"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday, 6 July 2020

•► ️ಜುಲೈ 06 ರ (06 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು : (Important facts from the current events of 06 July 2020)

•► ️ಜುಲೈ 06 ರ (06 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು :
(Important facts from the current events of  06 July 2020)

━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು
(current affairs notes)


• ಜುಲೈ 06 - ಇಂದು ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಜಯಂತಿಯ ದಿನ.
— ಶ್ಯಾಮ ಪ್ರಸಾದ್‌ ಮುಖರ್ಜಿ ಅವರು ಜುಲೈ 6, 1901 ರಂದು ಕೋಲ್ಕತ್ತಾದಲ್ಲಿ ಜನಿಸಿದರು. ಬ್ರಿಟಿಷ್‌ ಆಡಳಿತದಲ್ಲಿ  ಬ್ಯಾರಿಸ್ಟರ್ ಆಗಿದ್ದರು. ರಾಜಕಾರಣಿ ಮತ್ತು ಶಿಕ್ಷಣ ತಜ್ಞರಾಗಿದ್ದ ಅವರು ಜವಾಹರಲಾಲ್ ನೆಹರೂ ಸಂಪುಟದಲ್ಲಿ ಕೈಗಾರಿಕೆ ಸಚಿವರಾಗಿದ್ದರು.

• ಪ್ರಸ್ತುತ ರಾಜ್ಯ ಮಾಹಿತಿ ಆಯುಕ್ತ : ಕೆ.ಇ. ಕುಮಾರಸ್ವಾಮಿ

• ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಬ್ಯಾಂಕ್‌ಗಳು ಹೆಚ್ಚಳಗೊಳ್ಳುವ ‘ಎನ್‌ಪಿಎ-(ವಸೂಲಾಗದ ಸಾಲದ ಪ್ರಮಾಣ)’ಗಾಗಿ ಭವಿಷ್ಯದಲ್ಲಿ ತೆಗೆದು ಇರಿಸಬೇಕಾದ ಮೊತ್ತವನ್ನೂ ಹೆಚ್ಚಿಸಬೇಕಾಗುತ್ತದೆ.


• ಪ್ರಸ್ತುತ ಭಾರತ-ಟಿಬೆಟಿಯನ್ ಗಡಿ ಭಾಗದ ಪೊಲೀಸ್ ಪಡೆ ಮುಖ್ಯಸ್ಥ : ಎಸ್ ಎಸ್ ದೆಸ್ವಾಲ್


• ಪ್ರತಿ ನೇಕಾರರಿಗೆ ರೂ. 2,000 ಗಳನ್ನು ವಾರ್ಷಿಕ ಆರ್ಥಿಕ ನೆರವನ್ನು ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಗೆ ಮಾಡಲಾಗುವ 'ನೇಕಾರ ಸಮ್ಮಾನ್ ಯೋಜನೆ'(Nekar Samman Scheme) ಚಾಲನೆ.
— ರಾಜ್ಯದಲ್ಲಿನ ರೇಷ್ಮೆ, ಹತ್ತಿ ಹಾಗೂ ಉಣ್ಣೆ ವಲಯದ ಕೈಮಗ್ಗ ಮತ್ತು ಪೂರಕ ಚಟುವಟಿಕೆಗಳಲ್ಲಿ ತೊಡಗಿರುವ ಕೈಮಗ್ಗ ನೇಕಾರರು ಈ ಯೋಜನೆಗೆ ಅರ್ಹರಾಗಿರುತ್ತಾರೆ.

• ರಾಷ್ಟ್ರೀಯ ಭೂಕಂಪನ ಸಂಸ್ಥೆ ('National Centre for Seismology')ಯ ಕೇಂದ್ರ ಕಚೇರಿ ಇರುವುದು : ನೊಯಿಡಾದಲ್ಲಿ.
— ಪ್ರಸ್ತುತ ಇದರ ಡೈರೆಕ್ಟರ್ : ಡಾ.ಬಿ.ಕೆ. ಬನ್ಸಾಲ್.
— 115 ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದೆ.


• ‘ಒಫೆಕ್‌ 16’ ಎಂಬ ಈ ಕಣ್ಗಾವಲು, ಬೇಹುಗಾರಿಕೆಯ ಹೊಸ ಉಪಗ್ರಹವೊಂದನ್ನು ಇಸ್ರೇಲ್ ದೇಶವು ಯಶಸ್ವಿಯಾಗಿ ಉಡಾವಣೆ ಮಾಡಿದೆ.‌


• ಕೋವಿಡ್‌ ಬಿಕ್ಕಟ್ಟಿನಿಂದ ಆರ್ಥಿಕ ನಷ್ಟಕ್ಕೆ ಒಳಗಾಗಿರುವ ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆ (ಎಂಎಸ್‌ಎಂಇ) ವಲಯಕ್ಕೆ ನೆರವಾಗಲು ಇನ್‌ಸ್ಟಾಮೊಜೊ ಕಂಪನಿಯು ‘ಇನ್‌ಸ್ಟಾಕ್ಯಾಷ್‌’ ಯೋಜನೆಗೆ ಚಾಲನೆ ನೀಡಿದೆ.
— ವಹಿವಾಟನ್ನು ಮುಂದುವರಿಸಿಕೊಂಡು ಹೋಗಲು ಅಗತ್ಯವಿರುವ ದುಡಿಯುವ ಬಂಡವಾಳವನ್ನು ತಕ್ಷಣವೇ ಒದಗಿಸುವ ಯೋಜನೆ ಇದಾಗಿದೆ.
— ಏಳರಿಂದ 14 ದಿನಗಳ ಅವಧಿಗೆ ₹ 1 ಲಕ್ಷದವರೆಗೆ ಸಾಲ ಪಡೆಯಬಹುದಾಗಿದೆ.
— ಗ್ರಾಹಕರ ಖಾತೆಗೆ ಹಣ ವರ್ಗಾವಣೆ ಆಗಲಿದೆ.
— ಸದ್ಯದ ಮಟ್ಟಿಗೆ ಸಾಲ ಸೌಲಭ್ಯ ಒದಗಿಸುವ ಪ್ರಕ್ರಿಯೆಗೆ ಕನಿಷ್ಠ ಶುಲ್ಕವನ್ನಷ್ಟೇ ಪಡೆಯಲಾಗುತ್ತಿದೆ


• ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ಚತವಲ್ಲದ ಸದಸ್ಯ ಸ್ಥಾನಕ್ಕೆ ಭಾರತವು ಕಳೆದ ತಿಂಗಳು ಆಯ್ಕೆಯಾಗಿತ್ತು. ಈ ಸದಸ್ಯತ್ವವು ಎರಡು ವರ್ಷ ಅವಧಿಯದ್ದಾಗಿದ್ದು, 2021ರ ಜನವರಿಯಿಂದ ಆರಂಭವಾಗಲಿದೆ. ಸಾಮಾನ್ಯ ಸಭೆಯ 192 ಸದಸ್ಯ ರಾಷ್ಟ್ರಗಳ 184 ಮತಗಳನ್ನು ಪಡೆಯುವ ಮೂಲಕ ಭಾರತವು ಆಯ್ಕೆಯಾಗಿತ್ತು.

• ಪ್ರಸ್ತುತ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ :  ಮಹಮ್ಮದ್‌ ಬಂದೆ.

• ಪ್ರಸ್ತುತ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ (ಡಿಎಸ್‌ಇಆರ್‌ಟಿ) ನಿರ್ದೇಶಕ : ಎಂ.ಆರ್.ಮಾರುತಿ

• ಭಾರತೀಯ ಗುಣಮಟ್ಟ ಮಾಪನ ಸಂಸ್ಥೆ (ಬಿಐಎಸ್ - Bureau of Indian Standards‌) ಯ ಕೇಂದ್ರ ಕಚೇರಿ ಇರುವುದು : ದೆಹಲಿಯಲ್ಲಿ.
— ಪ್ರಸ್ತುತ ಇದರ ಡೈರೆಕ್ಟರ್ ಜನರಲ್ : ಪ್ರಮೋದ್ ಕುಮಾರ್ ತಿವಾರಿ.

• ಪ್ರಸ್ತುತ ದೇಶದ ಬಾಹ್ಯಾಕಾಶ ಸಚಿವಾಲಯದ ಕಾರ್ಯದರ್ಶಿಯೂ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಅಧ್ಯಕ್ಷ ಆಗಿರುವವರು :  ಕೆ.ಶಿವನ್‌

• ಅಪರಾಧ ತಡೆ ಕಾಯ್ದೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಇತ್ತೀಚೆಗೆ ಕೇಂದ್ರ ಗೃಹ ಇಲಾಖೆ ನೇಮಿಸಿರುವ ಸಮಿತಿ : ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ರಣ್‌ಬೀರ್‌ ಸಿಂಗ್‌ ನೇತೃತ್ವದ ಸಮಿತಿ.


• ಕಾವಾಸಾಕಿ’ ಎಂಬ ರೋಗದ ಲಕ್ಷಣಗಳು :
- ಕಾವಾಸಾಕಿ’ ಐದು ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಜ್ವರ ಮತ್ತು ಚರ್ಮದ ಮೇಲೆ ಕೆಂಪು ಮತ್ತು ಗುಲಾಬಿ ಬಣ್ಣದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದಿದ್ದರೆ ರಕ್ತನಾಳಗಳಲ್ಲಿ ತೀವ್ರ ಬಾವು ಬಂದು ಹೃದಯದ ರಕ್ತನಾಳಗಳು ತೀವ್ರ ಹಾನಿಗೊಳಗಾಗುತ್ತವೆ.


• ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಲ್ಲಿ (ಎಂಎಸ್‌ಎಂಇ) ಹೆಚ್ಚಿನ ಹೂಡಿಕೆ ಮಾಡಲು ಪ್ರೊತ್ಸಾಹ. ಅದೇರೀತಿ ಎಂಎಸ್‌ಎಂಇಗಳ ವ್ಯಾಖ್ಯಾನವನ್ನೂ ಬದಲಿಸಲು ಪ್ರಯತ್ನ -  ಸಚಿವ ನಿತಿನ್ ಗಡ್ಕರಿ ಹೇಳಿಕೆ.
— ಅತಿಸಣ್ಣ ಉದ್ಯಮಗಳಲ್ಲಿನ ಹೂಡಿಕೆಗೆ ಈ ಹಿಂದೆ ₹ 25 ಲಕ್ಷ ನಿಗದಿಪಡಿಸಲಾಗಿತ್ತು. ಅದನ್ನು ಈಗ ₹ 1ಕೋಟಿಗೆ ಏರಿಸಲಾಗಿದೆ. ಅದರ ವಹಿವಾಟು ಈ ಹಿಂದೆ ₹ 10 ಲಕ್ಷವಾಗಿತ್ತು. ಇದೀಗ ₹ 5 ಕೋಟಿಗೆ ತಲುಪಿದೆ.
— ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಇದ್ದ ₹ 5 ಕೋಟಿ ಹೂಡಿಕೆ ಮಿತಿಯನ್ನು ಈಗ ₹ 10 ಕೋಟಿಗೆ ಹೆಚ್ಚಿಸಲಾಗಿದೆ. ವಹಿವಾಟು ಮಿತಿ ₹ 2 ಕೋಟಿಯಿಂದ ₹ 50 ಕೋಟಿಗೆ ಏರಿಕೆಯಾಗಿದೆ.
— ಮಧ್ಯಮ ಪ್ರಮಾಣದ ಕೈಗಾರಿಕೆಗಳಲ್ಲಿ ₹ 10 ಕೋಟಿ ಹೂಡಿಕೆ ಮಿತಿ ಇತ್ತು. ಅದು ಈಗ ₹ 50 ಕೋಟಿಗೆ ಹೆಚ್ಚಳವಾಗಿದೆ. ವಹಿವಾಟು ₹ 5 ಕೋಟಿಯಿಂದ ₹ 250 ಕೋಟಿ ರೂ.ಗೆ ಏರಿದೆ.


• ಖಲಿಸ್ತಾನ್ ಚಳವಳಿ :
— ಸಿಖ್ಖರಿಗಾಗಿಯೇ ಪ್ರತ್ಯೇಕ ರಾಷ್ಟ್ರ ನಿರ್ಮಾಣದ ಉದ್ದೇಶದೊಂದಿಗೆ ಆರಂಭವಾಗಿದ್ದೇ ಈ ಖಲಿಸ್ತಾನ ರಾಜಕೀಯ ಚಳವಳಿ. ಇಂಥದೊಂದು ವಿಚಾರ ಮೊಳಕೆ ಯೊಡೆದಿದ್ದೇ 1940 ಮತ್ತು 50ರ ದಶಕದಲ್ಲಿ. ಆದರೆ, ಈ ಚಳವಳಿಗೆ ಪ್ರಾಮುಖ್ಯತೆ ಬಂದಿದ್ದು 1970-80ರ ದಶಕದಲ್ಲಿ. 1980ರ ಕಾಲದಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ಖಲಿಸ್ತಾನ್ ಎಂಬ ಪ್ರತ್ಯೇಕ ಸಿಖ್ ದೇಶವನ್ನು ನಿರ್ವಿುಸಬೇಕು ಎಂದ ದಮದಮಿ ತಕ್ಸಲ್‌ನ ನಾಯಕನಾಗಿದ್ದ ಜರ್ನೈಲ್‌ ಸಿಂಗ್‌ & ಭಿಂದ್ರನ್​ವಾಲೆಯ ಎಂಬುವನ ಮುಂದಾಳತ್ವದ ಉಗ್ರ ಹೋರಾಟದ ರೂಪದಲ್ಲಿ ಖಲಿಸ್ತಾನ್ ಚಳವಳಿ ಹುಟ್ಟಿಕೊಂಡಿತು.
ಭಿಂದ್ರನ್‌ವಾಲೆಯಿಂದಾಗಿ ಈ ಚಳವಳಿ ವಿಧ್ವಂಸಕ ಸ್ವರೂಪವನ್ನೂ ಪಡೆಯಿತು. ಈ ಅಂಶವೇ ಪ್ರಮುಖವಾಗಿ ಆಪರೇಷನ್‌ ಬ್ಲೂ ಸ್ಟಾರ್‌ಗೆ ಕಾರಣ


• 1986-88 ವರ್ಷಗಳಲ್ಲಿ ಹಿಂದೊಮ್ಮೆ ಡಾರ್ಜಿಲಿಂಗ್‌ ಪರ್ವತ ಪ್ರದೇಶ ಪ್ರತ್ಯೇಕತೆ ಬಯಸಿ ಹೊತ್ತಿ ಉರಿದದ್ದನ್ನು ಅಪರೂಪವಾಗಿ ದಾಖಲಿಸಿರುವ ಕೃತಿ, ‘ದಿ ಇನ್‌ಹೆರಿಟೆನ್ಸ್ ಆಫ್ ಲಾಸ್ (2004)’. ಕಿರಣ್ ದೇಸಾಯಿ ಬರೆದ ಈ ಕಾದಂಬರಿ 2006ರ ಸಾಲಿನ ಪ್ರತಿಷ್ಠಿತ ಮ್ಯಾನ್‌ಬೂಕರ್ ಪ್ರಶಸ್ತಿ ಗೆದ್ದುಕೊಂಡಿತು.


• ವಿಶ್ವದ ಎದುರು ನಿಲ್ಲಲು ಬೇಕಾದ ಗಟ್ಟಿಗತನ ಪ್ರೇರೇಪಿಸುವ, ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕವಾಗಿ ಒಗ್ಗೂಡಬೇಕಾದ ಅಗತ್ಯ ಸಾರುವ ಸಲ್ಮಾನ್ ರಶ್ದಿಯ ‘ಮಿಡ್‌ನೈಟ್ಸ್ ಚಿಲ್ಡ್ರನ್’ ಒಂದು ಮುಖ್ಯ ಉದಾಹರಣೆ.

No comments:

Post a Comment