"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday, 19 January 2015

☀ ಸಾಫ್ಟಾ (SAFTA—South Asian Free Trade Area) ಎಂದರೇನು ?

☀ ಸಾಫ್ಟಾ (SAFTA—South Asian Free Trade Area) ಎಂದರೇನು ?

━━━━━━━━━━━━━━━━━━━━━━━━━━━━━━━━━━━━━━━━━━━━━


●.ಸಾಫ್ಟಾ ಎಂದರೆ, ದಕ್ಷಿಣ ಏಶಿಯಾ ಮುಕ್ತ ವ್ಯಾಪಾರ ವಲಯ ((SAFTA—South Asian Free Trade Area)) ಎಂದರ್ಥ.

♠.ಸಾರ್ಕ್ ದೇಶಗಳು ಸೇರಿಕೊಂಡು ಈ ವ್ಯಾಪಾರಿ ವಲಯ ರೂಪಿಸಿಕೊಂಡಿವೆ.

♠.ದಕ್ಷಿಣ ಏಸಿಯಾ ವಲಯದಲ್ಲಿ ಆಯಾ ದೇಶಗಳ ಸಾರ್ವಭೌಮತೆ, ಸಮಾನತೆ,
ಸ್ವಾತಂತ್ರ್ಯ ಪ್ರಾದೇಶಿಕ ಸಮಗ್ರತೆಗಳಿಗೆ ಸಂಪೂರ್ಣ ಗೌರವನೀಡಿ, ವ್ಯಾಪಾರ ವಾಣಿಜ್ಯದ ಸಾಮರ್ಥ್ಯ ಅವಕಾಶಗಳನ್ನು ಗರಿಷ್ಠ ಮಟ್ಟದಲ್ಲಿ ಆರ್ಥಿಕ ಸಹಕಾರಕ್ಕೆ ಬಳಸಿಕೊಳ್ಳುವ ಮೂಲಕ ವಲಯದಲ್ಲಿ ಆರ್ಥಿಕ ಅಭಿವೃದ್ಧಿ ಹೊಂದುವುದು ಸಾಫ್ಟಾದ ಉದ್ದೇಶ.

♠.1993 ರ ಏಪ್ರಿಲ್ 11ರಂದು ಢಾಕಾದಲ್ಲಿ ಸಾಫ್ಟಾಗೆ ಸಹಿ ಹಾಕಲಾಯಿತು.

♠.ಸಾರ್ಕ್ ಸದಸ್ಯ ದೇಶಗಳ ನಡುವೆ, ಆದ್ಯತಾ ವ್ಯಾಪಾರ ವ್ಯವಸ್ಥೆ ಆರ್ಥಿಕ ಪ್ರಗತಿಗೆ ಒತ್ತಾಸೆ ನೀಡುವುದಲ್ಲದೆ ಬಂಡವಾಳ ಹೂಡಿಕೆ ಮತ್ತು ಉತ್ಪಾದನಾ ಅವಕಾಶಗಳನ್ನು ವಿಸ್ತರಿಸಬಲ್ಲದು.

♠.ಮುಕ್ತ ಸರಕು ಸಾಗಾಟದ ಮೂಲಕ ವ್ಯಾಪಾರ ವಾಣಿಜ್ಯ ಹೆಚ್ಚಿಸುವ ಇಂತಹ ವ್ಯವಸ್ಥೆಗಳಿಗೆ ಅನೇಕ ದೇಶ ವಲಯಗಳು ಮುಂದಾಗುತ್ತಿವೆ.

♠.ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳ ವಿಶಿಷ್ಟ ಅಗತ್ಯಗಳನ್ನು ಮನಗಂಡು ಗುರುತಿಸಿಅವುಗಳಿಗೆ ವಿಶೇಷ ಗಮನಕೊಡುವುದು ಉದ್ದೇಶಗಳಲ್ಲಿ ಸೇರಿದೆ.

2 comments:

  1. Very useful information you have gave brother.

    ReplyDelete
  2. Very useful information you have gave brother.

    ReplyDelete