"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 13 January 2015

☀ಟಾರ್ಗೆಟ್ ಗುಂಪು ಎಂದರೇನು? ರಾಜ್ಯ ಸರ್ಕಾರವು ಜಾರಿಯಲ್ಲಿ ತಂದಿರುವ ಉಜ್ವಲ ಯೋಜನೆಯ ಪ್ರಮುಖ ಉದ್ದೇಶಗಳಾವುವು ? ಅದನ್ನು ಅನುಷ್ಠಾನಗೊಳಿಸುವ ಏಜೆನ್ಸಿಯ ಕುರಿತು ವಿವರಿಸಿರಿ.  (What is the Target Group? and what are the main objectives of the UJWAL YOJANA that the state government has brought into force? Describe the Agency that implement it.

☀ಟಾರ್ಗೆಟ್ ಗುಂಪು ಎಂದರೇನು? ರಾಜ್ಯ ಸರ್ಕಾರವು ಜಾರಿಯಲ್ಲಿ ತಂದಿರುವ ಉಜ್ವಲ ಯೋಜ:ನಗೊಳಿಸುವ ಏಜೆನ್ಸಿಯ ಕುರಿತು ವಿವರಿಸಿರಿ.
(What is the Target Group? and what are the main objectives of the UJWAL YOJANA that the state government has brought into force? Describe the Agency that implement it.


♣ ಟಾರ್ಗೆಟ್ ಗುಂಪು (Target Group):
ವಾಣಿಜ್ಯ ಲೈಂಗಿಕ ದುರುಪಯೋಗಕ್ಕಾಗಿ ತುತ್ತಾಗಬಹುದಾದ ಮಹಿಳೆಯರು ಮತ್ತು ಮಕ್ಕಳು ವಾಣಿಜ್ಯ ಲೈಂಗಿಕ ದುರುಪಯೋಗಕ್ಕೆ ಒಳಪಟ್ಟಿರುವ ಮಹಿಳೆಯರು ಮತ್ತು ಮಕ್ಕಳಿಗೆ 'ಟಾರ್ಗೆಟ್ ಗುಂಪು' ಎನ್ನಲಾಗುವುದು.

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯವು ಮಹಿಳೆಯರ ಮತ್ತು ಮಕ್ಕಳ ಸಾಗಾಣೆಕೆ ತಡೆಗಟ್ಟಲು ಹಾಗೂ ಸಾಗಾಣಿಕೆಗೆ ಹಾಗೂ ವಾಣಿಜ್ಯ ಲೈಂಗಿಕ ದುರುಪಯೋಗಕ್ಕೆ ಒಳಪಟ್ಟವರನ್ನು ರಕ್ಷಿಸಲು, ಇವರಿಗೆ ಪುರ್ನವಸತಿ ಕಲ್ಪಿಸಲು ಮತ್ತು ಕುಟುಂಬದವರೊಂದಿಗೆ ಪುನರ್ ವಿಲೀನಗೊಳಿಸಲು ಉಜ್ವಲ ಎಂಬ ಸಮಗ್ರ ಯೋಜನೆಯನ್ನು ರೂಪಿಸಿರುತ್ತದೆ.


♣ ಯೋಜನೆಯ ಉದ್ದೇಶಗಳು (Main Objectives of the UJWAL YOJANA):-

1. ಸಮಾಜವನ್ನು ಸಜ್ಜುಗೊಳಿಸಿ, ಸ್ಥಳೀಯ ಸಮುದಾಯವನ್ನು ತೊಡಗಿಸಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು, ಹಮ್ಮಿಕೊಂಡು, ಸಾರ್ವಜನಿಕ ಸಭೆಗಳನ್ನು ನಡೆಸಿ, ಕಾರ್ಯಗಾರ/ವಿಚಾರ ಗೋಷ್ಠಿಗಳ ಮೂಲಕ ಹಾಗೂ ನವೀನ ಚಟುವಟಿಕೆಗಳ ಮೂಲಕ ಮಹಿಳೆಯರ ಮತ್ತು ಮಕ್ಕಳು ವಾಣಿಜ್ಯ ಲೈಂಗಿಕ ದುರುಪಯೋಗಕ್ಕಾಗಿ ಸಾಗಾಣಿಕೆಯಾಗುವುದನ್ನು ತಡೆಯಲು ಕ್ರಮಕೈಗೊಳ್ಳುವುದು.

2. ಸಾಗಾಣಿಕೆಗೆ ಒಳಗಾದವರನ್ನು ಶೋಷಣೆ ಸ್ಥಳದಿಂದ ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಇಡಲು ಸಹಾಯ ಮಾಡುವುದು.

3. ಸಾಗಾಣಿಕೆಗೆ ಒಳಗಾದವರಿಗೆ ಮೂಲಭೂತ ಸೌಲಭ್ಯ, ಆಶ್ರಯ, ಆಹಾರ, ಬಟ್ಟೆ, ಸಮಾಲೋಚನೆ ಒಳಗೊಂಡಂತೆ, ವೈದ್ಯಕೀಯ ಸೌಲಭ್ಯ, ಕಾನೂನಿನ ನೆರವುಮತ್ತು ಮಾರ್ಗದರ್ಶನ ಹಾಗೂ ವೃತ್ತಿ ತರಬೇತಿ ಸೇರಿದಂತೆ ತಕ್ಷಣ ಮತ್ತು ದೀರ್ಘಕಾಲಿಕ ಪುರ್ನವಸತಿ ಸೇವೆಯನ್ನು ಒದಗಿಸುವುದು.

4. ಸಾಗಾಣಿಕೆಗೆ ಒಳಗಾದವರನ್ನು ಕುಟುಂಬದೊಂದಿಗೆ ಮತ್ತು ಸಮಾಜದಲ್ಲಿವಿಲೀನಗೊಳಿಸಲು ಸಹಾಯ ಮಾಡುವುದು.

5. ಗಡಿಪ್ರದೇಶವನ್ನು ದಾಟಿ ಬಂದಂತಹ ಸಾಗಾಣಿಕೆಗೆ ಒಳಗಾದವರನ್ನು ತನ್ನ ಮೂಲ ರಾಷ್ಟ್ರಕ್ಕೆ ಕಳುಹಿಸಿಕೊಡಲು ಸಹಾಯ ಮಾಡುವುದು.


♣ ಅನುಷ್ಠಾನಗೊಳಿಸುವ ಏಜೆನ್ಸಿ (implementing Agency):-
ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ/ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಅಭಿವೃದ್ಧಿ ನಿಗಮ, ಸ್ಥಳೀಯ ನಗರ ಸಂಸ್ಥೆಗಳು, ಪ್ರಖ್ಯಾತ ಸಾರ್ವಜನಿಕ ಅಥವಾ ಖಾಸಗಿ ಟ್ರಸ್ಟ್ ಅಥವಾ ಸ್ವಯಂ ಸೇವಾ ಸಂಸ್ಥೆಗಳು, ಸಾಗಾಣಿಕೆ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕ ರಕ್ಷಣೆ, ಪಾಲನೆ ಮತ್ತು ಪೋಷಣೆಯ ಅಗತ್ಯವಿರುವ ಮಹಿಳೆಯರ ಮತ್ತು ಮಕ್ಕಳು ಹಾಗೂ ಕಾನೂನಿನೊಡನೆ ಸಂಘರ್ಷಣೆಗೊಳಪಟ್ಟ ಮಕ್ಕಳನ್ನು ನಿರ್ವಹಿಸುವ ಅನುಭವ ಹೊಂದಿರಬೇಕು,

No comments:

Post a Comment