"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್
Showing posts with label ಕೆಎಎಸ್ ಸಂದರ್ಶನ ತಯಾರಿ. Show all posts
Showing posts with label ಕೆಎಎಸ್ ಸಂದರ್ಶನ ತಯಾರಿ. Show all posts

Sunday, 24 February 2019

•► (PART : II) "ಕೆಎಎಸ್ ಸಂದರ್ಶನ / ಇಂಟರ್‌ವ್ಯೂ ತಯಾರಿ"— ಮಾದರಿ ಪ್ರಶ್ನೆಗಳು (KAS INTERVIEW PREPARATION - Model Questions)

•► "ಕೆಎಎಸ್ ಸಂದರ್ಶನ / ಇಂಟರ್‌ವ್ಯೂ ತಯಾರಿ"— ಮಾದರಿ ಪ್ರಶ್ನೆಗಳು (PART : II)
(KAS INTERVIEW PREPARATION)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಸಂದರ್ಶನ ತಯಾರಿ
(KAS Interview Preparation)

★ ಸಾಮಾನ್ಯ ಅಧ್ಯಯನ ತಯಾರಿ
(General Studies Preparation)


"ಕೆಎಎಸ್ ಇಂಟರ್‌ವ್ಯೂ (KAS INTERVIEW PREPARATION) ತಯಾರಿ"ಗಾಗಿ ನನ್ನ ಅಭಿಪ್ರಾಯ ಪ್ರಕಾರ ಸ್ಪರ್ಧಾರ್ಥಿಗಳು ಈ ಕೆಳಗೆ ನೀಡಲಾದ ವಿಷಯಗಳನ್ನು ಪರಿಗಣಿಸಬಹುದು. ಇವು ಪ್ರಚಲಿತ ಘಟನೆಗಳನ್ನಾಧರಿಸಿ ಆಯ್ದುಕೊಂಡು ನನ್ನ ಜ್ಞಾನ ಪರಿಮಿತಿಯಲ್ಲಿ ಸಂಗ್ರಹಿಸಿದ್ದು ಆದಾಗ್ಯೂ ಇವೇ ಅಂತಿಮವಲ್ಲ. ಉಳಿದ ವಿಷಯಗಳನ್ನು ಶೀಘ್ರದಲ್ಲೇ ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡುವೆ.  ಏನಾದರೂ ತಪ್ಪಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತನ್ನಿ (Gmail : yaseen7ash@gmail.com)


• ವಿಷಯವಸ್ತು :

21.ಸಾಲ ಮನ್ನಾ- ಇದು ಕಾಯಂ ಪರಿಹಾರವೇ ? ದೇಶದ/ರಾಜ್ಯದ ಆರ್ಥಿಕ ವ್ಯವಸ್ಥೆಯ ಮೇಲೆ ಇದರ ಪರಿಣಾಮಗಳು.

22.ಯಾಕೆ ಪಶ್ಚಿಮ ಕರಾವಳಿಯ ರಾಜ್ಯಗಳು ಪೂರ್ವ ಕರಾವಳಿಯ ರಾಜ್ಯಗಳಿಗಿಂತ ಹೆಚ್ಚಿನ ಅಭಿವೃದ್ಧಿಯನ್ನು ಹೊಂದಿವೆ?

23.ಮಾನವ ಹಕ್ಕುಗಳ ರಕ್ಷಣೆ (ತಿದ್ದುಪಡಿ)-2018 ಮಸೂದೆ - ಲಕ್ಷಣಗಳು - ಆದ ಬದಲಾವಣೆಗಳು

24.ಐಎಂಎಫ್ ಎಸ್​ಡಿಆರ್​ಗೆ ಯುವಾನ್ ಸೇರ್ಪಡೆ ಆಗಿರುವುದರಿಂದ ಚೀನಾ ದೇಶಕ್ಕೆ ಏನು ಲಾಭ?

25.ಪ್ರಯಾಣಿಕರ ಸಂಖ್ಯೆಯ ದೃಷ್ಟಿಯಿಂದ ವಿಶ್ವದ ಮೂರನೇ ಅತಿ ದೊಡ್ಡ ಉದ್ಯಮ ಎನ್ನುವ ಹೆಗ್ಗಳಿಕೆ ಹೊಂದಿದ್ದರೂ ನಾಗರಿಕ ವಿಮಾನಯಾನ ಕ್ಷೇತ್ರವು ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಏಕೆ?

26.ಪ್ರಸ್ತುತ ಭಾರತದ ಮಾನವ ಅಭಿವೃದ್ಧಿ ಸ್ಥಿತಿಗತಿ  - UNDPಯ ಮಾನವ ಅಭಿವೃದ್ಧಿ ಸೂಚ್ಯಂಕದ ಮೇಲೆ ಇದರ ಪರಿಣಾಮ.

27. ಭಾರತದ HDI ಮೇಲೆ ಪ್ರಭಾವ ಬೀರುವ ಅಂಶಗಳು.

28. ಜಾಗತಿಕ ಹಸಿವು ಸೂಚ್ಯಂಕ (GHI-Global Hunger Index)) ವರದಿ & ಭಾರತ.

29. ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲಿಯೂ ಈಗಲೂ ಪುರುಷರ ಸಾಕ್ಷರತೆಯ ಪ್ರಮಾಣವು ಮಹಿಳಾ ಸಾಕ್ಷರತೆಯ ಪ್ರಮಾಣಕ್ಕಿಂತ ಅಧಿಕವಾಗಿದೆ ಏಕೆ? ಸಾಕ್ಷರತೆಯ ಪ್ರಮಾಣದಲ್ಲಿರುವ ತಾರತಮ್ಯ ಇನ್ನೂ ಯಾಕೆ ಕಡಿಮೆಯಾಗುತ್ತಿಲ್ಲ?

30. ಪ್ರಧಾನಮಂತ್ರಿ ಕಿಸಾನ್‌ ಸನ್ಮಾನ್‌ ಯೋಜನೆ - ಇದು ವಾಡಿಕೆಯ ಸಾಮಾಜಿಕ ಯೋಜನೆಗಳಿಗಿಂತ ಹೇಗೆ ಭಿನ್ನ?

31. ಮಾನವ ಸಾಗಣೆ (ತಡೆ, ಸಂರಕ್ಷಣೆ ಮತ್ತು ಪುನರ್ವಸತಿ) ಮಸೂದೆ 2018 ( Trafficking of Persons (Prevention, Protection & Rehabilitation Bill, 2018) - ಈ ಮಸೂದೆಯ ಪ್ರಮುಖ ಅಂಶಗಳು.

32.ಮಾನವ ಕಳ್ಳಸಾಗಣೆಯು ಜಾಗತಿಕ ಸಮಸ್ಯೆಯಾದರೂ ದಕ್ಷಿಣ ಏಷ್ಯಾದಲ್ಲಿ ಭಾರಿ ಪ್ರಮಾಣದಲ್ಲಿ ನಡೆಯುತ್ತಿದೆ. ಯಾಕೆ?

33.ಭಾರತದಲ್ಲಿ ಸಾರ್ವಜನಿಕ ವಿತರಣೆ ಕಾರ್ಯಕ್ರಮದಲ್ಲಿ ನೀವು ಸೂಚಿಸಬಹುದಾದ ಬದಲಾವಣಾ ಕ್ರಮಗಳು.

34.ಪ್ರಸ್ತುತ ಜಾಗತಿಕ ಹಸಿವು ಸೂಚ್ಯಂಕದ ಪ್ರಕಾರ "ದೇಶದಲ್ಲಿ ಬಡತನ ಕಡಿಮೆಯಾಗಿದೆ ಆದರೆ ಹಸಿದವರ ಸಂಖ್ಯೆ ಕಡಿಮೆಯಾಗಿಲ್ಲ" ಎಂದರೆ ಏನರ್ಥ? ಜಾಗತಿಕ ಹಸಿವು ಸೂಚ್ಯಂಕ ಎದುರಿಡುತ್ತಿರುವ ಪ್ರಶ್ನೆಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉತ್ತರವೇನು?

35. ನೋಟು ಅಮಾನ್ಯೀಕರಣ (ಅಪನಗದೀಕರಣ) ಮತ್ತು ಜಿಎಸ್‍ಟಿ ಜಾರಿಯಾದ ನಂತರದ ದೇಶದ ಅರ್ಥ ವ್ಯವಸ್ಥೆ

36. ಕೇಂದ್ರ ಸರ್ಕಾರವು ಆರ್ಥಿಕ ಹಿಂದುಳಿದಿರುವಿಕೆಯ ಮಾನದಂಡಕ್ಕೆ ಅನುಗುಣವಾಗಿ ಶೇಕಡ ಹತ್ತರಷ್ಟು 'ಆರ್ಥಿಕ ದುರ್ಬಲರಿಗೆ ಮೀಸಲಾತಿ’ಗೆ ಕೈಗೊಂಡ ಕ್ರಮ ಸರಿಯೇ?

37. ದೇಶದಲ್ಲಿ ಉದ್ಯೋಗಾವಕಾಶದ ಸೃಷ್ಟಿ & ಪ್ರತಿಭಾ ಪಲಾಯನ

38. ಪೌರತ್ವ ತಿದ್ದುಪಡಿ ವಿಧೇಯಕ (The Citizenship (Amendment) Bill, 2016)

39. ಜಗತ್ತಿನ ಬೇರಾವುದೇ ದೇಶಕ್ಕೆ ಸಮೀಕರಿಸಲಾಗದಷ್ಟು ಮಹಿಳಾ ಕಾನೂನುಗಳು, ಭಾರತೀಯ ಸ್ತ್ರೀಯರ ಪಾಲಿಗಿವೆ. ಆದಾಗ್ಯೂ ಮಹಿಳೆಯರ ಮೇಲೆ ದಿನಾಲೂ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತಿವೆ ಏಕೆ?

40.ತಾಪಮಾನ ಏರಿಕೆ ನಿಯಂತ್ರಣಕ್ಕೆ ತಾವು ಹೊಸದಾಗಿ ಸೂಚಿಸಬಹುದಾದ ಕ್ರಮಗಳು.
…ಮುಂದುವರೆಯುವುದು.

Tuesday, 19 February 2019

•► "ಕೆಎಎಸ್ ಸಂದರ್ಶನ / ಇಂಟರ್‌ವ್ಯೂ ತಯಾರಿ"— ಮಾದರಿ ಪ್ರಶ್ನೆಗಳು (PART : I) (KAS INTERVIEW PREPARATION)

•► "ಕೆಎಎಸ್ ಸಂದರ್ಶನ / ಇಂಟರ್‌ವ್ಯೂ ತಯಾರಿ"— ಮಾದರಿ ಪ್ರಶ್ನೆಗಳು (PART : I)
(KAS INTERVIEW PREPARATION)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಸಂದರ್ಶನ ತಯಾರಿ
(KAS Interview Preparation)

★ ಸಾಮಾನ್ಯ ಅಧ್ಯಯನ ತಯಾರಿ
(General Studies Preparation)

"ಕೆಎಎಸ್ ಇಂಟರ್‌ವ್ಯೂ (KAS INTERVIEW PREPARATION) ತಯಾರಿ"ಗಾಗಿ ನನ್ನ ಅಭಿಪ್ರಾಯ ಪ್ರಕಾರ ಸ್ಪರ್ಧಾರ್ಥಿಗಳು ಈ ಕೆಳಗೆ ನೀಡಲಾದ ವಿಷಯಗಳನ್ನು ಪರಿಗಣಿಸಬಹುದು. ಇವು ಪ್ರಚಲಿತ ಘಟನೆಗಳನ್ನಾಧರಿಸಿ ಆಯ್ದುಕೊಂಡು ನನ್ನ ಜ್ಞಾನ ಪರಿಮಿತಿಯಲ್ಲಿ ಸಂಗ್ರಹಿಸಿದ್ದು ಆದಾಗ್ಯೂ ಇವೇ ಅಂತಿಮವಲ್ಲ. ಉಳಿದ ವಿಷಯಗಳನ್ನು ಶೀಘ್ರದಲ್ಲೇ ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡುವೆ.  ಏನಾದರೂ ತಪ್ಪಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತನ್ನಿ (Gmail : yaseen7ash@gmail.com)


• ವಿಷಯವಸ್ತು :

1.ನೀವು ಈ ಹುದ್ದಗೆ ಅರ್ಹರು ಎಂದು ಹೇಗೆ ಸಾಬೀತುಪಡಿಸಬಲ್ಲಿರಿ?

2.ಭಾರತದ ರೂಪಾಯಿಯು ಡಾಲರ್ ಎದುರು ಕುಸಿತಗೊಳ್ಳುತ್ತಿದ್ದು ಏಕೆ?

3.ಫಸಲ್ ವಿಮಾ ಯೋಜನೆ :

4.ಪ್ರಸ್ತುತ ದೇಶದ/ರಾಜ್ಯದ ಜಿಡಿಪಿ(GDP)ಯಲ್ಲಿ ಕೃಷಿ ವಲಯ & ಸೇವಾ ವಲಯದ ಪಾಲು.

5.ಜನ್-ಧನ್ ಯೋಜನೆಯ 4 ವರ್ಷಗಳ ಅವಲೋಕನ.

6.ದೇಶದ ವಿದೇಶಾಂಗ ನೀತಿ : ಇತ್ತೀಚಿನ ಬೆಳೆವಣಿಗೆಗಳು

7.ಇತರೇ ದೇಶಗಳಿಗೆ ಹೋಲಿಸಿದ್ದಲ್ಲಿ ಭಾರತದಲ್ಲಿ ತಲಾ ಆದಾಯವೇಕೆ ಅಲ್ಪ ಪ್ರಮಾಣದಲ್ಲಿದೆ?

8.ನೀತಿ ಆಯೋಗ : ಯೋಜನಾ ಆಯೋಗಕ್ಕಿಂತ ಹೇಗೆ ಭಿನ್ನ?

9.Eco Terrorism ಎಂದರೇನು?

10.ಮಹಿಳೆಯರ ಭದ್ರತೆಯ ವಿಷಯದಲ್ಲಿ ಭಾರತ ಸೋತಿರುವುದೇ?

11.climate change : ದೇಶದ ಮೇಲೆ ಇದರ ಪರಿಣಾಮಗಳು & ಈ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿದ್ದ ಕ್ರಮಗಳು - ಅವಲೋಕನ.

12.ಸಾರ್ವತ್ರಿಕ ಮೂಲ ಆದಾಯ (Free Basic Income) - ಯಾಕೆ ಸರ್ಕಾರ ಇದನ್ನು ಜಾರಿಗೊಳಿಸುತ್ತಿಲ್ಲ?

13.ಅಂತರರಾಜ್ಯ ನದಿ ನೀರಿನ ವಿವಾದಗಳು. - ಕಾವೇರಿ ನದಿ ವಿವಾದದ ಬಗ್ಗೆ ನಿಮ್ಮ ಅಭಿಪ್ರಾಯ?

14.ದೇಶದಲ್ಲಿ ಕ್ರೀಡೆಗಳ ಉತ್ತೇಜನಕ್ಕಾಗಿ ತಾವು ಯಾವ್ಯಾವ ಉತ್ತೇಜನಾ ಕ್ರಮಗಳನ್ನು ಕೈಗೊಳ್ಳುವಿರಿ?

15 ಅಂತರರಾಜ್ಯ ನದಿ ಜೋಡಣೆಯ ಬಗ್ಗೆ ನಿಮ್ಮ ಅಭಿಪ್ರಾಯ

16.Brexit ಎಂದರೇನು? ಇದು ಸರಿಯೋ ತಪ್ಪೋ? ದೇಶದ ಮೇಲೆ ಇದರ ಪ್ರಭಾವ.

17.ಅಪೌಷ್ಟಿಕತೆ(malnutrition) ಸಮಸ್ಯೆ : ಯಾಕೆ ಉಲ್ಬಣಿಸುತ್ತಿದೆ?  ನೀವು ಇದರ ನಿರ್ಮೂಲನೆಯನ್ನು ಹೇಗೆ ನಿಭಾಯಿಸುವಿರಿ?

18.ಗ್ರಾಮೀಣಾಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿ ತಂದರೂ ಯಾಕೆ ಜನ ಗೂಳೆ ಹೋಗುವುದು ತಪ್ಪುತ್ತಿಲ್ಲ?

19.ಇತ್ತೀಚೆಗೆ ಪುನಃ ಉತ್ತರ ಕರ್ನಾಟಕ ಹೊಸ ರಾಜ್ಯ ರಚನೆ ಬಗ್ಗೆ ಕೂಗೆದ್ದಿತ್ತು, ಯಾಕೆ? ಉತ್ತರ & ದಕ್ಷಿಣ ಎಂಬ ತಾರತಮ್ಯ ನಿಮಗೆ ಕಾಣಿಸುತ್ತಿದೆಯೇ?

20.ಆಧಾರ್ ಕಾರ್ಡ್ ಮತ್ತು ಖಾಸಗಿತನದ ಹಕ್ಕು.
…ಮುಂದುವರೆಯುವುದು.

Saturday, 28 May 2016

☀ ಕೆಪಿಎಸ್‌ಸಿ (ಕೆಎಎಸ್) ಸಂದರ್ಶನ ತಯಾರಿಗಾಗಿ ತಜ್ಞರು ನೀಡಿರುವ ಸಲಹೆಗಳು. (KPSC (KAS) Interview Preparation Guidelines, suggestions)

☀ ಕೆಪಿಎಸ್‌ಸಿ (ಕೆಎಎಸ್) ಸಂದರ್ಶನ ತಯಾರಿಗಾಗಿ ತಜ್ಞರು ನೀಡಿರುವ ಸಲಹೆಗಳು.
(KPSC (KAS) Interview Preparation Guidelines, suggestions)
━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ / ಕೆಎಎಸ್ ಸಂದರ್ಶನ ತಯಾರಿ.
(IAS-KAS interview Preparation)


ಕರ್ನಾಟಕ ಲೋಕಸೇವಾ ಆಯೋಗ ಕೆಎಎಸ್‌ ಹುದ್ದೆಗಳಿಗೆ ಸದ್ಯದಲ್ಲೇ ಸಂದರ್ಶನ ನಡೆಸಲಿದೆ. ಈ ಸಂದರ್ಶನಕ್ಕೆ ತಯಾರಿ ಹೇಗಿರಬೇಕೆಂಬ ಕುರಿತು ತಜ್ಞರು ನೀಡಿರುವ ಸಲಹೆ ಇಲ್ಲಿದೆ.

ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟೆಡ್‌ ಪ್ರೊಬೆಷನರ್ಸ್‌ಗಳ ನೇಮಕಕ್ಕೆ ಸಂಬಂಧಿಸಿದಂತೆ ಸದ್ಯವೇ ಸಂದರ್ಶನ ನಡೆಸುವುದಾಗಿ ಪ್ರಕಟಿಸಿದೆ. ಈಗಾಗಲೇ ನಿಮಗೆ ತಿಳಿದಿರುವಂತೆ ಸಂದರ್ಶನದಲ್ಲಿ ಮತ್ತು ಮುಖ್ಯ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಸೇರಿಸಿ ಮೆರಿಟ್‌ ಲಿಸ್ಟ್‌ ಪ್ರಕಟಿಸಲಾಗುತ್ತದೆ. ಹೀಗಾಗಿ ಸಂದರ್ಶನಕ್ಕೆ ಸಾಕಷ್ಟು ಸಿದ್ಧತೆ ನಡೆಸಿಯೇ ಹೋಗಬೇಕು. ಕಳೆದ ವಾರ ಯಶಸ್ವಿ ಸಂದರ್ಶನಗಳು ಏನೇನು, ಸಂದರ್ಶನದಲ್ಲಿ ಯಾವೆಲ್ಲಾ ಸಾಮರ್ಥ್ಯ‌ವನ್ನು ಅಳೆಯಲಾಗುತ್ತದೆ, ಸಂದರ್ಶನದ ದಿನ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು, ಸಂದರ್ಶನ ಕೊಠಡಿಯಲ್ಲಿ ನಿಮ್ಮ ವರ್ತನೆ ಹೇಗಿರಬೇಕೆಂಬುದನ್ನು ತಿಳಿದುಕೊಂಡಿದ್ದೀರಿ, ಇಂದು ಸಂದರ್ಶನದ ಇನ್ನಷ್ಟು ವಿಷಗಳನ್ನು ತಿಳಿದುಕೊಳ್ಳೋಣ.


●.ಸಂದರ್ಶನದ ಪ್ರಶ್ನೆಗಳಿಗೆ ಉತ್ತರಿಸುವಾಗ ವಹಿಸಬೇಕಾದ ಎಚ್ಚರಿಕೆಗಳು :
━━━━━━━━━━━━━━━━━━━━━━━━━━━━━━━━━━━━━━━━━━━━━

•►ಸಂದರ್ಶಕರು ಕೇಳುವ ಪ್ರಶ್ನೆಗಳನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಬೇಕು. ಸ್ಪಷ್ಟವಾಗಿ ಕೇಳಿಸಿಕೊಳ್ಳದಿದ್ದಾಗ, ನಮ್ಮ ಉತ್ತರಗಳು ತಪ್ಪಾಗಿರುತ್ತವೆ.

•►ಸಂದರ್ಶಕರು ಕೇಳಿದ ಪ್ರಶ್ನೆ ನಮಗೆ ಸರಿಯಾಗಿ ಅರ್ಥವಾಗದಿದ್ದರೆ. ಇನ್ನೊಮ್ಮೆ ಕೇಳಬೇಕೆಂದು ವಿನಂತಿಮಾಡಿಕೊಳ್ಳಿ.

•►ಒರಟಾಗಿ ಉತ್ತರಿಸಬಾರದು. ಅನಾವಶ್ಯಕವಾಗಿ ನಗು ಇರಬಾರದು.

•►ಯಾವ ಸಂದರ್ಶಕರು ಪ್ರಶ್ನೆ ಕೇಳುತ್ತಾರೋ ಅವರ ಕಡೆಗೆ ಮುಖಮಾಡಿ ಉತ್ತರಿಸಿ.

•►ಉತ್ತರ ನೀಡುವಾಗ, ನೆಲ ನೋಡುತ್ತಾ, ಕಿಡಕಿ ನೋಡುತ್ತಾ, ಫ್ಯಾನ್‌ ನೋಡುತ್ತಾ, ಉತ್ತರಿಸಬಾರದು.

•►ನಮ್ಮ ತಪ್ಪುಗಳನ್ನು ಸಂದರ್ಶಕರು ಎತ್ತಿ ತೋರಿಸಿದಾಗ, ಅದನ್ನು ಮನಃಪೂರ್ವಕವಾಗಿ ಒಪ್ಪಿಕೊಂಡು ಬಿಡಿ.

•►ವಿಚಾರ ಮಾಡಿ ಉತ್ತರ ನೀಡಿ. ಅವಸರದಲ್ಲಿ ತಪ್ಪು ಉತ್ತರ ನೀಡಿ. ನಂತರ ಕ್ಷಮೆ ಕೇಳುವುದು ಸೂಕ್ತವಲ್ಲ. ಅವರ ಕೇಳಿದ ಪ್ರಶ್ನೆಗೆ ನಿಮಗೆ ಉತ್ತರ ಗೊತ್ತಿರದಿದ್ದರೆ, ಕ್ಷಮಿಸಿ ನನಗೆ ಗೊತ್ತಿಲ್ಲವೆಂದು ಸ್ಪಷ್ಟವಾಗಿ ಹೇಳಿ. ಅದು ಬಿಟ್ಟು ಉತ್ತರ ಗೊತ್ತಿರದಿದ್ದಾಗ, ಬಾಯಿ ಮುಚ್ಚಿಕೊಂಡು ಸುಮ್ಮನೆ ಕುಳಿತುಕೊಳ್ಳುವುದು ಒಳ್ಳೇಯದಲ್ಲ.

•►ಸಂದರ್ಶಕರರ ಬಗೆಗೆ ಗೌರವ ಇರಲಿ. ಇವರಿಗೇನು ಗೊತ್ತು ಎಂದು ತಪ್ಪು ಉತ್ತರ ನೀಡುವದರ ಮೂಲಕ ಅವರನ್ನು ಮೋಸಗೊಳಿಸುವ ಪ್ರಯತ್ನ ಮಾಡಬೇಡಿ.

•►ಉತ್ತರ ಹೇಳುವಾಗ ಅಹಂ ಪ್ರದರ್ಶನ ಮಾಡಬೇಡಿ. ಸರಳತೆ ಇರಲಿ.

•►ಉತ್ತರಿಸುವಾಗ ಸ್ಪಷ್ಟತೆ ಇರಲಿ, ಬಾಯಿಯಲ್ಲಿ ಗೊಣಗಬೇಡಿ.

•►ಕೆಲವೊಮ್ಮೆ ಸಂದರ್ಶಕರು ಉದ್ದೇಶಪೂರ್ವಕವಾಗಿ ನಿಮ್ಮನ್ನು ಕೆರಳಿಸುವ ಪ್ರಯತ್ನ ಮಾಡುತ್ತಾರೆ. ಆದರೆ, ನೀವು ಯಾವುದೇ ಕಾರಣಕ್ಕೂ ಸಹನೆ ಕಳೆದುಕೊಳ್ಳಬೇಡಿ.

•►ನಿಮ್ಮ ಉಚ್ಛಾರಣೆ ಅತೀ ದೊಡ್ಡದಿರಬಾರದು/ಚಿಕ್ಕದಾಗಿಯೂ ಇರಬಾರದು.

•►ನೀವು ಉತ್ತರ ನೀಡುವಾಗ ಜಾತಿ, ಧರ್ಮ, ಪ್ರದೇಶ, ವೈಯಕ್ತಿಕ ಮಟ್ಟದ ಟೀಕೆ ಇರಬಾರದು.

•►ನಿಮ್ಮ ಉತ್ತರಗಳಲ್ಲಿ ಪ್ರಾಮಾಣಿಕತನ ಇರಲಿ ಹಾಗೂ ದೈಹಿಕ ಅಂಗಾಂಗಗಳ ಚಲನೆ ನಿಯಂತ್ರಣದಲ್ಲಿರಲಿ. ಸಂದರ್ಶಕರ ಕಡೆ ಕೈಮಾಡಿ ಉತ್ತರಿಸುವುದು ಸೂಕ್ತವಲ್ಲ.

•►ಸಂದರ್ಶಕರ ಎದುರಿನಲ್ಲಿ ಕಣ್ಣೀರು ಹಾಕುವುದು, ನಾಟಕೀಯ ವರ್ತನೆ ಮಾಡುವುದು ಹಾಗೂ ನಿಮ್ಮ ಅಸಹಾಯಕತೆಯನ್ನು ಪ್ರದರ್ಶನ ಮಾಡುವುದು ಬೇಡ.

•►ಗಮನಿಸಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡಬೇಕೆಂಬ ಹುಚ್ಚು ಕಲ್ಪನೆ ಬೇಡ. ಒಂದೇ ಪ್ರಶ್ನೆಯಾದರೂ ಸಮರ್ಪಕವಾಗಿ ಹಾಗೂ ಆತ್ಮವಿಶ್ವಾಸದಿಂದ ಉತ್ತರಿಸಿರಿ.

•►ಸಂದರ್ಶನ ಮುಗಿಸಿ ಹೊರಗೆ ಬರುವಾಗ, ಎಲ್ಲರಿಗೂ ನಗು ಮುಖದಿಂದ ಧನ್ಯವಾದಗಳನ್ನು ಹೇಳಿ ಹೊರಗೆ ಬನ್ನಿ.


●.ಸಂದರ್ಶನದಲ್ಲಿ ಆಯ್ಕೆಯಾಗದಿರಲು ಕಾರಣಗಳು :
━━━━━━━━━━━━━━━━━━━━━━━━━━━━

•► ಸರಿಯಾದ ವ್ಯಕ್ತಿತ್ವ ಪ್ರದರ್ಶನ ಮಾಡುವದರಲ್ಲಿ ವಿಫಲ.
•► ನಕಾರಾತ್ಮಕ ವರ್ತನೆಗಳ ಪ್ರದರ್ಶನ.
•► ಆಸಕ್ತಿ ಹಾಗೂ ಉತ್ಸಾಹದ ಕೊರತೆ.
•► ಹುದ್ದೆಗೆ ಸಂಬಂಧಪಟ್ಟಂತೆ ಸರಿಯಾದ ಪೂರ್ವ ತಯಾರಿ ಇಲ್ಲದ್ದು.
•► ಸಾಮಾನ್ಯ ಜ್ಞಾನದ ಬಗೆಗೆ ಮಾಹಿತಿ ಕೊರತೆ.
•► ಸಂದರ್ಶಕರ ಮೇಲೆ ಹಣ, ವಸ್ತು, ಅಧಿಕಾರ ಪ್ರಭಾವ ಬಳಸಿದ್ದು.


●.ಸಂದರ್ಶನದಲ್ಲಿ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು :
━━━━━━━━━━━━━━━━━━━━━━━━━━━━━━

ರಾಜ್ಯದಲ್ಲಿ ಇದುವರೆಗೆ ನಡೆದಿರುವ ಕೆಎಎಸ್‌ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳು ಈ ಕೆಳಗಿನ ವಿಷಯಗಳಗೆ ಸಂಬಂಧಪಟ್ಟವಾಗಿವೆ.

1) ಸ್ವ-ವಿವರ ಬಗೆಗಿನ ಪ್ರಶ್ನೆಗಳು
2) ಅಭ್ಯರ್ಥಿಯ ಜಿಲ್ಲೆಗೆ ಸಂಬಂಧಪಟ್ಟಿರುವ ವಿಷಯದ ಬಗ್ಗೆ.
3) ಶೈಕ್ಷಣಿಕ ಬಗೆಗೆ ಹಾಗೂ ವಿಷಯಗಳ ಬಗೆಗೆ.
4) ನೇಮಕಗೊಳ್ಳುವ ಇಲಾಖೆಗೆ ಸಂಬಂಧಪಟ್ಟಂತೆ.
5) ಪ್ರಚಲಿತ ವಿಷಯಗಳು.
6) ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟಿದ್ದು.
7) ತಾರ್ಕಿಕ ಪ್ರಶ್ನೆಗಳು
8) ಇತರ ವಿಷಯಗಳು.


●.1) ಸ್ವ-ವಿವರ ಬಗೆಗಿನ ಪ್ರಶ್ನೆಗಳು
━━━━━━━━━━━━━━━━━━━━━

1) ನಿಮ್ಮ ಹೆಸರಿನ ಮಹತ್ವ
2) ನಿಮ್ಮ ಹುಟ್ಟಿದ ದಿನಾಂಕದ ವಿಶೇಷತೆ
3) ನಿಮ್ಮ ತಂದೆ-ತಾಯಿಯ ಬಗ್ಗೆ.
4) ಹವ್ಯಾಸಗಳ ಬಗ್ಗೆ.
5) ನಿಮ್ಮ ಮೆಚ್ಚಿನ ನಾಯಕ.
6) ನಿನಗೆ ಇಷ್ಟವಿರುವ ಸ್ಥಳ.
7) ನೀವು ಯಾವ ದಿನಪತ್ರಿಕೆ ಓದುತ್ತೀರಿ.


●.2) ಜಿಲ್ಲಾ ವಿಶೇಷತೆ ಪ್ರಶ್ನೆಗಳು: (ಯಾವ ಜಿಲ್ಲೆಗೆ ಸೇರಿದವರಾಗಿರುತ್ತಾರೋ ಆ ಜಿಲ್ಲೆ ಬಗ್ಗೆ)
━━━━━━━━━━━━━━━━━━━━━━━━━━━━━━━━━━━━━━━━━━━━━

1) ಜಿಲ್ಲೆಯ ರಾಜಕೀಯ ನಾಯಕರು.
2) ಖನಿಜ ಸಂಪನ್ಮೂಲ, ಸ್ಥಾನ, ಬೆಳೆ, ಕೈಗಾರಿಕೆ, ನೀರಾವರಿ.
3) ಜಿಲ್ಲೆಯ ಧಾರ್ಮಿಕ ಸ್ಥಳಗಳ ಮಹತ್ವ ಹಾಗೂ ಸ್ಮಾರಕಗಳ ಬಗೆಗಿನ ಮಾಹಿತಿ.
4) ಜಿಲ್ಲೆಯ ಇತಿಹಾಸ, ಪ್ರಸಿದ್ಧ ಅರಸರು, ನಾಯಕರು, ಚಳುವಳಿಕಾರರು, ರಾಜಮನೆತನಗಳು.
5) ಜಿಲ್ಲಾ ಪ್ರಚಲಿತ ವಿಷಯಗಳು.
6) ಜಿಲ್ಲಾ ಸಾಹಿತಿಗಳು, ಅವರ ಕೃತಿಗಳು.
7) ಜಿಲ್ಲೆಯ ಪ್ರಮುಖರು ನಾಯಕರು ಮತ್ತು ಅವರ ಸಾಧನೆ.
8) ಶಿಕ್ಷಣ ಹಾಗೂ ಆರ್ಥಿಕ ಅಂಶಗಳು.


●.3) ವಿದ್ಯಾರ್ಹತೆ ಮತ್ತು ಶೈಕ್ಷಣಿಕ.
━━━━━━━━━━━━━━━━━━━━

1) ಓದಿದ ಶಾಲೆ ಹಾಗೂ ಕಾಲೇಜಿನ ಮಾಹಿತಿ.
2) ನೀವು ಮಾಡಿದ ಕೋರ್ಸ್‌ಗಳ ಬಗ್ಗೆ,
3) ಇಷ್ಟವಾದ ವಿಷಯಗಳು ಯಾವವು.
4) ನೀನು ಇಷ್ಟಪಡುವ ವಿಷಯದಲ್ಲಿನ ಜ್ಞಾನವನ್ನು ಪರೀಕ್ಷಿಸುವುದು.


●.4) ಪ್ರಚಲಿತ ವಿಷಯಗಳು :ಕಳೆದ ಮೂರು ನಾಲ್ಕು ತಿಂಗಳಲ್ಲಿ ಮಾಹಿತಿ.
━━━━━━━━━━━━━━━━━━━━━━━━━━━━━━━━━━━━━━━

1) ರಾಜ್ಯದಲ್ಲಿನ ಪ್ರಚಲಿತ ವಿಷಯಗಳು
2) ರಾಷ್ಟ್ರದಲ್ಲಿನ ಪ್ರಚಲಿತ ವಿಷಯಗಳು
3) ಅಂತರರಾಷ್ಟ್ರೀಯ ಪ್ರಚಲಿತವನ್ನು ನೋಡಿಕೊಳ್ಳಬೇಕು.


●.5) ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟಿದ್ದು
━━━━━━━━━━━━━━━━━━━━━━━━━

1) ಭಾರತೀಯ ಇತಿಹಾಸ
2) ಭಾರತ ಭೂಗೋಳ
3) ವಿಜ್ಞಾನ ತಂತ್ರಜ್ಞಾನ
4) ಕರ್ನಾಟಕ ಇತಿಹಾಸ
5) ಕರ್ನಾಟಕ ಭೂಗೋಳ
6) ಸಂವಿಧಾನ ಮತ್ತು ರಾಜಕೀಯ
7) ಪರಿಸರ ಮತ್ತು ಜೈವಿಕ ವೈವಿಧ್ಯತೆ


●.6) ತಾರ್ಕಿಕ ಪ್ರಶ್ನೆಗಳು :
━━━━━━━━━━━━━━━

1) ನಿನಗೆ ಲಂಚಕ್ಕೆ ಒತ್ತಾಯ ಮಾಡಿದಾಗ ನೀನು ಏನು ಮಾಡುತ್ತಿಯಾ?
2) ನೀನು ಮಾಡದ ತಪ್ಪಿಗೆ, ನಿನ್ನನ್ನು ಗುರಿಯಾಗಿಸಿದಾಗ, ನೀನು ಏನು ಮಾಡುತ್ತೀಯಾ?
3) ರಾಜಕೀಯ ಹಸ್ತಕ್ಷೇಪ ಪದೇ ಪದೇ ನಡೆದಾಗ ನೀನು ಏನು ಮಾಡುತ್ತಿ ?
4) ತಪ್ಪು ನಿರ್ಧಾರ ಕೈಗೊಂಡಾಗ, ಆಗ ನಿನ್ನ ಪ್ರತಿಕ್ರಿಯೆ ?
5) ನಿನ್ನ ಕೈ ಕೆಳಗಿನ ಅಧಿಕಾರಿಗಳು ನಿನ್ನ ವರ್ಗಾವಣೆಗೆ ಮುಷ್ಕರ ಮಾಡಿದಾಗ ?
6) ನಿನ್ನ ಆಡಳಿತದ ವೈಫಲ್ಯದ ವಿರುದ್ಧ ಜನರು ಪ್ರತಿಭಟನೆ ಮಾಡಿದಾಗ ?


●.7) ಇತರ ವಿಷಯಗಳು :
━━━━━━━━━━━━━━━

1) ನೀವು ಈ ಹುದ್ದೆಗೆ ಬರಲು ಕಾರಣವೇನು?
2) ಈ ಮುಂಚಿನ ಹುದ್ದೆಯನ್ನು ಬಿಟ್ಟು ಈ ಹುದ್ದೆಗೆ ಬರಲು ಕಾರಣವೇನು?
3) ಸಂಬಳಕ್ಕಾಗಿ ಸೇರುತ್ತೀರೋ? ಸೇವೆಗಾಗಿ ಸೇರುತ್ತೀರೋ?
4) ಮುಖ್ಯ ಪರೀಕ್ಷೆಯಲ್ಲಿ ಈ ವಿಷಯವನ್ನೇ ಆಯ್ಕೆ ಮಾಡಿಕೊಳ್ಳಲು ಕಾರಣ ?
5) ಈ ಹುದ್ದೆಗೆ ನೀನು ಎಷ್ಟು ಅರ್ಹನು ನಿನ್ನನ್ನು ನಿರೂಪಿಸು.
6) ಡಿಗ್ರಿ ಮುಗಿಸಿ ಇಷ್ಟು ವರ್ಷ ಗ್ಯಾಪ್‌ ಆಗಲು ಕಾರಣವೇನು ?
7) ನಿನ್ನ ಮುಖ್ಯ ಪರೀಕ್ಷೆಯ ರೋಲ್‌ ನಂ. ಯಾವುದು ?
8) ಇಲ್ಲಿ ಬರುವಾಗ ಯಾವ ರೀತಿ ಪ್ರಯಾಣ ಮಾಡಿ ಬಂದಿರುವೆ ?

(Courtesy : ಬಿರಾದಾರ್ ಸರ್. ಚಾಣಕ್ಯ ಕರಿಯರ್ ಅಕಾಡೆಮಿ ವಿಜಯಪುರ -  Vijaya Karnataka)

Wednesday, 4 May 2016

☀️(ಕರ್ನಾಟಕ ಲೋಕ ಸೇವಾ ಆಯೋಗ) ಕೆಪಿಎಸ್ಸಿ ಸಂದರ್ಶನಕ್ಕೆ ಟಿಪ್ಸ್ : (Tips to Face KPSC Interview)

☀️(ಕರ್ನಾಟಕ ಲೋಕ ಸೇವಾ ಆಯೋಗ) ಕೆಪಿಎಸ್ಸಿ ಸಂದರ್ಶನಕ್ಕೆ ಟಿಪ್ಸ್ :
(Tips to Face KPSC Interview) 
━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಕೆಪಿಎಸ್ ಸಿ ಸಂದರ್ಶನ
(Kpsc Interview)


ಕರ್ನಾಟಕ ಲೋಕ ಸೇವಾ ಆಯೋಗ ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳಿಗೆ ಕಳೆದ ವರ್ಷ ನಡೆಸಿದ್ದ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಸಂದರ್ಶನಕ್ಕೆ ಆಯ್ಕೆಯಾಗಿರುವ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಎಸ್ಸಿಯ  ವೆಬ್ನಲ್ಲಿ ಪ್ರಕಟಿಸಲಾಗಿದೆ.

🖌2014ನೇ ಸಾಲಿನ ಕೆಎಎಸ್ ಹುದ್ದೆಗಳಿಗೆ ಕಳೆದ ಏಪ್ರಿಲ್ನಲ್ಲಿ ನಡೆದಿದ್ದ ಪ್ರೀಲಿಮ್ಸ್ 2.67 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಇದರಲ್ಲಿ ಉತ್ತೀರ್ಣರಾಗಿದ್ದವರಿಗೆ ಸೆಪ್ಟೆಂಬರ್ನಲ್ಲಿ
ಮುಖ್ಯ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ 1389 ಅಭ್ಯರ್ಥಿಗಳು ಉತ್ತೀರ್ಣಗೊಂಡು ಸಂದರ್ಶಕ್ಕೆ ಆಯ್ಕೆ ಆಗಿದ್ದಾರೆ. ಸಂದರ್ಶನದ ದಿನವನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದ್ದು, ಮೇ 16ರಿಂದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸಲಾಗುವುದು ಎಂದು ಕೆಪಿಎಸ್ಸಿ ತಿಳಿಸಿದೆ.

🕰ಹಲವು ವರ್ಷಗಳ ಬಳಿಕ ನಡೆದಿದ್ದ ಕೆಎಎಸ್ ಪರೀಕ್ಷೆಗೆ ಸರಕಾರ 2014ರಲ್ಲಿ ಅಧಿಸೂಚನೆ ಹೊರಡಿಸಿದ್ದ ವೇಳೆ 462 ಹುದ್ದೆಗಳನ್ನು ನಿಗದಿ ಮಾಡಿತ್ತು. ಈ ಪೈಕಿ ಕಮಾಂಡೆಂಟ್ ವರ್ಗದ 12 ಹುದ್ದೆಗಳಿಗೆ ವೃಂದ ಹಾಗೂ ನೇಮಕ ನಿಯಮ ಸಮರ್ಪಕವಾಗಿಲ್ಲ ಕಾರಣ ಆ ಹುದ್ದೆಗಳ ಪ್ರಸ್ತಾಪವನ್ನು ಮಾತ್ರ ಸರಕಾರ ಹಿಂದಕ್ಕೆ ಪಡೆದ ಕಾರಣ ಒಟ್ಟು ಹುದ್ದೆಗಳ ಸಂಖ್ಯೆ 440ಕ್ಕೆ ಸೀಮಿತವಾಗಿತ್ತು. ಇತ್ತೀಚೆಗೆ ಸಹಾಯಕ ಖಜಾನೆ ಅಧಿಕಾರಿ(ಎಟಿಒ) ದರ್ಜೆಯ 24
ಹುದ್ದೆಗಳಿಗೆ ಸರಕಾರ ಹೊಸದಾಗಿ ಪ್ರಸ್ತಾವನೆ ಸಲ್ಲಿಸಿದ್ದ ಕಾರಣ ಒಟ್ಟು ಹುದ್ದೆಗಳ ಸಂಖ್ಯೆ 464ಕ್ಕೆ ಏರಿದಂತಾಗಿದೆ. ಹೀಗಾಗಿ ಕೆಪಿಎಸ್ಸಿ ನಿಯಮಗಳಂತೆ ಪ್ರತಿ ಹುದ್ದೆಗೆ 1:3
ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.

★ ಕೆಪಿಎಸ್ಸಿಯ ಈ ದಾಖಲೆ ಪರಿಶೀಲನೆ ಮತ್ತು ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಉಪಯುಕ್ತವಾದ ಸಲಹೆಗಳು ಇಲ್ಲಿವೆ;
.
* ದಾಖಲೆಗಳ ಪರಿಶೀಲನೆಗೆ ಎಲ್ಲ ಮೂಲ ದಾಖಲೆಗಳೊಂದಿಗೆ ಸ್ವಯಂ ದೃಢೀಕರಿಸಿದ 2 ಸೆಟ್ ಜೆರಾಕ್ಸ್ ಪ್ರತಿಗಳನ್ನು ತೆಗೆದುಕೊಂಡು ಹೋಗಲು ಮರೆಯಬೇಡಿ.

* ಆನ್ಲೈನ್ ಅರ್ಜಿಯಲ್ಲಿ ನಮೂದಿಸಿದ ದಾಖಲೆಗಳಿಲ್ಲದೆ ದಾಖಲೆ ಪರಿಶೀಲನೆಗೆ ಹಾಜರಾಗಬೇಡಿ.

* ಒಂದು ವೇಳೆ ಆನ್ಲೈನ್ ಅರ್ಜಿಯಲ್ಲಿ ನೀವು ನಮೂದಿಸಿದ ವಿವರ/ಮಾಹಿತಿ ನಿಮ್ಮ ಬಳಿ ಇಲ್ಲದಿದ್ದರೆ ದಯವಿಟ್ಟು ಸಂದರ್ಶನ ಪತ್ರದಲ್ಲಿ ಕೋರಿದ ಮೀಸಲಾತಿಯನ್ನು ಗಮನಿಸಿ. ಅಲ್ಲಿ ಅಭ್ಯರ್ಥಿಯು ಕೋರಿದ ಮೀಸಲಾತಿ ವಿಭಾಗ, ಗ್ರಾಮೀಣ ಹಾಗೂ ಕನ್ನಡ ಮಾಧ್ಯಮ ಅಭ್ಯರ್ಥಿಗೆ ನೀಡಲಾದ ಮೀಸಲಾತಿ ವಿವರ ಹಾಗೂ ಇನ್ನಿತರ ಮಾಹಿತಿಗಳನ್ನು ನೀಡಲಾಗಿರುತ್ತದೆ. ಇದನ್ನು ಗಮನಿಸಿ, ಇದಕ್ಕೆ ತಕ್ಕಂತೆ ದಾಖಲೆ ಸಿದ್ಧಪಡಿಸಿಕೊಂಡು ಸಂದರ್ಶನಕ್ಕೆ ತೆರಳಿ.

★ ಯಾವ ದಾಖಲೆಗಳಿರಬೇಕು?

* ಆನ್ಲೈನ್ ಅರ್ಜಿಯಲ್ಲಿ ನಮೂದಿಸಿದ ವಿವರಗನ್ನು ಆಧರಿಸಿ, ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲ ವರ್ಷ/ ಸೆಮಿಸ್ಟರ್ಗಳ ಅಂಕ ಪಟ್ಟಿಗಳು ಹಾಗೂ ಗ್ರೇಡ್ಗಳಿದ್ದರೆ ಗ್ರೇಡನ್ನು ಶೇಕಡವಾರು ಅಂಕಗಳಿಗೆ ಪರಿವರ್ತಿಸಿದ ಪ್ರಮಾಣ ಪತ್ರ ತಯಾರು ಮಾಡಿಕೊಂಡು ಹೋಗಿ.

* ಜನ್ಮ ದಿನಾಂಕವನ್ನು ದೃಢೀಕರಿಸಲು ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ ಅಥವಾ ವರ್ಗಾವಣೆ (ಟಿಸಿ)
ಪ್ರಮಾಣ ಪತ್ರ ಅಥವಾ ಸಿಆರ್ (ಸಂಚಿತ ದಾಖಲೆ)ನ ಉದ್ಧೃತ ಭಾಗ ಜೋಡಿಸಿಟ್ಟುಕೊಳ್ಳಿ.

* ಒಂದು ವೇಳೆ ಕಡ್ಡಾಯ ಕನ್ನಡ ಪರೀಕ್ಷೆಯಿಂದ ವಿನಾಯಿತಿ ಕೋರಿದ್ದಲ್ಲಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿಸಿಟ್ಟುಕೊಂಡಿರಿ.

* ಆನ್ ಲೈನ್ನಲ್ಲಿ ಮೀಸಲಾತಿ ಕೋರಿದ್ದಲ್ಲಿ ಜಾತಿ ಪ್ರಮಾಣ ಪತ್ರಗಳ ನಮೂನೆ ಹೀಗಿರಲಿ:1.ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ -ನಮೂನೆ 'ಡಿ', 2. ಪ್ರವರ್ಗ-10 ಅಭ್ಯರ್ಥಿಗಳು - ನಮೂನೆ 'ಇ', 3. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ- ನಮೂನೆ 'ಎಫ್'
* ನಮೂನೆ ಡಿ,ಇ,ಎಫ್ ಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವಂತೆ ಸಂಬಂಧಿತ ತಹಶೀಲ್ದಾರರಿಂದ ಪಡೆದಿರಬೇಕು.

* ನೀವು ಪಡೆದ ಪ್ರಮಾಣ ಪತ್ರಗಳಲ್ಲಿ ಸಹಿ,ಮೊಹರು ಅಥವಾ ಬಾರ್ ಕೋಡ್, ಹಾಲೋಗ್ರಾಮ್ ಮತ್ತು ವಾಟರ್
ಮಾರ್ಕ್ ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ

* ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ಮೀಸಲಾತಿ ಪ್ರಮಾಣ ರದ್ದಾಗುವವರೆಗೆ ಚಾಲ್ತಿಯಲ್ಲಿರುವುದರಿಂದ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ನಿಗದಿಪಡಿಸಿದ ನಮೂನೆಯಲ್ಲಿ ಪಡೆದಿರುವುದನ್ನು ಖಾತ್ರಿಪಡಿಸಿಕೊಳ್ಳಿ.

* ಹಿಂದುಳಿದ ಪ್ರವರ್ಗಗಳಾದ 2ಎ, 2ಬಿ, 3ಎ ಮತ್ತು 3ಬಿ ಮೀಸಲಾತಿ ಪ್ರಮಾಣ ಪತ್ರ 5 ವರ್ಷ ಚಾಲ್ತಿಯಲ್ಲಿರುತ್ತದೆ.
ಆದ್ದರಿಂದ ಆ ಪ್ರಮಾಣ ಪತ್ರಗಳು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ.

* ಕನ್ನಡ ಮಾಧ್ಯಮ ಮೀಸಲಾತಿಯ ಅಭ್ಯರ್ಥಿಗಳು 1ರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಾಂಗ ಮಾಡಿರುವ ಕುರಿತು ಶಾಲೆಯ ಮುಖ್ಯೋಪಾಧ್ಯಾಯರಿಂದ ಪ್ರಮಾಣ ಪತ್ರ ಪಡೆದುಕೊಳ್ಳಿ.

* ಗ್ರಾಮೀಣ ಅಭ್ಯರ್ಥಿಯಾಗಿದ್ದಲ್ಲಿ ಗ್ರಾಮೀಣ ವ್ಯಾಸಾಂಗದ ಪ್ರಮಾಣ ಪತ್ರವನ್ನು ನಮೂನೆ-2ರಲ್ಲಿ ಹಾಗೂ ಸಾಮಾನ್ಯ ಅರ್ಹತೆ ಗ್ರಾಮೀಣ ಅಭ್ಯರ್ಥಿಗಳು ನಮೂನೆ-1 ಮತ್ತು 2ರಲ್ಲಿ ಸಂಬಂಧಪಟ್ಟ ಪ್ರಾಧಿಕಾರದಿಂದ ಪ್ರಮಾಣ ಪತ್ರ ಪಡೆಯಲು ಮರೆಯಬೇಡಿ.

* ಸಂದರ್ಶನಕ್ಕೆ ಹಾಜರಾಗುವ ಪ್ರತಿ ಅಭ್ಯರ್ಥಿಗೆ ಸಂದರ್ಶನ ಸಂಖ್ಯೆ/ ದಿನಾಂಕ ಹಾಗೂ ಸಮಯ, ಕೋರಿದ ಮೀಸಲಾತಿ
ವಿವರಗಳನ್ನು ನೀಡಲಾಗಿರುತ್ತದೆ. ಇದನ್ನು ಗಮನಿಸಿಯೇ ಸಂದರ್ಶನಕ್ಕೆ ಹೊರಡಿ.

* ಪ್ರತಿ ಅಭ್ಯರ್ಥಿಯನ್ನು ಕನಿಷ್ಠ 15 ನಿಮಿಷ ಸಂದರ್ಶಿಸಬಹುದು.ಇಷ್ಟು ಕಡಿಮೆ ಅವಧಿಯಲ್ಲಿ ನಿಮ್ಮ ಸಾಮರ್ಥ್ಯ ಪ್ರದರ್ಶಿಸಬೇಕಾಗು
ತ್ತದೆ. ಫಸ್ಟ್ ಇಂಪ್ರೆಷನ್ ಈಸ್ ದಿ ಬೆಸ್ಟ್ ಇಂಪ್ರೆಷನ್ ಎಂಬುದನ್ನು ಮರೆಯಬೇಡಿ.
@spardhaloka

Wednesday, 2 March 2016

■.ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗೆಗಳ ತಯಾರಿ :— ಭಾಗ-III (UPSC, KPSC Interview Preparation :— PART-III)

■.ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗೆಗಳ ತಯಾರಿ :— ಭಾಗ-III
(UPSC, KPSC Interview Preparation :— PART-III)
━━━━━━━━━━━━━━━━━━━━━━━━━━━━━━━━━━━━━━━

ಈಗಾಗಲೇ ಭಾಗ-IIರಲ್ಲಿ ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗೆಗಳ ತಯಾರಿಗಾಗಿ ಅವಶ್ಯವೆನಿಸಿದ ಪ್ರಮುಖ ಅಂಶಗಳನ್ನು ನಿಮ್ಮ ಮುಂದಿರಿಸಿದ್ದೇನೆ. ಅದರಂತೆ ಮತ್ತಷ್ಟು ನನ್ನ ಜ್ಞಾನ ಪರಿಮಿತಿಯಲ್ಲಿ ಗಮನಕ್ಕೆ ಬಂದ ಸಂದರ್ಶನಕ್ಕೆ ಬಹುಮಟ್ಟಿಗೆ ಸಹಕಾರಿಯಾಗಬಹುದಾದ ಕೆಲವು ಮಹತ್ವದ ಪ್ರಚಲಿತ ಘಟನೆಗಳನ್ನಾಧರಿಸಿದ ಅಂಶಗಳನ್ನು ನಾನು ಈ 'ಸ್ಪರ್ಧಾಲೋಕ'ದಲ್ಲಿ ತಕ್ಕಮಟ್ಟಿಗೆ ಭಾಗಗಳಲ್ಲಿ ವಿಂಗಡಿಸಿ ನಿಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇನೆ.

ಇದರ ಹೊರತು 'ಸ್ಪರ್ಧಾಲೋಕ'ದಲ್ಲಿ ಇನ್ನೂ ಅತ್ಯುತ್ತಮ ಮಾಹಿತಿಯನ್ನು ಸೇರ್ಪಡೆಗೊಳ್ಳಬೇಕು ಎಂದೆನಿಸಿದ್ದಲ್ಲಿ, ನಿಮ್ಮ ಹತ್ತಿರವಿರುವ ಮಾಹಿತಿಯನ್ನು ಹಂಚಿಕೊಳ್ಳಿ. ಅಭ್ಯರ್ಥಿಗಳಿಗೆ ಅವರ ಗುರಿ ತಲುಪುವಲ್ಲಿ ಕೈಜೋಡಿಸಿ.


■.ಭಾಗ-III.■
━━━━━━━━

31) ಸಮುದ್ರಮಟ್ಟದಲ್ಲಿ ಕಳೆದ 27 ಶತಮಾನಗಳಲ್ಲಿಯೇ ಅತಿ ವೇಗವಾದ ಏರಿಕೆ ಕಂಡುಬಂದಿದೆ. ಇದಕ್ಕೆ ಕಾರಣಗಳೇನು?

32) ಹವಾಮಾನ ಬದಲಾವಣೆಯಲ್ಲಿ ಮುಂದುವರಿದ ದೇಶಗಳ ಪಾತ್ರ.
•► ಹವಾಮಾನ ಬದಲಾವಣೆಯಲ್ಲಿ ಮುಂದುವರೆಯುತ್ತಿರುವ ದೇಶಗಳ ಪಾತ್ರ.
•► ಹವಾಮಾನ ಬದಲಾವಣೆಯ ಗಂಭೀರತೆಯ ಜವಾಬ್ದಾರಿಯನ್ನು ಜನಸಾಮಾನ್ಯರಲ್ಲಿ ಅರಿವು ಮೂಡಿಸುವಲ್ಲಿ ನೀವು ಕೈಗೊಳ್ಳಬಹುದಾದ ಕ್ರಮಗಳು ಯಾವವು?
.
-----------------------------

33) ಭಾರತದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು. ಕಾರಣಗಳು,  ಪರಿಹಾರ.
•► ಇತರೇ ರಾಜ್ಯಗಳಿಗಿಂತ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ಉತ್ತರ ಪ್ರದೇಶದಲ್ಲಿಯೇ ಯಾಕೆ ಕಂಡುಬರುತ್ತಿವೆ?
•► ಅತ್ಯಾಚಾರ ಮತ್ತು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ- ತಡೆಗೆ ಸರ್ಕಾರ ಕೈಗೊಂಡ ಕ್ರಮಗಳು. ನಿಮ್ಮ ದಿಟ್ಟ ಕ್ರಮಗಳು.

34) 'ಮರ್ಯಾದಾ ಹತ್ಯೆ'. ಇದರ ನಿರ್ಮೂಲನೆಗೆ ಸರ್ಕಾರ ಕೈಗೊಂಡ ಕ್ರಮಗಳು. ನಿಮ್ಮ ಅನಿಸಿಕೆ.
.
-----------------------------  

35) AFSPA ಕಾಯಿದೆ.

•► ಈಶಾನ್ಯ ರಾಜ್ಯಗಳು ಹಾಗು ಕಾಶ್ಮೀರ ಕಣಿವೆಯಲ್ಲಿ ಸಶಸ್ತ್ರ ದಂಗೆಕೋರರನ್ನು ಹತ್ತಿಕ್ಕಲು, ಸೇನೆಗೆ ನೀಡಿರುವ ವಿಶೇಷ ಅಧಿಕಾರ AFSPA ಕಾಯಿದೆಯನ್ನು ಪ್ರಸ್ತುತ ದಿನಗಳಲ್ಲಿ ಈಗಲೂ ಮುಂದುವರೆಸುವುದು ಔಚಿತ್ಯವೇ?

•► ಮಣಿಪುರದ ಕವಯಿತ್ರಿ ಇರೋಮ್ ಶರ್ಮಿಳಾ ಚಾನು “AFSPA ಕೊನೆಗೊಳಿಸಿ” ಎಂಬ ಬೇಡಿಕೆ ಮುಂದಿಟ್ಟು ಆರಂಭಿಸಿದ ಸುಧೀರ್ಘ ಅಖಂಡ ಉಪವಾಸ ಸತ್ಯಾಗ್ರಹ ಸಮಂಜಸವೇ?

•► AFSPA ಒಂದು ಧೀರ್ಘಕಾಲದಿಂದ ಜಾರಿಯಲ್ಲಿರುವ ಅಮಾನುಷ ಕಾಯಿದೆಯಾಗಿದ್ದು, ಇದರಿಂದಾಗಿ ಮಣಿಪುರ, ಈಶಾನ್ಯ ರಾಜ್ಯಗಳ ಮತ್ತು ಕಾಶ್ಮೀರದ ಅಮಾಯಕ ಜನತೆ ನಾವ್ಯಾರು ಕೇಳರಿಯದ ದೌರ್ಜನ್ಯ ಹಾಗು ಕ್ರೌರ್ಯಗಳಿಗೆ ಶಿಕಾರಿಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ನಿಜವೇ?

36) ಸಾಮಾಜಿಕ ಭದ್ರತೆ ಮತ್ತು ಸ್ತ್ರೀಯರ ಸಬಲೀಕರಣ.

37) ದೇಶದ ಭದ್ರತೆಯಲ್ಲಿ ಸ್ತ್ರೀಯರ ಪಾತ್ರ (ಇತ್ತೀಚೆಗೆ Militaryಯಲ್ಲಿ ನೇಮಕಾತಿ ಚಾಲನೆ ಕೊಟ್ಡಿದ್ದಾರಲ್ಲ ಅದಕ್ಕೆ).
•► ಮಿಲಿಟರಿಯಲ್ಲಿ (especially in BSF,SSB, ITBP, ವಾಯುದಳ) ಸ್ತ್ರೀಯರಿಗೆ ಪ್ರಾಶಸ್ತ್ಯ ಕೊಡುವುದು ಎಷ್ಟರಮಟ್ಟಿಗೆ ಪರಿಣಾಮಕಾರಿ?
.
-----------------------------

38) ಭಾರತದಲ್ಲಿ ಅಸಹಿಷ್ಣುತೆ ಈ ಕುರಿತು ಇದರ ಉಗಮ- ಇತ್ತೀಚಿನ ಬೆಳವಣಿಗೆ.

•► ನಿಮ್ಮ ಪ್ರಕಾರ ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆಯೇ?

•► ಅಸಹಿಷ್ಣುತೆಯ ವಿರುದ್ಧ ಜನತೆಯ ಹಾಗೂ ಬೌದ್ಧಿಕ ಪ್ರತಿಭಟನೆ.

•► ಭಾರತದಲ್ಲಿ ಅಸಹಿಷ್ಣುತೆ ಹೆಸರಿನಲ್ಲಿ ಪ್ರಶಸ್ತಿ ಹಿಂದಿರುಗಿಸುವಿಕೆ ಎಷ್ಟರಮಟ್ಟಿಗೆ ಸರಿ?
.
-----------------------------

39) ವಿಶೇಷವಾಗಿ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗಾಗಿ...

•► ಆಹಾರ ಅಭದ್ರತೆ ಹಾಗು ಹಸಿವು, ಅಪೌಷ್ಟಿಕತೆ ಸಮಸ್ಯೆಗಳನ್ನು ನಿವಾರಿಸುವಲ್ಲಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ 'ಪರಿಷ್ಕೃತ ಪಡಿತರ ವಿತರಣಾ ವ್ಯವಸ್ಥೆ (ಅನ್ನಭಾಗ್ಯ)' ಅವಲೋಕನ. ಗುರಿ ಸಾಧಿಸುವಲ್ಲಿ ಇರುವ ಸವಾಲುಗಳು, ಅದಕ್ಕೆ ಪರಿಹಾರ ಕ್ರಮಗಳು.

•► ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ 'ಅನ್ನಭಾಗ್ಯ ಯೋಜನೆ'ಯ ಸಮರ್ಪಕ ಅನುಷ್ಠಾನಕ್ಕೆ ಎದುರಾಗುವ ಅತಿದೊಡ್ಡ ಸವಾಲು ಎಂದರೆ ಖೊಟ್ಟಿ ಮತ್ತು ಅನರ್ಹ BPL ಪಡಿತರ ಚೀಟಿಗಳನ್ನು ಪತ್ತೆಹಚ್ಚುವುದು. ತಾವು ಈ ನಿಟ್ಟಿನಲ್ಲಿ ಯಾವ್ಯಾವ ಕ್ರಮಗಳನ್ನು ಕೈಗೊಳ್ಳುವಿರಿ?

•► ಆಹಾರ ಭದ್ರತೆಗೆ ಅಗತ್ಯ ಸಾಮಥ್ರ್ಯವನ್ನು ವೃದ್ಧಿಸುವಲ್ಲಿ ಬೆಳೆವಿಜ್ಞಾನ ಕ್ಷೇತ್ರದ ಪಾತ್ರ.
.
-----------------------------

40) ನರೇಗಾ (MGNREGA) ದ ಅವಲೋಕನ. ಸಾಗಿ ಬಂದ ದಾರಿಯ ವಿಮರ್ಶೆ.

•► MGNREGA ದ ಪರಿಣಾಮಕಾರಿ ಅನುಷ್ಠಾನಕ್ಕೆ ನಿಮ್ಮ ಸಲಹೆಗಳು.

41) ರಾಜ್ಯಗಳು ಹಾಗೂ ಜಿಲ್ಲೆಗಳ ನಡುವೆ ನಿಕಟ ಸಂಬಂಧ ಏರ್ಪಡಲು ಮತ್ತು ನಿಕಟವಾಗಿ ಕೆಲಸ ಮಾಡಲು ಅಗತ್ಯವಾದ ಸೌಕರ್ಯವನ್ನು ಒದಗಿಸುವಲ್ಲಿ ಕೇಂದ್ರ ಸರ್ಕಾರದ ‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಯೋಜನೆ ಎಷ್ಟರಮಟ್ಟಿಗೆ ಮಹತ್ವವಾಗಿರುವುದು.?

42) ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಸಾಕ್ಷರತೆ ಯೋಜನೆಯ ಅನುಷ್ಠಾನ.

43) ಪ್ರಧಾನಮಂತ್ರಿ ಫಸಲು ವಿಮೆ ಯೋಜನೆ.

44) ಜೆಂಡರ್ ಪಾರ್ಕ್‍ನ ವಿಶೇಷತೆ.

45) ರಾಷ್ಟ್ರೀಯ ಇ-ಕೃಷಿ ಮಾರುಕಟ್ಟೆ
.
-----------------------------

46) ಭಾರತದ ಕರಕುಶಲ ಕಲೆಗಳ ರಫ್ತು ಉತ್ತೇಜನಕ್ಕೆ ನೀವು ಕೈಗೊಳ್ಳಬಹುದಾದ ಕ್ರಮಗಳು ಯಾವವು?

47) ಅಂತಾರಾಷ್ಟ್ರೀಯ ಹಣಕಾಸು ನಿಧಿ , ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ)  ಮತ್ತು ವಿಶ್ವಬ್ಯಾಂಕ್‌ಗಳಿಗೆ ಪರ್ಯಾಯವಾಗಿ ಬ್ರಿಕ್ಸ್ ಹೊಸ ಅಭಿವೃದ್ಧಿ ಬ್ಯಾಂಕ್.

•► ಬ್ರಿಕ್ಸ್ ಬ್ಯಾಂಕಿನಿಂದ ಭಾರತಕ್ಕೆ ಲಾಭ ಹೇಗೆ?

48) ವಿಶ್ವ ಅಪರಾಧ ನ್ಯಾಯಾಲಯ (ಇಂಟರ್‌ನ್ಯಾಷನಲ್‌ ಕ್ರಿಮಿನಲ್‌ ಕೋರ್ಟ್‌) ಅಪ್ರಸ್ತುತವೇ?

49) ದಕ್ಷಿಣ ಏಷ್ಯಾ ರಾಷ್ಟ್ರಗಳ ನಡುವೆ ಆರ್ಥಿಕ ಸಹಕಾರ ಏರ್ಪಡಿಸಲು ಮತ್ತು ಆರ್ಥಿಕ ಸ್ಥಿರತೆಯನ್ನು ಬಲಗೊಳಿಸುವ ಸಲುವಾಗಿ ಭಾರತ ಕೈಗೊಂಡ ಇತ್ತೀಚಿನ ಕ್ರಮಗಳು.

50) ವಿಶ್ವದಲ್ಲೇ ಅತ್ಯಧಿಕ ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿ ಭಾರತ ಪ್ರಸಕ್ತ ವರ್ಷವೂ ಮುಂದುವರಿದಿದೆ. ಇದು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಅವಶ್ಯಕವೇ?


.....ಮುಂದುವರಿಯುವುದು.

Tuesday, 23 February 2016

■.ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳ ತಯಾರಿ :— ಭಾಗ-II (UPSC, KPSC Examination Preparation :— PART-II)

■.ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳ ತಯಾರಿ :— ಭಾಗ-II
(UPSC, KPSC Examination Preparation :— PART-II)
━━━━━━━━━━━━━━━━━━━━━━━━━━━━━━━━━━━━━━━
ಈಗಾಗಲೇ ಭಾಗ-Iರಲ್ಲಿ
ಮುಂಬರುವ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗೆಗಳ ತಯಾರಿಗಾಗಿ ಅವಶ್ಯವೆನಿಸಿದ ಪ್ರಮುಖ ಅಂಶಗಳನ್ನು ನಿಮ್ಮ ಮುಂದಿರಿಸಿದ್ದೇನೆ, ಅದರಂತೆ ಮತ್ತಷ್ಟು ನನ್ನ ಜ್ಞಾನ ಪರಿಮಿತಿಯಲ್ಲಿ ಗಮನಕ್ಕೆ ಬಂದ ಸಂದರ್ಶನಕ್ಕೆ ಬಹುಮಟ್ಟಿಗೆ ಸಹಕಾರಿಯಾಗಬಹುದಾದ ಕೆಲವು ಮಹತ್ವದ ಪ್ರಚಲಿತ ಘಟನೆಗಳನ್ನಾಧರಿಸಿದ ಅಂಶಗಳನ್ನು ನಾನು ಈ 'ಸ್ಪರ್ಧಾಲೋಕ'ದಲ್ಲಿ ತಕ್ಕಮಟ್ಟಿಗೆ ಭಾಗಗಳಲ್ಲಿ ವಿಂಗಡಿಸಿ ನಿಮ್ಮ ಮುಂದಿಡಲು ಪ್ರಯತ್ನಿಸುತ್ತಿದ್ದೇನೆ.

ಇದರ ಹೊರತು 'ಸ್ಪರ್ಧಾಲೋಕ'ದಲ್ಲಿ ಇನ್ನೂ ಅತ್ಯುತ್ತಮ ಮಾಹಿತಿಯನ್ನು ಸೇರ್ಪಡೆಗೊಳ್ಳಬೇಕು ಎಂದೆನಿಸಿದ್ದಲ್ಲಿ, ನಿಮ್ಮ ಹತ್ತಿರವಿರುವ ಮಾಹಿತಿಯನ್ನು ಹಂಚಿಕೊಳ್ಳಿ. ಅಭ್ಯರ್ಥಿಗಳಿಗೆ ಅವರ ಗುರಿ ತಲುಪುವಲ್ಲಿ ಕೈಜೋಡಿಸಿ.


■.ಭಾಗ-II.■
━━━━━━━━

16) ಗ್ಲೋಬಲ್ ವಾರ್ಮಿಂಗ್, ಕ್ಲೈಮೇಟ್ ಚೇಂಜ್, ಸಿಓಪಿ21 ಕಾನ್ಫರನ್ಸ್ (COP 21). ಹವಾಮಾನ ವೈಪರೀತ್ಯ ಕುರಿತಂತೆ ಪ್ಯಾರಿಸಿನ ಒಪ್ಪಂದ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಬಲ್ಲದು?

•► ವಿಶೇಷವಾಗಿ ಹವಾಗುಣ ಬದಲಾವಣೆ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ (ಭಾರತ), ಸ್ಥಳೀಯ (ಕರ್ನಾಟಕ) ಹವಾಗುಣ ಬದಲಾವಣೆಗಳು,

•► ‘ಕಾರ್ಬನ್‌ ಬಜೆಟ್‌’,

•► ‘ರಾಷ್ಟ್ರೀಯವಾಗಿ ನಿಶ್ಚಯಿಸಿರುವ ಉದ್ದೇಶಿತ ಇಂಗಾಲ ಕಡಿತ ದೇಣಿಗೆ’ (Intended Nationally Determined Contributions- INDCs )

•► ‘ಭೂ ಮೇಲ್ಮೈ  ತಾಪಮಾನ’  (Land surface temperature - LST).

•► ಸೃಜನಾತ್ಮಕ ಬರ ಪರಿಹಾರ ಕ್ರಮಗಳು.

•► ಹವಾಮಾನ ಬದಲಾವಣೆ & ಸುಸ್ಥಿರ ಅಭಿವೃದ್ಧಿ. ಪರಿಸರ ಸುಸ್ಥಿರತೆ.

•► ಹವಾಮಾನ ಬದಲಾವಣೆ & ಸುಸ್ಥಿರ ಅಭಿವೃದ್ಧಿ ಗುರಿಗಳು (SDG's)
.
--------------------------------------------------------------------------------------------------------------

17) ''ಡಿಸಾಸ್ಟರ್ ಮ್ಯಾನೇಜ್ಮೆಂಟ್''ನ ಕಾರ್ಯವೈಖರಿ.

•► ಪ್ರಕೋಪ ನಿರ್ವಹಣೆಗಾಗಿ ರಾಷ್ಟ್ರೀಯ ನೀತಿ.

•► ಪ್ರಕೋಪ ನಿರ್ವಹಣೆಗಾಗಿ ಅಳವಡಿಸಿಕೊಳ್ಳುಬೇಕಾದ ದಿಟ್ಟ ಕ್ರಮಗಳು.

•► ನವೀಕರಿಸಬಹುದಾದ ಇಂಧನದ (Renewable Energy) ಸುಸ್ಥಿರ ಬಳಕೆ.


18) ಚೆನೈನಲ್ಲಿ ಸಂಭವಿಸಿದ ಜಲವಿಪ್ಲವಕ್ಕೆ ಕಾರಣಗಳು. ಭವಿಷ್ಯತ್ತಿನಲ್ಲಿ ಇಂತಹ ಅವಘಡ ಸಂಭವಿಸಿದಂತೆ ಕೈಗೊಳ್ಳಬಹುದಾದ ಧೀರ್ಘಾವಧಿಯ ಕ್ರಮಗಳು.


19) ಎಲ್‌ನಿನೋ ಮತ್ತು ಭಾರತ.

•► ಭಾರತದಲ್ಲಿ ಕೃಷಿರಂಗದ ಮೇಲೆ ಎಲ್‌ನಿನೋದ ಪ್ರಭಾವ.

•► ಎಲ್‌ನಿನೋ ಮತ್ತು ಭಾರತದ ಸಾಮಾಜಿಕ ವ್ಯವಸ್ಥೆಯ ವೈಪರೀತ್ಯ.


20).ಹಿಮಾಲಯ ಪ್ರದೇಶದಲ್ಲಿ ಪದೇ ಪದೇ ಭೂಕಂಪ ಉಂಟಾಗಲು ಕಾರಣಗಳು ಏನು? (ನೇಪಾಳದಲ್ಲಿ ಹಾಗೂ ಭಾರತದಲ್ಲೂ ಇತ್ತೀಚೆಗೆ ಸಂಭವಿಸಿದ ಭೂಕಂಪಗಳನ್ನು ಗಮನದಲ್ಲಿಟ್ಟುಕೊಂಡು)

•► ಕರ್ನಾಟಕದಲ್ಲಿ ಭೂಕಂಪ ಸಂಭವಿಸುವ ಸಾಧ್ಯತೆಗಳು ಇವೆಯೇ?

•► ಭೂಕಂಪದ ಹಾನಿ ಕಡಿಮೆ ಮಾಡಲು ತಂತ್ರಜ್ಞಾನಗಳಿವೆಯೇ? ಯಾವವು?

•► ಭಾರತದ ಯಾವ ಪ್ರದೇಶಗಳು ಭೂಕಂಪದ ಅಪಾಯ ಎದುರಿಸುತ್ತಿವೆ? ಏಕೆ?

•► ಜಲಾಶಯಗಳೂ ಭೂಕಂಪಕ್ಕೆ ಕಾರಣವಾಗುತ್ತವೆ ಎನ್ನುತ್ತಾರೆ, ನಿಜವೇ? ಪ್ರಮುಖ ಕಾರಣಗಳಾವವು?


21) ಭಾರತದ ಕೃಷಿರಂಗದ ಮೇಲೆ ಹವಾಮಾನ ವೈಪರೀತ್ಯದ ಪ್ರಭಾವ. ಪರಿಹಾರ ಕ್ರಮಗಳು.

•► ಭಾರತದ ಆರ್ಥಿಕತೆಯ ಬೆಳವಣಿಗೆಯಲ್ಲಿ ಕೃಷಿರಂಗದ ಪ್ರಸ್ತುತ ಕೊಡುಗೆ.

•► ಭಾರತದ ಕೃಷಿರಂಗದ ಯಾಂತ್ರಿಕರಣ & ಜಾಗತೀಕರಣ.

•► ಸುಸ್ಥಿರ ಕೃಷಿ ಅಭಿವೃದ್ಧಿ.
.
--------------------------------------------------------------------------------------------------------------

22) ಕೊಲಿಜಿಯಂ Vs ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ.

•► ಕೊಲಿಜಿಯಂ ಯಾಕೆ ಪ್ರಸ್ತುತ?

•► ಕೊಲಿಜಿಯಂ ರದ್ದತಿಗೆ ಕಾರಣೀಭೂತವಾದ ಬೆಳವಣಿಗೆಗಳು.

•► ಕೊಲಿಜಿಯಂ & ರಾಜಕೀಯ ಪ್ರಭಾವ.

•► ಭಾರತದ ನ್ಯಾಯಾಂಗ ಎಷ್ಟು ಸ್ವತಂತ್ರ?

•► NJAC ರದ್ದತಿ ಸೂಕ್ತವೇ?


23) ನ್ಯಾಷನಲ್ ಹೆರಾಲ್ಡ್ ಖರೀದಿ ಪ್ರಕರಣ.


24) ಮಾಹಿತಿ ಹಕ್ಕು ಕಾಯ್ದೆ(ಆರ್​ಟಿಐ). ಸವಾಲುಗಳು.

•► ದುರ್ಬಲವಾಗುತ್ತಿದೆಯೇ ಆರ್‌ಟಿಐ?


25) ‘ವ್ಯಾಪಂ’ ಹಗರಣ.

•► ಅತ್ಯಂತ ಗಂಭೀರವಾದ ವ್ಯಾಪಂ ಹಗರಣ ಕುರಿತು ಸಿಬಿಐ ಅಥವಾ ಸ್ವತಂತ್ರ ತನಿಖೆ ಏಕಿಲ್ಲ?

•► ಶಿಕ್ಷಣ & ರಾಜಕಾರಣ.  
.
--------------------------------------------------------------------------------------------------------------

26) ವಿಶೇಷವಾಗಿ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗಾಗಿ...

•► ಹವಾಮಾನ ಬದಲಾವಣೆಯನ್ನು ತಡೆಗಟ್ಟಲು ಕರ್ನಾಟಕದ ಪ್ರಯತ್ನ.

•► “ಜಾಗತೀಕರಣದ ಹಿನ್ನೆಲೆಯಲ್ಲಿ ಕನ್ನಡಕ್ಕಿರುವ ಸವಾಲುಗಳು”

•► ಭಾರತೀಯ ಸಂವಿಧಾನಕ್ಕೆ ಕನ್ನಡಿಗರ ಕೊಡುಗೆ ಏನು?

•► ಕರ್ನಾಟಕದಲ್ಲಿ ಮಾಹಿತಿ -ತಂತ್ರಜ್ಞಾನದ ಬೆಳವಣಿಗೆ. ಜಾಗತಿಕ ಮಟ್ಟದಲ್ಲಿ ವಿಸ್ತರಿಸುವಲ್ಲಿ ಎದುರಿಸುತ್ತಿರುವ ಸವಾಲುಗಳು. ಪರಿಹಾರ ಕ್ರಮಗಳು.

•► ‘ಕರ್ನಾಟಕ ಕೃಷಿ, ವಾಣಿಜ್ಯ ಹಾಗೂ ಆಹಾರ ಸಂಸ್ಕರಣೆ ನೀತಿ-2015’.

•► ತುಮಕೂರು ಮೆಗಾಫುಡ್ ಪಾರ್ಕ್ ನ ವಿಶೇಷತೆ ಏನು? ಸವಾಲುಗಳು.

•► ಬರ ಸಂಭಾವ್ಯ ಪ್ರದೇಶದಲ್ಲಿ ದೇಶದಲ್ಲೇ ಎರಡನೇ ಸ್ಥಾನ ಕರ್ನಾಟಕಕ್ಕಿದೆ. ನೀವು ಕೈಗೊಳ್ಳಬಹುದಾದ ಬರ ನಿರ್ವಹಣೆಯ ಸೂಕ್ತ ಕ್ರಮಗಳು ಯಾವವು?
.
--------------------------------------------------------------------------------------------------------------

27) ವಿಶ್ವ ವ್ಯಾಪಾರ ಸಂಸ್ಥೆ(ಡಬ್ಲ್ಯುಟಿಸಿ) ಮತ್ತು ಭಾರತದ ಆಹಾರ ಭದ್ರತೆ.(ವಿಶೇಷವಾಗಿ ಕೃಷಿ - ಆಹಾರ ಸಬ್ಸಿಡಿಗಳು).. ಇತ್ತೀಚಿನ ಬೆಳವಣಿಗೆಗಳು.

•► ವಿಶ್ವ ವ್ಯಾಪಾರ ಸಂಘಟನೆಯ ವ್ಯಾಪಾರ ಸೌಲಭ್ಯ ಒಪ್ಪಂದದ ಸವಾಲು ಮತ್ತು ಸಾರ್ಕ್‌ ರಾಷ್ಟ್ರಗಳ ಮೇಲೆ ಇದರ ಪರಿಣಾಮ - ಪರಿಹಾರ.


28) ವಿಶ್ವ ವಾಣಿಜ್ಯ ಸಂಘಟನೆಯ ಜಾಗತೀಕರಣ. ಭಾರತ
.
--------------------------------------------------------------------------------------------------------------

29) ಪರಿಷೃತ ಬಾಲಾಪರಾಧಿ ಕಾನೂನು.. ನಿಮ್ಮ ಅನಿಸಿಕೆಗಳು.

•► ಈ ಕಾನೂನು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಬಲ್ಲದು?

•► ಬಾಲಾಪರಾಧ ವಯಸ್ಸಿನ ಮಿತಿ ಇಳಿಕೆ ಸಮಂಜಸವೇ?

•► ಅಪರಾಧಿ ಮನೋಭಾವ ಹೆಚ್ಚಾಗಲು ಸಂವಹನ ಮಾಧ್ಯಮಗಳ ಕೊಡುಗೆ.
.
--------------------------------------------------------------------------------------------------------------

30) Terrorism as a Global Threat.

•► ಮಧ್ಯೆ ಏಷ್ಯಾದಲ್ಲಿ ಭಯೋತ್ಪಾದನೆ. ಅದರ ವಿಸ್ತರಣೆಗೆ ಕಾರಣಗಳು.

•► ISISI ಕಡೆಗೆ ಭಾರತೀಯ ಯುವಕರ ಆಕರ್ಷಣೆಗೆ ಕಾರಣಗಳು & ತಡೆಯುವ ಕ್ರಮಗಳು.        

•► ಇರಾಕ್‌ ಮತ್ತು ಸಿರಿಯಾ ದೇಶಗಳು ಕುಸಿಯುವುದನ್ನು ತಡೆಯುವುದರ ಕುರಿತು ನಿಮ್ಮ ಅಭಿಪ್ರಾಯಗಳೇನು?

•► ಅಂತಾರಾಷ್ಟ್ರೀಯ ಶಾಂತಿ-ಭದ್ರತೆಗಾಗಿ 'ಹಿಂಸಾತ್ಮಕ ತೀವ್ರವಾದವನ್ನು ತಡೆಯುವಲ್ಲಿ ನಿಮ್ಮ ಕ್ರಿಯಾ ಯೋಜನೆ'.

•► ಬ್ರಿಟನ್‌: ನೂತನ ವಲಸೆ ನೀತಿ- ಭಾರತದ ಮೇಲಾಗಿ ಪರಿಣಾಮ.

.....ಮುಂದುವರಿಯುವುದು.