"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 13 January 2015

☀ ಕೇಂದ್ರ ಸರ್ಕಾರವು ಹೊಸದಾಗಿ ಜಾರಿಯಲ್ಲಿ ತಂದಿರುವ 'ಹೊಸ ಕಂಪನಿಗಳ ಮಸೂದೆ'ಯಲ್ಲಿರುವ ಪ್ರಮುಖ ಅಂಶಗಳನ್ನು ಸ್ಪಷ್ಟೀಕರಿಸಿ. (200 ಶಬ್ದಗಳಲ್ಲಿ) The central government has brought the enactment of new companies bill, clarify its most important elements.

☀ ಕೇಂದ್ರ ಸರ್ಕಾರವು ಹೊಸದಾಗಿ ಜಾರಿಯಲ್ಲಿ ತಂದಿರುವ 'ಹೊಸ ಕಂಪನಿಗಳ ಮಸೂದೆ'ಯಲ್ಲಿರುವ ಪ್ರಮುಖ ಅಂಶಗಳನ್ನು ಸ್ಪಷ್ಟೀಕರಿಸಿ. (200 ಶಬ್ದಗಳಲ್ಲಿ)
The central government has brought the enactment of new companies bill, clarify its most important elements.


ಅಭಿವೃದ್ಧಿಗೆ ಮತ್ತಷ್ಟು ವೇಗವನ್ನು ನೀಡಬಲ್ಲ ಮತ್ತು ಪಾರದರ್ಶಕತೆಯನ್ನು ತರಲು ಹಾಗೂ
ಉದ್ಯೋಗಿಗಳು ಮತ್ತು ಸಣ್ಣ ಹೂಡಿಕೆದಾರರ ಹಿತಾಸಕ್ತಿಯನ್ನು ಸಂರಕ್ಷಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಬಲು ನಿರೀಕ್ಷಿತ ಕಂಪನಿಗಳ ಮಸೂದೆಯನ್ನು ಸಿಎಸ್‌ಆರ್‌ (CSR—Corporate Social Responsibility) ರೂಪಿಸಿದೆ.

1956ರ ಕಂಪನಿ ಕಾಯಿದೆಗೆ ಕಳೆದ 57 ವರ್ಷಗಳ ಅವಧಿಯಲ್ಲಿ ಕನಿಷ್ಠ 25 ತಿದ್ದುಪಡಿಗಳನ್ನು ತರಲಾಗಿದ್ದು, ಇದೀಗ ಸರ್ಕಾರ ಹೊಸ ಕಾಯಿದೆಯನ್ನು ರೂಪಿಸಿದೆ.


★ ಮಸೂದೆಯಲ್ಲಿನ ಪ್ರಮುಖ ಅಂಶಗಳು:

*.ಸಿಎಸ್‌ಆರ್‌ (CSR—Corporate Social Responsibility) ನಲ್ಲಿ ಸ್ಥಳೀಯ ಪ್ರದೇಶಗಳಿಗೆ ಆದ್ಯತೆ, ಸಿಎಸ್‌ಆರ್‌ ಮಾನದಂಡಗಳನ್ನು ಉಲ್ಲಂಗಿಸಿದ ಕಂಪನಿಗಳು ಇದಕ್ಕೆ ಸೂಕ್ತ ವಿವರಣೆ ನೀಡಬೇಕಲ್ಲದೆ ದಂಡವನ್ನೂ ಪಾವತಿಸಬೇಕಾಗುತ್ತದೆ.

*.ಬ್ಯಾಂಕ್‌ ಅಥವಾ ಯಾವುದೇ ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವಲ್ಲಿ ನಡೆಯುವ ವಂಚನೆಗಳಿಗೆ ಕಡಿವಾಣ ಮತ್ತು ಸಾಂಸ್ಥಿಕ ಅಪರಾಧಿಗಳಿಗೆ ಶಿಕ್ಷೆ.

*.ಉದ್ಯೋಗಿಗಳ ಭದ್ರತೆಗೆ ಹೆಚ್ಚಿನ ಒತ್ತು – ಕಂಪನಿ ದಿಢೀರನೆ ಮುಚ್ಚಿದಲ್ಲಿ ಉದ್ಯೋಗಿಗಳಿಗೆ 2 ವರ್ಷಗಳ ವೇತನ ಪಾವತಿಸುವುದು ಕಡ್ಡಾಯ.

*.ಕಂಪನಿಗಳ ಲೆಕ್ಕಪರಿಶೋಧನೆಗಾಗಿ ಕಂಪನಿಯ ಸದಸ್ಯರ ಸಮ್ಮತಿಯೊಂದಿಗೆ ಪ್ರತಿ 5 ವರ್ಷಗಳಿಗೊಮ್ಮೆ ಲೆಕ್ಕಪರಿಶೋಧಕರ ನೇಮಕ. ಓರ್ವ ಲೆಕ್ಕಪರಿಶೋಧಕ ಗರಿಷ್ಠ ಎಂದರೆ 20 ಕಂಪನಿಗಳ ಲೆಕ್ಕಪತ್ರ ಪರಿಶೋಧನೆಯ ಜವಾಬ್ದಾರಿಯನ್ನು ಹೊಂದಬಹುದಾಗಿದೆ.

*.ಖಾಸಗಿ ಕಂಪನಿಯಲ್ಲಿನ ನಿರ್ದೇಶಕರ ಗರಿಷ್ಠ ಸಂಖ್ಯೆಯನ್ನು 12 ರಿಂದ 15ಕ್ಕೆ ಹೆಚ್ಚಳ. ಅಗತ್ಯಬಿದ್ದಲ್ಲಿ ಈ ಸಂಖ್ಯೆಯನ್ನು ವಿಶೇಷ ನಿರ್ಣಯ ಕೈಗೊಳ್ಳುವ ಮೂಲಕ ಹೆಚ್ಚಿಸಬಹುದಾಗಿದೆ.

*.ಕಂಪನಿಗಳ ಆಡಳಿತ ಮಂಡಳಿಗಳು ಮೂರನೇ ಒಂದರಷ್ಟು ಸ್ವತಂತ್ರ ನಿರ್ದೇಶಕರನ್ನು ಮತ್ತು ಕನಿಷ್ಠ ಓರ್ವ ಮಹಿಳಾ ನಿರ್ದೇಶಕರನ್ನು ಹೊಂದುವುದು ಕಡ್ಡಾಯ.

*.ಪ್ರತಿ ವರ್ಷದ ಮಾ.31ಕ್ಕೆ ಕಂಪನಿಯ ಆರ್ಥಿಕ ವರ್ಷ ಮುಕ್ತಾಯಗೊಳ್ಳಬೇಕು.

*.ಲೆಕ್ಕಪರಿಶೋಧಕರು ತಮ್ಮ ವರದಿಯಲ್ಲಿ ಕೆಲವೊಂದು ಮಾಹಿತಿಗಳನ್ನು ನಿರ್ದಿಷ್ಟ ಕಾರಣದಿಂದಾಗಿ ವರ್ಜಿಸಿದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು.

*.ಕಂಪನಿಯ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಕಾರ್ಯ ನಿರ್ವಾಹಕ ಅಧಿಕಾರಿಗಳ ಮಿತಿಮೀರಿದ ವೆಚ್ಚಗಳಿಗೆ ಕಡಿವಾಣ ಮತ್ತು ಇವರ ಪ್ರತಿಯೊಂದೂ ವೆಚ್ಚಗಳ ಬಗೆಗೆ ದಾಖಲಾತಿ.

*.ಕಂಪನಿಗಳಲ್ಲಿನ ಅಕ್ರಮ ಮತ್ತು ಭ್ರಷ್ಟಾಚಾರ ಪ್ರಕರಣಗಳ ಇತ್ಯರ್ಥಕ್ಕಾಗಿ ವಿಶೇಷ ನ್ಯಾಯಾಲಯಗಳ ರಚನೆ.

No comments:

Post a Comment