"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday, 11 January 2015

☀ ಇಂಗ್ಲಿಷ್ ಗ್ರಾಮರ್ ಹಾಗು ವ್ಯಕ್ತಿ ವಿಕಸನಕ್ಕಾಗಿ ಇಂಗ್ಲಿಷ್— ಭಾಗ-2.☀  (English Grammar for Personality Development-Part 2)

☀ ಇಂಗ್ಲಿಷ್ ಗ್ರಾಮರ್ ಹಾಗು ವ್ಯಕ್ತಿ ವಿಕಸನಕ್ಕಾಗಿ ಇಂಗ್ಲಿಷ್— ಭಾಗ-2.☀
(English Grammar for Personality Development-Part 2)


(ಸಂಕ್ಷಿಪ್ತವಾಗಿ ವಿವರಿಸಲಾಗಿದೆ)
☀ಇಂಗ್ಲಿಷ್ ಭಾಷೆಯಲ್ಲಿ ಕ್ರಿಯೆ ಮತ್ತು ಕಾಲ
(Tenses and Action / Process in English Language)


★ ಎಲ್ಲಾ ಮಾನವ ಭಾಷೆಗಳೂ ಕಾಲವನ್ನು ಮೂರು ಆಯಾಮಗಳಾಗಿ ಗ್ರಹಿಸಿವೆ
♠.ಭೂತ ಕಾಲ (Past Tense)
♠.ವರ್ತಮಾನ ಕಾಲ (Present Tense) ಹಾಗೂ
♠.ಭವಿಷ್ಯತ್ ಕಾಲಗಳೇ (Future Tense) ಅವು.

★ ಇಂಗ್ಲಿಷ್ ಭಾಷೆಯಲ್ಲಿ ಕ್ರಿಯೆ ಮತ್ತು ಕಾಲದ ಸಂಬಂಧವನ್ನು ಸೂಚಿಸಲು ಈ ಒಂದೊಂದು ಕಾಲದಲ್ಲೂ ನಾಲ್ಕು ಸಾಧ್ಯತೆಗಳಿವೆ.

♠.Simple,
♠.Continuous,
♠.Perfect ಹಾಗೂ
♠.Perfect continuous ಇವು ಆ ನಾಲ್ಕು ರೂಪಗಳು.

——————————————————————————

★ ಮೊದಲಿಗೆ ವರ್ತಮಾನ ಕಾಲಕ್ಕೆ ಸಂಬಂಧಿಸಿದ ನಾಲ್ಕು ರೂಪಗಳನ್ನು ಪರಿಶೀಲಿಸೋಣ.

♠.Simple Present Tense

—ದೈನಂದಿನ ಚಟುವಟಿಕೆಗಳನ್ನಾಗಲೀ (every day actions)
ಸಾರ್ವತ್ರಿಕ ಸತ್ಯಗಳನ್ನಾಗಲೀ (universal truths) ಸೂಚಿಸುವಾಗ simple present tense ಅನ್ನು ಬಳಸಬಹುದು.


—ಈ ಕೆಳಗಿನ ವಾಕ್ಯಗಳನ್ನು ಗಮನಿಸಿ.
He plays tennis every day (ದೈನಂದಿನ ಚಟುವಟಿಕೆ),
Planets go round the sun (ಸಾರ್ವತ್ರಿಕ ಸತ್ಯ ).

——————————————————————————

♠.Present Continous Tense

—ವರ್ತಮಾನ ಕಾಲದ ಎರಡನೆಯ ರೂಪ present continous tense.
ನಾವು ಮಾತನಾಡುತ್ತಿರುವ ಕ್ಷಣದಲ್ಲೇ ಕ್ರಿಯೆಯೊಂದು ನಡೆಯುತ್ತಿದ್ದರೆ, ಅದನ್ನು ಸೂಚಿಸಲು present continous tense ಬಳಸಬಹುದು.


—ಉದಾ:
He is typing a letter.
The children are singing.


★ present continous ಬಳಸುವಾಗ ಗಮನಿಸಬೇಕಾದ ಅಂಶವೊಂದಿದೆ.
ಕೆಲವು ನಿರ್ದಿಷ್ಠ ಕ್ರಿಯಾ ಪದಗಳನ್ನು ಈ ರೂಪದಲ್ಲಿ ಉಪಯೋಗಿಸಬಾರದು.

ಉದಾ: like, love, want.
I am loving it–✘ . I love it √
I am having a car– ✘, I have a car √
I am wanting it –✘, I want it √

——————————————————————————

♠.Present Perfect Tense

— ಯಾವುದೇ ಕ್ರಿಯೆಯ ಪ್ರಭಾವ ವರ್ತಮಾನದಲ್ಲಿಯೂ ಇದ್ದಾಗ ನಾವು present perfect tense ಅನ್ನು ಬಳಸಬಹುದು.


—ಗಮನಿಸಿ:
He has completed the task (ಇದರ ಅರ್ಥ ಈಗ ಅವನು ಮನೆಗೆ ಹೋಗಬಹುದು ಎಂದಾಗಬಹುದು)
She has hurt herself (ಇದರ ಅರ್ಥ ಆಕೆ ವೈದ್ಯರನ್ನು ನೋಡಬೇಕೆಂದಾಗಬಹುದು).


★ ಇನ್ನು ಯಾವುದೇ ಕ್ರಿಯೆ ಹಿಂದೆಯೇ ಆರಂಭವಾಗಿ ನಾವು ಮಾತನಾಡುತ್ತಿರುವಾಗಲೂ ಮುಂದುವರೆಯುತ್ತಿದ್ದರೆ, ಅಥವಾ ಆಗ ತಾನೇ ನಿಂತಿದ್ದರೆ, ಅಂತಹ ಸಂಧರ್ಭದಲ್ಲಿ present perfect tense ನ ಬಳಕೆ ಉಚಿತ.

ಗಮನಿಸಿ:
She has been working very hard.
It has been raining for two hours.

——————————————————————————
——————————————————————————

★ ಈಗ, ಭೂತಕಾಲದ ನಾಲ್ಕು ಕಾಲವಿಧಗಳನ್ನು ಗಮನಿಸೋಣ.

♠.Simple Past Tense
—ಹಿಂದೆಯೇ ಪೂರ್ಣಗೊಂಡ ಕ್ರಿಯೆಗಳನ್ನು ಸೂಚಿಸಲು simple past ಬಳಸುತ್ತೇವೆ.

—ಉದಾ:
He went home.
She sang a song.

★ simple past ಅನ್ನು ಬಳಸುವಾಗ ಸಾಮಾನ್ಯವಾಗಿ ಆಗುವ ತಪ್ಪುಗಳನ್ನು ಗಮನಿಸಿ.
I didn’t liked it ✘, I didn’t like it √
I didn’t went to college ✘, I didn’t go to college √

★ ಒಂದೇ ವಾಕ್ಯದಲ್ಲಿ ಎರಡು ಭೂತಕಾಲದ ಕ್ರಿಯಾಪದಗಳ ಉಪಯೋಗ ನಿಷಿದ್ಧ ಎಂಬುದನ್ನು ಗಮನಿಸಬೇಕು.

——————————————————————————

♠.Past Continuous Tense
—ಹಿಂದೆ ಶುರುವಾದ ಕ್ರಿಯೆಯೊಂದು ಇನ್ನೂ ಮುಗಿಯದೆ ಮುಂದುವರೆಯುತ್ತಿದ್ದಾಗ past continuous tense ಅನ್ನು ಬಳಸಬಹುದು.

—ಉದಾ:
He was watching a cricket match.
It was raining

——————————————————————————

♠.Present Past Perfect Continuous Tense
—ಭೂತಕಾಲದಲ್ಲೇ ನಡೆದ ಎರಡು ಕ್ರಿಯೆಗಳಲ್ಲಿ ಮೊದಲನೇ ಕ್ರಿಯೆಯ ಬಗ್ಗೆ ಹೇಳುವಾಗ present past perfect continuous tense ಉಪಯೋಗಿಸಬೇಕು.

—ಉದಾ:
By the time I reached college the class had started.

——————————————————————————

♠.Past Perfect Continuous Tense
—ಭೂತಕಾಲದಲ್ಲಿ ನಡೆದು, ನಿಲ್ಲುವ ಕ್ರಿಯೆಗಳ ಅಂತರ್‌ಸಂಬಂಧವನ್ನು ಸೂಕ್ಷ್ಮವಾಗಿ ಸೂಚಿಸುವ ಕಾಲವಿಧಾನವೇ past perfect continuous tense.

—ಈ ವಾಕ್ಯಗಳನ್ನು ಗಮನಿಸಿ:
He was tired because he had been running.
At last he came. I had been waiting for half an hour.


——————————————————————————
——————————————————————————


★ ಕೊನೆಯದಾಗಿ ಇಂಗ್ಲಿಷ್‌ನಲ್ಲಿ ಭವಿಷ್ಯತ್‌ಕಾಲದ ರೂಪಗಳನ್ನು ನೋಡೋಣ.

♠.Simple Future Tense
—simple future tense ಉಪಯೋಗಿಸಿ ಮುಂದೆ ನಡೆಯಲಿರುವ ಕ್ರಿಯೆಗಳನ್ನು ಸೂಚಿಸಬಹುದು.

ಉದಾ:
I will meet you tomorrow.
I will submit the assignment next week.

——————————————————————————

♠.Future Continuous Tense
—ಭವಿಷ್ಯದಲ್ಲಿ ಮುಂದುವರೆಯುವಂತಹ ಕ್ರಿಯೆಯ ಬಗ್ಗೆ ಮಾತನಾಡುವಾಗ future continuous ಅನ್ನು ಉಪಯೋಗಿಸಬಹುದು.

—ಉದಾ:
Tomorrow by this time, i will be in Mumbai.

——————————————————————————

♠.Future Perfect Tense
— ಭವಿಷ್ಯದಲ್ಲಿ ಒಂದು ನಿಗದಿಯ ಗಳಿಗೆಯಲ್ಲಿ ಪೂರ್ಣಗೊಳ್ಳುವಂತಹ ಕ್ರಿಯೆಯನ್ನು future perfect tense ಸೂಚಿಸುತ್ತದೆ.

—ಉದಾ:
They will have completed their project by next week.

——————————————————————————

♠.Future Perfect Continuous Tense
—ಭವಿಷ್ಯತ್ ಕಾಲದಲ್ಲಿ ಸ್ವಲ್ಪ ಸಮಯದವರೆಗೆ ಮುಂದುವರೆಯಬಹುದಾದ ಕ್ರಿಯೆಯೊಂದು, ಅದೇ ಕಾಲದಲ್ಲಿ ಸ್ವಲ್ಪ ಸಮಯದ ನಂತರ ಕೊನೆಗೊಳ್ಳುವುದಾದರೆ ಅಂತಹ ಸಂಧರ್ಭದಲ್ಲಿ ಮಾತ್ರ future perfect continuous tense ಅನ್ನು ಬಳಸಬೇಕು.

—ಉದಾ:
When my uncle comes to India next month, he will have been living in America for two years.

★ ಇಂಗ್ಗಿಷ್ ಸಂಭಾಷಣೆಯಲ್ಲಿ ಈ ಕಾಲವಿಧದ ಬಳಕೆ ತುಂಬಾ ಅಪರೂಪ.
ಇಂಗ್ಲಿಷ್ ಅನ್ನು ಅನ್ಯ ಭಾಷೆಯಾಗಿ ಕಲಿಯುತ್ತಿರುವಾಗ, ಟೆನ್ಸ್ ಉಪಯೋಗದ ವ್ಯಾಕರಣ ಕಷ್ಟವೆನಿಸುವುದು ಸಹಜ. ಈ ನಿಯಮಗಳನ್ನು ಕಂಠಪಾಠ ಮಾಡುವ ಬದಲು, ಇಂಗ್ಲಿಷ್‌ನ ಸಹಜ ವಾಕ್ಯಗಳನ್ನು ಕೇಳಿಸಿಕೊಳ್ಳುತ್ತಾ ನೈಜ ಇಂಗ್ಲಿಷ್ ಪಠ್ಯ ಓದುತ್ತಿದ್ದರೆ ನಮ್ಮೊಳಗೊಂದು ‘grammar intuition’ ಬೆಳೆಯುವ ಸಾಧ್ಯತೆ ಹೆಚ್ಚುತ್ತದೆ.

(ಕೃಪೆ: ಪ್ರಜಾವಾಣಿ)
To be Continued....

No comments:

Post a Comment