"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 19 July 2020

•► ️​ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (R.C.E.P) : (ಪತ್ರಿಕೆ 2 ಸಾಮಾನ್ಯ ಅಧ್ಯಯನ 1) (Regional Comprehensive Economic Partnership)

•► ️​ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (R.C.E.P) : (ಪತ್ರಿಕೆ 2 ಸಾಮಾನ್ಯ ಅಧ್ಯಯನ 1)
(Regional Comprehensive Economic Partnership)

 ━━━━━━━━━━━━━━━━━━━━━

★ ಭಾರತ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು
(India and International Relations)

★ ಅಂತರಾಷ್ಟ್ರೀಯ ಪ್ರಚಲಿತ ಘಟನೆಗಳು
(International Current Affairs)


ಆಸಿಯಾನ್ ಸದಸ್ಯ ರಾಷ್ಟ್ರಗಳ ನಡುವೆ ಮತ್ತು ಅದರ ಆರು ಪಾಲುದಾರ ರಾಷ್ಟ್ರಗಳಾದ ಭಾರತ, ಆಸ್ಟ್ರೇಲಿಯಾ, ಚೀನಾ, ಜಪಾನ್, ನ್ಯೂಜಿಲೆಂಡ್ ಮತ್ತು ಕೊರಿಯಾ ಗಣರಾಜ್ಯಗಳ ಮಧ್ಯೆ ಮುಕ್ತ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವ ಪ್ರಸ್ತಾವಿತ ಒಪ್ಪಂದವಾಗಿದೆ.

•  ಈ ಒಪ್ಪಂದಕ್ಕೆ ಸಂಬಂಧಪಟ್ಟ ದೇಶಗಳು - 16. 
- 10 ಆಸಿಯಾನ್ ರಾಷ್ಟ್ರಗಳು, (Association of South East Asian Nations -ASEAN. ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘಟನೆ). ಅವುಗಳೆಂದರೆ, ಬ್ರುನೆ, ಬರ್ವ (ಮ್ಯಾನ್ಮಾರ್), ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಫಿಲಿಪ್ಪೀನ್ಸ್, ಸಿಂಗಾಪೂರ, ಥಾಯ್ಲ್ಯಾಂಡ್ ಮತ್ತು ವಿಯಟ್ನಾಂ ಹಾಗೂ ಆಸಿಯಾನ್​ನೊಂದಿಗೆ ಈಗಾಗಲೇ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವ 6 ದೇಶಗಳು. ಅವು- ಭಾರತ, ಚೀನಾ, ಆಸ್ಟ್ರೇಲಿಯಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ನ್ಯೂಜಿಲ್ಯಾಂಡ್.

• ಈ 16 ದೇಶಗಳ ಒಟ್ಟು ಜನಸಂಖ್ಯೆ 300 ಕೋಟಿ. ಅವುಗಳ ಒಟ್ಟು ಜಿಡಿಪಿ ಸುಮಾರು 17 ಲಕ್ಷ ಕೋಟಿ ಡಾಲರ್. ಅವುಗಳು ಜಾಗತಿಕ ವ್ಯಾಪಾರದ ಶೇ. 40 ಪಾಲು ಹೊಂದಿವೆ. ಆರ್​ಸಿಇಪಿ ಒಪ್ಪಂದ ಏರ್ಪಟ್ಟಲ್ಲಿ, ಅದು ಜಗತ್ತಿನ ಅತಿ ದೊಡ್ಡ ಮುಕ್ತ ವ್ಯಾಪಾರ ವಲಯವಾಗುತ್ತದೆ ಎನ್ನಲಾಗುತ್ತಿದೆ.

• ಆರ್​ಸಿಇಪಿ ಒಪ್ಪಂದದ ಮುಖ್ಯ ಚಾಲನಾ ಶಕ್ತಿ ಆಸಿಯಾನ್. ಹಾಗಾಗಿ ಅದು ಆಸಿಯಾನ್ ಕೇಂದ್ರಿತ ಎನ್ನಲಾಗುತ್ತದೆ. ಈ ಸಂಬಂಧದ ಮಾತುಕತೆ 2012ರ ನವೆಂಬರ್​ನಲ್ಲಿ ಕಾಂಬೋಡಿಯಾದಲ್ಲಿ ಪ್ರಾರಂಭವಾಯಿತು. ಈ ಒಪ್ಪಂದವು ಸರಕುಗಳ ವ್ಯಾಪಾರ, ಸೇವೆಗಳ ವ್ಯಾಪಾರ, ಹೂಡಿಕೆಗಳು, ಆರ್ಥಿಕ ಹಾಗೂ ತಾಂತ್ರಿಕ ಸಹಕಾರ, ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ವ್ಯಾಜ್ಯ ಪರಿಹಾರ ವ್ಯವಸ್ಥೆ - ಎಲ್ಲವನ್ನೂ ಒಳಗೊಂಡ ಅತ್ಯಂತ ಆಧುನಿಕ ಹಾಗೂ ಸಮಗ್ರ ಮುಕ್ತ ವ್ಯಾಪಾರ ಒಪ್ಪಂದವಾಗಬೇಕು ಎಂಬುದು ಸದಸ್ಯ ರಾಷ್ಟ್ರಗಳ ಆಶಯ. ಸರಕುಗಳ ಮೇಲಿನ ಸುಂಕದ ಮಟ್ಟ ಅತ್ಯಂತ ಕಡಿಮೆ ಇದ್ದು ಸದಸ್ಯ ರಾಷ್ಟ್ರಗಳ ನಡುವೆ ಸರಕುಗಳ ಮುಕ್ತ ಚಲನೆ ಸಾಧ್ಯವಾಗಬೇಕೆಂಬುದೂ ಆಶಯವಾಗಿದೆ. ಈ ದಿಕ್ಕಿನಲ್ಲಿ ಮಾತುಕತೆಗಳು ನಡೆಯಬೇಕೆಂಬುದು ಒಂದು ನಿರ್ದೇಶಕ ತತ್ವವಾಗಿದೆ. ಮಾತುಕತೆಗಳು ಯಶಸ್ವಿಯಾಗಿ ಮುಕ್ತಾಯವಾದ ನಂತರ ಮೂಲ 16 ರಾಷ್ಟ್ರಗಳಲ್ಲದೆ, ಇತರ ರಾಷ್ಟ್ರಗಳೂ ಇಚ್ಛೆಪಟ್ಟಲ್ಲಿ ಸದಸ್ಯತ್ವ ಪಡೆಯಲು ಮುಕ್ತ ಅವಕಾಶವಿರುತ್ತದೆ ಎಂದು ಹೇಳಲಾಗಿದೆ.

— ಇತ್ತೀಚೆಗೆ (Nov 2019) ಬ್ಯಾಂಕಾಕ್ ನಲ್ಲಿ ಆರ್ ಸಿಇಪಿ ಶೃಂಗಸಭೆ ನಡೆಯಿತು.

No comments:

Post a Comment