"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday, 8 January 2015

☀ ಮಾರ್ಚ್ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀ (Important Current Affairs of March 2014)

☀ ಮಾರ್ಚ್ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀
(Important Current Affairs of March 2014)

★ಮಾರ್ಚ್ 2014
(March 2014)


♣ ಮಾ.1: ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಪ್ರತ್ಯೇಕ ತೆಲಂಗಾಣ ರಾಜ್ಯ ವಿಧೇಯಕಕ್ಕೆ ಸಹಿ ಹಾಕಿದರು.


♣ ಮಾ. 2: 2014ನೇ ಸಾಲಿನ ಆಸ್ಕರ್‌ ಪ್ರಶಸ್ತಿಗಳನ್ನು ಪ್ರಕಟಿಸಲಾಯಿತು. ‘12 ಈಯರ್ಸ್‌ ಎ ಸ್ಲೇವ್‌ ಸ್ಟಿವ್‌ ಮ್ಯಾಕ್ವಿನ್‌’ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಪಡೆಯಿತು. ಈ ಚಿತ್ರ ಅಮೆರಿಕ ಇತಿಹಾಸದ ಮೇಲೆ ಬೆಳಕು ಚಲ್ಲುತ್ತದೆ.


♣ ಮಾ. 3: ಎನ್‌ಡಿಎ ಸರ್ಕಾರದಲ್ಲಿ ಮಾಜಿ ವಿದೇಶಾಂಗ ಸಚಿವರಾಗಿದ್ದ ಜಸ್ವಂತ್‌ ಸಿಂಗ್‌ ಅವರ  ‘ಇಂಡಿಯಾ ಅಟ್‌ ರಿಸ್ಕ್‌’ (India at Risk – Mistakes, Misconceptions and Misadventures of security policy) ಪುಸ್ತಕ ಬಿಡುಗಡೆಯಾಯಿತು.


♣ ಮಾ. 4; ಆಸಿಡ್‌ ದಾಳಿಗೆ ತುತ್ತಾಗಿದ್ದ ಭಾರತೀಯ ಮಹಿಳೆ ಲಕ್ಷ್ಮಿ ಅವರಿಗೆ ಅಮೆರಿಕದ ಪ್ರತಿಷ್ಠಿತ ಅಂತರರಾಷ್ಟ್ರೀಯ ಮಹಿಳಾ ಶೌರ್ಯ ಪ್ರಶಸ್ತಿ (International Women of Courage Award) ನೀಡಲಾಯಿತು.


♣ ಮಾ. 4: ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಮ್ಯಾನ್ಮಾರ್‌ನಲ್ಲಿ ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರನ್ನು ಭೇಟಿ ಮಾಡಿ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದರು.


♣ ಮಾ. 5: ಭಾರತೀಯ ಚುನಾವಣಾ ಆಯೋಗ 16ನೇ ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟಿಸಿತು. ಏಪ್ರಿಲ್‌ 7ರಿಂದ ಮೇ 12ರವರೆಗೆ 9 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ,ಮತ ಎಣಿಕೆ ಮೇ 16ರಂದು ನಡೆಯಿತು. ಮೇ 31ಕ್ಕೆ 15ನೇ ಲೋಕಸಭೆ ಅವಧಿ ಮುಕ್ತಾಯವಾಯಿತು.


♣ ಮಾ. 11: ಮಿಷೆಲ್‌ಬೆಕೆಲೆಟ್‌ ಅವರು ಎರಡನೇ ಬಾರಿ ಚಿಲಿಯ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು.


♣ ಮಾ. 11: ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ ಅವರು ಕೇರಳದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡರು. ಅವರಿಗೆ ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮಂಜುಳ ಚೆಲ್ಲೂರ್‌ ಪ್ರತಿಜ್ಞಾವಿಧಿ ಬೋಧಿಸಿದರು.


♣ ಮಾ.13: ಆಧಾರ್‌ (Unique Identification Authority of India (UIDAI)ಗೆ ನಂದನ್‌ ನಿಲೇಕಣಿ ರಾಜೀನಾಮೆ ನೀಡಿದರು. ಅವರು 2014ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಲು ರಾಜೀನಾಮೆ ನೀಡಿದರು.


♣ ಮಾ. 20: ದಕ್ಷಿಣ ಆಫ್ರಿಕಾ ಸರ್ಕಾರ ಅಲ್ಲಿನ ಕೆಲವು ಸರ್ಕಾರಿ ಶಾಲೆಗಳಲ್ಲಿ ಹಿಂದಿ, ತಮಿಳು, ತೆಲುಗು, ಉರ್ದು ಮತ್ತು ಗುಜರಾತಿ ಭಾಷೆಗಳನ್ನು ಬೋಧಿಸಲು ಸುತ್ತೋಲೆ ಹೊರಡಿಸಿತು.


♣ ಮಾ. 20:  ಹಿರಿಯ ಪತ್ರಕರ್ತ ಖುಷ್ವಂತ್‌ ಸಿಂಗ್‌ ನಿಧನರಾದರು. ‘ಟ್ರೈನ್‌ ಟು ಪಾಕಿಸ್ತಾನ್‌’, ‘ಎ ಹಿಸ್ಟರಿ ಅಫ್‌ಸಿಖ್‌’ ಜನಪ್ರಿಯ ಪುಸ್ತಕಗಳು.


♣ ಮಾ. 24: ಆಧಾರ್‌ ಗುರುತಿನ ಚೀಟಿಯನ್ನು ದೇಶದ ಪ್ರಜೆಗಳಿಗೆ ಕಡ್ಡಾಯಗೊಳಿಸದಿರಲು ಸುಪ್ರೀಂ ಕೋರ್ಟ್‌  ಕೇಂದ್ರ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿತು. ನ್ಯಾ. ಬಿ.ಎಸ್‌. ಚೌಹಾಣ್‌ ಮತ್ತು ನ್ಯಾ. ಚಲಮೇಶ್ವರ್‌ ಈ ನಿರ್ದೆಶನ ನೀಡಿದರು.


♣ ಮಾ.24: ಹಿಂದಿ ಸಾಹಿತಿ ಗೋವಿಂದ ಮಿಶ್ರಾ ಅವರಿಗೆ 2013ನೇ ಸಾಲಿನ ಸರಸ್ವತಿ ಸಮ್ಮಾನ್‌ ಪ್ರಶಸ್ತಿ ಘೋಷಿಸಲಾಯಿತು. ಅವರ ‘ಧೂಲ್‌ ಪೌದೊಂಪರ್‌’ ಕೃತಿಗೆ ಈ ಪುರಸ್ಕಾರ ನೀಡಲಾಯಿತು. 10 ಲಕ್ಷ ರೂಪಾಯಿ ನಗದು ಮತ್ತು ಸ್ಮರಣಿಕೆಯ ಸರಸ್ವತಿ ಸಮ್ಮಾನ್‌ ಪ್ರಶಸ್ತಿಯನ್ನು ಬಿರ್ಲಾ ಫೌಂಡೇಶನ್‌ ನೀಡುತ್ತದೆ.


♣ ಮಾ. 24: ಆಂಡಿ ಮಾರಿನೊ ಬರೆದ ‘ನರೇಂದ್ರ ಮೋದಿ: ಎ ಪೊಲಿಟಿಕಲ್‌ ಬಯೋಗ್ರಾಫಿ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. 2002ರ ಗೋಧ್ರ ಹತ್ಯಾಖಂಡದ ನೈಜ ಘಟನೆಗಳನ್ನು ಈ ಪುಸ್ತಕದಲ್ಲಿ ಮರೆಮಾಚಲಾಗಿದೆ ಎಂಬ ಆರೋಪಗಳು ಕೇಳಿಬಂದವು.


♣ ಮಾ. 24: ಖ್ಯಾತ ಕ್ರೀಡಾಪಟು ಮಿಲ್ಕಾ ಸಿಂಗ್‌ ಅವರ ಜೀವನ ಚರಿತ್ರೆ ಆಧಾರಿತ ಬಾಲಿವುಡ್‌ ಸಿನಿಮಾ ಭಾಗ್‌ ಮಿಲ್ಕಾ ಭಾಗ್‌ 7ನೇ ಏಷ್ಯನ್‌ ಫಿಲಂ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡಿತು. ಈ ಸಿನಿಮಾ ಹಬ್ಬ ಸೌದಿ ಆರೇಬಿಯಾದಲ್ಲಿ ನಡೆಯಿತು.


♣ ಮಾ. 24: ಮೂರನೇ ಅಂತರರಾಷ್ಟ್ರೀಯ ಪರಮಾಣು ಭದ್ರತಾ ಸಭೆ ನೆದರ್‌ಲ್ಯಾಂಡ್‌ನ ಹೇಗ್‌ನಲ್ಲಿ ನಡೆಯಿತು. ಈ ಸಭೆಯಲ್ಲಿ 58 ದೇಶಗಳು ಭಾಗವಹಿಸಿದ್ದವು.


♣ ಮಾ. 25: ಜಮ್ಮು ಮತ್ತು ಕಾಶ್ಮೀರ ರಾಜ್ಯವು ಚುನಾವಣೆ ಮತಗಟ್ಟೆಗಳಿರುವ ಪ್ರದೇಶವನ್ನು ಧೂಮಪಾನ ನಿಷೇಧಿತ ವಲಯ ಎಂದು ಘೋಷಿಸುವ ಮೂಲಕ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.


♣ ಮಾ. 25: ಕೇಂದ್ರ ಆದಾಯ ಇಲಾಖೆಯ ಕಾರ್ಯದರ್ಶಿಯಾಗಿ ರಾಜೀವ್‌ ಠಾಕೂರ್‌ ನೇಮಕಗೊಂಡರು. ಸುಮೀತ್‌ ಬೋಸ್‌  ನಿವೃತ್ತರಾದ ಹಿನ್ನೆಲೆಯಲ್ಲಿ ರಾಜೀವ್‌ ನೇಮಕಗೊಂಡರು.


♣ ಮಾ. 26: ಇತಿಹಾಸ ತಜ್ಞ ರಾಮಕೃಷ್ಣ ರೆಡ್ಡಿ ನೇತೃತ್ವದ ತಂಡ ಆಂಧ್ರ ಪ್ರದೇಶದ ಅಕ್ಕಂಪಲ್ಲಿ ಸಮೀಪದ ಗುಹೆಯಲ್ಲಿ ಏಳು ಸಾವಿರ ವರ್ಷಗಳ ಹಿಂದಿನ ಮಾನವನ ಪಳೆಯುಳಿಕೆ ಪತ್ತೆಹಚ್ಚಿತು.


♣ ಮಾ. 27:  ಆಗ್ನೆಯ ಏಷ್ಯಾ ವಲಯದ 11 ದೇಶಗಳ ಪೈಕಿ ಭಾರತ ಮೊದಲ ಪೋಲಿಯೊ ಮುಕ್ತ ರಾಷ್ಟ್ರ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿತು.


♣ ಮಾ.28: ಮಾಜಿ ಕ್ರಿಕೆಟಿಗ ಸುನೀಲ್‌ ಗಾವಸ್ಕರ್‌ ಬಿಸಿಸಿಐನ ಹಂಗಾಮಿ ಅಧ್ಯಕ್ಷರಾದರು.


♣ ಮಾ. 28: ನಾರ್ವೆಯ ಜೆನ್ಸ್‌ ಸ್ಟೊಲೇಂಟ್‌ಬರ್ಗ್‌ ಅವರು ನ್ಯಾಟೊ (nato–North Atlantic Treaty Organisation)ದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು.


♣ ಮಾ. 30: ಮರ್ಸಿಡಿಸ್‌ ತಂಡದ ಲೂಯಿಸ್‌ ಹ್ಯಾಮಿಲ್ಟನ್‌ 2014ರ ಮಲೇಷ್ಯಾ ಗ್ರ್ಯಾನ್‌ ಪ್ರಿ ಫಾರ್ಮುಲಾ ಒನ್‌ ರೇಸ್‌ ಗೆದ್ದುಕೊಂಡರು. ಮಲೇಷ್ಯಾದಸೆಪಾಂಗ್‌ ಇಂಟರ್‌ನ್ಯಾಷನಲ್‌ ಸರ್ಕಿಟ್‌ನಲ್ಲಿ ನಡೆದ 56 ಲ್ಯಾಪ್‌ಗಳ ಸ್ಪರ್ಧೆ (ಒಟ್ಟು 310 ಕಿ.ಮೀ. ದೂರ) ಪೂರೈಸಲು ಹ್ಯಾಮಿಲ್ಟನ್‌ ಒಂದು ಗಂಟೆ 40 ನಿಮಿಷ ಹಾಗೂ 25 ಸೆಕೆಂಡ್‌ಗಳನ್ನು ತೆಗೆದುಕೊಂಡರು.


♣ ಮಾ. 31: ಸುಪ್ರೀಂ ಕೋರ್ಟ್‌ ದೇವೆಂದ್ರಪಾಲ್‌ ಸಿಂಗ್‌ ಬುಲ್ಲರ್‌ ಅವರ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸುವ ಮೂಲಕ ಮಹತ್ವದ ತೀರ್ಪು ಪ್ರಕಟಿಸಿತು. ದಯಾ ಮರಣ ಅರ್ಜಿ ವಿಳಂಬ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದರಿಂದ ನ್ಯಾಯಾಪೀಠ ಈ ತೀರ್ಪು ನೀಡಿತು. ಬುಲ್ಲರ್‌ 1993ರ ದೆಹಲಿ ಬಾಂಬ್‌ ಸ್ಫೋಟ ಪ್ರಕರಣದ ಮುಖ್ಯ ಅಪರಾಧಿ. ಈ ದುರಂತದಲ್ಲಿ 9 ಜನರು ಸಾವನ್ನಪ್ಪಿದ್ದರು.

(ಕೃಪೆ: ಪ್ರಜಾವಾಣಿ)

No comments:

Post a Comment