"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 4 May 2016

☀️(ಕರ್ನಾಟಕ ಲೋಕ ಸೇವಾ ಆಯೋಗ) ಕೆಪಿಎಸ್ಸಿ ಸಂದರ್ಶನಕ್ಕೆ ಟಿಪ್ಸ್ : (Tips to Face KPSC Interview)

☀️(ಕರ್ನಾಟಕ ಲೋಕ ಸೇವಾ ಆಯೋಗ) ಕೆಪಿಎಸ್ಸಿ ಸಂದರ್ಶನಕ್ಕೆ ಟಿಪ್ಸ್ :
(Tips to Face KPSC Interview) 
━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಕೆಪಿಎಸ್ ಸಿ ಸಂದರ್ಶನ
(Kpsc Interview)


ಕರ್ನಾಟಕ ಲೋಕ ಸೇವಾ ಆಯೋಗ ಗೆಜೆಟೆಡ್ ಪ್ರೊಬೆಷನರ್ಸ್ ಹುದ್ದೆಗಳಿಗೆ ಕಳೆದ ವರ್ಷ ನಡೆಸಿದ್ದ ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಸಂದರ್ಶನಕ್ಕೆ ಆಯ್ಕೆಯಾಗಿರುವ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಎಸ್ಸಿಯ  ವೆಬ್ನಲ್ಲಿ ಪ್ರಕಟಿಸಲಾಗಿದೆ.

🖌2014ನೇ ಸಾಲಿನ ಕೆಎಎಸ್ ಹುದ್ದೆಗಳಿಗೆ ಕಳೆದ ಏಪ್ರಿಲ್ನಲ್ಲಿ ನಡೆದಿದ್ದ ಪ್ರೀಲಿಮ್ಸ್ 2.67 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಇದರಲ್ಲಿ ಉತ್ತೀರ್ಣರಾಗಿದ್ದವರಿಗೆ ಸೆಪ್ಟೆಂಬರ್ನಲ್ಲಿ
ಮುಖ್ಯ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ 1389 ಅಭ್ಯರ್ಥಿಗಳು ಉತ್ತೀರ್ಣಗೊಂಡು ಸಂದರ್ಶಕ್ಕೆ ಆಯ್ಕೆ ಆಗಿದ್ದಾರೆ. ಸಂದರ್ಶನದ ದಿನವನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದ್ದು, ಮೇ 16ರಿಂದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸಲಾಗುವುದು ಎಂದು ಕೆಪಿಎಸ್ಸಿ ತಿಳಿಸಿದೆ.

🕰ಹಲವು ವರ್ಷಗಳ ಬಳಿಕ ನಡೆದಿದ್ದ ಕೆಎಎಸ್ ಪರೀಕ್ಷೆಗೆ ಸರಕಾರ 2014ರಲ್ಲಿ ಅಧಿಸೂಚನೆ ಹೊರಡಿಸಿದ್ದ ವೇಳೆ 462 ಹುದ್ದೆಗಳನ್ನು ನಿಗದಿ ಮಾಡಿತ್ತು. ಈ ಪೈಕಿ ಕಮಾಂಡೆಂಟ್ ವರ್ಗದ 12 ಹುದ್ದೆಗಳಿಗೆ ವೃಂದ ಹಾಗೂ ನೇಮಕ ನಿಯಮ ಸಮರ್ಪಕವಾಗಿಲ್ಲ ಕಾರಣ ಆ ಹುದ್ದೆಗಳ ಪ್ರಸ್ತಾಪವನ್ನು ಮಾತ್ರ ಸರಕಾರ ಹಿಂದಕ್ಕೆ ಪಡೆದ ಕಾರಣ ಒಟ್ಟು ಹುದ್ದೆಗಳ ಸಂಖ್ಯೆ 440ಕ್ಕೆ ಸೀಮಿತವಾಗಿತ್ತು. ಇತ್ತೀಚೆಗೆ ಸಹಾಯಕ ಖಜಾನೆ ಅಧಿಕಾರಿ(ಎಟಿಒ) ದರ್ಜೆಯ 24
ಹುದ್ದೆಗಳಿಗೆ ಸರಕಾರ ಹೊಸದಾಗಿ ಪ್ರಸ್ತಾವನೆ ಸಲ್ಲಿಸಿದ್ದ ಕಾರಣ ಒಟ್ಟು ಹುದ್ದೆಗಳ ಸಂಖ್ಯೆ 464ಕ್ಕೆ ಏರಿದಂತಾಗಿದೆ. ಹೀಗಾಗಿ ಕೆಪಿಎಸ್ಸಿ ನಿಯಮಗಳಂತೆ ಪ್ರತಿ ಹುದ್ದೆಗೆ 1:3
ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.

★ ಕೆಪಿಎಸ್ಸಿಯ ಈ ದಾಖಲೆ ಪರಿಶೀಲನೆ ಮತ್ತು ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಉಪಯುಕ್ತವಾದ ಸಲಹೆಗಳು ಇಲ್ಲಿವೆ;
.
* ದಾಖಲೆಗಳ ಪರಿಶೀಲನೆಗೆ ಎಲ್ಲ ಮೂಲ ದಾಖಲೆಗಳೊಂದಿಗೆ ಸ್ವಯಂ ದೃಢೀಕರಿಸಿದ 2 ಸೆಟ್ ಜೆರಾಕ್ಸ್ ಪ್ರತಿಗಳನ್ನು ತೆಗೆದುಕೊಂಡು ಹೋಗಲು ಮರೆಯಬೇಡಿ.

* ಆನ್ಲೈನ್ ಅರ್ಜಿಯಲ್ಲಿ ನಮೂದಿಸಿದ ದಾಖಲೆಗಳಿಲ್ಲದೆ ದಾಖಲೆ ಪರಿಶೀಲನೆಗೆ ಹಾಜರಾಗಬೇಡಿ.

* ಒಂದು ವೇಳೆ ಆನ್ಲೈನ್ ಅರ್ಜಿಯಲ್ಲಿ ನೀವು ನಮೂದಿಸಿದ ವಿವರ/ಮಾಹಿತಿ ನಿಮ್ಮ ಬಳಿ ಇಲ್ಲದಿದ್ದರೆ ದಯವಿಟ್ಟು ಸಂದರ್ಶನ ಪತ್ರದಲ್ಲಿ ಕೋರಿದ ಮೀಸಲಾತಿಯನ್ನು ಗಮನಿಸಿ. ಅಲ್ಲಿ ಅಭ್ಯರ್ಥಿಯು ಕೋರಿದ ಮೀಸಲಾತಿ ವಿಭಾಗ, ಗ್ರಾಮೀಣ ಹಾಗೂ ಕನ್ನಡ ಮಾಧ್ಯಮ ಅಭ್ಯರ್ಥಿಗೆ ನೀಡಲಾದ ಮೀಸಲಾತಿ ವಿವರ ಹಾಗೂ ಇನ್ನಿತರ ಮಾಹಿತಿಗಳನ್ನು ನೀಡಲಾಗಿರುತ್ತದೆ. ಇದನ್ನು ಗಮನಿಸಿ, ಇದಕ್ಕೆ ತಕ್ಕಂತೆ ದಾಖಲೆ ಸಿದ್ಧಪಡಿಸಿಕೊಂಡು ಸಂದರ್ಶನಕ್ಕೆ ತೆರಳಿ.

★ ಯಾವ ದಾಖಲೆಗಳಿರಬೇಕು?

* ಆನ್ಲೈನ್ ಅರ್ಜಿಯಲ್ಲಿ ನಮೂದಿಸಿದ ವಿವರಗನ್ನು ಆಧರಿಸಿ, ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲ ವರ್ಷ/ ಸೆಮಿಸ್ಟರ್ಗಳ ಅಂಕ ಪಟ್ಟಿಗಳು ಹಾಗೂ ಗ್ರೇಡ್ಗಳಿದ್ದರೆ ಗ್ರೇಡನ್ನು ಶೇಕಡವಾರು ಅಂಕಗಳಿಗೆ ಪರಿವರ್ತಿಸಿದ ಪ್ರಮಾಣ ಪತ್ರ ತಯಾರು ಮಾಡಿಕೊಂಡು ಹೋಗಿ.

* ಜನ್ಮ ದಿನಾಂಕವನ್ನು ದೃಢೀಕರಿಸಲು ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ ಅಥವಾ ವರ್ಗಾವಣೆ (ಟಿಸಿ)
ಪ್ರಮಾಣ ಪತ್ರ ಅಥವಾ ಸಿಆರ್ (ಸಂಚಿತ ದಾಖಲೆ)ನ ಉದ್ಧೃತ ಭಾಗ ಜೋಡಿಸಿಟ್ಟುಕೊಳ್ಳಿ.

* ಒಂದು ವೇಳೆ ಕಡ್ಡಾಯ ಕನ್ನಡ ಪರೀಕ್ಷೆಯಿಂದ ವಿನಾಯಿತಿ ಕೋರಿದ್ದಲ್ಲಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿಸಿಟ್ಟುಕೊಂಡಿರಿ.

* ಆನ್ ಲೈನ್ನಲ್ಲಿ ಮೀಸಲಾತಿ ಕೋರಿದ್ದಲ್ಲಿ ಜಾತಿ ಪ್ರಮಾಣ ಪತ್ರಗಳ ನಮೂನೆ ಹೀಗಿರಲಿ:1.ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ -ನಮೂನೆ 'ಡಿ', 2. ಪ್ರವರ್ಗ-10 ಅಭ್ಯರ್ಥಿಗಳು - ನಮೂನೆ 'ಇ', 3. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ- ನಮೂನೆ 'ಎಫ್'
* ನಮೂನೆ ಡಿ,ಇ,ಎಫ್ ಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿರುವಂತೆ ಸಂಬಂಧಿತ ತಹಶೀಲ್ದಾರರಿಂದ ಪಡೆದಿರಬೇಕು.

* ನೀವು ಪಡೆದ ಪ್ರಮಾಣ ಪತ್ರಗಳಲ್ಲಿ ಸಹಿ,ಮೊಹರು ಅಥವಾ ಬಾರ್ ಕೋಡ್, ಹಾಲೋಗ್ರಾಮ್ ಮತ್ತು ವಾಟರ್
ಮಾರ್ಕ್ ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ

* ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ಮೀಸಲಾತಿ ಪ್ರಮಾಣ ರದ್ದಾಗುವವರೆಗೆ ಚಾಲ್ತಿಯಲ್ಲಿರುವುದರಿಂದ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ನಿಗದಿಪಡಿಸಿದ ನಮೂನೆಯಲ್ಲಿ ಪಡೆದಿರುವುದನ್ನು ಖಾತ್ರಿಪಡಿಸಿಕೊಳ್ಳಿ.

* ಹಿಂದುಳಿದ ಪ್ರವರ್ಗಗಳಾದ 2ಎ, 2ಬಿ, 3ಎ ಮತ್ತು 3ಬಿ ಮೀಸಲಾತಿ ಪ್ರಮಾಣ ಪತ್ರ 5 ವರ್ಷ ಚಾಲ್ತಿಯಲ್ಲಿರುತ್ತದೆ.
ಆದ್ದರಿಂದ ಆ ಪ್ರಮಾಣ ಪತ್ರಗಳು ನಿಗದಿಪಡಿಸಿದ ಕೊನೆಯ ದಿನಾಂಕದಂದು ಚಾಲ್ತಿಯಲ್ಲಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ.

* ಕನ್ನಡ ಮಾಧ್ಯಮ ಮೀಸಲಾತಿಯ ಅಭ್ಯರ್ಥಿಗಳು 1ರಿಂದ 10ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಾಂಗ ಮಾಡಿರುವ ಕುರಿತು ಶಾಲೆಯ ಮುಖ್ಯೋಪಾಧ್ಯಾಯರಿಂದ ಪ್ರಮಾಣ ಪತ್ರ ಪಡೆದುಕೊಳ್ಳಿ.

* ಗ್ರಾಮೀಣ ಅಭ್ಯರ್ಥಿಯಾಗಿದ್ದಲ್ಲಿ ಗ್ರಾಮೀಣ ವ್ಯಾಸಾಂಗದ ಪ್ರಮಾಣ ಪತ್ರವನ್ನು ನಮೂನೆ-2ರಲ್ಲಿ ಹಾಗೂ ಸಾಮಾನ್ಯ ಅರ್ಹತೆ ಗ್ರಾಮೀಣ ಅಭ್ಯರ್ಥಿಗಳು ನಮೂನೆ-1 ಮತ್ತು 2ರಲ್ಲಿ ಸಂಬಂಧಪಟ್ಟ ಪ್ರಾಧಿಕಾರದಿಂದ ಪ್ರಮಾಣ ಪತ್ರ ಪಡೆಯಲು ಮರೆಯಬೇಡಿ.

* ಸಂದರ್ಶನಕ್ಕೆ ಹಾಜರಾಗುವ ಪ್ರತಿ ಅಭ್ಯರ್ಥಿಗೆ ಸಂದರ್ಶನ ಸಂಖ್ಯೆ/ ದಿನಾಂಕ ಹಾಗೂ ಸಮಯ, ಕೋರಿದ ಮೀಸಲಾತಿ
ವಿವರಗಳನ್ನು ನೀಡಲಾಗಿರುತ್ತದೆ. ಇದನ್ನು ಗಮನಿಸಿಯೇ ಸಂದರ್ಶನಕ್ಕೆ ಹೊರಡಿ.

* ಪ್ರತಿ ಅಭ್ಯರ್ಥಿಯನ್ನು ಕನಿಷ್ಠ 15 ನಿಮಿಷ ಸಂದರ್ಶಿಸಬಹುದು.ಇಷ್ಟು ಕಡಿಮೆ ಅವಧಿಯಲ್ಲಿ ನಿಮ್ಮ ಸಾಮರ್ಥ್ಯ ಪ್ರದರ್ಶಿಸಬೇಕಾಗು
ತ್ತದೆ. ಫಸ್ಟ್ ಇಂಪ್ರೆಷನ್ ಈಸ್ ದಿ ಬೆಸ್ಟ್ ಇಂಪ್ರೆಷನ್ ಎಂಬುದನ್ನು ಮರೆಯಬೇಡಿ.
@spardhaloka

No comments:

Post a Comment