"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 27 May 2016

☀ ಇಂದಿನ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : •► ಕೋಸ್ಟಲ್ ಎಕನಾಮಿಕ್ ಝೋನ್ ಎಂದರೇನು (ಸಿಇಝೆಡ್)? ಕೋಸ್ಟಲ್ ಎಕನಾಮಿಕ್ ಝೋನ್​ನಡಿ ಸಾಗರಮಾಲೆ ಯೋಜನೆಯ ಪ್ರಯೋಜನಗಳನ್ನು ಬರೆಯಿರಿ? (CEZ- Coastal Economic Zone & Importance of Sagar Mala project in CEZ)

☀ ಇಂದಿನ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : 
•► ಕೋಸ್ಟಲ್ ಎಕನಾಮಿಕ್ ಝೋನ್ ಎಂದರೇನು (ಸಿಇಝೆಡ್)? ಕೋಸ್ಟಲ್ ಎಕನಾಮಿಕ್ ಝೋನ್​ನಡಿ ಸಾಗರಮಾಲೆ ಯೋಜನೆಯ ಪ್ರಯೋಜನಗಳನ್ನು ಬರೆಯಿರಿ? 
(CEZ- Coastal Economic Zone & Importance of Sagar Mala project in CEZ)
━━━━━━━━━━━━━━━━━━━━━━━━━━━━━━━━━━━━━━━━━━━━━


●.ಕೋಸ್ಟಲ್ ಎಕನಾಮಿಕ್ ಝೋನ್, ಕರಾವಳಿ ಆರ್ಥಿಕ ವಲಯ ಎಂದು ಕರೆಯಲ್ಪಡುವ ವಿಶೇಷ ವಲಯದಿಂದ ಬಂದರುಗಳ ಅಭಿವೃದ್ಧಿ ಯೋಜನೆ ರೂಪಿಸಲಾಗುತ್ತದೆ. ಕರಾವಳಿ ಪ್ರದೇಶದಲ್ಲಿ 300-500 ಕಿ.ಮೀ. ವ್ಯಾಪ್ತಿಯನ್ನು ಕೋಸ್ಟಲ್​ಲೈನ್ ಎಂದು  ವಿಸ್ತರಿಸಲಾಗುತ್ತದೆ.

●.ಉದ್ಯಮ ಸ್ಥಾಪನೆಗೆ ಒತ್ತು ನೀಡುವ ಮೂಲಕ ಭಾರತದ ಸರಕು ರಫ್ತಿನಲ್ಲಿ ವಾರ್ಷಿಕ 7.25 ಲಕ್ಷ ಕೋಟಿ ರೂಪಾಯಿ ಹೆಚ್ಚಳದ ಗುರಿ ಹೊಂದಲಾಗಿದೆ. 14 ಸಿಇಝೆಡ್ ಪ್ರದೇಶಗಳನ್ನು ಗುರುತಿಸಲಾಗಿದ್ದು, ಕರಾವಳಿ ತೀರದಲ್ಲಿ ಬರುವ ರಾಜ್ಯಗಳು ಒಂದು ಅಥವಾ ಹೆಚ್ಚು ಸಿಇಝೆಡ್​ಗಳನ್ನು ಪಡೆಯುತ್ತವೆ. ಕೆಲವೆಡೆ ಸಿಇಝೆಡ್ ಮೂಲಕ ಆರಂಭದಲ್ಲಿ ಪ್ರಾಯೋಗಿಕ ಯೋಜನೆ ರೂಪಿಸಲಾಗುತ್ತದೆ.

●.ಸಿಇಝೆಡ್ ಪ್ರದೇಶಗಳಲ್ಲಿ ವಿವಿಧ ಉತ್ಪಾದನಾ ಉದ್ಯಮ ಸ್ಥಾಪಿಸಲಾಗುತ್ತದೆ. ಭಾರತಕ್ಕೆ ಅಗತ್ಯವಾದ ವಿದ್ಯುತ್ ಮತ್ತು ಇತರ ಶಕ್ತಿ ಮೂಲಗಳು, 3 ಕೋಸ್ಟಲ್ ಪವರ್ ಕ್ಲಸ್ಟರ್, ಒಂದು ಅಥವಾ ಎರಡು ಕೋಸ್ಟಲ್ ರಿಫೈನರಿ ಕ್ಲಸ್ಟರ್​ಗಳನ್ನು 2025ರ ವೇಳೆಗೆ ಅಭಿವೃದ್ಧಿಪಡಿಸುವ ಯೋಜನೆ ಹೊಂದಲಾಗಿದೆ.

●.ವಾರ್ಷಿಕ 4 ಕೋಟಿ ಟನ್ ಸ್ಟೀಲ್ ಮತ್ತು ಸಿಮೆಂಟನ್ನು 2025ರ ವೇಳೆಗೆ ಕರಾವಳಿಯ ಪ್ರದೇಶಗಳಲ್ಲಿ ಉತ್ಪಾದಿಸುವ ಗುರಿ ಹೊಂದಿದೆ. ಇದರಿಂದ 2014-15ನೇ ಸಾಲಿನಲ್ಲಿದ್ದ ಭಾರತದ ವಾರ್ಷಿಕ ರಫ್ತನ್ನು 30 ಲಕ್ಷ ಕೋಟಿ ರೂ.ನಿಂದ 2020ರ ವೇಳೆಗೆ 60 ಲಕ್ಷ ಕೋಟಿ ರೂ.ಗೆ ಏರಿಸುವ ಯೋಜನೆಯಿದೆ. ಉತ್ಪಾದನಾ ಮತ್ತು ವಿವಿಧ ಉದ್ಯಮ ಕ್ಷೇತ್ರದಲ್ಲಿ ಸಾಗರಮಾಲೆ ಯೋಜನೆಯ ಅನುಷ್ಠಾನದಿಂದ 40 ಲಕ್ಷ ನೇರ ಉದ್ಯೋಗ ಮತ್ತು 60 ಲಕ್ಷ ಮಂದಿಗೆ ಪರೋಕ್ಷ ಉದ್ಯೋಗ ಲಭಿಸಲಿದೆ.


☀ಕೋಸ್ಟಲ್ ಎಕನಾಮಿಕ್ ಝೋನ್​ನಡಿ ಸಾಗರಮಾಲೆ ಯೋಜನೆಯ ಪ್ರಯೋಜನಗಳು :

●.ವಿಶೇಷ ಆರ್ಥಿಕ ವಲಯದಂತೆಯೇ, ಸಾಗರಮಾಲೆ ಯೋಜನೆಯನ್ನು ಕೋಸ್ಟಲ್ ಎಕನಾಮಿಕ್ ಝೋನ್​ನಡಿ ಸ್ಥಾಪಿಸುವುರಿಂದ ಇದರ ಮೂಲಕ ವ್ಯವಹಾರ ನಡೆಸುವ ಎಲ್ಲ ರೀತಿಯ ಉದ್ದಿಮೆಗಳಿಗೆ ವಿಶೇಷ ಕೊಡುಗೆ ಮತ್ತು ಪ್ರಯೋಜನಗಳು ದೊರೆಯಲಿದೆ.

●.ರಿಯಾಯಿತಿ ದರದಲ್ಲಿ ಸೇವೆ ಮತ್ತು ಸೌಲಭ್ಯ, ಪೆಟ್ರೋಕೆಮಿಕಲ್ಸ್, ಎಲೆಕ್ಟ್ರಾನಿಕ್ಸ್, ಸ್ಟೀಲ್, ಸಿಮೆಂಟ್, ರಾಸಾಯನಿಕ ಮತ್ತು ಗೊಬ್ಬರ, ಬಿಡಿ ಭಾಗಗಳ ತಯಾರಿ, ಹಡಗು ಉತ್ಪಾದನಾ ಉದ್ಯಮ, ಮೀನುಗಾರಿಕೆ ಸೇರಿದಂತೆ ಪ್ರಮುಖ ಉದ್ಯಮಗಳ ಸ್ಥಾಪನೆಗೆ ಉತ್ತೇಜನ ದೊರೆಯಲಿದೆ.

●.ಈ ವಿಶೇಷ ವಲಯದಲ್ಲಿ ಸ್ಥಾಪಿತವಾಗುವ ಕಾರ್ಖಾನೆಗಳಿಗೂ ಸರ್ಕಾರದ ಸೌಲಭ್ಯ ಮತ್ತು ಸಹಾಯಧನ ಲಭ್ಯವಾಗುತ್ತದೆ. ಆಯಾ ಪ್ರದೇಶದ ಪ್ರಮುಖ ಉದ್ಯಮಗಳು ಮತ್ತು ಪ್ರಾದೇಶಿಕ ಭಿನ್ನತೆಗನುಗುಣವಾಗಿ ಬಂದರಿನ ಸಮೀಪ ಉದ್ಯಮ ಸ್ಥಾಪನೆಗೆ ಒತ್ತು ಕೊಡಲಾಗುತ್ತದೆ. ಭಾರತದ ದಕ್ಷಿಣ ಕರಾವಳಿಯ ಉದ್ಯಮ ಒಂದು ರೀತಿಯದ್ದಾದರೆ, ಪೂರ್ವ ಮತ್ತು ಪಶ್ಚಿಮ ಕರಾವಳಿಯ ಪ್ರದೇಶಗಳ ಉದ್ಯಮಗಳು ಇನ್ನೊಂದು ರೀತಿಯದ್ದಾಗಿರುತ್ತವೆ.

No comments:

Post a Comment