"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday, 2 May 2016

☀ಜನೆವರಿ -2016ರ ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (ಭಾಗ -28) (General knowledge on Current Affairs (Part-28)) ☆.(ಪ್ರಚಲಿತ ಘಟನೆಗಳ ಕ್ವಿಜ್)

☀ಜನೆವರಿ -2016ರ ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (ಭಾಗ -28)
(General knowledge on Current Affairs (Part-28))
☆.(ಪ್ರಚಲಿತ ಘಟನೆಗಳ ಕ್ವಿಜ್)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)
 

- ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯವಾದ ಮುಖ್ಯವಾಗಿ ಇತ್ತೀಚಿನ ಪ್ರಸಕ್ತ ವಿದ್ಯಮಾನಗಳ ಬಗ್ಗೆ ವಿಶೇಷವಾಗಿ ಅದು ಸಾಹಿತ್ಯ, ಕಲೆ, ಸಂಸ್ಕೃತಿ, ವಿಜ್ಞಾನ, ರಾಜಕೀಯ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳ ವಿದ್ಯಮಾನಗಳನ್ನು ಅಯಾ ದಿನದ ದಿನಪತ್ರಿಕೆಗಳನ್ನು ಕಲೆಹಾಕಿ ಸಂಕ್ಷೇಪಿಸಿ 'ಸ್ಪರ್ಧಾಲೋಕ'ದಲ್ಲಿ ಅಪಡೆಟ್ ಮಾಡಲು ಒಂದು ಚಿಕ್ಕ ಪ್ರಯತ್ನ.


1037) ಇತ್ತೀಚೆಗೆ ವಿಶ್ವದ 6ನೇ ದೊಡ್ಡ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪೇಸ್ ಬುಕ್  ಸಾಮಾಜಿಕ ಜಾಲತಾಣದ ಸಹ-ಸಂಸ್ಥಾಪಕ ಮತ್ತು ಸಿಇಒ ಯಾರು?
••► ಮಾರ್ಕ್ ಜುಕರ್ ಬರ್ಗ್ .


1038) ಇತ್ತೀಚೆಗೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಯುಎಸ್‍ಎಫ್‍ಡಿಎ) ಅನುಮತಿ ನೀಡಿದ ಜಿಂಬ್ರೇಸ್ ಸಿಮ್‍ಟಚ್ ಇಂಜಕ್ಷನ್ ಸಿಂಗಲ್ ಡೋಸ್‍ ವು ಯಾವ ಕಾಯಿಲೆಗೆ ಬಳಸಲಾಗುತ್ತದೆ?
••► ಮೈಗ್ರೇನ್ ತೀವ್ರ ತಲೆನೋವು.


1039) ಇತ್ತೀಚೆಗೆ 2016ನೇ ಸಾಲಿನ ಪ್ರತಿಷ್ಠಿತ ವಿಲಿಯಂ ಇ.ಕಾಲ್ಬಿ ಪ್ರಶಸ್ತಿ ಪಡೆದವರು ಯಾರು?
••► ನಿಶಾದ್ ಹಜಾರಿ


1040) ಯಾವ ಕೃತಿಗಾಗಿ?
••► “ಮಿಡ್‍ನೈಟ್ಸ್ ಫ್ಯೂರೀಸ್: ದ ಡೆಡ್ಲಿ ಲೆಗೆಸಿ ಆಫ್ ಇಂಡಿಯಾಸ್ ಪಾರ್ಟಿಷನ್”


1041) “ಮಿಡ್‍ನೈಟ್ಸ್ ಫ್ಯೂರೀಸ್: ದ ಡೆಡ್ಲಿ ಲೆಗೆಸಿ ಆಫ್ ಇಂಡಿಯಾಸ್ ಪಾರ್ಟಿಷನ್” ಕೃತಿಯ ವಿಶೇಷತೆ :
••► 1947ರ ದೇಶ ವಿಭಜನೆ ಸಂದರ್ಭದ ಪರಿಸ್ಥಿತಿ ಹಾಗೂ ಇದರ ಸುತ್ತ ನಡೆದ ಹಿಂಸಾಚಾರಗಳ ಮೇಲೆ ಬೆಳಕು ಚೆಲ್ಲುವ ಕೃತಿಯಾಗಿದೆ.


1042) ಇತ್ತೀಚೆಗೆ ಯಾವ ಸ್ವಾತಂತ್ರ್ಯ ಸೇನಾನಿಯ 150ನೇ ಹುಟ್ಟುಹಬ್ಬದ ಗೌರವಾರ್ಥ ನೆನಪಿಗಾಗಿ  150 ರೂಪಾಯಿಗಳ ನಾಣ್ಯವನ್ನು ಭಾರತ ಸರ್ಕಾರವು ಬಿಡುಗಡೆ ಮಾಡಿತು?
••► ಲಾಲಾ ಲಜಪತರಾಯ್


1043) ಲಾಲಾ ಲಜಪತರಾಯ್ ಅವರ 150ನೇ ಹುಟ್ಟುಹಬ್ಬದ ವಿಶೇಷತೆ :
••► ಕೇಂದ್ರದ ಸಂಸ್ಕøತಿ ಸಚಿವಾಲಯವು ಲಾಲಾ ಲಜಪತರಾಯ್ ಅವರ 150ನೇ ಹುಟ್ಟುಹಬ್ಬವನ್ನು 2015ರ ಜನವರಿ 28ರಿಂದ 2016ರ ಜನವರಿ 28ರವರೆಗೆ ದೇಶಾದ್ಯಂತ ಹಮ್ಮಿಕೊಂಡಿತ್ತು.


1044) ಇತ್ತೀಚೆಗೆ ಪ್ರತಿಷ್ಠಿತ ವೀರಮಣಿ ಸಾಮಾಜಿಕ ನ್ಯಾಯ ಪ್ರಶಸ್ತಿಗೆ ಆಯ್ಕೆಗೊಂಡ ರಾಜ್ಯವೊಂದರ ಮುಖ್ಯಮಂತ್ರಿ ಯಾರು?
••► ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್


1045) ವೀರಮಣಿ ಸಾಮಾಜಿಕ ನ್ಯಾಯ ಪ್ರಶಸ್ತಿ ವಿಶೇಷತೆ :
••► ಅಮೆರಿಕ ಮೂಲದ ಪೆರಿಯಾರ್ ಇಂಟರ್‍ನ್ಯಾಷನಲ್ ಸಂಸ್ಥೆ ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡುತ್ತದೆ.
* ದೇಶದಲ್ಲಿ ಜಾತಿಪದ್ಧತಿ ವಿರುದ್ಧ ಸಿಡಿದೆದ್ದು, ದುರ್ಬಲ ವರ್ಗದವರ ಕಲ್ಯಾಣಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ದ್ರಾವಿಡಾರ್ ಕಳಗಂ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಕೆ.ವೀರಮಣಿಯವರ ಹೆಸರಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ.
* ಈ ಪ್ರಶಸ್ತಿಯು ಪ್ರಶಸ್ತಿ ಫಲಕ ಹಾಗೂ ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿದೆ.
* ಮಾಜಿ ಪ್ರಧಾನಿ ವಿ.ಪಿ.ಸಿಂಗ್, ಸೀತಾರಾಂ ಕೇಸರಿ, ಎಂ.ಕರುಣಾನಿಧಿ ಹಾಗೂ ಮಾಯಾವತಿ ಈ ಹಿಂದೆ ಈ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದರು.


1046) ಇತ್ತೀಚೆಗೆ ಕೇಂದ್ರ ಸರ್ಕಾರವು ಯಾರನ್ನು ಅಂಗವಿಕಲರ ಮುಖ್ಯ ಆಯುಕ್ತರಾಗಿ ನೇಮಕ ಮಾಡಿದೆ?
••► ಡಾ. ಕಮಲೇಶ್ ಕುಮಾರ್ ಪಾಂಡೆ


1047) ಜೂಲನ್ ಗೋಸ್ವಾಮಿಯವರು ಯಾವ ಕ್ರೀಡೆಯಲ್ಲಿ ಪ್ರಸಿದ್ಧರು?
••► ಕ್ರಿಕೆಟ್‍


1048) ಮಾರ್ಟಿನಾ ಹಿಂಗೀಸ್ ಯಾವ ದೇಶದ ಕ್ರೀಡಾಪಟು?
••► ಸ್ವಿಟ್ಜರ್‍ಲೆಂಡ್


1049) ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನೆ ಪಡೆ ಕೇಂದ್ರ ಕಚೇರಿ ಎಲ್ಲಿದೆ.?
••► ದೆಹಲಿ


1050) ಇತ್ತೀಚೆಗೆ ರಾಷ್ಟ್ರೀಯ ಉಷ್ಣವಿದ್ಯುತ್ ನಿಗಮ (ಎನ್‍ಟಿಪಿಸಿ)ದ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಗಿದೆ?
••► ಗುರುದೀಪ್ ಸಿಂಗ್


1051) (ಎನ್‍ಟಿಪಿಸಿ) ಕುರಿತ ಹೆಚ್ಚಿನ ಮಾಹಿತಿ :
••► ಇವರ ನೇಮಕಾತಿಗೆ ಶೋಧನಾ ಸಮಿತಿಯ ವಿಧಾನವನ್ನು ಅನುಸರಿಸಲಾಗಿದ್ದು, ಮಹಾರತ್ನ ಕಂಪನಿಯೊಂದರ ಅತ್ಯುನ್ನತ ಹುದ್ದೆಗೆ ನೇಮಕಗೊಂಡ ಮೊದಲ ವ್ಯಕ್ತಿ ಇವರಾಗಿದ್ದಾರೆ.


1052) ಇತ್ತೀಚೆಗೆ (ಜನವರಿ 28, 2016ರಂದು) ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರಿಂದ ರಾಷ್ಟ್ರಪತಿ ಭವನದಲ್ಲಿ ಲೋಕಾರ್ಪಣೆಗೊಂಡ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ 2ನೇ ಆತ್ಮಚರಿತ್ರೆ ಯಾವುದು?
••► ‘The Turbulent Years- 1980-1996’.


1053) ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆತ್ಮಚರಿತ್ರೆ ಕುರಿತ ಹೆಚ್ಚಿನ ಮಾಹಿತಿ  :
••► ‘The Dramatic Decade- The Indira Gandhi Years’ ಎಂಬ ಜೀವನ ವೃತ್ತಾಂತದ ಮೊದಲ ಸಂಪುಟ 2014ರ ಡಿಸೆಂಬರ್ 11ರಂದು ಹೊರಬಂದಿತ್ತು.


1054) ಇತ್ತೀಚೆಗೆ ವೆಲ್ತ್ ಎಕ್ಸ್ ಬಿಡುಗಡೆ ಮಾಡಿರುವ ವಿಶ್ವದ 50 ಶತಕೋಟಿಪತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಮೂವರು ಭಾರತೀಯ ಶ್ರೀಮಂತರು ಯಾರು?
••► ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ,
★ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್‍ಜಿ ಹಾಗೂ
★ಸನ್ ಫಾರ್ಮಾ ನಿರ್ದೇಶಕ ದಿಲೀಪ್ ಸಾಂಘ್ವಿ


1055) ಇತ್ತೀಚೆಗೆ ವೆಲ್ತ್ ಎಕ್ಸ್ ಬಿಡುಗಡೆ ಮಾಡಿರುವ ವಿಶ್ವದ 50 ಶತಕೋಟಿಪತಿಗಳ ಪಟ್ಟಿಯಲ್ಲಿ ಮೊದಲಸ್ಥಾನ ಪಡೆದ ಶ್ರೀಮಂತ ಯಾರು?  ••► ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್‍ಗೇಟ್ಸ್


1056) ವೆಲ್ತ್ ಎಕ್ಸ್ ಪಟ್ಟಿಯ ಕುರಿತ ಹೆಚ್ಚಿನ ಮಾಹಿತಿ  :
••► ಟಾಪ್ 5 ಶತಕೋಟ್ಯಾಧಿಪತಿಗಳು
ನಂ. ಹೆಸರು ಆಸ್ತಿ ಮೌಲ್ಯ ರೂ ಗಳಲ್ಲಿ. ದೇಶ
1. ಬಿಲ್ ಗೇಟ್ಸ್ 5.9 ಲಕ್ಷಕೋಟಿ ಅಮೆರಿಕ
2. ಅಮಾನ್ಸಿಯೊ 4.5 ಲಕ್ಷಕೋಟಿ ಸ್ಪೇನ್
3. ವಾರೆನ್ ಬಫೆಟ್ 4.1ಲಕ್ಷಕೋಟಿ ಅಮೆರಿಕ
4. ಜೆಫ್ರಿ ಬೆಜೊಸ್ 3.8ಲಕ್ಷಕೋಟಿ ಅಮೆರಿಕ
5. ಡೇವಿಡ್ ಕೊಚ್ 3.2ಲಕ್ಷಕೋಟಿ ಅಮೆರಿಕ


1057) ಇತ್ತೀಚೆಗೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಅಭಿವೃದ್ಧಿಗೊಳ್ಳಲಿರುವ ಮೊದಲ 20 ನಗರಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಈ ಪೈಕಿ ಕರ್ನಾಟಕ ರಾಜ್ಯದ ಯಾವ ಎರಡು ನಗರಗಳು ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ?
••► ದಾವಣಗೆರೆ ಮತ್ತು ಬೆಳಗಾವಿ


1058) ಸ್ಮಾರ್ಟ್ ಯೋಜನೆಗೆ ಆಯ್ಕೆಯಾದ 20 ನಗರಗಳ ಕುರಿತ ಹೆಚ್ಚಿನ ಮಾಹಿತಿ  :
1. ಭುವನೇಶ್ವರ 78.83 %
2. ಪುಣೆ 77.43 %
3. ಜೈಪುರ 73.83 %
4. ಸೂರತ್ 68.16 %
5. ಕೊಚ್ಚಿ 66.98 %
6. ಅಹ್ಮದಾಬಾದ್ 66.85 %
7. ಜಬಲ್ ಪುರ 63.03 %
8. ವಿಶಾಖಪಟ್ಟಣ 61.12 %
9. ಸೋಲಾಪುರ 60.83 %
10. ದಾವಣಗೆರೆ 59.93 %
11. ಇಂದೋರ್ 59.89 %
12. ನವದೆಹಲಿ 59.63 %
13. ಕೊಯಮತ್ತೂರು 58.74 %
14. ಕಾಕಿನಾಡ 58.19 %
15. ಬೆಳಗಾವಿ 57.99 %
16. ಉದಯಪುರ 57.91 %
17. ಗುವಾಹಟಿ 57.66 %
18. ಚೆನ್ನೈ 56.16 %
19. ಲುಧಿಯಾನ 55.84 %
20. ಭೋಪಾಲ್ 55.47 %


1059) ಅಂಟಾರ್ಟಿಕ ಉಪಖಂಡದ ಎತ್ತರ ತುತ್ತತುದಿಯ ಶಿಖರ?
••►  ಮೌಂಟ್ ವಿನ್ಸನ್ ಮಸ್ಸಿಫ್ (17 ಸಾವಿರ ಅಡಿ ಎತ್ತರ)


1060) ತಾಂಜಾನಿಯಾದ (ದಕ್ಷಿಣ ಆಫ್ರಿಕ) ಎತ್ತರ ತುತ್ತತುದಿಯ ಶಿಖರ?
••► ಮೌಂಟ್ ಕಿಲಿಮಂಜರೊ,


1061) ದಕ್ಷಿಣ ಅಮೆರಿಕದ ಎತ್ತರ ತುತ್ತತುದಿಯ ಶಿಖರ?
••► ಅಕೊಂಗುವಾ


1062) ರಷ್ಯಾದ ಎತ್ತರ ತುತ್ತತುದಿಯ ಶಿಖರ?
••► ಮೌಂಟ್ ಎಲ್ಬರ್ಸ್


1063) ಇತ್ತೀಚೆಗೆ ಥಾಯ್ ಅಕ್ಕಿ ರಫ್ತುದಾರರ ಸಂಘಟನೆ ವರದಿಯ ಪ್ರಕಾರ 2015ರಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಅಕ್ಕಿಯನ್ನು ರಫ್ತು ಮಾಡಿದ ದೇಶ ಯಾವುದು?
••► ಭಾರತ


1064) ಅಕ್ಕಿ ರಫ್ತುದಾರರ ಸಂಘಟನೆ ವರದಿಯ ಪ್ರಕಾರ 2015ರ ಹೆಚ್ಚಿನ ಮಾಹಿತಿ  :
••► ಥಾಯ್ಲೆಂಡ್ ಎರಡನೇ ಸ್ಥಾನ
★ವಿಯೆಟ್ನಾಂ ಮೂರನೇ ಸ್ಥಾನ


1065) ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನ ಕೇಂದ್ರ ಕಚೇರಿ ಏಲ್ಲಿದೆ?
••► ಮನಿಲಾದಲ್ಲಿ


1066) ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನ ಕುರಿತ ಹೆಚ್ಚಿನ ಮಾಹಿತಿ  :
••► 1966ರಲ್ಲಿ ಇದು ಸ್ಥಾಪನೆಯಾಗಿದೆ.
★ಏಷ್ಯಾ ಫೆಸಿಫಿಕ್ ಪ್ರದೇಶದಲ್ಲಿ ಬಡತನ ನಿರ್ಮೂಲನೆ ಮಾಡುವ ಮೂಲ ಧ್ಯೇಯದೊಂದಿಗೆ ಆರಂಭವಾಗಿದೆ.
★ಇದರ ಗುರಿಗಳು :
ಪಾಲ್ಗೊಳ್ಳುವಿಕೆಯ ಆರ್ಥಿಕ ಪ್ರಗತಿ,
ಪರಿಸರ ಸುಸ್ಥಿರ ಪ್ರಗತಿ,
ಪ್ರಾದೇಶಿಕ ಸಮತೋಲನ etc..


1067) ಇತ್ತೀಚೆಗೆ ಉತ್ತರ ಪ್ರದೇಶದ ನೂತನ ಲೋಕಾಯುಕ್ತರಾಗಿ ಸುಪ್ರೀಂಕೋರ್ಟ್ ಯಾರನ್ನು ನೇಮಕ ಮಾಡಿದೆ?
••► ಸಂಜಯ ಮಿಶ್ರಾ


1068) ಇತ್ತೀಚೆಗೆ 2016ರ ಆಮ್ನೆಸ್ಟಿ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಪ್ರಶಸ್ತಿ ಯಾರಿಗೆ  ದೊರೆತಿದೆ?
••► ಹೆನ್ರಿ ಟಿಫ್‍ಹ್ಯಾಗ್ಸ್ (ಭಾರತದ ಮಾನವ ಹಕ್ಕುಗಳ ಕಾರ್ಯಕರ್ತ, ವಕೀಲ)


1069) ಉದಯ್ ಎಂದರೆ?
••►  ಉಜ್ವಲ್ ಡಿಸ್ಕಂ ಅಶ್ಯೂರೆನ್ಸ್ ಯೋಜನೆ


1070) ಇತ್ತೀಚೆಗೆ ದೃಷ್ಟಿ ವಿಶೇಷಚೇತನರ ಅನುಕೂಲಕ್ಕಾಗಿ ಬ್ರೈಲ್‍ಲಿಪಿ ಆಧಾರಿತ ಮಾಹಿತಿ ವ್ಯವಸ್ಥೆ ಆಳವಡಿಸಿದ ರೈಲೊಂದು ಯಾವ ಎರಡು ನಗರಗಳ ನಡುವೆ ಸಂಚರಿಸಲಿದೆ?
••► ವಾರಾಣಸಿ-ಮೈಸೂರು


ಇತ್ತೀಚೆಗೆ ಟ್ರಾನ್ಸ್ ಫರೆನ್ಸಿ ಇಂಟರ್ ನ್ಯಾಷನಲ್ ಸಿದ್ದಪಡಿಸಿದ ಅಂತರರಾಷ್ಟ್ರೀಯ ಭ್ರಷ್ಟಾಚಾರ ಸೂಚ್ಯಂಕ-2015 ರಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ದೊರೆತಿದೆ?
••►  76ನೇ ಸ್ಥಾನ.

To be Continued...

No comments:

Post a Comment