"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 21 January 2015

☀ ಬಡತನ ಒಂದು ರಾಷ್ಟ್ರೀಯ ಸಾಂಸ್ಥಿಕ ಸಮಸ್ಯೆಯೇ? ಮೂಲಭೂತ ಸಮಸ್ಯೆಗಳೊಂದಿಗೆ ವಿಮರ್ಶಿಸಿ (250 ಶಬ್ಧಗಳಲ್ಲಿ)  (Is poverty a nationalized problem? Critically explain with its basic issues. ☀

☀ ಬಡತನ ಒಂದು ರಾಷ್ಟ್ರೀಯ ಸಾಂಸ್ಥಿಕ ಸಮಸ್ಯೆಯೇ? ಮೂಲಭೂತ ಸಮಸ್ಯೆಗಳೊಂದಿಗೆ ವಿಮರ್ಶಿಸಿ (250 ಶಬ್ಧಗಳಲ್ಲಿ)
(Is poverty a nationalized problem? Critically explain with its basic issues. ☀


♠.ಬಡತನ - ರಾಷ್ಟ್ರೀಯ ಸಾಂಸ್ಥಿಕ ಸಮಸ್ಯೆ:

✧.ಪೂರ್ವದಿಂದಲೂ ಭಾರತ ಹಳ್ಳಿಗಳ ನಾಡೆಂದು ಹೆಸರುಮಾಡಿದೆ ಹಾಗೂ ಸಾಮಾಜಿಕವಾಗಿಯೂ ಸಹ ಅಷ್ಟೇ ವೈರುಧ್ಯಗಳಿಂದ ಕೂಡಿದೆ. ಈ ದೇಶವು ಕೃಷಿ ಪ್ರಧಾನವಾದ ಆರ್ಥಿಕತೆಯನ್ನು ಹೊಂದಿದ್ದು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅನೇಕ ಸಾಮಾಜಿಕ ಅಸಮಾನತೆಗಳಿಂದಾಗಿ ಅಸ್ಪೃಶ್ಯತೆ, ಜಾತಿಭೇದ, ಲಿಂಗ ತಾರತಮ್ಯತೆ, ಅಸಮಾನ ಆಸ್ತಿ ಹಂಚಿಕೆ ಮತ್ತು ಶೈಕ್ಷಣಿಕ ವೈರುಧ್ಯಗಳು ಹಾಗೂ ಇತರೆ ಸಾಂಸ್ಥಿಕ ಸಮಸ್ಯೆಗಳು ದೇಶೀಯ ಸರ್ವೇಸಾಮಾನ್ಯ ಗುಣವಿಶೇಷಣಗಳಂತಿವೆ. ಇವುಗಳ ಬಳುವಳಿಯಿಂದ ಬಡತನದ ವಿಷರ್ತುಲದೊಳಗೆ ಬಹುಸಂಖ್ಯಾತ ಜನರು ವಾಸಿಸುವಂತಹ ಸಾಮಾಜಿಕ ಪರಿಸರ ನಿರ್ಮಾಣವಾಗಿದೆ.

✧.ಬಡತನ:—  ಜೀವನ ನಿರ್ವಹಣೆಗೆ ಬೇಕಾದ ಮಾನವನ ಕನಿಷ್ಟ ಅವಶ್ಯಕತೆಗಳನ್ನು ಪಡೆಯಲಾಗದ ಒಂದು ಸಾಮಾಜಿಕ ಸ್ಥಿತಿ. ಇದು ಒಂದು ವಿಶ್ವವ್ಯಾಪಿ ಸಮಸ್ಯೆ ಎಂದು ಹೇಳಬಹುದು


♠.ಸವಾಲು ಮತ್ತು ಸಮಸ್ಯೆಗಳು :
ಬಡತನ ಸಾಂಸ್ಥಿಕ ಸಮಸ್ಯೆ. ಅನುಷ್ಟಾನ ಪ್ರಕ್ರಿಯೆಗಳಲ್ಲಿ ಸವಾಲು ಮತ್ತು ಸಮಸ್ಯೆಗಳ ಮಹಾಪೂರಗಳಿವೆ:

1. ಭ್ರಷ್ಟಾಚಾರ ಸ್ವಜನ ಪಕ್ಷಪಾತ, ಮತ್ತು ದುರಾಡಳಿತಗಳ ಕರಿನೆರಳು ಇಲ್ಲಿನ ಸಾರ್ವಜನಿಕ ಕಾರ್ಯಕ್ರಮಗಳ ಮೇಲೆ ಪ್ರಜ್ವಲಿಸುತ್ತಿರುವುದರಿಂದ ಬಡವರ ಕಲ್ಯಾಣ ಕಾರ್ಯಕ್ರಮಗಳು ಸರ್ಕಾರದ ನಿಗದಿತ ಸಂಪನ್ಮೂಲಗಳಿಗೆ ಅನುಗುಣವಾಗಿ ಜಾರಿಗೊಳ್ಳುತ್ತಿಲ್ಲ. ಅವುಗಳು ಅನುಷ್ಟಾನ ಪ್ರಕ್ರಿಯೆಗಳಲ್ಲಿ ವಿರೂಪಗೊಳ್ಳುತ್ತಿರುವುದರಿಂದ ಅರ್ಹ ಬಡವರ ವಿಮೋಚನೆ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಒಳಗೊಳ್ಳುವಿಕೆಯು ಗೌಣವಾಗಿದ್ದು ರಾಷ್ಟ್ರೀಯ ಬೆಳವಣಿಗೆ ಅಸಾಧ್ಯವೆನ್ನುವಂತಹ ಸಾಮಾಜಿಕ ಪರಿಸರ ಎಲ್ಲೆಡೆ ಸೃಷ್ಟಿಸಿದೆ.

2. ಅಧಿಕಾರ ವಿಕೇಂದ್ರೀಕರಣವಾದರೆ ತಳ ಮಟ್ಟದಲ್ಲಿ ಜನರು ತಮ್ಮ ಆಗತ್ಯಗಳನ್ನು ಪೂರೈಸಿಕೊಳ್ಳುವರೆಂದು ಚಿಂತಿಸಲಾಗಿತ್ತು. ಈ ನಿಟ್ಟಿನಲ್ಲಿ ಜನತೆಯ ಕೈಗೆ ಅಧಿಕಾರ ನೀಡಿದ ಮೇಲೆ ಅದರ ಸೈದ್ದಾಂತಿಕ ಹಿನ್ನೆಲೆಗಳೆಲ್ಲವೂ ವ್ಯಾಪಕ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದಿಂದಾಗಿ ತಳ ಮಟ್ಟದಲ್ಲಿ ಬಡತನ ನಿರ್ಮೂಲನಾ ಕಾರ್ಯಕ್ರಮಗಳು ಅಪಾರ ಮಟ್ಟದ ದುರುಪಯೋಗಕ್ಕೆ ಗುರಿಯಾಗುತ್ತಿವೆ. ಅದರಲ್ಲೂ ರಾಜಕೀಯ ಮತ್ತು ಸಮಾಜಸೇವಾ ಕಾರ್ಯಕರ್ತರ ಆಕ್ರಮಣಕಾರಿ ಸ್ವಭಾವಗಳಿಂದಲೂ ಅವುಗಳು ತಳದಲ್ಲೇ ವಿರೂಪಗೊಳ್ಳುತ್ತಿವೆ.

3. ಬಡತನಕ್ಕೆ ಒಳಗಾಗಿರುವವರೆಲ್ಲರೂ ಸರ್ವೇ ಸಾಮಾನ್ಯವಾಗಿ ಸಾಮಾಜಿಕವಾಗಿ ದುರ್ಬಲರಾದ ಕಾರಣ ಇವರನ್ನು ಜಾತಿ ಮತ್ತು ಧರ್ಮಗಳ ಹೆಸರಿನಲ್ಲಿ ವಿಷವರ್ತುಲಗಳನ್ನು ಅವರ ಸುತ್ತಲೂ ಹೆಣೆಯಲಾಗಿರುತ್ತದೆ.


♠.ಉಪ ಸಂಹಾರ :

✧.ಸಾಮಾನ್ಯವಾಗಿ ಬಡತನ ನಿರ್ಮೂಲನೆ ಎಂದರೆ ಮೋಸದ ಕಾರ್ಯಕ್ರಮಗಳೆನ್ನುವ ವಾಡಿಕೆಗಳಿವೆ. ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಯು ಭದ್ರಬುನಾದಿ ಕಂಡುಕೊಂಡ ಮೇಲೆ ಅವುಗಳೊಳಗೆ ಜನರ ಪಾತ್ರ ಹಿಮ್ಮಡಿಗೊಂಡ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆಯಲ್ಲಿ ಸುಧಾರಣೆಯುಂಟಾಗಿವೆ.

✧.ಹಾಗೆಯೇ ಬಡತನ ರೇಖೆಗಿಂತ ಕೆಳಗಿರುವವರನ್ನು ಕೇವಲ ಸರ್ಕಾರಿ ಕಾರ್ಯಕ್ರಮಗಳ ಮೂಲಕ ಇಳಿಕೆಯಾಗಿದೆ ಅನ್ನುವುದು ಅಷ್ಟೊಂದು ಸಮಂಜಸವಾದ ತೀರ್ಮಾನಗಳಲ್ಲವೆನ್ನುವ ವಾದಗಳಿವೆ.

✧.ಇದರ ನಿರ್ಮೂಲನೆಗೆ ಜನ ಪ್ರತಿನಿಧಿಗಳಲ್ಲಿ ಪ್ರಾಮಾಣಿಕ ಕಳಕಳಿಗಳು ಇಮ್ಮಡಿಗೊಂಡಾಗ ಮಾತ್ರ ಸಾಧ್ಯ.

✧.ಹಾಗೆಯೇ ಅವರನ್ನು ಆಯ್ಕೆ ಮಾಡುವ ಮತದಾರರು ಸಹ ಪರಿಶುದ್ಧರಾಗಿ ಮತ ನೀಡಿದಾಗ ಅವರಲ್ಲಿ ಜನಪರ ನಿಲುವು ಧಾರಣಗೊಳ್ಳುತ್ತವೆ.

✧.ಬಡತನ ನಿರ್ಮೂಲನೆ ಕೇವಲ ಸರ್ಕಾರದ ಕಾರ್ಯವಲ್ಲ ಇದು ಸರ್ವರ ವೈಯುಕ್ತಿಕ ಕಾರ್ಯವಾಗಬೇಕಿದೆ.

No comments:

Post a Comment