"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday, 19 January 2015

☀‘ನೀತಿ ಆಯೋಗ’ದ ಅಥವಾ ಭಾರತೀಯ ನೀತಿ ನಿರೂಪಣಾ ಸಂಸ್ಥೆ (NITI) ಕುರಿತು ವಿಶ್ಲೇಷಿಸಿ. ಹಾಗೂ ನೀತಿ ನಿರೂಪಣಾ ಸಂಸ್ಥೆಯ ಪ್ರಮುಖ ಕಾರ್ಯಗಳು ಯಾವವು? (Analyze about Policy Statement agency the NITI. What are the main functions of the Policy Statement agency?)

☀‘ನೀತಿ ಆಯೋಗ’ದ ಅಥವಾ ಭಾರತೀಯ ನೀತಿ ನಿರೂಪಣಾ ಸಂಸ್ಥೆ (NITI) ಕುರಿತು ವಿಶ್ಲೇಷಿಸಿ. ಹಾಗೂ ನೀತಿ ನಿರೂಪಣಾ ಸಂಸ್ಥೆಯ ಪ್ರಮುಖ ಕಾರ್ಯಗಳು ಯಾವವು?
(Analyze about Policy Statement agency the NITI. What are the main functions of the Policy Statement agency?)


♠.ಭಾರತೀಯ ನೀತಿ ನಿರೂಪಣಾ ಸಂಸ್ಥೆ (NITI):
—‘ಭಾರತ ಪರಿವರ್ತನಾ ರಾಷ್ಟ್ರೀಯ ಸಂಸ್ಥೆ’
—(ನ್ಯಾಷನಲ್‌ ಇನ್ಸ್‌ಟಿಟ್ಯೂಷನ್‌ ಆಫ್‌ ಟ್ರಾನ್ಸ್‌­ಫಾರ್ಮಿಂಗ್‌ ಇಂಡಿಯಾ – NITI)

ಆರೂವರೆ ದಶಕಗಳ ಹಿಂದೆ ದೇಶದ ಪ್ರಥಮ ಪ್ರಧಾನಿ ಪಂಡಿತ ಜವಾಹರಲಾಲ್‌ ನೆಹರೂ ಕಾಲದಲ್ಲಿ ರಚಿಸಲಾಗಿದ್ದ ಯೋಜನಾ ಆಯೋಗವನ್ನು ರದ್ದುಗೊಳಿಸಿರುವ ಎನ್‌ಡಿಎ ಸರ್ಕಾರವು  ಅದಕ್ಕೆ ಬದಲಾಗಿ ‘ನೀತಿ ಆಯೋಗ’ವನ್ನು ಅಸ್ತಿತ್ವಕ್ಕೆ ತಂದಿದೆ.

ಹೊಸ ವರ್ಷದ ಮೊದಲ ದಿನದಂದು ರಚನೆಗೊಂಡಿರುವ ‘ಭಾರತ ಪರಿವರ್ತನಾ ರಾಷ್ಟ್ರೀಯ ಸಂಸ್ಥೆ’ (ನ್ಯಾಷನಲ್‌ ಇನ್ಸ್‌ಟಿಟ್ಯೂಷನ್‌ ಆಫ್‌ ಟ್ರಾನ್ಸ್‌­ಫಾರ್ಮಿಂಗ್‌ ಇಂಡಿಯಾ – NITI) ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಾತಿನಿಧಿಕ ನೀತಿ ನಿರೂಪಣಾ ಸಂಸ್ಥೆಯಾಗಿ  ಕಾರ್ಯನಿರ್ವಹಿಸಲಿದೆ.

‘ಬಲಾಢ್ಯ ರಾಜ್ಯಗಳಿಂದ ಬಲಾಢ್ಯ ರಾಷ್ಟ್ರ’ ತತ್ವದಡಿ ಒಕ್ಕೂಟ ವ್ಯವಸ್ಥೆಗೆ ಪೂರಕವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ‘ರಾಷ್ಟ್ರೀಯ ಕಾರ್ಯಸೂಚಿ’ ರೂಪಿಸಲು ಈ ‘ನೀತಿ ಆಯೋಗ’ವು ಮಾರ್ಗದರ್ಶನ ಮಾಡಲಿದೆ.

1950 ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಯೋಜನಾ ಆಯೋಗದ ಬದಲಾಗಿ ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರುವುದಾಗಿ ಪ್ರಧಾನಿ ಮೋದಿ ಸ್ವಾತಂತ್ರ್ಯ ದಿನಾಚರಣೆಯಂದು ಘೋಷಿಸಿದ್ದರು. ನೀತಿ ಆಯೋಗ ರಚನೆ ಕುರಿತು ಇತ್ತೀಚೆಗೆ ಎಲ್ಲ  ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಮಾಲೋಚನೆ ನಡೆಸಿದ್ದರು. ಅದಾದ ಮೂರು ವಾರಗಳ ನಂತರ ಈ ಪ್ರಕಟಣೆ ಹೊರಬಿದ್ದಿದೆ. ಕಾಂಗ್ರೆಸ್‌ ಆಡಳಿತದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಹೊರತು  ಪಡಿಸಿದಂತೆ ಉಳಿದ ಮುಖ್ಯಮಂತ್ರಿಗಳು ಯೋಜನಾ ಆಯೋಗದ ಪುನರ್‌ ರಚನೆ ನಿರ್ಧಾರ ಬೆಂಬಲಿಸಿದ್ದರು.



☀.ನೀತಿ ನಿರೂಪಣಾ ಸಂಸ್ಥೆಯ ಪ್ರಮುಖ ಕಾರ್ಯಗಳು ಯಾವವು?
 (The Main Functions)
—ಸರ್ಕಾರಗಳ ನೀತಿ ನಿರೂಪಣೆಯಲ್ಲಿ ಪ್ರಧಾನ ಪಾತ್ರ ವಹಿಸುವ ಆಯೋಗ ಚಿಂತಕರ ಚಾವಡಿಯಂತೆ ಕೆಲಸ ಮಾಡಲಿದೆ.

—ಸರ್ಕಾರದ ಪ್ರಮುಖ ನೀತಿ ನಿರೂಪಣೆಯಲ್ಲಿ ಕಾರ್ಯತಂತ್ರ ರೂಪಿಸುವ ಆಯೋಗದ ತಜ್ಞ ಸದಸ್ಯರು ತಾಂತ್ರಿಕ  ಸಲಹೆ ಹಾಗೂ ಮಾರ್ಗದರ್ಶನ ನೀಡುವರು.

—ನೀತಿ ಹಾಗೂ ಶಿಕ್ಷಣ ಸಂಶೋಧನಾ ಕೇಂದ್ರಗಳು ಸೇರಿದಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಜೊತೆ ಈ ಚಿಂತಕರ ಚಾವಡಿಯು ಸಮಾಲೋಚನೆ ನಡೆಸಿ, ಆ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿ ನಿರೂಪಣೆಯಲ್ಲಿ ಅಗತ್ಯ ಸಲಹೆ, ಸೂಚನೆ ನೀಡುವ ಕೆಲಸವನ್ನೂ ಮಾಡಲಿವೆ.

—ಯೋಜನೆಗಳ  ಜಾರಿ, ಸಮರ್ಪಕ ಅನುಷ್ಠಾನದ ಮೇಲೂ ಸಂಸ್ಥೆ ಕಣ್ಣಿಡಲಿದೆ.

No comments:

Post a Comment