☀ 'ಮಂಗಳಯಾನ ಯೋಜನೆ'ಯ ಅಚ್ಚರಿಗಳು!! :
(Wonders of MOM's Plan)
━━━━━━━━━━━━━━━━━━━━━━━━━━━━━━━━━━━━━━━━━━━━━
♠.ಮಂಗಳಯಾನ ಯೋಜನೆಗಾಗಿ ಮಾಡಿದ ವೆಚ್ಚ ₨ 450 ಕೋಟಿ. ಇದು ಮುಂಬೈನಲ್ಲಿ ಇತ್ತೀಚೆಗೆ ನಿರ್ಮಾಣಗೊಂಡ ಎಂಟು ಪಥಗಳ ರಸ್ತೆಗಾಗಿ ಮಾಡಲಾಗಿರುವ ₨ 2500 ಕೋಟಿಗೆ ಹೋಲಿಸಿದತೆ ಅತ್ಯಂತ ಕಡಿಮೆಯೇ.
♠.ಹಾಲಿವುಡ್ ಚಿತ್ರ `ಗ್ರ್ಯಾವಿಟಿ'ಯ ನಿರ್ಮಾಣಕ್ಕೆ ಮಾಡಿರುವ ವೆಚ್ಚ ₨ 610 ಕೋಟಿಗಿಂತಲೂ ಇದು ಕಡಿಮೆ.
♠.ಯೋಜನೆಯ ವೆಚ್ಚವು ಅಮೆರಿಕದ ನಾಸಾವು ‘ಮೇವನ್ ಯಾನ’ಕ್ಕಾಗಿ ಮಾಡಿರುವ ವೆಚ್ಚದ ಹತ್ತನೇ ಒಂದು ಭಾಗ ಮಾತ್ರ.
♠.ಭಾರತದ 120 ಕೋಟಿ ಜನಸಂಖ್ಯೆಗೆ ಲೆಕ್ಕಹಾಕಿದರೆ ಪ್ರತಿಯೊಬ್ಬ ವ್ಯಕ್ತಿ ಈ ಯೋಜನೆಗೆ ನೀಡಿರುವ ಕಾಣಿಕೆ ತಲಾ 4 ರೂಪಾಯಿ ಆಗುತ್ತದೆ.
♠.ಮಂಗಳನಲ್ಲಿ ಜೀವಪೋಷಕ ಕುರುಹುಗಳಿಗಾಗಿ ತಡಕಾಡಲಿರುವ ನೌಕೆಯ ತೂಕ ಕೇವಲ 1350 ಕೆ.ಜಿ. ಇದು ನಮ್ಮ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್‌ನ ತೂಕಕ್ಕಿಂತ ಕಡಿಮೆ.
♠.ನಾಸಾ ಮೇವನ್ ಸಿದ್ಧಗೊಳಿಸಲು 5 ವರ್ಷ ಅವಧಿ ತೆಗೆದುಕೊಂಡರೆ ಇಸ್ರೊ ಮಂಗಳಯಾನ ನೌಕೆ ಸಿದ್ಧಗೊಳಿಸಲು ತೆಗೆದುಕೊಂಡ ಅವಧಿ 15 ತಿಂಗಳುಗಳು ಮಾತ್ರ.
♠.ಇಸ್ರೊದ 44 ವರ್ಷಗಳ ಇತಿಹಾಸದಲ್ಲಿ ಭೂಮಿಯ ಗುರುತ್ವ ಪ್ರಭಾವದಾಚೆಗಿನ ಗ್ರಹವೊಂದರತ್ತ ಹಾರಿದ ಮೊದಲ ಯಾನ ಇದಾಗಿದೆ.
♠.ನೌಕೆಯಲ್ಲಿರುವ ಲಿಮನ್ ಆಲ್ಫಾ ಫೋಟೊಮೀಟರ್ ಡ್ಯೂಟೀರಿಯಮ್ ಹಾಗೂ ಜಲಜನಕದ ಕಣಗಳ ಅನುಪಾತವನ್ನು ಲೆಕ್ಕ ಹಾಕಲಿದೆ. ಇದರಿಂದ ಆ ಗ್ರಹದಿಂದ ನೀರು ಹೇಗೆ ಆವಿಯಾಯಿತು ಎಂಬುದನ್ನು ತಿಳಿದುಕೊಳ್ಳುವುದು ಸಾಧ್ಯವಾಗಲಿದೆ.

No comments:
Post a Comment