"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 21 January 2015

☀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ದೃಢೀಕೃತ ಕಾರ್ಯಕ್ರಮ (ಎನ್‌ಆರ್‌ಇಜಿಎ) ಮತ್ತು ಈ ಕಾರ್ಯಕ್ರಮದ ಗುಣಲಕ್ಷಣಗಳು : ( National Rural Employment Guarantee Programme)

☀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ದೃಢೀಕೃತ ಕಾರ್ಯಕ್ರಮ (ಎನ್‌ಆರ್‌ಇಜಿಎ) ಮತ್ತು ಈ ಕಾರ್ಯಕ್ರಮದ ಗುಣಲಕ್ಷಣಗಳು :
( National Rural Employment Guarantee Programme)


✧. ಹಿಂದಿನ ಗ್ರಾಮೀಣ ಉದ್ಯೋಗ ದೃಢೀಕೃತ ಕಾರ್ಯಕ್ರಮಗಳಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಿ 2006 ರಲ್ಲಿ ಈ ಯೋಜನೆ ಜಾರಿಗೊಳಿಸಲಾಯಿತು.
ಇದಕ್ಕಾಗಿ ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ದೃಢೀಕೃತ ಕಾಯಿದೆ ಜಾರಿಗೆ ತಂದಿತು.

✧. ಈ ಕಾಯಿದೆಯ ಪ್ರಧಾನ ಗುರಿಯೆಂದರೆ ಕೂಲಿಯಾಧಾರಿತ ಉದ್ಯೋಗವನ್ನು ಕ್ರೋಢೀಕರಿಸುವುದು.

✧. ಅದರ ಉಪಕ್ರಮ ಗುರಿಯೆಂದರೆ, ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯನ್ನು ಬಲಪಡಿಸುವುದು ಇದನ್ನು ವೃದ್ಧಿಸಲು ಬಡತನದ ಸಾಂಕ್ರಾಮಿಕತೆಯನ್ನು ಬರಗಾಲ, ಆರಣ್ಯವಿನಾಶ ಮತ್ತು ಭೂ ಸವಕಳಿ ಕೆಲಸಗಳ ಮುಖಾಂತರ ಚೇತೋಹಾರಿ ಅಭಿವೃದ್ಧಿಯನ್ನು ಪ್ರೊತ್ಸಾಹಿಸುವುದು.


♠.ಕಾರ್ಯಕ್ರಮದ ಗುಣಲಕ್ಷಣಗಳು:

1. ಬಡತನದ ಕುಟುಂಬಗಳಿಗೆ ಕನಿಷ್ಟ ೧೦೦ ದಿವಸಗಳ ೦೨ ವಯಸ್ಕರಿಗೆ ಉದ್ಯೋಗ ನೀಡುವುದು

2. ೧೫ ದಿನದೊಳಗೆ ಕೂಲಿ ಪಾವತಿ

3. ಶೇಕಡ ೩೩ರಷ್ಟು ಮಹಿಳೆಯರಿಗೆ, ಪರಿಶಿಷ್ಟರಿಗೆ ಮತ್ತು ಇತರೆ ಆರ್ಥಿಕ ಬಲಹೀನರಿಗೆ ಹೆಚ್ಚಿನ ಉದ್ಯೋಗ ನೀಡಿಕೆ.

4. ಸ್ಥಳೀಯವಾಗಿ ಗ್ರಾಮ ಪಂಚಾಯತಿಗಳಿಗೆ ಅನುಷ್ಟಾನದ ಸಂಪೂರ್ಣ ಹೊಣೆ ನೀಡಲಾಗಿದೆ.

5. ಸಾಮಾಜಿಕ ಲೆಕ್ಕ ಪರಿಶೋಧನೆ ಮತ್ತು ಒಂಬುಡ್ಸಮನ್ ನೇಮಕ.

6. ಕಾರ್ಯಕ್ರಮವನ್ನು ಮಾಹಿತಿ ತಂತ್ರಜ್ಞಾನದ ಮೂಲಕ ನಿಯಂತ್ರಿಸುವುದು.

No comments:

Post a Comment