"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday, 19 January 2015

🌻ದಕ್ಷಿಣ ಏಶಿಯಾ ಪ್ರಾದೇಶಿಕ ಸಹಕಾರ ಒಕ್ಕೂಟ (ಸಾರ್ಕ್) 🌻 (SAARC—South Asian Association for Regional Co-operation)

🌻ದಕ್ಷಿಣ ಏಶಿಯಾ ಪ್ರಾದೇಶಿಕ ಸಹಕಾರ ಒಕ್ಕೂಟ (ಸಾರ್ಕ್) 🌻
(SAARC—South Asian Association for Regional Co-operation)


🌻 ದಕ್ಷಿಣ ಏಶಿಯಾ ಪ್ರಾದೇಶಿಕ ಸಹಕಾರ ಒಕ್ಕೂಟ (ಸಾರ್ಕ್) ಎಂದರೇನು?

⏩ಸಾರ್ಕ್ (SAARC—South Asian Association for Regional Co-operation) ದಕ್ಷಿಣ ಏಶಿಯಾ ರಾಷ್ಟ್ರಗಳ ಒಂದು ಸಂಘಟನೆಯಾಗಿದೆ.

1970ರ ದಶಕದಲ್ಲಿ ಬಾಂಗ್ಲಾ ಅಧ್ಯಕ್ಷ ಶ್ರೀ ಜಿಯಾ-ಉರ್-ರೆಹಮಾನ್ ಅವರು ದಕ್ಷಿಣ ಏಶಿಯಾ ದೇಶಗಳ ವಾಣಿಜ್ಯ ವಲಯ ಸ್ಥಾಪನೆ ಬಗ್ಗೆ ಪ್ರಸ್ತಾಪಿಸಿದ್ದರು. 1981ರಲ್ಲಿ ಕೊಲಂಬೊದಲ್ಲಿ ನಡೆದ ಸಭೆಯಲ್ಲಿ ಬಾಂಗ್ಲಾದೇಶದ ಈ ಪ್ರಸ್ತಾಪವನ್ನು ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ಪುರಸ್ಕರಿಸಿದವು.

1983 ಆಗಸ್ಟ್‌ನಲ್ಲಿ ನವದೆಹಲಿಯಲ್ಲಿ ನಡೆದ ಶೃಂಗಸಭೆಯಲ್ಲಿ ದಕ್ಷಿಣ ಏಶಿಯಾ ಪ್ರಾದೇಶಿಕ ಸಹಕಾರದ ಬಗ್ಗೆ ಘೋಷಣೆಯನ್ನು ಅಂಗೀಕರಿಸಲಾಯಿತು.

1985 ರ ಡಿಸೆಂಬರ್ ೮ ರಂದು ಏಳು ಸಾರ್ಕ್ ದೇಶಗಳಾದ ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ವರಿಷ್ಠರು ದಕ್ಷಿಣ
ಏಶಿಯಾ ಪ್ರಾದೇಶಿಕ ಸಹಕಾರ ಒಕ್ಕೂಟ ಕುರಿತಾದ ಸನ್ನದಿಗೆ ಸಹಿ ಹಾಕಿದರು.
2007 ರ ಏಪ್ರಿಲ್‌ನಲ್ಲಿ ದೆಹಲಿಯಲ್ಲಿ ನಡೆದ 14ನೇ ಸಾರ್ಕ್ ಶೃಂಗಸಭೆಯಲ್ಲಿ
ಅಫಘಾನಿಸ್ತಾನ್ ಸದಸ್ಯ ದೇಶವಾಗಿ ಸೇರಿಕೊಂಡಿತು.

—ಪ್ರಥಮ ಸಾರ್ಕ್ ಸಮ್ಮೇಳನವು 1985 ಡಿಸೆಂಬರ್ 7 ರಂದು ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆಯಿತು.
— 2011ರಲ್ಲಿ 17ನೇ ಸಾರ್ಕ್ ಸಮ್ಮೇಳನವು ಅಡ್ಡುದ್ವೀಪ (ಮಾಲ್ಡೀವ್ಸ್) ನಲ್ಲಿ ನಡೆಯಿತು. —ಅಧ್ಯಕ್ಷತೆ ಮೊಹಮದ್ ನಸೀದ್ ವಹಿಸಿದರು.
—ಇತ್ತೀಚೆಗೆ 1 ನೇ ಸಾರ್ಕ್ ಸಮ್ಮೇಳನವು ನೇಪಾಳ ದೇಶದ ರಾಜಧಾನಿ ಕಠ್ಮಂಡುವಿನಲ್ಲಿ ನಡೆಯಿತು.

🌻 9 ವೀಕ್ಷಕ ರಾಷ್ಟ್ರಗಳು:
—ಆಸ್ಟ್ರೇಲಿಯಾ
—ಚೀನಾ
—ಯುರೋಪಿಯನ್ ಯೂನಿಯನ್
—ಇರಾನ್
—ಜಪಾನ್
—ಮಾರಿಷಸ್
—ಮಯನ್ಮಾರ್
—ದಕ್ಷಿಣ ಕೊರಿಯಾ
—ಯುನೈಟೆಡ್ ಸ್ಟೇಟ್ಸ್


🌻 ಇದುವರೆಗಿನ ಸಾರ್ಕ್ ಸಮ್ಮೇಳನಗಳು / ಶೃಂಗಸಭೆಗಳು.

🍁 ಪ್ರಥಮ ಸಾರ್ಕ್ ಶೃಂಗಸಭೆ
ದಿನಾಂಕ: 7-8 ಡಿಸೆಂಬರ್ 1985
ನಡೆದ ಸ್ಥಳ: ಬಾಂಗ್ಲಾದೇಶ ಢಾಕಾ
ಅಧ್ಯಕ್ಷತೆ ವಹಿಸಿದವರು: ಅತುರ್ ರಹಮಾನ್ ಖಾನ್

🍁 2 ನೇ ಸಾರ್ಕ್ ಶೃಂಗಸಭೆ
ದಿನಾಂಕ: 16-17 ನವೆಂಬರ್ 1986
ನಡೆದ ಸ್ಥಳ: ಭಾರತದ ಬೆಂಗಳೂರು
ಅಧ್ಯಕ್ಷತೆ ವಹಿಸಿದವರು: ಜಯಂತ್ ಎಂ ಗೌಡ

🍁 3 ನೇ ಸಾರ್ಕ್ ಶೃಂಗಸಭೆ
ದಿನಾಂಕ: 2-4 ನವೆಂಬರ್ 1987
ನಡೆದ ಸ್ಥಳ: ನೇಪಾಳದ ಕಠ್ಮಂಡು
ಅಧ್ಯಕ್ಷತೆ ವಹಿಸಿದವರು: ಮಾರಿಚ್ ಮಾನ್ ಸಿಂಗ್ ಶ್ರೇಷ್ಟಾ
 
🍁 4 ನೇ ಸಾರ್ಕ್ ಶೃಂಗಸಭೆ
ದಿನಾಂಕ: 29-31 ಡಿಸೆಂಬರ್ 1988
ನಡೆದ ಸ್ಥಳ: ಪಾಕಿಸ್ತಾನದ ಇಸ್ಲಾಮಾಬಾದ್
ಅಧ್ಯಕ್ಷತೆ ವಹಿಸಿದವರು: ಬೆನಜೀರ್ ಭುಟ್ಟೋ

🍁 5 ನೇ ಸಾರ್ಕ್ ಶೃಂಗಸಭೆ
ದಿನಾಂಕ: 21-23 ನವೆಂಬರ್ 1990
ನಡೆದ ಸ್ಥಳ: ಮಾಲ್ಡೀವ್ಸ್ ಮಾಲೆ
ಅಧ್ಯಕ್ಷತೆ ವಹಿಸಿದವರು: ಮೌಮೂನ್ ಅಬ್ದುಲ್ ಗಯೂಮ್.

🍁 6 ನೇ ಸಾರ್ಕ್ ಶೃಂಗಸಭೆ
ದಿನಾಂಕ: 21 ಡಿಸೆಂಬರ್ 1991
ನಡೆದ ಸ್ಥಳ: ಶ್ರೀಲಂಕಾದ ಕೊಲಂಬೊ
ಅಧ್ಯಕ್ಷತೆ ವಹಿಸಿದವರು: ರಾಣಾ ಸಿಂಘೆ ಪ್ರೇಮದಾಸ.

🍁 7 ನೇ ಸಾರ್ಕ್ ಶೃಂಗಸಭೆ
ದಿನಾಂಕ: 10-11 ಏಪ್ರಿಲ್ 1993
ನಡೆದ ಸ್ಥಳ: ಬಾಂಗ್ಲಾದೇಶದ ಢಾಕಾ
ಅಧ್ಯಕ್ಷತೆ ವಹಿಸಿದವರು: ಖಲೇದಾ ಜಿಯಾ.

🍁 8 ನೇ ಸಾರ್ಕ್ ಶೃಂಗಸಭೆ
ದಿನಾಂಕ: 2-4 ಮೇ 1995
ನಡೆದ ಸ್ಥಳ: ಭಾರತದ ದಹಲಿ
ಅಧ್ಯಕ್ಷತೆ ವಹಿಸಿದವರು: ಪಿ.ವಿ.ನರಸಿಂಹ ರಾವ್

🍁 9 ನೇ ಸಾರ್ಕ್ ಶೃಂಗಸಭೆ
ದಿನಾಂಕ: 12-14 ಮೇ 1997
ನಡೆದ ಸ್ಥಳ: ಮಾಲ್ಡೀವ್ಸ್ ದ ಮಾಲೆ
ಅಧ್ಯಕ್ಷತೆ ವಹಿಸಿದವರು: ಮೌಮೂನ್ ಅಬ್ದುಲ್ ಗಯೂಮ್.

🍁 10 ನೇ ಸಾರ್ಕ್ ಶೃಂಗಸಭೆ
ದಿನಾಂಕ: 29-31 ಜುಲೈ 1998
ನಡೆದ ಸ್ಥಳ: ಶ್ರೀಲಂಕಾ ಕೊಲಂಬೊ
ಅಧ್ಯಕ್ಷತೆ ವಹಿಸಿದವರು: ಚಂದ್ರಿಕಾ ಕುಮಾರ ತುಂಗಾ

🍁 11 ನೇ ಸಾರ್ಕ್ ಶೃಂಗಸಭೆ
ದಿನಾಂಕ: 4-6 ಜನವರಿ 2002
ನಡೆದ ಸ್ಥಳ: ನೇಪಾಳದ ಕಠ್ಮಂಡು
ಅಧ್ಯಕ್ಷತೆ ವಹಿಸಿದವರು: ಶೇರ್ ಬಹಾದೂರ್ ದೇವೂಬಾ

🍁 12 ನೇ ಸಾರ್ಕ್ ಶೃಂಗಸಭೆ
ದಿನಾಂಕ: 2-6 ಜನವರಿ 2004
ನಡೆದ ಸ್ಥಳ: ಪಾಕಿಸ್ತಾನದ ಇಸ್ಲಾಮಾಬಾದ್
ಅಧ್ಯಕ್ಷತೆ ವಹಿಸಿದವರು: ಜಫ್ರುಲ್ಲಾ ಖಾನ್ ಜಮಾಲಿ

🍁 13 ನೇ ಸಾರ್ಕ್ ಶೃಂಗಸಭೆ
ದಿನಾಂಕ: 12-13 ನವೆಂಬರ್ 2005
ನಡೆದ ಸ್ಥಳ: ಬಾಂಗ್ಲಾದೇಶದ ಢಾಕಾ
ಅಧ್ಯಕ್ಷತೆ ವಹಿಸಿದವರು: ಖಲೇದಾ ಜಿಯಾ

🍁 14 ನೇ ಸಾರ್ಕ್ ಶೃಂಗಸಭೆ
ದಿನಾಂಕ: 3-4 ಏಪ್ರಿಲ್ 2007
ನಡೆದ ಸ್ಥಳ: ಭಾರತದ ದಹಲಿ
ಅಧ್ಯಕ್ಷತೆ ವಹಿಸಿದವರು: ಮನಮೋಹನ್ ಸಿಂಗ್

🍁 15 ನೇ ಸಾರ್ಕ್ ಶೃಂಗಸಭೆ
ದಿನಾಂಕ: 1-3 ಆಗಸ್ಟ್ 2008
ನಡೆದ ಸ್ಥಳ: ಶ್ರೀಲಂಕಾದ ಕೊಲಂಬೊ
ಅಧ್ಯಕ್ಷತೆ ವಹಿಸಿದವರು: ಮಹಿಂದಾ ರಾಜಪಕ್

🍁 16 ನೇ ಸಾರ್ಕ್ ಶೃಂಗಸಭೆ
ದಿನಾಂಕ: 28-29 ಏಪ್ರಿಲ್ 2010
ನಡೆದ ಸ್ಥಳ: ಭೂತಾನ್ ದ ಥಿಂಪೂ
ಅಧ್ಯಕ್ಷತೆ ವಹಿಸಿದವರು: ಜಿಗ್ಮೆ ಥಿನ್ ಲೇ

🍁 17 ನೇ ಸಾರ್ಕ್ ಶೃಂಗಸಭೆ
ದಿನಾಂಕ: 10-11 ನವೆಂಬರ್ 2011
ನಡೆದ ಸ್ಥಳ: ಮಾಲ್ಡೀವ್ಸ್ ದ ಅದ್ದು
ಅಧ್ಯಕ್ಷತೆ ವಹಿಸಿದವರು: ಮೊಹಮ್ಮದ್ ನಶೀದ್

🍁 18 ನೇ ಸಾರ್ಕ್ ಶೃಂಗಸಭೆ
ದಿನಾಂಕ: 26-27 ನವೆಂಬರ್ 2014
ನಡೆದ ಸ್ಥಳ: ನೇಪಾಳದ ಕಠ್ಮಂಡು
ಅಧ್ಯಕ್ಷತೆ ವಹಿಸಿದವರು: ಸುಶೀಲ್ ಕೊಯಿರಾಲ

🍁 19 ನೇ ಸಾರ್ಕ್ ಶೃಂಗಸಭೆ (ನಡೆಯಲಿದೆ)
ದಿನಾಂಕ: 2016
ನಡೆಯುವ ಸ್ಥಳ: ಪಾಕಿಸ್ತಾನದ ಇಸ್ಲಾಮಾಬಾದ್
ಅಧ್ಯಕ್ಷತೆ ವಹಿಸಿದವರು: NIL 

No comments:

Post a Comment