"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 7 July 2020

•► ️​ಖಲಿಸ್ತಾನ್‌ ಚಳವಳಿ (Khalistan Movement)

•► ️​ಖಲಿಸ್ತಾನ್‌ ಚಳವಳಿ
(Khalistan Movement)

━━━━━━━━━━━━━━━━━━━━━

★ ಆಧುನಿಕ ಭಾರತದ ಇತಿಹಾಸ
(Modern Indian History)


1940ರಲ್ಲೇ ಖಲಿಸ್ತಾನದ ಚಿಂತನೆಯ ಬೀಜಗಳು ಹುಟ್ಟಿಕೊಂಡಿದ್ದವು. ಸಿಖ್‌ರಿಗೊಂದು ಪ್ರತ್ಯೇಕ ದೇಶ ಬೇಕು ಎಂದು ಹಲವು ಸಿಕ್ಖರು ವಾದಿಸಿದರು.

ಈ ದೇಶದಲ್ಲಿಪಂಜಾಬ್‌ನ್ನು ಮುಖ್ಯವಾಗಿಟ್ಟುಕೊಂಡು, ಪಾಕಿಸ್ತಾನ, ಬಲೂಚಿಸ್ತಾನ, ಹಿಮಾಚಲ, ಹರ್ಯಾಣ, ಜಮ್ಮು- ಕಾಶ್ಮೀರದ ಕೆಲ ಭಾಗಗಳನ್ನು ಸೇರಿಸಿಕೊಂಡು ಪ್ರತ್ಯೇಕ ಖಲಿಸ್ತಾನ್‌ ರಚಿಸುವ ಚಿಂತನೆಯಿತ್ತು. ಕೆಲವು ಶ್ರೀಮಂತ ಹಾಗೂ ಪ್ರತ್ಯೇಕತಾವಾದಿ ಸಿಕ್ಖರ ಹಣಕಾಸು ಹಾಗೂ ಪಾಕಿಸ್ತಾನದ ಬೆಂಬಲದಿಂದ 1970-80ರದ ದಶಕದಲ್ಲಿಇದು ಉಗ್ರವಾಗಿ ಬೆಳೆಯಿತು.

1980ರಲ್ಲಿ ಜಗಜಿತ್‌ ಸಿಂಗ್‌ ಚೌಹಾಣ್‌ ಎಂಬಾತ ನ್ಯಾಷನಲ್‌ ಕೌನ್ಸಿಲ್‌ ಆಫ್‌ ಖಲಿಸ್ತಾನ್‌ ಎಂಬ ಸಂಘಟನೆ ಕಟ್ಟಿದ. ಬ್ರಿಟನ್‌ಗೆ ಹೋಗಿ ಅಲ್ಲಿಂದಲೇ ಖಲಿಸ್ತಾನ್‌ ರಚನೆಯನ್ನೂ ಘೋಷಿಸಿದ. ನಂತರ ಜರ್ನೈಲ್‌ ಸಿಂಗ್‌ ಭಿಂದ್ರಾನ್‌ವಾಲೆ ಎಂಬ ಮತಾಂಧ ಧಾರ್ಮಿಕ ಗುರು ಹುಟ್ಟಿಕೊಂಡು, ಉಗ್ರ 'ಖಾಲ್ಸಾ' ಪ್ರವೃತ್ತಿಯನ್ನು ಪ್ರೋತ್ಸಾಹಿಸಿದ. ಪ್ರತಿಯೊಬ್ಬ ಸಿಕ್ಖನೂ 32 ಹಿಂದೂಗಳನ್ನು ಕೊಲ್ಲಬೇಕೆಂದು ಕರೆನೀಡಿದ. ಈತನ ಕಾಲದಲ್ಲಿ ಪಂಜಾಬ್‌ನಲ್ಲಿ ಹಿಂಸೆ ತಾಡವವಾಡಿತು.

 1984ರ ಜೂನ್‌ನಲ್ಲಿಈತ ತನ್ನ ಸಂಗಡಿಗರ ಜೊತೆ ಅಮೃತಸರದ ಸ್ವರ್ಣಮಂದಿರದಲ್ಲಿ ನೆಲೆ ಹೂಡಿದ. ಈತನನ್ನು ಮಣಿಸಲು ಪ್ರಧಾನಿ ಇಂದಿರಾ ಗಾಂಧಿ 'ಆಪರೇಶನ್‌ ಬ್ಲೂಸ್ಟಾರ್‌' ನಡೆಸಿದರು. ಭಿಂದ್ರಾನ್‌ವಾಲೆ ಸೇರಿ ನೂರಾರು ಉಗ್ರರು, ಪೊಲೀಸರು ಸತ್ತರು. ಪರಿಣಾಮವಾಗಿ ಕೆರಳಿದ ಸಿಖ್‌ ಅಂಗರಕ್ಷಕರಿಂದ 1984ರಲ್ಲಿ ಪ್ರಧಾನಿ ಇಂದಿರಾ ಕಗ್ಗೊಲೆ, ಇದಕ್ಕೆ ಸೇಡು ಎಂಬಂತೆ ಸಿಖ್‌ ಹತ್ಯಾಕಾಂಡ ಎಲ್ಲವೂ ನಡೆದದ್ದು ಇತಿಹಾಸ. ನಂತರ ಈ ಚಳವಳಿ ತಣ್ಣಗಾಗುತ್ತ ಬಂತು. ಆದರೂ ಅದನ್ನು ಗಾಳಿ ಹಾಕಿ ಪ್ರಜ್ವಲಿಸುವಂತೆ ಮಾಡಲು ಪಾಕಿಸ್ತಾನ ಪ್ರಯತ್ನಿಸುತ್ತಲೇ ಇದೆ.

No comments:

Post a Comment