"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 13 January 2015

☀ ಮುಖ್ಯವಾಗಿ ಐಎಎಸ್ (IAS) ಮತ್ತು ಕೆಎಎಸ್ (KAS) ನಂಥ (ಪೂರ್ವಭಾವಿ/ ಮುಖ್ಯ ಪರೀಕ್ಷೆ) ಗಳಿಗೆ ಸಿದ್ಧತೆ ನಡೆಯುತ್ತಿರುವ ಅಭ್ಯರ್ಥಿಗಳು ಹಾಗೂ SDA, FDA, PDO, PSI, SUB- REGISTRAR ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಬೇಕಾದ ಪುಸ್ತಕಗಳು :

☀ ಮುಖ್ಯವಾಗಿ ಐಎಎಸ್ (IAS) ಮತ್ತು ಕೆಎಎಸ್ (KAS) ನಂಥ (ಪೂರ್ವಭಾವಿ/ ಮುಖ್ಯ ಪರೀಕ್ಷೆ) ಗಳಿಗೆ ಸಿದ್ಧತೆ ನಡೆಯುತ್ತಿರುವ ಅಭ್ಯರ್ಥಿಗಳು ಹಾಗೂ SDA, FDA, PDO, PSI, SUB- REGISTRAR ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಬೇಕಾದ ಪುಸ್ತಕಗಳು :


★ ಐಎಎಸ್ (IAS) ಮತ್ತು ಕೆಎಎಸ್ (KAS) ನಂಥ (ಪೂರ್ವಭಾವಿ/ ಮುಖ್ಯ ಪರೀಕ್ಷೆ) ಕುರಿತು ಸಂಕ್ಷಿಪ್ತ ಚಿತ್ರಣ:


★ ಪರೀಕ್ಷಾ ವಿಧಾನ

♠ ಪೂರ್ವಭಾವಿ ಪರೀಕ್ಷೆ:
ಅರ್ಜಿ ಸಲ್ಲಿಸಿದ ಎಲ್ಲ ಅರ್ಹ ಅಭ್ಯರ್ಥಿಗಳಿಗೆ ಪೂರ್ವಭಾವಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ.

ಪೂರ್ವಭಾವಿ ಪರೀಕ್ಷೆಯು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಎರಡು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಇವೆರಡಕ್ಕೂ ತಲಾ 200 ಅಂಕಗಳನ್ನು ನಿಗದಿಪಡಿಸಲಾಗಿದೆ. ಈ ಪತ್ರಿಕೆಗಳು ಎಲ್ಲರಿಗೂ ಕಡ್ಡಾಯ. ಪ್ರತಿಯೊಂದು ಪ್ರಶ್ನೆಪತ್ರಿಕೆ ತಲಾ ಎರಡು ಅಂಕಗಳ 100 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

ಸಾವರ್ಜನಿಕ ಆಡಳಿತ, ಕಲೆ, ಸಾಹಿತ್ಯ, ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂವಿಧಾನ, ಪ್ರಚಲಿತ ವಿದ್ಯಮಾನ, ಎಂಜಿನಿಯರಿಂಗ್, ವೈದ್ಯಕೀಯ, ಸಾಮಾನ್ಯ ಜ್ಞಾನ, ಬೌದ್ಧಿಕ ಸಾಮರ್ಥ್ಯ, ಪರಿಸರ ಇತ್ಯಾದಿ ವಿಷಯಗಳು ಪಠ್ಯಕ್ರಮದಲ್ಲಿ ಸೇರಿವೆ. ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯಪರೀಕ್ಷೆಗೆ 1:20ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಉದಾಹರಣೆಗೆ ಒಂದು ಹುದ್ದೆ ಇದ್ದರೆ 20 ಮಂದಿ ಮುಖ್ಯಪರೀಕ್ಷೆ ಬರೆಯಲು ಅರ್ಹರು.

♠ ಮುಖ್ಯಪರೀಕ್ಷೆ:
ಎರಡನೇ ಹಂತದಲ್ಲಿ ನಡೆಯುವ ಮುಖ್ಯಪರೀಕ್ಷೆ 1,800 ಅಂಕಗಳನ್ನು ಒಳಗೊಂಡಿರುತ್ತದೆ. ಎರಡು ಐಚ್ಛಿಕ ವಿಷಯಗಳು ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ಒಟ್ಟು 6 ಪ್ರಶ್ನೆಪತ್ರಿಕೆಗಳನ್ನು ಮುಖ್ಯಪರೀಕ್ಷೆ ಒಳಗೊಂಡಿರುತ್ತದೆ. ಆಯೋಗ ಗುರುತಿಸಿರುವ 30 ಐಚ್ಛಿಕ ವಿಷಯಗಳ ಪೈಕಿ ಯಾವುದಾದರೂ ಎರಡು ವಿಷಯಗಳನ್ನು ಅಭ್ಯರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕು. ಪ್ರತಿ ವಿಷಯದಲ್ಲಿ ತಲಾ 300 ಅಂಕಗಳ ಎರಡು ಪ್ರಶ್ನೆಪತ್ರಿಕೆಗಳು ಇರುತ್ತವೆ. ಸಾಮಾನ್ಯ ಜ್ಞಾನ ವಿಷಯದಲ್ಲೂ ತಲಾ 300 ಅಂಕಗಳ ಎರಡು ಪ್ರಶ್ನೆಪತ್ರಿಕೆಗಳು ಇರುತ್ತವೆ.

ಸಾಮಾನ್ಯ ಕನ್ನಡ ಮತ್ತು ಸಾಮಾನ್ಯ ಇಂಗ್ಲಿಷ್ ವಿಷಯದ ಪ್ರಶ್ನೆ ಪತ್ರಿಕೆಗಳು ಮುಖ್ಯಪರೀಕ್ಷೆಯಲ್ಲಿ ಇರುತ್ತವೆ. ಆದರೆ ಈ ವಿಷಯಗಳಲ್ಲಿ  ಕೇವಲ ತಲಾ 35 ಅಂಕಗಳನ್ನು ಗಳಿಸಿದರೆ ಸಾಕು. ಇದು ಕೇವಲ ಅರ್ಹತಾ ಪರೀಕ್ಷೆಯಾಗಿದ್ದು, ಈ ಅಂಕಗಳನ್ನು ಫಲಿತಾಂಶ ನಿರ್ಧರಿಸಲು ಪರಿಗಣಿಸುವುದಿಲ್ಲ. ಆದರೆ ಕನ್ನಡ ಮತ್ತು ಇಂಗ್ಲಿಷ್ ವಿಷಯದಲ್ಲಿ ಪಾಸಾದರೆ ಮಾತ್ರ ಉಳಿದ ವಿಷಯಗಳ ಪ್ರಶ್ನೆಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ.


♠ ಇತಿಹಾಸ ಪುಸ್ತಕಗಳು:

1.ಭಾರತದ ಸಮಗ್ರ ಇತಿಹಾಸ- ಟಿ. ಜಿ. ಚಂದ್ರಶೇಖರಪ್ಪ
2. ಭಾರತದ ಸಮಗ್ರ ಇತಿಹಾಸ- ಕೆ. ಸದಾಶಿವ
3.ಆಧುನಿಕ ಭಾರತ- ಬಿಪಿನ್ ಚಂದ್ರ.
4.ಸ್ವಾತಂತ್ರ್ಯದ ಹೋರಾಟ- ಬಿಪಿನ್ ಚಂದ್ರ
5.ಕರ್ನಾಟಕದ ಸಂಕ್ಷಿಪ್ತ ಚರಿತ್ರೆ - ಸೂರ್ಯನಾಥ ಕಾಮತ್
6. ಕರ್ನಾಟಕದ ಸಮಗ್ರ ಇತಿಹಾಸ - ಫಾಲಾಕ್ಷ
7.ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು-ಎನ್.ಪಿ.ಶಂಕರನಾರಾಯಣರಾವ್


♠ ಭಾರತದ ಸಂವಿಧಾನ ಪುಸ್ತಕಗಳು:

1. ಭಾರತದ ಸಂವಿಧಾನ ಮತ್ತು ರಾಜಕೀಯ- ಹೆಚ್.ಎಮ್.ರಾಜಶೇಖರ
2. ಭಾರತದ ಸಂವಿಧಾನ ಮತ್ತು ರಾಜಕೀಯ- ಪಿ.ಎಸ್. ಗಂಗಾಧರ್ (ಸ್ಪರ್ಧಾಚೈತ್ರ)
3. ಭಾರತದ ಸಂವಿಧಾನ- ಮೇರುನಂದನ್


♠ ಅರ್ಥಶಾಸ್ತ್ರ ಪುಸ್ತಕಗಳು:

1. ಭಾರತದ ಆರ್ಥಿಕ ವ್ಯವಸ್ಥೆ – ಹೆಚ್ಆರ್ಕೆ
2. ಕರ್ನಾಟಕದ ಆರ್ಥಿಕತೆ – ನೇ.ತಿ.ಸೋಮಶೇಖರ್ (ಸ್ಪರ್ಧಾಚೈತ್ರ)
3. ಸಾಮಾನ್ಯ ಅರ್ಥಶಾಸ್ತ್ರ— ಶ್ರೀಮತಿ H.T.ರೂಪಾಶ್ರೀ ಲಕ್ಷ್ಮಣ್ ರೆಡ್ಡಿ (ಸ್ಪರ್ಧಾಚೈತ್ರ)


♠ ಭೂಗೋಳಶಾಸ್ತ್ರ ಪುಸ್ತಕಗಳು:

1. ಭಾರತದ ಭೂಗೋಳಶಾಸ್ತ್ರ - ರಂಗನಾಥ್
2. ಪ್ರಪಂಚದ ಭೂಗೋಳಶಾಸ್ತ್ರ - ರಂಗನಾಥ್
3. ಕರ್ನಾಟಕದ ಭೂಗೋಳಶಾಸ್ತ್ರ – ರಂಗನಾಥ್ / ಪಿ.ಮಲ್ಲಪ್ಪ
4. ಭಾರತದ ಆರ್ಥಿಕ ಮತ್ತು ಪ್ರಾಕೃತಿಕ ಭೂಗೋಳಶಾಸ್ತ್ರ - ರಂಗನಾಥ್


♠ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಪರಿಸರ ವಿಜ್ಞಾನ ಪುಸ್ತಕಗಳು:

1. 8, 9 ಮತ್ತು 10 ನೇ ತರಗತಿಯ ವಿಜ್ಞಾನ ಪುಸ್ತಕಗಳು
2. ಪರಿಸರ ವಿಜ್ಞಾನ - ರಂಗನಾಥ್ / ಕೆ.ಭೈರಪ್ಪ
3. ವಿಜ್ಞಾನ ಮತ್ತು ತಂತ್ರಜ್ಞಾನ – ಹರಿಪ್ರಸಾದ್ (ಸ್ಪರ್ಧಾಚೈತ್ರ)
4. ನವಕರ್ನಾಟಕದ ಪ್ರಕಾಶನದ ವಿಜ್ಞಾನ ಪುಸ್ತಕಗಳು


♠ ಪ್ರಚಲಿತ ಘಟನೆಗಳಿಗೆ ಸಂಬಂಧಿತ ಪುಸ್ತಕಗಳು:

1. MANORAMA YEAR BOOK
2. ವಾಸನ್ಸ್ ಈಯರ್ ಬುಕ್
3. ಮಾಸಪತ್ರಿಕೆಗಳು - ಸ್ಪರ್ಧಾಚೈತ್ರ, ಬುತ್ತಿ, ಜನಪದ, ಯೋಜನಾ, ಕರ್ನಾಟಕ ವಿಕಾಸ
4. ದಿನಪತ್ರಿಕೆಗಳು - ಪ್ರಜಾವಾಣಿ, HINDU


♠ ಯೋಜನೆಗಳು ಮತ್ತು ಇತರೆ ಕೈಪಿಡಿಗಳು:

1. INDIA -2014-15
2. ECONOMIC SURVEY OF INDIA : 2014-15
3. ಕರ್ನಾಟಕ ಆರ್ಥಿಕ ಸಮೀಕ್ಷೆ : 2014-15
4. ಕರ್ನಾಟಕ ಕೈಪಿಡಿ
5. ಸಾಹಿತ್ಯ ಕರ್ನಾಟಕ
6. ಚಾರಿತ್ರಿಕ ಕರ್ನಾಟಕ
7. ಅಭಿವೃದ್ಧಿ ಪಥ
8. ಸಾಂಸ್ಕೃತಿಕ ಪಥ
9. ಗ್ರಾಮೀಣಾಭಿವೃದ್ಧಿ – ಕೆ.ಭೈರಪ್ಪ
10. ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಕಟಣೆಗಳು


♠ ಸಾಮಾನ್ಯ ಮನೋಸಾಮರ್ಥ್ಯ ಸಂಬಂಧಿತ ಪುಸ್ತಕಗಳು:

• ಮಾನಸಿಕ ಸಾಮರ್ಥ್ಯ - ಗುರುರಾಜ ಬುಲಬುಲೆ
• ಮನೋಸಾಮರ್ಥ್ಯ - ಸ್ಪರ್ಧಾಚೈತ್ರದ ಪ್ರಕಟಣ

No comments:

Post a Comment