•► ️ಜುಲೈ 05 ರ (05 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು :
(Important facts from the current events of 05 July 2020)
━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(current affairs notes)
• ಪ್ರಸ್ತುತ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ನ ಮಹಾನಿರ್ದೇಶಕ : ಎನ್.ಎಸ್. ಪ್ರಧಾನ್
• ಪ್ರಸಿದ್ಧ ಟೆನಿಸ್ ಆಟಗಾರ 'ಆ್ಯಂಡಿ ಮರ‍್ರೆ'ಯು ಬ್ರಿಟನ್ ದೇಶದವನು.
— ಗ್ರ್ಯಾನ್‌ಸ್ಲಾಮ್‌ನಲ್ಲಿ ಮೂರು ಪ್ರಶಸ್ತಿಗಳನ್ನು ಗೆದ್ದ ಸಾಧನೆ ಮಾಡಿರುವನು.
• ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಕೋರ್ಟ್ ಇರುವುದು : ಕರ್ನಾಟಕ ರಾಜ್ಯದಲ್ಲಿ.
• ಜುಲೈ 04 : ಅಮೆರಿಕದ ಸ್ವತಂತ್ರ ದಿನ.
— ಅಮೆರಿಕವು 244ನೇ ಸ್ವತಂತ್ರ ದಿನವನ್ನು ಆಚರಿಸಿಕೊಂಡಿತು.
• ಭೌತಿಕ ರೂಪದಲ್ಲಿ ನಿಷ್ಪ್ರಯೋಜಕವಾಗಿರುವ ಚಿನ್ನವನ್ನು ಬಳಕೆಗೆ ತರುವ ಉದ್ದೇಶದಿಂದ ಕೇಂದ್ರ ಸರ್ಕಾರ 2015ರಲ್ಲಿ ಚಿನ್ನದ ಬಾಂಡ್ ಯೋಜನೆ ಜಾರಿಗೊಳಿಸಿತು.
— ಬ್ಯಾಂಕ್‌ಗಳು, ಆಯ್ದ ಅಂಚೆ ಕಚೇರಿಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್‌ಎಚ್‌ಸಿಐಎಲ್), ರಾಷ್ಟ್ರೀಯ ಮತ್ತು ಮುಂಬೈ ಷೇರು ವಿನಿಮಯ ಕೇಂದ್ರಗಳಲ್ಲಿ ಈ ಬಾಂಡ್‌ಗಳನ್ನು ಮಾರಾಟ ಮಾಡಲಾಗುವುದು.
• ಧಮ್ಮ ಚಕ್ರ ಚಿನ್ಹೆಯು ಗೌತಮ ಬುದ್ಧನು ಸಾರನಾಥದಲ್ಲಿ ನೀಡಿದ ತನ್ನ ಮೊದಲ ಧರ್ಮೋಪದೇಶದ ಪ್ರತೀಕವಾಗಿದೆ.
— 'ಧಮ್ಮ ಅಥವಾ ಧರ್ಮ ಚಕ್ರ ದಿನ'ವನ್ನು ಆಷಾಢ ಹುಣ್ಣಿಮೆಯಂದು ಆಚರಿಸಲಾಗುತ್ತದೆ.
• ತೈವಾನ್ ಮತ್ತು ಲುಝೊನ್ ದ್ವೀಪಗಳ ನಡುವೆ ಲುಝೊನ್ ಕೊಲ್ಲಿಯಿದೆ.
— ಲುಝೊನ್ ಕೊಲ್ಲಿಯು ಫಿಲಿಪೈನ್ಸ್ ರಾಷ್ಟ್ರಕ್ಕೆ ಸಂಬಂಧಿಸಿದೆ.
— ಲುಝೊನ್ ಕೊಲ್ಲಿಯು ಪಿಲಿಪೈನ್ಸ್ ಸಮುದ್ರವನ್ನು ಮತ್ತು ದಕ್ಷಿಣ ಚೀನಾ ಸಮುದ್ರದೊಂದಿಗೆ ಸಂಪರ್ಕಿಸುತ್ತದೆ.
• ದಕ್ಷಿಣ ಚೀನಾ ಸಮುದ್ರವನ್ನು ನಿಯಂತ್ರಿಸುವ ವಿಚಾರದಲ್ಲಿ ಚೀನಾ ದೇಶವು ಬ್ರುನೈ, ಮಲೇಷಿಯಾ, ಪಿಲಿಪ್ಪಿನ್ಸ್, ತೈವಾನ್ ಮತ್ತು ವಿಯೆಟ್ನಾಂಗಳೊಂದಿಗೆ ವಿವಾದ ಹೊಂದಿದೆ.
• ಪ್ರಸ್ತುತ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ನ ಅಧ್ಯಕ್ಷ ಮತ್ತು ಎಂಡಿ : ಆರ್. ಮಾಧವನ್
• ಪ್ರಸ್ತುತ ಶ್ರೀಲಂಕಾ ದೇಶದ ಅಧ್ಯಕ್ಷ : ಗೋಟಬಯ ರಾಜಪಕ್ಷೆ .
• ಚಂದ್ರನ ಮೇಲೆ ಅಸ್ಪಷ್ಟವಾಗಿರುವ ಭೂಮಿಯ ನೆರಳು ಬೀಳುವುದಕ್ಕೆ ಮಸುಕಂಚಿನ ಚಂದ್ರಗ್ರಹಣ ಎನ್ನುತ್ತಾರೆ.
• ಪ್ರಸ್ತುತ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ನ ಭ್ರಷ್ಟಾಚಾರ ತಡೆ ಘಟಕದ ಮುಖ್ಯಸ್ಥ : ಅಲೆಕ್ಸ್ ಮಾರ್ಷಲ್
• ಖಾಜಾ ಬಂದಾ ನವಾಜ್ ಸೂಫಿ ಸಂತನ ಕ್ಷೇತ್ರ ಇರುವುದು : ಕಲಬುರ್ಗಿಯಲ್ಲಿ.
• ಅಖಿಲ ಭಾರತ ಫುಟ್ಬಾಲ್ ಫೆಡರೇಷನ್‌ಗೆ (ಎಐಎಫ್‌ಎಫ್) ಏಷ್ಯನ್ ಫುಟ್ಬಾಲ್ ಕಾನ್ಫಡರೇಷನ್ (ಎಎಫ್‌ಸಿ), ಎಲೀಟ್ ಯುವ ಯೋಜನೆಯ ಪೂರ್ಣ ಸದಸ್ಯತ್ವ ಸ್ಥಾನಮಾನವನ್ನು ನೀಡಿದೆ.
— ಮೂರು ವರ್ಷಗಳ ಬಳಿಕ ಈ ಸ್ಥಾನಮಾನದ ಮರು ಮೌಲ್ಯಮಾಪನ ನಡೆಯಲಿದೆ.
— 20 ವಿವಿಧ ಮಾನದಂಡಗಳನ್ನು ಗಮನಿಸಿ ಎಎಫ್‌ಸಿ ಯುವ ಸಮಿತಿಯು ಸದಸ್ಯ ಸಂಸ್ಥೆಗಳ ಅರ್ಜಿಯನ್ನು ಸ್ಥಾನಮಾನಕ್ಕೆ ಪರಿಶೀಲಿಸುತ್ತದೆ. ನಾಯಕತ್ವ, ಯೋಜನೆ, ಸಂಘಟನೆ, ಸಿಬ್ಬಂದಿ, ನೇಮಕಾತಿ, ಹಣಕಾಸು, ಸೌಕರ್ಯಗಳು, ತಂಡಗಳು, ತರಬೇತಿ, ಆಟದ ರೀತಿ, ಆಟಗಾರನ ಸಾಮರ್ಥ್ಯ, ಆರೋಗ್ಯ ಮತ್ತು ಫಿಟ್‌ನೆಸ್ ಇದರಲ್ಲಿ ಸೇರಿವೆ.
— ಇದರಲ್ಲಿ 11 ಮಾನದಂಡಗಳನ್ನು ಪೂರೈಸಿದ ಸಂಸ್ಥೆಗಳಿಗೆ ಯೋಜನೆಯ ಪೂರ್ಣ ಸದಸ್ಯತ್ವ ನೀಡಲಾಗುತ್ತದೆ. 10 ಮಾನದಂಡಗಳನ್ನು ಪೂರೈಸಿದ ಸಂಸ್ಥೆಯು ತಾತ್ಕಾಲಿಕ ಸದಸ್ಯತ್ವಕ್ಕೆ ಅರ್ಹತೆ ಪಡೆಯುತ್ತದೆ.
— ಪ್ರಸ್ತುತ ಏಷ್ಯನ್ ಫುಟ್ಬಾಲ್ ಕಾನ್ಫಡರೇಷನ್ (ಎಎಫ್‌ಸಿ)ನ ಪ್ರಧಾನ ಕಾರ್ಯದರ್ಶಿ : ಡ್ಯಾಟೊ ವಿಂಡ್ಸರ್ ಜಾನ್
— ಪ್ರಸ್ತುತ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್‌ಎಫ್)ನ ಪ್ರಧಾನ ಕಾರ್ಯದರ್ಶಿ : ಕುಶಾಲ್ ದಾಸ್
• ಸಾಂದ್ರತೆ ವ್ಯತ್ಯಾಸ ಹೊಂದಿರುವ ಪದಾರ್ಥಗಳನ್ನು ಪ್ರತ್ಯೇಕಿಸುವ ಸಾಧನಕ್ಕೆ ಸೆಂಟ್ರಿಫ್ಯೂಜ್ ಎಂದು ಕರೆಯಲಾಗುತ್ತದೆ.
• ಇತ್ತೀಚಿನ ಭಾರತೀಯ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಕಮಿಷನರ್ ನಡೆಸಿದ ಮಾದರಿ ನೋಂದಣಿ ವ್ಯವಸ್ಥೆ-2018ರ ವರದಿಯಂತೆ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ, ಭಾರತದ ಅರ್ಧಕ್ಕಿಂತಲೂ ಹೆಚ್ಚು ಜನಸಂಖ್ಯೆ ಈಗ 25 ವರ್ಷದವರು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು.
— ಭಾರತದ ಜನಸಂಖ್ಯೆ ಹೆಚ್ಚು ಹೆಚ್ಚು ಮಧ್ಯವಯಸ್ಕವಾಗುತ್ತಿದೆ. ಭಾರತದ ಫಲವತ್ತತೆ ಸೂಚ್ಯಂಕ ಕಡಿಮೆಯಾಗುತ್ತಿದೆ; ಆಯುರ್ಮಾನ ಹೆಚ್ಚುತ್ತಿದೆ. ಹೀಗಾಗಿ ಯುವಜನತೆಯ ಪ್ರಮಾಣ ಕಡಿಮೆಯಾಗಿ ಮಧ್ಯವಯಸ್ಸಿನವರ ಸಂಖ್ಯೆ ಏರುತ್ತಿದೆ. ಗ್ರಾಮೀಣ ಪ್ರದೇಶದ ಗಂಡಸರಲ್ಲೂ 25 ವರ್ಷಕ್ಕಿಂತ ಕೆಳಗಿನವರ ಪ್ರಮಾಣ 2017ರಲ್ಲಿ 50.2% ಇದ್ದುದು 2018ರಲ್ಲಿ 49.9%ಕ್ಕೆ ಇಳಿದಿತ್ತು.
• ಇತ್ತೀಚೆಗೆ 10 ಸಾವಿರ ಹಾಸಿಗೆಯ ವಿಶ್ವದ ಅತಿ ದೊಡ್ಡ ಕೋವಿಡ್-19 ಆರೈಕೆ ಕೇಂದ್ರ '‘ಸರ್ದಾರ್ ಪಟೇಲ್ ಕೋವಿಡ್ ಆರೈಕೆ ಕೇಂದ್ರ" ಇರುವುದು : ಛತರ್‌ಪುರದ ರಾಧಾ ಸ್ವಾಮಿ ಸತ್ಸಂಗ್ ಬಿಯಾಸ್‌ನಲ್ಲಿ .
• ರಾಜಾಜಿ ಹುಲಿ ಅಭಯಾರಣ್ಯ ಇರುವುದು : ಉತ್ತರ ಖಂಡ್ ರಾಜ್ಯದಲ್ಲಿ.
• ಪ್ರಸ್ತುತ ಸಿಎಸ್ಐಆರ್-ಸಿಸಿಎಂಬಿ (CSIR - Centre for Cellular and Molecular Biology) ಯ ನಿರ್ದೇಶಕ : ರಾಕೇಶ್ ಕೆ ಮಿಶ್ರಾ
— ಕೇಂದ್ರ ಕಚೇರಿ : ಹೈದ್ರಾಬಾದ್, ತೆಲಂಗಾಣ.
• ಪ್ರಸ್ತುತ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ ಐಆರ್-Council of Scientific and Industrial Research) ಯ ಡೈರೆಕ್ಟರ್ ಜನರಲ್ : ಶೇಖರ್.ಸಿ.ಮಂಡ್ರೆ.
— ಕೇಂದ್ರ ಕಚೇರಿ : ನವ ದೆಹಲಿ.
• ಇತ್ತೀಚೆಗೆ ಮಾರಕ ಕೊರೋನಾ ವೈರಸ್ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಲಾಗುತ್ತಿದ್ದ HCQ, lopinavir/ritonavir ಔಷಧಿಗಳ ಮೇಲಿನ ಪ್ರಯೋಗವನ್ನು ವಿಶ್ವ ಆರೋಗ್ಯ ಸಂಸ್ಥೆ ಕೈ ಬಿಟ್ಟಿದೆ.
No comments:
Post a Comment