"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 3 May 2016

ಜನೆವರಿ -2016ರ (ಭಾಗ -31) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (General knowledge on Current Affairs (Part-31)) ☆.(ಜನೆವರಿ -2016ರ ಪ್ರಚಲಿತ ಘಟನೆಗಳ ಕ್ವಿಜ್)

☀ಜನೆವರಿ -2016ರ (ಭಾಗ -31) ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ
(General knowledge on Current Affairs (Part-31))
☆.(ಜನೆವರಿ -2016ರ ಪ್ರಚಲಿತ ಘಟನೆಗಳ ಕ್ವಿಜ್)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)
 
- ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಗತ್ಯವಾದ ಮುಖ್ಯವಾಗಿ ಇತ್ತೀಚಿನ ಪ್ರಸಕ್ತ ಜನೆವರಿ -2016ರ ವಿದ್ಯಮಾನಗಳ ಬಗ್ಗೆ ವಿಶೇಷವಾಗಿ ಅದು ರಾಷ್ಟ್ರೀಯ, ಅಂತರರಾಷ್ಟ್ರೀಯ ಸಾಹಿತ್ಯ, ಕಲೆ, ಸಂಸ್ಕೃತಿ, ಕ್ರೀಡೆ, ವಿಜ್ಞಾನ, ರಾಜಕೀಯ ಮತ್ತು ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳ ವಿದ್ಯಮಾನಗಳನ್ನು ಅಯಾ ದಿನದ ದಿನಪತ್ರಿಕೆಗಳನ್ನು ಕಲೆಹಾಕಿ ಸಂಕ್ಷೇಪಿಸಿ 'ಸ್ಪರ್ಧಾಲೋಕ'ದಲ್ಲಿ ಅಪಡೆಟ್ ಮಾಡಲು ಒಂದು ಚಿಕ್ಕ ಪ್ರಯತ್ನ.



2131) ಮಹಿಳೆಯರು, ಮಕ್ಕಳು ಮತ್ತು ಯುವಜನರು ಎದುರಿಸುವ ಪ್ರಮುಖ ಆರೋಗ್ಯ ಸಮಸ್ಯೆಗಳ ಕುರಿತ ವಿಶ್ವಸಂಸ್ಥೆಯ ಜಾಗತಿಕ ಮಟ್ಟದ ಸಲಹಾ ಸಮಿತಿಗೆ ಇತ್ತೀಚೆಗೆ ಆಯ್ಕೆಗೊಂಡ ಭಾರತೀಯ?
••► ಕೇಂದ್ರದ ಆರೋಗ್ಯ ಸಚಿವ ಜೆ.ಪಿ. ನಡ್ಡಾ .


2132) ಮಹಿಳೆಯರು, ಮಕ್ಕಳು ಮತ್ತು ಯುವಜನರು ಎದುರಿಸುವ ಪ್ರಮುಖ ಆರೋಗ್ಯ ಸಮಸ್ಯೆಗಳ ಕುರಿತ ವಿಶ್ವಸಂಸ್ಥೆಯ ಜಾಗತಿಕ ಮಟ್ಟದ ಸಲಹಾ ಸಮಿತಿ ಕುರಿತ ಹೆಚ್ಚಿನ ಮಾಹಿತಿ  :
✧. ಈ ಸಮಿತಿಯ ಹೆಸರು ‘ಪ್ರತಿ ಮಹಿಳೆ, ಪ್ರತಿ ಮಗು’.
✧. ಚಿಲಿಯ ಅಧ್ಯಕ್ಷೆ ಮಿಷೆಲ್ ಬಾಕಲೆಟ್ ಮತ್ತು ಇಥಿಯೋಪಿಯ ಪ್ರಧಾನಿ ಮುಲತು ಟೆಸೋಮ್ ಅವರು ಈ ಸಮಿತಿಯ ಸಹ ಅಧ್ಯಕ್ಷರಾಗಿದ್ದಾರೆ.


2133) ಇತ್ತೀಚೆಗೆ ಯಾವ ನದಿಯ ಜಲಾನಯನ ಪ್ರದೇಶ ಅಭಿವೃದ್ಧಿಗೆ ವಿಶ್ವಬ್ಯಾಂಕ್ ಭಾರತಕ್ಕೆ 250 ದಶಲಕ್ಷ ಡಾಲರ್ ನೆರವು ನೀಡಲಿದೆ.?
••► ಕೋಸಿ ನದಿ


2134) ಕೋಸಿ ನದಿ ಕುರಿತ ಹೆಚ್ಚಿನ ಮಾಹಿತಿ  :
✧.  ಬಿಹಾರದ ಕಣ್ಣೀರ ನದಿ.
✧. ಕೋಸಿ ನದಿಯು ಹಿಮಾಲಯದ ಉತ್ತರ ಭಾಗದ ಕಡಿದಾದ ಪ್ರದೇಶದಿಂದ ಅಂದರೆ ಟಿಬೆಟ್‍ನಲ್ಲಿ ಹುಟ್ಟಿ, ನೇಪಾಳದ ಮೂಲಕ ಹರಿದುಬರುತ್ತದೆ.
✧. ಕೋಸಿ ನದಿಯು ಉತ್ತರ ಬಿಹಾರದ ಮೂಲಕ ಹರಿಯುತ್ತದೆ ಹಾಗೂ ಗಂಗಾನದಿಯನ್ನು ಕಟಿಯಾರ ಜಿಲ್ಲೆಯ ಕ್ರುಸೆಲಾದಲ್ಲಿ ಸೇರುವ ಮುನ್ನ ವಿಭಜನೆಯಾಗುತ್ತದೆ.
★ಉಪನದಿಗಳು:
✧. ಪೂರ್ವದಲ್ಲಿ ಕಾಂಚನಜುಂಗಾದಿಂದ ಹುಟ್ಟುವ ತುಮರ್ ಕೋಸಿ, ಟಿಬೇಟ್‍ನ ಅರುಣ್ ನದಿ ಹಾಗೂ ಪಶ್ಚಿಮದ ಗೊಸೈನ್‍ಥಾನ್‍ನ ಸನ್ ಕೋಸಿ ನದಿಗಳು ಇದರ ಉಪನದಿಗಳಾಗಿವೆ.
✧. ಸನ್ ಕೋಸಿಯ ಉಪನದಿಗಳು ಪೂರ್ವದಿಂದ ಪಶ್ಚಿಮಕ್ಕೆ ದೂದ್ ಕೋಸಿ, ಭೋತೆ ಕೋಸಿ, ತಂಬಾ ಕೋಸಿ ಹಾಗೂ ಇಂದ್ರಾವತಿ ಕೋಸಿ.


2135) ಭರಚುಕ್ಕಿ ಜಲವಿದ್ಯುತ್ ಯೋಜನೆ ಇಲ್ಲಿ ನಿರ್ಮಿಸಲಾಗಿದೆ ...
••► ಶಿವನಸಮುದ್ರ ಸಮೀಪ.


2136) ದ ಲೇಡಿ ವಿಗ್ರಮ್ ಟ್ರೋಫಿಯು ಯಾವ ಕ್ರೀಡೆಗೆ ಸಂಬಂಧಿಸಿದೆ?
••► ಮೋಟರ್ ಸ್ಪೋಟ್ಸ್(ಫಾಮ್ರ್ಯುಲಾ ಕಾರ್ ರೇಸ್)


2137) ಜೆಹಾನ್ ದರುವಾಲಾ ಅವರು ಯಾವ ಕ್ರೀಡೆಯಲ್ಲಿ ಪ್ರಸಿದ್ಧರಾಗಿದ್ದಾರೆ?
••► ಮೋಟರ್ ಸ್ಪೋಟ್ಸ್(ಫಾಮ್ರ್ಯುಲಾ ಕಾರ್ ರೇಸ್)


2138) ಇತ್ತೀಚೆಗೆ ಪಕ್ಷಿ ವಿಜ್ಞಾನಿಗಳು ಈಶಾನ್ಯ ಭಾರತ ಪ್ರದೇಶದಲ್ಲಿ ಚೀನಾದ ಗಡಿಗೆ ಹೊಂದಿಕೊಂಡ ಅರಣ್ಯದಲ್ಲಿ ಹೊಸ ಪಕ್ಷಿ ಪ್ರಬೇಧವೊಂದನ್ನು ಪತ್ತೆ ಮಾಡಿದ್ದಾರೆ. ಆ ಪಕ್ಷಿ ಪ್ರಬೇಧದ ಹೆಸರೇನು?
••► ಹಿಮಾಲಯನ್ ಫಾರೆಸ್ಟ್ ಥ್ರಷ್ .


2139) ಹಿಮಾಲಯನ್ ಫಾರೆಸ್ಟ್ ಥ್ರಷ್ ಕುರಿತ ಹೆಚ್ಚಿನ ಮಾಹಿತಿ  :
✧.  ದೇಶದಲ್ಲಿ ಸ್ವಾತಂತ್ರ್ಯಾನಂತರ ಪತ್ತೆಯಾದ ನಾಲ್ಕು ಹೊಸ ಪಕ್ಷಿಪ್ರಬೇಧಗಳ ಪೈಕಿ ಒಂದಾಗಿದೆ.
✧. ಇದರ ವೈಜ್ಞಾನಿಕ ಹೆಸರು ಝೂತೆರಾ ಸಮಿಮಲ್ಲಿ ಎಂದಾಗಿದೆ.ಖ್ಯಾತ ಪಕ್ಷಿಶಾಸ್ತ್ರಜ್ಞ ಹಾಗೂ ಪರಿಸರವಾದಿ ಸಲೀಂ ಅಲಿ ಅವರ ಗೌರವಾರ್ಥ ಈ ಹೆಸರನ್ನು ಹೊಸ ಪಕ್ಷಿಗೆ ಇಡಲಾಗಿದೆ.
✧. ಇದಕ್ಕೂ ಮುನ್ನ ಪತತೆ ಮಾಡಲಾದ ಪಕ್ಷಿಪ್ರಬೇಧವೆಂದರೆ 2006ರಲ್ಲಿ ಅರುಣಾಚಲ ಪ್ರದೇಶದಲ್ಲಿ ಪತ್ತೆಯಾದ ಬುಗುನ್ ಲಿಯೊಸಿಚೆಲ.


2140) ಸ್ವತಂತ್ರ ಜಿಪಿಎಸ್ ಹೊಂದಿರುವ ದೇಶಗಳು
✧. ಅಮೆರಿಕ ••┈┈┈┈┈┈┈┈┈┈┈┈┈•• ಜಿಪಿಎಸ್
✧. ರಷ್ಯನ್ ಫೆಡರೇಷನ್••┈┈┈┈┈┈┈┈┈┈┈┈┈••ಜಿಎಲ್‍ಒಎನ್ ಎಎಸ್ಎಸ್
✧. ಚೀನಾ ••┈┈┈┈┈┈┈┈┈┈┈┈┈••ಬಿಇಐಡಿಒಯು
✧. ಯುರೋಪ್••┈┈┈┈┈┈┈┈┈┈┈┈┈••ಗೆಲಿಲಿಯೋ


2141) ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆ(ಎನ್‍ಜೆಎಸಿ) ಯನ್ನು ಕೇಂದ್ರ ಸರ್ಕಾರ ಯಾವಾಗ ಜಾರಿ ಮಾಡಿತ್ತು.?
••► 2015ರ ಏಪ್ರಿಲ್ 13ರಂದು


2142) 2015ರ ಅಕ್ಟೋಬರ್ 16ರಂದು ಸುಪ್ರೀಂ ಕೋರ್ಟ್ ಎನ್‍ಜೆಎಸಿ ರದ್ದುಪಡಿಸಿ ಮತ್ತೆ ಕೊಲಿಜಿಯಂ ಕಾರ್ಯನಿರ್ವಹಣೆ ಮತ್ತೆ ಅಸ್ತಿತ್ವಕ್ಕೆ ತಂದಿದೆ.


2143) ಸ್ಪೇಸ್ ಎಕ್ಸ್ ಹೆಸರಿನ ಖಾಸಗಿ ಬಾಹ್ಯಾಕಾಶ ಸಾರಿಗೆ ಕಂಪನಿಯು ಯಾವ ದೇಶದಲ್ಲಿದೆ?
••► ಅಮೆರಿಕ


2144) ಇತ್ತೀಚೆಗೆ ಐಎನ್‍ಎಸ್‍ಇಎಡಿ ಬ್ಯುಸಿನೆಸ್ಸ ಸ್ಕೂಲ್, ಅಡೆಕ್ಕೊ ಹಾಗೂ ಸಿಂಗಾಪುರದ ಮಾನವ ಬಂಡವಾಳ ನಾಯಕತ್ವ ಸಂಸ್ಥೆ (ಎಚ್‍ಸಿಎಲ್‍ಐ) ಸಂಯುಕ್ತವಾಗಿ ಸಿದ್ಧಪಡಿಸಿದ ಜಾಗತಿಕ ಪ್ರತಿಭಾ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಭಾರತ ವಿಶ್ವದಲ್ಲಿ ಏಷ್ಟನೇ ಸ್ಥಾನ ಪಡೆದಿದೆ.?
••► 89ನೇ ಸ್ಥಾನ.


2145) ಜಾಗತಿಕ ಪ್ರತಿಭಾ ಸ್ಪರ್ಧಾತ್ಮಕತೆ ಸೂಚ್ಯಂಕದ ಕುರಿತ ಹೆಚ್ಚಿನ ಮಾಹಿತಿ  :
✧.  ಭಾರತ 2014-15ನೇ ಸಾಲಿನ ಸೂಚ್ಯಂಕಕ್ಕೆ ಹೋಲಿಸಿದರೆ 11 ಸ್ಥಾನಗಳ ಕುಸಿತ ಕಂಡಿದೆ. 2014-15ನೇ ಸಾಲಿನ ವರದಿಯಲ್ಲಿ ಭಾರತ 78ನೇ ಸ್ಥಾನ ಹೊಂದಿತ್ತು.

✧. ಜಾಗತಿಕ ಪ್ರತಿಭಾ ಸ್ಪರ್ಧಾತ್ಮಕ ಸೂಚ್ಯಂಕದ ಅಗ್ರ ಹತ್ತು ದೇಶಗಳೆಂದರೆ ಕ್ರಮವಾಗಿ ಸ್ವಿಡ್ಜರ್‍ಲೆಂಡ್, ಸಿಂಗಾಪುರ, ಲಕ್ಸಂಬರ್ಗ್, ಅಮೆರಿಕ, ಡೆನ್ಮಾರ್ಕ್, ಸ್ವೀಡನ್, ಇಂಗ್ಲೆಂಡ್, ನಾರ್ವೆ, ಕೆನಡಾ ಹಾಗೂ ಫಿನ್‍ಲೆಂಡ್.

✧. ತಳಮಟ್ಟದಲ್ಲಿರುವ ಐದು ದೇಶಗಳೆಂದರೆ ಮಾಲಿ, ತಾಂಜಾನಿಯಾ, ಇಥಿಯೋಪಿಯಾ, ಬುರ್ಕಿನೊ ಫ್ಯಾಸೊ ಹಾಗೂ ಮಡಗಾಸ್ಕರ್.


2146) ಇತ್ತೀಚೆಗೆ (2016ರ ಜನವರಿ 14ರಂದು) ಯೂರೋಪಿಯನ್ ಕಮಿಷನ್‍ನ ಪ್ರತಿಷ್ಠಿತ ಲಾರೆನ್ಸೊ ನತಾಲಿ ಮಾಧ್ಯಮ ಪ್ರಶಸ್ತಿಯನ್ನು ಪಡೆದ ಭಾರತೀಯ ಯಾರು?
••► ದೆಹಲಿಯ ಹವ್ಯಾಸಿ ಬರಹಗಾರ್ತಿ ಅಂಕಿತಾ ಆನಂದ್
     

2147) ಇತ್ತೀಚೆಗೆ ರಾಷ್ಟ್ರೀಯ ಜನತಾದಳದ (ಆರ್ ಜೆ ಡಿ) ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಗೊಂಡವರು?
••► ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್.(9ನೇ ಬಾರಿ ಆಯ್ಕೆ)


2148) ಪಾಂಗ್ ಸರೋವರ ಅಥವಾ ಪಾಂಗ್ ಡಾಮ್ ಕೆರೆ ಎಂದು ಕರೆಯಲ್ಪಡುವ ಅಣೆಕಟ್ಟು ಯಾವುದು?
••► ಮಹಾರಾಣಾಪ್ರತಾಪ್ ಸಾಗರ


2149) ಮಹಾರಾಣಾಪ್ರತಾಪ್ ಸಾಗರ ಅಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಿದ ಅತಿದೊಡ್ಡ ಅಣೆಕಟ್ಟಾಗಿದೆ.?
••► ಬಿಯಾಸ್ ನದಿ.


2150) ರಾಸ್ಮೆರ್ ಶೃಂಗಸಭೆಯಲ್ಲಿ ಘೋಷಿಸಲಾದ 25 ಅಂತಾರಾಷ್ಟ್ರೀಯ ಜೌಗುಭೂಮಿ ಪ್ರದೇಶಗಳಲ್ಲಿ ಒಂದಾದ ಮಹಾರಾಣಾಪ್ರತಾಪ್ ಸಾಗರ ಅಣೆಕಟ್ಟನ್ನು ಎಲ್ಲಿ ನಿರ್ಮಿಸಲಾಗಿದೆ?
••► ಹಿಮಾಚಲ ಪ್ರದೇಶದ ಕಂಗಾರಾ ಜಿಲ್ಲೆಯ ಶಿವಾಲಿಕ್ ಬೆಟ್ಟಪ್ರದೇಶದ ಜೌಗುಭೂಮಿ.


2151) ರಾಮ್ಸರ್ ಶೃಂಗ ಸಭೆಯಿಂದ ಪ್ರಸಿದ್ಧವಾದ ರಾಮ್ಸರ್ ನಗರವು ಯಾವ ದೇಶದಲ್ಲಿದೆ?
••► ಇರಾನ್‍(ಮಜಂದರಮ್‍ನಲ್ಲಿ.)


2152) ಇಂದಿರಾ ಗಾಂಧಿ ಮೃಗಾಲಯ (ಪ್ರಾಣಿಶಾಸ್ತ್ರ ಉದ್ಯಾನವನ) ಪಾರ್ಕ್ (IGZP) ಎಲ್ಲಿದೆ?
••► ಆಂಧ್ರಪ್ರದೇಶದ ವಿಶಾಖಪಟ್ಟಣಂ ಬಳಿಯ ಕೊಂಬಲಕೊಂಡದಲ್ಲಿ.


2153) ಇತ್ತೀಚೆಗೆ ಜಾಗತಿಕವಾಗಿ, ಇದೇ ಮೊದಲ ಬಾರಿಗೆ ವಿಶ್ವಬ್ಯಾಂಕ್ ದೇಶದ ಮೃಗಾಲಯವೊಂದರ ಪುನರ್ ನಿರ್ಮಾಣಕ್ಕೆ ನೆರವು (135 ಕೋಟಿ ರೂ) ನೀಡಲು ಮುಂದಾಗಿದ್ದು, ಅದು ಯಾವುದು & ಎಲ್ಲಿದೆ?
••► ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಇಂದಿರಾ ಗಾಂಧಿ ಮೃಗಾಲಯ ಪಾರ್ಕ್ (IGZP)


2154) NITI (ನೀತಿ) ಆಯೋಗ :
••► ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ.


2155) ಇತ್ತೀಚೆಗೆ ಚಿನ್ನ ನಗದೀಕರಣ ಯೋಜನೆಯಲ್ಲಿ ಹೂಡಿಕೆ ಮಾಡಿದ ಇತಿಹಾಸ ಪ್ರಸಿದ್ಧ ಗುಜರಾತ್‍ನ ಮೊಟ್ಟಮೊದಲ ದೇವಾಲಯ ಯಾವುದು?
••► ಸೋಮನಾಥ ದೇವಾಲಯ


2156) ಇತ್ತೀಚೆಗೆ ಚೀನಾ ಪ್ರಾಯೋಜಿತ ಏಷ್ಯನ್ ಮೂಲಸೌಕರ್ಯ ಬಂಡವಾಳ ಬ್ಯಾಂಕ್ (ಎಐಐಬಿ)  ನಿರ್ದೇಶಕರ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದ ಭಾರತೀಯ?
••► ದಿನೇಶ್ ಶರ್ಮಾ


2157) ಇತ್ತೀಚೆಗೆ 2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ದೋಷಾರೋಪಕ್ಕೆ ಒಳಗಾಗಿ ಅಜೀವ ನಿಷೇಧದ ಶಿಕ್ಷೆಗೊಳಗಾದ ರಾಜಸ್ಥಾನ ರಾಯಲ್ಸ್ ತಂಡದ ಕ್ರೀಡಾಪಟು ಯಾರು?
••► ಅಜಿತ್ ಚಂಡಿಲಾ


2158) ಇತ್ತೀಚೆಗೆ ತಂಬಾಕು ಉತ್ಪನ್ನಗಳ ಮಾರಾಟದ ಮೇಲೆ ಸಂಪೂರ್ಣವಾಗಿ ನಿಷೇಧ ಹೇರಿ ತಂಬಾಕು ವಿರೋಧಿ ಕಾನೂನನ್ನು ಜಾರಿಗೊಳಿಸಿದ ದೇಶ ಯಾವುದು?
••► ತುರ್ಕ್‍ಮೆನಿಸ್ತಾನ


2159) ತಂಬಾಕು ವಿರೋಧಿ ಕಾನೂನು ಕುರಿತ ಹೆಚ್ಚಿನ ಮಾಹಿತಿ  :
✧. ವಿಶ್ವದಲ್ಲಿಯೇ ಅತಿ ಕಡಿಮೆ ಸಿಗರೇಟು ಸೇದುವವರು ತುರ್ಕ್‍ಮೆನಿಸ್ತಾನದಲ್ಲಿದ್ದಾರೆ ಎಂದು ಕಳೆದ ಜುಲೈನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತ್ತು.
2004ರಲ್ಲಿ ಭೂತಾನ್ ಎಲ್ಲ ರೀತಿಯ ತಂಬಾಕು ಉತ್ಪನ್ನಗಳನ್ನು ನಿಷೇಧಿಸಿದ ಮೊದಲ ದೇಶ ಎನಿಸಿಕೊಂಡಿತ್ತು.


2160) ಇತ್ತೀಚೆಗೆ ಚಾಲನೆಗೊಂಡ ಏಷ್ಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (ಎಐಐಬಿ) ಎಂಬ ಹೊಸ ಅಂತರರಾಷ್ಟ್ರೀಯ ಅಭಿವೃದ್ಧಿ ಬ್ಯಾಂಕ್‍ಗೆ ಮೊಟ್ಟಮೊದಲ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡವರು?
••► ಚೀನಾದ ಮಾಜಿ ಹಣಕಾಸು ಸಚಿವ ಜಿನ್ ಲಿಕ್ವಿನ್

... ಮುಂದುವರೆಯುವುದು.

No comments:

Post a Comment