"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 5 May 2016

☀️ ಕರ್ನಾಟಕ ಲೋಕಸೇವಾ ಆಯೋಗ - ಕೆಎಎಸ್ ಸಂದರ್ಶನ : ಹೋಟಾ ವರದಿ ಶಿಫಾರಸ್ಸು

☀️ ಕರ್ನಾಟಕ ಲೋಕಸೇವಾ ಆಯೋಗ - ಕೆಎಎಸ್ ಸಂದರ್ಶನ : ಹೋಟಾ ವರದಿ ಶಿಫಾರಸ್ಸು
  ━━━━━━━━━━━━━━━━━━━━━━━━━━━━━━━━━━━━━━━━━━━━━


(ಹೋಟಾ ಶಿಫಾರಸಿನಂತೆ ಸಂದರ್ಶನ: ಹಾದಿ ಸುಗಮ)

 ಕರ್ನಾಟಕ ಲೋಕಸೇವಾ ಆಯೋಗ (ವ್ಯವಹಾರ ಮತ್ತು ಹೆಚ್ಚುವರಿ ಕಾರ್ಯಭಾರಗಳ ನಡವಳಿ) ತಿದ್ದುಪಡಿ ಮಸೂದೆಗೆ ರಾಜ್ಯಪಾಲರ ಒಪ್ಪಿಗೆ ದೊರೆತಿದೆ.

464 ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ಆಯ್ಕೆಗೆ  ಕರ್ನಾಟಕ ಲೋಕಸೇವಾ ಆಯೋಗ ಜೂನ್‌ನಲ್ಲಿ ಸಂದರ್ಶನ ನಡೆಸುವ ಸಾಧ್ಯತೆ ಇದ್ದು, ಪಿ.ಸಿ.ಹೋಟಾ ಸಮಿತಿ ಶಿಫಾರಸು ಅನ್ವಯ ಸಂದರ್ಶನ ನಡೆಸಲು ಈಗ ದಾರಿ ಸುಗಮವಾಗಿದೆ.


★ ಸಂದರ್ಶನ ನಿಯಮಗಳು ಹೀಗಿವೆ:

*ಗೆಜೆಟೆಡ್‌ ಪ್ರೊಬೆಷನರಿ ವ್ಯಕ್ತಿತ್ವ ಪರೀಕ್ಷೆಗೆ 200 ಅಂಕಗಳಿರುತ್ತವೆ (ಮುಖ್ಯ ಪರೀಕ್ಷೆಯ ಅಂಕಗಳ ಶೇ 10.25ರಷ್ಟು).

*ಒಂದು ಖಾಲಿ ಹುದ್ದೆಗೆ ಮೂರು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಬೇಕು.

*ಅಭ್ಯರ್ಥಿಗಳಿಗೆ ಜ್ಞಾನ ಆಧಾರಿತ ಪ್ರಶ್ನೆಗಳನ್ನು ಕೇಳುವಂತಿಲ್ಲ. ಪ್ರತಿ ಸಮಿತಿ ದಿನಕ್ಕೆ 9 ಅಭ್ಯರ್ಥಿಗಳ ಸಂದರ್ಶನ ಮಾತ್ರ ಮಾಡಬೇಕು ಮತ್ತು ಸಂದರ್ಶನ ಅವಧಿ 25ರಿಂದ 30 ನಿಮಿಷಗಳು ಇರಬೇಕು.

*ಸಂದರ್ಶನಗಳಲ್ಲಿ ಕೆಪಿಎಸ್‌ಸಿ ಹೊರತಾದ ವಿಷಯ ತಜ್ಞರು ಇಲ್ಲದಿರುವುದು ಅಪನಂಬಿಕೆ ಹಾಗೂ ಊಹೆಗಳಿಗೆ ಎಡೆಮಾಡಿಕೊಡುತ್ತದೆ.

*ಪ್ರತಿ ಸಂದರ್ಶನ ಸಮಿತಿಯ ಅಧ್ಯಕ್ಷತೆಯನ್ನು ಕೆಪಿಎಸ್‌ಸಿ ಅಧ್ಯಕ್ಷರು ಅಥವಾ ಹಿರಿಯ ಸದಸ್ಯರು ವಹಿಸಬೇಕಾಗಿದ್ದು, ಇತರೆ ನಾಲ್ವರು ಸದಸ್ಯರು ಇರಬೇಕು. ಅವರು ಹೊರ ರಾಜ್ಯದವರಾಗಿರುವುದು ಅಪೇಕ್ಷಣೀಯ.

*ತಜ್ಞರನ್ನಾಗಿ ನಿವೃತ್ತ ಐಎಎಸ್‌ ಅಧಿಕಾರಿಗಳು, ಕರ್ನಾಟಕ ಸರ್ಕಾರದ ಕಾರ್ಯದರ್ಶಿ ಹುದ್ದೆಗೆ ಸಮಾನಾಂತರ ಅಧಿಕಾರಿಗಳು, ವಿಶ್ರಾಂತ ಕುಲಪತಿಗಳು, ಐಐಟಿ, ಐಐಎಂ ಮುಂತಾದ ತರಬೇತಿ ಸಂಸ್ಥೆಗಳ ನಿವೃತ್ತ ಪ್ರಾಧ್ಯಾಪಕರು ಇರಬೇಕು ಮತ್ತು ಅನುವಾದಕ್ಕಾಗಿ ಕನ್ನಡ ಬಲ್ಲವರೂ ಒಬ್ಬರು ಇರಬೇಕು.

*ಪ್ರತಿ ಸದಸ್ಯರು ಪ್ರತ್ಯೇಕ ಅಂಕ ನೀಡಬೇಕು. ನಿಗದಿತ ಸರಾಸರಿ ಅಂಕಗಳಿಗಿಂತ ಅತಿ ಹೆಚ್ಚು ಇಲ್ಲವೇ ಅತಿ ಕಡಿಮೆ ಅಂಕ ನೀಡಿರುವ ಇಬ್ಬರು ಸದಸ್ಯರ ಅಂಕಗಳನ್ನು ಪರಿಗಣಿಸುವಂತಿಲ್ಲ. ಉಳಿದ ಮೂವರು ಸದಸ್ಯರ ಅಂಕಗಳು ಸರಾಸರಿ ಅಧಿಕೃತ ಅಂಕಗಳಾಗುತ್ತವೆ.

(5 May, 2016 ಪ್ರಜಾವಾಣಿ ವಾರ್ತೆ)    

No comments:

Post a Comment