☀ ಈ ದಿನದ ಪ್ರಚಲಿತ (KAS/IAS) ಪ್ರಶ್ನೆ:—
"ಹಿಂದೂ ಮಹಾಸಾಗರದಲ್ಲಿ ಭಾರತ ಸುತ್ತಲು ಚೀನಾ ದೇಶವು ತನ್ನ ರಕ್ಷಣಾ ನೇಲೆಗಳನ್ನು ಸೃಷ್ಠಿಸುತ್ತಿದೆ .ಇದರಿಂದಾಗಿ ಭಾರತ ಮುಂದೆ ಯಾವ ಪರಿಣಾಮಗಳನ್ನು ಎದುರಿಸಬಹುದು? ವಿಶ್ಲೇಷಿಸಿ."
(China's Naval Expansion in the Indian Ocean and it's impact on Indian territory)
━━━━━━━━━━━━━━━━━━━━━━━━━━━━━━━━━━━━━━━━━━━━━
★ ವಿವರಣಾತ್ಮಕ ಸಾಮಾನ್ಯ ಅಧ್ಯಯನ.
(General Studies notes in Kannada Medium)
★ ಐಎಎಸ್ / ಕೆಎಎಸ್ ಪರೀಕ್ಷಾ ವಿಶೇಷಾಂಕ
(KAS/IAS Examination Special)
— ಹಿಂದೂ ಮಹಾಸಾಗರ :
- ಜಗತ್ತಿನ ಮೂರನೇ ಅತಿ ದೊಡ್ಡ ಜಲಪ್ರದೇಶ. ಭೂಮಿಯ ಮೇಲಿನ ಒಟ್ಟು ಜಲಪ್ರದೇಶದ ಶೇ.20 ಭಾಗವನ್ನು ಈ ಮಹಾಸಾಗರ ಒಳಗೊಂಡಿದೆ. ಜಾಗತಿಕ ವ್ಯಾಪಾರ-ವಹಿವಾಟಿನಲ್ಲಿಯೂ ಈ ಪ್ರದೇಶಕ್ಕೆ ಹೆಚ್ಚು ಮಹತ್ವವಿದೆ.
- ಜಗತ್ತಿನ ಶೇ.80ರಷ್ಟು ತೈಲ ವಹಿವಾಟು ಈ ನೀರಿನ ಮೇಲೆಯೇ ನಡೆಯುತ್ತದೆ. 35 ದೇಶಗಳು, ಆರು ದ್ವೀಪಗಳನ್ನು ಇದು ಒಳಗೊಂಡಿದ್ದರೂ ಭಾರತವೇ ಇವುಗಳ ಪೈಕಿ ದೊಡ್ಡ ದೇಶ,
●.ಆರು ದಶಕಗಳ ಹಿಂದಿನವರೆಗೂ ಭಾರತ ನಿಜವಾಗಲೂ ಈ ಜಲಪ್ರದೇಶದ ಒಡೆಯನೇ ಆಗಿತ್ತು. ಕಳೆದ 10 ವರ್ಷಗಳಲ್ಲಿ ಭಾರತದಲ್ಲಿದ್ದ ರಾಜಕೀಯ ಸ್ಥಿತಿಗಳಿಂದ ಭಾರತ ಈ ಜಲಪ್ರದೇಶದ ಮೇಲಿದ್ದ ಹಿಡಿತ ಕಳೆದುಕೊಳ್ಳಬೇಕಾಗಿ ಬಂತು! ಭಾರತದ ಗೊಂದಲಮಯ ಮತ್ತು ಕ್ಷೀಣ ವಿದೇಶಾಂಗ ನೀತಿಯ ಲಾಭ ಪಡೆದ ಚೀನಾ, ಹಿಂದೂ ಮಹಾಸಾಗರದ ವ್ಯಾಪ್ತಿಗೆ ಬರುವ ದೇಶಗಳ ಮೇಲೆ ಒಂದೊಂದಾಗಿಯೇ ತನ್ನ ಹಿಡಿತ ಸಾಧಿಸಿತು.
●.ಶ್ರೀಲಂಕಾ, ಪಾಕಿಸ್ತಾನ, ಮಾಯನ್ಮಾರ್, ಬಾಂಗ್ಲಾ, ಕಾಂಬೋಡಿಯಾದ ಸಹಾಯದಿಂದ ಚೀನಾ ನೌಕಾ ನೆಲೆಗಳನ್ನು ಸ್ಥಾಪಿಸಿದ್ದೇ ಆದರೆ ತೈಲ ವಹಿವಾಟು, ವ್ಯಾಪಾರ-ವಹಿವಾಟು ತನ್ನಿಚ್ಚಿಗೆ ತಕ್ಕಂತೆ ನಡೆಯುತ್ತದೆ. ಭಾರತ ತಾನು ಹೇಳಿದಂತೆ ಕೇಳಿದರೆ ಸರಿ ಇಲ್ಲದೇ ಇದ್ದಲ್ಲಿ ತೈಲೋತ್ಪನ್ನಗಳು ಮತ್ತು ಇತರ ವಾಣಿಜ್ಯ ಸಾಮಾಗ್ರಿಗಳು ಹಿಂದೂ ಮಹಾಸಾಗರದಿಂದ ಭಾರತ ತಲುಪದಂತೆ ನೋಡಿಕೊಂಡರಾಯಿತು.ಹೇಗಿದ್ದರೂ ಹಿಂದೂ ಮಹಾಸಾಗರದಲ್ಲಿ ತನ್ನದೇ ಆಧಿಪತ್ಯವಿರಲಿದೆ,ಭಾರತದ ನೆರೆ ರಾಷ್ಟ್ರಗಳು ತಾನು ಹೇಳಿದಂತೆಯೇ ಕೇಳುತ್ತದೆ ಎಂಬುದು ಚೀನಾ ನಿಲುವಾಗಿತ್ತು. ಭಾರತ ಸರ್ಕಾರದ ಬೇಜವಾಬ್ದಾರಿತನವೂ ಚೀನಾದ ನಿಲುವಿಗೆ ಪೂರಕವಾಗಿತ್ತು.
●.ಲಡಾಖ್, ಅರುಣಾಚಲ ಪ್ರದೇಶದ ವಿಚಾರವಾಗಿ ಚೀನಾದ ಕ್ಯಾತೆ ಬಹಿರಂಗವಾಗಿ ಕಣ್ಣಿಗೆ ಕಾಣುತ್ತದೆ. ಆದರೆ, ಹಿಂದೂ ಮಹಾಸಾಗರದ ಅಲೆಗಳ ಹಿಂದೆ ಮುಚ್ಚಿಟ್ಟುಕೊಂಡು, ಅದರ ಜೊತೆಗೇ ಮುನ್ನುಗ್ಗಿ ಬರುವ ಅದರ ಹವಣಿಕೆ ಮೈಯೆಲ್ಲ ಕಣ್ಣಾಗಿದ್ದರೂ ಗಮನಿಸುವುದು ಕಷ್ಟ. ಇತ್ತೀಚಿನ ದಿನಗಳಲ್ಲಂತೂ ಮೀನುಗಾರಿಕಾ ಟ್ರಾಲರ್ ಗಳಂತೆ ಮಾರ್ಪಾಡು ಹೊಂದಿದ ಚೀನಾ ನೌಕಾ ಬೋಟ್ಗಳ ಓಡಾಟ ಈ ಪ್ರದೇಶದಲ್ಲಿ ಎಗ್ಗಿಲ್ಲದಂತೆ ಸಾಗಿದೆ. ಇದು ಭಾರತಕ್ಕೆ ನಿತ್ಯ ಎಚ್ಚರಿಕೆ.
●.ಆದರೆ, ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಅರುಣಾಚಲ ಪ್ರದೇಶದ ಗಡಿ ವಿಷಯದಲ್ಲಿ ಕ್ಯಾತೆ ತೆಗೆಯುತ್ತಿದ್ದ ಚೀನಾ ಈಗ ಹಿಂದೂ ಮಹಾಸಾಗರದ ವಿಷಯದಲ್ಲೂ ತಕರಾರು ಪ್ರಾರಂಭಿಸಿದೆ.
— ಚೀನಾದ ರಕ್ಷಣಾ ಸಚಿವಾಲಯದ ಪ್ರಕಾರ ಹಿಂದೂ ಮಹಾಸಾಗರ ಭಾರತಕ್ಕೆ ಸೇರಿಲ್ಲವಂತೆ, ಅದನ್ನು ಭಾರತದ ಪ್ರದೇಶ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಹಿಂದೂ ಮಹಾಸಾಗರದಲ್ಲಿ ಇತರ ರಾಷ್ಟ್ರಗಳ ನೌಕಾಪಡೆಗಳು ಸುಲಭವಾಗಿ ಸಂಚರಿಸಲು ಸಾಧ್ಯವಾಗದೆ ಇರುವುದನ್ನು ಆಕ್ಷೇಪಿಸಿರುವ ಚೀನಾ ಈ ಹೇಳಿಕೆ ನೀಡಿದೆ.
— ಸಮುದ್ರ ಪ್ರದೇಶದಲ್ಲಿ ನೌಕಾ ಕಾರ್ಯಚರಣೆಯನ್ನು ವಿಸ್ತರಿಸಾಲು ಯತ್ನಿಸುತ್ತಿದ್ದು, ಸಮುದ್ರ ಪ್ರದೇಶಗಳನ್ನು ಕಾರ್ಯಾಚರಣೆಯ ಕಾನೂನುಬದ್ಧ ಪ್ರದೇಶದ ಭಾಗವಾಗಿ ಮಾತ್ರ ಪರಿಗಣಿಸಬಹುದೇ ಹೊರತು ಭಾರತದ ಜಾಗವಾಗಲು ಸಾಧ್ಯವಿಲ್ಲ ಎಂಬುದು ಚೀನಾದ ಹೊಸ ವಾದವಾಗಿದೆ.
●.ಹಿಂದೂ ಮಹಾಸಾಗರ ಅಂತಾರಾಷ್ಟ್ರೀಯ ಕಡಲ ವ್ಯಾಪಾರ ದೃಷ್ಟಿಯಿಂದ ಚೀನಾಗೆ ಮಾತ್ರವಲ್ಲದೆ ವಿಶ್ವಕ್ಕೂ ಮಹತ್ವ ಪಡೆದುಕೊಂಡಿದೆ ಎಂದು ಚೀನಾ ಅಭಿಪ್ರಾಯಪಟ್ಟಿದೆ.
— ಹಿಂದೂ ಮಹಾಸಾಗರವನ್ನು ಸ್ಥಿರಗೊಳಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಒಪ್ಪಬಹುದೇ ಹೊರತು, ಸಂಪೂರ್ಣವಾಗಿ ಅದು ಭಾರತಕ್ಕೆ ಸೇರಿದ ಪ್ರದೇಶ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಒಂದು ವೇಳೆ ಒಪ್ಪಬೇಕು ಎಂದಾದಲ್ಲಿ ಅಲ್ಲಿ ಅಮೆರಿಕ ರಷ್ಯಾ ಮತ್ತು ಆಸ್ಟ್ರೇಲಿಯಾದ ನೌಕಾದಳದವರು ಸಂಚರಿಸುತ್ತಿರುವುದರ ಬಗ್ಗೆ ವಿವರಣೆ ನೀಡಬೇಕಿದೆ ಎಂದು ಚೀನಾ ತಗಾದೆ ತೆಗೆಯುತ್ತಿದೆ.
●.ಚೀನಾ ತನ್ನ ಭೂಸೇನೆ ಮತ್ತು ಅದರ ಸಾಮರ್ಥ್ಯ ವೃದ್ಧಿಗೆ ನೀಡಿದಷ್ಟೇ ಮಹತ್ವವನ್ನು ನೌಕಾಪಡೆಯ ಆಧುನೀಕರಣಕ್ಕೂ ನೀಡುವ ಮೂಲಕ ಅತ್ಯಂತ ಸಮರ್ಥ ಸಧೃಡ ಜಲಸೇನೆಯನ್ನು ಕಟ್ಟಿಕೊಂಡಿದೆ.ಆದರೆ, ಈ ಅವಧಿಯಲ್ಲಿ ಭಾರತ ತನ್ನ ಜಲಸೇನೆಗೆ ಅದೇ ಮಟ್ಟದ ಆದ್ಯತೆ ನೀಡುವಲ್ಲಿ ವಿಫಲವಾಗಿದೆ.
— ಇಂದು ಚೀನಾದ ಬಳಿ 25 ಹಡಗು ನಾಶಕಗಳು, 50 ಫ್ರಿಗೇಟ್ ಗಳು, 80ಕ್ಕೂ ಹೆಚ್ಚು ಕ್ಷಿಪಣಿ ಬೋಟ್ಗಳು ಹಾಗೂ 50ಕ್ಕೂ ಹೆಚ್ಚು ಸಬ್ ಮೆರಿನ್ ಗಳಿದ್ದರೆ ಭಾರತದ ಬಳಿ 10ಕ್ಕೂ ಕಡಿಮೆ ನಾಶಕಗಳು, ಬೆರಳೆಣಿಕೆಯ ಫ್ರಿಗೇಟ್ ಹಾಗೂ ಕ್ಷಿಪಣಿ ಬೋಟುಗಳಲ್ಲದೆ ಕೇವಲ 2 ಸಬ್ಮೆರಿನ್ಗಳಿವೆ.
— ಯುದ್ಧ ವಿಮಾನಗಳನ್ನು ಹೊತ್ತೊಯ್ಯಬಹುದಾದ ಯುದ್ಧ ನೌಕೆಗಳ ವಿಷಯದಲ್ಲಷ್ಟೇ ಭಾರತ (2 ಯುದ್ಧನೌಕೆ) ಚೀನಾಗಿಂತ (ಒಂದು ಯುದ್ಧ ನೌಕೆ) ಮುಂದಿದೆ. ಚೀನಾದ ಪ್ರಭುತ್ವ ಹಪಾಹಪಿಯನ್ನು ಗಮನಿಸಿದರೆ ಭಾರತದ ಜಲ ಪ್ರದೇಶ ಯಾವ ಮಟ್ಟದ ಅಪಾಯದಲ್ಲಿದೆ ಎಂಬುದು ವೇದ್ಯವಾಗುತ್ತದೆ.
— ಚೀನಾವಂತೂ ಪಾಕಿಸ್ತಾನಕ್ಕೆ ಫ್ರಿಗೇಟ್ ಗಳು ಹಾಗೂ ಕ್ಷಿಪಣಿ ಬೋಟುಗಳನ್ನು ಒದಗಿಸುವ ಮೂಲಕ ಭಾರತವನ್ನು ಸುತ್ತುವರಿಯುವ ಹುನ್ನಾರದಲ್ಲಿಯೇ ಇದೆ.
●.ಕಳೆದ ಹಲವು ದಶಕಗಳಿಂದ ದೇಶವನ್ನಾಳಿದ ಸರಕಾರಗಳು ಹಿಂದೂ ಮಹಾಸಾಗರದ ಬೆಳವಣಿಗೆಗಳ ಕುರಿತಂತೆ ತೀವ್ರ ನಿರ್ಲಕ್ಷ್ಯವಹಿಸಿದ ಪರಿಣಾಮ ಈ ಪ್ರದೇಶದಲ್ಲಿರುವ ದ್ವೀಪ ರಾಷ್ಟ್ರಗಳ ( ಶ್ರೀಲಂಕಾ, ಮಾಲ್ಡೀವ್ಸ್, ಮಾರೀಷಸ್ ಮತ್ತು ಸಿಚೆಲ್ಸ್ ದೇಶಗಳು) ಮೇಲೆ ಚೀನಾ ಬಿಗಿ ಹಿಡಿತ ಸ್ಥಾಪಿಸಿದೆ. ಇದರಿಂದ ಭಾರತದ ರಕ್ಷಣೆಗೆ ತೀವ್ರ ಅಪಾಯ ತಲೆದೋರಿದೆ.
●.ಇದನ್ನು ಮನಗಂಡಿರುವ ಕೇಂದ್ರ ಸರಕಾರ ಹಿಂದೂ ಮಹಾಸಾಗರದಲ್ಲಿ ಚೀನಾದ ಪ್ರಭಾವ ತಪ್ಪಿಸಿ ಭಾರತದ ಹಿಡಿತ ಬಿಗಿಪಡಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದು, ಇದರ ಅಂಗವಾಗಿ ದ್ವೀಪ ರಾಷ್ಟ್ರಗಳಾದ ಮಾಲ್ಡೀವ್ಸ್, ಮಾರೀಷಸ್ ಮತ್ತು ಸಿಚೆಲ್ಸ್ ದೇಶಗಳಿಗೆ ಭರಪೂರ ಸೈನಿಕ ಮತ್ತು ನಾಗರಿಕ ನೆರವನ್ನು ಘೋಷಿಸುವ ಮೂಲಕ ದ್ವೀಪ ರಾಷ್ಟ್ರಗಳ ಪ್ರವಾಸ ಕೈಗೊಳ್ಳುತ್ತಿದ್ದಾರೆ.
●.ಜಾಗತಿಕ ತೈಲ ವ್ಯಾಪಾರ ಮತ್ತು ಭಾರತದ ರಕ್ಷಣೆ ದೃಷ್ಟಿಯಿಂದ ಹಿಂದೂ ಮಹಾಸಾಗರ ಆಯಕಟ್ಟಿನ ಪ್ರದೇಶವಾಗಿದೆ. ಇದರ ಮಹತ್ವವನ್ನು ಮನಗಂಡಿರುವ ಚೀನಾ, ಈ ಸಾಗರದಲ್ಲಿರುವ ದ್ವೀಪ ರಾಷ್ಟ್ರಗಳಲ್ಲಿ ಬಂದರು, ವಿದ್ಯುತ್ ಸ್ಥಾವರ, ಹೆದ್ದಾರಿ ನಿರ್ಮಾಣ ಹೀಗೆ ನಾನಾ ನೆರವಿನ ಮೂಲಕ ಬಿಗಿಹಿಡಿತ ಸ್ಥಾಪಿಸಿದೆ.
— ಅಷ್ಟೇ ಅಲ್ಲದೇ, ಚೀನಾ ನೌಕಾಪಡೆ ಕೂಡ ಭಾರತೀಯ ಜಲಗಡಿಯ ಸನಿಹವೇ ಬಿರುಸಿನ ಚಟುವಟಿಕೆ ಕೈಗೊಂಡಿದೆ. ಕಳೆದ ವರ್ಷವಂತೂ ಚೀನಾ ಜಲಾಂತರ್ಗಾಮಿಗಳು ಶ್ರೀಲಂಕಾದ ಬಂದರಿನಲ್ಲಿ ಠಿಕಾಣಿ ಹೂಡಿ, ಭಾರತದ ಭದ್ರತೆಗೆ ತೀವ್ರ ಬೆದರಿಕೆಯೊಡ್ಡಿದ್ದವು.
●.ಇದೆಲ್ಲವನ್ನೂ ಗಮನಕ್ಕೆ ತೆಗೆದುಕೊಂಡಿರುವ ಕೇಂದ್ರ ಸರಕಾರ, ಈ ವಲಯದಲ್ಲಿ ಮತ್ತೆ ಸಕ್ರಿಯವಾಗಲು ಕ್ರಮ ಕೈಗೊಂಡಿದೆ. ಹಿಂದೂ ಮಹಾಸಾಗರದಲ್ಲಿ ನಡೆಯುವ ನಾಗರಿಕ ಚಟುವಟಿಕೆಗಳಿಗೆ ರಕ್ಷಣೆ ಒದಗಿಸುವ ಮಹತ್ವದ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲು ನಿರ್ಧರಿಸಿದೆ. — ಪ್ರಧಾನಿ ಪ್ರವಾಸದ ವೇಳೆ ದ್ವೀಪ ರಾಷ್ಟ್ರಗಳಿಗೆ ಅಗತ್ಯವಾದ ರಕ್ಷಣೆ ಮತ್ತು ನಾಗರಿಕ ಉಪಕರಣಗಳನ್ನು ಪೂರೈಸಲು ನಿರ್ಧರಿಸಲಾಗಿದೆ. ಕರಾವಳಿ ಗಸ್ತು ನೌಕೆಗಳು, ಕಣ್ಗಾವಲು ಮತ್ತು ಮ್ಯಾಪಿಂಗ್ ರಾಡಾರ್ ಗಳನ್ನು ಅಷ್ಟೇ ಅಲ್ಲದೇ, ದ್ವೀಪ ರಾಷ್ಟ್ರಗಳ ತುರ್ತು ಅಗತ್ಯವಾದ ಯುದ್ಧ ನೌಕೆಗಳನ್ನೂ ಒದಗಿಸಲು ಭಾರತ ನಿರ್ಧರಿಸಿದೆ.
— ಇದಕ್ಕಾಗಿ ಗೋವಾದ ಹಡಗುಕಟ್ಟೆಯಲ್ಲಿ ಸಮರನೌಕೆಗಳನ್ನೂ ನಿರ್ಮಿಸಲಾಗುತ್ತಿದೆ.
●.ಇತ್ತೀಚೆಗೆ ಹಿಂದೂ ಮಹಾಸಾಗರದಲ್ಲಿ ಚೀನಾದ ಪ್ರಭಾವಕ್ಕೆ ತಡೆಯೊಡ್ಡಲು ಕೇಂದ್ರ ಸರಕಾರದ ಮಹತ್ವದ ವಿದೇಶಾಂಗ ನೀತಿ ಪ್ರಕಟವಾಗಲಿದೆ. ಹಿಂದೂ ಮಹಾಸಾಗರದಲ್ಲಿ ಚೀನಾದ ಪ್ರಭಾವ ಹೆಚ್ಚುತ್ತಿದ್ದರೂ ಇಷ್ಟುಕಾಲ ಮೌನವಾಗಿ ಕುಳಿತಿದ್ದ ಭಾರತ ಈಗ ಮೈಕೊಡವಿ ಎದ್ದು ಕುಳಿತಿದೆ.
— ಇತ್ತೀಚೆಗೆ ಬೀಜಿಂಗ್‌ನ 'ಮ್ಯಾರಿಟೈಂ ಸಿಲ್ಕ್ ರೋಡ್'ನ ಭಾರೀ ಯಶಸ್ಸಿನ ಹಿನ್ನೆಲೆಯಲ್ಲಿ, ಭಾರತ ಕೂಡ ತನ್ನದೇ ಆದ 'ಪ್ರಾಜೆಕ್ಟ್ ಮೌಸಮ್'ಗೆ ಚಾಲನೆ ನೀಡಲಿದೆ.
— ಇದು ಈ ಭಾಗದ ದೇಶಗಳ ಜತೆಗೆ ಸಾಗರ ಮಾರ್ಗಗಳ ಮೂಲಕ ಭಾರತದ ಪ್ರಾಚೀನ ಸಾಂಸ್ಕೃತಿಕ ಬಾಂಧವ್ಯವನ್ನು ಪುನರುಜ್ಜೀವನಗೊಳಿಸುವ ಉದ್ದೇಶ ಹೊಂದಿದೆ.
●.1971ರ ಮಹಾಸಾಹಸದ ನೆನಪಾಗಿ ಪ್ರತಿವರ್ಷ ಡಿಸೆಂಬರ್ 4 ಅನ್ನು ನೌಕಾದಿನವನ್ನಾಗಿ ಆಚರಿಸಲಾಗುತ್ತಿದೆ. ಒಂದು ಕಡೆ ಚಿನಾದ ಕುಚೇಷ್ಟೆ, ಅದಕ್ಕೆ ಪಾಕಿಸ್ತಾನದ ಕುಮ್ಮಕ್ಕು, ಮತ್ತೊಂದು ಕಡೆ ಅಮೆರಿಕದ ಬಂಡವಾಳಶಾಹಿ ಇರಾದೆ ಮತ್ತು ಹುನ್ನಾರಗಳ ನಡುವೆ ಭಾರತದ ಜಲಗಡಿಯ ಭದ್ರತೆ ಸಂರಕ್ಷಿಸಲು ನಿರಂತರ ಶ್ರಮ ವಹಿಸುತ್ತಿರುವ ಭಾರತೀಯ ನೌಕಾ ಪಡೆಗೆ ಶಹಬ್ಬಾಸ್ಗಿರಿ ನೀಡಲಷ್ಟೇ ಈ ದಿನವನ್ನು ಆಚರಿಸುವುದರಲ್ಲಿ ಯಾವ ಅರ್ಥವೂ ಇಲ್ಲ.
— ಕೇಂದ್ರ ಸರ್ಕಾರ ಜನಕಲ್ಯಾಣದ ಹೆಸರಲ್ಲಿ ಜಾರಿಗೆ ತಂದಿರುವ ನರೇಗಾ, ಪುಕ್ಕಟೆ ಅಕ್ಕಿ, ಕಾಳು, ಸಾಲ ಮನ್ನಾ, ವಸತಿ ಭಾಗ್ಯ (ಉದ್ದೇಶಿತ) ಮುಂತಾದ ಯೋಜನೆಗಳಿಗೆ ವೆಚ್ಚ ಮಾಡುವ ಹಣದ ಕಾಲು ಭಾಗವನ್ನಾದರೂ ನೌಕಾಪಡೆಯ ಆಧುನೀಕರಣಕ್ಕೆ, ಅವರ ಕಲ್ಯಾಣಕ್ಕೆ ವ್ಯಯಿಸಿದರೆ ಅದರಿಂದ ನಮ್ಮ ಸುರಕ್ಷಿತ ನಾಳೆಗಳಿಗಾಗಿ ತಮ್ಮ ನೆಮ್ಮದಿ ಕೆಡಿಸಿಕೊಂಡು ಅನವರತ ಶ್ರಮಿಸುತ್ತಿರುವ, ದೇಶದ ಜಲಗಡಿಯನ್ನು ಎವೆಯಿಕ್ಕದಂತೆ ಕಾಪಾಡುತ್ತಿರುವ ಈ ವೀರ ಯೋಧರಿಗೆ ನ್ಯಾಯ ಸಲ್ಲಿಸಿದಂತಾಗುತ್ತದೆ.
—ಮೈಯೆಲ್ಲಾ ಕಣ್ಣಾಗಿ ಕಾಯುವ ಈ ಯೋಧರ ಅಳಲು ಕುರುಡು ಸರ್ಕಾರಕ್ಕೆ ಕಾಣಿಸುವುದೆಂತು? ಅದೇ ದುರಂತ.
(Courtesy : Dynamic and Newspapers)

No comments:
Post a Comment