"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday, 11 January 2015

☀ ಸಾಮಾನ್ಯ ಜ್ಞಾನ (ಭಾಗ - 12) ☀ General Knowledge (Part-12): ♣.. ಪ್ರಚಲಿತ ಘಟನೆಗಳೊಂದಿಗೆ 


☀ ಸಾಮಾನ್ಯ ಜ್ಞಾನ (ಭಾಗ - 12) ☀ General Knowledge (Part-12):
♣.. ಪ್ರಚಲಿತ ಘಟನೆಗಳೊಂದಿಗೆ


501) 2016ರ ಜನವರಿಯಲ್ಲಿ 'ಇಂಡಿಯನ್ ಸೈನ್ಸ್ ಕಾಂಗ್ರೆಸ್'ನ 103ನೇ ಅಧಿವೇಶನ'ವನ್ನು ಯಾವ ನಗರದಲ್ಲಿ ನಡೆಸಲು ನಿರ್ಧರಿಸಲಾಗಿದೆ?
— ಮೈಸೂರು


502) ಇತ್ತೀಚೆಗೆ (2015) ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನಸ್ವೀಕರಿಸಿದವರು ಯಾರು ?
— ಮೈತ್ರಿಪಾಲ ಸಿರಿಸೇನ(63)


503) ಇತ್ತೀಚೆಗೆ (2015) ಶ್ರೀಲಂಕಾದ ನೂತನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡವರು ಯಾರು ?
— ರೆನಿಲ್ ವಿಕ್ರಮ್‌ಸಿಂಘೆ (61) (ವಿರೋಧ ಪಕ್ಷದ ನಾಯಕ)


504) ಭಾರತದಲ್ಲಿ 'ಆಸಿಡ್ ದಾಳಿ ನಿಲ್ಲಿಸಿ' ಅಭಿಯಾನದ ಸಂಚಾಲಕಿ ಯಾರು ?
— ಲಕ್ಷ್ಮಿ.


505) ಭಾರತದ ಪ್ರಥಮ “ಸೀಮೆಎಣ್ಣೆ ಬಳಕೆ ಮುಕ್ತ” ರಾಜ್ಯವಾಗಿ ಈ ಕೆಳಗಿನ ಯಾವ ರಾಜ್ಯ ಘೋಷಣೆ ಮಾಡಿದೆ.?
— ದೆಹಲಿ.


506) 21st Century South Asia " ಪುಸ್ತಕದ ಲೇಖಕರು ಯಾರು?
— ಪ್ರೊ. ಸಂಘಮಿತ್ರ ಸರ್ಕಾರ


507) ಭಾರತವು ಜಗತ್ತಿನ ಶೇ ೧೭ರಷ್ಟು ಜನಸಂಖ್ಯೆ ಹೊಂದಿದೆ. ಆದರೆ ಜಗತ್ತಿನ ಒಟ್ಟು ಭೂಮಿಯ ವಿಸ್ತೀರ್ಣದಲ್ಲಿ ಶೇ ೨.೪ರಷ್ಟು ಮಾತ್ರ ಇಲ್ಲಿದೆ.


508) ಇತ್ತೀಚೆಗೆ ಪ್ರಪಂಚದ ಏಳು ಖಂಡಗಳ ಏಳು ಪರ್ವತಗಳನ್ನು ಯಶಸ್ವಿಯಾಗಿ ಏರಿದ ಮಹಿಳೆ ಯಾರು ಮತ್ತು ಯಾವ ದೇಶದವರು?
—ಸಮಿನಾ ಬೇಗ್ (ಪಾಕಿಸ್ತಾನ)


509) (2014) ಪ್ರಸ್ತುತ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರು ಯಾರು?
— ಶ್ರೀ ಪಿಚ್ಚಳ್ಳಿ ಶ್ರೀನಿವಾಸ್


510) ಬೆಂಕಿ ಆರಿಸುವ ಸಿಲಿಂಡರ್ ನಲ್ಲಿ ಬಳಸುವ "ರಾಸಾಯನಿಕ" ಯಾವುದು.?
— Sodium bicarbonate ಅಥವಾ Pottasium bicarbonate.


511) 'ವಿಶ್ವ ಆಹಾರ ದಿನ' ಯಾವಾಗ ಆಚರಿಸಲಾಗುವುದು?
— ಅಕ್ಟೋಬರ್ 16.


512) 2014 ನೇ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿಯನ್ನು ಪಡೆದವರು ಯಾರು?
— ರಿಚರ್ಡ್ ಪ್ಲಾನಗಾನ್ (ಆಸ್ಟ್ರೇಲಿಯಾ).


513) ವಿಶ್ವದ ಅತ್ಯಂತ ದೊಡ್ಡ ಪ್ರಯಾಣಿಕರ ಹಡಗು ಯಾವುದು.?
— ಓಯಸಿಸ್ ಆಫ್ ದಿ ಸೀಸ್.


514) ಇತ್ತೀಚೆಗೆ (2014) ಹಾಕಿ ತಂಡದ ಅಧ್ಯಕ್ಷರಾಗಿ ಆಯ್ಕೆಯಾದವರು ಯಾರು?
— ನರೀಂದರ್ ಭಾತ್ರಾ.


515) 'ವಿಶ್ವ ಮಾನಸಿಕ ಆರೋಗ್ಯ ದಿನ' ಯಾವಾಗ ಆಚರಿಸಲಾಗುವುದು?
— ಅಕ್ಟೋಬರ್ 10.


516) (2014) ಇತ್ತೀಚೆಗೆ UNICEF ನ 'ಪೌಷ್ಟಿಕಾಂಶ ಪ್ರಚಾರಕ್ಕಾಗಿ' ದಕ್ಷಿಣ ಏಷ್ಯಾದ ರಾಯಭಾರಿಯಾಗಿ ಆಯ್ಕೆಯಾದ ಭಾರತೀಯ ಯಾರು?
— ನಟ ಅಮೀರ್ ಖಾನ್.


517) ಯೆಮನ್‌ ದೇಶದ ರಾಜಧಾನಿ ಯಾವುದು.?
- ಸಾನಾ


518) ಭಾರತ ರತ್ನ ಪ್ರಶಸ್ತಿ ಇಬ್ಬರು ವಿದೇಶಿಗರು ಯಾರು?
— ನೆಲ್ಸನ್ ಮಂಡೇಲಾ ಮತ್ತು ಅಬ್ದುಲ್ ಗಫಾರ್ ಖಾನ್.


519) ವಿದ್ಯುಚ್ಛಕ್ತಿ ಪ್ರವಹನ ಪರಿಮಾಣವನ್ನು ಅಳೆಯುವ ಸಾಧನ?
— ವೋಲ್ಟಾಮೀಟರ್


520) 2013ರ 'ಪುಟ್ಟಣ್ಣ ಕಣಗಾಲ್ ಪ್ರಶಸ್ತಿ' ಗೆ ಯಾರು ಆಯ್ಕೆಯಾಗಿದ್ದಾರೆ?
— C. ಪಿ. ಎಚ್. ವಿಶ್ವನಾಥ್


521)'ಮೇರಾ ಖಾತಾ - ಭಾಗ್ಯವಿಧಾತಾ' ಘೋಷ ವಾಕ್ಯ ಯಾವ ಯೋಜನೆಗೆ ಸಂಬಂಧಿಸಿದ್ದಾಗಿದೆ?
— ಪ್ರಧಾನಮಂತ್ರಿ ಜನ-ಧನ ಯೋಜನೆ.


522) ಟ್ರಾನ್ಸ್ ಫರೆನ್ಸಿ ಇಂಟರ್ ನ್ಯಾಷನಲ್ ಇತ್ತೀಚೆಗೆ ಹೊರತಂದಿರುವ ಮಾಹಿತಿಯಲ್ಲಿ ಭಾರತ ಭ್ರಷ್ಟಾಚಾರದಲ್ಲಿ 94 ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಸಮೀಕ್ಷೆಯ ಪ್ರಕಾರ ಭ್ರಷ್ಟಾಚಾರ ಶೂನ್ಯ ರಾಷ್ಟ್ರಗಳು ಯಾವುವು?
— ಡೆನ್ಮಾರ್ಕ್ ಮತ್ತು ನ್ಯೂಜಿಲ್ಯಾಂಡ್.


523) ಜಮ್ಮು ಮತ್ತು ಕಾಶ್ಮೀರದಲ್ಲಿ 1977ರಿಂದ ಈವರೆಗೆ (2015) ಏಷ್ಟು ಬಾರಿ ರಾಜ್ಯಪಾಲರ ಆಡಳಿತವನ್ನು ಜಾರಿಗೊಳಿಸಲಾಗಿದೆ?
— ಆರನೇ ಬಾರಿ.


524) ಪ್ರಸ್ತುತ (2015) ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಯಾರು?
— ಎನ್‌.ಎನ್‌. ವೋಹ್ರಾ.


525) ಇತ್ತೀಚೆಗೆ ಬಾಲಕಾರ್ಮಿಕತೆಯನ್ನು ಕಾನೂನುಬದ್ಧಗೊಳಿಸಿದ ರಾಷ್ಟ್ರ ಯಾವುದು?
— ಬೊಲೊವಿಯಾ.


526) ವಿಯೆನ್ನಾ ಯಾವ ದೇಶದ ರಾಜಧಾನಿ ?
— ಆಸ್ಟ್ರಿಯ


527) ಇತ್ತೀಚೆಗೆ (2015) ಕೇಂದ್ರ ಸರ್ಕಾರ 'ವಿಶ್ವ ಶಾಂತಿ ಪಾಲನಾ ಪಡೆ'ಗಳಿಗೆ ಅತ್ಯಗತ್ಯ ನೆರವು ನೀಡುವ ವಿಭಾಗದ ಮುಖ್ಯಸ್ಥರನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ?
— ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿ ಅತುಲ್‌ ಖರೆ


528) ಗಾಂಧೀಜಿಯ ಹೋರಾಟದ ಉದ್ಘಾಟನೆಯಾದದ್ದು 1917ರಲ್ಲಿ ಆರಂಭವಾದ ‘ಭಾರತದ ಮೊದಲ ಅಹಿಂಸಾತ್ಮಕ ಮುಷ್ಕರ’ ಬಿಹಾರದ ಚಂಪಾರಣ್‌ನ ಕೃಷಿಕರ ಕಷ್ಟಕ್ಕೆ ಸ್ಪಂದಿಸುವುದರೊಂದಿಗೆ.


529) ಯಾವ ಸಂಸ್ಥೆಯು ಇತ್ತೀಚೆಗೆ 'ನವರತ್ನ' ಸ್ಥಾನಮಾನ ಪಡೆದುಕೊಂಡಿತು?
— CONCOR.


530) ಇತ್ತೀಚೆಗೆ 41 ನೇ ಚೆಸ್ ಒಲಂಪಿಯಾಡ್ ನಡೆದದ್ದು ಯವ ದೇಶದಲ್ಲಿ,?
— ನಾರ್ವೆ

To be continued....

4 comments: