"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday, 2 May 2016

☀ಜನೆವರಿ -2016ರ ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (ಭಾಗ -29) (General knowledge on Current Affairs (Part-29)) ☆.(ಪ್ರಚಲಿತ ಘಟನೆಗಳ ಕ್ವಿಜ್)

☀ಜನೆವರಿ -2016ರ ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (ಭಾಗ -29)
(General knowledge on Current Affairs (Part-29))
☆.(ಪ್ರಚಲಿತ ಘಟನೆಗಳ ಕ್ವಿಜ್)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)

- ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯವಾದ ಮುಖ್ಯವಾಗಿ ಇತ್ತೀಚಿನ ಪ್ರಸಕ್ತ ವಿದ್ಯಮಾನಗಳ ಬಗ್ಗೆ ವಿಶೇಷವಾಗಿ ಅದು ಸಾಹಿತ್ಯ, ಕಲೆ, ಸಂಸ್ಕೃತಿ, ವಿಜ್ಞಾನ, ರಾಜಕೀಯ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳ ವಿದ್ಯಮಾನಗಳನ್ನು ಅಯಾ ದಿನದ ದಿನಪತ್ರಿಕೆಗಳನ್ನು ಕಲೆಹಾಕಿ ಸಂಕ್ಷೇಪಿಸಿ 'ಸ್ಪರ್ಧಾಲೋಕ'ದಲ್ಲಿ ಅಪಡೆಟ್ ಮಾಡಲು ಒಂದು ಚಿಕ್ಕ ಪ್ರಯತ್ನ.



1071) ಇತ್ತೀಚೆಗೆ ಟ್ರಾನ್ಸ್ ಫರೆನ್ಸಿ ಇಂಟರ್ ನ್ಯಾಷನಲ್ ಸಿದ್ದಪಡಿಸಿದ ಅಂತರರಾಷ್ಟ್ರೀಯ ಭ್ರಷ್ಟಾಚಾರ ಸೂಚ್ಯಂಕ-2015 ರಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ದೊರೆತಿದೆ?
••►  76ನೇ ಸ್ಥಾನ.


1072) (ಅಂತರರಾಷ್ಟ್ರೀಯ ಭ್ರಷ್ಟಾಚಾರ ಸೂಚ್ಯಂಕ-2015) ಹೆಚ್ಚಿನ ಮಾಹಿತಿ  :
••► ಡೆನ್ಮಾರ್ಕ್ ಮೊದಲ ರ್ಯಾಂ ಕ್ ಪಡೆದು ಅತಿ ಕಡಿಮೆ ಭ್ರಷ್ಟಾಚಾರ ಹೊಂದಿರುವ ರಾಷ್ಟ್ರ ಎನಿಸಿದೆ. ಫಿನ್ಲೆಂಡ್ ಎರಡನೇ ಸ್ಥಾನದಲ್ಲಿದೆ
★ ಮೊದಲ ಐದು ಸ್ಥಾನ ಪಡೆದ ರಾಷ್ಟ್ರಗಳು
ರಾಷ್ಟ್ರ ಅಂಕ ಅಂಕ
ಡೆನ್ಮಾರ್ಕ್ 1
ಫಿನ್ಲೆಂಡ್ 2
ಸ್ವೀಡನ್ 3
ನ್ಯೂಜಿಲೆಂಡ್ 4
ನೆದರ್‍ಲೆಂಡ್ 5


1071) ಇತ್ತೀಚೆಗೆ ರಾಷ್ಟ್ರಪತಿ ಆಳ್ವಿಕೆ ಹೇರಿಸಲ್ಪಟ್ಟ ರಾಜ್ಯ?
••► ಅರುಣಾಚಲ್ ಪ್ರದೇಶ


1072) ಪ್ರಸ್ತುತ ಅರುಣಾಚಲ್ ಪ್ರದೇಶದ ರಾಜ್ಯಪಾಲ?
••► ಜೆ.ಪಿ. ರಾಜಖೋವಾ.


1073) ಇತ್ತೀಚೆಗೆ ಪೋರ್ಚ್‍ಗಲ್‍ನ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡವರು ಯಾರು?
••► ಮಾರ್ಸೆಲೊ ರೆಬೆಲೊ ಡಿಸೋಜಾ (ಹಾಲಿ ಅಧ್ಯಕ್ಷ ಅನಿಬಲ್ ಕವೋಕಾ ಸಿಲ್ವಾ)


1074) ಇತ್ತೀಚೆಗೆ ನಡೆದ ಅಂಧ ಟಿ20 ಕ್ರಿಕೆಟ್ ಏಷ್ಯಾ ಕಪ್ ಅನ್ನು ಗೆದ್ದ ರಾಷ್ಟ್ರ ಯಾವುದು?
••► ಭಾರತ (ಭಾರತ ಅಂಧರ ಕ್ರಿಕೆಟ್‍ನ ಮೊದಲ ಟಿ20 ಕಪ್ ಗೆದ್ದುಕೊಂಡಿದೆ)


1075) ಇತ್ತೀಚೆಗೆ ಸಿನಿಮಾ ಕ್ಷೇತ್ರದ ಸಾಧನೆಗಾಗಿ ಯಾರಿಗೆ ‘ಯಶ್ ಛೋಪ್ರಾ ಸ್ಮರಣ ಪ್ರಶಸ್ತಿ’ ನೀಡಲಾಯಿತು?
ಬಾಲಿವುಡ್ ನ ಹಿರಿಯ ನಟಿ ರೇಖಾ


1076) ‘ಯಶ್ ಛೋಪ್ರಾ ಸ್ಮರಣ ಪ್ರಶಸ್ತಿ’ ಕುರಿತ ಹೆಚ್ಚಿನ ಮಾಹಿತಿ  :
••► 2012ರಲ್ಲಿ ಮೃತರಾದ ಬಾಲಿವುಡ್‌ ನಿರ್ಮಾಪಕ– ನಿರ್ದೇಶಕ ಯಶ್ಛೋಪ್ರಾ ಅವರ ನೆನಪಿನಲ್ಲಿ ಟಿ. ಸುಬ್ಬಾರಾವ್‌ ರೆಡ್ಡಿ ಅವರ ಟಿಎಸ್‌ಎರ್‌ ಫೌಂಡೇಷನ್‌ ಸಿನಿಮಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಪ್ರತಿ ವರ್ಷ ಈ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.
★ಈ ಪ್ರಶಸ್ತಿ ಚಿನ್ನದ ಪದಕ ಹಾಗೂ 10 ಲಕ್ಷ ನಗದನ್ನು ಒಳಗೊಂಡಿದೆ.
★ಲತಾ ಮಂಗೇಶ್ವರ್‌ ಹಾಗೂ ಅಮಿತಾಭ್‌ ಬಚ್ಚನ್‌ ಅವರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.


1077) ಪ್ರಸ್ತುತ ಮಹಾರಾಷ್ಟ್ರ ರಾಜ್ಯಪಾಲ ಯಾರು?
••►  ಸಿ.ವಿದ್ಯಾಸಾಗರ್ ರಾವ್


1078) ಇತ್ತೀಚೆಗೆ ಜನವರಿ 26ರಿಂದ ಅಸ್ತಿತ್ವಕ್ಕೆ ಬಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಅಸ್ಪøಶ್ಯತಾ ನಿವಾರಣೆ) ತಿದ್ದುಪಡಿ ಕಾಯ್ದೆ 2015 ಹೊಸ ಕಾನೂನು ಯಾವ ಕಾಯಿದೆಯ ಬದಲಿಯಾಗಿದೆ?
••► ಅಸ್ಪøಶ್ಯತಾ ನಿವಾರಣೆ ಕಾಯ್ದೆ (1989)


1079) ಪ್ರಸ್ತುತ ವಿಯೆಟ್ನಾಂ ದೇಶದ ರಾಜಧಾನಿ?
••► ಹನೋಯಿ


1080) ಅಸೋಚಾಂ ಎಂದರೆ?
••► ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ


1081) ಇತ್ತೀಚೆಗೆ ಭಾರತದ ಚುನಾವಣಾ ಆಯೋಗದಿಂದ ಆರನೇ ರಾಷ್ಟ್ರೀಯ ಮತದಾರರ ದಿನಾಚರಣೆ ದಿನವನ್ನಾಗಿ ಯಾವಾಗ ಆಚರಿಸಲಾಯಿತು?
••► 2016ರ ಜನವರಿ 26ರಂದು.


1082) ಆರನೇ ರಾಷ್ಟ್ರೀಯ ಮತದಾರರ ದಿನಾಚರಣೆ ದಿನದ ಕುರಿತ ಹೆಚ್ಚಿನ ಮಾಹಿತಿ  :
••► ಈ ವರ್ಷದ ಮುಖ್ಯ ಘೋಷವಾಕ್ಯವೆಂದರೆ, ಸಂಪೂರ್ಣ ಹಾಗೂ ಗುಣಾತ್ಮಕ ಪಾಲುದಾರಿಕೆ ಎಂದಾಗಿತ್ತು.
★ಈ ದಿನ ಮುಖ್ಯ ಚುನಾವಣಾ ಆಯುಕ್ತ ನಸೀಂ ಜಿಯಾದಿಯವರು 'ಬಿಲೀಫ್ ಇನ್ ದ ಬ್ಯಾಲೆಟ್' ಎಂಬ ಕೃತಿಯನ್ನು ಬಿಡುಗಡೆ ಮಾಡಿದರು.


1083) ಇತ್ತೀಚೆಗೆ (ಜನವರಿ 23. 2016) ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಎಷ್ಟನೇ ಜನ್ಮ ದಿನದ ಆಚರಣೆದಂದು ಕೇಂದ್ರ ಸರಕಾರ ಮೊದಲ ಬಾರಿಗೆ ನೇತಾಜಿ ಜೀವನಕ್ಕೆ ಸಂಬಂಧಿಸಿದ 100 ರಹಸ್ಯ ಕಡತಗಳನ್ನು ಬಿಡುಗಡೆಗೊಳಿಸಿತು?
••► 119ನೇ ಜನ್ಮ ದಿನ.


1084) ಇತ್ತೀಚೆಗೆ ದೇಶದ ಮೊಟ್ಟ ಮೊದಲ ವೈಫೈ ಬೀಚ್‌ ಆಗಿ ರೂಪುಗೊಂಡ ಬೀಚ್‌?
••► ಮಲ್ಪೆ ಬೀಚ್‌


1085) ಇತ್ತೀಚೆಗೆ ಎರಡನೇ ಅವಧಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಮರು ಆಯ್ಕೆಯಾದವರು ಯಾರು?
••► ಅಮಿತ್ ಷಾ


1086) ಸೀಮಾ ದರ್ಶನ ಎಂಬ ವಿಶೇಷ ಕಾರ್ಯಕ್ರಮವು ಯಾವ ಇಲಾಖೆಗೆ ಸಂಬಂಧಿಸಿದುದಾಗಿದೆ?
••► ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ


1087) ಇತ್ತೀಚೆಗೆ ನಿಧನರಾದ ಪಂಡಿತ್ ಶಂಕರ್ ಘೋಷ್ ರವರು ದೇಶಾದ್ಯಂತ ಪ್ರಸಿದ್ಧರಾಗಿದ್ದು?
••► ಖ್ಯಾತ ತಬಲಾ ವಾದಕ.


1088) ಇತ್ತೀಚೆಗೆ ಅರಬ್- ಭಾರತ ಸಹಕಾರ ವೇದಿಕೆಯ ಮೊಟ್ಟಮೊದಲ ಸಚಿವ ಮಟ್ಟದ ಸಭೆ ಎಲ್ಲಿ ನಡೆಯಿತು?
••► ಮನಮಾದಲ್ಲಿ


1089) ಮನಮಾ ಯಾವ ದೇಶದ ರಾಜಧಾನಿ?
••► ಬಹರೈನ್‍


1090) ಇತ್ತೀಚೆಗೆ ವಿಶ್ವದ ಅತಿದೊಡ್ಡ ಹಾಗೂ ಅತಿ ಎತ್ತರದಲ್ಲಿ ಹಾರಾಡುವ ಭಾರತೀಯ ತ್ರಿವರ್ಣ ಧ್ವಜವನ್ನು ಎಲ್ಲಿ ಹಾರಿಸಲಾಗಿದೆ?
••► ರಾಂಚಿಯ ಪೆಹರಿ ಮಂದಿರದ ಎದುರು


1091) ಪೆಹರಿ ಮಂದಿರದ ತ್ರಿವರ್ಣ ಧ್ವಜದ ಕುರಿತ ಹೆಚ್ಚಿನ ಮಾಹಿತಿ  :
* ಈ ವಿಶಿಷ್ಟ ಧ್ವಜ ದಿನದ 24 ಗಂಟೆಯೂ ಹಾರಾಡುತ್ತಿದ್ದು, ರಾತ್ರಿಯ ವೇಳೆಯಲ್ಲೂ ಪ್ರಖರವಾಗಿ ಕಾಣುವಂತೆ ಮಾಡಲು 20 ಸೋಡಿಯಂ ವೇಪರ್ ದೀಪಗಳನ್ನು ಅಳವಡಿಸಲಾಗಿದೆ.
* ಇದು 66 ಅಡಿ ಉದ್ದ ಹಾಗೂ 99 ಅಡಿ ಅಗಲವಿದೆ. ರಾಷ್ಟ್ರಧ್ವಜದ ಕ್ರಮಬದ್ಧ ಅನುಪಾತಕ್ಕೆ ಅನುಗುಣವಾಗಿಯೇ ಇದ್ದು, ಇದರ ಧ್ವಜಸ್ತಂಭ 293 ಅಡಿ ಎತ್ತರ ಇದೆ. ಈ ಧ್ವಜ 80 ಕೆ.ಜಿ. ತೂಕವಿದೆ.


1092) ಜಿಂಕಾ ವೈರಸ್ ಸೊಳ್ಳೆಗಳಿಂದ ಹರಡುವುದು!.


1093) ಇತ್ತೀಚೆಗೆ ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ (ಯುಎನ್‍ಡಿಪಿ) ಬಿಡುಗಡೆ ಮಾಡಿದ  2015ನೇ ಸಾಲಿನ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ದಕ್ಷಿಣ ಏಷ್ಯಾದಲ್ಲಿ ಅಗ್ರಸ್ಥಾನ ಕಾಪಾಡಿಕೊಂಡ ದೇಶ ಯಾವುದು?
••► ಶ್ರೀಲಂಕಾ.


1094) 2015ನೇ ಸಾಲಿನ ಮಾನವ ಅಭಿವೃದ್ಧಿ ಸೂಚ್ಯಂಕದ ಕುರಿತ ಹೆಚ್ಚಿನ ಮಾಹಿತಿ  :
••► 2015ನೇ ಸಾಲಿನ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಶ್ರೀಲಂಕಾಗೆ 73ನೇ ರ್ಯಾಂಕ್ ಲಭಿಸಿದೆ.
★ಇಲ್ಲಿನ ಎಚ್‍ಡಿಐ ಮೌಲ್ಯ 0.757.


1095) ಟೆನಿಸ್‌ ಲೋಕದ ದಿಗ್ಗಜ ರೋಜರ್‌ ಫೆಡರರ್‌ ಯಾವ ದೇಶದವರು?
••► ಸ್ವಿಟ್ಜರ್‌ಲೆಂಡ್‌


1096) ರೋಜರ್‌ ಫೆಡರರ್‌ ನ ಕುರಿತ ಹೆಚ್ಚಿನ ಮಾಹಿತಿ  :
••► ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ 300 ಪಂದ್ಯಗಳನ್ನು ಗೆದ್ದ ವಿಶ್ವದ ಮೊದಲ ಆಟಗಾರ
★ವೃತ್ತಿ ಜೀವನದಲ್ಲಿ 1000 ಪಂದ್ಯಗಳನ್ನು ಗೆದ್ದ ಆಟಗಾರ
★17 ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿರುವ ಫೆಡರರ್‌


1097) ವಿಶ್ವದ ಅಗ್ರಮಾನ್ಯ ಟೆನಿಸ್‌ ಆಟಗಾರ ನೊವಾಕ್‌ ಜೊಕೊವಿಚ್‌ ಯಾವ ದೇಶದವರು?
••► ಸರ್ಬಿಯಾ


1098) ವಿಶ್ವದ ಅಗ್ರಮಾನ್ಯ ಟೆನಿಸ್‌ ಆಟಗಾರ್ತಿ ಮರಿಯಾ ಶರಪೋವಾ ಯಾವ ದೇಶದವರು?
••► ರಷ್ಯಾ


1099) ಇತ್ತೀಚೆಗೆ ಪ್ರಜಾಪ್ರಭುತ್ವದ ವಿಧಾನದಲ್ಲಿ ತೈವಾನ್‌ನ ಅಧ್ಯಕ್ಷೆಯಾಗಿ ಆಯ್ಕೆಯಾದ ಮಹಿಳೆ ಯಾರು?
••► ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿಯ (ಡಿಪಿಪಿ) ನಾಯಕಿ ಸೈ ಇಂಗ್–ವೆನ್


1100) ಟೆನಿಸ್‌ ದಂತಕತೆ ಮಾರ್ಟಿನಾ ನವ್ರಟಿಲೋವಾ ಯಾವ ದೇಶದವರು?
••► ಅಮೆರಿಕ

To be Continued...

No comments:

Post a Comment