"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday, 19 January 2015

ಸಾರ್ಕ್‌ನ ಮುಖ್ಯ ಉದ್ದೇಶಗಳು, ಮತ್ತು ಅದರ ಸಚಿವಾಲಯದ ಕಾರ್ಯಗಳು ಯಾವವು? ಸಾರ್ಕ್ ಕಾರ್ಯಪಡೆಗಳಾವುವು?

☀ ಸಾರ್ಕ್‌ನ ಮುಖ್ಯ ಉದ್ದೇಶಗಳಾವವು?
(What are the main objectives of SAARC?)


♠.ದಕ್ಷಿಣ ಏಶಿಯಾ ಜನತೆಯ ಕಲ್ಯಾಣಾಭಿವೃದ್ಧಿ ಮೂಲಕ ಜನಜೀವನ ಮಟ್ಟ ಉತ್ತಮ ಪಡಿಸುವುದು.
* ಈ ವಲಯದಲ್ಲಿ ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಪ್ರಗತಿ ಸಾಂಸ್ಕೃತಿಕ ಉನ್ನತಿ ವರ್ಧಿಸುವುದು ಮತ್ತು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಾಮರ್ಥ್ಯವನ್ನು ಅರಿತು, ಗೌರವಯುತ ಬಾಳ್ವೆ ನಡೆಸಲು ಅವಕಾಶ ಕಲ್ಪಿಸುವುದು.
* ದಕ್ಷಿಣ ಏಶಿಯಾ ದೇಶಗಳ ನಡುವೆ ಒಟ್ಟಾರೆ ಸ್ವಾವಲಂಬನೆ ಬಲಪಡಿಸುವುದು.
* ಪರಸ್ಪರ ನಂಬಿಕೆಗಳನ್ನು ಗೌರವಿಸಿ, ಇತರರ ಸಮಸ್ಯೆಗಳನ್ನು ಅರಿತು ನಿವಾರಣೆಗೆ ನೆರವಾಗುವುದು.
* ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ತಾಂತ್ರಿಕ ಮತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ಪರಸ್ಪರ ಸಕ್ರಿಯ ಸಹಯೋಗ, ಸಹಕಾರ ಹೆಚ್ಚಿಸುವುದು.
* ಅಭಿವೃದ್ಧಿ ಹೊಂದುತ್ತಿರುವುದು ಇತರ ದೇಶಗಳ ಜತೆಗಿನ ಸಹಕಾರ ಹೆಚ್ಚಿಸುವುದು.
* ಸಾಮಾನ್ಯ ಹಿತಾಸಕ್ತಿ ವಿಚಾರಗಳ ಬಗ್ಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ದೇಶಗಳ
ನಡುವಿನ ಸಹಕಾರ ವರ್ಧಿಸುವುದು.
* ಇಂತಹದೇ ಧ್ಯೇಯೋದ್ಧೇಶಗಳನ್ನು ಹೊಂದಿದ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ
ಸಂಘಟನೆಗಳ ಜತೆ ಸಹಕಾರ ಹೊಂದುವುದು.



☀ ಸಾರ್ಕ್ ಸಚಿವಾಲಯದ ಕಾರ್ಯಗಳೇನು?
(What are the functions of the Ministry of SAARC ?)

♠.ಸಾರ್ಕ್ ಸಚಿವಾಲಯ ನೇಪಾಳದ ಕಠ್ಮಂಡುವಿನಲ್ಲಿದೆ.

♠.ಇದು ಸಾರ್ಕ್ ದೇಶಗಳ ನಡುವೆ ಹಾಗೂ ಇತರ ವಲಯಗಳ ನಡುವೆ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸುತ್ತದೆ.
♠.ಸಾರ್ಕ್‌ನ ಚಟುವಟಿಕೆ ಹಾಗೂ ಅವುಗಳ ಅನುಷ್ಠಾನಗಳ ಬಗೆಗಿನ ಉಸ್ತುವಾರಿಯಲ್ಲಿ
ಸಹಕಾರ ಸಹಯೋಗ ನೀಡುತ್ತದೆ.

♠.ಸಚಿವಾಲಯಕ್ಕೆ ಮಹಾಕಾರ್ಯ ದರ್ಶಿಗಳೇ ಮುಖ್ಯಸ್ಥರು.
♠.ಸದಸ್ಯ ರಾಷ್ಟ್ರಗಳ ಸಚಿವರ ಮಂಡಳಿ ಮೂರು ವರ್ಷಗಳ ಅವಧಿಗಾಗಿ ಮಹಾ ಕಾರ್ಯದರ್ಶಿಯನ್ನು ನೇಮಕ ಮಾಡುತ್ತದೆ.
♠.ಡಿಸೆಂಬರ್ 8ನ್ನು "ಸಾರ್ಕ್ ಸನ್ನದು ದಿನ"ವನ್ನಾಗಿ ಆಚರಿಸಲಾಗುತ್ತದೆ.

♠.ಪ್ರಸ್ತುತ ಸಾರ್ಕ್ ನ ಮಹಾಕಾರ್ಯದರ್ಶಿ: ಅರ್ಜುನ್ ಬಹದ್ದೂರ್ ಥಾಪಾ (1 March 2014 ರಿಂದ (ಪ್ರಸ್ತುತ)



☀ ಸಾರ್ಕ್ ಕಾರ್ಯಪಡೆಗಳಾವುವು?
(What are the functions of SAARC Task Forces?)

♠.ಆಯಾ ಕಾರ್ಯಪಡೆಗಳು, ನಿರ್ಧಿಷ್ಟ ಪಡಿಸಿದ ವಲಯದಲ್ಲಿ ಕಾರ್ಯಕ್ರಮಗಳನ್ನು
ರೂಪಿಸಿ ಸಾರ್ಕ್ ಚೌಕಟ್ಟಿನಲ್ಲಿ ಅವು ಅನುಷ್ಠಾನಗೊಳ್ಳುವಂತೆ ನಿಗಾ ವಹಿಸುತ್ತವೆ.
ಕಾರ್ಯಕ್ರಮಗಳ ಮೌಲ್ಯಮಾಪನವನ್ನು ಮಾಡುತ್ತವೆ

♠.ವಿವಿಧ ವಲಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಯ ಪಡೆಗಳ ವಿವರ ಈ ಮುಂದಿನಂತಿದೆ.
♠.- ಜೈವಿಕ ತಂತ್ರಜ್ಞಾನ ಕಾರ್ಯಪಡೆ
♠.- ಇಂಧನ ಕಾರ್ಯಪಡೆ
♠.- ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕಾರ್ಯಪಡೆ
♠.- ಪ್ರವಾಸೋದ್ಯಮ ಕಾರ್ಯಪಡೆ



☀ ಸಾರ್ಕ್‌ನ ಪ್ರಾದೇಶಿಕ ಕೇಂದ್ರಗಳಾವುವು?
(What are the SAARC's regional centers?

♠.ಸಾರ್ಕ್ ಸಚಿವಾಲಯವು ಪ್ರಾದೇಶಿಕ ಸಹಕಾರಕ್ಕಾಗಿ ಸದಸ್ಯ ರಾಷ್ಟ್ರಗಳಲ್ಲ್ಲಿ ಪ್ರಾದೇಶಿಕ
ಕೇಂದ್ರಗಳನ್ನು ಹೊಂದಿದೆ.

♠.ಈ ಕೇಂದ್ರಗಳು ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಸಾರ್ಕ್ ಮಹಾ ಕಾರ್ಯದರ್ಶಿ, ಆತಿಥೇಯ ಸರ್ಕಾರದ ವಿದೇಶಾಂಗ ಸಚಿವಾಲಯದ ಪ್ರತಿನಿಧಿಗಳು ಇರುವ ಆಡಳಿತ ಮಂಡಳಿಯಿಂದ ನಿರ್ವಹಿಸಲ್ಪಡುತ್ತವೆ.

♠.- ಸಾರ್ಕ್ ಕೃಷಿ ಕೇಂದ್ರ ಇರುವ ಸ್ಥಳ (SAARC Agricultural Centre (SAC)) : ಢಾಕಾ.

♠.- ಸಾರ್ಕ್‌ಹವಾಮಾನ ಸಂಶೋಧನಾ ಕೇಂದ್ರ ಇರುವ ಸ್ಥಳ (SAARC Meteorological Research Centre (SMRC)): ಢಾಕಾ.

♠.- ಸಾರ್ಕ್ ಟಿಬಿ ನಿರ್ವಹಣ ಕೇಂದ್ರ ಇರುವ ಸ್ಥಳ (SAARC Tuberculosis and HIV/AIDS Centre (STAC)) : ಕಠ್ಮಂಡು.

♠.- ಸಾರ್ಕ್ ದಾಖಲಾತಿ ಕೇಂದ್ರ ಇರುವ ಸ್ಥಳ (SAARC Documentation Centre (SDC)) : ನವದೆಹಲಿ.

♠.- ಸಾರ್ಕ್ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಇರುವ ಸ್ಥಳ (SAARC Human Resources Development Centre (SHRDC) :
ಇಸ್ಲಾಮಾಬಾದ್.

♠.- ಸಾರ್ಕ್ ಕರಾವಳಿ ವಲಯ ನಿರ್ವಹಣಾ ಕೇಂದ್ರ ಇರುವ ಸ್ಥಳ (SAARC Coastal Zone Management Centre (SCZMC)) : ಮಾಲ್ಡೀವ್ಸ್.

♠.- ಸಾರ್ಕ್ ಮಾಹಿತಿ ಕೇಂದ್ರ ಇರುವ ಸ್ಥಳ (SAARC Information Centre (SIC)) : ನೇಪಾಳ.

♠.- ಸಾರ್ಕ್ ಇಂಧನ ಕೇಂದ್ರ ಇರುವ ಸ್ಥಳ (SAARC Energy Centre (SEC))
: ಪಾಕಿಸ್ತಾನ.

♠.- ಸಾರ್ಕ್ ಪ್ರಕೋಪ/ದುರಂತ ನಿರ್ವಹಣಾ ಕೇಂದ್ರ ಇರುವ ಸ್ಥಳ (SAARC Disaster Management Centre (SDMC)) : ಭಾರತ.

♠.- ಸಾರ್ಕ್ ಅರಣ್ಯಾಭಿವೃದ್ಧಿ ಕೇಂದ್ರ ಇರುವ ಸ್ಥಳ (SAARC Forestry Centre (SFC)) : ಭೂತಾನ್.

♠.- ಸಾರ್ಕ್ ಸಾಂಸ್ಕೃತಿಕ ಕೇಂದ್ರ ಇರುವ ಸ್ಥಳ (SAARC Cultural Centre (SCC)) : ಶ್ರೀಲಂಕಾ.

No comments:

Post a Comment