"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday, 19 January 2015

☀.ಪ್ರಸ್ತುತ ಜಾರಿಯಲ್ಲಿ ತಂದ ‘ನೀತಿ ಆಯೋಗ’ದಲ್ಲಿ ಯಾರಿರುತ್ತಾರೆ? (To whom the 'NITI' Commission that came into existing recently has been involved)

☀.ಪ್ರಸ್ತುತ ಜಾರಿಯಲ್ಲಿ ತಂದ ‘ನೀತಿ ಆಯೋಗ’ದಲ್ಲಿ ಯಾರಿರುತ್ತಾರೆ?
(To whom the 'NITI' Commission that came into existing recently has been involved)

━━━━━━━━━━━━━━━━━━━━━━━━━━━━━━━━━━━━━━━━━━━━━


♣.ಪ್ರಧಾನಿ ಅಧ್ಯಕ್ಷತೆಯ ‘ನೀತಿ ಆಯೋಗದಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು,
♣.ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್‌ ಗವರ್‍ನರ್‌ಗಳು,
♣.ಕೇಂದ್ರ ಸಂಪುಟ ದರ್ಜೆಯ ನಾಲ್ವರು ಸಚಿವರು,
♣.ವಿವಿಧ ಕ್ಷೇತ್ರಗಳ ತಜ್ಞರು ಸದಸ್ಯರಾಗಿರುತ್ತಾರೆ.


—ಸದಸ್ಯರ ಪೈಕಿ ಕೆಲವರು ಪೂರ್ಣಾವಧಿಯ ಸದಸ್ಯರಾದರೆ, ಇಬ್ಬರು ಅಲ್ಪಾವಧಿಯ ಸದಸ್ಯರಾಗಿರುತ್ತಾರೆ.

—ಹೆಸರಾಂತ ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರಗಳ ತಜ್ಞರನ್ನು ಅಲ್ಪಾವಧಿ ಸದಸ್ಯರನ್ನಾಗಿ ನೇಮಕ ಮಾಡಲಾಗುವುದು. ಇವರನ್ನು ಪ್ರಧಾನಿ ನೇಮಕ ಮಾಡುತ್ತಾರೆ.

—ಪೂರ್ಣಾವಧಿಯ ಸದಸ್ಯರ ಹುದ್ದೆಗೆ ನಿರ್ದಿಷ್ಟವಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ.

—ಕೇಂದ್ರ ಸಂಪುಟ ಸಚಿವರು ಪದನಿಮಿತ್ತ ಸದಸ್ಯರಾದರೆ, ವಿವಿಧ ಕ್ಷೇತ್ರಗಳ ತಜ್ಞರು ಆಹ್ವಾನಿತ ಸದಸ್ಯರಾಗಿತ್ತಾರೆ.

—ಈ ಮೊದಲಿನಂತೆ ಆಯೋಗ ಉಪಾಧ್ಯಕ್ಷರನ್ನು ಹೊಂದಿರುತ್ತದೆ.

—ಒಂದು ಮಹತ್ವದ ಬದಲಾವಣೆ ಎಂದರೆ ನೀತಿ ಆಯೋಗಕ್ಕೆ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಇರುತ್ತಾರೆ. ಈ ಇಬ್ಬರನ್ನೂ ಪ್ರಧಾನಿ ನೇಮಕ ಮಾಡುತ್ತಾರೆ.



☀.ನೀತಿ ಆಯೋಗದ ಕೆಲವು ಅಂಶಗಳು:

♦.ಪ್ರಧಾನಿ ಮೋದಿ ಕನಸಿನ ಕೂಸು:
‘ನೀತಿ ಆಯೋಗ’ವು ಪ್ರಧಾನಿ ಮೋದಿ ಅವರ ಕಲ್ಪನೆಯ ಕೂಸು. ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಬಯಸಿದ್ದ ಅವರು ಆರ್ಥಿಕ ಯೋಜನೆಗಳನ್ನು ವಿಭಿನ್ನವಾಗಿ ರೂಪಿಸುವ ನಿಟ್ಟಿನಲ್ಲಿ ಯೋಜನಾ ಆಯೋಗದ ಬದಲು ಪಾಶ್ಚಾತ್ಯ ರಾಷ್ಟ್ರಗಳಲ್ಲಿರುವಂತೆ ‘ನೀತಿ ಆಯೋಗ ’ ರಚಿಸಬೇಕು ಎಂದು ಬಯಸಿದ್ದರು.


♦.ಯೋಜನಾ ಆಯೋಗವನ್ನು ರದ್ದುಪಡಿಸಿದ ನಂತರ ಆ ಜಾಗದಲ್ಲಿ ಹೊಸ ವರ್ಷದಿಂದ ಅಸ್ತಿತ್ವಕ್ಕೆ ಬಂದಿರುವ ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಅರವಿಂದ್‌ ಪನಗರಿಯಾ ಅವರನ್ನು ನೇಮಕ ಮಾಡಲಾಗಿದೆ.



☀.ಪ್ರಸ್ತುತ ‘ನೀತಿ ಆಯೋಗ’ದ ನೇಮಕಾತಿಗಳು:
ಯೋಜನಾ ಆಯೋಗದ ಜಾಗದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ತರಲಾದ ನೀತಿ ಆಯೋಗಕ್ಕೆ ಪ್ರಧಾನ ಮಂತ್ರಿ ನೇತೃತ್ವದಲ್ಲಿ ಹೊಸದಾಗಿ ನೇಮಕಗಳನ್ನು ಮಾಡಲಾಗಿದೆ.

♦.ಅಧ್ಯಕ್ಷರು : ನರೇಂದ್ರ ಮೋದಿ.

♦.ಉಪಾಧ್ಯಕ್ಷರು: ಅರವಿಂದ್‌ ಪನಗರಿಯಾ (ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕಿನ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞ)

♦.ಪೂರ್ಣಾವಧಿ ಸದಸ್ಯರು:
—ಆರ್ಥಿಕ ತಜ್ಞ ವಿವೇಕ್‌ ದೇಬ್‌ರಾಯ್‌ ಮತ್ತು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮಾಜಿ ಮುಖ್ಯಸ್ಥ ವಿ.ಕೆ. ಸಾರಸ್ವತ್‌

♦.ಪದನಿಮಿತ್ತ ಸದಸ್ಯರು :
— ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌,
ಅರುಣ್‌ ಜೇಟ್ಲಿ, ಸುರೇಶ್‌ ಪ್ರಭು ಮತ್ತು ರಾಧಾ ಮೋಹನ್‌ ಸಿಂಗ್‌

♦.ವಿಶೇಷ ಆಹ್ವಾನಿತರು :
—ಸಚಿವರಾದ ನಿತಿನ್‌ ಗಡ್ಕರಿ, ಸ್ಮೃತಿ ಇರಾನಿ ಮತ್ತು ತಾವರ್ ಚಂದ್‌ ಗೆಹ್ಲೋಟ್.

No comments:

Post a Comment