"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 2 May 2016

☀️ ಬಾಹ್ಯಾಕಾಶ ನೌಕೆಯಲ್ಲಿ ಮೇಣದ ಬತ್ತಿಯ ಜ್ವಾಲೆಯು ವೃತ್ತಾಕಾರ ಪಡೆಯುವುದು ಏಕೆ? (The reason of Candle Flame get Circled in Space)

☀️ ಬಾಹ್ಯಾಕಾಶ ನೌಕೆಯಲ್ಲಿ ಮೇಣದ ಬತ್ತಿಯ ಜ್ವಾಲೆಯು ವೃತ್ತಾಕಾರ ಪಡೆಯುವುದು ಏಕೆ?
(The reason of Candle Flame get Circled in Space)
━━━━━━━━━━━━━━━━━━━━━━━━━━━━━━━━━━━━━━━━━━━━━━━
★.ಸಾಮಾನ್ಯ ವಿಜ್ಞಾನ
(General Science)

   ಭೂಮಿಯ ಮೇಲೆ ಮೇಣದ ಬತ್ತಿಗೆ ಬೆಂಕಿ ಹೊತ್ತಿಸಿದಾಗ ಜ್ವಾಲೆಯು ಮೇಲೆರಿದಂತೆ ತೋರುತ್ತದೆ. ಇದಕ್ಕೆ ಕಾರಣ ಗುರುತ್ವಾಕರ್ಷಣ ಶಕ್ತಿ. ಆದರೆ, ಬಾಹ್ಯಾಕಾಶ ನೌಕೆಯಲ್ಲಿ ಗುರುತ್ವಾಕರ್ಷಣ ಶಕ್ತಿ ಇರುವುದಿಲ್ಲ. ಹಾಗಾಗಿ ಜ್ವಾಲೆ ಮೇಲೆರದೆ, ಸುತ್ತಲೂ ಹರಡಿದಂತೆ ಕಾಣುತ್ತದೆ. ಲಭ್ಯವಿರುವ ಆಮ್ಲಜನಕ ಬಳಸಿಕೊಂಡು ನಂತರ ಜ್ವಾಲೆ ನಂದುವುದು.

ಇಲ್ಲಿ ಜ್ವಾಲೆ ಮೇಲೆರಲು ಗುರುತ್ವಾಕರ್ಷಣ ಶಕ್ತಿ ಹೇಗೆ ಕಾರಣ ಎಂಬ ಪ್ರಶ್ನೆಯು ಮೂಡುತ್ತದೆ. ಉತ್ತರ ಬಹಳ ಸರಳ. ಮೇಣದ ಬತ್ತಿ ಉರಿದಂತೆ ಬಿಸಿ ಅನಿಲವನ್ನು ತಂಪಾದ ಗಾಳಿ ಮೇಲಕ್ಕೆ ದಬ್ಬುವುದು. ಇದರಿಂದಾಗ ಉಬ್ಬಾದ ಗಾಳಿಯ ಪ್ರವಾಹ ಉಂಟಾಗಿ ಲಂಬವಾಗಿ ಎಳೆದಂತೆ ಜ್ವಾಲೆಯ ಆಕಾರ ಉಂಟಾಗುವುದು.

No comments:

Post a Comment