"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 28 July 2020

•► ️ಪರಿಸರ ಸೂಕ್ಷ್ಮ ವಲಯ (ESZ-ಇಕೊ ಸೆನ್ಸಿಟಿವ್‌ ಝೋನ್‌ )

•► ️ಪರಿಸರ ಸೂಕ್ಷ್ಮ ವಲಯ (ESZ-ಇಕೊ ಸೆನ್ಸಿಟಿವ್‌ ಝೋನ್‌   ━━━━━━━━━━━━━━━━━━━━━━━━━
 ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್
(IAS/KAS Exam Preparation Short Notes)

 ಅರಣ್ಯ ಸಂರಕ್ಷಣೆಗೆ, ಅರಣ್ಯದ ಸುತ್ತ ನಡೆಯುವ ಅನಪೇಕ್ಷಿತ ಚಟುವಟಿಕೆಗಳ ತಡೆಗಾಗಿ
ಕೇಂದ್ರ ಸರಕಾರದ ಪರಿಸರ, ಅರಣ್ಯ ಇಲಾಖೆಯಿಂದ ಸೂಕ್ಷ್ಮ ವಲಯ ಘೋಷಣೆಯಾಗುತ್ತದೆ, ಅರಣ್ಯ ಪ್ರದೇಶದ 10 ಕಿ.ಮೀ. ಸುತ್ತಳತೆಯ ಪ್ರದೇಶಗಳ ಚಟುವಟಿಕೆಗಳು ಅರಣ್ಯ ಇಲಾಖೆ ನಿಯಂತ್ರಣಕ್ಕೆ ಒಳಪಡುತ್ತವೆ + ಪರಿಸರ ಸಂರಕ್ಷಣಾ ಕಾಯ್ದೆ 1986 ರ ಅಡಿಯಲ್ಲಿ ಭಾರತ ಸರ್ಕಾರದ MoEFCC ಯಿಂದ ಇಎಸ್‌ಝೆಡ್ ಗಳ ಘೋಷಣೆ + ನಿರ್ಬಂಧಗಳು —
ಘೋಷಿತ ಪ್ರದೇಶದ 10 ಕಿ.ಮೀ. ವ್ಯಾಪ್ತಿಯಲ್ಲಿ ರೆಸಾರ್ಟ್‌, ಹೊಟೇಲ್‌ ತೆರೆಯುವಂತಿಲ್ಲ. ಗಣಿಗಾರಿಕೆ, ಕೈಗಾರಿಕೆ, ಬೃಹತ್‌ ಜಲವಿದ್ಯುತ್‌ ಸ್ಥಾವರ, ಅಪಾಯಕಾರಿ ವಸ್ತುಗಳ ಉತ್ಪಾದನ ಘಟಕ, ಘನ, ದ್ರವ ತ್ಯಾಜ್ಯ ಘಟಕ, ಬೃಹತ್‌ ಪ್ರಮಾಣದ ಆಹಾರ ತಯಾರಿ ಘಟಕ, ಕೋಳಿಫಾರಂ ಘಟಕ, ಮರದ ಮಿಲ್ಲು, ಗಾಳಿಯಂತ್ರ ಸ್ಥಾಪನೆ, ಇಟ್ಟಿಗೆ ಶೋಧನೆ, ಕಟ್ಟಡ ನಿರ್ಮಾಣ ನಿಷೇಧವಾಗುತ್ತದೆ. ಕಾಡುತ್ಪತ್ತಿ ಸಂಗ್ರಹ, ವಿದ್ಯುದೀಕರಣ, ರಸ್ತೆ ಅಭಿವೃದ್ಧಿ ಇತ್ಯಾದಿ ಶರತ್ತಿನಲ್ಲಿ ಮಾಡಬಹುದಾಗಿದೆ. ಶಬ್ದ ಮಾಲಿನ್ಯ, ವಾಯು ಮಾಲಿನ್ಯದ ಚಟುವಟಿಕೆ ನಡೆಸುವಂತಿಲ್ಲ. + ಇತ್ತೀಚೆಗೆ (Nov2019) ಕರ್ನಾಟಕದ ಬಿಳಿಗಿರಿರಂಗನಾಥ ದೇವಸ್ಥಾನ ಹುಲಿ ಸಂರಕ್ಷಿತ ಪ್ರದೇಶದ ಸುತ್ತಲಿನ 240 ಚದರ ಕಿ.ಮೀ ಪರಿಸರ ಸೂಕ್ಷ್ಮ ವಲಯ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಅಧಿಸೂಚನೆ ಪ್ರಕಟ. + ಇತ್ತೀಚೆಗೆ (Feb 2020) ಕರ್ನಾಟಕದ ಬನ್ನೇರುಘಟ್ಟ ಉದ್ಯಾನದ ಸುತ್ತಲಿನ ಪರಿಸರ ಸೂಕ್ಷ್ಮ ವಲಯವನ್ನು 268.96 ಚ.ಕಿ.ಮೀ.ನಿಂದ 168.84 ಚ. ಕಿ.ಮೀಗೆ ಇಳಿಕೆ.

No comments:

Post a Comment