿಡಸಬೇಕು.

5) ಪರಿಸರ ಅಧ್ಯಯನಕ್ಕೆ ಸಂಬಂಧಪಟ್ಟಂತೆ ಸಿದ್ದಾಂತಗಳ ಮೇಲಿನ ಪ್ರಶ್ನೆಗಳಿಗಿಂತ ಪ್ರಚಲಿತ ಆಧಾರಿತ ಪ್ರಶ್ನೆಗಳು ಇರುತ್ತವೆ. ಅದಕ್ಕಾಗಿ ಕಳೆದ ಒಂದು ವರ್ಷದಿಂದ ಪರಿಸರಕ್ಕೆ ಸಂಬಂಧಪಟ್ಟಂತೆ ವಿಶ್ವದಲ್ಲಿಯಾವ ಯಾವ ಚರ್ಚೆಗಳು ನಡೆದಿವೆ ಅವುಗಳನ್ನು ನೋಡಬೇಕು.

ಈ ಬಾರಿಯ ಪರೀಕ್ಷೆ ತಯಾರಿ ಮಾಡುವವರಲ್ಲಿಒಂದು ಪ್ರಶ್ನೆ ಕಾಡಲು ಆರಂಭಿಸಿದೆ. 'ಹುದ್ದೆಗಳು ಕಡಿಮೆ ಇವೆ, ನನಗೆ ಸಿಗುತ್ತದೆಯೋ...ಇಲ್ಲವೋ' ಎಂದು. ಅಲ್ಲದೆ, ಕಳೆದ ವರ್ಷ ಮುಖ್ಯ ಪರೀಕ್ಷೆ ಬರೆದವರು ಹಾಗೂ ಸಂದರ್ಶನಕ್ಕೆ ಹೋಗಿ ಬಂದವರು ಕೂಡ ಈ ಬಾರಿ ಮತ್ತೆ ಪರೀಕ್ಷೆ ಬರೆಯುತ್ತಿರುತ್ತಾರೆ. ಅವರ ನಡುವೆ, ನಾನು ಗೆಲ್ಲಬಲ್ಲೆನೇ? ಎಂದು. ಹೀಗೆ ಯೋಚನೆ ಮಾಡಿ, ಈ ಬಾರಿ ಅರ್ಜಿ ಸಲ್ಲಿಸಲು ಹೋಗದೇ ಇರುವವರನ್ನೂ ನಾವು ಕಾಣಬಹುದು.

ಹುದ್ದೆಗಳನ್ನು ನೋಡಿ ಸ್ಪರ್ಧೆ ಮಾಡುವವನು ನಿಜವಾದ ಸ್ಪರ್ಧಿ ಅಲ್ಲ. ಎಷ್ಟೇ ಹುದ್ದೆಗಳು ಇರಲಿ ನಾನು ಮಾತ್ರ ಸ್ಪರ್ಧೆ ಮಾಡುತ್ತೇನೆ ಎಂದು ಗಟ್ಟಿ ನಿರ್ಧಾರ ಮಾಡಿ ಹೆಜ್ಜೆ ಹಾಕುವವನು ಮಾತ್ರ ಯಶಸ್ವಿಯಾಗುತ್ತಾನೆ.

ದೃಢ ನಿರ್ಧಾರದ ಮನಷ್ಯನು ಒಮ್ಮೆ ನಿರ್ಧರಿಸಿದ ಮೇಲೆ ಎಂದೂ ಅದನ್ನು ಬದಲಿಸುವದಿಲ್ಲ. ಅಂತವರು ಮಾತ್ರ ಯಶಸ್ವಿಯಾಗುತ್ತಾರೆ. ಬಸ್‌ಸ್ಟ್ಯಾಂಡಿನಲ್ಲಿ ನಿಂತು ಎಲ್ಲಾ ಬಸ್‌ಗಳನ್ನು ನೋಡುತ್ತಾ ಸಮಯ ಕಳೆಯುವ ಬದಲು ನಿಮಗೆ ಯಾವ ಬಸ್‌ಗೆ ಹೋಗಬೇಕೋ ಅದನ್ನು ಮಾತ್ರ ಗಮನಿಸಿ. ಇಲ್ಲದಿದ್ದರೆ ಬಸ್‌ಗಳನ್ನು ಬದಲಾಯಿಸುತ್ತಾ ಬಸ್‌ಸ್ಟ್ಯಾಂಡಿನಲ್ಲಿ ಜೀವನ ಕಳೆಯಬೇಕಾಗುತ್ತದೆ.

No comments:

Post a Comment