"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 28 May 2016

☀ ಕೆಪಿಎಸ್‌ಸಿ (ಕೆಎಎಸ್) ಸಂದರ್ಶನ ತಯಾರಿಗಾಗಿ ತಜ್ಞರು ನೀಡಿರುವ ಸಲಹೆಗಳು. (KPSC (KAS) Interview Preparation Guidelines, suggestions)

☀ ಕೆಪಿಎಸ್‌ಸಿ (ಕೆಎಎಸ್) ಸಂದರ್ಶನ ತಯಾರಿಗಾಗಿ ತಜ್ಞರು ನೀಡಿರುವ ಸಲಹೆಗಳು.
(KPSC (KAS) Interview Preparation Guidelines, suggestions)
━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ / ಕೆಎಎಸ್ ಸಂದರ್ಶನ ತಯಾರಿ.
(IAS-KAS interview Preparation)


ಕರ್ನಾಟಕ ಲೋಕಸೇವಾ ಆಯೋಗ ಕೆಎಎಸ್‌ ಹುದ್ದೆಗಳಿಗೆ ಸದ್ಯದಲ್ಲೇ ಸಂದರ್ಶನ ನಡೆಸಲಿದೆ. ಈ ಸಂದರ್ಶನಕ್ಕೆ ತಯಾರಿ ಹೇಗಿರಬೇಕೆಂಬ ಕುರಿತು ತಜ್ಞರು ನೀಡಿರುವ ಸಲಹೆ ಇಲ್ಲಿದೆ.

ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟೆಡ್‌ ಪ್ರೊಬೆಷನರ್ಸ್‌ಗಳ ನೇಮಕಕ್ಕೆ ಸಂಬಂಧಿಸಿದಂತೆ ಸದ್ಯವೇ ಸಂದರ್ಶನ ನಡೆಸುವುದಾಗಿ ಪ್ರಕಟಿಸಿದೆ. ಈಗಾಗಲೇ ನಿಮಗೆ ತಿಳಿದಿರುವಂತೆ ಸಂದರ್ಶನದಲ್ಲಿ ಮತ್ತು ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಸೇರಿಸಿ ಮೆರಿಟ್‌ ಲಿಸ್ಟ್‌ ಪ್ರಕಟಿಸಲಾಗುತ್ತದೆ. ಹೀಗಾಗಿ ಸಂದರ್ಶನಕ್ಕೆ ಸಾಕಷ್ಟು ಸಿದ್ಧತೆ ನಡೆಸಿಯೇ ಹೋಗಬೇಕು. ಕಳೆದ ವಾರ ಯಶಸ್ವಿ ಸಂದರ್ಶನಗಳು ಏನೇನು, ಸಂದರ್ಶನದಲ್ಲಿ ಯಾವೆಲ್ಲಾ ಸಾಮರ್ಥ್ಯ‌ವನ್ನು ಅಳೆಯಲಾಗುತ್ತದೆ, ಸಂದರ್ಶನದ ದಿನ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು, ಸಂದರ್ಶನ ಕೊಠಡಿಯಲ್ಲಿ ನಿಮ್ಮ ವರ್ತನೆ ಹೇಗಿರಬೇಕೆಂಬುದನ್ನು ತಿಳಿದುಕೊಂಡಿದ್ದೀರಿ, ಇಂದು ಸಂದರ್ಶನದ ಇನ್ನಷ್ಟು ವಿಷಗಳನ್ನು ತಿಳಿದುಕೊಳ್ಳೋಣ.


●.ಸಂದರ್ಶನದ ಪ್ರಶ್ನೆಗಳಿಗೆ ಉತ್ತರಿಸುವಾಗ ವಹಿಸಬೇಕಾದ ಎಚ್ಚರಿಕೆಗಳು :
━━━━━━━━━━━━━━━━━━━━━━━━━━━━━━━━━━━━━━━━━━━━━

•►ಸಂದರ್ಶಕರು ಕೇಳುವ ಪ್ರಶ್ನೆಗಳನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಬೇಕು. ಸ್ಪಷ್ಟವಾಗಿ ಕೇಳಿಸಿಕೊಳ್ಳದಿದ್ದಾಗ, ನಮ್ಮ ಉತ್ತರಗಳು ತಪ್ಪಾಗಿರುತ್ತವೆ.

•►ಸಂದರ್ಶಕರು ಕೇಳಿದ ಪ್ರಶ್ನೆ ನಮಗೆ ಸರಿಯಾಗಿ ಅರ್ಥವಾಗದಿದ್ದರೆ. ಇನ್ನೊಮ್ಮೆ ಕೇಳಬೇಕೆಂದು ವಿನಂತಿಮಾಡಿಕೊಳ್ಳಿ.

•►ಒರಟಾಗಿ ಉತ್ತರಿಸಬಾರದು. ಅನಾವಶ್ಯಕವಾಗಿ ನಗು ಇರಬಾರದು.

•►ಯಾವ ಸಂದರ್ಶಕರು ಪ್ರಶ್ನೆ ಕೇಳುತ್ತಾರೋ ಅವರ ಕಡೆಗೆ ಮುಖಮಾಡಿ ಉತ್ತರಿಸಿ.

•►ಉತ್ತರ ನೀಡುವಾಗ, ನೆಲ ನೋಡುತ್ತಾ, ಕಿಡಕಿ ನೋಡುತ್ತಾ, ಫ್ಯಾನ್‌ ನೋಡುತ್ತಾ, ಉತ್ತರಿಸಬಾರದು.

•►ನಮ್ಮ ತಪ್ಪುಗಳನ್ನು ಸಂದರ್ಶಕರು ಎತ್ತಿ ತೋರಿಸಿದಾಗ, ಅದನ್ನು ಮನಃಪೂರ್ವಕವಾಗಿ ಒಪ್ಪಿಕೊಂಡು ಬಿಡಿ.

•►ವಿಚಾರ ಮಾಡಿ ಉತ್ತರ ನೀಡಿ. ಅವಸರದಲ್ಲಿ ತಪ್ಪು ಉತ್ತರ ನೀಡಿ. ನಂತರ ಕ್ಷಮೆ ಕೇಳುವುದು ಸೂಕ್ತವಲ್ಲ. ಅವರ ಕೇಳಿದ ಪ್ರಶ್ನೆಗೆ ನಿಮಗೆ ಉತ್ತರ ಗೊತ್ತಿರದಿದ್ದರೆ, ಕ್ಷಮಿಸಿ ನನಗೆ ಗೊತ್ತಿಲ್ಲವೆಂದು ಸ್ಪಷ್ಟವಾಗಿ ಹೇಳಿ. ಅದು ಬಿಟ್ಟು ಉತ್ತರ ಗೊತ್ತಿರದಿದ್ದಾಗ, ಬಾಯಿ ಮುಚ್ಚಿಕೊಂಡು ಸುಮ್ಮನೆ ಕುಳಿತುಕೊಳ್ಳುವುದು ಒಳ್ಳೇಯದಲ್ಲ.

•►ಸಂದರ್ಶಕರರ ಬಗೆಗೆ ಗೌರವ ಇರಲಿ. ಇವರಿಗೇನು ಗೊತ್ತು ಎಂದು ತಪ್ಪು ಉತ್ತರ ನೀಡುವದರ ಮೂಲಕ ಅವರನ್ನು ಮೋಸಗೊಳಿಸುವ ಪ್ರಯತ್ನ ಮಾಡಬೇಡಿ.

•►ಉತ್ತರ ಹೇಳುವಾಗ ಅಹಂ ಪ್ರದರ್ಶನ ಮಾಡಬೇಡಿ. ಸರಳತೆ ಇರಲಿ.

•►ಉತ್ತರಿಸುವಾಗ ಸ್ಪಷ್ಟತೆ ಇರಲಿ, ಬಾಯಿಯಲ್ಲಿ ಗೊಣಗಬೇಡಿ.

•►ಕೆಲವೊಮ್ಮೆ ಸಂದರ್ಶಕರು ಉದ್ದೇಶಪೂರ್ವಕವಾಗಿ ನಿಮ್ಮನ್ನು ಕೆರಳಿಸುವ ಪ್ರಯತ್ನ ಮಾಡುತ್ತಾರೆ. ಆದರೆ, ನೀವು ಯಾವುದೇ ಕಾರಣಕ್ಕೂ ಸಹನೆ ಕಳೆದುಕೊಳ್ಳಬೇಡಿ.

•►ನಿಮ್ಮ ಉಚ್ಛಾರಣೆ ಅತೀ ದೊಡ್ಡದಿರಬಾರದು/ಚಿಕ್ಕದಾಗಿಯೂ ಇರಬಾರದು.

•►ನೀವು ಉತ್ತರ ನೀಡುವಾಗ ಜಾತಿ, ಧರ್ಮ, ಪ್ರದೇಶ, ವೈಯಕ್ತಿಕ ಮಟ್ಟದ ಟೀಕೆ ಇರಬಾರದು.

•►ನಿಮ್ಮ ಉತ್ತರಗಳಲ್ಲಿ ಪ್ರಾಮಾಣಿಕತನ ಇರಲಿ ಹಾಗೂ ದೈಹಿಕ ಅಂಗಾಂಗಗಳ ಚಲನೆ ನಿಯಂತ್ರಣದಲ್ಲಿರಲಿ. ಸಂದರ್ಶಕರ ಕಡೆ ಕೈಮಾಡಿ ಉತ್ತರಿಸುವುದು ಸೂಕ್ತವಲ್ಲ.

•►ಸಂದರ್ಶಕರ ಎದುರಿನಲ್ಲಿ ಕಣ್ಣೀರು ಹಾಕುವುದು, ನಾಟಕೀಯ ವರ್ತನೆ ಮಾಡುವುದು ಹಾಗೂ ನಿಮ್ಮ ಅಸಹಾಯಕತೆಯನ್ನು ಪ್ರದರ್ಶನ ಮಾಡುವುದು ಬೇಡ.

•►ಗಮನಿಸಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡಬೇಕೆಂಬ ಹುಚ್ಚು ಕಲ್ಪನೆ ಬೇಡ. ಒಂದೇ ಪ್ರಶ್ನೆಯಾದರೂ ಸಮರ್ಪಕವಾಗಿ ಹಾಗೂ ಆತ್ಮವಿಶ್ವಾಸದಿಂದ ಉತ್ತರಿಸಿರಿ.

•►ಸಂದರ್ಶನ ಮುಗಿಸಿ ಹೊರಗೆ ಬರುವಾಗ, ಎಲ್ಲರಿಗೂ ನಗು ಮುಖದಿಂದ ಧನ್ಯವಾದಗಳನ್ನು ಹೇಳಿ ಹೊರಗೆ ಬನ್ನಿ.


●.ಸಂದರ್ಶನದಲ್ಲಿ ಆಯ್ಕೆಯಾಗದಿರಲು ಕಾರಣಗಳು :
━━━━━━━━━━━━━━━━━━━━━━━━━━━━

•► ಸರಿಯಾದ ವ್ಯಕ್ತಿತ್ವ ಪ್ರದರ್ಶನ ಮಾಡುವದರಲ್ಲಿ ವಿಫಲ.
•► ನಕಾರಾತ್ಮಕ ವರ್ತನೆಗಳ ಪ್ರದರ್ಶನ.
•► ಆಸಕ್ತಿ ಹಾಗೂ ಉತ್ಸಾಹದ ಕೊರತೆ.
•► ಹುದ್ದೆಗೆ ಸಂಬಂಧಪಟ್ಟಂತೆ ಸರಿಯಾದ ಪೂರ್ವ ತಯಾರಿ ಇಲ್ಲದ್ದು.
•► ಸಾಮಾನ್ಯ ಜ್ಞಾನದ ಬಗೆಗೆ ಮಾಹಿತಿ ಕೊರತೆ.
•► ಸಂದರ್ಶಕರ ಮೇಲೆ ಹಣ, ವಸ್ತು, ಅಧಿಕಾರ ಪ್ರಭಾವ ಬಳಸಿದ್ದು.


●.ಸಂದರ್ಶನದಲ್ಲಿ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು :
━━━━━━━━━━━━━━━━━━━━━━━━━━━━━━

ರಾಜ್ಯದಲ್ಲಿ ಇದುವರೆಗೆ ನಡೆದಿರುವ ಕೆಎಎಸ್‌ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳು ಈ ಕೆಳಗಿನ ವಿಷಯಗಳಗೆ ಸಂಬಂಧಪಟ್ಟವಾಗಿವೆ.

1) ಸ್ವ-ವಿವರ ಬಗೆಗಿನ ಪ್ರಶ್ನೆಗಳು
2) ಅಭ್ಯರ್ಥಿಯ ಜಿಲ್ಲೆಗೆ ಸಂಬಂಧಪಟ್ಟಿರುವ ವಿಷಯದ ಬಗ್ಗೆ.
3) ಶೈಕ್ಷಣಿಕ ಬಗೆಗೆ ಹಾಗೂ ವಿಷಯಗಳ ಬಗೆಗೆ.
4) ನೇಮಕಗೊಳ್ಳುವ ಇಲಾಖೆಗೆ ಸಂಬಂಧಪಟ್ಟಂತೆ.
5) ಪ್ರಚಲಿತ ವಿಷಯಗಳು.
6) ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟಿದ್ದು.
7) ತಾರ್ಕಿಕ ಪ್ರಶ್ನೆಗಳು
8) ಇತರ ವಿಷಯಗಳು.


●.1) ಸ್ವ-ವಿವರ ಬಗೆಗಿನ ಪ್ರಶ್ನೆಗಳು
━━━━━━━━━━━━━━━━━━━━━

1) ನಿಮ್ಮ ಹೆಸರಿನ ಮಹತ್ವ
2) ನಿಮ್ಮ ಹುಟ್ಟಿದ ದಿನಾಂಕದ ವಿಶೇಷತೆ
3) ನಿಮ್ಮ ತಂದೆ-ತಾಯಿಯ ಬಗ್ಗೆ.
4) ಹವ್ಯಾಸಗಳ ಬಗ್ಗೆ.
5) ನಿಮ್ಮ ಮೆಚ್ಚಿನ ನಾಯಕ.
6) ನಿನಗೆ ಇಷ್ಟವಿರುವ ಸ್ಥಳ.
7) ನೀವು ಯಾವ ದಿನಪತ್ರಿಕೆ ಓದುತ್ತೀರಿ.


●.2) ಜಿಲ್ಲಾ ವಿಶೇಷತೆ ಪ್ರಶ್ನೆಗಳು: (ಯಾವ ಜಿಲ್ಲೆಗೆ ಸೇರಿದವರಾಗಿರುತ್ತಾರೋ ಆ ಜಿಲ್ಲೆ ಬಗ್ಗೆ)
━━━━━━━━━━━━━━━━━━━━━━━━━━━━━━━━━━━━━━━━━━━━━

1) ಜಿಲ್ಲೆಯ ರಾಜಕೀಯ ನಾಯಕರು.
2) ಖನಿಜ ಸಂಪನ್ಮೂಲ, ಸ್ಥಾನ, ಬೆಳೆ, ಕೈಗಾರಿಕೆ, ನೀರಾವರಿ.
3) ಜಿಲ್ಲೆಯ ಧಾರ್ಮಿಕ ಸ್ಥಳಗಳ ಮಹತ್ವ ಹಾಗೂ ಸ್ಮಾರಕಗಳ ಬಗೆಗಿನ ಮಾಹಿತಿ.
4) ಜಿಲ್ಲೆಯ ಇತಿಹಾಸ, ಪ್ರಸಿದ್ಧ ಅರಸರು, ನಾಯಕರು, ಚಳುವಳಿಕಾರರು, ರಾಜಮನೆತನಗಳು.
5) ಜಿಲ್ಲಾ ಪ್ರಚಲಿತ ವಿಷಯಗಳು.
6) ಜಿಲ್ಲಾ ಸಾಹಿತಿಗಳು, ಅವರ ಕೃತಿಗಳು.
7) ಜಿಲ್ಲೆಯ ಪ್ರಮುಖರು ನಾಯಕರು ಮತ್ತು ಅವರ ಸಾಧನೆ.
8) ಶಿಕ್ಷಣ ಹಾಗೂ ಆರ್ಥಿಕ ಅಂಶಗಳು.


●.3) ವಿದ್ಯಾರ್ಹತೆ ಮತ್ತು ಶೈಕ್ಷಣಿಕ.
━━━━━━━━━━━━━━━━━━━━

1) ಓದಿದ ಶಾಲೆ ಹಾಗೂ ಕಾಲೇಜಿನ ಮಾಹಿತಿ.
2) ನೀವು ಮಾಡಿದ ಕೋರ್ಸ್‌ಗಳ ಬಗ್ಗೆ,
3) ಇಷ್ಟವಾದ ವಿಷಯಗಳು ಯಾವವು.
4) ನೀನು ಇಷ್ಟಪಡುವ ವಿಷಯದಲ್ಲಿನ ಜ್ಞಾನವನ್ನು ಪರೀಕ್ಷಿಸುವುದು.


●.4) ಪ್ರಚಲಿತ ವಿಷಯಗಳು :ಕಳೆದ ಮೂರು ನಾಲ್ಕು ತಿಂಗಳಲ್ಲಿ ಮಾಹಿತಿ.
━━━━━━━━━━━━━━━━━━━━━━━━━━━━━━━━━━━━━━━

1) ರಾಜ್ಯದಲ್ಲಿನ ಪ್ರಚಲಿತ ವಿಷಯಗಳು
2) ರಾಷ್ಟ್ರದಲ್ಲಿನ ಪ್ರಚಲಿತ ವಿಷಯಗಳು
3) ಅಂತರರಾಷ್ಟ್ರೀಯ ಪ್ರಚಲಿತವನ್ನು ನೋಡಿಕೊಳ್ಳಬೇಕು.


●.5) ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟಿದ್ದು
━━━━━━━━━━━━━━━━━━━━━━━━━

1) ಭಾರತೀಯ ಇತಿಹಾಸ
2) ಭಾರತ ಭೂಗೋಳ
3) ವಿಜ್ಞಾನ ತಂತ್ರಜ್ಞಾನ
4) ಕರ್ನಾಟಕ ಇತಿಹಾಸ
5) ಕರ್ನಾಟಕ ಭೂಗೋಳ
6) ಸಂವಿಧಾನ ಮತ್ತು ರಾಜಕೀಯ
7) ಪರಿಸರ ಮತ್ತು ಜೈವಿಕ ವೈವಿಧ್ಯತೆ


●.6) ತಾರ್ಕಿಕ ಪ್ರಶ್ನೆಗಳು :
━━━━━━━━━━━━━━━

1) ನಿನಗೆ ಲಂಚಕ್ಕೆ ಒತ್ತಾಯ ಮಾಡಿದಾಗ ನೀನು ಏನು ಮಾಡುತ್ತಿಯಾ?
2) ನೀನು ಮಾಡದ ತಪ್ಪಿಗೆ, ನಿನ್ನನ್ನು ಗುರಿಯಾಗಿಸಿದಾಗ, ನೀನು ಏನು ಮಾಡುತ್ತೀಯಾ?
3) ರಾಜಕೀಯ ಹಸ್ತಕ್ಷೇಪ ಪದೇ ಪದೇ ನಡೆದಾಗ ನೀನು ಏನು ಮಾಡುತ್ತಿ ?
4) ತಪ್ಪು ನಿರ್ಧಾರ ಕೈಗೊಂಡಾಗ, ಆಗ ನಿನ್ನ ಪ್ರತಿಕ್ರಿಯೆ ?
5) ನಿನ್ನ ಕೈ ಕೆಳಗಿನ ಅಧಿಕಾರಿಗಳು ನಿನ್ನ ವರ್ಗಾವಣೆಗೆ ಮುಷ್ಕರ ಮಾಡಿದಾಗ ?
6) ನಿನ್ನ ಆಡಳಿತದ ವೈಫಲ್ಯದ ವಿರುದ್ಧ ಜನರು ಪ್ರತಿಭಟನೆ ಮಾಡಿದಾಗ ?


●.7) ಇತರ ವಿಷಯಗಳು :
━━━━━━━━━━━━━━━

1) ನೀವು ಈ ಹುದ್ದೆಗೆ ಬರಲು ಕಾರಣವೇನು?
2) ಈ ಮುಂಚಿನ ಹುದ್ದೆಯನ್ನು ಬಿಟ್ಟು ಈ ಹುದ್ದೆಗೆ ಬರಲು ಕಾರಣವೇನು?
3) ಸಂಬಳಕ್ಕಾಗಿ ಸೇರುತ್ತೀರೋ? ಸೇವೆಗಾಗಿ ಸೇರುತ್ತೀರೋ?
4) ಮುಖ್ಯ ಪರೀಕ್ಷೆಯಲ್ಲಿ ಈ ವಿಷಯವನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ ?
5) ಈ ಹುದ್ದೆಗೆ ನೀನು ಎಷ್ಟು ಅರ್ಹನು ನಿನ್ನನ್ನು ನಿರೂಪಿಸು.
6) ಡಿಗ್ರಿ ಮುಗಿಸಿ ಇಷ್ಟು ವರ್ಷ ಗ್ಯಾಪ್‌ ಆಗಲು ಕಾರಣವೇನು ?
7) ನಿನ್ನ ಮುಖ್ಯ ಪರೀಕ್ಷೆಯ ರೋಲ್‌ ನಂ. ಯಾವುದು ?
8) ಇಲ್ಲಿ ಬರುವಾಗ ಯಾವ ರೀತಿ ಪ್ರಯಾಣ ಮಾಡಿ ಬಂದಿರುವೆ ?

(Courtesy : ಬಿರಾದಾರ್ ಸರ್. ಚಾಣಕ್ಯ ಕರಿಯರ್ ಅಕಾಡೆಮಿ ವಿಜಯಪುರ -  Vijaya Karnataka)

☀ಯುಪಿಎಸ್’ಸಿ 2015ರ ಸಾಧಕರ ಸಂದರ್ಶನ: ಯುಪಿಎಸ್’ಸಿಯಲ್ಲಿ 48ನೇ ಸ್ಥಾನ ಪಡೆದಿರುವ ಕನ್ನಡಿಗ ದರ್ಶನ್ ಮೊದಲ ಸಂದರ್ಶನ: ಸುವರ್ಣನ್ಯೂಸ್ ವೆಬ್ ಎಕ್ಸ್ ಕ್ಲೂಸಿವ್: (UPSC Exclusive Interview)

☀ಯುಪಿಎಸ್’ಸಿ 2015ರ ಸಾಧಕರ ಸಂದರ್ಶನ:
ಯುಪಿಎಸ್’ಸಿಯಲ್ಲಿ 48ನೇ ಸ್ಥಾನ ಪಡೆದಿರುವ ಕನ್ನಡಿಗ ದರ್ಶನ್ ಮೊದಲ ಸಂದರ್ಶನ: ಸುವರ್ಣನ್ಯೂಸ್ ವೆಬ್ ಎಕ್ಸ್ ಕ್ಲೂಸಿವ್:
(UPSC  Exclusive Interview)
━━━━━━━━━━━━━━━━━━━━━━━━━━━━━━━━━━━━━━━━━━━━━


•► ಕೇಂದ್ರ ಲೋಕ ಸೇವಾ ಆಯೋಗ(ಯುಪಿಎಸ್‌ಸಿ) ನಡೆಸಿದ 2015 ಸಾಲಿನ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ 1,078 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಅದರಲ್ಲಿಯೂ ಈ ಬಾರಿ ಕರ್ನಾಟಕದ 30 ಕ್ಕೂ ಹೆಚ್ಚು ಮಂದಿ ಕೇಂದ್ರ ನಾಗರಿಕ ಸೇವೆಗೆ ಆಯ್ಕೆಯಾಗಿದ್ದು, ದಾವಣಗೆರೆಯ ದರ್ಶನ್ 48 ನೇ ಸ್ಥಾನ ಪಡೆದು ರಾಜ್ಯಕ್ಕೆ ಮೊದಲಿಗರಾಗಿದ್ದಾರೆ.

ವಿಶ್ವಮೂರ್ತಿ ಮತ್ತು ಪದ್ಮ ದಂಪತಿ ಪುತ್ರರಾದ ದರ್ಶನ್ ಮೂಲತಃ ದಾವಣಗೆರೆಯವರಾಗಿದ್ದು ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಹಾಸನದಲ್ಲಿ, ಫ್ರೌಢಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ದಾವಣಗೆರೆಯಲ್ಲಿ ಪೂರೈಸಿ, ಬೆಂಗಳೂರಿಗೆ ಬಂದು ನೆಲೆಸಿದ ಅವರು ಬೆಂಗಳೂರಿನ ಜೆಎಸ್’ಎಸ್ ಐಟಿ ಕಾಲೇಜಿನಲ್ಲಿ ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ಅಂಡ್ ಮ್ಯಾನೆಜ್’ಮೆಂಟ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ತಮ್ಮ ಆಯ್ಕೆಯ ಸಂಭ್ರಮವನ್ನು ಸುವರ್ಣ ನ್ಯೂಸ್-ಕನ್ನಡಪ್ರಭಕ್ಕೆ ನೀಡಿದ ಮೊದಲ ಸಂದರ್ಶನ ಹಂಚಿಕೊಂಡಿದ್ದಾರೆ.


●.ಐಎಎಸ್ ಕನಸು ಶುರುವಾಗಿದ್ದು, ತಯಾರಿ ಪ್ರಾರಂಭಿಸಿದ್ದು ಯಾವಾಗ..?

•► 2011ರಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರದಲ್ಲಿ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆದು ಸಾರ್ವಜನಿಕ ಸೇವೆಯನ್ನು ಮಾಡಬೇಕು ಎನ್ನುವ ಕನಸು ಶುರುವಾಯಿತು. ಅಂದಿನಿಂದಲೇ ಯುಪಿಎಸ್’ಸಿ ಪರೀಕ್ಷೆಗೆ ತಯಾರಿ ಆರಂಭವಾಗಿತ್ತು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ನಡೆದುಕೊಂಡು ಬಂದಿದೆ.


●.ಯುಪಿಎಸ್’ಸಿ ಪರೀಕ್ಷೆಯಲ್ಲಿ ಇದು ಎಷ್ಟನೇ ಪ್ರಯತ್ನ..?

•► 2011ರಿಂದ ಇಲ್ಲಿಯವರೆಗೂ 4 ಬಾರಿ ಪ್ರಯತ್ನ ಮಾಡಿದ್ದೇನೆ. ಈ ಬಾರಿಯ ಪ್ರಯತ್ನದಲ್ಲಿ ಯಶಸ್ಸು ದೊರಕಿದೆ. ಮೊದಲ ಮೂರು ಪ್ರಯತ್ನಗಳಲ್ಲಿ ಪ್ರಿಲಿಮ್ಸ್’ನಲ್ಲಿ ಪಾಸಾಗಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ 48ನೇ ಸ್ಥಾನ ಪಡೆದಿರುವುದು ತುಂಬ ಖುಷಿ ನೀಡಿದೆ. ಯಾವುದೇ ಪ್ರಯತ್ನದಲ್ಲಿ ಸೋಲು ಕಂಡಾಗ ಮತ್ತೆ ಪ್ರಯತ್ನಿಸದಿದ್ದರೆ ಗೆಲುವು ಕಾಣುವುದು ಸಾಧ್ಯವಿಲ್ಲ, ಮತ್ತೆ ಮತ್ತೆ ಪಯತ್ನಿಸಿದರಷ್ಟೇ ಯಶಸ್ಸು ಖಂಡಿತ.


●.ಯುಪಿಎಸ್’ಸಿ ಪರೀಕ್ಷೆಗೆ ತಯಾರಿ ಹೇಗಿತ್ತು..?

•► 2011ರಲ್ಲಿ ಬಿಇ ಪದವಿ ಪಡೆದ ನಂತರದ ಕೋಚಿಂಗ್ ಪಡೆಯುವ ಸಲುವಾಗಿ ದೆಹಲಿಗೆ ತೆರಳಿ ಅಲ್ಲಿ ಒಂದು ವರ್ಷಗಳ ಕಾಲ ತರಬೇತಿ ಪಡೆದು, ನಂತರ ಬೆಂಗಳೂರಿಗೆ ವಾಪಸಾಗಿ ಜಯನಗರದಲ್ಲಿರುವ ಜೆಎಸ್ಎಸ್ ಕೋಚಿಂಗ್ ಸೆಂಟರ್’ನಲ್ಲಿ ಕೆಲದಿನ ತರಬೇತಿ ಪಡೆದಿದ್ದೆ. ಇದಾದ ಬಳಿಕ ಯಾವುದೇ ಕೋಚಿಂಗ್ ಪಡೆಯಲಿಲ್ಲವಾದರೂ ಜೆಎಸ್ಎಸ್ ಕೋಚಿಂಗ್ ಸೆಂಟರ್’ನ ಲೈಬ್ರರಿಯಲ್ಲಿ ಹೆಚ್ಚಿನ ಕಾಲ ಕುಳಿತು ಓದಿದ್ದು ಬಹಳ ಸಹಾಯಕ ಆಯ್ತು. ನಾನೇನು ದಿನ ನಿತ್ಯ ಇಷ್ಟು ಸಮಯವೇ ಓದಬೇಕು ಎಂಬ ನಿಯಮವನ್ನು ಹಾಕಿಕೊಂಡಿರಲಿಲ್ಲ, ಅಲ್ಲದೇ ಕೆಲವು ಬಾರಿ ವಾರಗಟ್ಟಲೆ ಓದದೆಯೂ ಇರುತ್ತಿದ್ದೆ. ಒಟ್ಟಿನಲ್ಲಿ ದಿನಕ್ಕೆ 6 ಗಂಟೆಕಾಲ ಅಭ್ಯಾಸ ಮಾಡಿದರೂ ಸಾಕು. ಪ್ರಿಲಿಮ್ಸ್ ಮತ್ತು ಮೇನ್ಸ್ ಪರೀಕ್ಷೆ ಸಂದರ್ಭದಲ್ಲಿ ಮಾತ್ರ ಹೆಚ್ಚು ಓದಿದೆ, ಸಂದರ್ಶನಕ್ಕೆ ಸಿದ್ದಗೊಳ್ಳುವ ವೇಳೆ ದೆಹಲಿಯ ಕನ್ನಡ ಸಂಘದಿಂದ ಉತ್ತಮ ಸಹಾಯ ಸಿಕ್ಕಿತ್ತು, ಅಲ್ಲಿನ ಅಣಕು ಸಂದರ್ಶನದಿಂದಾಗಿ ಮುಖ್ಯ ಸಂದರ್ಶನದಲ್ಲಿ ಒಳ್ಳೆಯ ಫಲಿತಾಂಶ ಸಿಕ್ಕಿತು.


●.ತಮ್ಮ ಸಾಧನೆಯ ಹಾದಿ ಹೇಗಿತ್ತು, ತಾವು ಎದುರಿಸಿದ್ದ ಸವಾಲುಗಳು ಹೇಗಿತ್ತು.?

•► ನಮ್ಮದು ಮೇಲ್ಮಧ್ಯಮ ವರ್ಗದ ಕುಟುಂಬವಾಗಿದ್ದು, ಪರೀಕ್ಷೆ ತಯಾರಿ ಸಂದರ್ಭದಲ್ಲಿ ಯಾವುದೇ ಹಣಕಾಸಿನ ತೊಂದರೆ ಎದುರಾಗಿಲ್ಲ. ಅಲ್ಲದೇ ನಾನೂ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಹಾಗಾಗಿ ಆರ್ಥಿಕವಾಗಿ ಸವಾಲುಗಳು ಇರಲಿಲ್ಲ, ಆದರೆ ಮಾನಸಿಕವಾಗಿ ಕೆಲವು ತೊಂದರೆಗಳು ಎದುರಾಗುತ್ತಿದ್ದವು, ಸ್ನೇಹಿತರೆಲ್ಲ ಒಳ್ಳೆಯ ಕೆಲಸಕ್ಕೆ ಸೇರಿ ಕೈತುಂಬ ಸಂಪಾದಿಸುತ್ತಿದ್ದ ದಿನಗಳಲ್ಲಿ ಸುಮ್ಮನೆ ಕುಳಿತು ಓದುವುದು ಕಷ್ಟವಾಗುತ್ತಿತ್ತು, ಸಂಬಂಧಿಕರು, ಹಿತೈಷಿಗಳ ಪ್ರಶ್ನೆಗಳಿಂದ ಹೆಚ್ಚು ಇರಿಸು ಮುರಿಸು ಉಂಟಾಗುತ್ತಿತ್ತು. ಇದನ್ನು ಬಿಟ್ಟರೆ ಬೇರೆ ಯಾವುದು ತೊಂದರೆ ಅನ್ನಿಸಲಿಲ್ಲ.


●.ನಿಮ್ಮ ಸಾಧನೆಗೆ ಕುಟುಂಬ ವರ್ಗದ ಸಹಕಾರ ಹೇಗಿತ್ತು?

•► ನನ್ನ ಸಾಧನೆಗೆ ಪ್ರಮುಖ ಕಾರಣ ತಂದೆ-ತಾಯಿ ಎಂದರೆ ತಪ್ಪಿಲ್ಲ. ಅಮ್ಮ, ನಾನೆಷ್ಟು ಕಷ್ಟ ಅನುಭವಿಸಿದ್ದೇನೆ ಅದಕ್ಕಿಂತ ಹೆಚ್ಚಿನ ಕಷ್ಟವನ್ನು ನನಗಾಗಿ ಪಟ್ಟಿದ್ದಾರೆ. ಅವರ ಆಶಿರ್ವಾದ ಮತ್ತು ಹಾರೈಕೆಯೇ ಈ ಸಾಧನೆಗೆ ಕಾರಣವಾಗಿದೆ. ಇದರೊಂದಿಗೆ ನನ್ನ ಸ್ನೇಹಿತರು ಸಹ ನನ್ನ ಸಾಧನೆಯ ಬೆನ್ನಿಗೆ ನಿಂತ್ತಿದ್ದರು. ನಾನು ಯಾವಾಗಲು ಒಂಟಿಯಾಗಿ ಕುಳಿತು ಓದುತ್ತಿಲಿಲ್ಲ. ಸ್ನೇಹಿತರೊಂದಿಗೆ ಸೇರಿ ಓದುತ್ತಿದ್ದೆ, ಹನುಮಂತ್, ಜಯಂತ್ ಮತ್ತು ಸುನೀಲ್ ಇವರೆಲ್ಲರ ಸಹಾಯ ಮರೆಯಲು ಸಾಧ್ಯವಿಲ್ಲ.


●.ಅಧಿಕಾರಕ್ಕೆ ಬಂದ ಮೇಲೆ ನಿಮ್ಮ ಗುರಿ, ಯೋಜನೆಗಳೇನು?

•► ಸದ್ಯ 48ನೇ ಸ್ಥಾನ ಪಡೆದಿರುವುದೇ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಯಾವುದೇ ಯೋಜನೆಗಳನ್ನು ರೂಪಿಸಿಕೊಂಡಿಲ್ಲ. ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು ಎನ್ನುವ ಆಕಾಂಕ್ಷೆ ಇದೆ. ಯುಪಿಎಸ್’ಸಿ ಯಾವ ಕೆಲಸ ನೀಡದರೂ ಶ್ರದ್ದೆಯಿಂದಲೇ ಮಾಡುತ್ತೇನೆ.


●.ಮುಂದೆ ಯುಪಿಎಸ್’ಸಿ ಪರೀಕ್ಷೆ ತಯಾರಿ ನಡೆಸುತ್ತಿರುವವರಿಗೆ ನಿಮ್ಮ ಕಿವಿಮಾತು.

•► ಒಮ್ಮೆ ಈಜಲು ನೀರಿಗೆ ಬಿದ್ದ ಮೇಲೆ ಗುರಿ ಸಿಗುವವರೆಗೂ ಈಜಿರಿ. ಮಧ್ಯದಲ್ಲಿ ಗುರಿಯಿಂದ ಹಿಂತಿರುಗುವವರ ಸಂಖ್ಯೆ ಜಾಸ್ತಿ ಇದೆ. ಆದರೆ ಈ ರೀತಿ ಮಾಡಬೇಡಿ. ಒಂದು ಬಾರಿ ಸಾಧಿಸಬೇಕು ಎಂದು ಸಂಕಲ್ಪ ಮಾಡಿದ ಮೇಲೆ ಗುರಿ ಮುಟ್ಟುವವರೆಗೂ ನಿಲ್ಲಬೇಡಿ. ಆಗ ಮಾತ್ರ ಸಾಧನೆ ಸಾಧ್ಯ. ಕಷ್ಟಪಟ್ಟು ಓದುವುದಕ್ಕಿಂದ ಇಷ್ಟ ಪಟ್ಟು ಓದಿ, ಉತ್ತಮ ಇಂಗ್ಲೀಷ್ ಭಾಷೆ ಕರಗತ ಮಾಡಿಕೊಳ್ಳಿ, ಧೈರ್ಯವಾಗಿ ಮಾತನಾಡಿ, ಕಾನ್ಫಿಡೆಂಟ್ ಆಗಿರಿ. ಈ ಅಂಶಗಳು ಸಂದರ್ಶನದಲ್ಲಿ ಸಹಾಯಕ್ಕೆ ಬರಲಿದೆ.


●.ಕೊನೆಯದಾಗಿ ಏನನ್ನಾದರೂ ಹೇಳಲು ಬಯಸುವಿರಾ..?

•► ನನ್ನ ಸಾಧನೆಗೆ ಸಹಾಯ ಮಾಡಿದ ಎಲ್ಲಾರಿಗೂ ಧನ್ಯವಾದ ಅರ್ಪಿಸುತ್ತೇನೆ. ಅದರಲ್ಲೂ ನನ್ನ ತಾಯಿ ಮತ್ತು ಸ್ನೇಹಿತರಿಗೆ ನಾನು ಚಿರಋಣಿ.

– ಶ್ರೀನಿಧಿ ಶ್ರೀಕರ್.
(Courtesy : ಸುವರ್ಣನ್ಯೂಸ್)

☀ಯುಪಿಎಸ್’ಸಿ ಪರೀಕ್ಷಾ ತಯಾರಿ : ಯುಪಿಎಸ್’ಸಿನಲ್ಲಿ 922ನೇ ರ್ಯಾಂಕ್ ಸ್ಥಾನ ಪಡೆದ ಗ್ರಾಮೀಣ ಪ್ರತಿಭೆ ಡಾ.ಲಿಂಗರಾಜು ಜೊತೆ ಎಕ್ಸ್’ಕ್ಲೂಸಿವ್ ಸಂದರ್ಶನ : (UPSC Exclusive Interview)

☀ಯುಪಿಎಸ್’ಸಿ ಪರೀಕ್ಷಾ ತಯಾರಿ :
ಯುಪಿಎಸ್’ಸಿನಲ್ಲಿ 922ನೇ ರ್ಯಾಂಕ್ ಸ್ಥಾನ ಪಡೆದ ಗ್ರಾಮೀಣ ಪ್ರತಿಭೆ ಡಾ.ಲಿಂಗರಾಜು ಜೊತೆ ಎಕ್ಸ್’ಕ್ಲೂಸಿವ್ ಸಂದರ್ಶನ :
(UPSC  Exclusive Interview)
━━━━━━━━━━━━━━━━━━━━━━━━━━━━━━━━━━━━━━━━━━━━━


•►ಯುಪಿಎಸ್ ಸಿ ಫಲಿತಾಂಶ  ಪ್ರಕಟವಾಗಿದ್ದು ಶಿವಮೊಗ್ಗದ ಈಎಸ್’ಐ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಲಿಂಗರಾಜು ನಾಯಕ್ 922 ನೇ ರ್ಯಾಂಕ್ ಪಡೆದಿದ್ದಾರೆ. ಇವರು ಸೊರಬ ತಾಲೂಕು ಹಿರೇಮಾಗಡಿ ತಾಂಡಾದ ಅಪ್ಪಟ ಗ್ರಾಮೀಣ ಪ್ರತಿಭೆ. ಇವರು ತಮ್ಮ ಅನುಭವವನ್ನು ನಮ್ಮ ಸುವರ್ಣ ನ್ಯೂಸ್ ನೊಂದಿಗೆ ಹಂಚಿಕೊಂಡಿದ್ದು ಹೀಗೆ.


●.ಸುವರ್ಣ ನ್ಯೂಸ್ :ಪರೀಕ್ಷಾ ತಯಾರಿ ಹೇಗಿತ್ತು?

•►ತಯಾರಿಯನ್ನು 2009 ರಿಂದಲೇ ಶುರು ಮಾಡಿದ್ದೆ. ದೆಹಲಿಯಲ್ಲಿ 10 ತಿಂಗಳು ಕೋಚಿಂಗ್ ಪಡೆದೆ. ಸಮಯ ಸಿಕ್ಕಾಗಲೆಲ್ಲಾ ಓದುತ್ತಿದ್ದೆ. ಅಷ್ಟೊತ್ತಿಗೆ ಮೆಡಿಕಲ್ ಎಕ್ಸಾಮ್ ರಿಸಲ್ಟ್ ಬಂದು ಕೆಲಸ ಸಿಕ್ಕಿತ್ತು. ಆದರೂ ಪ್ರಯತ್ನಪಡುತ್ತಲೇ ಇದ್ದೆ. ಪರೀಕ್ಷೆಗೋಸ್ಕರಾನೇ ಅಂತ ಓದ್ತಾ ಇರಲಿಲ್ಲ. ಯಾವಾಗಲೂ ಅಪ್ಡೇಟ್ ಆಗ್ತಾ ಇದ್ದೆ. ಇದು ಸಹಾಯವಾಯ್ತು. 7 ಸಲ ಅಟೆಂಪ್ಟ್ ಮಾಡಿದೀನಿ. 4 ಮೇನ್ಸ್ ಎಕ್ಸಾಮ್ ಬರ್ದಿದೀನಿ. 4 ನೇ ಮೇನ್ಸ್ ನಲ್ಲಿ ಪಾಸಾಗಿದೀನಿ.


●.ಸು.ನ್ಯೂ:ಡಾಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ನೀವು ಸಮಯ ಹೇಗೆ ಹೊಂದಿಸ್ತಾ ಇದ್ರಿ?

•►ಕಷ್ಟವಾಗ್ತಾ ಇತ್ತು.  ಬೆಳಿಗ್ಗೆ 9-12, ಮದ್ಯಾಹ್ನ 4-7 ಆಸ್ಪತ್ರೆಯ ಕೆಲಸದ ಅವಧಿ. ಪೇಷಂಟ್ ಗಳು ಜಾಸ್ತಿಯಿದ್ದರೆ ಕೆಲಸ ಮುಗಿತಾ ಇರಲಿಲ್ಲ. ಮನೆಗೆ ಬರಬೇಕಾದ್ರೆ ತಲೆ ಫ್ರೀ ಮಾಡ್ಕೊಂಡು ಬರ್ತಿದ್ದೆ. ಮನೆಗೆ ಬಂದು ಓದ್ತಾ ಇದ್ದೆ. ಪರೀಕ್ಷಾ ಸಮಯದಲ್ಲಿ ಒಂದೆರಡು ತಿಂಗಳು ರಜೆ ಹಾಕಿ ಕೋಚಿಂಗ್ ಗೆ ಹೋಗ್ತಿದ್ದೆ. ಮನಸ್ಸಿದ್ದರೆ ಏನು ಬೇಕಾದ್ರೂ ಮಾಡಬಹುದು. ಹಾಗಾಗಿ ನನಗೆ ಒತ್ತಡಗಳಿದ್ದರೂ ಅದು ಕಲಿಕೆಗೆ ಅಡ್ಡ ಬರಲಿಲ್ಲ.


●.ಸು.ನ್ಯೂ:ವೃತ್ತಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ನಿಮಗೆ ಈ ಆಲೋಚನೆ ಯಾಕೆ ಬಂತು?

•►ಹೌದು.ವೈದ್ಯನಾಗಿ ಸಮಾಜ ಸೇವೆ ಮಾಡ್ತಾ ಇದ್ದೀನಿ. ಎಂಬಿಬಿಸ್ ಜೊತೆಗೆ ಎಂಡಿ ಮಾಡಿಕೊಂಡು ಆರಾಮಾಗಿ ಹಣ  ಗಳಿಸಬಹುದಿತ್ತು. ನನ್ನ ಸ್ನೇಹಿತರೆಲ್ಲರೂ ಹಾಗೆ ಹೇಳಿದರು. ಆದರೆ ನನಗೆ ಹಣ ಮಾಡೋದಕ್ಕಿಂತ ಹೆಚ್ಚಾಗಿ ಸಮಾಜಕ್ಕೆ, ಜನರಿಗೆ ಅನುಕೂಲವಾಗುವಂತ ಕೆಲಸ ಮಾಡಬೇಕು ಅನ್ನೋದು ಆಸೆಯಾಗಿತ್ತು. ಅದು ಅಲ್ಲದೇ ನಾನು ಬಂದಿರೋದು ಹಳ್ಳಿಯಿಂದ. ಅಲ್ಲಿನ ಕಷ್ಟಗಳು, ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ನೋಡಿ ಬೆಳೆದವನು. ಹಾಗಾಗಿ ನಮ್ಮ ಹಳ್ಳಿಗಾಗಿ, ನನ್ನ ಹಾಗೆ ಯಾರೂ ಕಷ್ಟಪಡಬಾರದು. ಅವರಿಗಾಗಿ ನಾನು ಏನಾದರೂ ಸೇವೆ ಮಾಡಬೇಕು ಎಂದು ಚಿಕ್ಕಂದಿನಿಂದಲೇ ಅನಿಸ್ತಾ ಇತ್ತು. ಇದೇ ನನಗೆ ದೊಡ್ಡ ಮೋಟಿವೆಶನ್ ಎಂದರೆ ತಪ್ಪಾಗಲಾರದು.


●.ಸು.ನ್ಯೂ:ಹಳ್ಳಿಯಲ್ಲಿ ಹುಟ್ಟಿ, ಕನ್ನಡ ಮಾದ್ಯಮದಲ್ಲಿ ಕಲಿತ ನಿಮಗೆ ಯುಪಿಎಸ್ ಇ ಪರೀಕ್ಷೆ ಎದುರಿಸುವುದು ಕಷ್ಟ ಎನಿಸಲಿಲ್ಲವೇ?

•►ಪ್ರಾರಂಭದಲ್ಲಿ ಹಿಂಜರಿಕೆ ಇತ್ತು. ಆದರೂ ನಾನು ಸಾಧಿಸುತ್ತೇನೆ ಎಂಬ ನಂಬಿಕೆಯಿತ್ತು. ಸಿಟಿಯಲ್ಲಿರುವವರಿಗೂ ನಮಗೆ ಇಂಗ್ಲೀಷ್ ಭಾಷೆಯ ಬಗ್ಗೆ ಅಂತರವಿರುತ್ತದೆ. ಆದರೆ ವಿಷಯ ಜ್ಞಾನವಿತ್ತು. ಇಂಗ್ಲೀಷ್ ಅಗತ್ಯ. ಆದರೆ ಅದೇ ಅಂತಿಮವಲ್ಲ. ಇಂಗ್ಲೀಷ್ ಬಂದ ಮಾತ್ರಕ್ಕೆ ಪರೀಕ್ಷೆ ಪಾಸು ಮಾಡಲು ಸಾಧ್ಯವಿಲ್ಲ. ಅದು ಒಂದು ಮಾದ್ಯಮವಷ್ಟೇ. ಹಾಗಾಗಿ ಪರೀಕ್ಷೆ ಬರೆಯಬೇಕು ಎನ್ನುವವರು ನಾನು ಹಳ್ಳಿಯಿಂದ ಬಂದಿದೀನಿ, ನನಗೆ ಇಂಗ್ಲೀಷ್ ಅಷ್ಟು ಚೆನ್ನಾಗಿ ಬರಲ್ಲ ಅಂತೆಲ್ಲಾ ಹಿಂಜರಿಕೆ ಬೇಡ. ಸಾಧಿಸಬೇಕು ಅಂತಿದ್ದರೆ ಇವ್ಯಾವುವು ಅಡ್ಡ ಬರುವುದಿಲ್ಲ.


●.ಸು.ನ್ಯೂ:ನೀವು ಬೆಳೆದು ಬಂದ ಹಾದಿಯನ್ನು ಹೇಳ್ತಿರಾ?

•►ನಾನು ಚಿಕ್ಕಂದಿನಿಂದಲೂ ಕೆಟ್ಟ ಹಠವಾದಿ. ಮೆಡಿಕಲ್ ಸೀಟು ಬೇಕು ಅನಿಸ್ತು. ಸೋ ಎಫರ್ಟ್ ಹಾಕ್ದೆ. ಸೀಟು ಸಿಕ್ತು. ಒಳ್ಳೆ ಮಾರ್ಕ್ಸ್ ಸಿಕ್ತು. ಆವಾಗ ನಾನ್ಯಾಕೆ ಯುಪಿಎಸ್ ಗೆ ಪ್ರಯತ್ನಪಡಬಾರದು ಅನಿಸ್ತು. ಅವತ್ತಿನಿಂದಲೇ ಓದಲು ಶುರು ಮಾಡಿದೆ. ಅಪ್ಪ, ಅಮ್ಮ ವಿದ್ಯಾವಂತರಲ್ಲ. ನನಗೆ ಯಾರೂ ಗೈಡ್ ಮಾಡಲಿಕ್ಕೆ ಇರಲಿಲ್ಲ. ನನಗೆ ನಾನೇ ಮೋಟಿವೇಶನ್. ನನ್ನ ಸ್ವಪ್ರಯತ್ನದಿಂದ ಕಲಿತಾ ಇದ್ದೆ. ನಾನು ಬೆಳೆದು ಬಂದ ದಾರಿ, ಎದುರಿಸಿದ ಕಷ್ಟಗಳು ಅದೇ ನನ್ನನ್ನು ಈ ಮಟ್ಟಕ್ಕೆ ಬೆಳೆಯಲು ಪ್ರೇರೆಪಿಸಿತು.


●.ನಿಮ್ಮ ಮುಂದಿನ ಗುರಿಯೇನು?

•►ಐಎಎಸ್ ಗೆ ಮತ್ತೊಮ್ಮೆ ಪ್ರಯತ್ನಪಡ್ತೀನಿ. ನನಗೆ ಬಹಳ ಆಸೆ ಇದೆ ಐಎಎಸ್ ಪಾಸ್ ಮಾಡಬೇಕು ಅಂತ. ನನ್ನ ಹಾಗೆ ಕಷ್ಟದಿಂದ ಬೆಳೆದು ಬಂದವರಿಗೆ ಯುಪಿಎಸ್ ಸಿ ತಯಾರಿಗೆ ಸಹಾಯ ಮಾಡಬೇಕು ಅಂತಿದೀನಿ. ಇನ್ನು ನಿರೀಕ್ಷೆ ಜಾಸ್ತಿಯಿತ್ತು. ಪರವಾಗಿಲ್ಲ ಫಲಿತಾಂಶ ಖುಷಿ ಕೊಟ್ಟಿದೆ. ಐಆರ್ ಎಸ್ ಸೇವೆ ಸಿಗಬಹುದು. ಆಡಳಿತದಲ್ಲಿ ಇನ್ನಷ್ಟು ಬದಲಾವಣೆ ತರಲು ಪ್ರಯತ್ನಿಸುತ್ತೇನೆ. ಜನರ ಸೇವೆಗಾಗಿ ಸದಾ ಸಿದ್ಧ.


●.ಸು.ನ್ಯೂ:ಯುಪಿಎಸ್ ಸಿ ಮಹತ್ವಾಕಾಂಕ್ಷಿಗಳಿಗೆ ನಿಮ್ಮ ಸಲಹೆ?

•►ಮೊದಲು ಗುರಿ ಸ್ಪಷ್ಟ  ಇರಬೇಕು. ನಾನು ಏನು ಮಾಡಬೇಕು ಅನ್ನೊದು ಸ್ಪಷ್ಟ ಇದ್ದರೆ ಅರ್ಧ ಕೆಲಸ ಮುಗಿದಂತೆ. ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗಿಲ್ಲ ಅಂತ ನಿರಾಶೆಯಾಗಿ ಪ್ರಯತ್ನ ಬಿಡಬಾರದು. ಬೇರೆಯವರಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. ಅವರು ಬೆಳೆದು ಬಂದ ದಾರಿ, ಹಿನ್ನೆಲೆ, ನಿಮ್ಮ ದಾರಿ, ಹಿನ್ನೆಲೆ ವಿಭಿನ್ನವಾಗಿರುತ್ತದೆ. ನಿಮ್ಮ ಗುರಿ ಸ್ಪಷ್ಟವಿರಲಿ. ಆಗ ಗೆಲುವು ನಿಮ್ಮದೆ.
                                                                                                                ●.ಸಂದರ್ಶನ-ಶ್ರೀಲಕ್ಷ್ಮೀ ಎಚ್. ಎಲ್.
(Courtesy : ಸುವರ್ಣ ನ್ಯೂಸ್ )

Friday, 27 May 2016

☀ ಇಂದಿನ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : •► ಕೋಸ್ಟಲ್ ಎಕನಾಮಿಕ್ ಝೋನ್ ಎಂದರೇನು (ಸಿಇಝೆಡ್)? ಕೋಸ್ಟಲ್ ಎಕನಾಮಿಕ್ ಝೋನ್​ನಡಿ ಸಾಗರಮಾಲೆ ಯೋಜನೆಯ ಪ್ರಯೋಜನಗಳನ್ನು ಬರೆಯಿರಿ? (CEZ- Coastal Economic Zone & Importance of Sagar Mala project in CEZ)

☀ ಇಂದಿನ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : 
•► ಕೋಸ್ಟಲ್ ಎಕನಾಮಿಕ್ ಝೋನ್ ಎಂದರೇನು (ಸಿಇಝೆಡ್)? ಕೋಸ್ಟಲ್ ಎಕನಾಮಿಕ್ ಝೋನ್​ನಡಿ ಸಾಗರಮಾಲೆ ಯೋಜನೆಯ ಪ್ರಯೋಜನಗಳನ್ನು ಬರೆಯಿರಿ? 
(CEZ- Coastal Economic Zone & Importance of Sagar Mala project in CEZ)
━━━━━━━━━━━━━━━━━━━━━━━━━━━━━━━━━━━━━━━━━━━━━


●.ಕೋಸ್ಟಲ್ ಎಕನಾಮಿಕ್ ಝೋನ್, ಕರಾವಳಿ ಆರ್ಥಿಕ ವಲಯ ಎಂದು ಕರೆಯಲ್ಪಡುವ ವಿಶೇಷ ವಲಯದಿಂದ ಬಂದರುಗಳ ಅಭಿವೃದ್ಧಿ ಯೋಜನೆ ರೂಪಿಸಲಾಗುತ್ತದೆ. ಕರಾವಳಿ ಪ್ರದೇಶದಲ್ಲಿ 300-500 ಕಿ.ಮೀ. ವ್ಯಾಪ್ತಿಯನ್ನು ಕೋಸ್ಟಲ್​ಲೈನ್ ಎಂದು  ವಿಸ್ತರಿಸಲಾಗುತ್ತದೆ.

●.ಉದ್ಯಮ ಸ್ಥಾಪನೆಗೆ ಒತ್ತು ನೀಡುವ ಮೂಲಕ ಭಾರತದ ಸರಕು ರಫ್ತಿನಲ್ಲಿ ವಾರ್ಷಿಕ 7.25 ಲಕ್ಷ ಕೋಟಿ ರೂಪಾಯಿ ಹೆಚ್ಚಳದ ಗುರಿ ಹೊಂದಲಾಗಿದೆ. 14 ಸಿಇಝೆಡ್ ಪ್ರದೇಶಗಳನ್ನು ಗುರುತಿಸಲಾಗಿದ್ದು, ಕರಾವಳಿ ತೀರದಲ್ಲಿ ಬರುವ ರಾಜ್ಯಗಳು ಒಂದು ಅಥವಾ ಹೆಚ್ಚು ಸಿಇಝೆಡ್​ಗಳನ್ನು ಪಡೆಯುತ್ತವೆ. ಕೆಲವೆಡೆ ಸಿಇಝೆಡ್ ಮೂಲಕ ಆರಂಭದಲ್ಲಿ ಪ್ರಾಯೋಗಿಕ ಯೋಜನೆ ರೂಪಿಸಲಾಗುತ್ತದೆ.

●.ಸಿಇಝೆಡ್ ಪ್ರದೇಶಗಳಲ್ಲಿ ವಿವಿಧ ಉತ್ಪಾದನಾ ಉದ್ಯಮ ಸ್ಥಾಪಿಸಲಾಗುತ್ತದೆ. ಭಾರತಕ್ಕೆ ಅಗತ್ಯವಾದ ವಿದ್ಯುತ್ ಮತ್ತು ಇತರ ಶಕ್ತಿ ಮೂಲಗಳು, 3 ಕೋಸ್ಟಲ್ ಪವರ್ ಕ್ಲಸ್ಟರ್, ಒಂದು ಅಥವಾ ಎರಡು ಕೋಸ್ಟಲ್ ರಿಫೈನರಿ ಕ್ಲಸ್ಟರ್​ಗಳನ್ನು 2025ರ ವೇಳೆಗೆ ಅಭಿವೃದ್ಧಿಪಡಿಸುವ ಯೋಜನೆ ಹೊಂದಲಾಗಿದೆ.

●.ವಾರ್ಷಿಕ 4 ಕೋಟಿ ಟನ್ ಸ್ಟೀಲ್ ಮತ್ತು ಸಿಮೆಂಟನ್ನು 2025ರ ವೇಳೆಗೆ ಕರಾವಳಿಯ ಪ್ರದೇಶಗಳಲ್ಲಿ ಉತ್ಪಾದಿಸುವ ಗುರಿ ಹೊಂದಿದೆ. ಇದರಿಂದ 2014-15ನೇ ಸಾಲಿನಲ್ಲಿದ್ದ ಭಾರತದ ವಾರ್ಷಿಕ ರಫ್ತನ್ನು 30 ಲಕ್ಷ ಕೋಟಿ ರೂ.ನಿಂದ 2020ರ ವೇಳೆಗೆ 60 ಲಕ್ಷ ಕೋಟಿ ರೂ.ಗೆ ಏರಿಸುವ ಯೋಜನೆಯಿದೆ. ಉತ್ಪಾದನಾ ಮತ್ತು ವಿವಿಧ ಉದ್ಯಮ ಕ್ಷೇತ್ರದಲ್ಲಿ ಸಾಗರಮಾಲೆ ಯೋಜನೆಯ ಅನುಷ್ಠಾನದಿಂದ 40 ಲಕ್ಷ ನೇರ ಉದ್ಯೋಗ ಮತ್ತು 60 ಲಕ್ಷ ಮಂದಿಗೆ ಪರೋಕ್ಷ ಉದ್ಯೋಗ ಲಭಿಸಲಿದೆ.


☀ಕೋಸ್ಟಲ್ ಎಕನಾಮಿಕ್ ಝೋನ್​ನಡಿ ಸಾಗರಮಾಲೆ ಯೋಜನೆಯ ಪ್ರಯೋಜನಗಳು :

●.ವಿಶೇಷ ಆರ್ಥಿಕ ವಲಯದಂತೆಯೇ, ಸಾಗರಮಾಲೆ ಯೋಜನೆಯನ್ನು ಕೋಸ್ಟಲ್ ಎಕನಾಮಿಕ್ ಝೋನ್​ನಡಿ ಸ್ಥಾಪಿಸುವುರಿಂದ ಇದರ ಮೂಲಕ ವ್ಯವಹಾರ ನಡೆಸುವ ಎಲ್ಲ ರೀತಿಯ ಉದ್ದಿಮೆಗಳಿಗೆ ವಿಶೇಷ ಕೊಡುಗೆ ಮತ್ತು ಪ್ರಯೋಜನಗಳು ದೊರೆಯಲಿದೆ.

●.ರಿಯಾಯಿತಿ ದರದಲ್ಲಿ ಸೇವೆ ಮತ್ತು ಸೌಲಭ್ಯ, ಪೆಟ್ರೋಕೆಮಿಕಲ್ಸ್, ಎಲೆಕ್ಟ್ರಾನಿಕ್ಸ್, ಸ್ಟೀಲ್, ಸಿಮೆಂಟ್, ರಾಸಾಯನಿಕ ಮತ್ತು ಗೊಬ್ಬರ, ಬಿಡಿ ಭಾಗಗಳ ತಯಾರಿ, ಹಡಗು ಉತ್ಪಾದನಾ ಉದ್ಯಮ, ಮೀನುಗಾರಿಕೆ ಸೇರಿದಂತೆ ಪ್ರಮುಖ ಉದ್ಯಮಗಳ ಸ್ಥಾಪನೆಗೆ ಉತ್ತೇಜನ ದೊರೆಯಲಿದೆ.

●.ಈ ವಿಶೇಷ ವಲಯದಲ್ಲಿ ಸ್ಥಾಪಿತವಾಗುವ ಕಾರ್ಖಾನೆಗಳಿಗೂ ಸರ್ಕಾರದ ಸೌಲಭ್ಯ ಮತ್ತು ಸಹಾಯಧನ ಲಭ್ಯವಾಗುತ್ತದೆ. ಆಯಾ ಪ್ರದೇಶದ ಪ್ರಮುಖ ಉದ್ಯಮಗಳು ಮತ್ತು ಪ್ರಾದೇಶಿಕ ಭಿನ್ನತೆಗನುಗುಣವಾಗಿ ಬಂದರಿನ ಸಮೀಪ ಉದ್ಯಮ ಸ್ಥಾಪನೆಗೆ ಒತ್ತು ಕೊಡಲಾಗುತ್ತದೆ. ಭಾರತದ ದಕ್ಷಿಣ ಕರಾವಳಿಯ ಉದ್ಯಮ ಒಂದು ರೀತಿಯದ್ದಾದರೆ, ಪೂರ್ವ ಮತ್ತು ಪಶ್ಚಿಮ ಕರಾವಳಿಯ ಪ್ರದೇಶಗಳ ಉದ್ಯಮಗಳು ಇನ್ನೊಂದು ರೀತಿಯದ್ದಾಗಿರುತ್ತವೆ.

☀ ಇಂದಿನ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : •►ಸಾಗರಮಾಲೆ ಯೋಜನೆ ಎಂದರೇನು? ಅದರ ಉದ್ದೇಶ, ಪ್ರಯೋಜನಗಳನ್ನು ವಿವರಿಸಿ. (Sagar Mala project in Coastal Economic Zone)

☀ ಇಂದಿನ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : 
•►ಸಾಗರಮಾಲೆ ಯೋಜನೆ  ಎಂದರೇನು? ಅದರ ಉದ್ದೇಶ, ಪ್ರಯೋಜನಗಳನ್ನು ವಿವರಿಸಿ. 
(Sagar Mala project in Coastal Economic Zone ) 
━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷೆ : ಮೇನ್ಸ್ ತಯಾರಿ.
(IAS/KAS Exams - Mains Preparation)


ಭಾರತ ನೈಸರ್ಗಿಕ ಸಂಪತ್ತುಗಳಿಂದ ಸಂಪದ್ಭರಿತವಾದ ದೇಶ. ಭಾರತದ ಭೂ ಪ್ರದೇಶದ ಮೂರೂ ಕಡೆ ನೀರಿನಿಂದ ಅವೃತ್ತವಾಗಿದ್ದು, ಅಪಾರವಾದ ಜಲರಾಶಿಯಿದೆ. ಆದರೆ ಈ ಜಲಸಂಪತ್ತಿನ ಸರಿಯಾದ ಪ್ರಯೋಜನ ಪಡೆದುಕೊಳ್ಳಲು ಭಾರತವು ಮುಂದಾಗಿರಲಿಲ್ಲ. ಜಲಸಾರಿಗೆ ಯನ್ನು ಬಳಸಿ, ಬಂದರು ಸ್ಥಾಪಿಸಿ ವಹಿವಾಟು ನಡೆಸುವುದು ಭಾರತಕ್ಕೆ ತೀರಾ ಹೊಸದಲ್ಲವಾದರೂ, ಇತರ ಸಾರಿಗೆ ಮತ್ತು ವ್ಯವಹಾರ ಕ್ಷೇತ್ರಗಳಂತೆ ಈ ಕ್ಷೇತ್ರ ಬೆಳವಣಿಗೆ ಕಂಡಿರಲಿಲ್ಲ. ಇದನ್ನು ಕಂಡ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಬಂದರುಗಳ ಸರ್ವತೋಮುಖ ಅಭಿವೃದ್ಧಿ ಮತ್ತು ವ್ಯಾಪಾರ-ವಹಿವಾಟು ವೃದ್ಧಿಗೆ ಪೂರಕವಾಗಿರುವ ಯೋಜನೆಯೊಂದನ್ನು ರೂಪಿಸಿದರು. ಅದೇ ಸಾಗರಮಾಲೆ ಯೋಜನೆ.

●.ಸಾಗರಮಾಲೆ ಯೋಜನೆಯು ಅನುಷ್ಠಾನಕ್ಕೆ ಬರಬೇಕಿದ್ದ ಸಮಯದಲ್ಲಿ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರ 2003ರಲ್ಲಿ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡು ಯುಪಿಎ ಸರ್ಕಾರ ಆಡಳಿತಕ್ಕೆ ಬಂತು. ಇದರಿಂದ ಸಾಗರಮಾಲೆ ಯೋಜನೆಯು ಸಾಗರದಲ್ಲೇ ಉಳಿಯಿತು. ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಈ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿದೆ. ಯೋಜನೆಯನ್ನು ಈಗಿನ ಅಗತ್ಯಕ್ಕೆ ತಕ್ಕಂತೆ ಮಾರ್ಪಾಟು ಮಾಡಿ ಜಾರಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.


☀ಸಾಗರಮಾಲೆ ಯೋಜನೆಯ ಉದ್ದೇಶವೇನು?

●.ವಿಶೇಷ ಆರ್ಥಿಕ ವಲಯ, ಐಟಿ ಎಸ್​ಇಜೆಡ್, ಕೈಗಾರಿಕಾ ವಲಯಗಳಿರುವಂತೆಯೇ, ಪ್ರಮುಖ ಬಂದರು ಮತ್ತು ಸುತ್ತಲಿನ ಪ್ರದೇಶಗಳನ್ನು ಸಾಗರಮಾಲೆ ಯೋಜನೆಯ ಮೂಲಕ ಅಭಿವೃದ್ಧಿಗೊಳಿಸಿ, ಅತ್ಯಾಧುನಿಕ ಸೌಲಭ್ಯ ಕಲ್ಪಿಸಿ, ರಫ್ತು ಮತ್ತು ವಾಣಿಜ್ಯ ಚಟುವಟಿಕೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ.

ಸಾಗರಮಾಲೆ ಯೋಜನೆಯಡಿ ಕೇಂದ್ರ ಸರ್ಕಾರವು ಬಂದರು ಮತ್ತು ಜಲಸಾರಿಗೆ ಸಚಿವಾಲಯದ ಮೂಲಕ ಈಗ ಕಾರ್ಯಾಚರಿಸುತ್ತಿರುವ ಪ್ರಮುಖ 14 ಬಂದರುಗಳ ಪ್ರದೇಶವನ್ನು ಸಿಇಜೆಡ್, ಅಂದರೆ ಕೋಸ್ಟಲ್ ಎಕನಾಮಿಕ್ ಝೋನ್ ಎಂದು ತನ್ನ ವ್ಯಾಪ್ತಿಗೊಳಪಡಿಸಿ, ಆ ಪ್ರದೇಶಗಳಲ್ಲಿ ಬಂದರುಗಳ ಅತ್ಯಾಧುನೀಕರಣ ಕಾಮಗಾರಿ ಕೈಗೊಳ್ಳುತ್ತದೆ. ಅದಕ್ಕಾಗಿ ನಿರ್ದಿಷ್ಟ ಕಾರ್ಯವ್ಯಾಪ್ತಿ ಮತ್ತು ಪ್ರದೇಶಗಳನ್ನು ವಶಪಡಿಸಿಕೊಳ್ಳಲಿದೆ.


☀ಸಾಗರಮಾಲೆ ಯೋಜನೆಯ ಪ್ರಯೋಜನಗಳು :

●.ಭಾರತದ ಸಾಗರ ತೀರದ ರಾಜ್ಯಗಳ ಪ್ರಮುಖ ಬಂದರುಗಳು ಈ ಯೋಜನೆಯ ವ್ಯಾಪ್ತಿಗೊಳಪಡುತ್ತವೆ. ಇದರಲ್ಲಿ ಕರ್ನಾಟಕದ ಪ್ರಮುಖ ಬಂದರು ಮಂಗಳೂರಿನ ಎನ್​ಎಂಪಿಟಿ ಕೂಡಾ ಸೇರಿದೆ. ಬಂದರಿಗೆ ಅಗತ್ಯ, ಉತ್ತಮ ದರ್ಜೆಯ ರಸ್ತೆ ಸಂಪರ್ಕ, ರೈಲು ಸಂಪರ್ಕ, ಇತರ ಎಲ್ಲ ವಿಧದ ಕಾಗೋ ಸೇವೆಗಳನ್ನು ಸಂಪರ್ಕ ಕಲ್ಪಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ಮತ್ತು ಉನ್ನತ ದರ್ಜೆಯ ಸೇವೆ ಒದಗಿಸುವ ಯೋಜನೆ ಸಾಗರಮಾಲೆದ್ದು. ಬಂದರಿನ ಮೂಲಕ ರಫ್ತು ಹೆಚ್ಚು ಮಾಡಿ, ಆಮದು ಕಡಿಮೆ ಮಾಡಿಕೊಂಡರೆ, ದೇಶದ ಆದಾಯಕ್ಕೂ ಮತ್ತು ಉದ್ಯಮಗಳಿಗೂ ಅನುಕೂಲವಾಗುವುದರಿಂದ, ಸಾಗರಮಾಲೆ ಯೋಜನೆಯಲ್ಲಿ ಬಂದರು ಮತ್ತು ಜಲಸಾರಿಗೆಯ ಪೂರ್ಣ ಪ್ರಯೋಜನ ಪಡೆಯಲಾಗುತ್ತದೆ. ಬಂದರು ಹೊಂದಿರುವ ಇತರ ದೇಶಗಳಿಗೆ ಹೋಲಿಸಿದರೆ, ವ್ಯಾಪಾರ ಮತ್ತು ವಹಿವಾಟು ಭಾರತದಲ್ಲಿ ಅತ್ಯಂತ ಕಡಿಮೆ ಮಟ್ಟದಲ್ಲಿರುವುದರಿಂದ ಈ ಅವಕಾಶ ಕಲ್ಪಿಸಲಾಗುತ್ತದೆ.

●.ನಿರೀಕ್ಷೆಯಂತೆ ಯೋಜನೆಯು ಪೂರ್ಣಗೊಂಡು ಕಾರ್ಯಾರಂಭ ಮಾಡಿದರೆ ಉದ್ದೇಶಿತ 14 ಸಿಇಝೆಡ್​ಗಳಿಂದ ಭಾರತದ ವಾರ್ಷಿಕ ರಫ್ತು ವಹಿವಾಟಿಗೆ ವಿವಿಧ ಉದ್ಯಮಗಳಿಂದ 7.25 ಲಕ್ಷ ಕೋಟಿ ರೂ. ಹೆಚ್ಚುವರಿ ಆದಾಯ ಸೇರ್ಪಡೆಯಾಗಲಿದೆ.

●.ಬಂದರುಗಳನ್ನು ಮತ್ತು ಅವುಗಳ ಸುತ್ತಲಿನ ಪ್ರದೇಶಗಳನ್ನು ಈಗಿರುವ ಸ್ಥಿತಿ ಮತ್ತು ಪ್ರಾದೇಶಿಕ ಭಿನ್ನತೆ ನೋಡಿಕೊಂಡು ಪ್ರಮುಖ, ಸಾಮಾನ್ಯ ಮತ್ತು ಪ್ರಾಸ್ತಾವಿತ ಬಂದರುಗಳೆಂದು ವಿಂಗಡಿಸಿ, ಅಲ್ಲಿನ ಮೂಲಸೌಕರ್ಯ ಮೇಲ್ದರ್ಜೆಗೆ ಕ್ರಮ ಕೈಗೊಳ್ಳಲಾಗುತ್ತದೆ.

●.ಸರಕು ಉತ್ಪಾದನಾ ಕೇಂದ್ರಗಳಿಂದ ನೇರ ಬಂದರಿಗೆ ಕಾಗೋ ಮೂಲಕ ಸಾಗಿಸುವ ಸೌಲಭ್ಯ ಕಲ್ಪಿಸಲಾಗುತ್ತದೆ. ಸಂಪರ್ಕ ರಸ್ತೆ, ರೈಲು ಮಾರ್ಗ ಅಭಿವೃದ್ಧಿ ಸೇರಿದಂತೆ ಅಗತ್ಯ ಕ್ರಮ ಕೈಗೊಂಡು ತ್ವರಿತ ಮತ್ತು ಸರಳವಾಗಿ ಬಂದರು ತಲುಪುವಂತೆ ವ್ಯವಸ್ಥೆ ಮಾಡಲಾಗುತ್ತದೆ.

●.ಸಾಗರಮಾಲೆ ಯೋಜನೆಯು ಕೇವಲ ಉದ್ಯಮ ಮತ್ತು ವ್ಯವಹಾರ ವೃದ್ಧಿಗೆ ಕ್ರಮ ಕೈಗೊಳ್ಳುವುದಲ್ಲ, ಬದಲಾಗಿ ಬಂದರು ಮತ್ತು ಜಲಸಾರಿಗೆಯನ್ನು ಅತ್ಯಾಧುನಿಕ ಮಟ್ಟದಲ್ಲಿ, ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಅಭಿವೃದ್ಧಿಗೊಳಿಸುವುದರಿಂದ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಮಾಡಲಾಗುತ್ತದೆ.

●.ಕರಾವಳಿ ಪ್ರದೇಶಗಳ ಅಭಿವೃದ್ಧಿಗೂ ಇದು ಸಹಕರಿಸುತ್ತದೆ. ಇದರೊಂದಿಗೆ ಸಾಗರ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯಲಿದೆ. ಮಾರ್ಚ್ 25, 2015ರಂದು ಸಂಪುಟವು ಸಾಗರಮಾಲೆ ಯೋಜನೆಗೆ ಅನುಮತಿ ನೀಡಿದ್ದು, ಇದರನ್ವಯ 14 ಸಿಇಝೆಡ್ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ 12 ಪ್ರಮುಖ ಬಂದರುಗಳನ್ನು ಮತ್ತು 1208 ದ್ವೀಪಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

●.ಕರ್ನಾಟಕದ ಮಂಗಳೂರು ಬಂದರೂ ಕೂಡಾ ಈ ಪಟ್ಟಿಯಲ್ಲಿದೆ. ಜುಲೈ 31, 2015ರಂದು ಬೆಂಗಳೂರಿನಲ್ಲಿ ನಡೆದ ಸಚಿವಾಲಯದ ಕಾರ್ಯಕ್ರಮದಲ್ಲಿ ಸಾಗರಮಾಲೆ ಯೋಜನೆಗೆ ಚಾಲನೆ ನೀಡಲಾಗಿದೆ.

●.ನ್ಯಾಶನಲ್ ಸಾಗರಮಾಲೆ ಅಪೆಕ್ಸ್ ಕಮಿಟಿ-ಎನ್​ಎಸ್​ಎಸಿ, ಬಂದರು ಸಚಿವಾಲಯ, ಸಂಬಂಧಪಟ್ಟ ರಾಜ್ಯಗಳ ಮುಖ್ಯಮಂತ್ರಿಗಳು, ಬಂದರು ಮತ್ತು ಸಾರಿಗೆ ಸಚಿವಾಲಯ ಈ ಯೋಜನೆಗೆ ಸಹಕರಿಸಿ, ಸೂಕ್ತ ಮಾರ್ಗದರ್ಶನ ನೀಡುತ್ತದೆ.

●.ಸಾಗರಮಾಲೆ ಯೋಜನೆಯಡಿಯಲ್ಲಿ ಭಾರತದ 7,500 ಕಿಮೀ. ಕರಾವಳಿಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದಕ್ಕಾಗಿ ಸುಮಾರು 70 ಸಾವಿರ ಕೋಟಿ ರೂ. ವೆಚ್ಚವಾಗಲಿದೆ.

Thursday, 26 May 2016

☀ ಇಂದಿನ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : •► ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ 'ಅನ್ನಭಾಗ್ಯ ಯೋಜನೆ'ಯ ಸಮರ್ಪಕ ಅನುಷ್ಠಾನಕ್ಕೆ ಎದುರಾಗುವ ಅತಿದೊಡ್ಡ ಸವಾಲು ಎಂದರೆ ಖೊಟ್ಟಿ ಮತ್ತು ಅನರ್ಹ BPL ಪಡಿತರ ಚೀಟಿಗಳನ್ನು ಪತ್ತೆಹಚ್ಚುವುದು. ತಾವು ಈ ನಿಟ್ಟಿನಲ್ಲಿ ಯಾವ್ಯಾವ ಕ್ರಮಗಳನ್ನು ಕೈಗೊಳ್ಳುವಿರಿ? (200 ಶಬ್ದಗಳಲ್ಲಿ) (Actions for detecting the fabricated and Ineligible BPL ration cards)

☀ ಇಂದಿನ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :

 •► ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ 'ಅನ್ನಭಾಗ್ಯ ಯೋಜನೆ'ಯ ಸಮರ್ಪಕ ಅನುಷ್ಠಾನಕ್ಕೆ ಎದುರಾಗುವ ಅತಿದೊಡ್ಡ ಸವಾಲು ಎಂದರೆ ಖೊಟ್ಟಿ ಮತ್ತು ಅನರ್ಹ BPL ಪಡಿತರ ಚೀಟಿಗಳನ್ನು ಪತ್ತೆಹಚ್ಚುವುದು. ತಾವು ಈ ನಿಟ್ಟಿನಲ್ಲಿ ಯಾವ್ಯಾವ ಕ್ರಮಗಳನ್ನು ಕೈಗೊಳ್ಳುವಿರಿ? 
(200 ಶಬ್ದಗಳಲ್ಲಿ) 
(Actions for detecting the fabricated and Ineligible BPL ration cards) 
━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ / ಕೆಎಎಸ್ ಪರೀಕ್ಷೆ : ಮೇನ್ಸ್ ತಯಾರಿ.
(IAS/KAS Exams - Mains Preparation)



➡️ ರಾಜ್ಯದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ಕೆ.ಜಿ.ಗೆ ಒಂದು ರೂಪಾಯಿಯಂತೆ ತಿಂಗಳಿಗೆ ಗರಿಷ್ಠ 30 ಕೆ.ಜಿ. ಅಕ್ಕಿ ವಿತರಿಸುವ ರಾಜ್ಯ ಸರ್ಕಾರದ `ಅನ್ನಭಾಗ್ಯ' ಯೋಜನೆಗೆ 2013ರಲ್ಲಿ ಚಾಲನೆ ದೊರೆತಿದೆ. ಇದಕ್ಕಾಗಿ ಮಾಡಬೇಕಾದ ಸುಮಾರು 3 ಲಕ್ಷ ಮೆಟ್ರಿಕ್ ಟನ್ ಅಕ್ಕಿಯ ಸಂಗ್ರಹ ಮತ್ತು ವಿತರಣಾ ಕಾರ್ಯಕ್ಕಿಂತ ಹೆಚ್ಚಿನ ಸವಾಲುಗಳನ್ನು ಈ ಯೋಜನೆ ಹುಟ್ಟುಹಾಕಿದೆ. ಅವುಗಳಲ್ಲಿ ಅತಿದೊಡ್ಡ ಸವಾಲು ಎಂದರೆ ಖೊಟ್ಟಿ ಮತ್ತು ಅನರ್ಹ BPL ಪಡಿತರ ಚೀಟಿಗಳನ್ನು ಪತ್ತೆಹಚ್ಚುವುದು. ಅದಕ್ಕಾಗಿ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕು.

•► ಪಡಿತರ ಕಾರ್ಡಿನ ಫಲಾನುಭವಿಗಳಿಗೆ ಗಣಕೀಕೃತ ಸ್ಮಾರ್ಟ್ ಕಾರ್ಡ್ ವಿತರಣಾ ವ್ಯವಸ್ಥೆಯ ಜಾರಿಗೆ ಮುಂದಾಗಬೇಕು. ಆ ಮೂಲಕ ಆಹಾರ ಇಲಾಖೆಯ ಮಾಹಿತಿ ಕೇಂದ್ರಕ್ಕೆ ಸಂಪರ್ಕ ಒದಗಿಸಬೇಕು.

•► ಹಳೆ ಪಡಿತರ ಚೀಟಿಗಳ ನವೀಕರಣಕ್ಕೆ ಭಾವಚಿತ್ರವುಳ್ಳ ಚುನಾವಣೆ ಗುರುತಿನ ಚೀಟಿ (ಎಪಿಕ್) ಇಲ್ಲವೇ ಆಧಾರ್ ಕಾರ್ಡ್ ನಂಬರ್ ಜೋಡಣೆ ಕಡ್ಡಾಯಗೊಳಿಸಬೇಕು.

•► ಒಂದು ಮನೆಗೆ ಒಂದೇ ಪಡಿತರ ಚೀಟಿ ಇರುವಂತೆ ನೋಡಿಕೊಳ್ಳಲು ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಪಡಿತರ ಚೀಟಿದಾರರಿಂದ ವಿದ್ಯುತ್ಚ್ಛಕ್ತಿ ಬಿಲ್ಲುಗಳು, ಆಧಾರ ಕಾರ್ಡ್ ಜೊತೆ ಸಂಪರ್ಕ ಕಲ್ಪಿಸಿ ಪಾರದರ್ಶಕತೆ ಕಾಪಾಡಬೇಕು.

•► ನಕಲಿಪಡಿತರ ಚೀಟಿ ಹೊಂದಿರುವವರು ಕಾರ್ಡನ್ನು ಹಿಂದಿರುಗಿಸಲು ಕಾಲಾವಕಾಶ ನೀಡಬೇಕು. ಈ ಗುಡುವಿನಲ್ಲಿ ಕಾರ್ಡ್ ಹಿಂದಿರುಗಿಸದಿದ್ದರೆ ಅಂತಹವರ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕು.

•► ಮುಖ್ಯವಾಗಿ ಗ್ರಾಮೀಣ ಪ್ರದೇಶದ ಹಾಗು ಇತರ ಪ್ರದೇಶದ ಗ್ರಾಹಕರ ಪಡಿತರ ಚೀಟಿಯ ಕುರಿತ ತಕರಾರು, ತೊಂದರೆಗಳನ್ನು ಪರಿಶೀಲಿಸಲು ಗ್ರಾಹಕ ಅದಾಲತ್ ಗಳನ್ನು ವಿವಿಧ ಇಲಾಖೆಗಳು, ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿ ನಡೆಸಲ್ಪಡಬೇಕು.

•► ಬಿಪಿಎಲ್ ಕಾರ್ಡ್‌ಗಳಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಬೋಗಸ್ ಕಾರ್ಡ್‌ಗಳಿಂದ ಸರ್ಕಾರಕ್ಕೆ ಸಂಭವಿಸುತ್ತಿರುವ ಸಾವಿರಾರು ಕೋಟಿ ರೂಪಾಯಿ ನಷ್ಟದ ಬಗ್ಗೆ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಅವರು ನೇಮಿಸಿದ್ದ ಡಾ.ಬಾಲಸುಬ್ರಹ್ಮಣ್ಯಂ ಸಮಿತಿ ಕೊಟ್ಟಿರುವ ವರದಿಯನ್ನು ಅಮೂಲಾಗ್ರವಾಗಿ ಪರಿಶೀಲಿಸಿ, ಇದ್ದಂತಹ ಲೋಪಗಳನ್ನ ಸರಿಪಡಿಸಿ, ಅನುಷ್ಠಾನಕ್ಕೆ ತರಬೇಕು.

•► ಹೆಚ್ಚಿನ ಬೋಗಸ್ ಕಾರ್ಡುಗಳು ನ್ಯಾಯಬೆಲೆ ಅಂಗಡಿ ಮಾಲೀಕರ ವಶದಲ್ಲೇ ಇದ್ದು ಪಡಿತರ ದುರ್ಬಳಕೆಯಾಗುತ್ತಿದ್ದು, ಇದರಲ್ಲಿ ಅಧಿಕಾರಗಳು ಶಾಮೀಲಾಗಿರುತ್ತಾರೆಂದು ಬೇರೆ ಹೇಳಬೇಕಾಗಿಲ್ಲ.ಇದು ನಿರ್ಮೂಲಾಗಬೇಕು.

•► ಮಾಹಿತಿ ಹಕ್ಕನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು.

•► ಈ ಕಾರ್ಯ ಸಾಧನೆಗೆ ಜನಸಾಮಾನ್ಯರ, ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಅಗತ್ಯ. ನಕಲಿ ಹಾಗೂ ಅನರ್ಹ ಫಲಾನಿಭವಿಗಳ ಬಗ್ಗೆ ಮಾಹಿತಿ ನೀಡಿದವರಿಗೆ (ವಿಜಲ್ ಬ್ಲೋವರ್) ಸೂಕ್ತ ಬಹುಮಾನ, ಇನಾಮನ್ನು ಘೋಷಿಸಬೇಕು.

End.
━━━━━━━━━━━━━━━━━━━━━━━━━━━━━━━━━━━━━━━━►


More Extra Tips :
━━━━━━━━━━━━━━

•► ರಾಜ್ಯ ಸರ್ಕಾರ ಸುಮಾರು 97 ಲಕ್ಷ ಜನರಿಗೆ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಿದೆ. 30 ಲಕ್ಷ ನಕಲಿ ಕಾರ್ಡ್‌ಗಳಿರುವುದು ಲೋಕಾಯುಕ್ತ ತನಿಖೆಯಿಂದ ತಿಳಿದುಬಂದಿದೆ. ಜೊತೆಗೆ, ಶೇ 5ರಷ್ಟು ನಿಜವಾದ ಬಡವರು ಬಿಪಿಎಲ್ ಪಟ್ಟಿಯಿಂದಲೇ ಹೊರಗುಳಿದಿರುವುದು ಸೇರಿದಂತೆ, ಬಡವರನ್ನು ಗುರುತಿಸುವ ಕಾರ್ಯದಲ್ಲಿ ಶೇ 49ರಷ್ಟು ಲೋಪದೋಷಗಳು ಆಗಿರುವುದನ್ನು ರಾಜ್ಯದ ಬಡತನ ಸೂಚ್ಯಂಕಗಳು ತಿಳಿಸುತ್ತವೆ.

•► ಸಂಗ್ರಹದಿಂದ ಹಿಡಿದು ಚಿಲ್ಲರೆ ಮಾರಾಟದವರೆಗೆ ತಾಂತ್ರಿಕ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಸಗಟು ದಾಸ್ತಾನು ಮಳಿಗೆಗಳು ಹಾಗೂ ನ್ಯಾಯಬೆಲೆ ಅಂಗಡಿಗಳ ತೂಕ ಯಂತ್ರಗಳು ಸೇರಿದಂತೆ ಇಡೀ ವ್ಯವಸ್ಥೆಯ ಕಂಪ್ಯೂಟರೀಕರಣ, ಜಿಪಿಎಸ್ ವ್ಯಾಪ್ತಿಗೆ ಸಾಗಣೆ ಲಾರಿಗಳನ್ನು ತರಬೇಕು.

•► ಪಡಿತರ ಚೀಟಿ ಹೊಂದಿರುವವರ ವಿಳಾಸ ಹಾಗೂ ಭಾವಚಿತ್ರಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಕಟಿಸುವ ವ್ಯವಸ್ಥೆ ಮಾಡಬೇಕು.

☀ ಇಂದಿನ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ●.ಲಿಗೋ-ಇಂಡಿಯಾ ಯೋಜನೆ - (ಲೇಸರ್ ಇಂಟರ್‌ಫೆರೋಮೀಟರ್ ಗ್ರಾವಿಟೇಶನಲ್-ವೇವ್ ಅಬ್ಸರ್ವೇಟರಿ(ಲಿಗೋ) ಪ್ರಾಜೆಕ್ಟ್) - 'ಗುರುತ್ವಾಕರ್ಷಣ ತರಂಗ' (LIGO-INDIA PROJECT)

☀ ಇಂದಿನ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :
●.ಲಿಗೋ-ಇಂಡಿಯಾ ಯೋಜನೆ - (ಲೇಸರ್ ಇಂಟರ್‌ಫೆರೋಮೀಟರ್ ಗ್ರಾವಿಟೇಶನಲ್-ವೇವ್ ಅಬ್ಸರ್ವೇಟರಿ(ಲಿಗೋ) ಪ್ರಾಜೆಕ್ಟ್) - 'ಗುರುತ್ವಾಕರ್ಷಣ ತರಂಗ' (LIGO-INDIA PROJECT) 
━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷೆ : ಮೇನ್ಸ್ ತಯಾರಿ.
(IAS/KAS Exams - Mains Preparation)


— ಶತಮಾನದ ಹಿಂದೆ ವಿಜ್ಞಾನಿ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ ಪ್ರಸ್ತಾಪಿಸಿದ್ದ 'ಗುರುತ್ವಾಕರ್ಷಣ ತರಂಗ' ವನ್ನು ಪತ್ತೆ ಹಚ್ಚಿರುವುದಾಗಿ ವಿಜ್ಞಾನಿಗಳು ಘೋಷಿಸಿದ್ದಾರೆ. ಈ ಸಂಶೋಧನೆಯನ್ನು ಕೆಲವು ತಜ್ಞರು ಶತಮಾನದ ಆವಿಷ್ಕಾರ ಎಂದು ಬಣ್ಣಿಸಿದ್ದು, ಕಪ್ಪುರಂಧ್ರ, ನಕ್ಷತ್ರದ ಅವನತಿ ಕುರಿತಾದ ಸಂಶೋಧನೆಯಲ್ಲಿ ಮಹತ್ವದ ಮೈಲಿಗಲ್ಲೆಂದು ಹೇಳಲಾಗುತ್ತಿದೆ.


ಏನಿದು ?
ಗುರುತ್ವಾಕರ್ಷಣ ತರಂಗ 130 ಕೋಟಿ ಬೆಳಕಿನ ವರ್ಷಗಳ ಹಿಂದೆ ಎರಡು ಬೃಹತ್ ಕಪ್ಪು ರಂಧ್ರಗಳ ನಡುವೆ ಘರ್ಷಣೆ ಸಂಭವಿಸಿದೆ. ಒಂದು ಸೆಕೆಂಡ್‌ನಲ್ಲಿ ಸಂಭವಿಸುವ ಘರ್ಷಣೆಯಿಂದ ಸೃಷ್ಟಿಯಾಗುವ ಭೌತದ್ರವ್ಯವು ಕ್ಷಣಮಾತ್ರದಲ್ಲಿ ಶಕ್ತಿಯಾಗಿ ಪರಿವರ್ತನೆಯಾಗಿ ಅಲೆಗಳನ್ನು ದೂರಕ್ಕೆ ಕೊಂಡೊಯ್ಯುತ್ತದೆ. ಆ ರೀತಿ ಹೊರಸೂಸಿದ ಅಲೆಯನ್ನೇ ಗುರುತ್ವಾಕರ್ಷಣ ತರಂಗ ಎಂದು ಕರೆಯಲಾಗಿದೆ. ಅಂದು ಹೊರಸೂಸಿದ ಅಲೆಯೊಂದು ವೇಗವಾಗಿ ಚಲಿಸುತ್ತಾ 2015ರ ಸೆ. 14ರಂದು ಭೂಮಿಯನ್ನು ತಲುಪಿರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.


•► ಲಿಗೋ ಮೂಲಕ ಪತ್ತೆ 

ಗುರುತ್ವಾಕರ್ಷಣ ತರಂಗಗಳು ವ್ಯೋಮದಲ್ಲಿ ನಡೆದ ಬೃಹತ್ ಕಾಯಗಳ ಘರ್ಷಣೆಯ ಅಳತೆಗೋಲಾಗಿವೆ. ಗುರುತ್ವಾಕರ್ಷಣ ಅಲೆಗಳನ್ನು ಗುರುತಿಸುವ ಸಲುವಾಗಿಯೇ ಇಡಲಾದ ಅಮೆರಿಕ ಮೂಲದ ಎರಡು ಭೂಗರ್ಭ ಪತ್ತೆಸಾಧನಗಳಲ್ಲಿ ಈ ಅಪರೂಪದ ವಿದ್ಯಮಾನ ದಾಖಲಾಗಿದೆ. ಇದಕ್ಕಾಗಿ ಲೇಸರ್ ಇಂಟರ್‌ಫೆರೋಮೀಟರ್ ಗ್ರಾವಿಟೇಶನಲ್-ವೇವ್ ಅಬ್ಸರ್ವೇಟರಿ(ಲಿಗೋ) ಎಂಬ ಪ್ರಾಜೆಕ್ಟ್ ಕೈಗೊಳ್ಳಲಾಗಿತ್ತು. ಲೂಸಿಯಾನಾದ ಲಿವಿಂಗ್‌ಸ್ಟನ್ ಮತ್ತು ವಾಷಿಂಗ್ಟನ್‌ನ ಹ್ಯಾನ್‌ಫೋರ್ಡ್‌ಗಳಲ್ಲಿ ಲಿಗೋ ಸ್ಥಾಪಿಸಲಾಗಿದೆ. ಅಮೆರಿಕದ ರಾಷ್ಟ್ರೀಯ ವಿಜ್ಞಾನ ಫೌಂಡೇಶನ್ 2002-2012ರ ಅವಧಿಯಲ್ಲಿ ಇದನ್ನು ಸ್ಥಾಪಿಸಿದೆ. ಲಿಗೋ ಭೂಮಿಯನ್ನು ಹಾದುಹೋಗುವ ಗುರುತ್ವಾಕರ್ಷಣ ತರಂಗದ ಸಣ್ಣ ಕಂಪನವನ್ನು ಕಂಡು ಹಿಡಿಯುತ್ತದೆ. ಈ ಮೂಲಕ ದೊರೆತ ಮಾಹಿತಿಗಳನ್ನು ತಿಂಗಳಾನುಗಟ್ಟಲೆ ಲೆಕ್ಕಾಚಾರಕ್ಕೆ ಹಚ್ಚಿದ ವಿಜ್ಞಾನಿಗಳು ಈ ಗುರುತ್ವದ ಅಲೆಗಳು 1.3 ನೂರು ಕೋಟಿಯಷ್ಟು ವರ್ಷಗಳ ಹಿಂದೆ ಎರಡು ಬೃಹತ್ ಕಪ್ಪುರಂಧ್ರಗಳು ಡಿಕ್ಕಿಯಿಂದ ಹೊರಹೊಮ್ಮಿದವು ಎಂಬುದನ್ನು ಕಂಡುಕೊಂಡಿದ್ದಾರೆ.


•► ಮಹತ್ವದ ಹೆಜ್ಜೆ 

ಈ ಹೊಸ ಮಾಹಿತಿಯು ತಾರಾಪುಂಜಗಳ ಹುಟ್ಟಿನ ಕುರಿತು ಹಾಗೂ ಬ್ರಹ್ಮಾಂಡದ ಬಹು ದೊಡ್ಡ ಕಾಯಗಳ ಬಗ್ಗೆ ವಿವರಣೆ ನೀಡಲು ಸಹಾಯಕವಾಗಿದೆ ಎಂದು ಲಿಗೋ ಪ್ರಾಜೆಕ್ಟ್ ಕೈಗೊಂಡ ತಂಡದ ನಾಯಕ ಡೇವಿಡ್ ಶೂಮೇಕರ್ ತಿಳಿಸಿದ್ದಾರೆ. ಈ ಹೊಸ ಸಂಶೋಧನೆಯನ್ನು ಫಿಸಿಕಲ್ ರಿವೀವ್ ಲೆಟರ್ಸ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗುತ್ತಿದೆ.


•► ಗುರುತ್ವಾಕರ್ಷಣ ಬಲ

ಭೂಮಿಯ ಮೇಲೆ ಹಾರುವ ವಸ್ತುಗಳನ್ನು ತನ್ನತ್ತ ಸೆಳೆಯುವ ಶಕ್ತಿ ಭೂಮಿಗಿದೆ. ಭೂಮಿಯ ಈ ಶಕ್ತಿಯನ್ನೇ ಗುರುತ್ವಾಕರ್ಷಣ ಬಲ ಎಂದು ಸರ್ ಐಸಾಕ್ ನ್ಯೂಟನ್ ಹೇಳಿದ್ದರು. ಈ ಎಲ್ಲ ವಸ್ತುಗಳು ಒಂದನ್ನೊಂದು ಆಕರ್ಷಿಸಲು ಕಾರಣವೇ ಈ ಬಲ. ನ್ಯೂಟನ್‌ನ ಗುರುತ್ವ ನಿಯಮದ ಪ್ರಕಾರ ಸ್ಥಿರ ಪ್ರಮಾಣದಲ್ಲಿ ಸಮಯಕ್ಕನುಗುಣವಾಗಿ ಹೆಚ್ಚುವ ವೇಗವೇ ಗುರುತ್ವ ವೇಗೋತ್ಕರ್ಷ. ಕಾಯವೊಂದಕ್ಕೆ ಕೊಡಲಾದ ವೇಗೋತ್ಕರ್ಷವು ಅದರ ಮೇಲೆ ಪ್ರಯೋಗಿಸಿದ ಬಲಕ್ಕೆ ನೇರ ಅನುಪಾತದಲ್ಲಿ ಆ ಬಲದ ದಿಕ್ಕಿನಲ್ಲೇ ಇರುತ್ತದೆ ಮತ್ತು ಕಾಯದ ದ್ರವ್ಯರಾಶಿಗೆ ವಿಲೋಮ ಅನುಪಾತದಲ್ಲಿಯೂ ಇರುತ್ತದೆ.


•► ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ

ಗುರುತ್ವ ಶಕ್ತಿಯನ್ನು ಐನ್‌ಸ್ಟೀನ್ ಗಣಿತದ ವಿಧಾನ ಮುಖೇನ ವಿವರಿಸಿ ಅದನ್ನೇ ಸಾಮಾನ್ಯ ಸಾಪೇಕ್ಷ ಸಿದ್ಧಾಂತ ಎಂದು ಕರೆದಿದ್ದರು. ಅದರಲ್ಲಿ ಸ್ಥಳ ಮತ್ತು ಕಾಲ ಎಂಬ ಪರಿಕಲ್ಪನೆಗಳು ಮುಖ್ಯವಾಗಿವೆ. ಪದಾರ್ಥವೊಂದರಲ್ಲಿ ದ್ರವ್ಯ ಮತ್ತು ಶಕ್ತಿ ಇರುತ್ತದೆ, ಇಲ್ಲಿ ದ್ರವ್ಯ ಮತ್ತು ಶಕ್ತಿ ಸ್ಥಳ -ಕಾಲಗಳ ನಿರಂತತೆಯನ್ನು ವಕ್ರಗೊಳಿಸುತ್ತದೆ. ಗುರುತ್ವ ತರಂಗಗಳು ಸ್ಥಳ ಕಾಲಗಳ ನಿರಂತತೆಯಲ್ಲಿ ಅತಿ ಸಣ್ಣ ಅಲೆಗಳಾಗಿವೆ. ಗುರುತ್ವ ಬಲವು ಕಾಲದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸಾಪೇಕ್ಷ ಸಿದ್ಧಾಂತ ತಿಳಿಸುತ್ತದೆ.


•► ಈ ಸಂಶೋಧನೆಯ ಪ್ರಾಮುಖ್ಯ ಏನು? 

ಈ ಹೊಸ ಸಂಶೋಧನೆಯಿಂದಾಗಿ ಗುರುತ್ವಾಕರ್ಷಣೆ ಅಲೆ ಯನ್ನು ಕಂಡು ಹಿಡಿಯುವ ಹೊಸ ರೀತಿಯ ಯಂತ್ರಗಳನ್ನೇ ರೂಪಿಸಬಹುದು. ಈ ಯಂತ್ರಗಳು ಬ್ರಹ್ಮಾಂಡದ ಯಾವುದೇ ಮೂಲೆಯಲ್ಲಿ ಎಷ್ಟೇ ಜ್ಯೋತಿರ್‌ವರ್ಷಗಳ ಹಿಂದೆ ಶುರುವಾದ ಅಲೆಯನ್ನೂ ಗುರುತಿಸಬಲ್ಲವು. ನಕ್ಷತ್ರಗಳು ಸಾಯಲು ಮತ್ತು ಸೂಪಾರ್‌ನೋವಾ ಆಗಲು ಕಾರಣವೇನೆಂಬುದನ್ನೂ ಕಂಡುಹಿಡಿಯಬಹುದು.


•► ಪತ್ತೆ ಕೇಂದ್ರಕ್ಕೆ ಸಂಪುಟ ಅಸ್ತು

ಭಾರತದಲ್ಲೂ ಗುರುತ್ವ ಬಲ ಪತ್ತೆ ಮಾಡುವ ಕೇಂದ್ರ ಸ್ಥಾಪನೆಗೆ ಪ್ರಧಾನಿ ನೇತೃತ್ವದ ಸಂಪುಟ ಸಭೆ 2016ರ ಫೆ.17ರಂದು ಅನುಮೋದನೆ ನೀಡಿದೆ. ಅಮೆರಿಕದಲ್ಲಿರುವ 'ಲೇಸರ್ ಇಂಟರ್‌ಫೆರೋಮೀಟರ್ ಗ್ರಾವಿಟೇಷನಲ್ ವೇವ್ ಅಬ್ಸರ್ವೆಟರಿ (ಲಿಗೋ) ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಭಾರತದಲ್ಲಿ ಈ ಕೇಂದ್ರ ಸ್ಥಾಪನೆಯಾಗುತ್ತಿದೆ.

ಲಿಗೋ-ಇಂಡಿಯಾ ಯೋಜನೆಯ ಅನುಸಾರ ಭಾರತದಲ್ಲಿಯೂ 8 ಕಿ.ಮೀ ಉದ್ದದ ಬೃಹತ್ ಕೊಳವೆ ಆಕಾರದ ಸುರಂಗ ನಿರ್ಮಾಣವಾಗಲಿದೆ. ಇದರ ಮೂಲಕ ಗುರತ್ವಾಕರ್ಷಣೆ ಶಕ್ತಿಯನ್ನು ಪತ್ತೆ ಮಾಡಲಾಗುತ್ತದೆ. ಪರಮಾಣು ಶಕ್ತಿ ಇಲಾಖೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳು ಯೋಜನೆಯ ಉಸ್ತುವಾರಿ ವಹಿಸಲಿವೆ.

(Courtesy : Prajawani) 

Saturday, 7 May 2016

☀️ ಕೆ.ಎ.ಎಸ್.ಪರೀಕ್ಷೆಗೆ ಉಪಯುಕ್ತ ಪುಸ್ತಕಗಳ ಪಟ್ಟಿ / ಕೆಎಎಸ್ ಅಧ್ಯಯನ ಸಾಮಗ್ರಿಗಳು (KAS Reference Books / kas study materials)

☀️ ಕೆ.ಎ.ಎಸ್.ಪರೀಕ್ಷೆಗೆ ಉಪಯುಕ್ತ ಪುಸ್ತಕಗಳ ಪಟ್ಟಿ / ಕೆಎಎಸ್ ಅಧ್ಯಯನ ಸಾಮಗ್ರಿಗಳು
(KAS Reference Books / kas study materials)
━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಕೆಎಎಸ್ ಪುಸ್ತಕಗಳು
(kas books)

★ ಕೆಎಎಸ್ ಅಧ್ಯಯನ ಸಾಮಗ್ರಿಗಳು
(KAS study materials)

★ ಕೆ.ಎ.ಎಸ್.ಪರೀಕ್ಷೆಗೆ ಪರಿಷ್ಕೃತ ಪುಸ್ತಕಗಳ ಪಟ್ಟಿ:-


☀️ ಇತಿಹಾಸ ವಿಷಯದ ಪುಸ್ತಕಗಳು :

೧. ಸಮಗ್ರ ಭಾರತದ ಇತಿಹಾಸ ಭಾಗ -1   ಲೇ. ಕೆ.ಎನ್.ಎ
೨. ಸಮಗ್ರ ಭಾರತ ಇತಿಹಾಸ ಭಾಗ -2  ಲೇ. ಕೆ.ಎನ್.ಎ
೩. ಕರ್ನಾಟಕ ಇತಿಹಾಸ   ಲೇ. ಕೆ.ಎನ್.ಎ
೪. ಪ್ರಾಚೀನ ಇತಿಹಾಸ   ಲೇ. ಡಾ|| ಕೆ.ಸದಾಶಿವ
೫. ಮಧ್ಯಕಾಲೀನ ಇತಿಹಾಸ   ಲೇ. ಡಾ|| ಕೆ. ಸದಾಶಿವ
೬. ಆಧುನಿಕ ಭಾರತದ ಇತಿಹಾಸ   ಲೇ. ಡಾ|| ಕೆ. ಸದಾಶಿವ
೭. ಸಮಗ್ರ ಕರ್ನಾಟಕ ಇತಿಹಾಸ  ಲೇ. ಪಾಲಾಕ್ಷ
೮. ಇತಿಹಾಸ ವಿಶ್ವಕೋಶ  - ಮೈಸೂರು ವಿಶ್ವವಿದ್ಯಾಲಯ
೯. Indian History - Agni Hotri
೧೦. ಕರ್ನಾಟಕ ಕೈ ಗನ್ನಡಿ - ಸೂರ್ಯನಾಥ ಕಾಮತ್
೧೧. ಕರ್ನಾಟಕ ಏಕೀಕರಣ ಇತಿಹಾಸ - ಎಚ್.ಎಸ್. ಗೋಪಾಲರಾವ್
೧೨. ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು - ಶಂಕರ್‌ರಾವ್


☀️ ಭೂಗೋಳಶಾಸ್ತ್ರ

೧. ಪ್ರಾಕೃತಿಕ ಭೂಗೋಳ - ಡಾ|| ರಂಗನಾಥ ( ಪದವಿ ಮಟ್ಟದ್ದು)
೨. ಭಾರತದ ಭೂಗೋಳ - ಡಾ|| ರಂಗನಾಥ ( ಪದವಿ ಮಟ್ಟದ್ದು)
೩. ಕರ್ನಾಟಕ ಭೂಗೋಳ - ಡಾ|| ರಂಗನಾಥ
೪. Atlas Book - E.T.K. Publication
೫. Geography - Majeed Hussain


☀️ ಭಾರತದ ಸಂವಿಧಾನ

೧. ಭಾರತದ ಸಂವಿಧಾನ ಮತ್ತು ರಾಜಕೀಯ - ಪಿ.ಎಸ್. ಗಂಗಾಧರ
೨. ಭಾರತದ ಸಂವಿಧಾನ ಮತ್ತು ರಾಜಕೀಯ - ಎಚ್.ಎಮ್. ರಾಜಶೇಖರ
೩. Indian Polity - Dr. T.P. Devegowda
೪. ಭಾರತ ಸಂವಿಧಾನ - ಒಂದು ಪರಿಚಯ (ಮೆರುಗು ಪ್ರಕಾಶನ)
೫. Introduction to the constitution of India - D.D.Basu


☀️ ಅರ್ಥಶಾಸ್ತ್ರ

೧. ಭಾರತದ ಆರ್ಥಿಕ ವ್ಯವಸ್ಥೆ - ಎಚ್ಚಾರ್ಕೆ ( ಪದವಿ ಮಟ್ಟದ್ದು)
೨. ಆಧುನಿಕ ಭಾರತದ ಆರ್ಥಿಕ ಶಾಸ್ತ್ರ - ಡಾ|| ನೇ.ತಿ. ಸೋಮಶೇಖರ
೩. ಕರ್ನಾಟಕ ಆರ್ಥಿಕತೆ - ಎಚ್ಚಾರ್ಕೆ
೪. ಕರ್ನಾಟಕ ಆರ್ಥಿಕತೆ - ಡಾ|| ನೇ.ತಿ. ಸೋಮಶೇಖರ
೫. ಕರ್ನಾಟಕ ಆರ್ಥಿಕ ಸಮೀಕ್ಷೆ ( ಗವರ್ನಮೆಂಟ್ ಪಬ್ಲಿಕೇಷನ್)
೬. Indian Economy Survey - ( Indian Government publication )
೭. Indian Economy - Sundaram


☀️ ವಿಜ್ಞಾನ

೧. 8, 9, 10 ನೇ ತರಗತಿಯ ವಿಜ್ಞಾನ ಪುಸ್ತಕಗಳು
೨. ಜೀವಶಾಸ್ತ್ರ - ಹಂಪಿ ವಿಶ್ವವಿದ್ಯಾಲಯ
೩. ರಸಾಯನಶಾಸ್ತ್ರ - ಹಂಪಿ ವಿಶ್ವವಿದ್ಯಾಲಯ
೪. ಕೆ.ಎ.ಎಸ್. ನೋಟ್ಸ್ - ಮಾಲಿ ಮುದ್ದಣ್ಣ
೫. ಸಾಮಾನ್ಯ ವಿಜ್ಞಾನ - ಎಸ್.ಎಂ.ವಿ. ಗೋಲ್ಡ್ ಪ್ರಕಾಶನ
೬. ಜ್ಞಾನ-ವಿಜ್ಞಾನ ಕೋಶ - ನವಕರ್ನಾಟಕ ಪ್ರಕಾಶನ
೭. ವಿಜ್ಞಾನ ಕಲಿಯೋಣ ಭಾಗ ೧, ೨, ೩ - ಇಂದುಮತಿ ರಾವ್
೮. ವಿಜ್ಞಾನ - ತಂತ್ರಜ್ಞಾನ - ಸ್ವಪ್ನ ಪ್ರಕಾಶನ
೯. General science - Spectrum Notes
೧೦. ವಿಜ್ಞಾನ - ತಂತ್ರಜ್ಞಾನ - ಪ್ರಶ್ನೆಕೋಶ ( ಚಾಣಕ್ಯ ಪ್ರಕಾಶನ)


☀️ ಗಣಿತ ಮತ್ತು ಮೆಂಟಲ್ ಎಬಿಲಿಟಿ :

೧. All about Reasoning - Anjali Gupta
೨. Verbal and Non-verbal Reasoning - R.S.Agarwal
೩. ಮೆಂಟಲ್ ಎಬಿಲಿಟಿ  ( ಚಾಣಕ್ಯ ಪ್ರಕಾಶನ)
೪. ಅಮೂಲ್ಯ ಗಣಿತ - ಸಿದ್ಧೇಶ್ವರ ಪ್ರಕಾಶನ
೫. General Mental ability - P.S.Agarwal


☀️ General Knowledge / ಸಾಮಾನ್ಯ ಜ್ಞಾನ 

೧. 8, 9, 10 D.S.E.R.T. Text books
೨. N.C.E.R.T Text books
೩. Manorama Year Book
೪. ಕ್ಲಾಸಿಕ್ ಇಯರ್ ಬುಕ್
೫. ವಾಸನ್ ಇಯರ್ ಬುಕ್
೬. India 2013
೭. ಕರ್ನಾಟಕ ಕೈಪಿಡಿ
೮. ಕರ್ನಾಟಕ ವಿಶ್ವಕೋಶ ಭಾಗ-೧ (  ಮೈಸೂರು ವಿಶ್ವವಿದ್ಯಾಲಯ)
೯. ಕರ್ನಾಟಕ ವಿಶ್ವಕೋಶ ಭಾಗ -೨ ( ಮೈಸೂರು ವಿಶ್ವವಿದ್ಯಾಲಯ)
೧೦. ಸಮಕಾಲೀನ ಜಗತ್ತು - ಎಲ್. ಎನ್. ಶಿವರುದ್ರಸ್ವಾಮಿ
೧೧. ಭಾರತೀಯ ಪ್ರವಾಸೋದ್ಯಮ - ಎಚ್.ಎಸ್. ಶಿವರುದ್ರಸ್ವಾಮಿ
೧೨. ಕರ್ನಾಟಕ ಪ್ರವಾಸಿ ತಾಣಗಳು - ಶೇಶುನಾಥನ್


☀️ ದಿನ ಪತ್ರಿಕೆಗಳು

೧. The Hindu
೨. ವಿಜಯವಾಣಿ
೩. ಕನ್ನಡ ಪ್ರಭ
೪. ಪ್ರಜಾವಾಣಿ
೫. Indian Express
೬. Wizard or Chronical
೭. ಸ್ಪರ್ಧಾ ಚಾಣಕ್ಯ/ ದಿಕ್ಸೂಚಿ


☀️ ಇಂಗ್ಲೀಷ್ ಭಾಷಾಭ್ಯಾಸ

೧. ಕನ್ನಡ-ಇಂಗ್ಲೀಷ್ ವ್ಯಾಕರಣ - ರಂಗಸ್ವಾಮಿ ಬೆಳಕವಾಡಿ
೨. Veta ನೋಟ್ಸ್
೩. ಭಾಷಾಂತರ ಪಾಠಮಾಲೆ ೧, ೨, ೩ (ಬೆಳಗಾವಿ ಪ್ರಕಾಶನ)
೪. ಇಂಗ್ಲೀಷ್-ಕನ್ನಡ ಡಿಕ್ಷನರಿ - ಮೈಸೂರು ವಿಶ್ವವಿದ್ಯಾಲಯ
೫. ಕ್ವಿಕ್ ಮ್ಯಾಥೆಮೆಟಿಕ್ಸ್ - ಕಿರಣ ಪಬ್ಲಿಕೇಷನ್
೬. Practical English Grammar - Gupta
೭. Applied English Grammar - R.L.Bhatia


☀️ ಪ್ರಬಂಧ 

*.ಭಾರತದ ಸಾಮಾಜಿಕ ಸಮಸ್ಯೆಗಳು - ಚ.ನ. ಶಂಕರರಾವ್ ಅಥವಾ ಕೆ. ಭೈರಪ್ಪ
*.ಪರಿಸರ ಅಧ್ಯಯನ  (ಸ್ವಪ್ನ ಪ್ರಕಾಶನ)
*.ಕನ್ನಡ ವ್ಯಾಕರಣ - ಅರಳಿಗುಪ್ಪಿ
*.ಕನ್ನಡ ಸಾಹಿತ್ಯ ಕೋಶ - ರಾಜಪ್ಪ ದಳವಾಯಿ.
(Link to Join on Telegram App ...https://telegram.me/spardhaloka)

☀️ 63ನೇ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರದಾನ (63ed National Film Festival)

☀️ 63ನೇ ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರದಾನ
(63ed National Film Festival)
━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)


ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ನವದೆಹಲಿಯ ವಿಜ್ಞಾನ ಭವನದಲ್ಲಿ ಬುಧವಾರ (04/May/2016) ನಡೆದ ಸಮಾರಂಭದಲ್ಲಿ 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಖ್ಯಾತ ನಟ ಮನೋಜ್ ಕುಮಾರ್ ಅವರಿಗೆ 2015ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದು ದೇಶದ ಚಿತ್ರರಂಗದ ಅತ್ಯುನ್ನತ ಅಧಿಕೃತ ಪ್ರಶಸ್ತಿಯಾಗಿದೆ.

ಬಾಹುಬಲಿ: ಆರಂಭದಲ್ಲಿ ಎಸ್.ಎಸ್.ರಾಜಮೌಳಿ ನಿರ್ದೇಶನದ ತೆಲುಗು ಚಲನಚಿತ್ರ ಬಾಹುಬಲಿಗೆ ಉತ್ತಮ ಫೀಚರ್ ಫಿಲಂ ಪ್ರಶಸ್ತಿ ನೀಡಲಾಯಿತು. ಇದರ ಜತೆಗೆ ಕಬೀರ್ ಖಾನ್ ನಿರ್ದೇಶನದ ಬಜರಂಗಿ ಬೈಜಾನ್ (ಹಿಂದಿ) ಚಿತ್ರಕ್ಕೆ ಅತ್ಯುತ್ತಮ ಮನೋರಂಜನಾ ಚಿತ್ರ ಪ್ರಶಸ್ತಿ ಪ್ರದಾನ ಮಾಡಲಾಯತು.

ಉತ್ತಮ ನಟ: ಅಮಿತಾಬ್ ಬಚ್ಚನ್ (ಪಿಕೂ)

ಉತ್ತಮ ನಟಿ ಕಂಗನಾ ರಾಣಾವತ್ (ತನು ವೆಡ್ಸ್ ಮನು ರಿಟನ್ರ್ಸ್)

ಉತ್ತಮ ನಿರ್ದೇಶನ: ಸಂಜಯಲೀಲಾ ಬನ್ಸಾಲಿ (ಬಾಜಿರಾವ್ ಮಸ್ತಾನಿ)

ಸಾಮಾಜಿಕ ವಿಷಯಗಳ ಉತ್ತಮ ಚಿತ್ರ:ನೀರನಾಯಕಮ್ (ಮಲೆಯಾಳಂ) ನಿರ್ದೇಶನ- ವಿ.ಕೆ.ಪ್ರಕಾಶ್

ಉತ್ತಮ ಪೋಷಕ ನಟ: ಸಮುತಿರಾಕಣಿ- ತಮಿಳು ಚಿತ್ರ ವಿಸಾರಣೈ ನಟನೆಗಾಗಿ.

ಉತ್ತಮ ಪೋಷಕ ನಟಿ: ತನ್ವಿ ಆಜ್ಮಿ- ಹಿಂದಿ ಚಿತ್ರ ಬಾಜಿರಾವ್ ಮಸ್ತಾನಿ ಚಿತ್ರದ ನಟನೆಗಾಗಿ

ಉತ್ತಮ ಮಕ್ಕಳ ಚಿತ್ರ: ದುರಂತೊ (ಹಿಂದಿ) ನಿರ್ದೇಶನ- ಸೌಮೇಂದ್ರ ಪಧಿ

ಉತ್ತಮ ಬಾಲನಟ: ಗೌರವ್ ಮೆನನ್ (ಮಲೆಯಾಳಂ ಚಿತ್ರ ಬೆನ್ ನಟನೆಗಾಗಿ)

ತೀರ್ಪುಗಾರರ ವಿಶೇಷ ಪ್ರಶಸ್ತಿ: ಮಾರ್ಗರಿಟಾ ವಿದ್ ದ ಸ್ಟ್ರಾ (ಹಿಂದಿ). ನಿರ್ದೇಶನ- ಕಲ್ಕಿ ಕೊಯೆಚ್ಲಿನ್.

ಉತ್ತಮ ಛಾಯಾಗ್ರಹಣ: ರೆಮೊ ಡಿಸೋಜಾ- ಹಿಂದಿ ಚಿತ್ರ ಬಾಜಿರಾವ್ ಮಸ್ತಾನಿಗಾಗಿ

ಉತ್ತಮ ಚೊಚ್ಚಲ ಚಿತ್ರ ನಿರ್ದೇಶಕನಿಗಾಗಿ ಇರುವ ಇಂದಿರಾಗಾಂಧಿ ಪ್ರಶಸ್ತಿ- ನೀರಜ್ ಘಾಯ್‍ವಾನ್ (ಮಸಾನ್ ಹಿಂದಿ ಚಿತ್ರಕ್ಕಾಗಿ).

ರಾಷ್ಟ್ರೀಯ ಏಕತೆ ಕುರಿತ ಚಿತ್ರಕ್ಕಾಗಿ ಇರುವ ನರ್ಗೀಸ್ ದತ್ ಪ್ರಶಸ್ತಿ: ನಾನಕ್ ಷಾ ಫಕೀರ್ (ಪಂಜಾಬಿ). ನಿರ್ದೇಶನ- ಸಾರಥಿ ಸಿಂಗ್ ಪನೂ.


★ ಚಿತ್ರ ಪ್ರಶಸ್ತಿ ಬಗ್ಗೆ:

* ಭಾರತದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯು ದೇಶದ ಅತ್ಯುನ್ನತ ಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವಾಗಿದೆ.

* ಈ ಪ್ರಶಸ್ತಿಯನ್ನು 1954ರಲ್ಲಿ ಆರಂಭಿಸಲಾಗಿದ್ದು, ವಾರ್ಷಿಕವಾಗಿ ಪ್ರತಿ ವರ್ಷ ಇದನ್ನು ನೀಡಲಾಗುತ್ತಿದೆ.

* ವಿವಿಧ ವರ್ಗಗಳ ವಿಜೇತರ ಹೆಸರನ್ನು ಕೇಂದ್ರ ಸರ್ಕಾರ ನೇಮಿಸಿದ ರಾಷ್ಟ್ರೀಯ ಆಯ್ಕೆ ಸಮಿತಿ ಆಯ್ಕೆ ಮಾಡುತ್ತದೆ.

* ಈ ಪ್ರಶಸ್ತಿಗಳನ್ನು ರಾಷ್ಟ್ರಪತಿಗಳು ಅಧಿಕೃತ ಸಮಾರಂಭದಲ್ಲಿ ಪ್ರದಾನ ಮಾಡುತ್ತಾರೆ.
(Courtesy : Universal Coaching Centre Bengaluru)

Thursday, 5 May 2016

☀ಜನೆವರಿ -2016ರ (ಭಾಗ -34) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (General knowledge on Current Affairs (Part-34)) ☆.(ಜನೆವರಿ -2016ರ ಪ್ರಚಲಿತ ಘಟನೆಗಳ ಕ್ವಿಜ್)

☀ಜನೆವರಿ -2016ರ (ಭಾಗ -34) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ 
(General knowledge on Current Affairs (Part-34))
☆.(ಜನೆವರಿ -2016ರ ಪ್ರಚಲಿತ ಘಟನೆಗಳ ಕ್ವಿಜ್)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)
 

- ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯವಾದ ಮುಖ್ಯವಾಗಿ ಇತ್ತೀಚಿನ ಪ್ರಸಕ್ತ ಜನೆವರಿ -2016ರ ವಿದ್ಯಮಾನಗಳ ಬಗ್ಗೆ ವಿಶೇಷವಾಗಿ ಅದು ರಾಷ್ಟ್ರೀಯ, ಅಂತರರಾಷ್ಟ್ರೀಯ ಸಾಹಿತ್ಯ, ಕಲೆ, ಸಂಸ್ಕೃತಿ, ಕ್ರೀಡೆ, ವಿಜ್ಞಾನ, ರಾಜಕೀಯ ಮತ್ತು ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳ ವಿದ್ಯಮಾನಗಳನ್ನು ಅಯಾ ದಿನದ ದಿನಪತ್ರಿಕೆಗಳನ್ನು ಕಲೆಹಾಕಿ ಸಂಕ್ಷೇಪಿಸಿ 'ಸ್ಪರ್ಧಾಲೋಕ'ದಲ್ಲಿ ಅಪಡೆಟ್ ಮಾಡಲು ಒಂದು ಚಿಕ್ಕ ಪ್ರಯತ್ನ. 



2231) ಇತ್ತೀಚೆಗೆ 105ನೇ ಇಂಡಿಯನ್ ಸೈನ್ಸ್ ಕಾಂಗ್ರೇಸ್ ಅಸೋಸಿಯೇಷನ್(ಐಎಸ್‍ಸಿಎ) ದ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
••► ಡಾ. ಅಚ್ಯುತ ಸಮಂತ.


2232) ಇತ್ತೀಚೆಗೆ ಅಮೆರಿಕಾದ ನಾಗರಿಕರು ಮತದಾನದ ಮೂಲಕ ಆಯ್ಕೆ ಮಾಡುವ ಸಿನಿ ಪ್ರಶಸ್ತಿ ಪೀಪಲ್ಸ್ ಚಾಯ್ಸ್ ಪಡೆದ ಭಾರತದ ಮೊದಲ ತಾರೆ ಯಾರು?
••► ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ


2233) ಪ್ರಸ್ತುತ ಕರ್ನಾಟಕ ಜ್ಞಾನ ಆಯೋಗದ ಮುಖ್ಯಸ್ಥ?
••► ಕೆ.ಕಸ್ತೂರಿ ರಂಗನ್


2234) ಇತ್ತೀಚೆಗೆ ಒಡಿಶಾ ಸರ್ಕಾರದ ತಾಂತ್ರಿಕ ಸಲಹೆಗಾರರಾಗಿ ನೇಮಕಗೊಂಡವರು ಯಾರು?
••► ಖ್ಯಾತ ದೂರಸಂಪರ್ಕ ತಜ್ಞ, ಎಂಜಿನಿಯರ್ ಹಾಗೂ ಸಂಶೋಧಕ ಸ್ಯಾಮ್ ಪಿತ್ರೋಡಾ


2235) ಭಾರತದ ದೂರಸಂಪರ್ಕ ಕ್ರಾಂತಿಯ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತಿದೆ?
••► ಸ್ಯಾಮ್ ಪಿತ್ರೋಡಾ.


2236) ಸ್ಯಾಮ್ ಪಿತ್ರೋಡಾರವರ ಆತ್ಮಚರಿತ್ರೆ ಯಾವುದು?
••► ಡ್ರೀಮಿಂಗ್ ಬಿಲ್- ಮೈ ಜರ್ನಿ ಟೂ ಕನೆಕ್ಟ್ ಇಂಡಿಯಾ.


2237) ಇತ್ತೀಚೆಗೆ ಯಾವ ದೇಶಗಳ ನಡುವೆ ಜಂಟಿ ಸೇನಾ ತರಬೇತಿ  'ಶಕ್ತಿ-2016' ಕಾರ್ಯಾಚರಣೆ ನಡೆಸಲಾಯಿತು?
••► ಭಾರತ ಹಾಗೂ ಫ್ರಾನ್ಸ್


2238) ಇತ್ತೀಚೆಗೆ ಕೇಂದ್ರ ಸರ್ಕಾರವು ಬೆಂಗಳೂರಿನ ಯಾವ ಕಂಪೆನಿಯ ಮೂರು ಉತ್ಪಾದನಾ ಘಟಕಗಳನ್ನು ಮುಚ್ಚಲು ನಿರ್ಧರಿಸಿದೆ?
••► ಎಚ್‍ಎಂಟಿ ವಾಚಸ್.


2239) ಮುದ್ರಾ ಬ್ಯಾಂಕ್‍ನಿಂದ ಮೂರು ಬಗೆಯ ಸಾಲ ಯೋಜನೆಗಳನ್ನು ಪರಿಚಯಿಸಲಾಗಿದೆ.
ಶಿಶು ಯೋಜನೆಯು ರೂ 50 ಸಾವಿರ, ಕಿಶೋರ್ ಯೋಜನೆಯು ರೂ 50 ಸಾವಿರಕ್ಕಿಂತ ಹೆಚ್ಚು ಮತ್ತು ತರುಣ್ ಯೋಜನೆಯು ರೂ 5 ಲಕ್ಷದಿಂದ 10 ಲಕ್ಷದವರೆಗೆವರೆಗಿನ ಹಣಕಾಸು ಸೌಲಭ್ಯವನ್ನು ಒದಗಿಸಲಿದೆ.


2240) ಇತ್ತೀಚೆಗೆ ಗಂಗಾ ನದಿಯ ಇಕ್ಕೆಲಗಳಲ್ಲಿ ಇರುವ 1600 ಗ್ರಾಮಗಳನ್ನು ಅಭಿವೃದ್ಧಿಪಡಿಸುವ  ಗಂಗಾ ಗ್ರಾಮ ಯೋಜನೆಯನ್ನು ಎಲ್ಲಿ ಉದ್ಘಾಟಿಸಲಾಯಿತು?
••► ಪಂಜಾಬ್ ರಾಜ್ಯದ ಹಾಪುರ ಜಿಲ್ಲೆಯ ಪುತ್ ಗ್ರಾಮದಲ್ಲಿ .


2241) ನಮಾಮಿ ಗಂಗಾ ಯೋಜನೆಗೆ ಅಧಿಕೃತವಾಗಿ ಏನೆಂದು ಕರೆಯಲಾಗುತ್ತದೆ.?
••► ಸಮಗ್ರ ಗಂಗಾ ಸಂರಕ್ಷಣಾ ಮಿಷನ್ ಯೋಜನೆ


2242) ವಿಶ್ವದಲ್ಲೇ ಅತಿಹೆಚ್ಚು ಮಂದಿ ಬಳಸುವ ನದಿ ಎಂಬ ಹೆಗ್ಗಳಿಕೆ ಹೊಂದಿರುವ ಭಾರತದ ನದಿ ಯಾವುದು?
••► ಗಂಗಾ ನದಿ


2243) ಇತ್ತೀಚೆಗೆ ವಿಶ್ವದ ಅತಿದೊಡ್ಡ ನೀಲಮಣಿ ಹರಳು ಯಾವ ದೇಶದಲ್ಲಿ ಪತ್ತೆಯಾಗಿದೆ.?
••► ಶ್ರೀಲಂಕಾದಲ್ಲಿ.


2244) ನೀಲಮಣಿ ಕುರಿತ ಹೆಚ್ಚಿನ ಮಾಹಿತಿ  :
*.ನೀಲಮಣಿ ಎಂದರೆ ವಿಶಿಷ್ಟ ನೀಲಿಬಣ್ಣದ ಹರಳಾಗಿದ್ದು, ಖನಿಜಯುಕ್ತ ಕಾರ್ಡ್‍ಮನ್ ಅಂದರೆ ಅಲ್ಯೂಮೀನಿಯಂದ ಆಕ್ಸೈಡ್ ಆಗಿದೆ.

*.ನಿರ್ದಿಷ್ಟ ಪ್ರಮಾಣದ ಕಬ್ಬಿಣ, ಟಿಟಾನಿಯಂ, ಕ್ರೋಮಿಯಂ, ತಾಮ್ರ ಅಥವಾ ಮೆಗ್ನೇಶಿಯಂಗಳು ಒಳಗೊಂಡಿದ್ದಾಗ ಕ್ರಮವಾಗಿ ನೀಲಿ, ಹಳದಿ, ನೇರಳೆ, ಕಿತ್ತಳೆ ಹಾಗೂ ಹಸಿರು ಬಣ್ಣ ಬರುತ್ತವೆ.

*. ಕ್ರೋಮಿಯಂ ಪರಿಶುದ್ಧವಲ್ಲದಿದ್ದರೆ, ಆ ಹರಳು ಗುಲಾಬಿ ಅಥವಾ ಕೆಂಪು ಹಿನ್ನೆಲೆಯ ಬಣ್ಣವನ್ನು ಒಳಗೊಂಡಿರುತ್ತದೆ. ಇದನ್ನು ಮಾಣಿಕ್ಯ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನೀಲಮಣಿಯನ್ನು ಆಭರಣಗಳಲ್ಲಿ ಬಳಸಲಾಗುತ್ತದೆ.


2245) ಇತ್ತೀಚೆಗೆ ರಾಷ್ಟ್ರಪತಿಯಿಂದ ಅಂಕಿತಗೊಂಡ ಬಾಲಾಪರಾಧಿ ನ್ಯಾಯ (ಮಕ್ಕಳ ಕಾಳಜಿ ಮತ್ತು ಸುರಕ್ಷೆ) ಕಾಯ್ದೆ-2015 ಪ್ರಕಾರ ಘೋರ ಅಪರಾಧಗಳಲ್ಲಿ ಭಾಗಿಗಳಾದ ಎಷ್ಟು ವರ್ಷ ವಯಸ್ಸಿನ  ಬಾಲಾಪರಾಧಿಗಳನ್ನು ವಯಸ್ಕರೆಂದೇ ಪರಿಗಣಿಸಿ ವಿಚಾರಣೆ ನಡೆಸಲಾಗುವುದು.?
••► 16 ರಿಂದ 18 ವರ್ಷ ವಯಸ್ಸು


2246) ಇತ್ತೀಚೆಗೆ ಭಾರತ ಮತ್ತು ನೇಪಾಳ ದೇಶಗಳ ನಡುವೆ 27 ವರ್ಷಗಳ ನಂತರ ಸ್ನೇಹದ ಸಂಕೇತವಾಗಿ ಬಸ್ ಸಂಚಾರ (ಜನವರಿ 4) ಆರಂಭಗೊಂಡಿದ್ದು, ಯಾವ ಮಾರ್ಗವಾಗಿ ಈ ಬಸ್ ಸಂಚರಿಸಲಿದೆ?
••► ನೇಪಾಳದ ಕಂಚನ್‍ಪುರ ಮತ್ತು ದೆಹಲಿ ನಡುವೆ ಉತ್ತರಾಖಂಡದ ಚಂಪಾವತ್ ಮಾರ್ಗ


2247) ಇತ್ತೀಚೆಗೆ ಯಾವ ದೇಶವು ತನ್ನ ಮತ್ತು ಭಾರತದ ನಡುವಿನ ರಾಜಕೀಯ ಮತ್ತು ಸ್ನೇಹದ ಸಂಕೇತವಾಗಿ ತನ್ನ ದೇಶದಲ್ಲಿ ಮಹಾತ್ಮ ಗಾಂಧಿ ಹೆಸರಲ್ಲಿ ವೃತ್ತವೊಂದನ್ನು ಉದ್ಘಾಟಿಸಲಾಗಿದೆ?
••► ಇಸ್ರೇಲ್


2248) ಇತ್ತೀಚೆಗೆ ದೇಶದ ಮೂರನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾಗಿರುವ ಬೆಂಗಳೂರು ಮೂಲದ ವಿಪ್ರೋದ ಹೊಸ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ಯಾರನ್ನು ನೇಮಿಸಲಾಗಿದೆ.?
••► ಅಬಿದ್ ಅಲಿ ನೀಮುಚವಾಲಾ


2249) ARDO (ಎಆರ್‍ಡಿಇ) ವಿಸೃತ ರೂಪ : :
••► ಎಮಮೆಂಟ್ ರಿಸರ್ಚ್ ಅಂಡ್ ಡೆವಲಪ್‍ಮೆಂಟ್ ಎಸ್ಟಾಬ್ಲಿಷ್‍ಮೆಂಟ್


2250) ಇತ್ತೀಚೆಗೆ ರಾಜಸ್ಥಾನದಲ್ಲಿರುವ ಪೊಖ್ರಾನ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದ, ARDO(ಎಆರ್‍ಡಿಇ) ಅಭಿವೃದ್ಧಿಪಡಿಸಿದ ದಾಳಿ ಮಾಡುವ ಹಾಗೂ ರಕ್ಷಿಸುವ, ಕ್ಷಿಪ್ರ ಗುಂಡಿನ ಮಳೆಯಿಂದ ದೊಡ್ಡ ಪ್ರದೇಶವನ್ನು ತಟಸ್ಥೀಕರಿಸುವ ಸಾಮಥ್ರ್ಯ ಹೊಂದಿದ ಮಾರ್ಗದರ್ಶನ ರಹಿತ ರಾಕೆಟ್ ಸಿಸ್ಟಂ, ಮಲ್ಟಿ ಬ್ಯಾರಲ್ ರಾಕೆಟ್ ಲಾಂಚರ್ ನ ಹೆಸರೇನು?
••► ಪಿನಾಕ-2


2251) ಇತ್ತೀಚೆಗೆ ಬಿಸಿಸಿಐ ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ ಹೋದ ವರ್ಷ ರಚಿಸಿದ ಸಮಿತಿಯೊಂದರ ವರದಿಯನ್ನು ಸುಪ್ರೀಂ ಕೋರ್ಟ್ ಸಲ್ಲಿಸಲಾಯಿತು. ಅದು ಯಾರ ನೇತೃತ್ವದಲ್ಲಿ ರಚಿಸಲ್ಪಟ್ಟಿತ್ತು?
••► ನಿವೃತ್ತ ನ್ಯಾಯಮೂರ್ತಿ ಆರ್.ಎಮ್.ಲೋಧಾ


2252) ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು (ಜನವರಿ 3) ಹಿಂದುಸ್ತಾನ್ ಏರೋನಾಟಿಕಲ್ ಲಿಮಿಟೆಡ್(ಎಚ್ ಎಎಲ್)ನ ಹೆಲಿಕಾಪ್ಟರ್ ನಿರ್ಮಾಣ ಘಟಕವನ್ನು ಎಲ್ಲಿ ಉದ್ಘಾಟಿಸಿದರು?
••► ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಬಿದರೆಹಳ್ಳ ಕಾವಲ್‍.


2253) ಇತ್ತೀಚೆಗೆ ನಡೆದ ದಕ್ಷಿಣ ಏಷ್ಯಾ ಫೆಡರೇಷನ್ ಫುಟ್‍ಬಾಲ್(ಸ್ಯಾಫ್) ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಷ್ಟ್ರ ಯಾವುದು?
••► ಭಾರತ


2254) ಇತ್ತೀಚೆಗೆ ನಡೆದ ದಕ್ಷಿಣ ಏಷ್ಯಾ ಫೆಡರೇಷನ್ ಫುಟ್‍ಬಾಲ್(ಸ್ಯಾಫ್) ಟೂರ್ನಿಯಲ್ಲಿ ರನ್ನರ್ ಅಪ್ ಆದ ರಾಷ್ಟ್ರ ಯಾವುದು?
••► ಆಘ್ಪಾನಿಸ್ತಾನ


2255) ಕೃತಕ ಕಾಲಿನಲ್ಲಿ ಮೌಂಟ್ ಎವರೆಸ್ಟ್ ಏರಿ ದಾಖಲೆ ಬರೆದಿದ್ದ ಅರುಣಿಮಾ ಸಿನ್ಹಾ ಇತ್ತೀಚೆಗಷ್ಟೇ ಅರ್ಜೆಂಟೀನಾದ ಮೌಂಟೆ ಅಕಂಕಾವಾ ಏರುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಹಾಗಾದರೆ ಈ ಮೌಂಟೆ ಅಕಂಕಾವಾ ಪರ್ವತವು ಯಾವ ಪರ್ವತ ಶ್ರೇಣಿಗಳ ಸಾಲಿನಲ್ಲಿದೆ?
••► ಮೆಂಡೋಜಾ ಪ್ರಾಂತ್ಯದ ಆಂಡೀಸ್ ಪರ್ವತ ಶ್ರೇಣಿಗಳ ಸಾಲಿನಲ್ಲಿ.


2256) ಇತ್ತೀಚೆಗೆ ಅರ್ಜೆಂಟೀನಾದ ಮೌಂಟೆ ಅಕಂಕಾವಾ ಪರ್ವತವನ್ನು ಏರುವುದರೊಂದಿಗೆ ವಿಶ್ವದ 5 ಪರ್ವತವನ್ನು ಕೃತಕ ಕಾಲಿನೊಂದಿಗೆ ಏರಿದ ವಿಶ್ವದ ಮೊದಲ ಮಹಿಳೆ ಎನ್ನುವ ದಾಖಲೆಗೆ  ಪಾತ್ರರಾದ ಮಹಿಳೆ ಯಾರು?
••► ಅರುಣಿಮಾ ಸಿನ್ಹಾ


2257) ಡಿಎವಿಎ (DAVA) ವಿಸೃತ ರೂಪ ::
••► Drug Authentication Verification Application)
*.ಡ್ರಗ್ ಅಥೆಂಟಿಕೇಶನ್ ಅಂಡ್ ವೆರಿಫಿಕೇಷನ್ ಅಪ್ಲಿಕೇಷನ್


2258) ಇತ್ತೀಚೆಗೆ ಏಷ್ಯಾ-ಫೆಸಿಫಿಕ್ ಕೌನ್ಸಿಲ್ ಫಾರ್ ಟ್ರೇಡ್ ಫಸಿಲಿಟೇಷನ್(ಎಪಿಸಿಟಿಎಫ್) ಪ್ರಧಾನ ಮಾಡುವ 2015ನೇ ಸಾಲಿನ ಇ-ಏಷ್ಯಾ ಪ್ರಶಸ್ತಿ ಯಾರಿಗೆ ನೀಡಲಾಗಿದೆ?
••► ಕೇಂದ್ರ ಸರ್ಕಾರದ ವಾಣಿಜ್ಯ ಇಲಾಖೆಯ (ಡಿಎವಿಎ)ಗೆ .


2259) ಇತ್ತೀಚೆಗೆ ದೇಶದ ಯಾವ ವಾಯುನೆಲೆಗೆ ನುಗ್ಗಿದ ಉಗ್ರರು ಭಾರತೀಯ ಯೋಧರು ಹಾಗೂ ವಾಯುನೆಲೆಯ ತಾಂತ್ರಿಕ ವಿಭಾಗವನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು?
••► ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆಗೆ.


2260) ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂದು ಘೋಷಿಸಲಾಗಿದೆ.


2261) ವಿಶ್ವಸಂಸ್ಥೆಯು 2016, ಜನವರಿ 1ರ ಮಧ್ಯರಾತ್ರಿಯಿಂದಲೇ ವಿಶ್ವಸಂಸ್ಥೆಯ ಎಲ್ಲ 193 ಸದಸ್ಯ ರಾಷ್ಟ್ರಗಳಲ್ಲೂ  17 ಪ್ರಮುಖ ಧ್ಯೇಯಗಳಡಿ 169 ಗುರಿಗಳನ್ನು ಆಳವಡಿಸಿಕೊಂಡಿದ್ದು, ಇವುಗಳನ್ನು ಸುಸ್ಥಿರ ಅಭಿವೃದ್ಧಿ ಗುರಿಗಳು (ಜಿಎಸ್‍ಡಿ) ಎಂದು ಕರೆಯಲಾಗಿದೆ.

*.ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೂ ಅನ್ವಯಿಸಲಿವೆ. ಸಾಮಾಜಿಕ, ಆರ್ಥಿಕ, ಪರಿಸರ ಎಂಬ 3 ಆಯಾಮಗಳನ್ನು ಹೊಂದಿರುವ ಜಿಎಸ್‍ಡಿ 2030ಕ್ಕೆ ಅಂತ್ಯಗೊಳ್ಳಲಿದೆ.!


2262) ಗುಜರಾತಿ ಭಾಷೆಯ ಬಹುಮುಖ್ಯ ಕಾದಂಬರಿಕಾರ, ಕವಿ ಹಾಗೂ ವಿಮರ್ಶಕ ಡಾ. ರಘುವೀರ್ ಚೌಧರಿ ಅವರಿಗೆ 2015ರ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ


2263) ಇತ್ತೀಚೆಗೆ ಭಾರತೀಯ ವಿಜ್ಞಾನ ಕಾಂಗ್ರೇಸ್‍ನ 103ನೇ ಸಮಾವೇಶ ಎಲ್ಲಿ ನಡೆಯಿತು?
••► ಮೈಸೂರಿನ ಮಾನಸ ಗಂಗೋತ್ರಿಯಲ್ಲಿ


2264) ಭಾರತೀಯ ವಿಜ್ಞಾನ ಕಾಂಗ್ರೇಸ್‍ನ 102ನೇ ಸಮಾವೇಶ ಎಲ್ಲಿ ನಡೆದಿತ್ತು.?
••► ಮುಂಬೈನಲ್ಲಿ


2265) ಗ್ರಾಮೀಣ ಪ್ರದೇಶಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಪ್ರಸ್ತುತ ‘ಇಂದಿರಾ ಆವಾಸ್ ಯೋಜನೆ’(ಐಎವೈ)ಯು ಏನೆಂದು ಮರುನಾಮಕರಣ ಆಗಲಿದೆ.?
••► ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’(ಪಿಎಂಎವೈ)


2266) ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’(ಪಿಎಂಎವೈ)ಯಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಯೋಜನಾ ವೆಚ್ಚ ಪಾಲು ಎಷ್ಟು?
••► 75:25ರ ಪ್ರಮಾಣ.


2267) ಇತ್ತೀಚೆಗೆ ಎನ್‍ಇಎಕ್ಸ್ ಜಿಟಿವಿ ಜಿಟಿವಿ ಸಂಸ್ಥೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿಯಾಗಿ ಯಾರು ನೇಮಕಗೊಂಡಿದ್ದಾರೆ.?
••► ಅಭೀಶ್ ವರ್ಮಾ


2268) ಇತ್ತೀಚೆಗೆ ಕೊಚ್ಚಿನ್ ಶಿಪ್‍ಯಾರ್ಡ್ ಲಿಮಿಟೆಡ್ ‍ನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾಗಿ ಯಾರು ಅಧಿಕಾರ ವಹಿಸಿಕೊಂಡಿದ್ದಾರೆ.?
••► ಮಧು ಎಸ್,ನಾಯರ್.


2269) ಇತ್ತೀಚೆಗೆ ಬ್ರಿಟನ್ ನ ಅತಿ ದೊಡ್ಡ ಗೌರವ ಪ್ರತಿಷ್ಟಿತ ನೈಟ್ ಹುಡ್ ಪ್ರಶಸ್ತಿಯನ್ನು ಪಡೆದ ಭಾರತೀಯ ಮೂಲದ ಕ್ಯಾನ್ಸರ್ ತಜ್ಞ?
••► ಹರ್ ಪಾಲ್ ಸಿಂಗ್ ಕುಮಾರ್


2270) ಬ್ರಿಟನ್ ನ ಅತಿ ದೊಡ್ಡ ಗೌರವ ಪ್ರತಿಷ್ಟಿತ ನೈಟ್ ಹುಡ್ ಪ್ರಶಸ್ತಿ ಪಡೆದವರನ್ನು ನಾಮಾಂಕಿತವಾಗಿ ಏನೆಂದು ಸಂಬೋದಿಸಲಾಗುತ್ತದೆ?
••► ‘ಸರ್’


2271) ಬ್ರಿಟನ್ ನ ಅತಿ ದೊಡ್ಡ ಗೌರವ ಪ್ರತಿಷ್ಟಿತ ನೈಟ್ ಹುಡ್ ಪ್ರಶಸ್ತಿ ಪಡೆದ ಮಹಿಳೆಯರನ್ನು  ನಾಮಾಂಕಿತವಾಗಿ ಏನೆಂದು ಸಂಬೋದಿಸಲಾಗುತ್ತದೆ?
••► ‘ಡೇಮ್ ಹುಡ್’


2272) ಈ ಹಿಂದೆ ಕವಿ ರವೀಂಧ್ರನಾಥ್ ಠಾಗೋರ್ (ಫೆಬ್ರವರಿ 1915ರಲ್ಲಿ ನೀಡಲಾಗಿತ್ತು) ಅವರಿಗೆ ಒಲಿದಿದ್ದ ಪ್ರತಿಷ್ಟಿತ ನೈಟ್ ಹುಡ್ ಪದವಿಯನ್ನು ಅವರು ಯಾವ ಕಾರಣಕ್ಕಾಗಿ ಹಿಂದಿರುಗಿಸಿದ್ದರು?
••► ಬ್ರಿಟಿಷರಿಂದ ಪಂಜಾಬ್ ಜನತೆಯ ಮೇಲಾದ ದೌರ್ಜನ್ಯ ಖಂಡಿಸಿ.


2273) ವಿದ್ಯುತ್ ಘಟಕದ ಪರಿಕರಗಳ ತಯಾರಿಕಾ ಸಂಸ್ಥೆಯಾಗಿದ್ದ 'ಭಾರತ್ ಹೆವಿ ಇಲೆಕ್ಟ್ರಿಕಲ್ ಕಂಪನಿ'(ಬಿಎಚ್‍ಇಎಲ್) ಯು ಯಾವಾಗ ಸ್ಥಾಪನೆಯಾಯಿತು?
••► 1964ರಲ್ಲಿ .


2274) ರೋಟಾವೈರಸ್ ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ಕೈಗೊಂಡ ದೇಶದ ಮೊಟ್ಟಮೊದಲ ರಾಜ್ಯವಾಗಿ ಯಾವ ರಾಜ್ಯ ಹೊರಹೊಮ್ಮಿದೆ.?
••► ಹಿಮಾಚಲ ಪ್ರದೇಶ.

━━━━━━━━━━━━━━••● ಜನೆವರಿ 2016 - ಮುಕ್ತಾಯ ●••━━━━━━━━━━━━━━

☀️ ಕರ್ನಾಟಕ ಲೋಕಸೇವಾ ಆಯೋಗ - ಕೆಎಎಸ್ ಸಂದರ್ಶನ : ಹೋಟಾ ವರದಿ ಶಿಫಾರಸ್ಸು

☀️ ಕರ್ನಾಟಕ ಲೋಕಸೇವಾ ಆಯೋಗ - ಕೆಎಎಸ್ ಸಂದರ್ಶನ : ಹೋಟಾ ವರದಿ ಶಿಫಾರಸ್ಸು
  ━━━━━━━━━━━━━━━━━━━━━━━━━━━━━━━━━━━━━━━━━━━━━


(ಹೋಟಾ ಶಿಫಾರಸಿನಂತೆ ಸಂದರ್ಶನ: ಹಾದಿ ಸುಗಮ)

 ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ಮತ್ತು ಹೆಚ್ಚುವರಿ ಕಾರ್ಯಭಾರಗಳ ನಡವಳಿ) ತಿದ್ದುಪಡಿ ಮಸೂದೆಗೆ ರಾಜ್ಯಪಾಲರ ಒಪ್ಪಿಗೆ ದೊರೆತಿದೆ.

464 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಆಯ್ಕೆಗೆ  ಕರ್ನಾಟಕ ಲೋಕಸೇವಾ ಆಯೋಗ ಜೂನ್‌ನಲ್ಲಿ ಸಂದರ್ಶನ ನಡೆಸುವ ಸಾಧ್ಯತೆ ಇದ್ದು, ಪಿ.ಸಿ.ಹೋಟಾ ಸಮಿತಿ ಶಿಫಾರಸು ಅನ್ವಯ ಸಂದರ್ಶನ ನಡೆಸಲು ಈಗ ದಾರಿ ಸುಗಮವಾಗಿದೆ.


★ ಸಂದರ್ಶನ ನಿಯಮಗಳು ಹೀಗಿವೆ:

*ಗೆಜೆಟೆಡ್‌ ಪ್ರೊಬೆಷನರಿ ವ್ಯಕ್ತಿತ್ವ ಪರೀಕ್ಷೆಗೆ 200 ಅಂಕಗಳಿರುತ್ತವೆ (ಮುಖ್ಯ ಪರೀಕ್ಷೆಯ ಅಂಕಗಳ ಶೇ 10.25ರಷ್ಟು).

*ಒಂದು ಖಾಲಿ ಹುದ್ದೆಗೆ ಮೂರು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಬೇಕು.

*ಅಭ್ಯರ್ಥಿಗಳಿಗೆ ಜ್ಞಾನ ಆಧಾರಿತ ಪ್ರಶ್ನೆಗಳನ್ನು ಕೇಳುವಂತಿಲ್ಲ. ಪ್ರತಿ ಸಮಿತಿ ದಿನಕ್ಕೆ 9 ಅಭ್ಯರ್ಥಿಗಳ ಸಂದರ್ಶನ ಮಾತ್ರ ಮಾಡಬೇಕು ಮತ್ತು ಸಂದರ್ಶನ ಅವಧಿ 25ರಿಂದ 30 ನಿಮಿಷಗಳು ಇರಬೇಕು.

*ಸಂದರ್ಶನಗಳಲ್ಲಿ ಕೆಪಿಎಸ್‌ಸಿ ಹೊರತಾದ ವಿಷಯ ತಜ್ಞರು ಇಲ್ಲದಿರುವುದು ಅಪನಂಬಿಕೆ ಹಾಗೂ ಊಹೆಗಳಿಗೆ ಎಡೆಮಾಡಿಕೊಡುತ್ತದೆ.

*ಪ್ರತಿ ಸಂದರ್ಶನ ಸಮಿತಿಯ ಅಧ್ಯಕ್ಷತೆಯನ್ನು ಕೆಪಿಎಸ್‌ಸಿ ಅಧ್ಯಕ್ಷರು ಅಥವಾ ಹಿರಿಯ ಸದಸ್ಯರು ವಹಿಸಬೇಕಾಗಿದ್ದು, ಇತರೆ ನಾಲ್ವರು ಸದಸ್ಯರು ಇರಬೇಕು. ಅವರು ಹೊರ ರಾಜ್ಯದವರಾಗಿರುವುದು ಅಪೇಕ್ಷಣೀಯ.

*ತಜ್ಞರನ್ನಾಗಿ ನಿವೃತ್ತ ಐಎಎಸ್‌ ಅಧಿಕಾರಿಗಳು, ಕರ್ನಾಟಕ ಸರ್ಕಾರದ ಕಾರ್ಯದರ್ಶಿ ಹುದ್ದೆಗೆ ಸಮಾನಾಂತರ ಅಧಿಕಾರಿಗಳು, ವಿಶ್ರಾಂತ ಕುಲಪತಿಗಳು, ಐಐಟಿ, ಐಐಎಂ ಮುಂತಾದ ತರಬೇತಿ ಸಂಸ್ಥೆಗಳ ನಿವೃತ್ತ ಪ್ರಾಧ್ಯಾಪಕರು ಇರಬೇಕು ಮತ್ತು ಅನುವಾದಕ್ಕಾಗಿ ಕನ್ನಡ ಬಲ್ಲವರೂ ಒಬ್ಬರು ಇರಬೇಕು.

*ಪ್ರತಿ ಸದಸ್ಯರು ಪ್ರತ್ಯೇಕ ಅಂಕ ನೀಡಬೇಕು. ನಿಗದಿತ ಸರಾಸರಿ ಅಂಕಗಳಿಗಿಂತ ಅತಿ ಹೆಚ್ಚು ಇಲ್ಲವೇ ಅತಿ ಕಡಿಮೆ ಅಂಕ ನೀಡಿರುವ ಇಬ್ಬರು ಸದಸ್ಯರ ಅಂಕಗಳನ್ನು ಪರಿಗಣಿಸುವಂತಿಲ್ಲ. ಉಳಿದ ಮೂವರು ಸದಸ್ಯರ ಅಂಕಗಳು ಸರಾಸರಿ ಅಧಿಕೃತ ಅಂಕಗಳಾಗುತ್ತವೆ.

(5 May, 2016 ಪ್ರಜಾವಾಣಿ ವಾರ್ತೆ)    

Wednesday, 4 May 2016

☀ದೇಶಕ್ಕೆ ಸ್ವತಂತ್ರ ದಿಕ್ಸೂಚಿ ವ್ಯವಸ್ಥೆ- ️ಐತಿಹಾಸಿಕ ಸಾಧನೆ ಮಾಡಿದ ಇಸ್ರೋ ವಿಜ್ಞಾನಿಗಳು (India's Independent Navigation System- Achieved by ISRO scientists)

 ☀ದೇಶಕ್ಕೆ ಸ್ವತಂತ್ರ ದಿಕ್ಸೂಚಿ ವ್ಯವಸ್ಥೆ- ️ಐತಿಹಾಸಿಕ ಸಾಧನೆ ಮಾಡಿದ ಇಸ್ರೋ ವಿಜ್ಞಾನಿಗಳು
(India's Independent Navigation System- Achieved by ISRO scientists) 
━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)


ದೇಶಕ್ಕೆ ಸ್ವತಂತ್ರ ದಿಕ್ಸೂಚಿ ವ್ಯವಸ್ಥೆಯನ್ನು ಕಲ್ಪಿಸುವ ಐತಿಹಾಸಿಕ ಪ್ರಕ್ರಿಯೆ ಕೊನೆಯ ಹಂತವನ್ನು ಇಸ್ರೋ ಪೂರ್ಣಗೊಳಿಸಿದೆ. ದಿಕ್ಸೂಚಿ ವ್ಯವಸ್ಥೆಯ ಕೊನೆಯ ಹಾಗೂ ಏಳನೆಯ ಉಪಗ್ರಹವನ್ನು ಭೂಸ್ಥಿರ ಕಕ್ಷೆಗೆ ಹಾರಿಬಿಡುವ ಮೂಲಕ ವಿಶ್ವದಲ್ಲಿ ಸ್ವತಂತ್ರ ದಿಕ್ಸೂಚಿ ವ್ಯವಸ್ಥೆಯನ್ನು ಹೊಂದಿರುವ ಐದನೇ ದೇಶವಾಗಿ ಭಾರತ ಇತಿಹಾಸ ಬರೆದಿದೆ.

ಈ ವ್ಯವಸ್ಥೆಗೆ ನಾವಿಕ್ಎಂದು ಹೆಸರಿಡಲಾಗಿದೆ. 

ಇಸ್ರೋದ ಪಿಎಸ್ಎಲ್ವಿ ರಾಕೆಟ್ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮಧ್ಯಾಹ್ನ 12.50ಕ್ಕೆ ಐಆರ್ಎನ್ಎಸ್ಎಸ್ 1ಜಿ(IRNSS-1G)ಯನ್ನು ಉಡ್ಡಯನಗೊಳಿಸಿತು. ಕೇವಲ 20 ನಿಮಿಷಗಳಲ್ಲಿ ಉಪಗ್ರಹ ತನ್ನ ಕಕ್ಷೆ ತಲುಪಿದೆ. ಇದರಿಂದ ಅಮೆರಿಕದ ಜಿಪಿಎಸ್ ವ್ಯವಸ್ಥೆಯ ಮೇಲೆ ಭಾರತದ ಅವಲಂಬನೆ ಕೊನೆಯಾಗಿದೆ.

ಸದ್ಯ ಕೇವಲ ಅಮೆರಿಕ, ರಷ್ಯಾ, ಚೀನಾ ಮತ್ತು ಐರೋಪ್ಯ ಒಕ್ಕೂಟಗಳು ಸ್ವದೇಶಿ ದಿಕ್ಸೂಚಿ ಉಪಗ್ರಹಗಳನ್ನು ಹೊಂದಿವೆ.

ಎಲ್ಲ 7 ಸೆಟಲೈಟ್ಗಳನ್ನು ಕರ್ನಾಟಕದ ಬ್ಯಾಲಾಳುವಿನಲ್ಲಿರುವ ಇಸ್ರೋ ಕೇಂದ್ರದಿಂದಲೇ ನಿಯಂತ್ರಿಸಲಾಗುತ್ತದೆ. ಅಲ್ಲದೆ ದೇಶದ 21 ಭಾಗಗಳಲ್ಲೂ ಕೇಂದ್ರಗಳಿದ್ದು, ಇಲ್ಲಿಂದ ಸೆಟಲೈಟ್ಗಳ ಚಲನೆ ಬಗ್ಗೆ ದತ್ತಾಂಶ ಸಂವಹನ ನಡೆಯಲಿದೆ.

*. ಒಟ್ಟು ವೆಚ್ಚ 1456 ಕೋಟಿ ರೂ.

*. ಸೆಟಲೈಟ್ಗೆ ಸರಾಸರಿ 150 ಕೋಟಿ ರೂ. ವೆಚ್ಚ

*. 2010 ಏಪ್ರಿಲ್ನಲ್ಲಿ ಯೋಜನೆಗೆ ರೂಪುರೇಷೆ

*. 2015ರಲ್ಲೇ ಯೋಜನೆ ಅಂತಿಮಗೊಳಿಸುವ ಗುರಿ

*. 7 ಸೆಟಲೈಟ್ಗಳ ಗುಚ್ಛದಿಂದ ದಿಕ್ಸೂಚಿ ವ್ಯವಸ್ಥೆ


★ ಉಪಗ್ರಹ ಉಡಾವಣಾ ದಿನ:

ಐಆರ್ಎನ್ಎಸ್ಎಸ್-1ಎ 2013 ಜುಲೈ 1

 ಐಆರ್ಎನ್ಎಸ್ಎಸ್-1ಬಿ 2014 ಏಪ್ರಿಲ್ 4

 ಐಆರ್ಎನ್ಎಸ್ಎಸ್-1ಸಿ 2014 ಅಕ್ಟೋಬರ್ 16

 ಐಆರ್ಎನ್ಎಸ್ಎಸ್-1ಡಿ 2015 ಮಾರ್ಚ್ 28

 ಐಆರ್ಎನ್ಎಸ್ಎಸ್-1ಇ 2016 ಜನವರಿ 20

 ಐಆರ್ಎನ್ಎಸ್ಎಸ್-1ಎಫ್ 2016 ಮಾರ್ಚ್ 10

 ಐಆರ್ಎನ್ಎಸ್ಎಸ್-1ಜಿ 2016 ಏಪ್ರಿಲ್ 28


★ ಸೆಟ್‍ಲೈಟ್‍ಗಳ ವಿವರ:

ಈಗ ಕಕ್ಷೆಗೇರಿರುವುದು 7 ಸೆಟಲೈಟ್ಗಳು. ಈ ಪೈಕಿ 3 ಸೆಟಲೈಟ್ಗಳು ಭೂಸ್ಥಿರ ಕಕ್ಷೆ ಯಲ್ಲಿದ್ದರೆ, ಇನ್ನು 4 ಸೆಟಲೈಟ್ ಭೂಮಿಯ ಪರಿಭ್ರಮಣೆ ಮಾಡುತ್ತವೆ. ಆದರೆ ತುರ್ತು ಪರಿಸ್ಥಿತಿಗಾಗಿ ಭೂಮಿಯ ಮೇಲೆ 2 ಸೆಟಲೈಟ್ಗಳನ್ನು ಸಿದ್ಧಗೊಳಿಸಿ ಇಡಲಾಗಿದೆ. ಹೀಗಾಗಿ ದಿಕ್ಸೂಚಿ ವ್ಯವಸ್ಥೆಗೆ ಇಸ್ರೋ ಒಟ್ಟು 9 ಸೆಟಲೈಟ್ಗಳನ್ನು ನಿರ್ವಿುಸಿದೆ.


★ ಹಿನ್ನೆಲೆ: 

ಪಾಕಿಸ್ತಾನಿ ಪಡೆಗಳು 1999ರಲ್ಲಿ ಕಾರ್ಗಿಲ್ಗೆ ದಾಳಿ ಮಾಡಿದ ಸಂದರ್ಭ ಚಾಲ್ತಿಯಲ್ಲಿದ್ದಿದ್ದು, ಅಮೆರಿಕದ ಜಿಪಿಎಸ್ ವ್ಯವಸ್ಥೆ. ಪಾಕ್ ಪಡೆಗಳ ಚಲನವಲನ ಕಂಡುಕೊಳ್ಳಲು ಅಮೆರಿಕದ ಜಿಪಿಎಸ್ ವ್ಯವಸ್ಥೆಯನ್ನು ಬಳಸಿಕೊಳ್ಳುವುದಕ್ಕೆ ಅವಕಾಶ ನೀಡುವಂತೆ ಭಾರತ ಕೋರಿತ್ತು. ಆದರೆ ಅಮೆರಿಕ ಇದಕ್ಕೆ ಅವಕಾಶ ನೀಡಲಿಲ್ಲ. ಆಗಲೇ ಸ್ವತಂತ್ರ ದಿಕ್ಸೂಚಿ ವ್ಯವಸ್ಥೆಯ ಅಗತ್ಯತೆಯ ಬಗ್ಗೆ ಅರಿತುಕೊಂಡ ಭಾರತ, ಆ ದಿಸೆಯಲ್ಲಿ ಪ್ರಯತ್ನ ಆರಂಭಿಸಿತ್ತು.


★ ಸೆಟ್‍ಲೈಟ್ ದಿಕ್ಸೂಚಿ ವ್ಯವಸ್ಥೆಯ ಬಗೆಗಿನ ಮಾಹಿತಿ: 

ಸೆಟಲೈಟ್ಗಳಿಂದ ದಿಕ್ಸೂಚಿ ವ್ಯವಸ್ಥೆಯನ್ನು ಒದಗಿಸಬಹುದು ಎಂಬ ಕಲ್ಪನೆ ಮೂಡಿದ್ದು ಅಮೆರಿಕದಲ್ಲಿ. 1960ರ ಏಪ್ರಿಲ್ 13ರಂದು ಅಮೆರಿಕದಲ್ಲಿ ಮೊದಲ ಬಾರಿಗೆ ಟ್ರಾನ್ಸಿಟ್ 1ಬಿ ಎಂಬ ಸೆಟಲೈಟನ್ನು ಕಕ್ಷೆಗೆ ಉಡಾವಣೆ ಮಾಡಲಾಗಿತ್ತು. ಆದರೆ ದಿಕ್ಸೂಚಿ ವ್ಯವಸ್ಥೆ ರೂಪಿಸಲು ಆಗ ಇದ್ದ ದೊಡ್ಡ ಸಮಸ್ಯೆಯೇನೆಂದರೆ ಸಮಯ ಬದಲಾವಣೆಯದ್ದು. ಸಾಮಾನ್ಯವಾಗಿ ಜಿಪಿಎಸ್ ಬಳಸುವಾಗ ನಾಲ್ಕು ಸೆಟಲೈಟ್ಗಳು ನಮಗೆ ದಾರಿ ತೋರಿಸಲು ಸಹಾಯ ಮಾಡುತ್ತಿರುತ್ತವೆ. ಮೂರು ಸೆಟಲೈಟ್ಗಳು ದಿಕ್ಕು ತೋರಿಸಿದರೆ ನಾಲ್ಕನೆಯದು ಸಮಯದ ಅಂತರವನ್ನು ವಿವರಿಸುತ್ತದೆ. ಆದರೆ ಗುರುತ್ವಾಕರ್ಷಣೆಯ ಪ್ರಭಾವ ಕಡಿಮೆಯಾದಂತೆ ಕಾಲದ ಓಟವೂ ನಿಧಾನವಾಗುತ್ತದೆ. ಅಂದರೆ ಭೂಮಿಯ ಮೇಲಿನ ಸಮಯಕ್ಕೂ ಬಾಹ್ಯಾಕಾಶದಲ್ಲಿನ ಸಮಯಕ್ಕೂ ದಿನಕ್ಕೆ 38 ಮಿಲಿ ಸೆಕೆಂಡುಗಳಷ್ಟು ವ್ಯತ್ಯಾಸವಿದೆ. ಈಗ ಸೆಟಲೈಟ್ಗಳಲ್ಲಿ ನಿತ್ಯವೂ ಈ ಸಮಯವನ್ನು ಸರಿಪಡಿಸಲಾಗುತ್ತದೆ. ಅಂದಹಾಗೆ ಬಾಹ್ಯಾಕಾಶದಲ್ಲಿನ 38 ಮಿಲಿ ಸೆಕೆಂಡಿನ ವ್ಯತ್ಯಾಸ ಭೂಮಿಯ ಮೇಲೆ 10 ಕಿ.ಮೀ.ಗಳ ಅಂತರಕ್ಕೆ ಕಾರಣವಾಗುತ್ತದೆ.

(Link to Join Telegram ...https://telegram.me/spardhaloka)

☀️ pH ಮೌಲ್ಯ - ವಿವಿಧ ದ್ರವ್ಯಗಳಲ್ಲಿ pH ಮೌಲ್ಯ : (pH value and it's different substances)

☀️ pH ಮೌಲ್ಯ - ವಿವಿಧ ದ್ರವ್ಯಗಳಲ್ಲಿ pH ಮೌಲ್ಯ :
(pH value and it's different substances)
━━━━━━━━━━━━━━━━━━━━━━━━━━━━━━━━━━━━━━━━━━━━━

ಸಾಮಾನ್ಯ ವಿಜ್ಞಾನ
(General Science)


★pH ಮೌಲ್ಯವು ಒಂದು ದ್ರವವೋ ಅಥವಾ ಪ್ರತ್ಯಮ್ಲವೋ ಎಂದು ಕಂಡು ಹಿಡಿಯಲು ರಸಾಯನ ಶಾಸ್ತ್ರದಲ್ಲಿ ಬಳಸುವ ವಿಧಾನವಾಗಿದೆ.

   pH = -log [H+1]

*.pH ಮೌಲ್ಯ ವು 0 ಯಿಂದ 14 ವರೆಗಿನ ಮೌಲ್ಯವನ್ನು ಹೊಂದಿರುತ್ತದೆ.

*.pH ಮೌಲ್ಯವು 7 ಕ್ಕಿಂತ ಕಡಿಮೆ ಇದ್ದರೆ ಅದು ಆಮ್ಲವಾಗಿರುತ್ತದೆ.

*.pH ಮೌಲ್ಯವು 7 ಕ್ಕಿಂತ ಹೆಚ್ಚಾಗಿದ್ದರೆ ಅದು ಪ್ರತ್ಯಾಮ್ಲ(ಕ್ಷಾರ)ವಾಗಿರುತ್ತದೆ.

*.pH ಮೌಲ್ಯವು 7 ಆಗಿದ್ದರೆ ಆಮ್ಲವೂ ಅಲ್ಲ ಪ್ರತ್ಯಾಮ್ಲವೂ ಆಗಿರುವುದಿಲ್ಲ ಅದು ತಟಸ್ಥವಾಗಿರುತ್ತದೆ.
ಉದಾ:-ನೀರು

*.ಆಮ್ಲ ಮಳೆಯು pH ಮೌಲ್ಯದ 5.6 ಕ್ಕಿಂತ ಕಡಿಮೆ ಇರುತ್ತದೆ.



★ ವಿವಿಧ ದ್ರವಗಳಲ್ಲಿ pH ಮೌಲ್ಯ :

ಜೀರ್ಣಕ ರಸ- 1

ಮೂತ್ರ- 6.0

ನಿಂಬೆ- 2.0

ವಿನೆಗಾರ್- 2.2

ಹಾಲು- 6.6

ಸೇಬು- 3

ಶುದ್ಧ ನೀರು- 7

ಟೊಮ್ಯಾಟೊ - 4.5

ರಕ್ತ - 7.4

ಸಮುದ್ರ ನೀರು- 7.5 -8.4

ಚರ್ಮ- 5.5

ಅಮೋನಿಯ - 11

ಬೇಕಿಂಗ್ ಸೋಡಾ- 8.3

ಮಿಲ್ಕ್ ಆಫ್ ಮ್ಯಾಗ್ನೀಶಿಯಾ- 10.5

ವೈನ್ & ಬೀರ್- 4

ಸುಣ್ಣ - 12.4

ಸೋಡಿಯಂ ಹೈಡ್ರಾಕ್ಸೈಡ್ - 14

(Link to Join Telegram ...https://telegram.me/spardhaloka)

☀️ ಬ್ರೆಡ್ ತಯಾರಿಕೆಯಲ್ಲಿ ಯೀಸ್ಟ್ (ಹುದುಗು) ಬಳಕೆ ಬೇಕೆ ಬೇಕು. ಏಕೆ?

☀️ ಬ್ರೆಡ್ ತಯಾರಿಕೆಯಲ್ಲಿ ಯೀಸ್ಟ್ (ಹುದುಗು) ಬಳಕೆ ಬೇಕೆ ಬೇಕು. ಏಕೆ?
━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ವಿಜ್ಞಾನ 
(General Science)


ANS:—        ಯೀಸ್ಟ್ ಎಂಬುದು ಕಣ್ಣಿಗೆ ಕಾಣದ ಫಂಗಸ್. ಬ್ರೆಡ್ ತಯಾರಿಸಲು ಯೀಸ್ಟ್ ಬಳಸದಿದ್ದರೆ ಬ್ರೆಡ್ ಊದಿಕೊಂಡು ಮೆತ್ತಗೆ ಇರುವುದಿಲ್ಲ. ಬದಲಿಗೆ ಚಪಾತಿಯಂತಾಗುವುದು. ಯೀಸ್ಟನ್ ಕೆಲಸವನ್ನು ಅರಿಯಲು ಹೀಗೊಂದು ಪ್ರಯೋಗ ಮಾಡಬಹುದು. ಮೂರು ಚಮಚದಷ್ಟು ಯೀಸ್ಟನ್ನು ಗಾಜಿನ ಬಾಟಲಿಗೆ ಹಾಕಿ. ನಂತರ ಎರಡು ಚಮಚದಷ್ಟು ಸಕ್ಕರೆ ಹಾಕಿ. ನಿಧಾನವಾಗಿ ಅರ್ಧ ಬಾಟಲಿಯಷ್ಟು ಬೆಚ್ಚನೆ ನೀರು ತುಂಬಿ ಬಲೂನಿನ ಬಾಯಿಯನ್ನು ಬಾಟಲಿಯ ತುದಿಗೆ ಭದ್ರಪಡಿಸಿ. ಇದಾದ ಒಂದು ಗಂತೆಯ ನಂತರ ನೀರಿನಲ್ಲಿ ಗುಳ್ಳೆಗಳು ಉಂಟಾಗಿ ಬಲೂನಿಗೆ ಗಾಳಿ ತುಂಬಿಕೊಳ್ಳುವುದು. ಯೀಸ್ಟ್ ಸಕ್ಕರೆಯನ್ನು ಭಕ್ಷಿಸುವುದರಿಂದ ಹೀಗಾಗುವುದು.

ಈ ಪ್ರಕ್ರಿಯೆಯಲ್ಲಿ ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿಯಾಗುವುದು. ಈ ಅನಿಲ ನೀರಿನ ಮೂಲಕ ಹಾದು ಬಲೂನಿನೊಳಗೆ ಸೇರುವುದು. ಬ್ರೆಡ್ ತಯಾರಿಕೆಯಲ್ಲಿ ಯೀಸ್ಟ್ ಬಳಸಿದಾಗ ಹಿಟ್ಟಿನಲ್ಲಿರುವ ನೈಸರ್ಗಿಕ ಸಕ್ಕರೆಯನ್ನು ಯೀಸ್ಟ್ ಭಕ್ಷಿಸಿ ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ ಮಾಡುವುದು. ಬ್ರೆಡ್ ಸುಡುವಾಗ ಈ ಅನಿಲ ಹೊರ ಹೋಗಲು ಬ್ರೆಡ್ ಊದಿಕೊಳ್ಳುವುದು.

☀️ ಬಿಸಿಸಿಐ ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ ಹೋದ ವರ್ಷ ರಚಿಸಿದ ನಿವೃತ್ತ ನ್ಯಾಯಮೂರ್ತಿ ಆರ್.ಎಮ್.ಲೋಧಾ ಅವರ ನೇತೃತ್ವದ ಸಮಿತಿಯು ಸುಪ್ರೀಂ ಕೋರ್ಟ್ ಸಲ್ಲಿಸಿದ ವರದಿಯಲ್ಲಿನ ಪ್ರಮುಖ ಅಂಶಗಳು : (Recommendations of R.M.Lodha Committee)

☀️ ಬಿಸಿಸಿಐ ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ ಹೋದ ವರ್ಷ ರಚಿಸಿದ ನಿವೃತ್ತ ನ್ಯಾಯಮೂರ್ತಿ ಆರ್.ಎಮ್.ಲೋಧಾ ಅವರ ನೇತೃತ್ವದ ಸಮಿತಿಯು ಸುಪ್ರೀಂ ಕೋರ್ಟ್ ಸಲ್ಲಿಸಿದ ವರದಿಯಲ್ಲಿನ ಪ್ರಮುಖ ಅಂಶಗಳು :
(Recommendations of R.M.Lodha Committee) 
━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)


☀️ ಪ್ರಮುಖ ಸಲಹೆಗಳು :

• ಬೆಟ್ಟಿಂಗ್ ಅನ್ನು ಕಾನೂನು ಬದ್ದಗೊಳಿಸಬೇಕು

• ಸರ್ಕಾರಿ ನೌಕರರು ಹಾಗೂ ಸಚಿವರು ಬಿಸಿಸಿಐ ಆಡಳಿತದಲ್ಲಿ ಇರುವಂತಿಲ್ಲ.

• ಹಿತಾಸಕ್ತಿ ಸಂಘರ್ಷ ನಿರ್ಧರಿಸಲು ಒಬ್ಬ ಅಧಿಕಾರಿಯನ್ನು ನೇಮಿಸಬೇಕು.

• ಕ್ರಿಕೆಟ್ ಆಡಳಿತದಲ್ಲಿ 70 ವರ್ಷಕ್ಕಿಂತಲೂ ಹೆಚ್ಚಿನ ವಯಸ್ಸಿನವರು ಇರಬಾರದು.

• ಬಿಸಿಸಿಐ ಚುನಾವಣೆಗೆ ಒಂದು ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಒಬ್ಬರಷ್ಟೇ ಮತದಾನ ಮಾಡಬೇಕು

• ಬಿಸಿಸಿಐ, ಐಪಿಎಲ್ ಆಡಳಿತಕ್ಕೆ ಪ್ರತ್ಯೇಕ ಮಂಡಳಿಗಳನ್ನು ರಚಿಸಬೇಕು

• ಬಿಸಿಸಿಐಯನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ ತರಬೇಕು.

• ಆಟಗಾರರ ಸಂಘ ಆರಂಭಿಸಬೇಕು

• ಐಪಿಎಲ್ ಆಡಳಿತ ಮಂಡಳಿಯಲ್ಲಿ ಎರಡು ಫ್ರಾಂಚೈಸ್‍ಗಳ ಪ್ರತಿನಿಧಿಗಳಿಗೆ ಅವಕಾಶ ಕೊಡಬೇಕು.

• ಮೂರಕ್ಕಿಂತಲೂ ಹೆಚ್ಚು ಬಾರಿ ಬಿಸಿಸಿಐ ಪದಾಧಿಕಾರಿಯಾಗುವಂತಿಲ್ಲ. ಸತತ ಎರಡು ಸಲವಷ್ಟೇ ಪದಾಧಿಕಾರಿಯಾಗಬಹುದು. ಸತತ ಮೂರನೇ ಸಲಕ್ಕೆ ಸ್ಪರ್ಧಿಸುವಂತಿಲ್ಲ.

• ಒಂದೇ ಅವಧಿಯಲ್ಲಿ ಒಬ್ಬರು ಎರಡು ಹುದ್ದೆಗಳನ್ನು ಹೊಂದುವಂತಿಲ್ಲ.

• ಬಿಸಿಸಿಐ ಚುನಾವಣೆಯನ್ನು ನಿರ್ವಹಿಸಲು ಮಾಜಿ ಚುನಾವಣಾ ಆಯುಕ್ತರನ್ನು ಚುನಾವಣಾ ಅಧಿಕಾರಿಯಾಗಿ ನೇಮಿಸಬೇಕು.
(Link to Join Telegram ...https://telegram.me/spardhaloka)

☀️ ಇತ್ತೀಚೆಗೆ (ಜನೆವರಿ 4 ರಂದು) ರಾಷ್ಟ್ರಪತಿವರು ಅಂಕಿತ ಹಾಕಿದ ಐದು ಕಾಯ್ದೆಗಳು : (The Five Laws signed by The President of India recently)

☀️ ಇತ್ತೀಚೆಗೆ (ಜನೆವರಿ 4 ರಂದು) ರಾಷ್ಟ್ರಪತಿವರು ಅಂಕಿತ ಹಾಕಿದ ಐದು ಕಾಯ್ದೆಗಳು :
(The Five Laws signed by The President of India recently) 
━━━━━━━━━━━━━━━━━━━━━━━━━━━━━━━━━━━━━━━━━━━━━━━

ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಐದು ಕಾಯ್ದೆಗಳಿಗೆ ಅಂಕಿತ ಹಾಕಿದ್ದಾರೆ. ಅವುಗಳೆಂದರೆ:

1.ಮಧ್ಯಸ್ಥಿಕೆ ಮತ್ತು ಸಂಧಾನ (ತಿದ್ದುಪಡಿ) ಕಾಯ್ದೆ

2. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ

3. ವಾಣಿಜ್ಯ ನ್ಯಾಯಾಲಯ, ವಾಣಿಜ್ಯ ವಿಭಾಗ ಹಾಗೂ ಹೈಕೋರ್ಟ್‍ನ ವಾಣಿಜ್ಯ ಮೇಲ್ಮನವಿ ವಿಭಾಗ ಕಾಯ್ದೆ.

4. ಅಣುಶಕ್ತಿ (ತಿದ್ದುಪಡಿ) ಕಾಯ್ದೆ

5. ಬೋನಸ್ ಪಾವತಿ (ತಿದ್ದುಪಡಿ) ಕಾಯ್ದೆ- 2015.


☀️ ವಿವರಣೆ :

* ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆಯಡಿ ಉದ್ದೇಶಪೂರ್ವಕವಾಗಿ ಆಕೆಯ ಸಮ್ಮತಿ ಇಲ್ಲದೇ ಲೈಂಗಿಕ ಉದ್ದೇಶದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರನ್ನು ಸ್ಪರ್ಶಿಸುವುದು, ಯಾವುದೇ ಲೈಂಗಿಕ ಉದ್ದೇಶದ ಮಾತುಗಳನ್ನಾಡುವುದು, ಯಾವುದೇ ಕ್ರಿಯೆ ಅಥವಾ ಅಶ್ಲೀಲ ಸಂಜ್ಞೆಗಳನ್ನು ಮಾಡುವುದು ಹಾಗೂ ದೇವದಾಸಿಯಾಗಿ ದೇವಾಲಯಗಳಿಗೆ ಸಮರ್ಪಿಸುವುದು ಅಥವಾ ಇಂಥ ಕ್ರಮಗಳನ್ನು ಅಪರಾಧ ಎಂದು ಪರಿಗಣಿಸಲಾಗುವುದು.

* ಅಣುಶಕ್ತಿ (ತಿದ್ದುಪಡಿ) ಕಾಯ್ದೆಯಡಿ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಅಣುವಿದ್ಯುತ್ ನಿಗಮವು ಸರ್ಕಾರಿ ಸ್ವಾಮ್ಯದ ಇತರ ಉದ್ದಿಮೆಗಳ ಜತೆ ಸಹಭಾಗಿತ್ವ ವಹಿಸಲು ಅವಕಾಶ ಕಲ್ಪಿಸುತ್ತದೆ. ಈ ಕಾಯ್ದೆಯು 1962ರ ಅಣುವಿದ್ಯುತ್ ಕಾಯ್ದೆಯ ಜಾಗದಲ್ಲಿ ಜಾರಿಗೆ ಬರಲಿದ್ದು, ಹೊಸ ತಿದ್ದುಪಡಿ ಅನ್ವಯ ಸರ್ಕಾರಿ ಕಂಪನಿ ಎನ್ನುವ ವ್ಯಾಖ್ಯೆಯನ್ನು ಬದಲಿಸಲಾಗಿದೆ. ತಿದ್ದುಪಡಿ ನಿಯಮದ ಅನ್ವಯ ಇದರ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಸದ್ಯದ ಕಾಯ್ದೆ ಅನ್ವಯ ರಾಷ್ಟ್ರೀಯ ಅಣುವಿದ್ಯುತ್ ನಿಗಮ ಹಾಗೂ ಭಾರತ್ ನಭಿಕಿಯಾ ವಿದ್ಯುತ್ ನಿಗಮ ಲಿಮಿಟೆಡ್ ಮಾತ್ರ ಅಣುಶಕ್ತಿ ವಿಭಾಗದ ನಿಯಂತ್ರಣಕ್ಕೆ ಬರುತ್ತವೆ. ಇವು ಮಾತ್ರ ಅಣುಶಕ್ತಿ ಯೋಜನೆಗಳನ್ನು ನಿರ್ವಹಿಸಲು ಅವಕಾಶವಿದೆ.

* ಬೋನಸ್ ಪಾವತಿ (ತಿದ್ದುಪಡಿ) ಕಾಯ್ದೆ- 2015 ಅನ್ವಯ, ಬೋನಸ್‍ಗೆ ಲೆಕ್ಕ ಹಾಕುವ ಮಾಸಿಕ ವೇತನವನ್ನು ಏಳು ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಪ್ರಮಾಣ ಈಗ 3500 ರೂಪಾಯಿಗಳಾಗಿವೆ. ಇದು ಬೋಸನ್‍ಗೆ ಅರ್ಹವಾಗುವ ಗರಿಷ್ಠ ವೇತನವನ್ನು ಕೂಡಾ 10 ಸಾವಿರ ರೂಪಾಯಿಗಳಿಂದ 21 ಸಾವಿರ ರೂಪಾಯಿಗಳಿಗೆ ಹೆಚ್ಚಿಸಲು ಅವಕಾಶ ನೀಡಿದೆ.

* ಮಧ್ಯಸ್ಥಿಕೆ ಮತ್ತು ಸಂಧಾನ (ತಿದ್ದುಪಡಿ) ಕಾಯ್ದೆ ಅನ್ವಯ ಮಧ್ಯಸ್ಥಿಕೆದಾರ ಪ್ರಕರಣಗಳನ್ನು 18 ತಿಂಗಳ ಒಳಗಾಗಿ ವಿಲೇವಾರಿ ಮಾಡಬೇಕಾಗುತ್ತದೆ. ಹನ್ನೆರಡು ತಿಂಗಳು ಕಳೆದ ಬಳಿಕ ಮಧ್ಯಸ್ಥಿಕೆ ಸಂಧಾನ ಮತ್ತಷ್ಟು ವಿಳಂಬವಾಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಕೆಲವೊಂದು ನಿರ್ಬಂಧಗಳನ್ನು ವಿಧಿಸಲಾಗುತ್ತದೆ.

* ವಾಣಿಜ್ಯ ನ್ಯಾಯಾಲಯ, ವಾಣಿಜ್ಯ ವಿಭಾಗ ಹಾಗೂ ಹೈಕೋರ್ಟ್‍ನ ವಾಣಿಜ್ಯ ಮೇಲ್ಮನವಿ ವಿಭಾಗ ಕಾಯ್ದೆ ಅನ್ವಯ, ಆಯ್ದ ಹೈಕೋರ್ಟ್‍ಗಳಲ್ಲಿ ವಾಣಿಜ್ಯ ಪೀಠಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

— ಈ ಮೇಲಿನ ಎಲ್ಲ ಮಸೂದೆಗಳು ಇತ್ತೀಚೆಗೆ ನಡೆದ ಸಂಸತ್ ಅಧಿವೇಶನದಲ್ಲಿ ಆಂಗೀಕಾರಗೊಂಡಿದ್ದವು.
(Link to Join Telegram ...https://telegram.me/spardhaloka)

☀️ ಜಿಎಸ್‍ಡಿ (SDG) ಸುಸ್ಥಿರ ಅಭಿವೃದ್ಧಿ ಗುರಿಗಳು : (Sustained Development Goals)

☀️ ಜಿಎಸ್‍ಡಿ (SDG) ಸುಸ್ಥಿರ ಅಭಿವೃದ್ಧಿ ಗುರಿಗಳು :
(Sustained Development Goals) 

━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)


ವಿಶ್ವಸಂಸ್ಥೆಯು 17 ಪ್ರಮುಖ ಧ್ಯೇಯಗಳಡಿ 169 ಗುರಿಗಳನ್ನು ಆಳವಡಿಸಿಕೊಂಡಿದ್ದು, ಇವುಗಳನ್ನು ಸುಸ್ಥಿರ ಅಭಿವೃದ್ಧಿ ಗುರಿಗಳು (ಜಿಎಸ್‍ಡಿ) ಎಂದು ಕರೆಯಲಾಗಿದೆ. ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೂ ಅನ್ವಯಿಸಲಿವೆ. ಸಾಮಾಜಿಕ, ಆರ್ಥಿಕ, ಪರಿಸರ ಎಂಬ 3 ಆಯಾಮಗಳನ್ನು ಹೊಂದಿರುವ ಜಿಎಸ್‍ಡಿ 2030ಕ್ಕೆ ಅಂತ್ಯಗೊಳ್ಳಲಿದೆ.

☀️ ಎಸ್‍ಡಿಜಿ (SDG) ಯ ಪ್ರಮುಖ ಅಂಶಗಳು:—(2015-2030)
━━━━━━━━━━━━━━━━━━━━━━━━━━━━━━━━━━━━━━━━━━━━━━━
ಎಂಡಿಜಿಯ ಗುರಿಗಳ ಆಧಾರದಲ್ಲಿಯೇ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಆಳವಡಿಸಿಕೊಂಡಿದ್ದು, 17 ಪ್ರಮುಖ ಧ್ಯೇಯಗಳಡಿ 169 ಗುರಿಗಳನ್ನು ನಿರ್ಧರಿಸಲಾಗಿದೆ.


☀️17 ಧ್ಯೇಯಗಳು – (SDG) :
━━━━━━━━━━━━━━━━━━━━━

1) ವಿಶ್ವದಲ್ಲಿರುವ ಎಲ್ಲಾ ರೀತಿಯ ಬಡತನವನ್ನು ನಿರ್ಮೂಲನೆ ಮಾಡುವುದು.

2) ಆಹಾರ ಭದ್ರತೆಯ ಮೂಲಕ ಹಸಿವನ್ನು ನಿರ್ಮೂಲನೆ ಮಾಡುವುದು.

3) ಎಲ್ಲರಿಗೂ ಸಮಾನ ಮತ್ತು ಗುಣಮಟ್ಟದ ಶಿಕ್ಷಣ ಒದಗಿಸಿ ಕಲಿಕೆಗೆ ಅವಕಾಶ.

4) ಲಿಂಗ ಸಮಾನತೆ ಸಾಧಿಸುವುದು.

5) ಆಂತರಿಕ ಮತ್ತು ಅಂತರಾಷ್ಟ್ರೀಯ ಅಸಮಾನತೆ ಹೋಗಲಾಡಿಸುವುದು.

6) ಎಲ್ಲಾ ವಯೋಮಾನದವರಿಗೂ ಆರೋಗ್ಯ ಆರೋಗ್ಯಯುತ ಜೀವನದ ಭರವಸೆ ನೀಡುವುದು.

7) ನೈರ್ಮಲ್ಯ ಮತ್ತು ನೀರಿನ ಸುಸ್ಥಿರ ನಿರ್ವಹಣೆ

8) ಸುಸ್ಥಿರ ಅಭಿವೃದ್ಧಿ ಸಾಧಿಸಿ, ಉತ್ಪಾದನಾ ಮತ್ತು ಉದ್ಯೋಗಾವಕಾಶಗಳ ಸೃಷ್ಠಿ. ಎಲ್ಲರಿಗೂ ಗೌರವಯುತ ಉದ್ಯೋಗ.

9) ಉತ್ತಮ ಮೂಲಭೂತ ಸೌಕರ್ಯ ಹಾಗೂ ಸುಸ್ಥಿರ ಕೈಗಾರಿಕೀಕರಣ ಮತ್ತು ಸೃಜನಾತ್ಮಕತೆ.

10) ನಗರ ಮತ್ತು ಇತರೆ ವಸತಿ ಪ್ರದೇಶಗಳನ್ನು ಸುಸ್ಥಿರ ಪ್ರದೇಶಗಳಾಗಿ ಪರಿವರ್ತನೆ.

11) ಸುಸ್ಥಿರ ಬಳಕೆ ಹಾಗೂ ಉತ್ಪಾದನಾ ಪದ್ಧತಿಯನ್ನು ಖಾತರಿಪಡಿಸಬೇಕು.

12) ಹವಾಮಾನ ಬದಲಾವಣೆ ಹಾಗೂ ಅದರ ಪರಿಣಾಮಗಳ ವಿರುದ್ಧ ಹೋರಾಡಲು ಸೂಕ್ತ ಕ್ರಮ.

13) ಸಾಗರ ಮತ್ತು ಸಾಗರ ಸಂಪಮ್ನೂಲಗಳನ್ನು ಸುಸ್ಥಿರ ಅಭಿವೃದ್ಧಿಗಾಗಿ ಸಮರ್ಪಕ ಬಳಕೆ ಮತ್ತು ಸಂರಕ್ಷಣೆ.

14) ಪರಿಸರ ಮತ್ತು ಪರಿಸರ ವ್ಯವಸ್ಥೆಯ ಪುನಶ್ಚೇತನ, ಸಂರಕ್ಷಣೆ ಮಾಡುವುದು.

15) ಸುಸ್ಥಿರ ಅಭಿವೃದ್ಧಿಗಾಗಿ, ಶಾಂತಿಯುತ ಸಮಾಜದ ನಿರ್ಮಾಣ ಎಲ್ಲರಿಗೂ ಹಕ್ಕುದಾರಿಕೆ ಮತ್ತು ಅಭಿವೃದ್ಧಿ ಪಾಲ್ಗೊಳ್ಳುವಂತೆ ಮಾಡುವುದು.

16) ಎಲ್ಲರಿಗೂ ಸಮರ್ಥ ಆಧುನಿಕ ಶಕ್ತಿ ಮೂಲಗಳನ್ನು ಖಚಿತಗೊಳಿಸುವುದು.

17) ಸುಸ್ಥಿರ ಅಭಿವೃದ್ಧಿಗಾಗಿ ಗುರುತಿಸಿರುವ ಮಾರ್ಗಗಳನ್ನು ಬಲಪಡಿಸಲು ಜಾಗತಿಕ ಪಾಲುದಾರಿಕೆಗೆ ಅವಕಾಶ.
(Link to Join in telegram ...https://telegram.me/spardhaloka)

☀️ ತಂತ್ರಜ್ಞಾನ ಉನ್ನತೀಕರಣ ನಿಧಿ ಯೋಜನೆ : (Technology upgradation fund scheme)

☀️ ತಂತ್ರಜ್ಞಾನ ಉನ್ನತೀಕರಣ ನಿಧಿ ಯೋಜನೆ :
(Technology upgradation fund scheme)
━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಮಾಹಿತಿ & ತಂತ್ರಜ್ಞಾನ
(Information & Technology)


ತಂತ್ರಜ್ಞಾನ ಉನ್ನತೀಕರಣ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರ 1999ರಲ್ಲಿ ಆರಂಭಿಸಿದ್ದು, ಭಾರತದ ಜವಳಿ ಉದ್ಯಮವನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿ ಮಾಡುವ ಸಲುವಾಗಿ ಇದನ್ನು ಆರಂಭಿಸಲಾಗಿತ್ತು. ಜತೆಗೆ ಜವಳಿ ಉದ್ಯಮಗಳ ಬಂಡವಾಳ ಹೂಡಿಕೆ ವೆಚ್ಚವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿತ್ತು.

ಇದನ್ನು 12ನೇ ಪಂಚವಾರ್ಷಿಕ ಯೋಜನೆಯ ವೇಳೆ ತಿದ್ದುಪಡಿ ಮಾಡಲಾಗಿತ್ತು. ತಂತ್ರಜ್ಞಾನ ಉನ್ನತೀಕರಣ ನಿಧಿ ಯೋಜನೆಯನ್ನು ತಿದ್ದುಪಡಿ ಬಳಿಕ ಪರಿಷ್ಕøತ ಪುನರ್ರಚಿತ ತಂತ್ರಜ್ಞಾನ ಉನ್ನತೀಕರಣ ನಿಧಿ ಯೋಜನೆಯಾಗಿ ಮಾರ್ಪಡಿಸಲಾಗಿತ್ತು.

ಇತ್ತೀಚೆಗೆ ಜವಳಿ ಕೈಗಾರಿಕೆಗಳ ತಂತ್ರಜ್ಞಾನ ಉನ್ನತೀಕರಣದ ಸಂಬಂಧ ತಿದ್ದುಪಡಿ ಮಾಡಲಾದ ತಂತ್ರಜ್ಞಾನ ಉನ್ನತೀಕರಣ ನಿಧಿ ಯೋಜನೆ ಅನುಷ್ಠಾನಕ್ಕೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಒಪ್ಪಿಗೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಈ ಎಟಿಯುಎಫ್‍ಎಸ್ ಯೋಜನೆಯು ಹಾಲಿ ಇರುವ ಪರಿಷ್ಕøತ ಪುನರ್ರಚಿತ ತಂತ್ರಜ್ಞಾನ ಉನ್ನತೀಕರಣ ನಿಧಿ ಯೋಜನೆಯ ಬದಲಾಗಿ ಇದು ಜಾರಿಗೆ ಬರಲಿದೆ. ಇದು ದೇಶದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯಡಿ ಜವಳಿ ವಲಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿರುತ್ತದೆ.
@spardhaloka

☀️(ಕರ್ನಾಟಕ ಲೋಕ ಸೇವಾ ಆಯೋಗ) ಕೆಪಿಎಸ್ಸಿ ಸಂದರ್ಶನಕ್ಕೆ ಟಿಪ್ಸ್ : (Tips to Face KPSC Interview)

☀️(ಕರ್ನಾಟಕ ಲೋಕ ಸೇವಾ ಆಯೋಗ) ಕೆಪಿಎಸ್ಸಿ ಸಂದರ್ಶನಕ್ಕೆ ಟಿಪ್ಸ್ :
(Tips to Face KPSC Interview) 
━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಕೆಪಿಎಸ್ ಸಿ ಸಂದರ್ಶನ
(Kpsc Interview)


ಕರ್ನಾಟಕ ಲೋಕ ಸೇವಾ ಆಯೋಗ ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳಿಗೆ ಕಳೆದ ವರ್ಷ ನಡೆಸಿದ್ದ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಸಂದರ್ಶನಕ್ಕೆ ಆಯ್ಕೆಯಾಗಿರುವ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಎಸ್ಸಿಯ  ವೆಬ್ನಲ್ಲಿ ಪ್ರಕಟಿಸಲಾಗಿದೆ.

🖌2014ನೇ ಸಾಲಿನ ಕೆಎಎಸ್ ಹುದ್ದೆಗಳಿಗೆ ಕಳೆದ ಏಪ್ರಿಲ್ನಲ್ಲಿ ನಡೆದಿದ್ದ ಪ್ರೀಲಿಮ್ಸ್ 2.67 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಇದರಲ್ಲಿ ಉತ್ತೀರ್ಣರಾಗಿದ್ದವರಿಗೆ ಸೆಪ್ಟೆಂಬರ್ನಲ್ಲಿ
ಮುಖ್ಯ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ 1389 ಅಭ್ಯರ್ಥಿಗಳು ಉತ್ತೀರ್ಣಗೊಂಡು ಸಂದರ್ಶಕ್ಕೆ ಆಯ್ಕೆ ಆಗಿದ್ದಾರೆ. ಸಂದರ್ಶನದ ದಿನವನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದ್ದು, ಮೇ 16ರಿಂದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸಲಾಗುವುದು ಎಂದು ಕೆಪಿಎಸ್ಸಿ ತಿಳಿಸಿದೆ.

🕰ಹಲವು ವರ್ಷಗಳ ಬಳಿಕ ನಡೆದಿದ್ದ ಕೆಎಎಸ್ ಪರೀಕ್ಷೆಗೆ ಸರಕಾರ 2014ರಲ್ಲಿ ಅಧಿಸೂಚನೆ ಹೊರಡಿಸಿದ್ದ ವೇಳೆ 462 ಹುದ್ದೆಗಳನ್ನು ನಿಗದಿ ಮಾಡಿತ್ತು. ಈ ಪೈಕಿ ಕಮಾಂಡೆಂಟ್ ವರ್ಗದ 12 ಹುದ್ದೆಗಳಿಗೆ ವೃಂದ ಹಾಗೂ ನೇಮಕ ನಿಯಮ ಸಮರ್ಪಕವಾಗಿಲ್ಲ ಕಾರಣ ಆ ಹುದ್ದೆಗಳ ಪ್ರಸ್ತಾಪವನ್ನು ಮಾತ್ರ ಸರಕಾರ ಹಿಂದಕ್ಕೆ ಪಡೆದ ಕಾರಣ ಒಟ್ಟು ಹುದ್ದೆಗಳ ಸಂಖ್ಯೆ 440ಕ್ಕೆ ಸೀಮಿತವಾಗಿತ್ತು. ಇತ್ತೀಚೆಗೆ ಸಹಾಯಕ ಖಜಾನೆ ಅಧಿಕಾರಿ(ಎಟಿಒ) ದರ್ಜೆಯ 24
ಹುದ್ದೆಗಳಿಗೆ ಸರಕಾರ ಹೊಸದಾಗಿ ಪ್ರಸ್ತಾವನೆ ಸಲ್ಲಿಸಿದ್ದ ಕಾರಣ ಒಟ್ಟು ಹುದ್ದೆಗಳ ಸಂಖ್ಯೆ 464ಕ್ಕೆ ಏರಿದಂತಾಗಿದೆ. ಹೀಗಾಗಿ ಕೆಪಿಎಸ್ಸಿ ನಿಯಮಗಳಂತೆ ಪ್ರತಿ ಹುದ್ದೆಗೆ 1:3
ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.

★ ಕೆಪಿಎಸ್ಸಿಯ ಈ ದಾಖಲೆ ಪರಿಶೀಲನೆ ಮತ್ತು ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಉಪಯುಕ್ತವಾದ ಸಲಹೆಗಳು ಇಲ್ಲಿವೆ;
.
* ದಾಖಲೆಗಳ ಪರಿಶೀಲನೆಗೆ ಎಲ್ಲ ಮೂಲ ದಾಖಲೆಗಳೊಂದಿಗೆ ಸ್ವಯಂ ದೃಢೀಕರಿಸಿದ 2 ಸೆಟ್ ಜೆರಾಕ್ಸ್ ಪ್ರತಿಗಳನ್ನು ತೆಗೆದುಕೊಂಡು ಹೋಗಲು ಮರೆಯಬೇಡಿ.

* ಆನ್ಲೈನ್ ಅರ್ಜಿಯಲ್ಲಿ ನಮೂದಿಸಿದ ದಾಖಲೆಗಳಿಲ್ಲದೆ ದಾಖಲೆ ಪರಿಶೀಲನೆಗೆ ಹಾಜರಾಗಬೇಡಿ.

* ಒಂದು ವೇಳೆ ಆನ್ಲೈನ್ ಅರ್ಜಿಯಲ್ಲಿ ನೀವು ನಮೂದಿಸಿದ ವಿವರ/ಮಾಹಿತಿ ನಿಮ್ಮ ಬಳಿ ಇಲ್ಲದಿದ್ದರೆ ದಯವಿಟ್ಟು ಸಂದರ್ಶನ ಪತ್ರದಲ್ಲಿ ಕೋರಿದ ಮೀಸಲಾತಿಯನ್ನು ಗಮನಿಸಿ. ಅಲ್ಲಿ ಅಭ್ಯರ್ಥಿಯು ಕೋರಿದ ಮೀಸಲಾತಿ ವಿಭಾಗ, ಗ್ರಾಮೀಣ ಹಾಗೂ ಕನ್ನಡ ಮಾಧ್ಯಮ ಅಭ್ಯರ್ಥಿಗೆ ನೀಡಲಾದ ಮೀಸಲಾತಿ ವಿವರ ಹಾಗೂ ಇನ್ನಿತರ ಮಾಹಿತಿಗಳನ್ನು ನೀಡಲಾಗಿರುತ್ತದೆ. ಇದನ್ನು ಗಮನಿಸಿ, ಇದಕ್ಕೆ ತಕ್ಕಂತೆ ದಾಖಲೆ ಸಿದ್ಧಪಡಿಸಿಕೊಂಡು ಸಂದರ್ಶನಕ್ಕೆ ತೆರಳಿ.

★ ಯಾವ ದಾಖಲೆಗಳಿರಬೇಕು?

* ಆನ್ಲೈನ್ ಅರ್ಜಿಯಲ್ಲಿ ನಮೂದಿಸಿದ ವಿವರಗನ್ನು ಆಧರಿಸಿ, ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲ ವರ್ಷ/ ಸೆಮಿಸ್ಟರ್ಗಳ ಅಂಕ ಪಟ್ಟಿಗಳು ಹಾಗೂ ಗ್ರೇಡ್ಗಳಿದ್ದರೆ ಗ್ರೇಡನ್ನು ಶೇಕಡವಾರು ಅಂಕಗಳಿಗೆ ಪರಿವರ್ತಿಸಿದ ಪ್ರಮಾಣ ಪತ್ರ ತಯಾರು ಮಾಡಿಕೊಂಡು ಹೋಗಿ.

* ಜನ್ಮ ದಿನಾಂಕವನ್ನು ದೃಢೀಕರಿಸಲು ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ ಅಥವಾ ವರ್ಗಾವಣೆ (ಟಿಸಿ)
ಪ್ರಮಾಣ ಪತ್ರ ಅಥವಾ ಸಿಆರ್ (ಸಂಚಿತ ದಾಖಲೆ)ನ ಉದ್ಧೃತ ಭಾಗ ಜೋಡಿಸಿಟ್ಟುಕೊಳ್ಳಿ.

* ಒಂದು ವೇಳೆ ಕಡ್ಡಾಯ ಕನ್ನಡ ಪರೀಕ್ಷೆಯಿಂದ ವಿನಾಯಿತಿ ಕೋರಿದ್ದಲ್ಲಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿಸಿಟ್ಟುಕೊಂಡಿರಿ.

* ಆನ್ ಲೈನ್ನಲ್ಲಿ ಮೀಸಲಾತಿ ಕೋರಿದ್ದಲ್ಲಿ ಜಾತಿ ಪ್ರಮಾಣ ಪತ್ರಗಳ ನಮೂನೆ ಹೀಗಿರಲಿ:1.ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ -ನಮೂನೆ 'ಡಿ', 2. ಪ್ರವರ್ಗ-10 ಅಭ್ಯರ್ಥಿಗಳು - ನಮೂನೆ 'ಇ', 3. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ- ನಮೂನೆ 'ಎಫ್'
* ನಮೂನೆ ಡಿ,ಇ,ಎಫ್ ಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವಂತೆ ಸಂಬಂಧಿತ ತಹಶೀಲ್ದಾರರಿಂದ ಪಡೆದಿರಬೇಕು.

* ನೀವು ಪಡೆದ ಪ್ರಮಾಣ ಪತ್ರಗಳಲ್ಲಿ ಸಹಿ,ಮೊಹರು ಅಥವಾ ಬಾರ್ ಕೋಡ್, ಹಾಲೋಗ್ರಾಮ್ ಮತ್ತು ವಾಟರ್
ಮಾರ್ಕ್ ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ

* ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ಮೀಸಲಾತಿ ಪ್ರಮಾಣ ರದ್ದಾಗುವವರೆಗೆ ಚಾಲ್ತಿಯಲ್ಲಿರುವುದರಿಂದ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ನಿಗದಿಪಡಿಸಿದ ನಮೂನೆಯಲ್ಲಿ ಪಡೆದಿರುವುದನ್ನು ಖಾತ್ರಿಪಡಿಸಿಕೊಳ್ಳಿ.

* ಹಿಂದುಳಿದ ಪ್ರವರ್ಗಗಳಾದ 2ಎ, 2ಬಿ, 3ಎ ಮತ್ತು 3ಬಿ ಮೀಸಲಾತಿ ಪ್ರಮಾಣ ಪತ್ರ 5 ವರ್ಷ ಚಾಲ್ತಿಯಲ್ಲಿರುತ್ತದೆ.
ಆದ್ದರಿಂದ ಆ ಪ್ರಮಾಣ ಪತ್ರಗಳು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ.

* ಕನ್ನಡ ಮಾಧ್ಯಮ ಮೀಸಲಾತಿಯ ಅಭ್ಯರ್ಥಿಗಳು 1ರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಾಂಗ ಮಾಡಿರುವ ಕುರಿತು ಶಾಲೆಯ ಮುಖ್ಯೋಪಾಧ್ಯಾಯರಿಂದ ಪ್ರಮಾಣ ಪತ್ರ ಪಡೆದುಕೊಳ್ಳಿ.

* ಗ್ರಾಮೀಣ ಅಭ್ಯರ್ಥಿಯಾಗಿದ್ದಲ್ಲಿ ಗ್ರಾಮೀಣ ವ್ಯಾಸಾಂಗದ ಪ್ರಮಾಣ ಪತ್ರವನ್ನು ನಮೂನೆ-2ರಲ್ಲಿ ಹಾಗೂ ಸಾಮಾನ್ಯ ಅರ್ಹತೆ ಗ್ರಾಮೀಣ ಅಭ್ಯರ್ಥಿಗಳು ನಮೂನೆ-1 ಮತ್ತು 2ರಲ್ಲಿ ಸಂಬಂಧಪಟ್ಟ ಪ್ರಾಧಿಕಾರದಿಂದ ಪ್ರಮಾಣ ಪತ್ರ ಪಡೆಯಲು ಮರೆಯಬೇಡಿ.

* ಸಂದರ್ಶನಕ್ಕೆ ಹಾಜರಾಗುವ ಪ್ರತಿ ಅಭ್ಯರ್ಥಿಗೆ ಸಂದರ್ಶನ ಸಂಖ್ಯೆ/ ದಿನಾಂಕ ಹಾಗೂ ಸಮಯ, ಕೋರಿದ ಮೀಸಲಾತಿ
ವಿವರಗಳನ್ನು ನೀಡಲಾಗಿರುತ್ತದೆ. ಇದನ್ನು ಗಮನಿಸಿಯೇ ಸಂದರ್ಶನಕ್ಕೆ ಹೊರಡಿ.

* ಪ್ರತಿ ಅಭ್ಯರ್ಥಿಯನ್ನು ಕನಿಷ್ಠ 15 ನಿಮಿಷ ಸಂದರ್ಶಿಸಬಹುದು.ಇಷ್ಟು ಕಡಿಮೆ ಅವಧಿಯಲ್ಲಿ ನಿಮ್ಮ ಸಾಮರ್ಥ್ಯ ಪ್ರದರ್ಶಿಸಬೇಕಾಗು
ತ್ತದೆ. ಫಸ್ಟ್ ಇಂಪ್ರೆಷನ್ ಈಸ್ ದಿ ಬೆಸ್ಟ್ ಇಂಪ್ರೆಷನ್ ಎಂಬುದನ್ನು ಮರೆಯಬೇಡಿ.
@spardhaloka

Tuesday, 3 May 2016

☀ಜನೆವರಿ -2016ರ (ಭಾಗ -33) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (General knowledge on Current Affairs (Part-33)) ☆.(ಜನೆವರಿ -2016ರ ಪ್ರಚಲಿತ ಘಟನೆಗಳ ಕ್ವಿಜ್)

☀ಜನೆವರಿ -2016ರ (ಭಾಗ -33) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ
(General knowledge on Current Affairs (Part-33))
☆.(ಜನೆವರಿ -2016ರ ಪ್ರಚಲಿತ ಘಟನೆಗಳ ಕ್ವಿಜ್)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)
 
- ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯವಾದ ಮುಖ್ಯವಾಗಿ ಇತ್ತೀಚಿನ ಪ್ರಸಕ್ತ ಜನೆವರಿ -2016ರ ವಿದ್ಯಮಾನಗಳ ಬಗ್ಗೆ ವಿಶೇಷವಾಗಿ ಅದು ರಾಷ್ಟ್ರೀಯ, ಅಂತರರಾಷ್ಟ್ರೀಯ ಸಾಹಿತ್ಯ, ಕಲೆ, ಸಂಸ್ಕೃತಿ, ಕ್ರೀಡೆ, ವಿಜ್ಞಾನ, ರಾಜಕೀಯ ಮತ್ತು ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳ ವಿದ್ಯಮಾನಗಳನ್ನು ಅಯಾ ದಿನದ ದಿನಪತ್ರಿಕೆಗಳನ್ನು ಕಲೆಹಾಕಿ ಸಂಕ್ಷೇಪಿಸಿ 'ಸ್ಪರ್ಧಾಲೋಕ'ದಲ್ಲಿ ಅಪಡೆಟ್ ಮಾಡಲು ಒಂದು ಚಿಕ್ಕ ಪ್ರಯತ್ನ.



2191) ಇತ್ತೀಚೆಗೆ ಏಷ್ಯಾದ ಅತಿದೊಡ್ಡ ಪುಸ್ತಕ ಮೇಳ ಎಂದು ಪರಿಗಣಿಸಲಾದ ವಿಶ್ವ ಪುಸ್ತಕ ಮೇಳವನ್ನು ಭಾರತದಲ್ಲಿ ಎಲ್ಲಿ ಹಮ್ಮಿಕೊಳ್ಳಲಾಯಿತು?
••► ನವದೆಹಲಿಯಲ್ಲಿ (2016ರ ಜನವರಿ 9ರಂದು)


2192) ವಿಶ್ವ ಪುಸ್ತಕ ಮೇಳದ ಬಗ್ಗೆ ಹೆಚ್ಚಿನ ಮಾಹಿತಿ :
✧.ನವದೆಹಲಿಯಲ್ಲಿ ನಡೆಯುತ್ತಿರುವ ವಿಶ್ವ ಪುಸ್ತಕ ಮೇಳ ದೇಶದ ಅತ್ಯಂತ ಹಳೆಯ ಮೇಳಗಳಲ್ಲೊಂದು.
✧.ಈ ಮೇಳವನ್ನು ಪ್ರಗತಿ ಮೈದಾನದಲ್ಲಿ ಆಯೋಜಿಸಲಾಗುತ್ತಿದ್ದು, 44 ವರ್ಷಗಳ ಹಿಂದೆ ಅಂದರೆ 1972ರಲ್ಲಿ ಮೊಟ್ಟಮೊದಲ ಪುಸ್ತಕ ಮೇಳ ನಡೆದಿತ್ತು. ಆಗ ಮಾರ್ಚ್ 18ರಿಂದ ಏಪ್ರಿಲ್ 4ರವರೆಗೆ ಮೇಳ ನಡೆದಿತ್ತು.
✧.ಭಾರತ ಇಡೀ ವಿಶ್ವದಲ್ಲಿ ಇಂಗ್ಲಿಷ್ ಪುಸ್ತಕಗಳಿಗೆ ಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿದೆ.
✧.ಚೀನಾ, ಈಜಿಪ್ಟ್, ಪಾಕಿಸ್ತಾನ, ನೇಪಾಳ, ಸ್ಪೇನ್ ಸೇರಿದಂತೆ 30ಕ್ಕೂ ಹೆಚ್ಚು ದೇಶಗಳು ಇದರಲ್ಲಿ ಪಾಲ್ಗೊಂಡಿದ್ದವು.
✧.ಈ ವರ್ಷದ ಘೋಷವಾಕ್ಯ, “ವಿವಿಧ್ ಭಾರತ್- ಡೈವರ್ಸ್ ಇಂಡಿಯಾ”
✧.ಈ ಪುಸ್ತಕ ಮೇಳದ ಸಂದೇಶವೆಂದರೆ, “ನಾಗರೀಕತೆಯ ಪುನರುಜ್ಜೀವನ- ವಿನಿಮಯದ ಮೂಲಕ ಅರ್ಥ ಮಾಡಿಕೊಳ್ಳುವಿಕೆ”


2193) ಇತ್ತೀಚೆಗೆ ವಿವಿಧ ಬಗೆಯ ಕ್ಯಾನ್ಸರ್‍ಗಳನ್ನು ಕ್ಯಾನ್ಸರ್ ಗುಣಲಕ್ಷಣ ಕಂಡುಬರುವ ಮೊದಲೇ ಪತ್ತೆ ಮಾಡುವ ರಕ್ತಪರೀಕ್ಷೆ ವ್ಯವಸ್ಥೆಯಾದ ಲಿಕ್ವಿಡ್ ಬಯಾಪ್ಸಿ ಪರೀಕ್ಷೆಯನ್ನು ಅಭಿವೃದ್ಧಿಪಡಿಸಲಿರುವ ವಿಶ್ವದ ಅತಿದೊಡ್ಡ ಡಿಎನ್‍ಎ ಸೀಕ್ವೆನ್ಸಿಂಗ್ ಕಂಪನಿಯಾದ ಇಲ್ಯುಮಿನಾ ಆರಂಭಿಸಿರುವ ಕಂಪೆನಿಯ ಹೆಸರೇನು?
••► ಗ್ರೈಲ್


2194) ಇತ್ತೀಚೆಗೆ ಜಾಗತಿಕ ಫುಟ್ಬಾಲ್ ಆಡಳಿತ ಸಂಸ್ಥೆಯಾದ ಫಿಫಾದಿಂದ ನೀಡಲಾಗುವ ಪ್ರತಿಷ್ಠಿತ ಬ್ಯಾಲರ್ ಡಿಓರ್ ಪ್ರಶಸ್ತಿ (ಚಿನ್ನದ ಚೆಂಡಿನ ಪ್ರಶಸ್ತಿ) ಯನ್ನು (5ನೇ ಬಾರಿಗೆ) ಪಡೆದವರು ಯಾರು?
••► ಲಿಯೋನೆಲ್ ಮೆಸ್ಸಿ.(ಅರ್ಜೇಂಟೀನಾ ಹಾಗೂ ಬಾರ್ಸಿಲೋನಾ ತಂಡದ ಫುಟ್‍ಬಾಲ್ ಮಾಂತ್ರಿಕ )


2195) ಬ್ಯಾಲರ್ ಡಿಓರ್ ಪ್ರಶಸ್ತಿ ಬಗ್ಗೆ ಹೆಚ್ಚಿನ ಮಾಹಿತಿ  :
✧.ಜಾಗತಿಕ ಫುಟ್ಬಾಲ್ ಆಡಳಿತ ಸಂಸ್ಥೆ ಫಿಫಾದಿಂದ ನೀಡಲಾಗುವ ಪ್ರತಿಷ್ಠಿತ ವೈಯಕ್ತಿಕ ಪ್ರಶಸ್ತಿಯೇ ಬ್ಯಾಲನ್ ಡಿಒರ್.
✧.ಕ್ಯಾಲೆಂಡರ್ ವರ್ಷದ ಸಾಧನೆ ಆಧರಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.
✧.ಫ್ರಾನ್ಸ್ ಫುಟ್ಬಾಲ್ ಸಂಸ್ಥೆ 1956ರಲ್ಲಿ ಆರಂಭಿಸಿದ ಈ ಪ್ರಶಸ್ತಿಯನ್ನು 1995ರವರೆಗೆ ಯುರೋಪ್ ಆಟಗಾರರಿಗೆ ಮಾತ್ರ ಮತ್ತು ನಂತರ 2009ರವರೆಗೆ ಯುರೋಪ್ ಕ್ಲಬ್ ಆಟಗಾರರಿಗೆ ಮಾತ್ರ ನೀಡಲಾಗುತ್ತಿತ್ತು.
✧.2010ರಿಂದ ಇದನ್ನು ಫಿಫಾ ವರ್ಷದ ಪ್ರಶಸ್ತಿ ಜತೆ ವಿಲೀನಗೊಳಿಸಿ ವಿಶ್ವದ ಎಲ್ಲ ಆಟಗಾರರನ್ನು ಆಯ್ಕೆಗೆ ಪರಿಗಣಿಸಲಾಗುತ್ತದೆ.
✧.ಈಗ ಮೆಸ್ಸಿ ಟಾಟಾ ಮೋಟರ್ಸ್‍ನ ರಾಯಭಾರಿಯಾಗಿದ್ದಾರೆ.


2196) ಕೇಂದ್ರೀಯ ಎಮ್ಮೆ ಸಂಶೋಧನಾ ಸಂಸ್ಥೆ (ಕ್ರಿಬ್) ಇರುವುದು?
••► ಹರ್ಯಾಣಾದ ಹಿಸ್ಸಾರ್‍ನಲ್ಲಿ.


2197) ಇತ್ತೀಚೆಗೆ ಹಿಸ್ಸಾರ್ ಕ್ರಿಬ್‍ ವಿಜ್ಞಾನಿಗಳಿಂದ ಸೃಷ್ಟಿಸಲಾದ ತದ್ರೂಪಿ ಎಮ್ಮೆ ಕರುವನ್ನು ಏನೆಂದು  ಹೆಸರಿಸಲಾಗಿದೆ.?
••► ಕ್ರಿಬ್ ಗೌರವ್


2198) ಹಿಸ್ಸಾರ್ ಕ್ರಿಬ್‍ ಕುರಿತು ಹೆಚ್ಚಿನ ಮಾಹಿತಿ  :
✧.ಈ ಅಪೂರ್ವ ಸಾಧನೆಯೊಂದಿಗೆ, ಎಮ್ಮೆ ಸಂಶೋಧನಾ ಸಂಸ್ಥೆ ದೇಶದಲ್ಲಿ ತದ್ರೂಪಿ ಎಮ್ಮೆಕರು ಸೃಷ್ಟಿಸಿದ ಎರಡನೇ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
✧.ಜತೆಗೆ ವಿಶ್ವದಲ್ಲಿ ಈ ಸಾಧನೆ ಮಾಡಿದ ಮೂರನೇ ಸಂಸ್ಥೆಯಾಗಿದೆ.


2199) ದೇಶದಲ್ಲೇ ಮೊಟ್ಟಮೊದಲ ಬಾರಿಗೆ ತದ್ರೂಪಿ ಎಮ್ಮೆ ಕರುವನ್ನು ಸೃಷ್ಟಿಸಿದ ಭಾರತೀಯ ಸಂಶೋಧನಾ ಸಂಸ್ಥೆ ಯಾವುದು?
••► ಹರ್ಯಾಣಾದ ಕರ್ನಲ್ ಮೂಲದ ರಾಷ್ಟ್ರೀಯ ಹೈನುಗಾರಿಕಾ ಸಂಶೋಧನಾ ಸಂಸ್ಥೆ


2200) ಇತ್ತೀಚೆಗೆ 73ನೇ ವಾರ್ಷಿಕ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ಸಮಾರಂಭ ಎಲ್ಲಿ ನಡೆಯಿತು.?
••► ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಬೆವೆರ್ಲಿ ಹಿಲ್ಸ್ ನಲ್ಲಿ


2201) 73ನೇ ವಾರ್ಷಿಕ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಕುರಿತ ಹೆಚ್ಚಿನ ಮಾಹಿತಿ  :
••► ವಿವಿಧ ಪ್ರಶಸ್ತಿ ಪುರಸ್ಕøತರ ಪಟ್ಟಿ ಇಲ್ಲಿದೆ.

ಉತ್ತಮ ಚಲನಚಿತ್ರ ನಾಟಕ: ದ ರೆನೆನಂಟ್

ಉತ್ತಮ ಸಂಗೀತಮಯ. ಹಾಸ್ಯಮಯ ಚಲನಚಿತ್ರ: ದ ಮಾರ್ಟಿಯನ್

ಉತ್ತಮ ಚಲನಚಿತ್ರ ನಾಟಕ ನಿರ್ದೇಶಕ: ಅಲೆಂಜೆಂಡ್ರೊ ಇನ್ನಾರಿತು (ರೆನನೆಂಟ್)

ಉತ್ತಮ ಚಲನಚಿತ್ರ ನಾಟಕ ನಟ ಪ್ರಶಸ್ತಿ: ಲಿಯನಾರ್ಡೊ ಡಿಕಪ್ರಿಯೊ (ನೆನನೆಂಟ್)

ಉತ್ತಮ ಚಲನಚಿತ್ರ ನಾಟಕ ನಟಿ ಪ್ರಶಸ್ತಿ: ಬ್ರೀ ಲಾರ್ಸೆನ್ (ದ ರೂಮ್)

ಉತ್ತಮ ಸಂಗೀತಮಯ. ಹಾಸ್ಯಮಯ ಚಲನಚಿತ್ರ ನಟ: ಮಾಟ್ ಡೆಮೊನ್ (ಮಾರ್ಟಿಯನ್)

ಉತ್ತಮ ಸಂಗೀತಮಯ. ಹಾಸ್ಯಮಯ ಚಲನಚಿತ್ರ ನಟಿ: ಜೆನ್ನಿಫರ್ ಲಾರೆನ್ಸ್ (ದ ಜಾಯ್)

ಉತ್ತಮ ಪೋಷಕ ನಟ: ಸೈಲ್ವೆಸ್ಟರ್ ಸ್ಟಲೋನ್ (ಕ್ರೀಡ್)

ಉತ್ತಮ ಪೋಷಕ ನಟಿ: ಕೇಟ್ ವಿನ್ಸಲೆಟ್ (ಸ್ಟೀವ್ ಜಾಬ್ಸ್)

ಉತ್ತಮ ಮೂಲ ಚಲನಚಿತ್ರ: ಎನ್ನಿರೊ ಮೊರಿಕಾನ್ (ದ ಹೇಟ್‍ಫಯಲ್ ಎಯಿಟ್)

ಉತ್ತಮ ವಿದೇಶಿ ಚಿತ್ರ: ಸನ್ ಆಫ್ ಸಾಯಿಲ್ (ಹಂಗೇರಿ)


2202) ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು (2016ರ ಜನವರಿ 10ರಂದು) ಲೋಕಾರ್ಪಣೆ ಮಾಡಿದ ‘ಮರು ಭಾರತ ಸರು ಭಾರತ’ (ನನ್ನ ಭಾರತ, ಪವಿತ್ರ ಭಾರತ) ಎಂಬ ಕೃತಿಯನ್ನು ರಚಿಸಿದವರು ಯಾರು?
••► ಜೈನ್ ಆಚಾರ್ಯ ರತ್ನಸುಂದರ್‍ಸುರೀಶ್ವರ್ ಮಹಾರಾಜ್


2203) ಇತ್ತೀಚೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು (2016ರ ಜನವರಿ 10ರಂದು) 88ನೇ ನಿಖಿಲ ಭಾರತ ಭಂಗ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲಿ ಚಾಲನೆ ನೀಡಿದರು.?
••► ರಾಂಚಿಯಲ್ಲಿ (ಜಾರ್ಖಂಡ್ ರಾಜ್ಯದ ರಾಜಧಾನಿ)


2204) ಇತ್ತೀಚೆಗೆ 14ನೇ ಭಾರತೀಯ ಪ್ರವಾಸಿ ದಿನ ಸಮಾರಂಭವನ್ನು ಎಲ್ಲಿ ಆಚರಿಸಲಾಯಿತು.?
••► ನವದೆಹಲಿಯಲ್ಲಿ.



2205) ಭಾರತೀಯ ಪ್ರವಾಸಿ ದಿನದ ಕುರಿತ ಹೆಚ್ಚಿನ ಮಾಹಿತಿ  :
✧.ಇದು ಭಾರತದ ಪ್ರವಾಸಿ ದಿವಸದ ಪ್ರಥಮ ನಿಯಮಿತ ಆವೃತ್ತಿಯಾಗಿದ್ದು, 2015ರಲ್ಲಿ ಭಾರತ ಸರ್ಕಾರ ನಿರ್ಧಾರ ಕೈಗೊಂಡು ಪ್ರವಾಸಿ ದಿವಸ ಸಮ್ಮೇಳನವನ್ನು ಎರಡು ವರ್ಷಗಳಿಗೊಮ್ಮೆ ಆಚರಿಸಿ, ಅದರ ಬದಲಾಗಿ ವಿಶ್ವದ ಎಲ್ಲೆಡೆ ವರ್ಷವಿಡೀ ಪ್ರವಾಸಿದಿನ ಆಚರಿಸಲು ನಿರ್ಧಾರ ಕೈಗೊಂಡಿತ್ತು.
✧.ಇದರಂತೆ ಮುಂದಿನ ಪ್ರವಾಸಿ ದಿವಸ ಸಮ್ಮೇಳನ 2017ರಲ್ಲಿ ನಡೆಯಲಿದೆ.
✧.ಪ್ರವಾಸಿ ಭಾರತೀಯ ದಿವಸ್ 2003ರಿಂದೀಚೆಗೆ ಪ್ರತಿ ವರ್ಷ ನಡೆಯುತ್ತಿದ್ದು, ವಿವಿಧೆಡೆ ಇರುವ ಭಾರತೀಯ ಮೂಲದ ಜನರನ್ನು ಒಂದೆಡೆ ಸೇರಿಸುವುದು ಇದರ ಉದ್ದೇಶ. ಹಾಗೂ ಅವರ ಸಂಪನ್ಮೂಲಗಳನ್ನು ರಾಷ್ಟ್ರ ಅಭಿವೃದ್ಧಿಯ ನಿಟ್ಟಿನಲ್ಲಿ ತೊಡಗಿಸುವಂತೆ ಉತ್ತೇಜಿಸುವುದು ಇದರ ಮುಖ್ಯ ಗುರಿ.
✧.ಇದನ್ನು 2015ರಿಂದೀಚೆಗೆ ಪ್ರತಿ ವರ್ಷದ ಜನವರಿ 9ರಂದು ಆಚರಿಸಲಾಗುತ್ತಿದೆ. ಮಹಾತ್ಮಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ವಾಪಾಸು ಬಂದ ದಿನವನ್ನು ಪ್ರವಾಸಿ ಭಾರತೀಯ ದಿವಸ್ ಆಗಿ ಆಚರಿಸಲಾಗುತ್ತಿದೆ.
✧.ಪ್ರವಾಸಿ ಭಾರತೀಯ ದಿವಸ್ ಸಮಾರಂಭದ ಹೊರತಾಗಿ ಪ್ರಾದೇಶಿಕ ಮಟ್ಟದ ಪ್ರವಾಸಿ ಭಾರತೀಯ ದಿವಸ್ ಸಮಾರಂಭಗಳು ವಿಶ್ವದ ವಿವಿಧೆಡೆ ನಡೆದಿವೆ.
✧.ಇತ್ತೀಚೆಗೆ 9ನೇ ಪ್ರಾದೇಶಿಕ ಮಟ್ಟದ ಪ್ರವಾಸಿ ಭಾರತೀಯ ದಿವಸ್ ಸಮಾರಂಭ ಅಮೆರಿಕದ ಲಾಸ್ ಎಂಜಲೀಸ್‍ನಲ್ಲಿ 2015ರ ನವೆಂಬರ್‍ನಲ್ಲಿ ನಡೆದಿತ್ತು.
✧.ಅಂತೆಯೇ 13ನೇ ಪ್ರಾದೇಶಿಕ ಮಟ್ಟದ ಪ್ರವಾಸಿ ಭಾರತೀಯ ದಿವಸ್ ಸಮಾರಂಭ ಗುಜರಾತ್‍ನಲ್ಲಿ ನಡೆದಿತ್ತು.
✧.ಮಹಾತ್ಮಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ವಾಪಾಸು ಬಂದ 100ನೇ ವರ್ಷದ ನೆನಪಿಗಾಗಿ ಈ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.


2206) ವಿಶ್ವಬ್ಯಾಂಕ್‌ ವರದಿ 2015ರ ಉದ್ದಿಮೆ ವಹಿವಾಟು ನಡೆಸಲು ಪೂರಕ ವಾತಾವರಣ ಹೊಂದಿದ  ದೇಶದ ರಾಜ್ಯಗಳ ವರದಿಯಲ್ಲಿ ಕರ್ನಾಟಕವು ಎಷ್ಟನೇ ಸ್ಥಾನವನ್ನು ಪಡೆದಿದೆ?
••► ಒಂಬತ್ತನೆಯ ಸ್ಥಾನ.


2207) ವಿಶ್ವಬ್ಯಾಂಕ್‌ ವರದಿ 2015ರ ಹೆಚ್ಚಿನ ಮಾಹಿತಿ  :
✧.ವಿಶ್ವಬ್ಯಾಂಕ್‌ ವರದಿ 2015ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿತ್ತು.
✧.ಗುಜರಾತ್‌ ಮೊದಲ ಸ್ಥಾನದಲ್ಲಿತ್ತು.

★ವಿಶ್ವಬ್ಯಾಂಕ್‌ ವರದಿ 2015
ಸ್ಥಾನ ರಾಜ್ಯ ಸ್ಕೋರ್
1. ಗುಜರಾತ್ 71.14%
2. ಆಂಧ್ರ ಪ್ರದೇಶ್ 70.12%
3. ಜಾರ್ಖಂಡ್ 63.09%
4. ಛತ್ತೀಸ್‍ಗಡ್ 62.45%
5. ಮಧ್ಯಪ್ರದೇಶ್ 62.00%
6. ರಾಜಸ್ತಾನ್ 61.04%
7. ಒಡಿಶಾ 52.12%
8. ಮಹಾರಾಷ್ಟ್ರ 49.43%
9. ಕರ್ನಾಟಕ 48.50%
10. ಉತ್ತರಪ್ರದೇಶ 47.37%
11. ವೆಸ್ಟ್ ಬೆಂಗಾಲ್ 46.90%
12. ತಮಿಳುನಾಡು 44.58%
13. ತೆಲಂಗಾಣ 42.45%
14. ಹರ್ಯಾಣ 40.66%
15. ದೆಹಲಿ 37.35%
16. ಪಂಜಾಬ್ 36.73%
17. ಹಿಮಾಚಲ ಪ್ರದೇಶ 23.95%
18. ಕೇರಳ 22.87%
19. ಗೋವಾ 21.74%
20. ಪಾಂಡುಚೇರಿ 17.72%
21. ಬಿಹಾರ 16.41%
22. ಅಸ್ಸಾಂ 14.84%
23. ಉತ್ತರಕಾಂಡ 13.36%
24. ಚಂಡೀಗರ್ 10.04%
25. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ 9.73%
26. ತ್ರಿಪುರ 9.29%
27. ಸಿಕ್ಕಿಂ 7.23%
28. ಮಿಜೋರಾಂ 6.37%
29. ಜಮ್ಮು ಮತ್ತು ಕಾಶ್ಮೀರ 5.93%
30. ಮೇಘಾಲಯ 4.38%
31. ನಾಗಾಲ್ಯಾಂಡ್ 3.41%
32. ಅರುಣಾಚಲ್ ಪ್ರದೇಶ್ 1.23%


2208) ಇತ್ತೀಚೆಗೆ ಸಾರ್ವಜನಿಕರು www.pgportal.nic.inನಲ್ಲಿ ದೇಶದ ಯಾವುದೇ ಭಾಗದಿಂದ ತಮ್ಮ 12 ಅಂಕಿಗಳ ಆಧಾರ್ ಸಂಖ್ಯೆ ನಮೂದಿಸಿ ದೂರು ಸಲ್ಲಿಸಬಹುದು. ಈ ಪೋರ್ಟಲ್ ಮೂಲಕ ದೇಶದ ಯಾವುದೇ ಸರ್ಕಾರಿ ಸಂಸ್ಥೆಯ ವಿರುದ್ದು ದೂರು ದಾಖಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.!


2209) ಇತ್ತೀಚೆಗೆ ನಡೆದ ಬ್ರಿಸ್ಬೇನ್ ಇಂಟರ್ ನ್ಯಾಷನಲ್ ಡಬ್ಲ್ಯುಟಿಎ ಟೆನಿಸ್ ಟೂರ್ನಿಯಲ್ಲಿ ಮಹಿಳಾ ಡಬಲ್ಸ್ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಜೋಡಿ?
••► ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗೀಸ್


2210) ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕಿನ ಉಪ ಗವರ್ನರ್ (ಎರಡನೇ ಅವಧಿಗೆ) ಆಗಿ ಯಾರನ್ನು ನೇಮಕಮಾಡಲಾಗಿದೆ?
••► ಊರ್ಜಿತ್ ಪಟೇಲ್


2211) ಇತ್ತೀಚೆಗೆ ಯಾವ ರಾಜ್ಯದಲ್ಲಿ ಆರನೇ ಬಾರಿಗೆ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ.?
••► ಜಮ್ಮು ಕಾಶ್ಮೀರ


2212) ಪ್ರಸ್ತುತ ಜಮ್ಮು- ಕಾಶ್ಮೀರ ರಾಜ್ಯದ ರಾಜ್ಯಪಾಲ?
••► ಎನ್.ಎನ್.ವೋಹ್ರಾ


2213) ದೇಶದ ಯಾವುದೇ ರಾಜ್ಯಗಳಲ್ಲಿ ಯಾವುದೇ ಸಂವಿಧಾನಾತ್ಮಕ ವ್ಯವಸ್ಥೆ ವಿಫಲವಾದಲ್ಲಿ, ಸಂವಿಧಾನದ ಎಷ್ಟನೇ ವಿಧಿ ಅನ್ವಯ ರಾಷ್ಟ್ರಪತಿ ಆಡಳಿತ ಹೇರಿಕೆಗೆ ಅವಕಾಶವಿದೆ.?
••► 356ನೇ ವಿಧಿ


2214) ಜಮ್ಮು ಕಾಶ್ಮೀರದ ವಿಷಯದಲ್ಲಿ ರಾಜ್ಯದ ಸಂವಿಧಾನದ ಎಷ್ಟನೇ ಸೆಕ್ಷನ್ ಅನ್ವಯ ರಾಜ್ಯಪಾಲರ ಆಡಳಿತವನ್ನು ಆರು ತಿಂಗಳವರೆಗೆ ವಿಧಿಸಬಹುದಾಗಿದೆ.?
••► ಸೆಕ್ಷನ್ 92


2215) ಇತ್ತೀಚೆಗೆ ಕ್ಯಾಬಿನೇಟ್ ನೇಮಕಾತಿ ಸಮಿತಿ (Appointments Committee of Cabinet- ACC)ಯು ಯಾರನ್ನು ಜನಗಣತಿ ಆಯುಕ್ತ ಹಾಗೂ ರಿಜಿಸ್ಟಾರ್ ಜನರಲ್ ಆಗಿ  ನೇಮಕ ಮಾಡಿದೆ?
••► (ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ) ಶೈಲೇಶ್


2216) ಇತ್ತೀಚೆಗೆ ಭಾರತದ ಸಾಗರೋತ್ತರ ವ್ಯವಹಾರಗಳ ಸಚಿವಾಲಯವನ್ನು ಯಾವ ಸಚಿವಾಲಯದಲ್ಲಿ ವಿಲೀನಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.?
••► ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ.


2217) ಇತ್ತೀಚೆಗೆ ಯಾರನ್ನು ಭಾರತದ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಅಧ್ಯಕ್ಷರನ್ನಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ?
••► ದೇವೇಂದ್ರ ಕುಮಾರ್ ಸಿಕ್ರಿ


2218) ಭಾರತದ ಸ್ಪರ್ಧಾತ್ಮಕ ಆಯೋಗ (ಸಿಸಿಐ)ವನ್ನು ಯಾವಾಗ ಸ್ಥಾಪಿಸಲಾಯಿತು?
••► 2003ರಲ್ಲಿ


2219) ಭಾರತದ ಸ್ಪರ್ಧಾತ್ಮಕ ಆಯೋಗ (ಸಿಸಿಐ)ವು ಅಸ್ತಿತ್ವಕ್ಕೆ ಬರುವ ಮೊದಲು ಇದಕ್ಕೂ ಮುನ್ನ ಇದ್ದ ಸಂಸ್ಥೆ ಯಾವುದು?
••► ಮೊನೋಪೊಲೀಸ್ ಅಂಡ್ ರಿಸ್ಟ್ರಿಕ್ಟಿವ್ ಟ್ರೇಡ್ ಪ್ರಾಕ್ಟೀಸಸ್ ಕಮಿಷನ್ (ಎಂಆರ್‍ಟಿಪಿಸಿ)


2220) ಇತ್ತೀಚೆಗೆ ಗ್ಲೋಬಲ್ ಮತ್ತು ಏಷ್ಯಾ ಫೆಸಿಫಿಕ್ ಪ್ರದೇಶದ 2016ನೇ ಸಾಲಿನ ಸೆಂಟ್ರಲ್ ಬ್ಯಾಂಕರ್ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು?
••► ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ರಘುರಾಮ್ ರಾಜನ್


2221) ರಘುರಾಮ ರಾಜನ್ ಅವರು ಭಾರತೀಯ ರಿಸರ್ವ್ ಬ್ಯಾಂಕಿನ ಎಷ್ಟನೇ ಗವರ್ನರ್ ಆಗಿದ್ದಾರೆ?
••► 23ನೇ ಗವರ್ನರ್.


2222) ಲಕ್ಷದ್ವೀಪದಲ್ಲಿರುವ ಅತಿ ದೊಡ್ಡ ದ್ವೀಪದ ಹೆಸರೇನು?
••► ಕದಮತ್


2223) ಇತ್ತೀಚೆಗೆ ನೌಕಾಪಡೆಗೆ ಸೇರ್ಪಡೆಗೊಳಿಸಲಾದ ಮೇಕ್ ಇನ್ ಇಂಡಿಯಾ ಯೋಜನೆಯಡಿ ಸಂಪೂರ್ಣ ಸ್ವದೇಶಿ ನಿರ್ವಿುತವಾಗಿರುವ ಸಬ್ ಮರೀನ್ ವಿರುದ್ಧ ಹೋರಾಟ ನಡೆಸುವ ಸಾಮರ್ಥ್ಯವಿರುವ  2ನೇ ಯುದ್ಧನೌಕೆ ಯಾವುದು?
••► ಐಎನ್ಎಸ್ ಕದಮತ್


2224) ಪ್ರಸ್ತುತ ಜಗತ್ತಿನ ಪ್ರಬಲ ವಿರೋಧ ಎದುರಿಸುತ್ತಲೇ ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿದ ರಾಷ್ಟ್ರ ಯಾವುದು?
••► ಉತ್ತರ ಕೊರಿಯಾ


2225) ಇತ್ತೀಚೆಗೆ ಹುರುನ್‌ ಸಂಶೋಧನಾ ವರದಿಯ ಪ್ರಕಾರ- ಉದಾರವಾಗಿ ದಾನ ನೀಡುವ ಮೂಲಕ ‘ಅತ್ಯಂತ ಉದಾರಿ ಭಾರತೀಯ’ ಎನ್ನುವ ಹೆಗ್ಗಳಿಕೆಯೊಂದಿಗೆ, ದೇಶದ ಶ್ರೀಮಂತರ ಸಾಲಿನಲ್ಲಿ ಸತತ ಮೂರನೇ ವರ್ಷವು ಮೊದಲ ಸ್ಥಾನ ಕಾಯ್ದುಕೊಂಡವರು ಯಾರು?
••► ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜಿ


2226) ಇತ್ತೀಚೆಗೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯಲ್ಲಿ (ಡಿಡಿಸಿಎ) ಅಕ್ರಮ ನಡೆದಿದೆ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸಲು ಯಾರ ನೇತೃತ್ವದಲ್ಲಿ ಆಯೋಗವನ್ನು ದೆಹಲಿ ಸರ್ಕಾರ ರಚಿಸಿತ್ತು.?
••► ಮಾಜಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಂ


2227) ಪ್ರಸ್ತುತ ಫ್ರಾನ್ಸ್ ದೇಶದ ಅಧ್ಯಕ್ಷ?
••► ಫ್ರಾಂಸ್ವಾ ಒಲಾಂಡ್


2228) ಇತ್ತೀಚೆಗೆ ಕೇಂದ್ರ ಸರ್ಕಾರವು ದೇಶದ ಒಳನಾಡು ಜಲಸಾರಿಗೆಗೆ ಅಗತ್ಯವಿರುವ ಮೂಲಸೌಕರ್ಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ದೇಶದ ಮೊದಲ ‘ನದಿ ಮಾಹಿತಿ ವ್ಯವಸ್ಥೆ’(ರಿವರ್ ಇನ್ಫಾರ್ಮೇಷನ್ ಸರ್ವೀಸ್)  ಯೋಜನೆಯನ್ನು ಯಾವ ರಾಷ್ಟ್ರೀಯ ಜಲಮಾರ್ಗದಲ್ಲಿ ಆರಂಭಿಸಲಾಗಿದೆ.?
••► ರಾಷ್ಟ್ರೀಯ ಜಲಮಾರ್ಗ 1 (ಹಲ್ಡಿಯಾದಿಂದ ಫರಕ್ಕಾ) ದಲ್ಲಿ 145 ಕಿ.ಮೀ.


2229) ಇತ್ತೀಚೆಗೆ ಭಾರತದ ಪ್ರವಾಸೋದ್ಯಮ ರಾಯಭಾರಿಯಾಗಿ, ಕೇಂದ್ರ ಪ್ರವಾಸೋದ್ಯಮ ಇಲಾಖೆಯ ‘ಅತಿಥಿ ದೇವೋ ಭವ’(Incredible India) ಆಂದೋಲನದ ಹೊಸ ಬ್ರಾಂಡ್ ರಾಯಭಾರಿ ಹುದ್ದೆಗೆ ಯಾರು ಆಯ್ಕೆಯಾಗಿದ್ದಾರೆ.?
••► ಅಮಿತಾಬ್ ಬಚ್ಚನ್


2230) ಸದ್ಯಕ್ಕೆ ಇಸ್ರೋ ಹೊಂದಿರುವ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್‍ಎಲ್‍ವಿ ಎಂಕೆ-2) ರಾಕೆಟ್ ಎಷ್ಟು ತೂಕದ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯಬಲ್ಲದು?
••► ಎರಡು ಟನ್ ತೂಕ.

...ಮುಂದುವರೆಯುವುದು. 

☀ಜನೆವರಿ -2016ರ (ಭಾಗ -32) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (General knowledge on Current Affairs (Part-32)) ☆.(ಜನೆವರಿ -2016ರ ಪ್ರಚಲಿತ ಘಟನೆಗಳ ಕ್ವಿಜ್)

☀ಜನೆವರಿ -2016ರ (ಭಾಗ -32) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ
(General knowledge on Current Affairs (Part-32))
☆.(ಜನೆವರಿ -2016ರ ಪ್ರಚಲಿತ ಘಟನೆಗಳ ಕ್ವಿಜ್)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)
 

- ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯವಾದ ಮುಖ್ಯವಾಗಿ ಇತ್ತೀಚಿನ ಪ್ರಸಕ್ತ ಜನೆವರಿ -2016ರ ವಿದ್ಯಮಾನಗಳ ಬಗ್ಗೆ ವಿಶೇಷವಾಗಿ ಅದು ರಾಷ್ಟ್ರೀಯ, ಅಂತರರಾಷ್ಟ್ರೀಯ ಸಾಹಿತ್ಯ, ಕಲೆ, ಸಂಸ್ಕೃತಿ, ಕ್ರೀಡೆ, ವಿಜ್ಞಾನ, ರಾಜಕೀಯ ಮತ್ತು ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳ ವಿದ್ಯಮಾನಗಳನ್ನು ಅಯಾ ದಿನದ ದಿನಪತ್ರಿಕೆಗಳನ್ನು ಕಲೆಹಾಕಿ ಸಂಕ್ಷೇಪಿಸಿ 'ಸ್ಪರ್ಧಾಲೋಕ'ದಲ್ಲಿ ಅಪಡೆಟ್ ಮಾಡಲು ಒಂದು ಚಿಕ್ಕ ಪ್ರಯತ್ನ.



2161) ಇತ್ತೀಚೆಗೆ ನಿಧನರಾದ ಕರ್ನಾಟಕದ ಖ್ಯಾತ ಹಿರಿಯ ನಿರ್ದೇಶಕ, ಚಿತ್ರ ಸಾಹಿತಿ (85 ವರ್ಷ) ಯಾರು?
••► ಗೀತಾಪ್ರಿಯ


2162) ಇತ್ತೀಚೆಗೆ ಸೌತ್ ಏಷ್ಯನ್ ಲಿಟರೇಚರ್‍ನ ಪ್ರತಿಷ್ಟಿತ 'ಡಿಎಸ್ಸಿ ಪ್ರಶಸ್ತಿ' ಪಡೆದ ಭಾರತದ ಖ್ಯಾತ ಬರಹಗಾರ್ತಿ ಯಾರು?
••► ಅನುರಾಧಾ ರಾಯ್


2163) ಇತ್ತೀಚೆಗೆ ವಿಶ್ವದಾದ್ಯಂತ 15 ಭಾಷೆಗಳಿಗೆ ಅನುವಾದಗೊಂಡ ‘ಅಟ್ಲಾಸ್ ಆಫ್ ಇಂಪಾಸಿಬಲ್ ಲಾಂಗಿಂಗ್’ ಕಾದಂಬರಿ ರಚಿಸಿದವರು ಯಾರು?
••► ಅನುರಾಧಾ ರಾಯ್


2164) ಇತ್ತೀಚೆಗೆ ಮಹಿಳಾ ಟೆನಿಸ್ ಸಂಸ್ಥೆ (ಡಬ್ಲ್ಯುಟಿಎ) ಬಿಡುಗಡೆ ಮಾಡಿರುವ ವಿಶ್ವ ಕ್ರಮಾಂಕಪಟ್ಟಿಯ ಡಬಲ್ಸ್ ವಿಭಾಗದ ವೈಯಕ್ತಿಕ ವಿಶ್ವ ಶ್ರೇಣಿಯಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದ ಮಹಿಳಾ ಕ್ರೀಡಾಪಟು ಯಾರು?
••► ಸ್ವಿಟ್ಜರ್‍ಲ್ಯಾಂಡ್‍ನ ಮಾರ್ಟಿನಾ ಹಿಂಗಿಸ್


2165) ಇತ್ತೀಚೆಗೆ ಐಸಿಸಿ ಟೆಸ್ಟ್ ಶ್ರೇಣಿಯಲ್ಲಿ ಪ್ರಥಮ ಸ್ಥಾನಕ್ಕೇರಿದ ರಾಷ್ಟ್ರ?
••► ಭಾರತ.


2166) ಇತ್ತೀಚೆಗೆ ತೈವಾನ್‍ನ ಮೊದಲ ಮಹಿಳಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದವರು?
••► ಸೈ ಇಂಗ್ ವೆನ್


2167) ಇತ್ತೀಚೆಗೆ ಯಾವ ದೇಶಗಳ ನಡುವೆ ಜಂಟಿ ನೌಕಾಪಡೆಗಳ ಸಮರಾಭ್ಯಾಸ 'ಕೈಜಿನ್-2016' ಕಾರ್ಯಾಚರಣೆ ನಡೆಸಲಾಯಿತು?
••► ಭಾರತ ಹಾಗೂ ಜಪಾನ್


2168) ಭಾರತದಲ್ಲಿ ಪ್ರತಿ ವರ್ಷ ಭಾರತದ ಸೇನಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
••► ಜನವರಿ 15.


2169) ಭಾರತೀಯ ಸೇನೆಯ ಮೊಟ್ಟಮೊದಲ ಕಮಾಂಡ್ ಇನ್ ಚೀಫ್ ಆಗಿ ನಿಯುಕ್ತಿಗೊಂಡ ಜನರಲ್ ಫೀಲ್ಡ್ ಮಾರ್ಷಲ್?
••► ಕೊಡನಂದೇರಾ ಮಾದಪ್ಪ ಕಾರ್ಯಪ್ಪ


2170) ಪ್ರಸ್ತುತ ಭಾರತದಲ್ಲಿ ಅತಿಹೆಚ್ಚು ಗ್ರಿಡ್ ಸಂಪರ್ಕಿತ ಸೌರವಿದ್ಯುತ್ ಉತ್ಪಾದಕ ರಾಜ್ಯಗಳೆಂದರೆ:

– ರಾಜಸ್ಥಾನ (1264.35 ಮೆಗಾವ್ಯಾಟ್)

– ಗುಜರಾತ್ (1024.15 ಮೆಗಾವ್ಯಾಟ್)

– ಮಧ್ಯಪ್ರದೇಶ (678.58 ಮೆಗಾವ್ಯಾಟ್)

– ಮಹಾರಾಷ್ಟ್ರನ (378.7 ಮೆಗಾವ್ಯಾಟ್)

– ಆಂದ್ರಪ್ರದೇಶ (357.34 ಮೆಗಾವ್ಯಾಟ್)

– ತೆಲಂಗಾಣ (342.39 ಮೆಗಾವ್ಯಾಟ್)

– ಪಂಜಾಬ್ (200.32 ಮೆಗಾವ್ಯಾಟ್)

– ಉತ್ತರಪ್ರದೇಶ (140 ಮೆಗಾವ್ಯಾಟ್)


2171) ಪ್ರಸ್ತುತ ಭಾರತದಲ್ಲಿ ಸೌರವಿದ್ಯುತ್ ಉತ್ಪಾದನೆಯಲ್ಲಿ ತೀರಾ ಹಿಂದುಳಿದ ರಾಜ್ಯಗಳೆಂದರೆ:

– ಪಶ್ಚಿಮಬಂಗಾಳ (7.21 ಮೆಗಾವ್ಯಾಟ್)

– ಉತ್ತರಾಖಂಡ (5 ಮೆಗಾವ್ಯಾಟ್)

– ಹರ್ಯಾಣ (12.8 ಮೆಗಾವ್ಯಾಟ್)


2172) ಇತ್ತೀಚೆಗೆ ಅಸೋಚಾಮ್ ಕರ್ನಾಟಕ ಪ್ರದೇಶ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದವರು?
••► ಆರ್.ಶಿವಕುಮಾರ್


2173) ಇತ್ತೀಚೆಗೆ ಅಸೋಚಾಮ್ ಕರ್ನಾಟಕ ಪ್ರದೇಶ ಮಂಡಳಿಯ ನೂತನ ಸಹ ಅಧ್ಯಕ್ಷರಾಗಿ ಆಯ್ಕೆಯಾದವರು?
••► ಎಸ್.ಬಾಬು


2174) ಇತ್ತೀಚೆಗೆ (2016ರ ಜನವರಿ 12ರಂದು) ಯೂನಿಸೆಫ್‍ನಿಂದ ಪ್ರತಿಷ್ಠಿತ ಡ್ಯಾನಿ ಕೇಯ್ ಮಾನವೀಯ ನಾಯಕತ್ವ ಪ್ರಶಸ್ತಿ ಪಡೆದ ಫುಟ್‍ಬಾಲ್ ತಾರೆ ?
••► ಡೇವಿಡ್ ಬೆಕ್ಹಮ್


2175) ಇತ್ತೀಚೆಗೆ ದೇಶದ ಮೊದಲ ಸಾವಯವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ರಾಜ್ಯ ಯಾವುದು?
••► ಸಿಕ್ಕಿಂ.


2176) ಇತ್ತೀಚೆಗೆ ಕರ್ನಾಟಕ ಗಡಿ ರಕ್ಷಣಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡವರು?
••► ಎಸ್‌. ರಾಜೇಂದ್ರ ಬಾಬು


2177) ಇತ್ತೀಚೆಗೆ ದೇಶದಲ್ಲಿ ಅತೀ ಹೆಚ್ಚು ಉದ್ದದ ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ರಾಜ್ಯ ಯಾವುದು?
••► ಕರ್ನಾಟಕ


2178) ಇತ್ತೀಚೆಗೆ 19ನೇ ರಾಷ್ಟ್ರೀಯ ಇ- ಆಡಳಿತ ಸಮ್ಮೇಳನ ಎಲ್ಲಿ ಜರುಗಿತು?
••► ನಾಗಪುರ


2179) ಪ್ರಸ್ತುತ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ?
••► ಕಲಿಖೊ ಪುಲ್.


2180) ಪ್ರಸ್ತುತ ಅರುಣಾಚಲ ಪ್ರದೇಶದ ರಾಜ್ಯಪಾಲ?
••► J.P.ರಾಜಖೊವ.


2181) ಇತ್ತೀಚೆಗೆ ಜನ್ಮ ಶತಮಾನೋತ್ಸವವನ್ನು ಆಚರಿಸಲಾದ ಮೈಸೂರು ಮಲ್ಲಿಗೆ ಕೃತಿಯ ಪ್ರಸಿದ್ದ ಕವಿ ಯಾರು?
ಕೆ.ಎಸ್. ನರಸಿಂಹಸ್ವಾಮಿ


2182) ಕೆ.ಎಸ್. ನರಸಿಂಹಸ್ವಾಮಿರವರ ಕುರಿತ ಹೆಚ್ಚಿನ ಮಾಹಿತಿ  :
✧. ದುಂಡು ಮಲ್ಲಿಗೆ ಕವನ ಸಂಗ್ರಹಕ್ಕೆ 1997ರಲ್ಲಿ ಕನ್ನಡ ಸಾಹಿತ್ಯದ ಪಂಪ ಪ್ರಶಸ್ತಿ, 1978ರಲ್ಲಿ ಅವರ ‘ತೆರೆದ ಬಾಗಿಲು’ ಕವನ ಸಂಗ್ರಹಕ್ಕೆ ಅವರಿಗೆ ‘ಸಾಹಿತ್ಯ ಅಕಾಡಮಿ ಪ್ರಶಸ್ತಿ.

★ಕವನ ಸಂಗ್ರಹಗಳು
••► ಮೈಸೂರು ಮಲ್ಲಿಗೆ 1942, ಉಂಗುರ 1942 ಐರಾವತ 1945 ದೀಪದ ಮಲ್ಲಿ 1947, ಇರುವಂತಿಗೆ 1952, ಶಿಲಾಲತೆ 1958, ಮನೆಯಿಂದ ಮನೆಗೆ 1960, ತೆರೆದ ಬಾಗಿಲು 1976, ನವಪಲ್ಲವ 1983, ಮಲ್ಲಿಗೆಯ ಮಾಲೆ 1986, 2004, ದುಂಡು ಮಲ್ಲಿಗೆ 1993, ನವಿಲ ದನಿ 1999, ಸಂಜೆ ಹಾಡು 2000, ಕೈಮರದ ನೆಳಲಲ್ಲಿ 2001, ಎದೆ ತುಂಬ ನಕ್ಷತ್ರ 2002, ಮೌನದಲ್ಲಿ ಮಾತ ಹುಡುಕುತ 2003. ದೀಪ ಸಾಲಿನ ನಡುವೆ 2003.

★ಅನುವಾದಗಳು
••► ಮೀಡಿಯಾ 1999, ರಾಬರ್ಟ ಬರ್ನ್ಸ ಕವಿಯ ಕೆಲವು ಪ್ರೇಮಗೀತೆಗಳು 1993, ಕೆಲವು ಚಿನ್ನೆ ಕವನಗಳು 1997

★ಗದ್ಯಗಳು
••► ಮಾರಿಯ ಕಲ್ಲು 1942, ಉಪವನ 1958, ದಮಯಂತಿ 1960, ಸಿರಿಮಲ್ಲಿಗೆ 1990


2183) ಇತ್ತೀಚೆಗೆ ಕೇಂದ್ರ ಸರ್ಕಾರ ಹೊಸದಾಗಿ ಅನುಮೋದನೆ ನೀಡಿರುವ (ಪಿಎಂಎಫ್ಬಿವೈ) ಪ್ರಧಾನ ಮಂತ್ರಿ ಫಸಲ್ ಬೆಳೆ ವಿಮಾ ಯೋಜನೆಯಲ್ಲಿ ಆಹಾರ ಧಾನ್ಯಗಳು ಮತ್ತು ತೈಲ ಬೀಜಗಳಿಗೆ ಪ್ರೀಮಿಯಂ ಮೊತ್ತವನ್ನು ಶೇ.1.5ರಿಂದ ಎಷ್ಟರಷ್ಟು ಹೆಚ್ಚಳಕ್ಕೆ ನಿಗದಿಪಡಿಸಲಾಗಿದೆ?
••► ಶೇ.1.5ರಿಂದ 2ರಷ್ಟು.


2184) ಜಲ್ಲಿಕಟ್ಟು ಗೂಳಿ ಕಾಳಗ ಸ್ಪರ್ಧೆ ಯಾವ ರಾಜ್ಯಕ್ಕೆ ಸಂಬಂಧಿಸಿದ್ದು?
••► ತಮಿಳುನಾಡು.


2185) ತಮಿಳುನಾಡಿನಲ್ಲಿ ಜಲ್ಲಿಕಟ್ಟು ಗೂಳಿ ಕಾಳಗ ಸ್ಪರ್ಧೆಯು ಯಾವ ಹಬ್ಬದ ವಿಶೇಷವಾಗಿ ನಡೆಸಲಾಗುವುದು?
••► ಪೊಂಗಲ್ ಹಬ್ಬ


2186) ಇತ್ತೀಚೆಗೆ ನಡೆದ ದೇಶದ ಅತ್ಯಂತ ಹಳೆಯ ಕ್ರೀಡಾ ಕ್ಲಬ್‌ಗಳಲ್ಲಿ ಒಂದಾದ ಮೊಹಮ್ಮಡನ್ 125ನೇ ವಾರ್ಷಿಕೋತ್ಸವ ಸಂಧರ್ಭದಲ್ಲಿ ಯಾರಿಗೆ ಕೋಲ್ಕತ್ತ ಮೊಹಮ್ಮಡನ್ ಸ್ಪೋರ್ಟಿಂಗ್ ಕ್ಲಬ್‌ ಆಜೀವ ಸದಸ್ಯತ್ವ ನೀಡಿ ಗೌರವಿಸಲಾಯಿತು?
••► ಬಾಲಿವುಡ್‌ನ ತಾರೆ ಅಮಿತಾಭ್ ಬಚ್ಚನ್.


2187) ಇತ್ತೀಚೆಗೆ ಈ ವರ್ಷದ ‘ನೀರಜಾ ಭಾನೋಟ್‌’ ಪ್ರಶಸ್ತಿಯನ್ನು ಯಾರಿಗೆ ನೀಡಿ ಗೌರವಿಸಲಾಯಿತು?
••► ಬೆಂಗಳೂರು ಮೂಲದ ಸುಭಾಷಿಣಿ ವಸಂತ್


2188) ‘ನೀರಜಾ ಭಾನೋಟ್‌’ ಪ್ರಶಸ್ತಿಯ ಕುರಿತ ಹೆಚ್ಚಿನ ಮಾಹಿತಿ  :
✧.1986ರಲ್ಲಿ ಉಗ್ರರು ಪ್ಯಾನ್‌ ಎಎಂ ವಿಮಾನವನ್ನು ಅಪಹರಿಸಿದಾಗ ಗಗನಸಖಿ ನೀರಜಾ ಭಾನೋಟ್‌ ಪ್ರಯಾಣಿಕರನ್ನು ರಕ್ಷಿಸಲು ಮುಂದಾಗಿ ಪ್ರಾಣ ಕಳೆದುಕೊಂಡಿದ್ದರು. ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.
✧.ಪ್ರಶಸ್ತಿಯು ರೂ 1.50 ಲಕ್ಷ ನಗದು, ಫಲಕ ಮತ್ತು ಟ್ರೋಫಿಯನ್ನು ಒಳಗೊಂಡಿರುತ್ತದೆ.

✧.ನೀರಜಾ ಬಾನೋಟ್‍ರವರ ಈ ಸಾಧನೆಗಾಗಿ ಭಾರತ ಸರ್ಕಾರವು ಅಶೋಕ ಚಕ್ರ ಪ್ರಶಸ್ತಿ, ಪಾಕಿಸ್ತಾನ ಸರ್ಕಾರವು ಟ್ಯಾಗ್‍ಮಿ-ಇ-ಇನ್‍ಸಾಯತ್(Tagme-e-Insaniyat) ಪ್ರಶಸ್ತಿಯನ್ನು ಹಾಗೂ ಅಮೆರಿಕಾ ಸರ್ಕಾರವು ಮೆಡಲ್ ಆಫ್ ಹಿರೋಹಿಸಂ ಆಪ್ ದ ನ್ಯಾಷನಲ್ ಸೊಸೈಟಿ (Medal of Heroism of the National Society) ಪ್ರಶಸ್ತಿಗಳನ್ನು ನೀಡಿವೆ.


2189) ಸೆನ್ಸಾರ್‌ ಮಂಡಳಿ (ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ–ಸಿಬಿಎಫ್‌ಸಿ)  ಪುನರ್‌ರಚನೆಗಾಗಿ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಇತ್ತೀಚೆಗೆ ಯಾರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.?
••► ಸಿನಿಮಾ ನಿರ್ದೇಶಕ ಶ್ಯಾಮ್ ಬೆನಗಲ್‌


2190) ಕಳೆದ ವರ್ಷದ ದಸರಾ ಸಂದರ್ಭದಲ್ಲಿ ಅಕ್ಟೋಬರ್ 26ರಂದು ಪ್ರದರ್ಶನಗೊಂಡ, (20 ಸಾವಿರ ನೃತ್ಯಗಾರರನ್ನು ಒಳಗೊಂಡ) ಅತಿಹೆಚ್ಚು ಮಂದಿ ಪಾಲ್ಗೊಂಡ ನೃತ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಗಿನ್ನಿಸ್ ದಾಖಲೆಗೆ ಸೇರಿದ ಅಪೂರ್ವ ನೃತ್ಯಪ್ರದರ್ಶನ ಯಾವುದು?
••► ಕುಲ್ಲು ಜಾನಪದ ನೃತ್ಯ (ನತಿ)

.. ಮುಂದುವರೆಯುವುದು. 

ಜನೆವರಿ -2016ರ (ಭಾಗ -31) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (General knowledge on Current Affairs (Part-31)) ☆.(ಜನೆವರಿ -2016ರ ಪ್ರಚಲಿತ ಘಟನೆಗಳ ಕ್ವಿಜ್)

☀ಜನೆವರಿ -2016ರ (ಭಾಗ -31) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ
(General knowledge on Current Affairs (Part-31))
☆.(ಜನೆವರಿ -2016ರ ಪ್ರಚಲಿತ ಘಟನೆಗಳ ಕ್ವಿಜ್)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)
 
- ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯವಾದ ಮುಖ್ಯವಾಗಿ ಇತ್ತೀಚಿನ ಪ್ರಸಕ್ತ ಜನೆವರಿ -2016ರ ವಿದ್ಯಮಾನಗಳ ಬಗ್ಗೆ ವಿಶೇಷವಾಗಿ ಅದು ರಾಷ್ಟ್ರೀಯ, ಅಂತರರಾಷ್ಟ್ರೀಯ ಸಾಹಿತ್ಯ, ಕಲೆ, ಸಂಸ್ಕೃತಿ, ಕ್ರೀಡೆ, ವಿಜ್ಞಾನ, ರಾಜಕೀಯ ಮತ್ತು ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳ ವಿದ್ಯಮಾನಗಳನ್ನು ಅಯಾ ದಿನದ ದಿನಪತ್ರಿಕೆಗಳನ್ನು ಕಲೆಹಾಕಿ ಸಂಕ್ಷೇಪಿಸಿ 'ಸ್ಪರ್ಧಾಲೋಕ'ದಲ್ಲಿ ಅಪಡೆಟ್ ಮಾಡಲು ಒಂದು ಚಿಕ್ಕ ಪ್ರಯತ್ನ.



2131) ಮಹಿಳೆಯರು, ಮಕ್ಕಳು ಮತ್ತು ಯುವಜನರು ಎದುರಿಸುವ ಪ್ರಮುಖ ಆರೋಗ್ಯ ಸಮಸ್ಯೆಗಳ ಕುರಿತ ವಿಶ್ವಸಂಸ್ಥೆಯ ಜಾಗತಿಕ ಮಟ್ಟದ ಸಲಹಾ ಸಮಿತಿಗೆ ಇತ್ತೀಚೆಗೆ ಆಯ್ಕೆಗೊಂಡ ಭಾರತೀಯ?
••► ಕೇಂದ್ರದ ಆರೋಗ್ಯ ಸಚಿವ ಜೆ.ಪಿ. ನಡ್ಡಾ .


2132) ಮಹಿಳೆಯರು, ಮಕ್ಕಳು ಮತ್ತು ಯುವಜನರು ಎದುರಿಸುವ ಪ್ರಮುಖ ಆರೋಗ್ಯ ಸಮಸ್ಯೆಗಳ ಕುರಿತ ವಿಶ್ವಸಂಸ್ಥೆಯ ಜಾಗತಿಕ ಮಟ್ಟದ ಸಲಹಾ ಸಮಿತಿ ಕುರಿತ ಹೆಚ್ಚಿನ ಮಾಹಿತಿ  :
✧. ಈ ಸಮಿತಿಯ ಹೆಸರು ‘ಪ್ರತಿ ಮಹಿಳೆ, ಪ್ರತಿ ಮಗು’.
✧. ಚಿಲಿಯ ಅಧ್ಯಕ್ಷೆ ಮಿಷೆಲ್ ಬಾಕಲೆಟ್ ಮತ್ತು ಇಥಿಯೋಪಿಯ ಪ್ರಧಾನಿ ಮುಲತು ಟೆಸೋಮ್ ಅವರು ಈ ಸಮಿತಿಯ ಸಹ ಅಧ್ಯಕ್ಷರಾಗಿದ್ದಾರೆ.


2133) ಇತ್ತೀಚೆಗೆ ಯಾವ ನದಿಯ ಜಲಾನಯನ ಪ್ರದೇಶ ಅಭಿವೃದ್ಧಿಗೆ ವಿಶ್ವಬ್ಯಾಂಕ್ ಭಾರತಕ್ಕೆ 250 ದಶಲಕ್ಷ ಡಾಲರ್ ನೆರವು ನೀಡಲಿದೆ.?
••► ಕೋಸಿ ನದಿ


2134) ಕೋಸಿ ನದಿ ಕುರಿತ ಹೆಚ್ಚಿನ ಮಾಹಿತಿ  :
✧.  ಬಿಹಾರದ ಕಣ್ಣೀರ ನದಿ.
✧. ಕೋಸಿ ನದಿಯು ಹಿಮಾಲಯದ ಉತ್ತರ ಭಾಗದ ಕಡಿದಾದ ಪ್ರದೇಶದಿಂದ ಅಂದರೆ ಟಿಬೆಟ್‍ನಲ್ಲಿ ಹುಟ್ಟಿ, ನೇಪಾಳದ ಮೂಲಕ ಹರಿದುಬರುತ್ತದೆ.
✧. ಕೋಸಿ ನದಿಯು ಉತ್ತರ ಬಿಹಾರದ ಮೂಲಕ ಹರಿಯುತ್ತದೆ ಹಾಗೂ ಗಂಗಾನದಿಯನ್ನು ಕಟಿಯಾರ ಜಿಲ್ಲೆಯ ಕ್ರುಸೆಲಾದಲ್ಲಿ ಸೇರುವ ಮುನ್ನ ವಿಭಜನೆಯಾಗುತ್ತದೆ.
★ಉಪನದಿಗಳು:
✧. ಪೂರ್ವದಲ್ಲಿ ಕಾಂಚನಜುಂಗಾದಿಂದ ಹುಟ್ಟುವ ತುಮರ್ ಕೋಸಿ, ಟಿಬೇಟ್‍ನ ಅರುಣ್ ನದಿ ಹಾಗೂ ಪಶ್ಚಿಮದ ಗೊಸೈನ್‍ಥಾನ್‍ನ ಸನ್ ಕೋಸಿ ನದಿಗಳು ಇದರ ಉಪನದಿಗಳಾಗಿವೆ.
✧. ಸನ್ ಕೋಸಿಯ ಉಪನದಿಗಳು ಪೂರ್ವದಿಂದ ಪಶ್ಚಿಮಕ್ಕೆ ದೂದ್ ಕೋಸಿ, ಭೋತೆ ಕೋಸಿ, ತಂಬಾ ಕೋಸಿ ಹಾಗೂ ಇಂದ್ರಾವತಿ ಕೋಸಿ.


2135) ಭರಚುಕ್ಕಿ ಜಲವಿದ್ಯುತ್ ಯೋಜನೆ ಇಲ್ಲಿ ನಿರ್ಮಿಸಲಾಗಿದೆ ...
••► ಶಿವನಸಮುದ್ರ ಸಮೀಪ.


2136) ದ ಲೇಡಿ ವಿಗ್ರಮ್ ಟ್ರೋಫಿಯು ಯಾವ ಕ್ರೀಡೆಗೆ ಸಂಬಂಧಿಸಿದೆ?
••► ಮೋಟರ್ ಸ್ಪೋಟ್ಸ್(ಫಾಮ್ರ್ಯುಲಾ ಕಾರ್ ರೇಸ್)


2137) ಜೆಹಾನ್ ದರುವಾಲಾ ಅವರು ಯಾವ ಕ್ರೀಡೆಯಲ್ಲಿ ಪ್ರಸಿದ್ಧರಾಗಿದ್ದಾರೆ?
••► ಮೋಟರ್ ಸ್ಪೋಟ್ಸ್(ಫಾಮ್ರ್ಯುಲಾ ಕಾರ್ ರೇಸ್)


2138) ಇತ್ತೀಚೆಗೆ ಪಕ್ಷಿ ವಿಜ್ಞಾನಿಗಳು ಈಶಾನ್ಯ ಭಾರತ ಪ್ರದೇಶದಲ್ಲಿ ಚೀನಾದ ಗಡಿಗೆ ಹೊಂದಿಕೊಂಡ ಅರಣ್ಯದಲ್ಲಿ ಹೊಸ ಪಕ್ಷಿ ಪ್ರಬೇಧವೊಂದನ್ನು ಪತ್ತೆ ಮಾಡಿದ್ದಾರೆ. ಆ ಪಕ್ಷಿ ಪ್ರಬೇಧದ ಹೆಸರೇನು?
••► ಹಿಮಾಲಯನ್ ಫಾರೆಸ್ಟ್ ಥ್ರಷ್ .


2139) ಹಿಮಾಲಯನ್ ಫಾರೆಸ್ಟ್ ಥ್ರಷ್ ಕುರಿತ ಹೆಚ್ಚಿನ ಮಾಹಿತಿ  :
✧.  ದೇಶದಲ್ಲಿ ಸ್ವಾತಂತ್ರ್ಯಾನಂತರ ಪತ್ತೆಯಾದ ನಾಲ್ಕು ಹೊಸ ಪಕ್ಷಿಪ್ರಬೇಧಗಳ ಪೈಕಿ ಒಂದಾಗಿದೆ.
✧. ಇದರ ವೈಜ್ಞಾನಿಕ ಹೆಸರು ಝೂತೆರಾ ಸಮಿಮಲ್ಲಿ ಎಂದಾಗಿದೆ.ಖ್ಯಾತ ಪಕ್ಷಿಶಾಸ್ತ್ರಜ್ಞ ಹಾಗೂ ಪರಿಸರವಾದಿ ಸಲೀಂ ಅಲಿ ಅವರ ಗೌರವಾರ್ಥ ಈ ಹೆಸರನ್ನು ಹೊಸ ಪಕ್ಷಿಗೆ ಇಡಲಾಗಿದೆ.
✧. ಇದಕ್ಕೂ ಮುನ್ನ ಪತತೆ ಮಾಡಲಾದ ಪಕ್ಷಿಪ್ರಬೇಧವೆಂದರೆ 2006ರಲ್ಲಿ ಅರುಣಾಚಲ ಪ್ರದೇಶದಲ್ಲಿ ಪತ್ತೆಯಾದ ಬುಗುನ್ ಲಿಯೊಸಿಚೆಲ.


2140) ಸ್ವತಂತ್ರ ಜಿಪಿಎಸ್ ಹೊಂದಿರುವ ದೇಶಗಳು
✧. ಅಮೆರಿಕ ••┈┈┈┈┈┈┈┈┈┈┈┈┈•• ಜಿಪಿಎಸ್
✧. ರಷ್ಯನ್ ಫೆಡರೇಷನ್••┈┈┈┈┈┈┈┈┈┈┈┈┈••ಜಿಎಲ್‍ಒಎನ್ ಎಎಸ್ಎಸ್
✧. ಚೀನಾ ••┈┈┈┈┈┈┈┈┈┈┈┈┈••ಬಿಇಐಡಿಒಯು
✧. ಯುರೋಪ್••┈┈┈┈┈┈┈┈┈┈┈┈┈••ಗೆಲಿಲಿಯೋ


2141) ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆ(ಎನ್‍ಜೆಎಸಿ) ಯನ್ನು ಕೇಂದ್ರ ಸರ್ಕಾರ ಯಾವಾಗ ಜಾರಿ ಮಾಡಿತ್ತು.?
••► 2015ರ ಏಪ್ರಿಲ್ 13ರಂದು


2142) 2015ರ ಅಕ್ಟೋಬರ್ 16ರಂದು ಸುಪ್ರೀಂ ಕೋರ್ಟ್ ಎನ್‍ಜೆಎಸಿ ರದ್ದುಪಡಿಸಿ ಮತ್ತೆ ಕೊಲಿಜಿಯಂ ಕಾರ್ಯನಿರ್ವಹಣೆ ಮತ್ತೆ ಅಸ್ತಿತ್ವಕ್ಕೆ ತಂದಿದೆ.


2143) ಸ್ಪೇಸ್ ಎಕ್ಸ್ ಹೆಸರಿನ ಖಾಸಗಿ ಬಾಹ್ಯಾಕಾಶ ಸಾರಿಗೆ ಕಂಪನಿಯು ಯಾವ ದೇಶದಲ್ಲಿದೆ?
••► ಅಮೆರಿಕ


2144) ಇತ್ತೀಚೆಗೆ ಐಎನ್‍ಎಸ್‍ಇಎಡಿ ಬ್ಯುಸಿನೆಸ್ಸ ಸ್ಕೂಲ್, ಅಡೆಕ್ಕೊ ಹಾಗೂ ಸಿಂಗಾಪುರದ ಮಾನವ ಬಂಡವಾಳ ನಾಯಕತ್ವ ಸಂಸ್ಥೆ (ಎಚ್‍ಸಿಎಲ್‍ಐ) ಸಂಯುಕ್ತವಾಗಿ ಸಿದ್ಧಪಡಿಸಿದ ಜಾಗತಿಕ ಪ್ರತಿಭಾ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಭಾರತ ವಿಶ್ವದಲ್ಲಿ ಏಷ್ಟನೇ ಸ್ಥಾನ ಪಡೆದಿದೆ.?
••► 89ನೇ ಸ್ಥಾನ.


2145) ಜಾಗತಿಕ ಪ್ರತಿಭಾ ಸ್ಪರ್ಧಾತ್ಮಕತೆ ಸೂಚ್ಯಂಕದ ಕುರಿತ ಹೆಚ್ಚಿನ ಮಾಹಿತಿ  :
✧.  ಭಾರತ 2014-15ನೇ ಸಾಲಿನ ಸೂಚ್ಯಂಕಕ್ಕೆ ಹೋಲಿಸಿದರೆ 11 ಸ್ಥಾನಗಳ ಕುಸಿತ ಕಂಡಿದೆ. 2014-15ನೇ ಸಾಲಿನ ವರದಿಯಲ್ಲಿ ಭಾರತ 78ನೇ ಸ್ಥಾನ ಹೊಂದಿತ್ತು.

✧. ಜಾಗತಿಕ ಪ್ರತಿಭಾ ಸ್ಪರ್ಧಾತ್ಮಕ ಸೂಚ್ಯಂಕದ ಅಗ್ರ ಹತ್ತು ದೇಶಗಳೆಂದರೆ ಕ್ರಮವಾಗಿ ಸ್ವಿಡ್ಜರ್‍ಲೆಂಡ್, ಸಿಂಗಾಪುರ, ಲಕ್ಸಂಬರ್ಗ್, ಅಮೆರಿಕ, ಡೆನ್ಮಾರ್ಕ್, ಸ್ವೀಡನ್, ಇಂಗ್ಲೆಂಡ್, ನಾರ್ವೆ, ಕೆನಡಾ ಹಾಗೂ ಫಿನ್‍ಲೆಂಡ್.

✧. ತಳಮಟ್ಟದಲ್ಲಿರುವ ಐದು ದೇಶಗಳೆಂದರೆ ಮಾಲಿ, ತಾಂಜಾನಿಯಾ, ಇಥಿಯೋಪಿಯಾ, ಬುರ್ಕಿನೊ ಫ್ಯಾಸೊ ಹಾಗೂ ಮಡಗಾಸ್ಕರ್.


2146) ಇತ್ತೀಚೆಗೆ (2016ರ ಜನವರಿ 14ರಂದು) ಯೂರೋಪಿಯನ್ ಕಮಿಷನ್‍ನ ಪ್ರತಿಷ್ಠಿತ ಲಾರೆನ್ಸೊ ನತಾಲಿ ಮಾಧ್ಯಮ ಪ್ರಶಸ್ತಿಯನ್ನು ಪಡೆದ ಭಾರತೀಯ ಯಾರು?
••► ದೆಹಲಿಯ ಹವ್ಯಾಸಿ ಬರಹಗಾರ್ತಿ ಅಂಕಿತಾ ಆನಂದ್
     

2147) ಇತ್ತೀಚೆಗೆ ರಾಷ್ಟ್ರೀಯ ಜನತಾದಳದ (ಆರ್ ಜೆ ಡಿ) ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಗೊಂಡವರು?
••► ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್.(9ನೇ ಬಾರಿ ಆಯ್ಕೆ)


2148) ಪಾಂಗ್ ಸರೋವರ ಅಥವಾ ಪಾಂಗ್ ಡಾಮ್ ಕೆರೆ ಎಂದು ಕರೆಯಲ್ಪಡುವ ಅಣೆಕಟ್ಟು ಯಾವುದು?
••► ಮಹಾರಾಣಾಪ್ರತಾಪ್ ಸಾಗರ


2149) ಮಹಾರಾಣಾಪ್ರತಾಪ್ ಸಾಗರ ಅಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಿದ ಅತಿದೊಡ್ಡ ಅಣೆಕಟ್ಟಾಗಿದೆ.?
••► ಬಿಯಾಸ್ ನದಿ.


2150) ರಾಸ್ಮೆರ್ ಶೃಂಗಸಭೆಯಲ್ಲಿ ಘೋಷಿಸಲಾದ 25 ಅಂತಾರಾಷ್ಟ್ರೀಯ ಜೌಗುಭೂಮಿ ಪ್ರದೇಶಗಳಲ್ಲಿ ಒಂದಾದ ಮಹಾರಾಣಾಪ್ರತಾಪ್ ಸಾಗರ ಅಣೆಕಟ್ಟನ್ನು ಎಲ್ಲಿ ನಿರ್ಮಿಸಲಾಗಿದೆ?
••► ಹಿಮಾಚಲ ಪ್ರದೇಶದ ಕಂಗಾರಾ ಜಿಲ್ಲೆಯ ಶಿವಾಲಿಕ್ ಬೆಟ್ಟಪ್ರದೇಶದ ಜೌಗುಭೂಮಿ.


2151) ರಾಮ್ಸರ್ ಶೃಂಗ ಸಭೆಯಿಂದ ಪ್ರಸಿದ್ಧವಾದ ರಾಮ್ಸರ್ ನಗರವು ಯಾವ ದೇಶದಲ್ಲಿದೆ?
••► ಇರಾನ್‍(ಮಜಂದರಮ್‍ನಲ್ಲಿ.)


2152) ಇಂದಿರಾ ಗಾಂಧಿ ಮೃಗಾಲಯ (ಪ್ರಾಣಿಶಾಸ್ತ್ರ ಉದ್ಯಾನವನ) ಪಾರ್ಕ್ (IGZP) ಎಲ್ಲಿದೆ?
••► ಆಂಧ್ರಪ್ರದೇಶದ ವಿಶಾಖಪಟ್ಟಣಂ ಬಳಿಯ ಕೊಂಬಲಕೊಂಡದಲ್ಲಿ.


2153) ಇತ್ತೀಚೆಗೆ ಜಾಗತಿಕವಾಗಿ, ಇದೇ ಮೊದಲ ಬಾರಿಗೆ ವಿಶ್ವಬ್ಯಾಂಕ್ ದೇಶದ ಮೃಗಾಲಯವೊಂದರ ಪುನರ್ ನಿರ್ಮಾಣಕ್ಕೆ ನೆರವು (135 ಕೋಟಿ ರೂ) ನೀಡಲು ಮುಂದಾಗಿದ್ದು, ಅದು ಯಾವುದು & ಎಲ್ಲಿದೆ?
••► ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಇಂದಿರಾ ಗಾಂಧಿ ಮೃಗಾಲಯ ಪಾರ್ಕ್ (IGZP)


2154) NITI (ನೀತಿ) ಆಯೋಗ :
••► ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ.


2155) ಇತ್ತೀಚೆಗೆ ಚಿನ್ನ ನಗದೀಕರಣ ಯೋಜನೆಯಲ್ಲಿ ಹೂಡಿಕೆ ಮಾಡಿದ ಇತಿಹಾಸ ಪ್ರಸಿದ್ಧ ಗುಜರಾತ್‍ನ ಮೊಟ್ಟಮೊದಲ ದೇವಾಲಯ ಯಾವುದು?
••► ಸೋಮನಾಥ ದೇವಾಲಯ


2156) ಇತ್ತೀಚೆಗೆ ಚೀನಾ ಪ್ರಾಯೋಜಿತ ಏಷ್ಯನ್ ಮೂಲಸೌಕರ್ಯ ಬಂಡವಾಳ ಬ್ಯಾಂಕ್ (ಎಐಐಬಿ)  ನಿರ್ದೇಶಕರ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದ ಭಾರತೀಯ?
••► ದಿನೇಶ್ ಶರ್ಮಾ


2157) ಇತ್ತೀಚೆಗೆ 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ದೋಷಾರೋಪಕ್ಕೆ ಒಳಗಾಗಿ ಅಜೀವ ನಿಷೇಧದ ಶಿಕ್ಷೆಗೊಳಗಾದ ರಾಜಸ್ಥಾನ ರಾಯಲ್ಸ್ ತಂಡದ ಕ್ರೀಡಾಪಟು ಯಾರು?
••► ಅಜಿತ್ ಚಂಡಿಲಾ


2158) ಇತ್ತೀಚೆಗೆ ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ ಸಂಪೂರ್ಣವಾಗಿ ನಿಷೇಧ ಹೇರಿ ತಂಬಾಕು ವಿರೋಧಿ ಕಾನೂನನ್ನು ಜಾರಿಗೊಳಿಸಿದ ದೇಶ ಯಾವುದು?
••► ತುರ್ಕ್‍ಮೆನಿಸ್ತಾನ


2159) ತಂಬಾಕು ವಿರೋಧಿ ಕಾನೂನು ಕುರಿತ ಹೆಚ್ಚಿನ ಮಾಹಿತಿ  :
✧. ವಿಶ್ವದಲ್ಲಿಯೇ ಅತಿ ಕಡಿಮೆ ಸಿಗರೇಟು ಸೇದುವವರು ತುರ್ಕ್‍ಮೆನಿಸ್ತಾನದಲ್ಲಿದ್ದಾರೆ ಎಂದು ಕಳೆದ ಜುಲೈನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತ್ತು.
2004ರಲ್ಲಿ ಭೂತಾನ್ ಎಲ್ಲ ರೀತಿಯ ತಂಬಾಕು ಉತ್ಪನ್ನಗಳನ್ನು ನಿಷೇಧಿಸಿದ ಮೊದಲ ದೇಶ ಎನಿಸಿಕೊಂಡಿತ್ತು.


2160) ಇತ್ತೀಚೆಗೆ ಚಾಲನೆಗೊಂಡ ಏಷ್ಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (ಎಐಐಬಿ) ಎಂಬ ಹೊಸ ಅಂತರರಾಷ್ಟ್ರೀಯ ಅಭಿವೃದ್ಧಿ ಬ್ಯಾಂಕ್‍ಗೆ ಮೊಟ್ಟಮೊದಲ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡವರು?
••► ಚೀನಾದ ಮಾಜಿ ಹಣಕಾಸು ಸಚಿವ ಜಿನ್ ಲಿಕ್ವಿನ್

... ಮುಂದುವರೆಯುವುದು.