"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday, 19 January 2015

☀ಭಾರತದ ಆಣುಶಕ್ತಿ ಕಾರ್ಯಕ್ರಮದ ಕುರಿತು ಚರ್ಚಿಸಿ. (Nuclear Energy Program in India)

☀ಭಾರತದ ಆಣುಶಕ್ತಿ ಕಾರ್ಯಕ್ರಮದ ಕುರಿತು ಚರ್ಚಿಸಿ.
(Nuclear Energy Program in India)

ಪಳೆಯುಳಿಕೆ ಇಂಧನ ಲಭ್ಯತೆ ಮಿತವಾಗಿರುವ ಕಾರಣ, ಅಲ್ಪಾವಧಿ ಮತ್ತು ದೀರ್ಘಾವಧಿ ಇಂಧನ ಅಗತ್ಯಗಳಿಗೆ ಅಣುಶಕ್ತಿ ಇಂಧನ ಬಳಕೆ ಅನಿವಾರ್ಯವೆನಿಸಿದೆ. ಈ ಅನಿವಾರ್ಯತೆಯನ್ನು ಮನಗಂಡ ಖ್ಯಾತ ಅಣುವಿಜ್ಞಾನಿ ಡಾ|| ಹೋಮಿ ಭಾಭಾ ದೀರ್ಘಾವಧಿಗಾಗಿ ಮೂರು ಹಂತಗಳ ಅಣಶಕ್ತಿ ಇಂಧನ ಕಾರ್ಯಕ್ರಮ ರೂಪಿಸಿದರು. ನಮ್ಮಲ್ಲಿರುವ ಪರಿಮಿತ ಯುರೇನಿಯಂ ಹಾಗೂ ಅಪಾರ ಪ್ರಮಾಣದ ಥೋರಿಯಂ ಮೂಲವಸ್ತುಗಳ ನ್ಯಾಯಯುತ ಬಳಕೆಗಾಗಿ ಸಾಂದ್ರ ಒತ್ತಡದ ಭಾರಜಲ ರಿಯಾಕ್ಟರ್ (ಆರ್ ಹೆಚ್ ಡಬ್ಲ್ಯು ಆರ್) ಮತ್ತು ಫಾಸ್ಟ್ ಬ್ರೀಡರ್ ರಿಯಾಕ್ಟರ್ (ಎಫ್‌ಬಿಆರ್) ಇಂಧನ ವರ್ತುಲ ಜೋಡಿಸಿ ಕಾರ್ಯಕ್ರಮ ರೂಪಿಸಲಾಯಿತು.


☀ಆಣುಶಕ್ತಿ ಇಂಧನ ಕಾರ್ಯಕ್ರಮದ ಮೂರು ಹಂತಗಳಾವುವು ?
(Three stages of Nuclear Energy Program)

♠.ಹಂತ ಒಂದು-
ನೈಸರ್ಗಿಕ ಯುರೇನಿಯಂ, ಭಾರಜಲ ಮಾಧ್ಯಮ ಮತ್ತು ತಂಪು ಸಾಂದ್ರ ಒತ್ತಡದ ಭಾರ ಜಲ ರಿಯಾಕ್ಟರ್‌ಗಳ ನಿರ್ಮಾಣ. ಈ ರಿಯಾಕ್ಟರ್‌ಗಳಿಂದ ದೊರಕುವ ವ್ಯಯ ವಸ್ತುಗಳಿಂದ ಪ್ಲುಟೋನಿಯಂ ಪಡೆಯುವುದು.

♠.ಹಂತ ಎರಡು -
ಮೊದಲ ಹಂತದಲ್ಲಿ ದೊರೆತ ಪ್ಲುಟೋನಿಯಂ ಬಳಸಿ, ಇಂಧನ ತಯಾರಿಸಲು ಫಾಸ್ಟ್ ಬ್ರೀಡರ್ ರಿಯಾಕ್ಟರ್‌ಗಳ ನಿರ್ಮಾಣ. ಸೋರಿಯಂ ನಿಂದ ಯುರೇನಿಯಂ-೨೩೩ ಕೂಡ ಪಡೆಯಲಾಗುವುದು.

♠.ಹಂತ ಮೂರು-
ಈ ರೀತಿ ಪಡೆದ ಯುರೇನಿಯಂ 233 ಬಳಸಿ ಪವರ್ ರಿಯಾಕ್ಟರ್ ಮೂಲಕ ವಿದ್ಯುತ್ ಉತ್ಪಾದಿಸಲಾಗುವುದು.


☀ಅಣು ಸ್ಥಾವರದ ಸುತ್ತಲಿನ ಪರಿಸರ ಬಗ್ಗೆ ಹೇಗೆ ನಿಗಾ ಇಡಲಾಗುತ್ತದೆ?
(How will be take care about the environment around the nuclear plant?)

ಸ್ಥಾವರದ ಕಾರ್ಯಾರಂಭಕ್ಕೂ ಮುನ್ನ ಪರಿಸರ ಸಮೀಕ್ಷಾ ಪ್ರಯೋಗಾಲಯ ಸ್ಥಾಪಿಸಲಾಗುತ್ತದೆ. ಸ್ಥಾವರ ಕೆಲಸ ಮಾಡುವುದಕ್ಕೂ ಮೊದಲಿನ ಪರಿಸ್ಥಿತಿ ಅಂದರೆ ಅರಣ್ಯ, ಗಿಡ ಹೂಗಳು, ಸಮುದ್ರ ಉತ್ಪನ್ನಗಳು, ಆಹಾರ, ಗಾಳಿ, ಮೊದಲಾದವುಗಳ ಗುಣಮಟ್ಟಗಳನ್ನು ದಾಖಲಿಸಲಾಗುತ್ತದೆ. ಸ್ಥಾವರ ಕಾರ್ಯಾರಂಭ ಮಾಡಿದ ನಂತರ ನಿಗದಿತವಾಗಿ ಪರಿಸರ ಅಂಶಗಳ ಮಾದರಿಯನ್ನು ಸಂಗ್ರಹಿಸಿ ಮಾಪನ ಮಾಡಲಾಗುತ್ತದೆ. ಈ ಪ್ರಯೋಗಾಲಯ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಪ್ರಯೋಗಾಲಯದ ವಿವರಗಳನ್ನು ನಿಯಂತ್ರಣ ಪ್ರಾಧಿಕಾರ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತದೆ.

No comments:

Post a Comment