☀ ಇಂದಿನ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :
•► ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ 'ಅನ್ನಭಾಗ್ಯ ಯೋಜನೆ'ಯ ಸಮರ್ಪಕ ಅನುಷ್ಠಾನಕ್ಕೆ ಎದುರಾಗುವ ಅತಿದೊಡ್ಡ ಸವಾಲು ಎಂದರೆ ಖೊಟ್ಟಿ ಮತ್ತು ಅನರ್ಹ BPL ಪಡಿತರ ಚೀಟಿಗಳನ್ನು ಪತ್ತೆಹಚ್ಚುವುದು. ತಾವು ಈ ನಿಟ್ಟಿನಲ್ಲಿ ಯಾವ್ಯಾವ ಕ್ರಮಗಳನ್ನು ಕೈಗೊಳ್ಳುವಿರಿ?
(200 ಶಬ್ದಗಳಲ್ಲಿ)
(Actions for detecting the fabricated and Ineligible BPL ration cards)
━━━━━━━━━━━━━━━━━━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷೆ : ಮೇನ್ಸ್ ತಯಾರಿ.
(IAS/KAS Exams - Mains Preparation)
➡️ ರಾಜ್ಯದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿಗೆ ಕೆ.ಜಿ.ಗೆ ಒಂದು ರೂಪಾಯಿಯಂತೆ ತಿಂಗಳಿಗೆ ಗರಿಷ್ಠ 30 ಕೆ.ಜಿ. ಅಕ್ಕಿ ವಿತರಿಸುವ ರಾಜ್ಯ ಸರ್ಕಾರದ `ಅನ್ನಭಾಗ್ಯ' ಯೋಜನೆಗೆ 2013ರಲ್ಲಿ ಚಾಲನೆ ದೊರೆತಿದೆ. ಇದಕ್ಕಾಗಿ ಮಾಡಬೇಕಾದ ಸುಮಾರು 3 ಲಕ್ಷ ಮೆಟ್ರಿಕ್ ಟನ್ ಅಕ್ಕಿಯ ಸಂಗ್ರಹ ಮತ್ತು ವಿತರಣಾ ಕಾರ್ಯಕ್ಕಿಂತ ಹೆಚ್ಚಿನ ಸವಾಲುಗಳನ್ನು ಈ ಯೋಜನೆ ಹುಟ್ಟುಹಾಕಿದೆ. ಅವುಗಳಲ್ಲಿ ಅತಿದೊಡ್ಡ ಸವಾಲು ಎಂದರೆ ಖೊಟ್ಟಿ ಮತ್ತು ಅನರ್ಹ BPL ಪಡಿತರ ಚೀಟಿಗಳನ್ನು ಪತ್ತೆಹಚ್ಚುವುದು. ಅದಕ್ಕಾಗಿ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕು.
•► ಪಡಿತರ ಕಾರ್ಡಿನ ಫಲಾನುಭವಿಗಳಿಗೆ ಗಣಕೀಕೃತ ಸ್ಮಾರ್ಟ್ ಕಾರ್ಡ್ ವಿತರಣಾ ವ್ಯವಸ್ಥೆಯ ಜಾರಿಗೆ ಮುಂದಾಗಬೇಕು. ಆ ಮೂಲಕ ಆಹಾರ ಇಲಾಖೆಯ ಮಾಹಿತಿ ಕೇಂದ್ರಕ್ಕೆ ಸಂಪರ್ಕ ಒದಗಿಸಬೇಕು.
•► ಹಳೆ ಪಡಿತರ ಚೀಟಿಗಳ ನವೀಕರಣಕ್ಕೆ ಭಾವಚಿತ್ರವುಳ್ಳ ಚುನಾವಣೆ ಗುರುತಿನ ಚೀಟಿ (ಎಪಿಕ್) ಇಲ್ಲವೇ ಆಧಾರ್ ಕಾರ್ಡ್ ನಂಬರ್ ಜೋಡಣೆ ಕಡ್ಡಾಯಗೊಳಿಸಬೇಕು.
•► ಒಂದು ಮನೆಗೆ ಒಂದೇ ಪಡಿತರ ಚೀಟಿ ಇರುವಂತೆ ನೋಡಿಕೊಳ್ಳಲು ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಪಡಿತರ ಚೀಟಿದಾರರಿಂದ ವಿದ್ಯುತ್ಚ್ಛಕ್ತಿ ಬಿಲ್ಲುಗಳು, ಆಧಾರ ಕಾರ್ಡ್ ಜೊತೆ ಸಂಪರ್ಕ ಕಲ್ಪಿಸಿ ಪಾರದರ್ಶಕತೆ ಕಾಪಾಡಬೇಕು.
•► ನಕಲಿಪಡಿತರ ಚೀಟಿ ಹೊಂದಿರುವವರು ಕಾರ್ಡನ್ನು ಹಿಂದಿರುಗಿಸಲು ಕಾಲಾವಕಾಶ ನೀಡಬೇಕು. ಈ ಗುಡುವಿನಲ್ಲಿ ಕಾರ್ಡ್ ಹಿಂದಿರುಗಿಸದಿದ್ದರೆ ಅಂತಹವರ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕು.
•► ಮುಖ್ಯವಾಗಿ ಗ್ರಾಮೀಣ ಪ್ರದೇಶದ ಹಾಗು ಇತರ ಪ್ರದೇಶದ ಗ್ರಾಹಕರ ಪಡಿತರ ಚೀಟಿಯ ಕುರಿತ ತಕರಾರು, ತೊಂದರೆಗಳನ್ನು ಪರಿಶೀಲಿಸಲು ಗ್ರಾಹಕ ಅದಾಲತ್ ಗಳನ್ನು ವಿವಿಧ ಇಲಾಖೆಗಳು, ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿ ನಡೆಸಲ್ಪಡಬೇಕು.
•► ಬಿಪಿಎಲ್ ಕಾರ್ಡ್‌ಗಳಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಬೋಗಸ್ ಕಾರ್ಡ್‌ಗಳಿಂದ ಸರ್ಕಾರಕ್ಕೆ ಸಂಭವಿಸುತ್ತಿರುವ ಸಾವಿರಾರು ಕೋಟಿ ರೂಪಾಯಿ ನಷ್ಟದ ಬಗ್ಗೆ ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ಅವರು ನೇಮಿಸಿದ್ದ ಡಾ.ಬಾಲಸುಬ್ರಹ್ಮಣ್ಯಂ ಸಮಿತಿ ಕೊಟ್ಟಿರುವ ವರದಿಯನ್ನು ಅಮೂಲಾಗ್ರವಾಗಿ ಪರಿಶೀಲಿಸಿ, ಇದ್ದಂತಹ ಲೋಪಗಳನ್ನ ಸರಿಪಡಿಸಿ, ಅನುಷ್ಠಾನಕ್ಕೆ ತರಬೇಕು.
•► ಹೆಚ್ಚಿನ ಬೋಗಸ್ ಕಾರ್ಡುಗಳು ನ್ಯಾಯಬೆಲೆ ಅಂಗಡಿ ಮಾಲೀಕರ ವಶದಲ್ಲೇ ಇದ್ದು ಪಡಿತರ ದುರ್ಬಳಕೆಯಾಗುತ್ತಿದ್ದು, ಇದರಲ್ಲಿ ಅಧಿಕಾರಗಳು ಶಾಮೀಲಾಗಿರುತ್ತಾರೆಂದು ಬೇರೆ ಹೇಳಬೇಕಾಗಿಲ್ಲ.ಇದು ನಿರ್ಮೂಲಾಗಬೇಕು.
•► ಮಾಹಿತಿ ಹಕ್ಕನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು.
•► ಈ ಕಾರ್ಯ ಸಾಧನೆಗೆ ಜನಸಾಮಾನ್ಯರ, ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಅಗತ್ಯ. ನಕಲಿ ಹಾಗೂ ಅನರ್ಹ ಫಲಾನಿಭವಿಗಳ ಬಗ್ಗೆ ಮಾಹಿತಿ ನೀಡಿದವರಿಗೆ (ವಿಜಲ್ ಬ್ಲೋವರ್) ಸೂಕ್ತ ಬಹುಮಾನ, ಇನಾಮನ್ನು ಘೋಷಿಸಬೇಕು.
End.
━━━━━━━━━━━━━━━━━━━━━━━━━━━━━━━━━━━━━━━━►
More Extra Tips :
━━━━━━━━━━━━━━
•► ರಾಜ್ಯ ಸರ್ಕಾರ ಸುಮಾರು 97 ಲಕ್ಷ ಜನರಿಗೆ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಿದೆ. 30 ಲಕ್ಷ ನಕಲಿ ಕಾರ್ಡ್‌ಗಳಿರುವುದು ಲೋಕಾಯುಕ್ತ ತನಿಖೆಯಿಂದ ತಿಳಿದುಬಂದಿದೆ. ಜೊತೆಗೆ, ಶೇ 5ರಷ್ಟು ನಿಜವಾದ ಬಡವರು ಬಿಪಿಎಲ್ ಪಟ್ಟಿಯಿಂದಲೇ ಹೊರಗುಳಿದಿರುವುದು ಸೇರಿದಂತೆ, ಬಡವರನ್ನು ಗುರುತಿಸುವ ಕಾರ್ಯದಲ್ಲಿ ಶೇ 49ರಷ್ಟು ಲೋಪದೋಷಗಳು ಆಗಿರುವುದನ್ನು ರಾಜ್ಯದ ಬಡತನ ಸೂಚ್ಯಂಕಗಳು ತಿಳಿಸುತ್ತವೆ.
•► ಸಂಗ್ರಹದಿಂದ ಹಿಡಿದು ಚಿಲ್ಲರೆ ಮಾರಾಟದವರೆಗೆ ತಾಂತ್ರಿಕ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಸಗಟು ದಾಸ್ತಾನು ಮಳಿಗೆಗಳು ಹಾಗೂ ನ್ಯಾಯಬೆಲೆ ಅಂಗಡಿಗಳ ತೂಕ ಯಂತ್ರಗಳು ಸೇರಿದಂತೆ ಇಡೀ ವ್ಯವಸ್ಥೆಯ ಕಂಪ್ಯೂಟರೀಕರಣ, ಜಿಪಿಎಸ್ ವ್ಯಾಪ್ತಿಗೆ ಸಾಗಣೆ ಲಾರಿಗಳನ್ನು ತರಬೇಕು.
•► ಪಡಿತರ ಚೀಟಿ ಹೊಂದಿರುವವರ ವಿಳಾಸ ಹಾಗೂ ಭಾವಚಿತ್ರಗಳನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಕಟಿಸುವ ವ್ಯವಸ್ಥೆ ಮಾಡಬೇಕು.

No comments:
Post a Comment