"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday, 11 January 2015

☀ ಮೇ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀ (Important Current Affairs of May 2014) ★ಮೇ 2014 (May 2014)

☀ ಮೇ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀
(Important Current Affairs of May 2014)

★ಮೇ 2014
(May 2014)


 ♣ ಮೇ.‌1: ಕೇಂದ್ರ ಸಚಿವ ಸಂಪುಟವು ಮಹತ್ವದ ಪೋಲವರಂ ನೀರಾವರಿ ಯೋಜನೆಗೆ ಒಪ್ಪಿಗೆ ನೀಡಿತು. 16 ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಿಂದ ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ ರಾಜ್ಯದ ಬರಡು ಜಿಲ್ಲೆಗಳಿಗೆ ಅನುಕೂಲವಾಗಲಿದೆ.


♣ ಮೇ. 2: ಭಾರತೀಯ ಮೂಲದ ಮಣೀಶ್‌ ಶಾ ಅಮೆರಿಕದ ಇಲಿನೊಯಿಸ್‌ನ (Illinois) ಫೆಡರಲ್‌ ನ್ಯಾಯಾಧೀಶರಾಗಿ ಆಯ್ಕೆಯಾದರು. ಇವರ ಪರವಾಗಿ ಅಮೆರಿಕದ ಸೆನೆಟ್‌ನಲ್ಲಿ 95 ಮತಗಳು ಬಿದ್ದವು.


♣ ಮೇ. 4: ಭಾರತ ಸರ್ಕಾರದ ಬಯೋಟೆಕ್ನಾಲಜಿ ವಿಭಾಗದ ಕಾರ್ಯದರ್ಶಿ ಕೃಷ್ಣಸ್ವಾಮಿ ವಿಜಯರಾಘವನ್‌ ಅಮೆರಿಕ ವಿಜ್ಞಾನ ಆಕಾಡೆಮಿಯ ವಿದೇಶಾಂಗ ಸಹಾಯಕರಾಗಿ ನೇಮಕಗೊಂಡರು.


 ♣ ಮೇ. 3: ಭಾರತದ ಸಾನಿಯಾ ಮಿರ್ಜಾ ಮತ್ತು ಕಾರಾ ಬ್ಲಾಕ್‌ ಅವರು ಡಬ್ಲ್ಯೂಟಿಎ ಪೊರ್ಚ್‌ಗಲ್‌ ಓಪನ್‌ ಟೆನಿಸ್‌ ಟೂರ್ನಿ (2014)ಯ ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ಪ್ರಶಸ್ತಿ ಗೆದ್ದರು. ಇವರು ರಷ್ಯಾದ ಎವಾ ಹರ್ಡಿನೋವಾ ಹಾಗೂ ವಲೇರಿಯಾ ಅವರನ್ನು ಸೋಲಿಸಿದರು.


 ♣ ಮೇ. 3: ಅಮೆರಿಕಾದ ಹೆಸರಾಂತ ಅರ್ಥಶಾಸ್ತ್ರಜ್ಞ ಹಾಗೂ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಗ್ರೇ ಬೇಕರ್‌ (93) ನಿಧನರಾದರು. ಇವರು ಮಾನವ ಸ್ವಭಾವ ಮತ್ತು ಅಪರಾಧವನ್ನು ಅರ್ಥಶಾಸ್ತ್ರದ ಹಿನ್ನೆಲೆಯಲ್ಲಿ ವಿಶ್ಲೇಷಣೆ ಮಾಡಿದ್ದರು.


 ♣ ಮೇ. 6: ಇಂಗ್ಲೆಂಡ್‌ನಲ್ಲಿ ನಡೆದ 2014ನೇ ಸಾಲಿನ ವಿಶ್ವ ಸ್ನೋಕರ್‌ ಚಾಂಪಿಯನ್‌ಶಿಪ್‌ನಲ್ಲಿ ಮಾರ್ಕ್‌ ಸೆಲ್ಬಿ ಟ್ರೋಫಿ ಗೆದ್ದರು. ಇವರು ಮೊದಲ ಬಾರಿ ಗೆದ್ದ ಟ್ರೋಫಿ ಇದು. 2007ರಲ್ಲಿ ಈ ಟ್ರೋಫಿ ಗೆಲ್ಲುವಲ್ಲಿ ಸೆಲ್ಬಿ ವಿಫಲರಾಗಿದ್ದರು.


 ♣ ಮೇ. 6: ಹತ್ತು ವರ್ಷಕ್ಕೆ ಮೇಲ್ಪಟ್ಟ ಅಪ್ರಾಪ್ತರು ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಬಹುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಪ್ರಕಟಿಸಿತು. ಇವರು ಎಟಿಎಂ, ಚೆಕ್‌ ಪುಸ್ತಕಗಳನ್ನು ನಿರ್ವಹಣೆ ಮಾಡಬಹುದು ಎಂದು ಆರ್‌ಬಿಐ ತಿಳಿಸಿತು.


 ♣ ಮೇ. 7: ಸುಪ್ರೀಂ ಕೋರ್ಟ್‌ ‘ಜಲ್ಲಿಕಟ್ಟು’ ಮತ್ತು ಎತ್ತಿನಗಾಡಿ ಸ್ಪರ್ಧೆಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿತು. ಪ್ರಾಣಿ ದಯಾ ಸಂಘದವರು ಈ ಸ್ಪರ್ಧೆಗಳನ್ನು ನಿಷೇಧಿಸುವಂತೆ ಅರ್ಜಿ ಸಲ್ಲಿಸಿದ್ದರು. ಕೆ.ಎಸ್‌. ರಾಧಕೃಷ್ಣ ಮತ್ತು ಪಿನಾಕಿ ಚಂದ್ರ ಅವರಿದ್ದ ನ್ಯಾಯಪೀಠ ಜಲ್ಲಿಕಟ್ಟು ನಿಷೇಧಿಸುವಂತೆ ಸೂಚಿಸಿತು.


 ♣ ಮೇ 9: ಅಮೆರಿಕ ಸಿನಿಮಾ ಉತ್ಸವದಲ್ಲಿ ಭಾರತದ ‘ಸೈಲೆಂಟ್‌ ಕ್ರೀಮ್‌’ ಸಾಕ್ಷ್ಯಚಿತ್ರ ವಿವಿಧ ವಿಭಾಗಗಳಲ್ಲಿ ಮೂರು ಪ್ರಶಸ್ತಿಗಳನ್ನು ಪಡೆಯಿತು. ಪ್ರಿಯಾ ಸೋಮಯ್ಯ ಈ ಚಿತ್ರದ ನಿರ್ದೇಶಕರು. ಇದು ಭಾರತದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಮೇಲೆ ಬೆಳಕು ಚೆಲ್ಲುತ್ತದೆ. ಇಂತಹ ಪ್ರಕರಣಗಳಲ್ಲಿ ಹಣ ಮತ್ತು ರಾಜಕೀಯ ಹೇಗೆ ಕೆಲಸ ಮಾಡುತ್ತದೆ ಎಂಬುದೇ ಇದರ ಕಥಾ ಹಂದರ.


 ♣ ಮೇ. 9: ಫ್ರಾನ್ಸ್‌ ದೇಶದ ಖಾಸಗಿ ವಿಮಾನ ನಿರ್ಮಾಣ ಸಂಸ್ಥೆಯೊಂದು ಬ್ಯಾಟರಿ ಚಾಲಿತ ವಿಮಾನವನ್ನು ತಯಾರಿಸಿರುವುದಾಗಿ ಪ್ರಕಟಿಸಿತು. ಇದು ಲಿಥೇನ್‌–ಅಯಾನ್‌– ಪಾಲಿಮಾರ್‌ ಬ್ಯಾಟರಿಗಳಿಂದ ಚಾಲನೆಯಾಗಲಿದೆ. ಇದಕ್ಕೆ ‘ಇ–ಪ್ಯಾನ್‌’ ಎಂದು ಹೆಸರಿಡಲಾಗಿದೆ.


 ♣ ಮೇ. 13: ಇಸ್ರೇಲ್‌ ದೇಶದ ಮಾಜಿ ಪ್ರಧಾನಿ ಈದ್‌ ಆಲ್‌ಮಾರ್ಟ್‌ ಅವರಿಗೆ ತೆಲ್‌ ಅವಿವ್‌ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿತು. ಆಲ್‌ಮಾರ್ಟ್‌ ಅವರು ಹೋಲಿಲ್ಯಾಂಡ್‌ ಪ್ರಕರಣದಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆಸಿದ್ದರು.


 ♣ ಮೇ. 14: ಇತಿಹಾಸ ತಜ್ಞ ಬ್ಯಾರಿ ಕ್ಲಿಫ್‌ಪೋರ್ಡ್‌ ನೇತೃತ್ವದ ತಂಡ 500 ವರ್ಷಗಳ ಹಿಂದಿನ ಕ್ಲಿಸ್ಟಫರ್‌ ಕೊಲಂಬಸ್‌ ಅವರ ‘ಸಂತಾ ಮಾರಿಯಾ’ ಹಡಗಿನ ಅವಶೇಷಗಳನ್ನು ಕೆರಿಬಿಯನ್‌ ಸಾಗರದ ತಟದಲ್ಲಿ ಪತ್ತೆ ಮಾಡಿತು. ಹೈಟಿ ದೇಶದ ಉತ್ತರ ಕರಾವಳಿ ತೀರದಲ್ಲಿ ಹಡಗಿನ ಅವಶೇಷಗಳು ದೊರೆತವು.


 ♣ ಮೇ.14: ಕೇಂದ್ರ ಸರ್ಕಾರ ಎಲ್‌ಟಿಟಿಈ (ಲಿಬರೇಶನ್‌ ಟೈಗರ್ಸ್‌ ಅಫ್‌ ತಮಿಳ್‌ ಈಳಂ) ಸಂಘಟನೆ ಮೇಲೆ ಮತ್ತೆ 5 ವರ್ಷಗಳವರೆಗೆ ನಿಷೇಧವನ್ನು ಮುಂದುವರೆಸಿತು. 1967ರ ಅಪರಾಧ ಕಾಯ್ದೆ ಅಡಿಯಲ್ಲಿ (ಕಾನೂನು ಬಾಹಿರ) ನಿಷೇಧಿಸಿತು.


 ♣ ಮೇ. 15: ಕೇಂದ್ರೀಯ ಜಲ ಮಂಡಳಿಯ ಅಧ್ಯಕ್ಷರನ್ನಾಗಿ ಎ.ಬಿ. ಪಾಂಡ್ಯ ಅವರನ್ನು ಕೇಂದ್ರ ಸರ್ಕಾರ ನೇಮಕಮಾಡಿ ಆದೇಶ ಹೊರಡಿಸಿತು.


 ♣ ಮೇ. 15: ದೇಶದಲ್ಲಿ ಕಾಗದದ ನೋಟಿನ ಬದಲಾಗಿ ಪ್ಲಾಸ್ಟಿಕ್‌ ನೋಟುಗಳನ್ನು ಬರುವ 2015ನೇ ವರ್ಷದಲ್ಲಿ ಪರಿಚಯಿಸುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗೌರ್ನರ್‌ ರಘುರಾಂ ರಾಜನ್‌ ಪ್ರಕಟಿಸಿದರು. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಪ್ಲಾಸ್ಟಿಕ್‌ ನೋಟಿನ ಬಳಕೆಯಿಂದ ನಕಲಿ ನೋಟುಗಳ ಹಾವಳಿ ತಪ್ಪಲಿದೆ ಎಂಬುದು ಹಣಕಾಸು ತಜ್ಞರ ಅಭಿಪ್ರಾಯ.


 ♣ ಮೇ.17: ಲೋಕಸಭೆ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತಿಶ್‌ಕುಮಾರ್‌ ರಾಜೀನಾಮೆ ಸಲ್ಲಿಸಿದರು. 40 ಸ್ಥಾನಗಳ ಪೈಕಿ ನಿತಿಶ್‌ ಕುಮಾರ್‌ ನೇತೃತ್ವದ ಸಂಯುಕ್ತ ಜನತಾದಳ ಪಕ್ಷ ಕೇವಲ ಎರಡು ಸ್ಥಾನಗಳನ್ನು ಪಡೆಯಿತು.


 ♣ ಮೇ.17: ಭಾರತೀಯ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್‌ ಸಿಂಗ್‌ ಅಹ್ಲುವಾಲಿಯ ರಾಜೀನಾಮೆ ನೀಡಿದರು. ಯೋಜನಾ ಆಯೋಗದಲ್ಲಿ 8 ಜನ ಸದಸ್ಯರು ಇರುತ್ತಾರೆ. ಪ್ರಧಾನ ಮಂತ್ರಿ ಯೋಜನಾ ಆಯೋಗದ ಅಧ್ಯಕ್ಷರಾಗಿರುತ್ತಾರೆ.


 ♣ ಮೇ.18: ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ನಬಮ್‌ ತುಕಿ ಇಟಾನಗರದಲ್ಲಿ ಅಧಿಕಾರ ಸ್ವೀಕರಿಸಿದರು. ಜೆ.ಗ್ಯಾಮ್ಲಿನ್‌ ಅವರು ರಾಜೀನಾಮೆ ನೀಡಿದ್ದರಿಂದ ಮುಖ್ಯಮಂತ್ರಿಯಾದರು. ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರಾದ ತುಕಿ ಅವರು ಕೃಷಿ, ನೀರಾವರಿ ಮತ್ತು ಆಹಾರ ಸಚಿವರಾಗಿ ಸೇವೆ ಸಲ್ಲಿಸಿದ್ದರು.


 ♣ ಮೇ.18: ಹಿರಿಯ ಪರಮಾಣು ವಿಜ್ಞಾನಿ ಎನ್‌.ಶ್ರೀನಿವಾಸನ್‌ ನಿಧನರಾದರು. ಇವರು ಪರಮಾಣು ವಿಭಾಗದ ವಿವಿಧ ಅಕಾಡೆಮಿ ಮತ್ತು ಸಮಿತಿಗಳಲ್ಲಿ ಕೆಲಸ ಮಾಡಿದ್ದರು. ಇವರಿಗೆ ಭಾರತ ಸರ್ಕಾರ ಪದ್ಮಭೂಷಣ(2000) ಪುರಸ್ಕಾರ ನೀಡಿತ್ತು.


 ♣ ಮೇ. 22: ಗುಜರಾತ್‌ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಆನಂದಿ ಬೆನ್‌ ಪಟೇಲ್‌ ಅಧಿಕಾರ ಸ್ವೀಕರಿಸಿದರು.

—ಈ ಹಿಂದೆ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದರು.


 ♣ ಮೇ.25: ಆಂಧ್ರಪ್ರದೇಶದ 13 ವರ್ಷದ ಬಾಲಕಿ ಮಲವತ್‌ ಪೂರ್ಣ ಮೌಂಟ್‌ ಎವರೆಸ್ಟ್‌ ಶಿಖರ ಹತ್ತಿದ್ದ ಅತ್ಯಂತ ಕಿರಿಯ ಪರ್ವತಾರೋಹಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


 ♣ ಮೇ.26: ಭಾರತದ 15ನೇ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದರು.
—ಇವರೊಂದಿಗೆ 23 ಸಚಿವರು ಅಧಿಕಾರ ವಹಿಸಿಕೊಂಡರು.
—ಈ ಸಮಾರಂಭಕ್ಕೆ ಸಾರ್ಕ್‌ ರಾಷ್ಟ್ರಗಳ ಮುಖ್ಯಸ್ಥರು ಆಗಮಿಸಿದ್ದರು.


 ♣ ಮೇ.27: ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ 35ನೇ ರಾಷ್ಟ್ರೀಯ ಕ್ರೀಡಾಕೂಟದ ರಾಯಭಾರಿಯಾಗಿ ನೇಮಕಗೊಂಡರು.
—ಕೇರಳದಲ್ಲಿ  2015ರ ಜನವರಿ ಮತ್ತು ಫೆಬ್ರುವರಿಯಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆಯಲಿದೆ.


 ♣ ಮೇ. 28: ಮುಕುಲ್ ರೊಹಟಗಿ ಭಾರತದ 14ನೇ ಅಟಾರ್ನಿ ಜನರಲ್‌ ಆಗಿ ನೇಮಕಗೊಂಡರು.
—ಈ ಸ್ಥಾನದಲ್ಲಿ ಗುಲಾಂ ವಾಹನ್ವತಿ ಅವರಿದ್ದರು.

—ರೊಹಟಗಿ ಗುಜರಾತ್‌ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಕಾರ್ಯನಿವರ್ಹಿಸಿದ್ದರು.


 ♣ ಮೇ. 29: ಹಿಂದಿಯ ಹೆಸರಾಂತ ಸಾಹಿತಿ ವಿಶ್ವನಾಥ್‌ ತ್ರಿಪಾಠಿ ಅವರು ಪ್ರತಿಷ್ಠಿತ ‘ವ್ಯಾಸ್‌ ಸಮ್ಮಾನ್‌’ ಪುರಸ್ಕಾರವನ್ನು ಪಡೆದರು.

—ಈ ಪ್ರಶಸ್ತಿ 2.5 ಲಕ್ಷ ರೂಪಾಯಿ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

(ಕೃಪೆ: ಪ್ರಜಾವಾಣಿ)

No comments:

Post a Comment