"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 2 May 2016

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ☀ " ಜನರ ಬದುಕು ಹಸನಾಗಿಸಲು ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಮರ್ಪಕ ಮಾಹಿತಿ ಇಲ್ಲದೆ ಆ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪುತ್ತಲೇ ಇಲ್ಲ."— ಈ ನಿಟ್ಟಿನಲ್ಲಿ ಕೊರತೆ ನೀಗಿಸಿ ಯೋಜನೆಗಳ ಪ್ರಯೋಜನ ಎಲ್ಲರಿಗೂ ತಲುಪಿಸುವ, ಅರಿವು ಮೂಡಿಸುವ ಹಾಗೂ ಕಾನೂನು ನೆರವು ಒದಗಿಸುವ ಸಲುವಾಗಿ ಸ್ಥಾಪಿತವಾಗಿರುವ 'ರಾಜ್ಯ ಕಾನೂನು ಸೇವಾ ಪ್ರಾಧಿಕಾರ'ದ ಕಾರ್ಯವ್ಯಾಪ್ತಿಯ ಕುರಿತು ಚರ್ಚಿಸಿ. (200 words)

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :

☀ " ಜನರ ಬದುಕು ಹಸನಾಗಿಸಲು ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಮರ್ಪಕ ಮಾಹಿತಿ ಇಲ್ಲದೆ ಆ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪುತ್ತಲೇ ಇಲ್ಲ."— ಈ ನಿಟ್ಟಿನಲ್ಲಿ ಕೊರತೆ ನೀಗಿಸಿ ಯೋಜನೆಗಳ ಪ್ರಯೋಜನ ಎಲ್ಲರಿಗೂ ತಲುಪಿಸುವ, ಅರಿವು ಮೂಡಿಸುವ ಹಾಗೂ ಕಾನೂನು ನೆರವು ಒದಗಿಸುವ ಸಲುವಾಗಿ ಸ್ಥಾಪಿತವಾಗಿರುವ 'ರಾಜ್ಯ ಕಾನೂನು ಸೇವಾ ಪ್ರಾಧಿಕಾರ'ದ ಕಾರ್ಯವ್ಯಾಪ್ತಿಯ ಕುರಿತು ಚರ್ಚಿಸಿ.
(200 words)
━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷೆ : ಮೇನ್ಸ್ ತಯಾರಿ.
(IAS/KAS Exams - Mains Preparation)

★ ಸಾಮಾನ್ಯ ಅಧ್ಯಯನ
(General Studies)

-ನನ್ನ ಜ್ಞಾನ ಪರಿಮಿತಿಯಲ್ಲಿ ಸಾಧ್ಯವಾದಷ್ಟು ಮೇಲಿನ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿದ್ದು, ಏನಾದರೂ ಪ್ರಮಾದಗಳು ಕಂಡುಬಂದಲ್ಲಿ  ದಯವಿಟ್ಟು ತಾವು ಸಹಕರಿಸಬೇಕಾಗಿ ವಿನಂತಿ.


— ಸಾರ್ವಜನಿಕರಿಗಾಗಿ ದೇಶದಲ್ಲಿರುವ ಕಾನೂನುಗಳು, ಅದರ ಉಪಯೋಗ ಹಾಗೂ ಅವುಗಳ ಲಾಭ ಪಡೆಯುವ ಮಾರ್ಗಗಳ ಕುರಿತು ಅರಿವು ಮೂಡಿಸುವ ಹಾಗೂ ಕಾನೂನು ನೆರವು ಒದಗಿಸುವ ಸಲುವಾಗಿ ಸ್ಥಾಪಿತವಾಗಿರುವುದೇ ರಾಜ್ಯ ಕಾನೂನು ಸೇವಾ ಪ್ರಾಧಿಕಾರ.
ರಾಜ್ಯ ಹೈಕೋರ್ಟ್ ಅಧೀನದಲ್ಲಿ ಕಾರ್ಯನಿರ್ವಹಿಸುವ ಈ ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳು ಜನರಿಗಾಗಿ ಹತ್ತು ಹಲವು ಕಾನೂನು ನೆರವು ಯೋಜನೆಗಳನ್ನು ಹಮ್ಮಿಕೊಂಡಿವೆ.

''ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಕಾನೂನಿನ ಚೌಕಟ್ಟಿನಲ್ಲಿ ಜನ ನೆಮ್ಮದಿಯ ಜೀವನ ಸಾಗಿಸಲು ಅನುವಾಗುವಂತೆ ನಿಯಮಗಳನ್ನು ರೂಪಿಸಲಾಗಿದೆ. ಜನರಲ್ಲಿ ಈ ಬಗ್ಗೆ ತಿಳಿವಳಿಕೆ ಕೊರತೆ ನೀಗಿಸಲು 1987ರಲ್ಲಿ ಕಾನೂನು ಸೇವಾ ಪ್ರಾಧಿಕಾರ ಸ್ಥಾಪಿಸಿದೆ.

★ ಕಾರ್ಯವ್ಯಾಪ್ತಿ

●.ಜನರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವುದು, ಅಗತ್ಯವುಳ್ಳವರಿಗೆ ಕಾನೂನಿನ ಉಚಿತ ನೆರವು ಹಾಗೂ ಸಲಹೆ, ಜನತಾ ನ್ಯಾಯಾಲಯ (ಲೋಕ ಅದಾಲತ್) ಮೂಲಕ ಪ್ರಕರಣಗಳನ್ನು ಬಗೆಹರಿಸಿ ತ್ವರಿತ ನ್ಯಾಯ ಒದಗಿಸುವುದು.
●.ಉಚಿತ ಕಾನೂನು ಸೇವೆ, ಸಲಹೆ, ರಾಜಿ-ಸಂಧಾನ, ಮಧ್ಯಸ್ಥಿಕೆ ಕೇಂದ್ರಗಳ ಮೂಲಕ ಸಂಧಾನ, ಪರ್ಯಾಯ ವ್ಯಾಜ್ಯ ಪರಿಹಾರ ವ್ಯವಸ್ಥೆ, ವ್ಯಾಜ್ಯಪೂರ್ವ ಸಮಸ್ಯೆಗಳ ಪರಿಹಾರ, ಕಾನೂನು ಸಾಕ್ಷರತೆ, ಕಾಯಂ ಜನತಾ ಅದಾಲತ್ ಮೂಲಕ ಸಾರ್ವಜನಿಕ ಉಪಯುಕ್ತ ಸೇವೆಗಳ ವಿವಾದಗಳ ಇತ್ಯರ್ಥ ಪ್ರಾಧಿಕಾರದ ಮುಖ್ಯ ಉದ್ದೇಶ.

●.ಸಣ್ಣಪುಟ್ಟ ಕಾನೂನು ತೊಡಕಿನಲ್ಲಿ ಸಿಲುಕಿಕೊಂಡು ಪರದಾಡುವ ಜನಸಾಮಾನ್ಯರ ನೆರವಿಗಾಗಿ ಪ್ರಾಧಿಕಾರ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಉಚಿತ ಕಾನೂನು ಸಲಹಾ ಕೇಂದ್ರ ಆರಂಭಿಸಿದೆ.

●.ಭಾರತ ದಂಡ ಪ್ರಕ್ರಿಯಾ ಸಂಹಿತೆ ಕಲಂ 357ಎ ಅಡಿಯಲ್ಲಿ ಅಪರಾಧದಿಂದ ವೈಯಕ್ತಿಕ ಹಾಗೂ ಆಸ್ತಿ ನಷ್ಟ ಅನುಭವಿಸಿರುವ ಸಂತ್ರಸ್ತರು ಹಾಗೂ ಅವರ ಅವಲಂಬಿತರಿಗೆ ಪರಿಹಾರ ಹಾಗೂ ಮರುವಸತಿ ಕಲ್ಪಿಸುವ ಸಲುವಾಗಿ ‘ಸಂತ್ರಸ್ತರ ಪರಿಹಾರ ಯೋಜನೆ(ವಿಕ್ಟಿಂ ಕಾಂಪನ್ಸೇಶನ್ ಸ್ಕೀಮ್’ಯನ್ನು ಸರ್ಕಾರ 2012ರ ಫೆ.22ರಿಂದ ಜಾರಿಗೆ ತಂದಿದೆ. ಈ ಯೋಜನೆ ಪ್ರಕಾರ, ಅಪರಾಧದಿಂದ ನಷ್ಟ ಅನುಭವಿಸುತ್ತಿರುವ ಸಂತ್ರಸ್ತರು ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಕೊಟ್ಟು ಪರಿಹಾರ ಪಡೆಯಬಹುದು.

●.ರಾಜ್ಯ ಹಾಗೂ ಜಿಲ್ಲಾ ಪ್ರಾಧಿಕಾರಗಳಿಂದ ವಿಶೇಷ ಯೋಜನೆಯಡಿ ಅಸಂಘಟಿತ ವಲಯದ ಕಾರ್ವಿುಕರಿಗೆ ಅಂದರೆ ಕಟ್ಟಡ ನಿರ್ಮಾಣ ಕಾರ್ವಿುಕರು, ಬೀಡಿ ಕಾರ್ವಿುಕರು ಹಾಗೂ ಇತರ ಅಸಂಘಟಿತ ವಲಯದ ಕೂಲಿ ಕಾರ್ವಿುಕರಿಗೆ ಕಾನೂನು ಉಚಿತ ಸೇವೆ.
●.ಮಾನಸಿಕ ದೌರ್ಬಲ್ಯದಿಂದ ನರಳುತ್ತಿರುವರಿಗೆ ಸಹ ಉಚಿತ ಕಾನೂನು ಸೇವೆ.

●.ಬಾಲ ನ್ಯಾಯಮಂಡಳಿಯ ರಕ್ಷೆಯಲ್ಲಿರುವ ಮಕ್ಕಳಿಗೆ ಉಚಿತ ಕಾನೂನು ಸೇವೆ, ನುರಿತ ವಕೀಲರಿಂದ ಅವರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ, ಮಕ್ಕಳ ಸಂರಕ್ಷಣೆ ಸೇರಿ ಇತರ ವ್ಯವಸ್ಥೆಗಳು.
●.ವಿಚಾರಣಾಧೀನ ಕೈದಿಗಳಿಗೆ ಉಚಿತ ಕಾನೂನು ಸೇವೆ.
●.ಲೋಕ ಅದಾಲತ್ ಮೂಲಕ ರಾಜಿ ಸಂಧಾನ ಏರ್ಪಡಿಸಿ ಬಾಕಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿವುದು

ಒಟ್ಟಿನಲ್ಲಿ ಪ್ರತಿನಿತ್ಯದ ವ್ಯವಹಾರದಲ್ಲಿ ಜನಸಾಮಾನ್ಯರು ಪಾಲಿಸಬೇಕಾದ ಕಾನೂನಿನ ಬಗ್ಗೆ ಅರಿವು ಮೂಡಿಸಿ, ಗೊಂದಲಗಳಿಂದ ನಿವಾರಣೆ ಪಡೆಯಲು ಇದು ಸಹಕಾರಿಯಾಗಿವೆ.

No comments:

Post a Comment