"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 2 May 2016

☀ ಜನೆವರಿ -2016ರ (ಭಾಗ -30) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (General knowledge on Current Affairs (Part-30)) ☆.(ಜನೆವರಿ -2016ರ ಪ್ರಚಲಿತ ಘಟನೆಗಳ ಕ್ವಿಜ್)

☀ ಜನೆವರಿ -2016ರ (ಭಾಗ -30) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ
(General knowledge on Current Affairs (Part-30))
☆.(ಜನೆವರಿ -2016ರ ಪ್ರಚಲಿತ ಘಟನೆಗಳ ಕ್ವಿಜ್)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)

 
- ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯವಾದ ಮುಖ್ಯವಾಗಿ ಇತ್ತೀಚಿನ ಪ್ರಸಕ್ತ ಜನೆವರಿ -2016ರ ವಿದ್ಯಮಾನಗಳ ಬಗ್ಗೆ ವಿಶೇಷವಾಗಿ ಅದು ರಾಷ್ಟ್ರೀಯ, ಅಂತರರಾಷ್ಟ್ರೀಯ ಸಾಹಿತ್ಯ, ಕಲೆ, ಸಂಸ್ಕೃತಿ, ಕ್ರೀಡೆ, ವಿಜ್ಞಾನ, ರಾಜಕೀಯ ಮತ್ತು ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳ ವಿದ್ಯಮಾನಗಳನ್ನು ಅಯಾ ದಿನದ ದಿನಪತ್ರಿಕೆಗಳನ್ನು ಕಲೆಹಾಕಿ ಸಂಕ್ಷೇಪಿಸಿ 'ಸ್ಪರ್ಧಾಲೋಕ'ದಲ್ಲಿ ಅಪಡೆಟ್ ಮಾಡಲು ಒಂದು ಚಿಕ್ಕ ಪ್ರಯತ್ನ.



2101) ಇತ್ತೀಚೆಗೆ ಟ್ರಿಪ್ ಅಡ್ವೈಸರ್ ಟ್ರಾವೆಲರ್ಸ್ ವರ್ಲ್ಡ್ ವೈಡ್ ಸಂಸ್ಥೆಯು ಆಯೋಜಿಸಿದ್ದ ಟ್ರಾವೆಲರ್ಸ್ ಚಾಯ್ಸ್ ಸ್ಪರ್ಧೆಯಲ್ಲಿ ವಿಶ್ವದ ಅತ್ಯುತ್ತಮ ಹೋಟೆಲ್ ಆಗಿ ಆಯ್ಕೆಯಾಗಿದ ಭಾರತದ ಹೋಟೆಲ್?
••► ರಾಜಸ್ಥಾನದ ಜೋಧಪುರದಲ್ಲಿರುವ "ಉಮಾಯಿದ್ ಭವನ್ ಪ್ಯಾಲೇಸ್."


2102) ಉಮಾಯಿದ್ ಭವನ್ ಪ್ಯಾಲೇಸ್ ಕುರಿತ ಹೆಚ್ಚಿನ ಮಾಹಿತಿ  :
✧.ಈಗ ಹೋಟೆಲ್‍ನ ಮಾಲೀಕರಾಗಿರುವ ಗಜ ಸಿಂಗ್ ಅವರ ಅಜ್ಜ ಮಹಾರಾಜ ಉಮಾಯಿದ್ ಸಿಂಗ್ ಅವರ ಹೆಸರನ್ನು ಈ ಹೋಟೆಲ್‍ಗೆ ಇಡಲಾಗಿದ್ದು, ಉಮಾಯಿದ್ ಭವನ್ ಪ್ಯಾಲೇಸ್ 347 ಕೊಠಡಿಗಳನ್ನು ಹೊಂದಿದೆ. ಈ ಪ್ಯಾಲೆಸ್ ಮೊದಲು ಜೋಧಪುರ ರಾಜಮನೆತನದ ಅಧಿಕೃತ ಹಾಗೂ ಪ್ರಧಾನ ನಿವಾಸವಾಗಿ ಬಳಕೆಯಾಗುತ್ತಿತ್ತು. ಉಮಾಯಿದ್ ಭವನ್ ಪ್ಯಾಲೇಸ್ ಅನ್ನು ಚಿತ್ತರ್ ಪ್ಯಾಲೇಸ್ ಎಂದು ಅದರ ನಿರ್ಮಾಣ ಅವಧಿಯಲ್ಲಿ ಕರೆಯಲಾಗುತ್ತಿತ್ತು.
✧. ಈ ಪ್ಯಾಲೆಸ್ ನಿರ್ಮಾಣದ ಯೋಜನೆ ಸಿದ್ಧಪಡಿಸಲು ಹೆನ್ರಿ ವೊಘಾನ್ ಲಾಂಚೆಸ್ಟರ್ ಅವರನ್ನು ಮುಖ್ಯ ಶಿಲ್ಪಿಯಾಗಿ ನಿಯೋಜಿಸಲಾಗಿತ್ತು. ಈ ಪ್ಯಾಲೆಸ್ ನಿರ್ಮಾಣಕ್ಕೆ ಶಿಲಾನ್ಯಾಸವನ್ನು 1929ರ ನವೆಂಬರ್ 18ರಂದು ಮಹಾರಾಜ ಉಮಯಿದ್ ಸಿಂಗ್ ನೆರವೇರಿಸಿದರು.
✧. ಇದರ ನಿರ್ಮಾಣ ಕಾರ್ಯ 1943ರಲ್ಲಿ ಪೂರ್ಣಗೊಂಡಿತು.
✧. ಈ ಕಟ್ಟಡದ ಅಂದಾಜು ವೆಚ್ಚ 11 ದಶಲಕ್ಷ ರೂಪಾಯಿ. ಇದು 1943ರಲ್ಲಿ ಉದ್ಘಾಟನೆಯಾದಗ, ಇದು ವಿಶ್ವದ ಅರಮನೆಗಳಲ್ಲಿ ಅತ್ಯಂತ ದೊಡ್ಡ ಅರಮನೆಗಳ ಪೈಕಿ ಒಂದು ಎಂಬ ಖ್ಯಾತಿ ಗಳಿಸಿತ್ತು.


2103) ಇತ್ತೀಚೆಗೆ ಮೋಲ್ದೊವೊನ್ ದೇಶದ ನೂತನ ಪ್ರಧಾನಿಯಾಗಿ ಆಯ್ಕೆಯಾದವರು ಯಾರು?
••► ಪಾವೆಲ್ ಫಿಲಿಪ್


2104) ಇತ್ತೀಚೆಗೆ ಯಾವ್ಯಾವ ದೇಶಗಳ ನಡುವೆ 'ನಸೀಂ ಅಲ್ ಬಹ್ರ್' ಎಂಬ ಹೆಸರಿನ ಜಂಟಿ ದ್ವಿಪಕ್ಷೀಯ ಸಾಗರ ಕಾರ್ಯಾಚರಣೆ ನಡೆಸಲಾಯಿತು?
••► ಭಾರತ- ಓಮನ್‍
✧.(ಭಾರತದ ನೌಕಾಪಡೆ ಮತ್ತು ಓಮನ್‍ನ ರಾಯಲ್ ನೇವಿ)


2105) ಇತ್ತೀಚೆಗೆ ಭಾರತದ ಜತೆಗೆ ಅಧಿಕೃತ ರಕ್ಷಣಾ ಒಪ್ಪಂದವನ್ನು ಮಾಡಿಕೊಂಡ ಮೊಟ್ಟಮೊದಲ ಗಲ್ಫ್ ದೇಶ ಯಾವುದು?
••► ಓಮನ್


2106) “ಬಿಬಿಐಎನ್ (BBIN) ರೈಲು ಒಪ್ಪಂದ”ವು ಒಂದು ಅಂತರರಾಷ್ಟ್ರೀಯ ಸಾರಿಗೆ ಸೌಲಭ್ಯ ವಿಸ್ತರಣಾ ಒಪ್ಪಂದವಾಗಿದ್ದು, ಈ ದೇಶಗಳ ಮಧ್ಯೆ ಏರ್ಪಟ್ಟ ಒಪ್ಪಂದವಾಗಿದೆ..
••► ಬಾಂಗ್ಲಾದೇಶ, ಭೂತಾನ್, ಭಾರತ ಹಾಗೂ ನೇಪಾಳ (ಬಿಬಿಐಎನ್)


2107) ಇತ್ತೀಚೆಗೆ ದೇಶದಲ್ಲೇ ಹೈಸ್ಪೀಡ್ ವೈ-ಫೈ ಇಂಟರ್‍ನೆಟ್ ಸೌಲಭ್ಯ ಹೊಂದಿರುವ ದೇಶದ ಮೊಟ್ಟಮೊದಲ ರೈಲು ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾದ ರೈಲು ನಿಲ್ದಾಣ ಯಾವುದು?
••► ಮುಂಬೈ ಕೇಂದ್ರ ರೈಲು ನಿಲ್ದಾಣ


2108) ವಿಶ್ವಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ವಿಶ್ವ ಆರ್ಥಿಕ ಸ್ಥಿತಿಗತಿ ಮತ್ತು ಸಾಧ್ಯತಾ ವರದಿ-2016ರ ಅನ್ವಯ ಭಾರತ 2016ರಲ್ಲಿ ವಿಶ್ವದಲ್ಲೇ ಅತ್ಯಂತ ಕ್ಷಿಪ್ರ ಬೆಳವಣಿಗೆಯ ಆರ್ಥಿಕತೆಯಾಗಿ ರೂಪುಗೊಳ್ಳಲಿದೆ!


2109) UNFCCC (ಯುಎನ್‍ಎಫ್‍ಸಿಸಿಸಿ) ಎಂದರೆ —
••► ಯುನೈಟೆಡ್ ನೇಷನ್ಸ್ ಫ್ರೇಮ್‍ವರ್ಕ್ ಕನ್ವೆನ್ಷನ್ ಆನ್ ಕ್ಲೈಮೇಟ್ ಚೇಂಜ್


2110) ಸೌರಮಂಡಲದಲ್ಲಿ ಈಗ ಒಂಬತ್ತನೇ ಗ್ರಹವಿದ್ದು, ಇದು ಭೂಮಿಗಿಂತ 10 ಪಟ್ಟು ದೊಡ್ಡದಾಗಿದೆ ಎಂದು ಲೆಕ್ಕಾಚಾರದ ಮೂಲಕ ಇತ್ತೀಚೆಗೆ ವಿಜ್ಞಾನಿಗಳು ಹೇಳಿದ್ದಾರೆ. ಹಾಗಾದರೆ ಆ ಗ್ರಹದ ಹೆಸರೇನು?
••► ಪ್ಲಾನೆಟ್ ನೈನ್

2111) ಪ್ಲಾನೆಟ್ ನೈನ್ ಕುರಿತ ಹೆಚ್ಚಿನ ಮಾಹಿತಿ  :
✧. ಸೂರ್ಯನ ಸುತ್ತ ಸುತ್ತಲು ಇದು 20 ಸಾವಿರ ವರ್ಷಗಳನ್ನು ತೆಗೆದುಕೊಳ್ಳುತ್ತದೆ.
✧. ನೆಪ್ಚೂನ್‍ಗೆ ಹೋಲಿಸಿದರೆ ಸೂರ್ಯನಿಂದ 20 ಪಟ್ಟು ದೂರದಲ್ಲಿ ಈ ಗ್ರಹ ಸುತ್ತುತ್ತದೆ.
✧. ಆದರೆ ಇದು ಭೌತಿಕವಾಗಿ ಕಂಡುಬಂದಿಲ್ಲ. ಬದಲಿಗೆ ಗಣಿತಾತ್ಮಕ ಮಾದರಿ ಮತ್ತು ಇತರ ತಾಂತ್ರಿಕತೆಯ ಮೂಲಕ ಕಂಡುಕೊಳ್ಳಲಾಗಿದೆ.
✧. ಇದು ತನ್ನ ಸಮೀಪ ಬರುವ ಸಣ್ಣ ಗ್ರಹಗಳನ್ನು ಆಕರ್ಷಿಸುತ್ತದೆ.


2112) ಇತ್ತೀಚೆಗೆ ಅಮೆರಿಕ ಮೂಲದ ಎನ್‍ಟಿಐ (ನ್ಯೂಕ್ಲಿಯರ್ ಥ್ರೆಟ್ ಇನಿಷಿಯೇಟಿವ್) ಬಿಡುಗಡೆ ಮಾಡಿರುವ 2016ನೇ ಸಾಲಿನ ಅಣು ಭದ್ರತಾ ಸೂಚ್ಯಂಕದ ಪ್ರಕಾರ 24 ಅಣುಶಕ್ತಿ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಸ್ಥಾನ?
••►  21ನೇ ಸ್ಥಾನ (ಅಪಾಯಕಾರಿ ಸ್ಥಾನದಲ್ಲಿದೆ.)


2113) 2016ನೇ ಸಾಲಿನ ಅಣು ಭದ್ರತಾ ಸೂಚ್ಯಂಕ ಕುರಿತ ಹೆಚ್ಚಿನ ಮಾಹಿತಿ  :
✧. 2016ನೇ ಸಾಲಿನ ಅಣು ಭದ್ರತಾ ಸೂಚ್ಯಂಕದಲ್ಲಿ ವಿಶ್ವದ ವಿವಿಧ ರಾಷ್ಟ್ರಗಳಲ್ಲಿರುವ ಅಣುಶಕ್ತಿ ಕುರಿತ ರಕ್ಷಣಾ & ಭದ್ರತೆ ಕ್ರಮಗಳ ಮೇಲೆ ಬೆಳಕು ಚೆಲ್ಲಲಾಗಿದ್ದು, ಆಸ್ಟ್ರೇಲಿಯಾ ಮುಂಚೂಣಿಯಲ್ಲಿದೆ.
✧. ಸ್ವಿಜರ್ಲೆಂಡ್ 2ನೇ ಸ್ಥಾನ ಕೆನಡಾ 3, ಪೋಲಾಂಡ್ 4ನೇ ಸ್ಥಾನಗಳಲ್ಲಿವೆ. ಪಾಕಿಸ್ತಾನ 22, ಇರಾನ್ 23, ಉತ್ತರ ಕೊರಿಯಾ 24ನೇ ಸ್ಥಾನಗಳಲ್ಲಿದ್ದು, ಅತಿ ಅಪಾಯಕಾರಿ ಎನಿಸಿವೆ.
✧. ಸುಧಾರಿತ ಅಣು ಶಸ್ತ್ರಾಸ್ತ್ರ ಹೊಂದಿರುವ ದೇಶಗಳಲ್ಲಿ ಅಮೆರಿಕ, ಭಾರತ, ರಷ್ಯಾ, ಇಂಗ್ಲೆಂಡ್‍ಗಳಿವೆ.


2114) ಸೈಯದ್ ಮುಸ್ತಕ್ ಅಲಿ ಟ್ರೋಫಿಯು ಯಾವ ಕ್ರೀಡೆಗೆ ಸಂಬಂಧಿಸಿದೆ?
••► ಕ್ರಿಕೆಟ್


2115) ಇತ್ತೀಚೆಗೆ (2016ರ ಜನವರಿ 20ರಂದು) ನಡೆದ ಮೊಟ್ಟಮೊದಲ ಬಾರಿಗೆ ಸೈಯದ್ ಮುಸ್ತಕ್ ಅಲಿ ಟಿ-20 ಟ್ರೋಫಿ ಗೆದ್ದುಕೊಂಡ ತಂಡ ಯಾವುದು?
••► ಉತ್ತರ ಪ್ರದೇಶ ತಂಡ.


2116) ಸೈಯದ್ ಮುಸ್ತಕ್ ಅಲಿ ಟಿ-20 ಟ್ರೋಫಿ ಕುರಿತ ಹೆಚ್ಚಿನ ಮಾಹಿತಿ  :
✧. ಸೈಯದ್ ಮುಸ್ತಕ್ ಅಲಿ ಟಿ-20 ಟ್ರೋಫಿ ದೇಶೀಯ ಚಾಂಪಿಯನ್‍ಶಿಪ್ ಆಗಿದ್ದು, ಖ್ಯಾತ ಭಾರತೀಯ ಆಟಗಾರ ಸೈಯದ್ ಮುಸ್ತಕ್ ಅಲಿ ಗೌರವಾರ್ಥ ಟೂರ್ನಿಗೆ ಈ ಹೆಸರು ಇಡಲಾಗಿದೆ. ✧. ಇದನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯೋಜಿಸುತ್ತದೆ.
✧. ರಣಜಿ ಪಂದ್ಯ ಆಡುವ ಎಲ್ಲ ತಂಡಗಳೂ ಇದಕ್ಕೆ ಅರ್ಹತೆ ಹೊಂದಿವೆ.


2117) ವಾಂಖೆಡೆ ಕ್ರೀಡಾಂಗಣ ಇರುವುದು?
••► ಮುಂಬೈನಲ್ಲಿ.


2118) ಪ್ರಸ್ತುತ ಕೇರಳ ಮುಖ್ಯಮಂತ್ರಿ?
••► ಓಮನ್ ಚಾಂಡಿ,


2119) ಪ್ರಸ್ತುತ ಅಪ್ಘಾನಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ?
••► ಮೊಹ್ಮದ್ ಹನೀಫ್ ಅತ್ಮರ್


2120) ಇತ್ತೀಚೆಗೆ ಸೆಬಿ (ಸೆಕ್ಯುರಿಟೀಸ್ ಅಂಡ್ ಎಕ್ಸ್‍ಚೇಂಜ್ ಬೋರ್ಡ್ ಆಫ್ ಇಂಡಿಯಾ) ನೇಮಿಸಿದ್ದ ಪರ್ಯಾಯ ಹೂಡಿಕೆ ನೀತಿ ಸಲಹಾ ಸಮಿತಿಯ ಅಧ್ಯಕ್ಷರನ್ನಾಗಿ ಯಾರನ್ನು ನೇಮಕ ಮಾಡಲಾಗಿತ್ತು?
••► ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ


2121) ಇತ್ತೀಚೆಗೆ ನಿಧನರಾದ ಮೃಣಾಲಿನಿ ಸಾರಾಭಾಯಿ (97) ರವರು ದೇಶಾದ್ಯಂತ ಪ್ರಸಿದ್ಧರಾಗಿದ್ದು?
••► ಭರತನಾಟ್ಯ ಹಾಗೂ ಶಾಸ್ತ್ರೀಯ ನಾಟ್ಯ ಕಲಾವಿದೆ


2122) ಮೃಣಾಲಿನಿ ಸಾರಾಭಾಯಿಯವರ ಕುರಿತ ಹೆಚ್ಚಿನ ಮಾಹಿತಿ  :
✧.ಮೃಣಾಲಿನಿ ಕೇರಳದಲ್ಲಿ ಜನಿಸಿದ್ದರೂ. ಬೆಳೆದಿದು ಸ್ವಿಡ್ಜರ್‍ಲ್ಯಾಂಡ್‍ನಲ್ಲಿ. ಶಾಂತಿನಿಕೇತನ ವಿಶ್ವವಿದ್ಯಾಲಯದಲ್ಲಿ ರವೀಂದ್ರನಾಥ ಟ್ಯಾಗೋರ್‍ರಿಂದ ಶಿಕ್ಷಣ ಪಡೆದಿದ್ದರು.
✧. ಇವರು ಭಾರತದ ಬಾಹ್ಯಾಕಾಶ ಯೋಜನೆಗಳ ಜನಕ ವಿಕ್ರಂ ಸಾರಾಭಾಯಿ ಅವರ ಪತ್ನಿ.
✧. ಸುಪ್ರಸಿದ್ದ ನೃತ್ಯಪಟು ಮಲ್ಲಿಕಾ ಸಾರಾಬಾಯಿಯವರು ಇವರ ಪುತ್ರಿ.
✧. ಮೃಣಾಲಿನಿಯ ಸೋದರಿ ಲಕ್ಷ್ಮಿ ಸೆಹಗಲ್, ಸುಭಾಷ್ ಚಂದ್ರ ಬೋಸ್‍ರ ಸೇನೆಯಲ್ಲಿ ಮಹಿಳಾಪಡೆಯ ಮುಖ್ಯಸ್ಥೆಯಾಗಿದ್ದರು.


2123) ಇತ್ತೀಚೆಗೆ ಕರ್ನಾಟಕದ ಯುವ ಸಂಶೋಧಕ ನಿವೇದನ್ ನೆಂಪೆ ಅವರಿಗೆ ಯಾವ ಪದಾರ್ಥವನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ 'ಮೇಕ್ ಇನ್ ಇಂಡಿಯಾ ಎಕ್ಸಲೆನ್ಸ್ ಮತ್ತು ಇನೋವೇಟಿವ್ ಪ್ರಾಡಕ್ಟ್ ಆಫ್ ದಿ ಇಯರ್ 2015: ಪ್ರಶಸ್ತಿಗಳು ಲಭಿಸಿವೆ?
••► ‘ಅಡಿಕೆ ಚಹಾ’


2124) ಇತ್ತೀಚೆಗೆ (22-01-2016) ವಿಶ್ವ ಆರ್ಥಿಕ ವೇದಿಕೆಯ ಸಭೆ ಎಲ್ಲಿ ಆಯೋಜಿಸಲಾಯಿತು?
••► ಸ್ವಿಡ್ಜರ್‍ಲೆಂಡ್‍ನ ದಾವೋಸ್‍ನಲ್ಲಿರುವ ಸ್ವಿಸ್ ರೆಸಾರ್ಟ್‍ನಲ್ಲಿ


2125) ವಿಶ್ವ ಆರ್ಥಿಕ ವೇದಿಕೆಯ ಕುರಿತ ಹೆಚ್ಚಿನ ಮಾಹಿತಿ  :
✧.ವಿಶ್ವ ಆರ್ಥಿಕ ವೇದಿಕೆಯು ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ಕ್ಲ್ವಾಸ್ ಷಾಬ್ ನೆರವಿನಲ್ಲಿ ಆರಂಭಗೊಂಡಿದೆ.
✧. ವಿಶ್ವದ ಆರ್ಥಿಕತೆಯನ್ನು ಖಾಸಗಿ-ಸರ್ಕಾರಿ ಸಹಭಾಗಿತ್ವ ಹಾಗೂ ಸಹಕಾರದಲ್ಲಿ ಬೆಳೆಸುವುದು ಇದರ ಮುಖ್ಯ ಗುರಿ.
✧. ಇದು 1971ರಲ್ಲಿ ಆರಂಭವಾಗಿದೆ.
✧. ಸ್ವಿಡ್ಜರ್‍ಲೆಂಡ್‍ನ ಜಿನೀವಾದಲ್ಲಿ ಇದರ ಕೇಂದ್ರ ಕಚೇರಿ ಇದೆ.


2126) ಇತ್ತೀಚೆಗೆ ತಂತ್ರಜ್ಞಾನ ಸಾದನೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಭಾರತೀಯ ಮೂಲದ ತಂತ್ರಜ್ಞ?
••► ರಾಹುಲ್ ಟಕ್ಕರ್


2127) ಇತ್ತೀಚೆಗೆ ‘ಇನ್‍ಕ್ರೆಡಿಬಲ್ ಇಂಡಿಯಾ’ ಅಭಿಯಾನದ ಹೊಸ ಬ್ರಾಂಡ್ ರಾಯಭಾರಿಗಳಾಗಿ ಆಯ್ಕೆಯಾದ ಇಬ್ಬರು ವ್ಯಕ್ತಿಗಳು?
••► ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ.


2128) ಇತ್ತೀಚೆಗೆ ಏಕದಿನ ಕ್ರಿಕೆಟ್‍ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್ ಗಳಲ್ಲಿ 25 ಶತಕ ಸಿಡಿಸಿದ ವಿಶ್ವದಾಖಲೆಯ ಹೆಗ್ಗಳಿಕೆಗೆ ಪಾತ್ರರಾದ ಭಾರತೀಯ ಕ್ರೀಡಾಪಟು?
••► ವಿರಾಟ್ ಕೊಹ್ಲಿ


2129) ವಿರಾಟ್ ಕೊಹ್ಲಿಯ ಕುರಿತ ಹೆಚ್ಚಿನ ಮಾಹಿತಿ  :
✧. ಆಸ್ಟ್ರೇಲಿಯಾ ವಿರುದ್ದದ ಕ್ಯಾನ್‍ಬೆರಾ ಏಕದಿನ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು. ✧. 162ನೇ ಇನ್ನಿಂಗ್ಸ್‍ನಲ್ಲಿ 25ನೇ ಶತಕ ಸಿಡಿಸುವ ಮೂಲಕ ಅವರು 234 ಇನ್ನಿಂಗ್ಸ್‍ನಲ್ಲಿ ಈ ಸಾಧನೆ ಮಾಡಿದ್ದ ಸಚಿನ್ ತೆಂಡೊಲ್ಕರ್‍ರ 1998ರ ದಾಖಲೆ ಅಳಿಸಿದ್ದಾರೆ. ✧. ರಿಕಿ ಪಾಂಟಿಂಗ್ (279 ಇನ್ನಿಂಗ್ಸ್) ಸನತ್ ಜಯಸೂರ್ಯ (373), ಕುಮಾರ ಸಂಗಕ್ಕರ (378) ಈ ಸಾಧನೆ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿದ್ದಾರೆ.
✧. ಇದಲ್ಲದೆ ಏಕದಿನ ಕ್ರಿಕೆಟ್‍ನಲ್ಲಿ 25 ಶತಕ ಸಿಡಿಸಿದ 5ನೇ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


2130) ಇತ್ತೀಚೆಗೆ ಚೀನಾದಲ್ಲಿನ ಭಾರತದ ರಾಯಭಾರಿಯಾಗಿ ನೇಮಕಗೊಂಡವರು?
••► ವಿಜಯ್ ಕೇಶವ್ ಗೋಖಲೆ

...ಮುಂದುವರಿಯುತ್ತದೆ. 

No comments:

Post a Comment