"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 11 July 2015

☀ಇಂದಿನ ಕೆಎಎಸ್ / ಐಎಎಸ್ (KAS/IAS) ಪ್ರಶ್ನೆ :- "ಭಾರತವು ಭವಿಷ್ಯದಲ್ಲಿ ಹೊಂದುವ ಅಗಾಧ ಬೆಳವಣಿಗೆಗೆ ಪೂರಕವಾಗಿ ಇಂಧನದ ಬೇಡಿಕೆಯನ್ನು ಪೂರೈಸುವಲ್ಲಿ 'ಭವಿಷ್ಯದ ಅಣು ಇಂಧನವಾಗಿ ಥೋರಿಯಂ'- ಚರ್ಚಿಸಿ". ('Thorium-Radioactive material' as a Nuclear Fuel of the Future)

☀ಇಂದಿನ ಕೆಎಎಸ್ / ಐಎಎಸ್ (KAS/IAS) ಪ್ರಶ್ನೆ :-
" ಭಾರತವು ಭವಿಷ್ಯದಲ್ಲಿ ಹೊಂದುವ ಅಗಾಧ ಬೆಳವಣಿಗೆಗೆ ಪೂರಕವಾಗಿ ಇಂಧನದ ಬೇಡಿಕೆಯನ್ನು ಪೂರೈಸುವಲ್ಲಿ 'ಭವಿಷ್ಯದ ಅಣು ಇಂಧನವಾಗಿ ಥೋರಿಯಂ'- ಚರ್ಚಿಸಿ".
('Thorium-Radioactive material' as a Nuclear Fuel of the Future)

━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ವಿಜ್ಞಾನ
(General Science)

★ ಐಎಎಸ್ / ಕೆಎಎಸ್ ಸಾಮಾನ್ಯ ಅಧ್ಯಯನ
(IAS / KAS General Studies)


— ವಿಕಿರಣಶೀಲ ವಸ್ತುಗಳ ಪೈಕಿ ಹೆಚ್ಚು ಪರಿಚಿತವಾಗದ ಒಂದು ವಸ್ತು- ಥೋರಿಯಂ.
ಸಾಂಪ್ರದಾಯಿಕ ಪರಮಾಣು ಇಂಧನವಾಗಿರುವ ಯುರೇನಿಯಂಗಿಂತ ಸುಮಾರು ನಾಲ್ಕು ಪಟ್ಟು ಅಧಿಕವಾಗಿ ಮತ್ತು ಹೇರಳವಾಗಿರುವ ಥೋರಿಯಂ ಅತ್ಯಂತ ಶುದ್ಧ ರೂಪದಲ್ಲಿ ಕಂಡುಬರುತ್ತದೆ.

●.ಈಗ ನಮಗೆ ಲಭ್ಯವಾಗುತ್ತಿರುವ ಎಲ್ಲಾ ಇಂಧನ ಮೂಲಗಳನ್ನು ಅಂದರೆ, ಪೆಟ್ರೋಲಿಯಂ, ಕಲ್ಲಿದ್ದಲು, ಇತರೆ ಪಳೆಯುಳಿಕೆ ಇಂಧನ ಮತ್ತು ಯುರೇನಿಯಂ ಇವುಗಳೆಲ್ಲವನ್ನು ಒಗ್ಗೂಡಿಸಿ, ಭವಿಷ್ಯದಲ್ಲಿ ಇವುಗಳಿಂದ ಏಷ್ಟು ಪ್ರಮಾಣದಲ್ಲಿ ಲಭಿಸುತ್ತದೆಯೋ ಅದಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಥೋರಿಯಂ ನಮ್ಮ ಭೂಮಿಯೊಳಗೆ ಲಭ್ಯವಿದೆ.

●.ಅಂತಾರಾಷ್ಟ್ರೀಯ ಅಣು ಇಂಧನ ಸಂಸ್ಥೆಯ ವರದಿಯ (2005) ಅನ್ವಯ ವಿಶ್ವದ ಯಾವುದೇ ಭಾಗದಲ್ಲಿ ಲಭಿಸದಷ್ಟು ಥೋರಿಯಂ ನಮ್ಮ ಭಾರತದಲ್ಲಿದೆ. ಸರಿಸುಮಾರು 6,50,000 ಟನ್‌ಗಳಷ್ಟಿದೆ.

●.ಇದು ವಿಶ್ವದಲ್ಲಿ ದೊರೆಯುವ ಥೋರಿಯಂನ ಪೈಕಿ ನಾಲ್ಕನೇ ಒಂದು ಭಾಗದಷ್ಟು ಭಾರತದಲ್ಲಿ ಲಭ್ಯವಿದೆ.
ಥೋರಿಯಂನೊಂದಿಗೆ ಯುರೇನಿಯಂನ ಲಭ್ಯತೆ ಹೋಲಿಸಿದಲ್ಲಿ, ವಿಶ್ವದಾದ್ಯಂತ ದೊರೆಯುವ ಯುರೇನಿಯಂನ ಪೈಕಿ ಶೇ.1 ರಷ್ಟು ಮಾತ್ರ ಭಾರತದಲ್ಲಿ ದೊರಕುತ್ತದೆ.

●.ಯುರೇನಿಯಂ (ನೈಸರ್ಗಿಕ) ಉತ್ಪಾದಿಸುವ ಶಕ್ತಿಗಿಂತಲೂ ಎಂಟು ಪಟ್ಟು ಅಧಿಕ ಶಕ್ತಿಯನ್ನು ಥೋರಿಯಂ ಉತ್ಪಾದಿಸುತ್ತದೆ.

●.ಹಾಗೆಯೇ, ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಗೆ ಒಳಗಾಗಿರುವುದು ಅಣು ತ್ಯಾಜ್ಯ ನಿರ್ವಹಣೆ. ಥೋರಿಯಂ ಇದಕ್ಕೆ ಪರಿಹಾರವಾಗಿದೆ. ಇದು ಕಡಿಮೆ ಪ್ರಮಾಣದ ವಿಷಕಾರಿ ತ್ಯಾಜ್ಯಗಳನ್ನು ಹೊಂದಿದೆ.

●.ಅತೀ ಹೆಚ್ಚು ಥೋರಿಯಂ ನಿಕ್ಷೇಪ ಹೊಂದಿರುವ ಭಾರತ ಭವಿಷ್ಯದಲ್ಲಿ ಹೊಂದುವ ಅಗಾಧ ಬೆಳವಣಿಗೆ ಪೂರಕವಾಗಿ ಇಂಧನದ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಲಿದೆ. ಭಾರತವು ತನ್ನ ಈಗಿರುವ ಪರಮಾಣು ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವುದರ ಜೊತೆಗೆ, ಥೋರಿಯಂನ ಮಾರ್ಗದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ವಿಶೇಷ ಗಮನ ನೀಡಿದೆ.

●.ದೀರ್ಘಾವಧಿಗೆ ಥೋರಿಯಂ ಉತ್ತರವಾಗಬಲ್ಲದು, ಭಾರತ ಈ ದಿಶೆಯಲ್ಲಿ ಈಗಾಗಲೇ ಕಾರ್ಯೋನ್ಮುಖವಾಗಿದೆ. ನ್ಯೂಕ್ಲಿಯಸ್‌ಗಳಲ್ಲಿನ ಶಕ್ತಿ ಅಪಾರ ಮತ್ತು ಮಾನವನ ಭವಿಷ್ಯ ಅದರ ಸುರಕ್ಷತೆ ಮತ್ತು ಪರಿಣಾಮಕಾರಿ ಬಳಕೆಯಲ್ಲಿ ಅಡಗಿದೆ.
ನಮಗೆ ಸುಲಭವಾಗಿ, ಪರಿಶುದ್ಧ ಮತ್ತು ಅನಿಯಮಿತ ಇಂಧನ ನ್ಯೂಕ್ಲಿಯರ್ ಮೂಲಗಳಿಂದ ದೊರೆಯಲಿದೆ. ಇದು ನಮ್ಮ ಭವಿಷ್ಯದ ಹೆಬ್ಬಾಗಿಲು ಎನಿಸಿದೆ. ಮಾನವನ ಕಲ್ಪನೆಗೂ ಮೀರಿದ ಭವಿಷ್ಯವನ್ನು ಅಡಗಿಸಿಟ್ಟುಕೊಂಡಿವೆ.

1 comment: