•► ದೇಶಿ ನಿರ್ಮಿತ ದೂರವ್ಯಾಪ್ತಿಯ ಸಬ್‌ಸೋನಿಕ್ ಕ್ಷಿಪಣಿ ‘ನಿರ್ಭಯ್’ :
(Long Range Sub-Sonic Cruise Missile 'Nirbhay')
━━━━━━━━━━━━━━━━━━━━━
★ ವಿಜ್ಞಾನ ಮತ್ತು ತಂತ್ರಜ್ಞಾನ
(Science & Technology)
ಸ್ವದೇಶಿ ನಿರ್ಮಿತ ( indigenously designed and developed long range sub-sonic cruise missile) ದೂರಗಾಮಿ 'ನಿರ್ಭಯ್' ಸಬ್ ಸಾನಿಕ್ ಕ್ಷಿಪಣಿಯನ್ನು ಡಿಆರ್‌ಡಿಒ ಅಧೀನಕ್ಕೆ ಒಳಪಟ್ಟಿರುವ ಬೆಂಗಳೂರಿನ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್(ಎಡಿಎ) ಲ್ಯಾಬ್ ಇದನ್ನು ಅಭಿವೃದ್ಧಿಪಡಿಸಿದೆ.
ಸಬ್ ಸಾನಿಕ್ ಕ್ರೂಸ್ ಕ್ಷಿಪಣಿ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ.
290 ಕೆಜಿ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ, ಆರು ಮೀ.ಉದ್ದ ಮತ್ತು 0.52 ಮೀ.ವ್ಯಾಸ ಹೊಂದಿರುವ 1,500 ಕೆಜಿ ತೂಕದ ನಿರ್ಭಯ್ ಕ್ಷಿಪಣಿಯು 1,000 ಕಿ.ಮೀ.ದಾಳಿ ವ್ಯಾಪ್ತಿಯನ್ನು ಹೊಂದಿರುವುದು.
ಅಣ್ವಸ್ತ್ರ ಸಿಡಿತಲೆಯೂ ಸೇರಿದಂತೆ 24 ಬಗೆಯ ಒಟ್ಟು 300 ಕೆ.ಜಿಯಷ್ಟು ಅಸ್ತ್ರಗಳನ್ನು ಹೊತ್ತೊಯ್ಯಬಲ್ಲ ಅತ್ಯಾಧುನಿಕ ಕ್ಷಿಪಣಿ ಇದಾಗಿದೆ. ಏಕಕಾಲಕ್ಕೆ ವಿವಿಧ ಗುರಿಗಳನ್ನು ಹೊಡೆದುರುಳಿಸಬಲ್ಲ ನಿರ್ಭಯ್ ಮಿಸೈಲ್‌ನಲ್ಲಿರುವ ನ್ಯಾವಿಗೇಷನ್ ವ್ಯವಸ್ಥೆ ಸಂಪೂರ್ಣ ಆಟೋಮ್ಯಾಟಿಕ್. ಕ್ಷಿಪಣಿಯು ಒಂದಷ್ಟು ದೂರ ಕ್ರಮಿಸಿದ ಬಳಿಕ, ಆಕಾಶ ಮಾರ್ಗದಲ್ಲಿಯೇ ಕಂಪ್ಯೂಟರ್ ಪ್ರೋಗ್ರಾಂ ಆಧಾರಿತ ಸ್ವಯಂ ಚಾಲಿತ ವ್ಯವಸ್ಥೆಯಿಂದ ರೆಕ್ಕೆಗಳನ್ನು ಬಿಡಿಸಿಕೊಂಡು, ಪಥ ನಿರ್ದೇಶಿಸಿಕೊಂಡು ಮುನ್ನುಗ್ಗಬಲ್ಲದು. ರೇಡಾರ್‌ಗಳನ್ನು ಬಳಸಿಕೊಂಡು ಇವೆಲ್ಲವನ್ನೂ ನಿಯಂತ್ರಣ ಕೊಠಡಿಯಿಂದ ನಿಯಂತ್ರಿಸಬಹುದಾಗಿದೆ.
ರಿಂಗ್ ಲೇಸರ್ ಗೈರೋಸ್ಕೋಪ್ ನಿರ್ದೇಶಿತ ನ್ಯಾವಿಗೇಷನ್ ವ್ಯವಸ್ಥೆ ಹೊಂದಿರುವ ಈ ಕ್ಷಿಪಣಿಯನ್ನು ನೆಲ-ಜಲ-ವಾಯು ಹೀಗೆ ಎಲ್ಲ ಬಗೆಯ ಉಡಾವಣಾ ವ್ಯವಸ್ಥೆಗಳಿಂದಲೂ ಹಾರಿಸಬಹುದಾಗಿದೆ.

No comments:
Post a Comment