"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday, 2 May 2016

■. ಇಂದಿನ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ಪಾರದರ್ಶಕ ಹಾಗೂ ಧಕ್ಷ ಆಡಳಿತ ನೀಡುವ ದೃಷ್ಠಿಯಿಂದ ರಾಜ್ಯ ಸರ್ಕಾರವು ಇತ್ತೀಚೆಗೆ ಜಾರಿಯಲ್ಲಿ ತಂದ “ಭ್ರಷ್ಠಾಚಾರ ನಿಗ್ರಹ ದಳ” ದ ಕುರಿತು ಬರೆಯಿರಿ. (ACB-Anti Corruption Bureau)

■. ಇಂದಿನ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :
 ಪಾರದರ್ಶಕ ಹಾಗೂ ಧಕ್ಷ ಆಡಳಿತ ನೀಡುವ ದೃಷ್ಠಿಯಿಂದ ರಾಜ್ಯ ಸರ್ಕಾರವು ಇತ್ತೀಚೆಗೆ ಜಾರಿಯಲ್ಲಿ ತಂದ “ಭ್ರಷ್ಠಾಚಾರ ನಿಗ್ರಹ ದಳ” ದ ಕುರಿತು ಬರೆಯಿರಿ.
(ACB-Anti Corruption Bureau)
━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷೆ : ಮೇನ್ಸ್ ತಯಾರಿ.
(IAS/KAS Exams - Mains Preparation)

★ ಸಾಮಾನ್ಯ ಅಧ್ಯಯನ
(General Studies)

-ನನ್ನ ಜ್ಞಾನ ಪರಿಮಿತಿಯಲ್ಲಿ ಸಾಧ್ಯವಾದಷ್ಟು ಮೇಲಿನ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿದ್ದು, ಏನಾದರೂ ಪ್ರಮಾದಗಳು ಕಂಡುಬಂದಲ್ಲಿ  ದಯವಿಟ್ಟು ತಾವು ಸಹಕರಿಸಬೇಕಾಗಿ ವಿನಂತಿ.

“ಭ್ರಷ್ಠಾಚಾರ ನಿಗ್ರಹ ದಳ” :
(ACB-Anti Corruption Bureau)
•► ರಚನೆ:

ಪಾರದರ್ಶಕ ಹಾಗೂ ಧಕ್ಷ ಆಡಳಿತ ನೀಡುವ ದೃಷ್ಠಿಯಿಂದ ರಾಜ್ಯ ಸರ್ಕಾರ “ಭ್ರಷ್ಠಾಚಾರ ನಿಗ್ರಹ ದಳ” (ACB- Anti Corruption Bureau) ರಚನೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.

ಈ ಹೊಸ ಭ್ರಷ್ಟಾಚಾರ ನಿಗ್ರಹ ದಳದ ಸೃಜನೆಯಿಂದಾಗಿ, ಸದರಿ ಸಂಸ್ಥೆಯು ಭ್ರಷ್ಟಾಚಾರ ತಡೆ ಅಧಿನಿಯಮದಡಿಯ ಅಪರಾಧ ಪ್ರಕರಣಗಳನ್ನು ತನಿಖೆ ನಡೆಸುವ ಶಾಸನಬದ್ಧ ಅಧಿಕಾರವನ್ನು ಹೊಂದಿರುತ್ತದೆ. ಜಾಗೃತ ಅಧಿಕಾರಿಗಳು ಆಯಾ ಇಲಾಖೆಗಳ ಅಧಿಕಾರಿ/ನೌಕರರ ವಿರುದ್ಧ ದೂರು/ ಕುಂದು ಕೊರತೆಗಳನ್ನು ಸ್ವೀಕರಿಸಲು ಹಾಗೂ ಅವುಗಳನ್ನು ಪರಿಶೀಲಿಸಿ ತ್ವರಿತ ಪರಿಹಾರ ದೊರೆಯುವಂತೆ ಮಾಡಲು ಅಧಿಕಾರ ಹೊಂದಿರುತ್ತಾರೆ.

•►  ಕಾರ್ಯ ನಿರ್ವಹನೆ:

ಈ ಭ್ರಷ್ಟಾಚಾರ ನಿಗ್ರಹ ದಳವು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಒಟ್ಟಾರೆ ಮೇಲ್ವಿಚಾರಣೆಯಡಿ ಕಾರ್ಯನಿರ್ವಹಣೆ ಮಾಡಲಿದೆ. ಈ ದಳಕ್ಕೆ ಬೆಂಬಲ ನೀಡಲು ಇಲಾಖೆಯಲ್ಲಿ ಸರ್ಕಾರದ ಕಾರ್ಯದರ್ಶಿ ದರ್ಜೆಯ ಒಂದು ಹುದ್ದೆ ಸೃಷ್ಟಿಸಿ ಅವರ ನೇತೃತ್ವದ ಜಾಗೃತ ವಿಭಾಗವನ್ನು ರಚಿಸಲಾಗುತ್ತದೆ. ಜಾಗೃತ ವಿಭಾಗದ ಕಾರ್ಯದರ್ಶಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮೂಲಕ ಮುಖ್ಯಮಂತ್ರಿಗಳಿಗೆ ವರದಿ ಮಾಡುತ್ತಾರೆ.

•► ಸಿಬ್ಬಂದಿ ನೇಮಕ:

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಮೇಲ್ವಿಚಾರಣೆ ಅಡಿ ಈ ಭ್ರಷ್ಟಾಚಾರ ನಿಗ್ರಹ ದಳ ಕಾರ್ಯನಿರ್ವಹಿಸಲಿದ್ದು, ಒಬ್ಬ ಎಡಿಜಿಪಿ ಮತ್ತು ಪೊಲೀಸ್‌ ಮಹಾನಿರೀಕ್ಷಕ (ಐಜಿಪಿ), 10 ಜನ ಪೊಲೀಸ್‌ ಅಧೀಕ್ಷಕರು, 35 ಪೊಲೀಸ್‌ ಉಪಾಧೀಕ್ಷಕರು, 75 ಪೊಲೀಸ್‌ ನಿರೀಕ್ಷಕರು, 200 ಹೆಡ್‌ ಕಾನ್‌ಸ್ಟೇಬಲ್‌ಗಳನ್ನು ಒಳಗೊಂಡಿರಲಿದೆ.

ಜಾಗೃತ ಸಲಹಾ ಮಂಡಳಿಯಲ್ಲಿ ಮುಖ್ಯ ಕಾರ್ಯದರ್ಶಿ (ಅಧ್ಯಕ್ಷರು), ಅಪರ ಮುಖ್ಯ ಕಾರ್ಯದರ್ಶಿ (ಒಳಾಡಳಿತ ಇಲಾಖೆ), ಆರ್ಥಿಕ ಇಲಾಖೆ ಮತ್ತು ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಡಿಜಿ ಮತ್ತು ಐಜಿಪಿ, ಆಡಳಿತ ಮತ್ತು ಸಾರ್ವಜನಿಕ ವಿಷಯಗಳಲ್ಲಿ ಪರಿಣತಿ ಹೊಂದಿರುವ ಇಬ್ಬರು ಖ್ಯಾತನಾಮರು ಸದಸ್ಯರಾಗಿರುತ್ತಾರೆ.

No comments:

Post a Comment