☀️ ತಂತ್ರಜ್ಞಾನ ಉನ್ನತೀಕರಣ ನಿಧಿ ಯೋಜನೆ :
(Technology upgradation fund scheme)
━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಮಾಹಿತಿ & ತಂತ್ರಜ್ಞಾನ
(Information & Technology)
ತಂತ್ರಜ್ಞಾನ ಉನ್ನತೀಕರಣ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರ 1999ರಲ್ಲಿ ಆರಂಭಿಸಿದ್ದು, ಭಾರತದ ಜವಳಿ ಉದ್ಯಮವನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿ ಮಾಡುವ ಸಲುವಾಗಿ ಇದನ್ನು ಆರಂಭಿಸಲಾಗಿತ್ತು. ಜತೆಗೆ ಜವಳಿ ಉದ್ಯಮಗಳ ಬಂಡವಾಳ ಹೂಡಿಕೆ ವೆಚ್ಚವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿತ್ತು.
ಇದನ್ನು 12ನೇ ಪಂಚವಾರ್ಷಿಕ ಯೋಜನೆಯ ವೇಳೆ ತಿದ್ದುಪಡಿ ಮಾಡಲಾಗಿತ್ತು. ತಂತ್ರಜ್ಞಾನ ಉನ್ನತೀಕರಣ ನಿಧಿ ಯೋಜನೆಯನ್ನು ತಿದ್ದುಪಡಿ ಬಳಿಕ ಪರಿಷ್ಕøತ ಪುನರ್ರಚಿತ ತಂತ್ರಜ್ಞಾನ ಉನ್ನತೀಕರಣ ನಿಧಿ ಯೋಜನೆಯಾಗಿ ಮಾರ್ಪಡಿಸಲಾಗಿತ್ತು.
ಇತ್ತೀಚೆಗೆ ಜವಳಿ ಕೈಗಾರಿಕೆಗಳ ತಂತ್ರಜ್ಞಾನ ಉನ್ನತೀಕರಣದ ಸಂಬಂಧ ತಿದ್ದುಪಡಿ ಮಾಡಲಾದ ತಂತ್ರಜ್ಞಾನ ಉನ್ನತೀಕರಣ ನಿಧಿ ಯೋಜನೆ ಅನುಷ್ಠಾನಕ್ಕೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಒಪ್ಪಿಗೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಈ ಎಟಿಯುಎಫ್‍ಎಸ್ ಯೋಜನೆಯು ಹಾಲಿ ಇರುವ ಪರಿಷ್ಕøತ ಪುನರ್ರಚಿತ ತಂತ್ರಜ್ಞಾನ ಉನ್ನತೀಕರಣ ನಿಧಿ ಯೋಜನೆಯ ಬದಲಾಗಿ ಇದು ಜಾರಿಗೆ ಬರಲಿದೆ. ಇದು ದೇಶದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯಡಿ ಜವಳಿ ವಲಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿರುತ್ತದೆ.
@spardhaloka

No comments:
Post a Comment