☀ಕರ್ನಾಟಕ ರಾಜ್ಯದ ಆರ್ಥಿಕತೆ ಒಂದು ಅವಲೋಕನ :(ಸಂಕ್ಷಿಪ್ತ ಅವಲೋಕನ)
(An overview of the Karnataka state economy)-
━━━━━━━━━━━━━━━━━━━━━━━━━━━━━━━━━━━━━━━━━━━━━
✧.ಕರ್ನಾಟಕ ರಾಜ್ಯದ ಆರ್ಥಿಕತೆ.
(Karnataka state economy)
✧.ಐಎಎಸ್ / ಕೆಎಎಸ್ ಪರೀಕ್ಷೆಗಳಿಗಾಗಿ ಸಾಮಾನ್ಯ ಅಧ್ಯಯನ.
(GENERAL STUDIES FOR IAS/KAS)
— ಕೇಂದ್ರ ಹಾಗೂ ರಾಜ್ಯ ಲೋಕಸೇವಾ ಆಯೋಗವು ನಡೆಸುವ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆಗಳಿಗಾಗಿ ತುಂಬಾ ಉಪಯುಕ್ತವಾಗಿರುವ "ಕರ್ನಾಟಕ ರಾಜ್ಯದ ಆರ್ಥಿಕತೆ" (Karnataka state economy) ಕುರಿತ ಅಧ್ಯಯನ ಸಾಮಗ್ರಿಗಳನ್ನು ಪ್ರಸ್ತುತ ನೂತನ ಅಂಕಿ ಅಂಶಗಳನ್ನೊಳಗೊಂಡಂತೆ ಮಾಹಿತಿಯನ್ನು ಇಲ್ಲಿ ಪ್ರಸ್ತುತ ಪಡಿಸುವ ಒಂದು ಚಿಕ್ಕ ಪ್ರಯತ್ನ.
●.ಅಧ್ಯಾಯ : 1.1) ಕರ್ನಾಟಕ ರಾಜ್ಯದ ಆರ್ಥಿಕತೆ ಒಂದು ಅವಲೋಕನ :
━━━━━━━━━━━━━━━━━━━━━━━━━━━━━━━━━━━━━━
✧.2011ರ ಜನಗಣತಿಯಂತೆ ಭಾರತದ ಜನಸಂಖ್ಯೆಯ ಶೇಕಡ 5.05 ರಷ್ಟು ಅಂದರೆ 6.11 ಕೋಟಿ ನಿವಾಸಿಗಳಿಗೆ ಕರ್ನಾಟಕವು ನೆಲೆಯಾಗಿರುತ್ತದೆ.
✧.ಭಾರತದ ಭೌಗೋಳಿಕ ಪ್ರದೇಶದ ಶೇಕಡ 5.83ರಷ್ಟು ಹೊಂದಿರುವ ಕರ್ನಾಟಕವು, ಭಾರತದ ಬೃಹತ್ ರಾಜ್ಯಗಳ ಪೈಕಿ ಎಂಟನೆಯ ಸ್ಥಾನದಲ್ಲಿದ್ದು, ಜನಸಂಖ್ಯೆಯಲ್ಲಿ ಒಂಭತ್ತನೇ ಸ್ಥಾನದಲ್ಲಿರುತ್ತದೆ.
✧.ಕಳೆದ ದಶಕದಲ್ಲಿ ರಾಜ್ಯದ ಜನಸಂಖ್ಯೆಯು ಶೇಕಡ 15.7ರಷ್ಟು ಬೆಳೆದಿದ್ದು, 2001ರಲ್ಲಿದ್ದ ಅದರ ಜನಸಾಂದ್ರತೆಯು 276ರಿಂದ 319ಕ್ಕೆ 2011ರಲ್ಲಿ ಏರಿಕೆಯಾಗಿದ್ದು, ಈ ಅವಧಿಯಲ್ಲಿ ಸುಮಾರು ಶೇಕಡ 15.6ರಷ್ಟು ಹೆಚ್ಚಳವನ್ನು ಸೂಚಿಸುತ್ತಿದೆ.
✧.ರಾಜ್ಯದಲ್ಲಿನ ಜನನ ಪ್ರಮಾಣವು (ಪ್ರತಿ 1000 ಜನರಿಗೆ) 2000ದಲ್ಲಿ 22.2ರಷ್ಟು ಇದ್ದದ್ದು 2011ರಲ್ಲಿ ಶೇಕಡ 19.2ಕ್ಕೆ ಇಳಿದಿರುತ್ತದೆ. ಇದು ಶೇಕಡ 9ರಷ್ಟು ಇಳಿಕೆಯಾಗಿರುವುದನ್ನು ಸೂಚಿಸುತ್ತದೆ.
✧.ಮರಣ ಪ್ರಮಾಣವು 2000ದಲ್ಲಿ ಶೇಕಡ 7.6 ರಿಂದ 2011ರಲ್ಲಿ ಶೇಕಡ 7.1ಕ್ಕೆ ಇಳಿದಿದ್ದು, ಸುಮಾರು ಶೇಕಡ 6.5ರಷ್ಟು ಕಡಿಮೆಯಾಗಿರುತ್ತದೆ.
✧.ಜನಸಂಖ್ಯೆಯಲ್ಲಿ ಉಂಟಾದ ಬದಲಾವಣೆಗಳಿಂದಾಗಿ ಹೊಸ ಅವಕಾಶಗಳು ಹಾಗೂ ಸವಾಲುಗಳು ರಾಜ್ಯಕ್ಕೆ ಉದ್ಭವಿಸುವುದನ್ನು ನಿರೀಕ್ಷಿಸಲಾಗಿರುತ್ತದೆ.
✧.2011ರಲ್ಲಿ ಜನಸಂಖ್ಯೆಯ ಶೇಕಡ 50.80ರಷ್ಟು ಪುರುಷರಾಗಿದ್ದು ಜೊತೆಗೆ ಪ್ರತಿ 1000 ಗಂಡು ಮಕ್ಕಳಿಗೆ 943 ಹೆಣ್ಣು ಮಕ್ಕಳ ಲಿಂಗಾನುಪಾತವಿರುತ್ತದೆ. (2001ರಲ್ಲಿ ಪ್ರತಿ 1000 ಗಂಡು ಮಕ್ಕಳಿಗೆ 946 ಹೆಣ್ಣು ಮಕ್ಕಳಿದ್ದರು) ಮತ್ತು ವಯಸ್ಕರಲ್ಲಿನ ಲಿಂಗಾನುಪಾತವು ಪ್ರತಿ 1000 ಪುರುಷರಿಗೆ 968 ಸ್ತ್ರೀಯರು ಆಗಿರುತ್ತದೆ.
✧.(2001ರಲ್ಲಿ ಪ್ರತಿ 1000 ಪುರುಷರಿಗೆ 965 ಸ್ತ್ರೀಯರಿದ್ದರು) 2001ರಿಂದ 2011ರ ಅವಧಿಯಲ್ಲಿ ಕೆಲವೊಂದು ಜಿಲ್ಲೆಗಳಲ್ಲಿ ವಿಶೇಷವಾಗಿ ಚಾಮರಾಜನಗರ (2001ಕ್ಕೆ ಹೋಲಿಸಿದಾಗ 22ರಷ್ಟು ಇಳಿಕೆ) ದಾವಣಗೆರೆ (15ರಷ್ಟು ಇಳಿಕೆ) ಚಿತ್ರದುರ್ಗ (13ರಷ್ಟು ಇಳಿಕೆ) ಹಾಸನ (12ರಷ್ಟು ಇಳಿಕೆ) ಈ ರೀತಿಯಲ್ಲಿ ಮಕ್ಕಳ ಲಿಂಗಾನುಪಾತದಲ್ಲಿನ ಇಳಿಕೆಯು ಗ್ರಹಿಸಬೇಕಾದ ಕಾಳಜಿಯಾಗಿರುತ್ತದೆ.
✧.ರಾಜ್ಯದಲ್ಲಿ 0-6ರ ವಯಸ್ಸಿನ ಮಕ್ಕಳ ಜನಸಂಖ್ಯೆಯಲ್ಲಿ ಶೇಕಡ 2.30ರಷ್ಟು ಗಮನಾರ್ಹವಾದ ಇಳಿಕೆಯಾಗಿದ್ದು ಇದು ರಾಜ್ಯಾದಂತ್ಯ ಅಸಮವಾಗಿರುತ್ತದೆ.
✧.ಯಾದಗಿರಿ ಜಿಲ್ಲೆಯಲ್ಲಿ, ಜನಸಂಖ್ಯೆಯ ಶೇಕಡ 15.83 ಪ್ರಮಾಣದಷ್ಟು 0-6ರ ವಯಸ್ಸಿನ ಮಕ್ಕಳಿದ್ದರೆ ಉಡುಪಿ ಜಿಲ್ಲೆಯಲ್ಲಿ ಈ ಪ್ರಮಾಣವು ಕೇವಲ ಶೇಕಡ 8.54 ಆಗಿದ್ದು, ರಾಜ್ಯದೊಳಗಿನ ಜಿಲ್ಲೆಗಳ ವಿಭಿನ್ನ ಅಭಿವೃದ್ಧಿ ಅವಶ್ಯಕತೆಗಳನ್ನು ಸೂಚಿಸುತ್ತದೆ.
✧.2001ರ ಜನಗಣತಿಯಂತೆ ಕರ್ನಾಟಕ ರಾಜ್ಯದಲ್ಲಿ 1,04,01.918 ಕುಟುಂಬಗಳಿದ್ದು, 2011ರ ಜನಗಣತಿಯನುಸಾರ ರಾಜ್ಯವು 1,33,57.027 ಕುಟುಂಬಗಳನ್ನು ಹೊಂದಿರುತ್ತದೆ.
✧.ಕುಟುಂಬಗಳ ಸಂಖ್ಯೆಯಲ್ಲಿ ದಶಕದ ಬೆಳವಣಿಗೆ ದರವು ಶೇಕಡ 28.41ರಷ್ಟು ದಾಖಲಿಸಿರುತ್ತದೆ. ರಾಜ್ಯದಲ್ಲಿನ ಕುಟುಂಬಗಳ ಪೈಕಿ ಶೇಕಡ 14.91ರಷ್ಟು (19.65 ಲಕ್ಷ) ಮಹಿಳಾ ಪ್ರಧಾನ ಕುಟುಂಬಗಳನ್ನು ಕರ್ನಾಟಕವು ಹೊಂದಿರುತ್ತದೆ. ಅಖಿಲ ಭಾರತ ಮಟ್ಟದಲ್ಲಿ ಈ ಪ್ರಮಾಣವು ಶೇಕಡ 10.9ರಷ್ಟಿದೆ.
✧.ಕರ್ನಾಟಕದಲ್ಲಿ ಒಟ್ಟು ಜನಸಂಖ್ಯೆಯ ಶೇಕಡ 45.62ರಷ್ಟು ಅಂದರೆ 2,78.72.597 ವ್ಯಕ್ತಿಗಳು ತಾವು ಕೆಲಸಗಾರರೆಂದು ಎಣಿಕೆಗೊಳಪಟ್ಟಿರುತ್ತಾರೆ. ಅವರ ಪೈಕಿ ಶೇಕಡ 59ರಷ್ಟು ಪುರುಷರು ಮತ್ತು ಶೇಕಡ 31.87ರಷ್ಟು ಸ್ತ್ರೀಯರಾಗಿರುತ್ತಾರೆ.
✧.ರಾಜ್ಯದಲ್ಲಿ ಒಟ್ಟು ಕೆಲಸಗಾರರ ಪೈಕಿ ಶೇಕಡ 83.94ರಷ್ಟು ಪ್ರಧಾನ ಕೆಲಸಗಾರರು ಮತ್ತು ಶೇಕಡ 16.06 ರಷ್ಟು ಅಲ್ಪಾವಧಿ ಕೆಲಸಗಾರರಾಗಿರುತ್ತಾರೆ.
...ಮುಂದುವರೆಯುವುದು.
(courtesy :Karnataka Economic Survey)

No comments:
Post a Comment