"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday, 16 July 2015

☀(ಭಾಗ-Ⅳ) : ಐಎಎಸ್ / ಕೆಎಎಸ್ ಪರೀಕ್ಷೆಗಳಿಗಾಗಿ ಬಹು ಆಯ್ಕೆಯ ಪ್ರಶ್ನೋತ್ತರಗಳು. (Part -Ⅳ): Multiple Choice Questions and Answers for IAS / KAS examinations. 

☀(ಭಾಗ-Ⅳ) : ಐಎಎಸ್ / ಕೆಎಎಸ್ ಪರೀಕ್ಷೆಗಳಿಗಾಗಿ ಬಹು ಆಯ್ಕೆಯ ಪ್ರಶ್ನೋತ್ತರಗಳು.
(Part -Ⅳ): Multiple Choice Questions and Answers for IAS / KAS examinations.
━━━━━━━━━━━━━━━━━━━━━━━━━━━━━━━━━━━━━━━━━━━━━

★ಸಾಮಾನ್ಯ ಅಧ್ಯಯನಕ್ಕಾಗಿ ಬಹು ಆಯ್ಕೆಯ ಪ್ರಶ್ನೋತ್ತರಗಳು.
(Multiple Choice Questions for General studies)

★ ಸಾಮಾನ್ಯ ಅಧ್ಯಯನ
(General Studies)

— ಆತ್ಮೀಯ ಪರೀಕ್ಷಾರ್ಥಿಗಳೆ, ವಿಶೇಷವಾಗಿ ಐಎಎಸ್ / ಕೆಎಎಸ್ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಇದೇ ಮೊದಲ ಬಾರಿಗೆ ನಿಮ್ಮ ಸ್ಪರ್ಧಾಲೋಕ ಬ್ಲಾಗ್ ನಲ್ಲಿ ಕನ್ನಡ ಮಾಧ್ಯಮದಲ್ಲಿ ಬಹು ಆಯ್ಕೆಯ ಪ್ರಶ್ನೋತ್ತರಗಳನ್ನು ತಯಾರಿಸಿ ನಿಮ್ಮ ಮುಂದಿಡಲು ಒಂದು ಚಿಕ್ಕ ಪ್ರಯತ್ನ ಕೈಗೊಳ್ಳುತ್ತಿದ್ದೇನೆ. ಮರೀಚಿಕೆಯಾದ ಕನ್ನಡ ಮಾಧ್ಯಮ ಕರ್ನಾಟಕದ ಪರೀಕ್ಷೆಗಳಲ್ಲಷ್ಟೇ ಅಲ್ಲ, ಕೇಂದ್ರ ಸರ್ಕಾರ ನಡೆಸುವ ಪರೀಕ್ಷೆಗಳಲ್ಲೂ ತನ್ನ ಕೀರ್ತಿ ಪತಾಕೆ ಹರಾಡಿಸಬೇಕೆಂಬ ಧ್ಯೇಯ ಹೊಂದಿರುವ ಪರೀಕ್ಷಾರ್ಥಿಗಳಿಗಾಗಿ ಸಹಕಾರಿಯಾಗಲು ಈ ನನ್ನದೊಂದು ಚಿಕ್ಕ ಪ್ರಯತ್ನ.
— ದಯವಿಟ್ಟು ತಪ್ಪಿದ್ದಲ್ಲಿ ಕ್ಷಮೆ ಇರಲಿ.
— ನಿಮ್ಮ ಸಲಹೆಗಳು ನನಗೆ ಅತ್ಯಮೂಲ್ಯವಾದವುಗಳು.

●..... ಮುಂದುವರೆದ ಭಾಗ.


46) ಸೂರ್ಯನಿಂದ ಬರುವ ನೇರಳಾತೀತ ಕಿರಣಗಳ (ಯುವಿ) ಕುರಿತು ಈ ಕೆಳಗಿನ ವಿವರಣೆಗಳನ್ನು ಪರಿಶೀಲಿಸಿ.
 (i) ಓಜೋನ್ ಪದರ ನೇರಳಾತೀತ ಕಿರಣಗಳನ್ನು (ಯುವಿ) ಭೂಮಿಗೆ ಬರದಂತೆ ಪೂರ್ಣವಾಗಿ ತಡೆದಿಟ್ಟುಕೊಳ್ಳುತ್ತದೆ.
 (ii) ಇವು ಮನುಷ್ಯನ ಚರ್ಮದ ಮೇಲೆ ಬಿದ್ದರೆ, ಅಲ್ಲಿನ ಜೀವಕೋಶ ಕಾರ್ಯ ನಿಲ್ಲಿಸಿಬಿಡುತ್ತದೆ ಅಥವಾ ಡಿಎನ್ಎ ಮಾಹಿತಿಯನ್ನು ಅಳಿಸಿಹಾಕಿಬಿಡುತ್ತದೆ.
 (iii) ನೇರಳಾತೀತ ಕಿರಣಗಳು ಜಲಚರ ಏಕ ಕೋಶ ಜೀವಿಗಳಿಗೂ ಮಾರಕ.
(iv) ನೇರಳಾತೀತ ಕಿರಣದಿಂದ ಅನಾಹುತಕ್ಕೆ ಒಳಗಾದ ದೇಹದಲ್ಲಿರುವ ಕೋಶಗಳು ಚರ್ಮ ಕ್ಯಾನ್ಸರ್ ಆಗಿ ಮಾರ್ಪಡುತ್ತದೆ.

—ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ಎ) (ii) ಮಾತ್ರ.
(ಬಿ) (iii) ಮಾತ್ರ.
(ಸಿ) (ii) ಮತ್ತು (iii) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: (ಡಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


47) ಜಾಗತಿಕ ಅರ್ಥ ವ್ಯವಸ್ಥೆಯು ಮತ್ತೊಮ್ಮೆ 1930ರಲ್ಲಿ ಕಂಡಂತಹ ಆರ್ಥಿಕ ಕುಸಿತ ಪುನರಾವರ್ತನೆಯಾಗುವ ಸಾಧ್ಯತೆ ಕುರಿತು ರಿಸರ್ವ್‌ ಬ್ಯಾಂಕ್‌ ಗವರ್ನರ್‌ ರಘುರಾಂ ರಾಜನ್ ಎಚ್ಚರಿಕೆ ನೀಡಲು ಪ್ರಮುಖ ಕಾರಣಗಳೆಂದರೆ...
(i) ಜಗತ್ತಿನ ಪ್ರಬಲ ರಾಷ್ಟ್ರಗಳ ಕೇಂದ್ರ ಬ್ಯಾಂಕ್‌ಗಳು ತೆಗೆದುಕೊಳ್ಳುತ್ತಿರುವ ಸ್ಪರ್ಧಾತ್ಮಕ ಹಣಕಾಸು ನೀತಿ ಕ್ರಮಗಳು
(ii) ಅಂತಾರಾಷ್ಟ್ರೀಯ ಜಾಗತಿಕ ಅರ್ಥ ವ್ಯವಸ್ಥೆಯ ಬಾಹ್ಯ ಸವಾಲುಗಳನ್ನು ಎದುರಿಸಲು ಭಾರತದಂತಹ ರಾಷ್ಟ್ರಗಳು ಶಕ್ತವಾಗದಿರುವುದು.
(iii) ಐರೋಪ್ಯ ರಾಷ್ಟ್ರಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಮೂಲ ಸೌಕರ್ಯಗಳಲ್ಲಿ ಅತಿಯಾದ ಹೂಡಿಕೆ ಮಾಡುತ್ತಿರುವುದು
(iv) ಉದಯೋನ್ಮುಖ ರಾಷ್ಟ್ರಗಳ ಮಾರುಕಟ್ಟೆ ಮೇಲೆ ಜಾಗತಿಕ ಪ್ರಬಲ ರಾಷ್ಟ್ರಗಳ ಹಣಕಾಸು ನೀತಿ ಕ್ರಮಗಳಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮಗಳು.

—ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
ಎ) (i) ಮಾತ್ರ.
(ಬಿ) (ii) ಮತ್ತು (iii) ಮಾತ್ರ.
(ಸಿ) (iii) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: (ಸಿ).

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


48) ಭೂಮಿಯ ರಕ್ಷಾಕವಚ ಓಜೋನ್ ಕುರಿತು ಈ ವಿವರಣೆಗಳನ್ನು ಪರಿಶೀಲಿಸಿ
(i) ಓಜೋನ್ ಮೂರು ಆಮ್ಲಜನಕ ಅಣುಗಳಿಂದ ಮಾಡಲ್ಪಟ್ಟಿದೆ. ಓಜೋನಿನ ಸಾಂದ್ರತೆ ಅತಿ ಹೆಚ್ಚಾಗಿರುತ್ತದೆ.
 (ii) ಬಣ್ಣರಹಿತ ಅನಿಲ. ಆದರೆ ಸಾಂದ್ರೀಕರಿಸಿದರೆ ತೆಳು ನೀಲ ಬರುತ್ತದೆ.
 (iii) ಸಿ.ಎಫ್.ಸಿ (ಕ್ಲೋರೋಫ್ಲೂರೋಕಾರ್ಬನ್) ಗಳ ಆಯಸ್ಸು 20 ರಿಂದ 100 ವರ್ಷಗಳು
 (iv) ಓಜೋನ್ ಪ್ರಮಾಣವನ್ನು ಅಳೆಯುವ ಏಕಮಾನಕ್ಕೆ ಡಬ್ಸನ್ ಎಂದು ಹೆಸರಿಟ್ಟಿದ್ದಾರೆ.

—ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ) (i) ಮತ್ತು (ii) ಮಾತ್ರ.
(ಬಿ) (i), (ii) ಮತ್ತು (iii) ಮಾತ್ರ.
(ಸಿ) (i), (iii) ಮತ್ತು (iv) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: (ಡಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


49) (i) ಲಂಡನ್ ನಗರವನ್ನು ' ಆಧುನಿಕ ಬ್ಯಾಬಿಲೋನ್' ಎಂದು ಕರೆಯುತ್ತಾರೆ.  
(ii) 'ಜಗತ್ತಿನ ಶ್ರೀಮಂತ ಕರಾವಳಿ' ಎಂದು ಕೋಸ್ಟರಿಕ ಗೆ ಕರೆಯುತ್ತಾರೆ.  

— ಸಂಕೇತಗಳು.
(ಎ)(i) ಮಾತ್ರ ಸರಿ.
(ಬಿ) (ii) ಮಾತ್ರ ಸರಿ.
 (ಸಿ) ಎರಡೂ ಸರಿ.
(ಡಿ) ಯಾವುದೂ ಅಲ್ಲ.

ಉತ್ತರ: (ಸಿ).

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


50) ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
(i). ಗೌತಮ್ ಬುದ್ಧನನ್ನು ಶಕ್ಯಮುನಿ ಎಂದು ಕರೆಯಲಾಗುತ್ತದೆ.
(ii). ಗೌತಮ್ ಬುದ್ಧನು ಕುಂದಗ್ರಾಮದಲ್ಲಿ ಜನಿಸಿದನು.

— ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ ?.
(ಎ)(i) ಮಾತ್ರ ಸರಿ.
(ಬಿ) (ii) ಮಾತ್ರ ಸರಿ.
(ಸಿ) ಎರಡೂ ಸರಿ.
(ಡಿ) ಯಾವುದೂ ಅಲ್ಲ.

ಉತ್ತರ: (i) ಮಾತ್ರ ಸರಿ.

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


51) ವಿಟಾಮಿನ್ (ಜೀವಸತ್ವಗಳು) ಕುರಿತು ಯಾವುದು ತಪ್ಪಾಗಿದೆ?
(i) ನೀರಿನಲ್ಲಿ ಕರಗುವ ವಿಟಮಿನಗಳು ಬಿ
(ii) ಕೊಬ್ಬಿನಲ್ಲಿ ಕರಗುವ ವಿಟಾಮಿನ್ ಗಳು ಎ.ಡಿ.ಇ.ಕೆ
(iii) ವಿಟಾಮಿನ್ ಡಿ ಯನ್ನು ನೇರಳಾತೀತ ಕಿರಣಗಳಿಂದ ತಯಾರಿಸುತ್ತಾರೆ.

— ಸಂಕೇತಗಳು.
ಎ) (i) ಮಾತ್ರ.
(ಬಿ) (ii) ಮಾತ್ರ.
(ಸಿ)(ii) ಮತ್ತು (iii) ಮಾತ್ರ. .
(ಡಿ) ಯಾವುದೂ ಅಲ್ಲ.

ಉತ್ತರ: (ಡಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


52) ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ರೆಪೋ ರೇಟ್ (Repo Rate) ಎಂದರೆ..
(i) ಆರ್.ಬಿ.ಅಯ್.ನವರು ಬ್ಯಾಂಕುಗಳಿಗೆ ನೀಡುವ ಸಾಲದ ಬಡ್ಡಿ ದರ.
(ii) ಒಂದು ವೇಳೆ ರೆಪೋ ದರ ಕಡಿಮೆ ಇದ್ದಲ್ಲಿ ಬ್ಯಾಂಕ್ ಗಳು ಹೆಚ್ಚಿನ ದುಡ್ಡನ್ನು ಆರ್.ಬಿ.ಅಯ್.ನಿಂದ ಪಡೆದು ಜನರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತವೆ.
(iii) ರೆಪೋ ದರ ಹೆಚ್ಚಾದಲ್ಲಿ ನಾವು ಬ್ಯಾಂಕ್ ನಲ್ಲಿ ಇಡುವ ಹಣಕ್ಕೆ ಕೊಡುವ ಬಡ್ಡಿಯ ದರವೂ ಹೆಚ್ಚುತ್ತದೆ.
(iv) ರೆಪೋ ದರ ಕಡಿಮೆ ಸಮಯದ ಅಂತರದಲ್ಲಿ ಹೆಚ್ಚು ಕಡಿಮೆಯಾಗುವುದರಿಂದ ಬ್ಯಾಂಕ್ ಗಳು ಇಂತಹ ನಿರ್ದಾರಗಳನ್ನು ಸಾಲದ ಮೇಲಿನ ಬಡ್ಡಿಏರಿಸುವಷ್ಟು ಬೇಗ ತೆಗೆದುಕೊಳುವುದಿಲ್ಲ.

— ಸಂಕೇತಗಳು.
(ಎ) (i) ಮತ್ತು (ii) ಮಾತ್ರ.
(ಬಿ) (i), (ii) ಮತ್ತು (iii) ಮಾತ್ರ.
(ಸಿ) (i), (iii) ಮತ್ತು (iv) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: (ಡಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


53) ಜೀವ ವೈವಿದ್ಯ ( biological diversity) ದಿನಾಚರಣೆ ಯಾವಾಗ ಆಚರಿಸುತ್ತಾರೆ?
1. ಮಾರ್ಚ್ 25
2. ಮೇ 22
3. ಜೂನ್ 22
4. ಏಪ್ರಿಲ್ 22

— ಸಂಕೇತಗಳು.
ಎ) (i) ಮಾತ್ರ.
(ಬಿ) (ii) ಮಾತ್ರ.
(ಸಿ) (iii) ಮಾತ್ರ.
(ಡಿ) (iv) ಮಾತ್ರ.

ಉತ್ತರ: (ಬಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


54) ಕರ್ನಾಟಕದ ವಿಶ್ವವಿದ್ಯಾನಿಲಯಗಳು ಹಾಗೂ ಅವುಗಳ ಧ್ಯೇಯವಾಕ್ಯಗಳ ಕುರಿತ ಈ ಕೆಳಕಂಡ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
(i) ಮೈಸೂರು ವಿಶ್ವವಿದ್ಯಾನಿಲಯ -••••••(ಮೈಸೂರು) •••••••- ನ ಹಿ ಜ್ಞಾನೇನ ಸದೃಶ್ಯಂ
(ii) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ -•••••• (ಮೈಸೂರು) ••••••-ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ .
(iii) ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯ -•••••• (ವಿಜಾಪುರ) ••••••-ಸ್ತೀ ಶಿಕ್ಷಣ ಸರ್ವಶಿಕ್ಷಣ
(iv) ಕನ್ನಡ ವಿಶ್ವವಿದ್ಯಾನಿಲಯ -••••••  (ಹಂಪಿ) ••••••-ಮಾತೆಂಬುದು ಜ್ಯೋತಿರ್ಲಿಂಗ

— ಸಂಕೇತಗಳು.
(ಎ) (i) ಮಾತ್ರ.
(ಬಿ) (i) ಮತ್ತು (iii) ಮಾತ್ರ.
 (ಸಿ) (i) ಮತ್ತು (iv) ಮಾತ್ರ.
(ಡಿ) ಯಾವುದೂ ಅಲ್ಲ.

ಉತ್ತರ: (ಡಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

55) ಮೋಟಾರು ವಾಹನದಲ್ಲಿ ರೇಡಿಯೇಟರ್ ನ್ನು ತಂಪಾಗಿಸಲು ನೀರು ತಂಪುಕಾರಿ ಎಂದು ಆದ್ಯತೆ ಕೊಡಲಾಗುತ್ತದೆ ಏಕೆಂದರೆ..
1.ಕಡಿಮೆ ಸಾಂದ್ರತೆ ಇರುವುದರಿಂದ.
2.ಹೆಚ್ಚು ಉಷ್ಣದಾರಕತೆ ಇರುವುದರಿಂದ.
3.ಕುದಿಯುವ ಬಿಂದು ಕಡಿಮೆ ಇರುವುದರಿಂದ.
4.ಸುಲಭವಾಗಿ ದೊರೆಯುವುದರಿಂದ.

— ಸಂಕೇತಗಳು.
ಎ) (i) ಮಾತ್ರ.
(ಬಿ) (ii) ಮಾತ್ರ.
(ಸಿ) (iii) ಮಾತ್ರ.
 (ಡಿ) (iv) ಮಾತ್ರ.

ಉತ್ತರ: (ಬಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


56) ಸಂವಿಧಾನದ 20 ನೇ ವಿಧಿಯ ಪ್ರಾಮುಖ್ಯತೆ ಕುರಿತು ಈ ಕೆಳಗಿನ ವಿವರಣೆಗಳಲ್ಲಿ ಯಾವುದು ತಪ್ಪಾಗಿದೆ?.
(i) ಈ ವಿಧಿಯ ಪ್ರಕಾರ ಒಬ್ಬ ವ್ಯಕ್ತಿಗೆ ಒಂದೇ ಅಪರಾಧಕ್ಕಾಗಿ ಒಂದಕ್ಕಿಂತ ಹೆಚ್ಚು ಬಾರಿ ಶಿಕ್ಷೆ ವಿಧಿಸುವಂತಿಲ್ಲ.
(ii) ಒಂದು ಕೃತ್ಯವನ್ನು ಎಸಗುವ ಸಂದರ್ಭದಲ್ಲಿ ಜಾರಿಯಲ್ಲಿರುವ ಕಾನೂನನ್ನು ಉಲ್ಲಂಘಿಸಿದರೆ ಮಾತ್ರ ಶಿಕ್ಷೆ ನೀಡಬೇಕು. ಅಂದರೆ ಹಿಂದೆ ಜಾರಿಯಲ್ಲಿರುವ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಒಬ್ಬ ವ್ಯಕ್ತಿಯನ್ನು ಶಿಕ್ಷಿಸುವಂತಿಲ್ಲ
(iii) ಒಬ್ಬ ವ್ಯಕ್ತಿಯನ್ನು ತನ್ನ ವಿರುದ್ಧವೇ ಸಾಕ್ಷಿ ಹೇಳುವಂತೆ ಒತ್ತಾಯಿಸುವಂತಿಲ್ಲ.

— ಸಂಕೇತಗಳು.
(ಎ) (i) ಮಾತ್ರ.
(ಬಿ)(ii) ಮತ್ತು (iii) ಮಾತ್ರ.
(ಸಿ) (i) ಮತ್ತು (II) ಮಾತ್ರ.
 (ಡಿ) ಯಾವುದೂ ಅಲ್ಲ.

ಉತ್ತರ : (ಡಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


57) ಔಷಧಿ ಭಾಗ್ಯ' ದ ಕುರಿತು ಈ ಕೆಳಗಿನ ವಿವರಣೆಗಳಲ್ಲಿ ಯಾವುದು ತಪ್ಪಾಗಿದೆ?.
(i) ಸರ್ಕಾರಿ ಅಸ್ಪತ್ರೆಗಳಲ್ಲಿ ಬಡರೋಗಿಗಳಿಗೆ ಮಾರಣಾಂತಿಕ ಕಾಯಿಲೆಗಳಿಗೆ ಕಡಿಮೆ ವೆಚ್ಚದಲ್ಲಿ ಔಷಧಿಗಳನ್ನು ವಿತರಣೆ ಮಾಡುವುದು
 (ii) ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ.50ರಷ್ಟು ಅನುಪಾತದಲ್ಲಿ ಅನುದಾನ ಒದಗಿಸಲಿವೆ
 (iii) ಸರ್ಕಾರಿ ಒಡೆತನದ ಎಂಎಸ್‌ಐಎಲ್ ಸಂಸ್ಥೆ ಇದರ ನಿರ್ವಾಹಣೆ ಮಾಡಲಿದೆ.
(iv) ಈ ಯೋಜನೆ ಪ್ರಕಾರ ಔಷಧಿಗಳನ್ನು ಖರೀದಿ ಮಾಡುವ ರೋಗಿಗಳು ಶೇ.25ರಷ್ಟು ಹಣವನ್ನು ಪಾವತಿ ಮಾಡಿದರೆ ಸಾಕು, ಉಳಿದ ಶೇ.75ರಷ್ಟು ಹಣವನ್ನು ಸರ್ಕಾರವೇ ಭರಿಸುತ್ತದೆ.

— ಸಂಕೇತಗಳು.
ಎ) (i) ಮತ್ತು (ii) ಮಾತ್ರ.
(ಬಿ) (i), (ii) ಮತ್ತು (iii) ಮಾತ್ರ.
(ಸಿ) (i), (iii) ಮತ್ತು (iv) ಮಾತ್ರ.
(ಡಿ) ಯಾವುದೂ ಅಲ್ಲ.

ಉತ್ತರ: (ಡಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


58) 2011ರ ರಾಜ್ಯ ಜನಗಣತಿ ನಿರ್ದೇಶನಾಲಯದ ಪ್ರಾಥಮಿಕ ವರದಿ ಪ್ರಕಾರ ಈ ಕೆಳಗಿನ ವಿವರಣೆಗಳಲ್ಲಿ ಯಾವುದು ತಪ್ಪಾಗಿದೆ?.
(i) ಕಳೆದ ಒಂದು ದಶಕದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದರೂ, ಜನಸಂಖ್ಯೆ ಏರಿಕೆ ದರದಲ್ಲಿ ಕುಸಿತ ಕಂಡಿದೆ.
(ii) ಲಿಂಗಾನುಪಾತ ಪ್ರಮಾಣದಲ್ಲಿ ಸುಧಾರಣೆ ಕಂಡು ಬಂದಿದ್ದು, ಸಾಕ್ಷರತೆ ಗಣನೀಯ ಚೇತರಿಕೆ ಕಂಡಿದೆ.
(iii) ಕೊಡುಗು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊತರು ಪಡಿಸಿ ರಾಜ್ಯದ ಉಳಿದ ಎಲ್ಲ ಜಿಲ್ಲೆಗಳು 10 ಲಕ್ಷ ಮೇಲ್ಪಟ್ಟ ಜನಸಂಖ್ಯೆ ಹೊಂದಿದೆ.

— ಸಂಕೇತಗಳು.
(ಎ) (i) ಮಾತ್ರ.
(ಬಿ)(ii) ಮತ್ತು (iii) ಮಾತ್ರ.
(ಸಿ) (i) ಮತ್ತು (II) ಮಾತ್ರ.
(ಡಿ) ಯಾವುದೂ ಅಲ್ಲ.

ಉತ್ತರ : (ಡಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


59) ಪ್ರೌನ್ ಹೋಪರ್ (fraun hofer line) ರೇಖೆಗಳು ಎಲ್ಲಿ ಕಾಣಸಿಗುತ್ತವೆ?
(i). ಚಂದ್ರನ ಪರ್ವತಗಳಲ್ಲಿ
(ii). ಸೂರ್ಯನ ಕರೋನದಲ್ಲಿ.
(iii). ಭೂಮಿಯ ಧ್ರುವ ಪ್ರದೇಶದಲ್ಲಿ
(iv). ಗುರುಗ್ರಹದ ಬಳೆಗಳಲ್ಲಿ

— ಸಂಕೇತಗಳು.
ಎ) (i) ಮಾತ್ರ.
(ಬಿ) (ii) ಮಾತ್ರ.
(ಸಿ) (iii) ಮಾತ್ರ.
(ಡಿ) (iv) ಮಾತ್ರ.

ಉತ್ತರ: (ಬಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


60) ಕೆಳಗಿನವುಗಳಲ್ಲಿ ಯಾವುದು ಗಾಂಧಾರ ಕಲೆಯೊಂದಿಗೆ ಸಂಬಂಧ ಹೊಂದಿದೆ?
(i) ಎಲ್ಲೋರ.
(ii) ಅಜಂತಾ.
(iii) ಖಜುರಾಹೊ.
(iv) ಎಲಿಫೆಂಟಾ.

— ಸಂಕೇತಗಳು.
ಎ) (i) ಮಾತ್ರ.
(ಬಿ) (ii) ಮಾತ್ರ.
(ಸಿ) (iii) ಮಾತ್ರ.
(ಡಿ) (iv) ಮಾತ್ರ.
 
ಉತ್ತರ: ಸಿ



....ಮುಂದುವರೆಯುವುದು.

No comments:

Post a Comment