"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 15 January 2015

 ☀ ಜೂನ್ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀ (Important Current Affairs of June 2014) ★ಜೂನ್ 2014 (June 2014)

 ☀ ಜೂನ್ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀
(Important Current Affairs of June 2014)

★ಜೂನ್ 2014
(June 2014)



 ♣ * ಜೂ. 1:
 ಕೋಲ್ಕತ್ತ ನೈಟ್‌ರೈಡರ್ಸ್‌(ಕೆಕೆಆರ್‌) ತಂಡವು ಐಪಿಎಲ್‌ನ ಟ್ವಂಟಿ–20 ಕ್ರಿಕೆಟ್‌ನ 7ನೇ ಆವೃತ್ತಿಯಲ್ಲಿ  ಚಾಂಪಿಯನ್‌  ಆಗಿ ಹೊರಹೊಮ್ಮಿತು. ಬೆಂಗಳೂರಿನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಪಂಜಾಬ್‌ ತಂಡವನ್ನು ಮಣಿಸಿತು. ಕೆಕೆಆರ್‌ ಎರಡನೇ ಸಲ ಚಾಂಪಿಯನ್‌ ಆಯಿತು.


 ♣ * ಜೂ.1:
 ದಕ್ಷಿಣ ಕೊರಿಯಾದ ವಿಜ್ಞಾನಿಗಳು ವಿಶ್ವದ ವೇಗದ ಓಟಗಾರ ಹುಸೇನ್‌ ಬೋಲ್ಟ್‌ ಅವರಿಗಿಂತಲೂ ವೇಗವಾಗಿ ಓಡುವ ರೊಬೋಟ್‌ ಅನ್ನು ಅಭಿವೃದ್ಧಿಪಡಿಸಿದರು. ಇದು ಗಂಟೆಗೆ 47 ಕಿ. ಮೀ ವೇಗದಲ್ಲಿ ಓಡಲಿದೆ. ಇದನ್ನು ದಕ್ಷಿಣ ಕೊರಿಯಾದ ತಂತ್ರಜ್ಞಾನ ಸಂಸ್ಥೆ ಅಭಿವೃದ್ಧಿಪಡಿಸಿದೆ.


 ♣ * ಜೂ. 2:
 ತೆಲಂಗಾಣ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಕೆ. ಚಂದ್ರಶೇಖರ್‌ ರಾವ್‌  ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಇಎಸ್‌ಎಲ್‌ ನರಸಿಂಹನ್‌ ಅವರು ಪ್ರಮಾಣ ವಚನ ಬೋಧಿಸಿದರು. ತೆಲಂಗಾಣ ದೇಶದ 29ನೇ ರಾಜ್ಯವಾಗಿದೆ.


 ♣ * ಜೂ. 3:
 ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ್‌ ಮುಂಡೆ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಅವರು ಐದು ಸಲ ಶಾಸಕರಾಗಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಭೀಡ್‌ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.


 ♣ * ಜೂ. 4:
 ಸಿರಿಯಾದ ಅಧ್ಯಕ್ಷರಾಗಿ ಬಷರ್‌–ಅಲ್‌–ಅಸಾದ್‌ ಅವರು ಪ್ರಮಾಣ ವಚನ ಸ್ವೀಕರಿಸಿದರು. ಅಸಾದ್‌ ಅವರು ಮೂರನೇ ಬಾರಿ ಸಿರಿಯಾ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ಹಸನ್‌ ಅಲ್‌ ನೂರಿ ಅವರನ್ನು ಸೋಲಿಸಿದರು. ಸಿರಿಯಾ ಸಂವಿಧಾನ ಸುಧಾರಣೆ ಬಳಿಕ ನಡೆದ ಮೊದಲ ಚುನಾವಣೆ ಇದಾಗಿತ್ತು.


 ♣ * ಜೂ. 5:
 ಉತ್ತರಖಂಡ್‌ ರಾಜ್ಯ ಸರ್ಕಾರ ‘ರೈತರಿಗೆ ಪಿಂಚಣಿ’ ನೀಡುವ ಯೋಜನೆಗೆ ಚಾಲನೆ ನೀಡಿತು. ಅತಿ ಸಣ್ಣ ರೈತರಿಗೆ ಅಂದರೆ ಮೂರು ಎಕರೆ ಜಮೀನು ಹೊಂದಿರುವವರಿಗೆ ಮಾಸಿಕ 800 ರೂಪಾಯಿ ಪಿಂಚಣಿ ನೀಡುವ ಯೋಜನೆ ಇದಾಗಿದೆ.


♣ * ಜೂ. 6:
 ಸುಮಿತ್ರಾ ಮಹಾಜನ್‌ ಅವರು 16ನೇ ಲೋಕಸಭೆಯ ಸ್ಪೀಕರ್‌ ಆಗಿ ಆಯ್ಕೆಯಾದರು. ಸುಮಿತ್ರಾ ಮಧ್ಯಪ್ರದೇಶದ ಇಂದೋರ್‌ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಇವರು ದೇಶದ ಎರಡನೇ ಮಹಿಳಾ ಸ್ಪೀಕರ್‌.


 ♣ * ಜೂ. 6:
 ಪಶ್ಚಿಮ ನೆವೆಲ್‌ ಕಮಾಂಡ್‌ನ ಮುಖ್ಯಸ್ಥರಾಗಿ ಅನಿಲ್‌ ಚೋಪ್ರಾ ಅಧಿಕಾರ ವಹಿಸಿಕೊಂಡರು. ಇವರು ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯಲ್ಲಿ ಪದವಿ ಪಡೆದಿದ್ದಾರೆ. ಶೇಖರ್‌ ಸಿನ್ಹಾ ಅವರು ಸ್ವಯಂ ನಿವೃತ್ತಿ ಪಡೆದ ಹಿನ್ನೆಲೆಯಲ್ಲಿ ಅನಿಲ್‌ ಚೋಪ್ರಾ ಅಧಿಕಾರ ವಹಿಸಿಕೊಂಡರು.


♣ * ಜೂ. 6:
 ದೆಹಲಿಯ ಲೆ. ಗೌರ್ನರ್‌ ನಜೀಬ್‌ ಜಂಗ್‌ ಅವರು ‘ಹಣಕಾಸು ವೆಚ್ಚ ಸಮಿತಿ’ಯನ್ನು ರಚಿಸಿದರು.  ಮುಖ್ಯ ಕಾರ್ಯದರ್ಶಿ ಎಸ್‌.ಕೆ. ಶ್ರೀವಾಸ್ತವ ಈ ಸಮಿತಿಯ ಮುಖ್ಯಸ್ಥರು. ಇದರಲ್ಲಿ 7 ಜನ ಸದಸ್ಯರಿದ್ದಾರೆ.


♣ * ಜೂ. 7:
 ವಿಶ್ವಸಂಸ್ಥೆಯು ನೆಲ್ಸನ್‌ ಮಂಡೆಲಾ ಹೆಸರಿನಲ್ಲಿ ವಾರ್ಷಿಕ ಪ್ರಶಸ್ತಿ ನೀಡುವುದಾಗಿ ಘೋಷಣೆ ಮಾಡಿತು. ದುರ್ಬಲರ ಏಳಿಗೆಗೆ ಹೋರಾಡುತ್ತಿರುವವರಿಗೆ ಈ ಪ್ರಶಸ್ತಿ ನೀಡಲಾಗುವುದು ಎಂದು ವಿಶ್ವಸಂಸ್ಥೆ ಪ್ರಕಟಿಸಿತು.


♣ * ಜೂ. 8:
 ಚೀನಾದ ವಿದೇಶಾಂಗ ಸಚಿವ ವ್ಯಾಂಗ್‌ ಯಿ ಎರಡು ದಿನಗಳ ಭಾರತ ಭೇಟಿಗಾಗಿ ಆಗಮಿಸಿದರು. ಅವರು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು.


♣ * ಜೂ. 8:
 ರಫೆಲ್‌ ನಡಾಲ್‌ ಅವರು ಒಂಬತ್ತನೇ ಬಾರೀಗೆ ‘ಫ್ರೆಂಚ್‌ ಓಪನ್‌’ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ನಲ್ಲಿ ಪ್ರಶಸ್ತಿ ಗೆದ್ದರು. ನಡಾಲ್‌ ಅವರು ನೊವಾಕ್ ಜೊಕೊವಿಚ್‌ ಅವರನ್ನು ಮಣಿಸಿದರು. ಮೊದಲ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯನ್ನು 1928ರಲ್ಲಿ ಆಯೋಜಿಸಲಾಗಿತ್ತು. ‌


 ♣ * ಜೂ.  8:
 ಮಾಜಿ ಸೇನಾ ಅಧಿಕಾರಿ ಎ. ಫತ್ಹಾ ಸಿಸಿ ಅವರು ಈಜಿಪ್ಟ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. ಸಾರ್ವತ್ರಿಕ ಚುನಾವಣೆಯಲ್ಲಿ ಸಿಸಿ ಅವರು ಶೇ.96 ರಷ್ಟು ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಹಮೀದ್‌ ಸಬಿ ಅವರು ಈ ಚುನಾವಣೆಯಲ್ಲಿ ಸಿಸಿ ಎದುರು ಪರಾಭವಗೊಂಡರು.


 ♣ * ಜೂ. 9:
 ಭಾರತ ರತ್ನ ಜೆಆರ್‌ಡಿ ಟಾಟಾ ಪ್ರಶಸ್ತಿಯನ್ನು ಭಾರತೀಯ ವಿಮಾನಯಾನ ಪ್ರಾಧಿಕಾರದ ಅಧ್ಯಕ್ಷ ಸೋಮುಸುಂದರಂ ಸ್ವೀಕರಿಸಿದರು. ವಿಮಾನ ನಿಲ್ದಾಣಗಳ ಅಭಿವೃದ್ಧಿಗಾಗಿ ಸೋಮಸುಂದರಂ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.


 ♣ * ಜೂ.10:
 ಬಾಲಿವುಡ್‌ನ ಹಿರಿಯ ನಟ ದೀಲಿಪ್‌ ಕುಮಾರ್‌ ಅವರ ಆತ್ಮಚರಿತ್ರೆ ‘ದಿ ಸಬ್‌ಸ್ಟೈನ್ಸ್‌ ಆಂಡ್‌ ದಿ ಶ್ಯಾಡೊ’ (The Substance And The Shadow) ಲೋಕಾರ್ಪಣೆ ಗೊಂಡಿತು. ಈ ಪುಸ್ತಕವನ್ನು ಪತ್ರಕರ್ತ ಉದಯ್‌ ತಾರಾ ನಾಯರ್‌ ಬರೆದಿದ್ದಾರೆ.


♣ * ಜೂ.10:
 ಭಾರತೀಯ ಮೂಲದ ಕೆನರಾ ಬ್ಯಾಂಕ್‌ ನ್ಯೂಯಾರ್ಕ್‌ನಲ್ಲಿ ನೂತನ ಶಾಖೆಯನ್ನು ಆರಂಭಿಸಿತು. ವಿದೇಶಗಳಲ್ಲಿ ಕೆನರಾ ಬ್ಯಾಂಕ್‌ ಒಟ್ಟು 7 ಶಾಖಾ ಕಚೇರಿಗಳನ್ನು ತೆರೆದಿದೆ.


♣ * ಜೂ.14:
 ಮಹಿಳಾ ವಿಶ್ವಕಪ್‌ ಹಾಕಿ ಟ್ರೋಫಿಯನ್ನು ನೆದರ್‌ಲೆಂಡ್‌ ಗೆದ್ದುಕೊಂಡಿತ್ತು. ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ನೆದರ್‌ಲೆಂಡ್‌ ಒಟ್ಟು ಆರು ಸಲ ವಿಶ್ವಕಪ್‌ ಗೆದ್ದುಕೊಂಡಿದೆ.


♣ * ಜೂ.15:
 ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭೂತಾನ್‌ ದೇಶಕ್ಕೆ ಮೊದಲ ಪ್ರವಾಸ ಕೈಗೊಂಡರು. ಇದೇ ಸಂದರ್ಭದಲ್ಲಿ ಭೂತಾನ್‌ ಸರ್ಕಾರಕ್ಕೆ 789 ಕೋಟಿ ರೂಪಾಯಿ ಹಣಕಾಸು ನೆರವನ್ನು ಘೋಷಿಸಿದರು.


♣ * ಜೂ.20:
 2014ನೇ ಸಾಲಿನ ಪ್ರತಿಷ್ಠಿತ ಪೆನ್‌ ಪೆಂಟರ್‌ ಪ್ರಶಸ್ತಿಗೆ ಭಾರತೀಯ ಸಂಜಾತ ಹಾಗೂ ಬೂಕರ್‌ ಪ್ರಶಸ್ತಿ ಪುರಸ್ಕೃತ ಸಲ್ಮಾನ್‌ ರಶ್ದಿ ಅವರ ಹೆಸರು ನಾಮ ನಿರ್ದೇಶನಗೊಂಡಿತು. ಅವರ ಸಮಗ್ರ ಸಾಹಿತ್ಯ ಸೇವೆಗೆ ಈ ಪ್ರಶಸ್ತಿ ನೀಡಲು ರಶ್ದಿ ಹೆಸರನ್ನು ನಾಮಕರಣ ಮಾಡಲಾಗಿದೆ. ಈ ಪ್ರಶಸ್ತಿಯನ್ನು ಬ್ರಿಟನ್‌ನ ನೊಬೆಲ್‌ ಸಾಹಿತಿ ಹಾರ್ಲ್ಡ್‌ ಪೆಂಟರ್‌ ಅವರ ಹೆಸರಿನಲ್ಲಿ ನೀಡಲಾಗುತ್ತದೆ.


♣ * ಜೂ. 20:
 2013ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಹಿಂದಿ ಭಾಷೆಯ ಹಿರಿಯ ಸಾಹಿತಿ ಕೇದಾರ್‌ನಾಥ್‌ ಸಿಂಗ್‌ ಅವರನ್ನು ಆಯ್ಕೆ ಮಾಡಲಾಯಿತು. ಈವರೆಗೂ 10 ಜನ ಹಿಂದಿ ಸಾಹಿತಿಗಳು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.


♣ * ಜೂ.23:
 ಬಾಂಗ್ಲಾದೇಶ ಪ್ರಜೆಗಳಿಗೆ ನೀಡಲು ಉದ್ದೇಶಿಸಿದ್ದ ‘ವೀಸಾ ರಹಿತ ಆಗಮನ’  ಪ್ರಸ್ತಾವನೆಯನ್ನು ಕೇಂದ್ರ ಗೃಹ ಸಚಿವಾಲಯ ತಿರಸ್ಕರಿಸಿತು.


♣ * ಜೂ.29:
 ಸೈನಾ ನೆಹ್ವಾಲ್‌ ಆಸ್ಟ್ರೇಲಿಯಾದಲ್ಲಿ ನಡೆದ ‘ಆಸ್ಟ್ರೇಲಿಯನ್‌ ಓಪನ್‌ ಸೂಪರ್‌ ಸೀರಿಸ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಮಹಿಳಾ ಸಿಂಗಲ್ಸ್‌ ಪ್ರಶಸ್ತಿಯನ್ನು ಗೆದ್ದರು. ಅವರು ಸ್ಪೇನ್‌ ದೇಶದ ಕ್ಯಾರೊಲಿನಾ ಮರಿನ್‌  ಅವರನ್ನು 21–18, 21–11 ನೇರ ಸೆಟ್‌ಗಳಲ್ಲಿ ಸೋಲಿಸಿದರು.

(ಕೃಪೆ: ಪ್ರಜಾವಾಣಿ)

No comments:

Post a Comment