"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 9 January 2015

☀ಏಪ್ರಿಲ್ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀ (Important Current Affairs of April 2014)

☀ ಏಪ್ರಿಲ್ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀
(Important Current Affairs of April 2014)

★ಏಪ್ರಿಲ್ 2014
(March 2014)


♣ ಏ. 1: ಅಮೆರಿಕದಲ್ಲಿರುವ ಭಾರತೀಯ ಮೂಲದ ಖ್ಯಾತ ಹೃದಯ ತಜ್ಞ ಡಾ. ಸುಮಿತ್‌ ಚೌಗ್‌ ಅವರಿಗೆ ಅಮೆರಿಕ ಸರ್ಕಾರದ ಪ್ರತಿಷ್ಠಿತ ‘ಸಿಮೊನ್‌ ಡಾಕ್‌’ ಪ್ರಶಸ್ತಿ ನೀಡಲಾಯಿತು. ಇದನ್ನು ಹೃದಯ ತಜ್ಞರಿಗೆ ಮಾತ್ರ ನೀಡಲಾಗುತ್ತದೆ.


♣ ಏ. 1: ಜಪಾನ್‌ ಸರ್ಕಾರ ಭಾರತದ ಮಹತ್ವದ 5 ಯೋಜನೆಗಳಿಗೆ 15000 ಕೋಟಿ ರೂಪಾಯಿ ಸಾಲ ಯೋಜನೆ ಪ್ರಕಟಿಸಿತು. ನೂತನ ಮತ್ತು ಪುನರ್‌ನವೀಕರಣ ಇಂಧನ ಅಭಿವೃದ್ಧಿ, ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಇಂಧನ ಘಟಕಗಳ ಸ್ಥಾಪನೆ, ಹರಿಯಾಣ ಮತ್ತು ದೆಹಲಿ ಸಾರಿಗೆ ಅಭಿವೃದ್ಧಿ ಯೋಜನೆಗಳು ಇದರಲ್ಲಿ ಸೇರಿವೆ.


♣ ಏ. 2: ಹಿರಿಯ ಐಎಎಸ್‌ ಅಧಿಕಾರಿ ಡಿ.ಕೆ. ಪಾಠಕ್‌ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌)ಯ ಮಹಾ ನಿರ್ದೆಶಕರಾಗಿ ನೇಮಕಗೊಂಡರು. ಇವರು ಅಸ್ಸೋಂ– ಮೇಘಾಲಯ ಕೇಡರ್‌ನ (1979 ಬ್ಯಾಚ್‌) ಐಪಿಎಸ್‌ ಅಧಿಕಾರಿ.


♣ ಏ. 3: ರಿಸರ್ವ್‌ ಬ್ಯಾಂಕ್‌ನ ಉಪ ಗೌರ್ನರ್‌ ಆಗಿ ಆರ್‌. ಗಾಂಧಿ ಅಧಿಕಾರ ಸ್ವೀಕರಿಸಿದರು. ಇನ್ನು ಮೂರು ವರ್ಷಗಳವರೆಗೆ ಇವರ ಅಧಿಕಾರ ಅವಧಿ ಇರಲಿದೆ.
ಆನಂದ್‌ ಸಿನ್ಹಾ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ ಗಾಂಧಿ ಅವರನ್ನು ನೇಮಕ ಮಾಡಲಾಯಿತು.


♣ ಏ. 4: ಮಾಲ್ಟಾದ ಅಧ್ಯಕ್ಷರಾಗಿ ಮೇರಿ ಲೂಯಿಸ್‌ ಕೊಲೆರಿಯೊ ಪ್ರೆಕಾ ಪ್ರಮಾಣವಚನ ಸ್ವೀಕರಿಸಿದರು. ಕೊಲೆರಿಯೊ ಮಾಲ್ಟಾದ ಎರಡನೇ ಮಹಿಳಾ ಅಧ್ಯಕ್ಷರಾಗಿದ್ದಾರೆ. 1964ರಲ್ಲಿ ಬ್ರಿಟನ್‌ ದೇಶದಿಂದ ಮಾಲ್ಟಾ ಸ್ವಾತಂತ್ರ್ಯ ಪಡೆಯಿತು.   ಕೊಲೆರಿಯೊ ರಿಪಬ್ಲಿಕ್‌ ಪಕ್ಷದ ಸಕ್ರಿಯ ಕಾರ್ಯಕರ್ತೆಯಾಗಿದ್ದಾರೆ.


♣ ಏ. 4: ಭಾರತೀಯ ಚುನಾವಣಾ ಆಯೋಗವು ಏ. 7ರಿಂದ ಮೇ 16ರವರೆಗೂ ಯಾವುದೇ ರೀತಿಯ ಚುನಾವಣಾ ಸಮೀಕ್ಷೆ ಪ್ರಕಟಿಸುವುದರ ಮೇಲೆ ನಿರ್ಬಂಧ ಹೇರಿತು.


♣ ಏ. 4: ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆ ಅಂಜಾ ನಿದ್ರೆಂಗಸ್‌ ಅವರು ಅಪ್ಘಾನಿಸ್ತಾನದಲ್ಲಿ ಪೊಲೀಸರ ಗುಂಡಿಗೆ ಬಲಿಯಾದರು. ಇವರು ಜರ್ಮನ್‌ ಪತ್ರಿಕೆಯ ವರದಿಗಾರ್ತಿಯಾಗಿದ್ದರು. ಇರಾಕ್‌ ಯುದ್ಧ ವರದಿಗಾರಿಕೆಯಿಂದ ಅಂಜಾ ವಿಶ್ವದ ಗಮನ ಸೆಳೆದಿದ್ದರು.


♣ ಏ. 6: ಬಾಂಗ್ಲಾದೇಶದಲ್ಲಿ ನಡೆದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಶ್ರೀಲಂಕಾ ಭಾರತವನ್ನು ಮಣಿಸಿ ವಿಶ್ವಕಪ್‌ ಗೆದ್ದುಕೊಂಡಿತು.
    ಕುಮಾರ ಸಂಗಕ್ಕಾರ ಪಂದ್ಯ ಪುರುಷ ಪ್ರಶಸ್ತಿ, ಭಾರತದ ವಿರಾಟ್‌ ಕೊಹ್ಲಿ ಸರಣಿ ಶ್ರೆಷ್ಠ ಪ್ರಶಸ್ತಿ ಪಡೆದರು. ಈ ಟೂರ್ನಿಯಲ್ಲಿ ಕೊಹ್ಲಿ 319 ರನ್‌ಗಳಿಸಿದ್ದರು.


♣ ಏ. 6: ಭಾರತದ ಅತಿ ದೊಡ್ಡ ಔಷಧ ಉದ್ಯಮ ಸನ್‌ ಫಾರ್ಮಾ 3.2 ದಶಕೋಟಿ ಡಾಲರ್‌ಗೆ ರ್‌್ಯಾನ್‌ಬಾಕ್ಸಿ ಕಂಪೆನಿಯನ್ನು ಖರೀದಿಸುವುದಾಗಿ ಪ್ರಕಟಿಸಿತು.


♣ ಏ. 7: ಅಮೆರಿಕದ ಖ್ಯಾತ ನಟ ಮಿಕ್ಕಿ ರೂನಿ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು. ಆಸ್ಕರ್‌ ಸೇರಿದಂತೆ ನಾಲ್ಕು ಬಾರಿ ಅಕಾಡೆಮಿ, ಮತ್ತು ಗೊಲ್ಡನ್‌ ಗ್ಲೋಬ್‌ ಪ್ರಶಸ್ತಿ ಪಡೆದಿದ್ದರು. ರೂನಿ ಎಂಟು ಮದುವೆಯಾಗಿದ್ದರು.


♣ ಏ. 10: 14ನೇ ನ್ಯೂಯಾರ್ಕ್‌ ಇಂಡಿಯನ್‌ ಫೆಸ್ಟಿವಲ್‌ನಲ್ಲಿ ಬಾಲಿವುಡ್‌ ಚಿತ್ರ ‘ಗುಲಾಬಿ ಗ್ಯಾಂಗ್‌’ ಪ್ರದರ್ಶನಗೊಂಡಿತು. ಈ ಚಿತ್ರೋತ್ಸವದಲ್ಲಿ ಪಾಕಿಸ್ತಾನದ ನಾಲ್ಕು, ಶ್ರೀಲಂಕಾದ ಎರಡು ಮತ್ತು ನೇಪಾಳದ ಒಂದು ಚಿತ್ರ ಪ್ರದರ್ಶನಗೊಂಡವು.


♣ ಏ. 11: ಆರ್‌.ಎಂ. ಲೋಧ ಅವರು ಸುಪ್ರೀಂ ಕೋರ್ಟ್‌ನ 41ನೇ ಮುಖ್ಯ ನ್ಯಾಯಮೂರ್ತಿಯಾದರು. ರಾಜಸ್ತಾನ ಹೈಕೋರ್ಟ್‌ನಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ್ದರು. ರಾಜಸ್ತಾನ ಮತ್ತು ಪಟ್ನಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು.


♣ ಏ. 12: ಬ್ರಿಟನ್‌ನ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿ ‘ನೈಟ್‌ ಗ್ರ್ಯಾಂಡ್‌ ಕ್ರಾಸ್‌’ ಪ್ರಶಸ್ತಿಯನ್ನು ರತನ್‌ ಟಾಟಾ ಅವರಿಗೆ ನೀಡಲಾಯಿತು. ಭಾರತ ಮತ್ತು ಬ್ರಿಟನ್‌ನಲ್ಲಿ ಬಂಡವಾಳ ಹೂಡಿಕೆ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌ ಈ ಪ್ರಶಸ್ತಿಯನ್ನು ಪ್ರದಾನ ಮಾಡುವರು.


♣ ಏ. 12: ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಜಿ. ರೋಹಿಣಿ ಅವರನ್ನು ರಾಷ್ಟ್ರಪತಿಗಳು ನೇಮಕ ಮಾಡಿದರು. ಇವರು ದೆಹಲಿ ಹೈಕೋರ್ಟ್‌ನ ಮೊದಲ ಮುಖ್ಯ ಮಹಿಳಾ ನ್ಯಾಯಮೂರ್ತಿಯಾಗಿದ್ದಾರೆ.  ರೋಹಿಣಿ ಆಂಧ್ರ ಪ್ರದೇಶದವರು.


♣ ಏ. 12: 2013ನೇ ಸಾಲಿನ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಗೆ ಹಿರಿಯ ಕವಿ ಮತ್ತು ಚಿತ್ರ ಸಾಹಿತಿ ಗುಲ್ಜಾರ್‌ ಅವರನ್ನು ಆಯ್ಕೆ ಮಾಡಿರುವುದಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರಕಟಿಸಿತು. ಭಾರತೀಯ ಸಿನಿಮಾ ರಂಗಕ್ಕೆ ಗುಲ್ಜಾರ್‌ ನೀಡಿದ ಕೊಡುಗೆಯನ್ನು ಪರಿಗಣಿಸಿ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. ಗುಲ್ಜಾರ್‌ ಮೂಲತಹ ಪಂಜಾಬ್‌ ರಾಜ್ಯದವರು.


♣ ಏ.13: ನೇಪಾಳದ ಕಠ್ಮಂಡುವಿನಲ್ಲಿ ನಡೆದ 7ನೇ ದಕ್ಷಿಣ ಏಷ್ಯಾ ಜೂಡೊ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಜೂಡೊ ಸ್ಪರ್ಧಿಗಳು ಹತ್ತು ಚಿನ್ನದ ಪದಕ ಸೇರಿದಂತೆ 12 ಪದಕಗಳನ್ನು ಗೆದ್ದರು.


♣ ಏ.14: ಕಲ್ಲಿದ್ದಲು ಸಚಿವಾಲಯದ ಮಾಜಿ ಕಾರ್ಯದರ್ಶಿ ಪಿ.ಸಿ. ಪ್ರಕಾಶ್‌ ಬರೆದಿರುವ ‘ಕ್ರೂಸೆಡರ್‌ ಆರ್‌ ಕಾನ್ಸ್‌ಪ್ರಿಯೆಟರ್‌? ಕೋಲ್ಗೆಟ್‌ ಅಂಡ್‌ ಅದರ್‌ ಟ್ರುತ್ಸ್‌ ’ (Crusader or Conspirator? Coalgate and other Truths) ಎಂಬ ಪುಸ್ತಕ ಅನಾವರಣಗೊಂಡಿತು.


♣ ಏ. 14: ಭಾರತೀಯ ಮೂಲದ ವಿಜಯ್‌ ಶೇಷಾದ್ರಿ ಅವರು ಕವನಗಳ ವಿಭಾಗದಲ್ಲಿ 2014ನೇ ಸಾಲಿನ ಪುಲಿಟ್ಜರ್‌ ಪ್ರಶಸ್ತಿ ಪಡೆದರು. ನ್ಯೂಯಾರ್ಕ್‌ನ ಕಲಾ ಕಾಲೇಜಿನಲ್ಲಿ ಶೇಷಾದ್ರಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ವೈಲ್ಡ್‌ ಕಿಂಗ್‌ಡಮ್‌ ಮತ್ತು ದಿ ಮ್ಯಾಡೊ ಅವರ ಜನಪ್ರಿಯ ಕೃತಿಗಳು.


♣ ಏ. 16: 2013ನೇ ಸಾಲಿನ 61ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು. ಶಿಪ್‌ ಆಫ್‌ ಥಿಸಸ್‌ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು. ಈ ಚಿತ್ರವನ್ನು ಆನಂದ್‌ ಗಾಂಧಿ ನಿರ್ದೇಶನ ಮಾಡಿದ್ದಾರೆ. ರಾಜ್‌ಕುಮಾರ್‌ ಮತ್ತು ಗೀತಾಂಜಲಿ ಅತ್ಯುತ್ತಮ ನಟ, ನಟಿ ಪ್ರಶಸ್ತಿ ಪಡೆದರು.


♣ ಏ. 19; ಗಾಯಕಿ ಮಾತಂಗಿ ಸತ್ಯಮೂರ್ತಿ ಅವರಿಗೆ 2014ನೇ ಸಾಲಿನ ಎಂ.ಎಸ್‌. ಸುಬ್ಬುಲಕ್ಷ್ಮಿ ಪ್ರಶಸ್ತಿ ಪ್ರಕಟಿಸಲಾಯಿತು. ಈ ಪ್ರಶಸ್ತಿಯ ಮೊತ್ತ 10001 ರೂಪಾಯಿ.


♣ ಏ. 23 : ಸುರೇಶ್‌ ಕುಮಾರ್‌ ರೆಡ್ಡಿ ಆಸಿಯಾನ್‌ ಒಕ್ಕೂಟ ರಾಷ್ಟ್ರಗಳ ಮೊದಲ ರಾಯಭಾರಿಯಾಗಿ ನೇಮಕಗೊಂಡರು.


♣ ಏ. 25: ಅಮೆರಿಕದ ಹೆಸರಾಂತ ಮೈಕ್ರೋಸಾಫ್ಟ್‌ ಕಂಪೆನಿಯು ಭಾರತದಲ್ಲಿ ನೋಕಿಯ ಮೊಬೈಲ್‌ ತಯಾರಿಕ ಘಟಕವನ್ನು 7.2 ಬಿಲಿಯನ್‌ ಡಾಲರ್‌ಗೆ ಖರೀದಿಸಿತು.


♣ ಏ. 27: ದಕ್ಷಿಣ ಕೊರಿಯಾದ ಪ್ರಧಾನ ಮಂತ್ರಿ ಚುಂಗ್‌ ಹೊಂಗ್‌ ರಾಜೀನಾಮೆ ನೀಡಿದರು. ಇಂಚೆನ್‌ ಸಮುದ್ರದಲ್ಲಿ ಸಂಭವಿಸಿದ ಹಡಗು ದುರಂತದಲ್ಲಿ 400 ಜನರು ಮೃತಪಟ್ಟಿದ್ದರು. ಇದರ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದರು.


♣ ಏ. 29: ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಆಂಧ್ರ ವಿಧಾನಸಭೆ ವಿಸರ್ಜನೆಗೆ ಅಂಕಿತ ಹಾಕಿದರು.

No comments:

Post a Comment