"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 4 May 2016

☀️ ಇತ್ತೀಚೆಗೆ (ಜನೆವರಿ 4 ರಂದು) ರಾಷ್ಟ್ರಪತಿವರು ಅಂಕಿತ ಹಾಕಿದ ಐದು ಕಾಯ್ದೆಗಳು : (The Five Laws signed by The President of India recently)

☀️ ಇತ್ತೀಚೆಗೆ (ಜನೆವರಿ 4 ರಂದು) ರಾಷ್ಟ್ರಪತಿವರು ಅಂಕಿತ ಹಾಕಿದ ಐದು ಕಾಯ್ದೆಗಳು :
(The Five Laws signed by The President of India recently) 
━━━━━━━━━━━━━━━━━━━━━━━━━━━━━━━━━━━━━━━━━━━━━━━

ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಐದು ಕಾಯ್ದೆಗಳಿಗೆ ಅಂಕಿತ ಹಾಕಿದ್ದಾರೆ. ಅವುಗಳೆಂದರೆ:

1.ಮಧ್ಯಸ್ಥಿಕೆ ಮತ್ತು ಸಂಧಾನ (ತಿದ್ದುಪಡಿ) ಕಾಯ್ದೆ

2. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆ

3. ವಾಣಿಜ್ಯ ನ್ಯಾಯಾಲಯ, ವಾಣಿಜ್ಯ ವಿಭಾಗ ಹಾಗೂ ಹೈಕೋರ್ಟ್‍ನ ವಾಣಿಜ್ಯ ಮೇಲ್ಮನವಿ ವಿಭಾಗ ಕಾಯ್ದೆ.

4. ಅಣುಶಕ್ತಿ (ತಿದ್ದುಪಡಿ) ಕಾಯ್ದೆ

5. ಬೋನಸ್ ಪಾವತಿ (ತಿದ್ದುಪಡಿ) ಕಾಯ್ದೆ- 2015.


☀️ ವಿವರಣೆ :

* ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆಯಡಿ ಉದ್ದೇಶಪೂರ್ವಕವಾಗಿ ಆಕೆಯ ಸಮ್ಮತಿ ಇಲ್ಲದೇ ಲೈಂಗಿಕ ಉದ್ದೇಶದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರನ್ನು ಸ್ಪರ್ಶಿಸುವುದು, ಯಾವುದೇ ಲೈಂಗಿಕ ಉದ್ದೇಶದ ಮಾತುಗಳನ್ನಾಡುವುದು, ಯಾವುದೇ ಕ್ರಿಯೆ ಅಥವಾ ಅಶ್ಲೀಲ ಸಂಜ್ಞೆಗಳನ್ನು ಮಾಡುವುದು ಹಾಗೂ ದೇವದಾಸಿಯಾಗಿ ದೇವಾಲಯಗಳಿಗೆ ಸಮರ್ಪಿಸುವುದು ಅಥವಾ ಇಂಥ ಕ್ರಮಗಳನ್ನು ಅಪರಾಧ ಎಂದು ಪರಿಗಣಿಸಲಾಗುವುದು.

* ಅಣುಶಕ್ತಿ (ತಿದ್ದುಪಡಿ) ಕಾಯ್ದೆಯಡಿ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಅಣುವಿದ್ಯುತ್ ನಿಗಮವು ಸರ್ಕಾರಿ ಸ್ವಾಮ್ಯದ ಇತರ ಉದ್ದಿಮೆಗಳ ಜತೆ ಸಹಭಾಗಿತ್ವ ವಹಿಸಲು ಅವಕಾಶ ಕಲ್ಪಿಸುತ್ತದೆ. ಈ ಕಾಯ್ದೆಯು 1962ರ ಅಣುವಿದ್ಯುತ್ ಕಾಯ್ದೆಯ ಜಾಗದಲ್ಲಿ ಜಾರಿಗೆ ಬರಲಿದ್ದು, ಹೊಸ ತಿದ್ದುಪಡಿ ಅನ್ವಯ ಸರ್ಕಾರಿ ಕಂಪನಿ ಎನ್ನುವ ವ್ಯಾಖ್ಯೆಯನ್ನು ಬದಲಿಸಲಾಗಿದೆ. ತಿದ್ದುಪಡಿ ನಿಯಮದ ಅನ್ವಯ ಇದರ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಸದ್ಯದ ಕಾಯ್ದೆ ಅನ್ವಯ ರಾಷ್ಟ್ರೀಯ ಅಣುವಿದ್ಯುತ್ ನಿಗಮ ಹಾಗೂ ಭಾರತ್ ನಭಿಕಿಯಾ ವಿದ್ಯುತ್ ನಿಗಮ ಲಿಮಿಟೆಡ್ ಮಾತ್ರ ಅಣುಶಕ್ತಿ ವಿಭಾಗದ ನಿಯಂತ್ರಣಕ್ಕೆ ಬರುತ್ತವೆ. ಇವು ಮಾತ್ರ ಅಣುಶಕ್ತಿ ಯೋಜನೆಗಳನ್ನು ನಿರ್ವಹಿಸಲು ಅವಕಾಶವಿದೆ.

* ಬೋನಸ್ ಪಾವತಿ (ತಿದ್ದುಪಡಿ) ಕಾಯ್ದೆ- 2015 ಅನ್ವಯ, ಬೋನಸ್‍ಗೆ ಲೆಕ್ಕ ಹಾಕುವ ಮಾಸಿಕ ವೇತನವನ್ನು ಏಳು ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಪ್ರಮಾಣ ಈಗ 3500 ರೂಪಾಯಿಗಳಾಗಿವೆ. ಇದು ಬೋಸನ್‍ಗೆ ಅರ್ಹವಾಗುವ ಗರಿಷ್ಠ ವೇತನವನ್ನು ಕೂಡಾ 10 ಸಾವಿರ ರೂಪಾಯಿಗಳಿಂದ 21 ಸಾವಿರ ರೂಪಾಯಿಗಳಿಗೆ ಹೆಚ್ಚಿಸಲು ಅವಕಾಶ ನೀಡಿದೆ.

* ಮಧ್ಯಸ್ಥಿಕೆ ಮತ್ತು ಸಂಧಾನ (ತಿದ್ದುಪಡಿ) ಕಾಯ್ದೆ ಅನ್ವಯ ಮಧ್ಯಸ್ಥಿಕೆದಾರ ಪ್ರಕರಣಗಳನ್ನು 18 ತಿಂಗಳ ಒಳಗಾಗಿ ವಿಲೇವಾರಿ ಮಾಡಬೇಕಾಗುತ್ತದೆ. ಹನ್ನೆರಡು ತಿಂಗಳು ಕಳೆದ ಬಳಿಕ ಮಧ್ಯಸ್ಥಿಕೆ ಸಂಧಾನ ಮತ್ತಷ್ಟು ವಿಳಂಬವಾಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಕೆಲವೊಂದು ನಿರ್ಬಂಧಗಳನ್ನು ವಿಧಿಸಲಾಗುತ್ತದೆ.

* ವಾಣಿಜ್ಯ ನ್ಯಾಯಾಲಯ, ವಾಣಿಜ್ಯ ವಿಭಾಗ ಹಾಗೂ ಹೈಕೋರ್ಟ್‍ನ ವಾಣಿಜ್ಯ ಮೇಲ್ಮನವಿ ವಿಭಾಗ ಕಾಯ್ದೆ ಅನ್ವಯ, ಆಯ್ದ ಹೈಕೋರ್ಟ್‍ಗಳಲ್ಲಿ ವಾಣಿಜ್ಯ ಪೀಠಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

— ಈ ಮೇಲಿನ ಎಲ್ಲ ಮಸೂದೆಗಳು ಇತ್ತೀಚೆಗೆ ನಡೆದ ಸಂಸತ್ ಅಧಿವೇಶನದಲ್ಲಿ ಆಂಗೀಕಾರಗೊಂಡಿದ್ದವು.
(Link to Join Telegram ...https://telegram.me/spardhaloka)

No comments:

Post a Comment