"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 21 January 2015

☀ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (NRHM) ಮತ್ತು ಅದರ ಮುಖ್ಯ ಧ್ಯೇಯೋದ್ದೇಶಗಳು :  (National Rural Health Mission And its main Objectives)☀

☀ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (NRHM) ಮತ್ತು ಅದರ ಮುಖ್ಯ ಧ್ಯೇಯೋದ್ದೇಶಗಳು :
(National Rural Health Mission And its main Objectives)☀


✧.ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನವು ಬೃಹತ್ತಾದ ಆರೋಗ್ಯ ಕಾರ್ಯಕ್ರಮವಾಗಿದ್ದು, ದೇಶದ ಆರೋಗ್ಯ ಇತಿಹಾಸದಲ್ಲಿ ಮೈಲುಗಲ್ಲನ್ನು ಸೃಷ್ಟಿಸಿದೆ.

✧.2005 ನೇ ಇಸ್ವಿಯಿಂದ ಪ್ರಾರಂಭಗೊಂಡ ಈ ಕಾರ್ಯಕ್ರಮವು ಭಾರತ ದೇಶದ ಎಲ್ಲ ರಾಜ್ಯಗಳಲ್ಲಿ ಮಹತ್ತರವಾದ ಸುಧಾರಣೆಯನ್ನು ಆರೋಗ್ಯ ಕ್ಷೇತ್ರದಲ್ಲಿ ತರುವಲ್ಲಿ ಯಶಸ್ವಿಯಾಗಿದೆ.

✧.ಉಳಿದ ಎಲ್ಲಾ ರಾಜ್ಯಗಳಂತೆ ಕರ್ನಾಟಕವು ಕೂಡಾ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದೆ.



♠.ಈ ಕಾರ್ಯಕ್ರಮದ ಮುಖ್ಯ ಧ್ಯೇಯೋದ್ದೇಶಗಳೇನೆಂದರೆ. :

◆ ತಾಯಿ ಮತ್ತು ಮಕ್ಕಳ ಆರೋಗ್ಯ ಸುಧಾರಣೆಯ ಮೂಲಕ ತಾಯಿ ಮರಣ ಪ್ರಮಾಣ ಹಾಗೂ ಶಿಶು ಮರಣ ಪ್ರಮಾಣ ವನ್ನು ಕಡಿಮೆ ಮಾಡುವುದು.

◆ ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಸಾರ್ವತ್ರಿಕವಾಗಿ ಲಭ್ಯವಾಗುವಂತೆ ಮಾಡುವುದು.

◆ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದು.

◆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವುದು.

◆ ಲಿಂಗ ಸಮಾನತೆ ಹಾಗೂ ಜನಸಂಖ್ಯಾ ಸ್ಥಿರೀಕರಣವನ್ನು ಸಾಧಿಸುವುದು.

◆ ಸ್ಥಳೀಯ ಆರೋಗ್ಯ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸಿ ಆಯುಷ್ ಪದ್ಧತಿಯನ್ನು ಮುಖ್ಯವಾಹಿನಿಗೆ ತರುವುದು.

◆ ಆರೋಗ್ಯಕರ ಜೀವನ ಶೈಲಿಯನ್ನು ಪ್ರೋತ್ಸಾಹಿಸುವುದು.

◆ ಮಲೇರಿಯಾ, ಡೆಂಗ್ಯೂ, ಫೈಲೇರಿಯಾಗಳಿಂದಾಗುವ ಮರಣಗಳನ್ನು ಕಡಿಮೆ ಮಾಡುವುದು.

◆ ಸಮುದಾಯದ ಸಹಭಾಗಿತ್ವದ ಮೂಲಕ ಆರೋಗ್ಯ ಸೇವೆಗಳನ್ನು ಉತ್ತಮ ಪಡಿಸುವುದು. ಈ ಕಾರ್ಯಕ್ರಮವು 2005 ನೇ ಇಸ್ವಿಯಲ್ಲಿ ಉದ್ಘಾಟನೆಗೊಂಡರೂ ಕರ್ನಾಟಕದಲ್ಲಿ ಇದರ ಗಂಭೀರ ಅನುಷ್ಟಾನವು 2007-08 ರಿಂದ ಪ್ರಾರಂಭವಾಯಿತು. 2009 ನೇ ಇಸ್ವಿಯಲ್ಲಿ ನಡೆದ


♠.Coverage Evaluation Survey (CES-2009) ಪ್ರಕಾರ ಕರ್ನಾಟಕದಲ್ಲಿಯ ಸಾಂಸ್ಥಿಕ ಹೆರಿಗೆಯ ಪ್ರಮಾಣವು ಶೇ ೬೫ ರಿಂದ (DLHS-2007-08) ಶೇ 86.7 ಕ್ಕೆ ಹೆಚ್ಚಳಗೊಂಡಿದ್ದು ಕಂಡುಬಂದಿರುತ್ತದೆ.

 ಈ ಅಸಾಧಾರಣ ಪ್ರಗತಿಯನ್ನು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಅಡಿಯಲ್ಲಿ ಕೈಗೊಂಡ ಹಲವು ಕಾರ್ಯಕ್ರಮಗಳಿಂದ ಸಾಧಿಸಲಾಯಿತು.

♠.ಈ ಕಾರ್ಯಕ್ರಮಗಳೆಂದರೆ :
◆ ಆರೋಗ್ಯ ಕವಚ (108 ತುರ್ತು ಅಂಬ್ಯೂಲೆನ್ಸ್ ಸೇವೆಗಳು) :
ಆರೋಗ್ಯಕ್ಕೆ ಸಂಬಂಧಿಸಿದ ತುರ್ತು ಸಂದರ್ಭಗಳಲ್ಲಿ 108 ಉಚಿತ ದೂರವಾಣಿ ಕರೆ ಮಾಡಿದರೆ 20 ನಿಮಿಷಗಳಲ್ಲಿಹಾಜರಾಗುವ ಈ ಅಂಬ್ಯೂಲೆನ್ಸ್ ಸೇವೆಗಳು ಬಹು ಜನಪ್ರಿಯವಾಗಿದೆ. ಪ್ರಸ್ತುತ 517 ಅಂಬ್ಯೂಲೆನ್ಸ್‌ಗಳು ಕಾರ್ಯಾಚರಿಸುತ್ತಿದ್ದು, ಇವು ನೀಡುವ ಸೇವೆಗಳಲ್ಲಿ ಶೇ 42 ಗರ್ಭಿಣಿ ಹಾಗೂ ಹೆರಿಗೆ ಸಂದರ್ಭಗಳಿಗೆ ಸಂಬಂಧಿಸಿವೆ.

◆ ಆಶಾ ಕಾರ್ಯಕ್ರಮ (ಆರೋಗ್ಯ ಕಾರ್ಯಕರ್ತೆಯರು) :
ಸಮುದಾಯದಿಂದ ಆಯ್ಕೆಗೊಂಡ ಮಹಿಳೆಯರನ್ನು ಒಂದು ತಿಂಗಳ ಕಾಲ ತರಬೇತಿ ನೀಡಿ ಆಶಾ ಕಾರ್ಯಕರ್ತೆಯರೆಂದು ಗುರುತಿಸಲಾಗುತ್ತಿದೆ. ಹಾಲಿ ಕರ್ನಾಟಕದಲ್ಲಿ 35,000 ಆಶಾ ಕಾರ್ಯಕರ್ತೆಯರಿದ್ದು, ಇವರು ಆರೋಗ್ಯ ಇಲಾಖೆಯ ಸೇವೆಗಳನ್ನು ಸಮುದಾಯಕ್ಕೆ ತಲುಪಿಸುವುದರಲ್ಲಿ ಮಹತ್ತರ ವಾದ ಪಾತ್ರವನ್ನು
ವಹಿಸಿರುತ್ತಾರೆ.

No comments:

Post a Comment