☀ದೇಶಕ್ಕೆ ಸ್ವತಂತ್ರ ದಿಕ್ಸೂಚಿ ವ್ಯವಸ್ಥೆ- ️ಐತಿಹಾಸಿಕ ಸಾಧನೆ ಮಾಡಿದ ಇಸ್ರೋ ವಿಜ್ಞಾನಿಗಳು
(India's Independent Navigation System- Achieved by ISRO scientists)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)
ದೇಶಕ್ಕೆ ಸ್ವತಂತ್ರ ದಿಕ್ಸೂಚಿ ವ್ಯವಸ್ಥೆಯನ್ನು ಕಲ್ಪಿಸುವ ಐತಿಹಾಸಿಕ ಪ್ರಕ್ರಿಯೆ ಕೊನೆಯ ಹಂತವನ್ನು ಇಸ್ರೋ ಪೂರ್ಣಗೊಳಿಸಿದೆ. ದಿಕ್ಸೂಚಿ ವ್ಯವಸ್ಥೆಯ ಕೊನೆಯ ಹಾಗೂ ಏಳನೆಯ ಉಪಗ್ರಹವನ್ನು ಭೂಸ್ಥಿರ ಕಕ್ಷೆಗೆ ಹಾರಿಬಿಡುವ ಮೂಲಕ ವಿಶ್ವದಲ್ಲಿ ಸ್ವತಂತ್ರ ದಿಕ್ಸೂಚಿ ವ್ಯವಸ್ಥೆಯನ್ನು ಹೊಂದಿರುವ ಐದನೇ ದೇಶವಾಗಿ ಭಾರತ ಇತಿಹಾಸ ಬರೆದಿದೆ.
ಈ ವ್ಯವಸ್ಥೆಗೆ ನಾವಿಕ್ಎಂದು ಹೆಸರಿಡಲಾಗಿದೆ.
ಇಸ್ರೋದ ಪಿಎಸ್ಎಲ್ವಿ ರಾಕೆಟ್ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮಧ್ಯಾಹ್ನ 12.50ಕ್ಕೆ ಐಆರ್ಎನ್ಎಸ್ಎಸ್ 1ಜಿ(IRNSS-1G)ಯನ್ನು ಉಡ್ಡಯನಗೊಳಿಸಿತು. ಕೇವಲ 20 ನಿಮಿಷಗಳಲ್ಲಿ ಉಪಗ್ರಹ ತನ್ನ ಕಕ್ಷೆ ತಲುಪಿದೆ. ಇದರಿಂದ ಅಮೆರಿಕದ ಜಿಪಿಎಸ್ ವ್ಯವಸ್ಥೆಯ ಮೇಲೆ ಭಾರತದ ಅವಲಂಬನೆ ಕೊನೆಯಾಗಿದೆ.
ಸದ್ಯ ಕೇವಲ ಅಮೆರಿಕ, ರಷ್ಯಾ, ಚೀನಾ ಮತ್ತು ಐರೋಪ್ಯ ಒಕ್ಕೂಟಗಳು ಸ್ವದೇಶಿ ದಿಕ್ಸೂಚಿ ಉಪಗ್ರಹಗಳನ್ನು ಹೊಂದಿವೆ.
ಎಲ್ಲ 7 ಸೆಟಲೈಟ್ಗಳನ್ನು ಕರ್ನಾಟಕದ ಬ್ಯಾಲಾಳುವಿನಲ್ಲಿರುವ ಇಸ್ರೋ ಕೇಂದ್ರದಿಂದಲೇ ನಿಯಂತ್ರಿಸಲಾಗುತ್ತದೆ. ಅಲ್ಲದೆ ದೇಶದ 21 ಭಾಗಗಳಲ್ಲೂ ಕೇಂದ್ರಗಳಿದ್ದು, ಇಲ್ಲಿಂದ ಸೆಟಲೈಟ್ಗಳ ಚಲನೆ ಬಗ್ಗೆ ದತ್ತಾಂಶ ಸಂವಹನ ನಡೆಯಲಿದೆ.
*. ಒಟ್ಟು ವೆಚ್ಚ 1456 ಕೋಟಿ ರೂ.
*. ಸೆಟಲೈಟ್ಗೆ ಸರಾಸರಿ 150 ಕೋಟಿ ರೂ. ವೆಚ್ಚ
*. 2010 ಏಪ್ರಿಲ್ನಲ್ಲಿ ಯೋಜನೆಗೆ ರೂಪುರೇಷೆ
*. 2015ರಲ್ಲೇ ಯೋಜನೆ ಅಂತಿಮಗೊಳಿಸುವ ಗುರಿ
*. 7 ಸೆಟಲೈಟ್ಗಳ ಗುಚ್ಛದಿಂದ ದಿಕ್ಸೂಚಿ ವ್ಯವಸ್ಥೆ
★ ಉಪಗ್ರಹ ಉಡಾವಣಾ ದಿನ:
ಐಆರ್ಎನ್ಎಸ್ಎಸ್-1ಎ 2013 ಜುಲೈ 1
ಐಆರ್ಎನ್ಎಸ್ಎಸ್-1ಬಿ 2014 ಏಪ್ರಿಲ್ 4
ಐಆರ್ಎನ್ಎಸ್ಎಸ್-1ಸಿ 2014 ಅಕ್ಟೋಬರ್ 16
ಐಆರ್ಎನ್ಎಸ್ಎಸ್-1ಡಿ 2015 ಮಾರ್ಚ್ 28
ಐಆರ್ಎನ್ಎಸ್ಎಸ್-1ಇ 2016 ಜನವರಿ 20
ಐಆರ್ಎನ್ಎಸ್ಎಸ್-1ಎಫ್ 2016 ಮಾರ್ಚ್ 10
ಐಆರ್ಎನ್ಎಸ್ಎಸ್-1ಜಿ 2016 ಏಪ್ರಿಲ್ 28
★ ಸೆಟ್‍ಲೈಟ್‍ಗಳ ವಿವರ:
ಈಗ ಕಕ್ಷೆಗೇರಿರುವುದು 7 ಸೆಟಲೈಟ್ಗಳು. ಈ ಪೈಕಿ 3 ಸೆಟಲೈಟ್ಗಳು ಭೂಸ್ಥಿರ ಕಕ್ಷೆ ಯಲ್ಲಿದ್ದರೆ, ಇನ್ನು 4 ಸೆಟಲೈಟ್ ಭೂಮಿಯ ಪರಿಭ್ರಮಣೆ ಮಾಡುತ್ತವೆ. ಆದರೆ ತುರ್ತು ಪರಿಸ್ಥಿತಿಗಾಗಿ ಭೂಮಿಯ ಮೇಲೆ 2 ಸೆಟಲೈಟ್ಗಳನ್ನು ಸಿದ್ಧಗೊಳಿಸಿ ಇಡಲಾಗಿದೆ. ಹೀಗಾಗಿ ದಿಕ್ಸೂಚಿ ವ್ಯವಸ್ಥೆಗೆ ಇಸ್ರೋ ಒಟ್ಟು 9 ಸೆಟಲೈಟ್ಗಳನ್ನು ನಿರ್ವಿುಸಿದೆ.
★ ಹಿನ್ನೆಲೆ:
ಪಾಕಿಸ್ತಾನಿ ಪಡೆಗಳು 1999ರಲ್ಲಿ ಕಾರ್ಗಿಲ್ಗೆ ದಾಳಿ ಮಾಡಿದ ಸಂದರ್ಭ ಚಾಲ್ತಿಯಲ್ಲಿದ್ದಿದ್ದು, ಅಮೆರಿಕದ ಜಿಪಿಎಸ್ ವ್ಯವಸ್ಥೆ. ಪಾಕ್ ಪಡೆಗಳ ಚಲನವಲನ ಕಂಡುಕೊಳ್ಳಲು ಅಮೆರಿಕದ ಜಿಪಿಎಸ್ ವ್ಯವಸ್ಥೆಯನ್ನು ಬಳಸಿಕೊಳ್ಳುವುದಕ್ಕೆ ಅವಕಾಶ ನೀಡುವಂತೆ ಭಾರತ ಕೋರಿತ್ತು. ಆದರೆ ಅಮೆರಿಕ ಇದಕ್ಕೆ ಅವಕಾಶ ನೀಡಲಿಲ್ಲ. ಆಗಲೇ ಸ್ವತಂತ್ರ ದಿಕ್ಸೂಚಿ ವ್ಯವಸ್ಥೆಯ ಅಗತ್ಯತೆಯ ಬಗ್ಗೆ ಅರಿತುಕೊಂಡ ಭಾರತ, ಆ ದಿಸೆಯಲ್ಲಿ ಪ್ರಯತ್ನ ಆರಂಭಿಸಿತ್ತು.
★ ಸೆಟ್‍ಲೈಟ್ ದಿಕ್ಸೂಚಿ ವ್ಯವಸ್ಥೆಯ ಬಗೆಗಿನ ಮಾಹಿತಿ:
ಸೆಟಲೈಟ್ಗಳಿಂದ ದಿಕ್ಸೂಚಿ ವ್ಯವಸ್ಥೆಯನ್ನು ಒದಗಿಸಬಹುದು ಎಂಬ ಕಲ್ಪನೆ ಮೂಡಿದ್ದು ಅಮೆರಿಕದಲ್ಲಿ. 1960ರ ಏಪ್ರಿಲ್ 13ರಂದು ಅಮೆರಿಕದಲ್ಲಿ ಮೊದಲ ಬಾರಿಗೆ ಟ್ರಾನ್ಸಿಟ್ 1ಬಿ ಎಂಬ ಸೆಟಲೈಟನ್ನು ಕಕ್ಷೆಗೆ ಉಡಾವಣೆ ಮಾಡಲಾಗಿತ್ತು. ಆದರೆ ದಿಕ್ಸೂಚಿ ವ್ಯವಸ್ಥೆ ರೂಪಿಸಲು ಆಗ ಇದ್ದ ದೊಡ್ಡ ಸಮಸ್ಯೆಯೇನೆಂದರೆ ಸಮಯ ಬದಲಾವಣೆಯದ್ದು. ಸಾಮಾನ್ಯವಾಗಿ ಜಿಪಿಎಸ್ ಬಳಸುವಾಗ ನಾಲ್ಕು ಸೆಟಲೈಟ್ಗಳು ನಮಗೆ ದಾರಿ ತೋರಿಸಲು ಸಹಾಯ ಮಾಡುತ್ತಿರುತ್ತವೆ. ಮೂರು ಸೆಟಲೈಟ್ಗಳು ದಿಕ್ಕು ತೋರಿಸಿದರೆ ನಾಲ್ಕನೆಯದು ಸಮಯದ ಅಂತರವನ್ನು ವಿವರಿಸುತ್ತದೆ. ಆದರೆ ಗುರುತ್ವಾಕರ್ಷಣೆಯ ಪ್ರಭಾವ ಕಡಿಮೆಯಾದಂತೆ ಕಾಲದ ಓಟವೂ ನಿಧಾನವಾಗುತ್ತದೆ. ಅಂದರೆ ಭೂಮಿಯ ಮೇಲಿನ ಸಮಯಕ್ಕೂ ಬಾಹ್ಯಾಕಾಶದಲ್ಲಿನ ಸಮಯಕ್ಕೂ ದಿನಕ್ಕೆ 38 ಮಿಲಿ ಸೆಕೆಂಡುಗಳಷ್ಟು ವ್ಯತ್ಯಾಸವಿದೆ. ಈಗ ಸೆಟಲೈಟ್ಗಳಲ್ಲಿ ನಿತ್ಯವೂ ಈ ಸಮಯವನ್ನು ಸರಿಪಡಿಸಲಾಗುತ್ತದೆ. ಅಂದಹಾಗೆ ಬಾಹ್ಯಾಕಾಶದಲ್ಲಿನ 38 ಮಿಲಿ ಸೆಕೆಂಡಿನ ವ್ಯತ್ಯಾಸ ಭೂಮಿಯ ಮೇಲೆ 10 ಕಿ.ಮೀ.ಗಳ ಅಂತರಕ್ಕೆ ಕಾರಣವಾಗುತ್ತದೆ.

(Link to Join Telegram ...https://telegram.me/spardhaloka)
No comments:
Post a Comment