"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್
Showing posts with label ಕನ್ನಡ ಸಾಹಿತ್ಯ. Show all posts
Showing posts with label ಕನ್ನಡ ಸಾಹಿತ್ಯ. Show all posts

Wednesday, 19 October 2016

☀.ಪಿಡಿಓ ಪರೀಕ್ಷೆ ವಿಶೇಷಾಂಕ -VII : ಕನ್ನಡ ಸಾಹಿತ್ಯ ಚರಿತ್ರೆ ಸಂಬಂಧಿತ ಪ್ರಮುಖ ಅಂಶಗಳು : (Kannada Literature Notes for PDO)

☀.ಪಿಡಿಓ ಪರೀಕ್ಷೆ ವಿಶೇಷಾಂಕ -VII : ಕನ್ನಡ ಸಾಹಿತ್ಯ ಚರಿತ್ರೆ ಸಂಬಂಧಿತ ಪ್ರಮುಖ ಅಂಶಗಳು :
(Kannada Literature Notes for PDO)
•─━━━━━═══════════━━━━━─••─━━━━━═══════════━━━━━─•

★ ಪಿಡಿಓ ಪರೀಕ್ಷಾ ಅಧ್ಯಯನ ವಿಶೇಷಾಂಕ
(PDO Exam Study Notes)

★ ಕನ್ನಡ ಸಾಹಿತ್ಯ ಚರಿತ್ರೆ
(Kannada Literature)


*.ಪೆತ್ತಜಯನ್ ಎಂಬ ಪದವು ಹಲ್ಮಿಡಿ ಶಾಸನದಲ್ಲಿದ್ದು ಇದು ಸಮಾಸಪದವಾಗಿದೆ

*.ಕನ್ನಡ ಛಂದಸ್ಸಿನ ತಾಯಿಬೇರು-ತ್ರಿಪದಿ

*.ಛಂದೋನುಶಾಸನದ ಕರ್ತೃ -ಜಯಕಿರ್ತ

*.ಕವಿರಾಜಮಾರ್ಗದ ಆಕರ -ದಂಡಿಯ ಕಾವಾಯದರ್ಶಿ

*.ನಾಡವರ್ಗಳ್ ನಿಜವಾಗಿಯೂ ಚದುರರ್ ಕುರಿತೋದಯೊ ಕಾವ್ಯ ಪ್ರಯೋಗಪರಿಣಿತಮತಿಗಳ್ ಎಂಬ ಸ್ತುತಿ ವಾಕ್ಯವು -ಕವಿರಾಜಮಾರ್ಗದಲ್ಲಿದೆ

*.ಬೃಹತ್ಕಥೆಯ ಕರ್ತೃ -ಗುಣಾಢ್ಯ

*.ಬೃಹತ್ಕಥೆಯ ಭಾಷೆ -ಪೈಶಾಚಿ

*. ಕವಿರಾಜಮಾರ್ಗವು-ಲಕ್ಷಣಗ್ರಂಥ /ಅಲಂಕಾರಗ್ರಂಥ

*.ಕನ್ನಡದ ಮೊದಲನೇ ಅಷ್ಟಕ -ಗಜಷ್ಟಾಕ

*. ಕನ್ನಡ ಕವಿತೆಯೊಲ್ ಅಸಗಂ ನೂರ್ಮಡಿ ಎಂದವರು -ಪೊನ್ನ

*.ನಜುಂಡಕವಿಯ ಕೃತಿ -ಕುಮಾರರಾಮನ ಕಥೆ

*.ಚಿತ್ತಾಣ ಬೆದಂಡೆಗಳು -ಕಾವ್ಯರೂಪಕಗಳು

*.ವಡ್ಡರಾಧನೆಯ ಆಕರ-ಜಿನಸೇನಾಚಾರ್ಯನ ಪೂರ್ವಪುರಾಣ ಕರ್ತೃ-ಶಿವಕೋಟ್ಯಾಚಾರ್ಯ

* ಪಂಪನಿಗೆ ಆಶ್ರಯ ನೀಡಿದ್ದ ದೊರೆ-ಚಾಲುಕ್ಯದೊರೆ ಅರಿಕೇಸರಿ

*.ಪಂಪನ ಧಾರ್ಮಿಕ ಕಾವ್ಯ (ಆಗಮಿಕ ) -ಆದಿಪುರಾಣ (ಕನ್ನಡದ ಮೊದಲ ಕಾವ್ಯ)

*.ಪಂಪನ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ವೆಂಬ ಕೃತಿಗಳ ಸ್ವರೂಪ -ಚಂಪೂಕಾವ್ಯ (ಗದ್ಯ ಪದ್ಯ ಮಿಶ್ರಿತ )

*.ವಿಕ್ರಮಾರ್ಜುನ ವಿಜಯ ವೆಂಬ ಕೃತಿಯ ಮತ್ತೊಂದು ಹೆಸರು -ಪಂಪಭಾರತ

*.ಕವಿತಾಗುಣಾರ್ಣವ ಸಂಸಾರ ಸಾರೊದಯ ಎಂಬ ಬಿರುದುಳ್ಲ ಕವಿ -ಪಂಪ

*.ಪಂಪನು ಬರೆದ ಕಾವ್ಯಗಳ ಶೈಲಿ -ತಿರುಳ್ಗನ್ನಡ (ಪುಲಿಗೆರೆಯ

*.ಬೆಳಗುವೆನಿಲ್ಲಿ ಲೌಕಿಕಮನಲ್ಲಿ ಜಿನಾಗಮಮಂ ಎಂದವರು -ಪಂಪ

*.ಪಂಪನ ಆದಿಪುರಾಣಕ್ಕೆ ಆಕರ ಗ್ರಂಥ -ಜಿನಸೇನಾಚಾರ್ಯನಸಂಸ್ಕೃತದ ಪೂರ್ವಪುರಾಣ

*. ಚಲದೊಳ್ ದುರ್ಯೋಧನಂ ನನ್ನಿಯೊಳ್ ಇನಯತನಯಂ ಗಂಡಿನೊಳ್ ಭೀಮಸೇನಂ ಎಂಬ ವರ್ಣನೆಯಿರುವ ಕೃತಿ
-ಪಂಪಭಾರತ ( ವಿಕ್ರಮಾರ್ಜುನ ವಿಜಯ )

*.ಪಸರಿಪ ಕನ್ನಡಕ್ಕೊಡೆಯನೋರ್ವನೆ ಸತ್ಕವಿ ಪಂಪನಾವಗಂ ಎಂದು ಹೇಳಿದವರು -ನಾಗರಾಜ

*.ಪಂಪನನ್ನು ಕನ್ನಡ ಕಾಳಿದಾಸ ಎಂದು ಕರೆದವರು -ತೀನಂಶ್ರೀ

*.ಪೊನ್ನನ ಪ್ರಸಿದ್ಧ ಕೃತಿ -ಶಾಂತಿ ಪುರಾಣ

*. ಭುವನೈಕ ರಾಮಾಭ್ಯದಯ ಗ್ರಂಥದ ಮತ್ತೊಂದು ಹೆಸರು -ರಾಮಕಥೆ

*.ಶಾಂತಿಪುರಾಣವು ೧೯ನೇ ತೀರ್ಥಂಕರನಾದ ಶಾಂತಿನಾಥನ ಚರಿತ್ರೆಯನ್ನೊಳಗೊಂಡಿದೆ (ಚಂಪೂ )

*.ಪೊನ್ನನಿಗಿದ್ದ ಬಿರುದು -ಕವಿಚಕ್ರವರ್ತಿ

*.ರನ್ನನ ತಂದೆ ತಾಯಿ -ಜಿನವಲ್ಲಭ ಅಬ್ಬಲಬ್ಬೆ

*.ರನ್ನನಿಗೆ ಆಶ್ರಯ ನೀಡಿದ್ದ ದೊರೆ -ಸತ್ಯಾಶ್ರಯ (ಇರುವೆ ಬೆಡಂಗ ಚಾಲುಕ್ಯ ದೊರೆ

*.ರನ್ನನ ಕೃತಿಗಳು
—-ರನ್ನಕಂದ (ನಿಘಂಟು)
— ಪರುಶುರಾಮಚರಿತ
ಚಕ್ರೆಶ್ವರ ಚರಿತ ಅಜಿತತೀರ್ಥೇಶ್ವರಚರಿತೆ (ಅಜಿತತಿರ್ಥಂಕರ ಪುರಾಣ ) ಆಗಮಿಕ ಕಾವ್ಯ ಸಾಹಸ ಭೀಮ ವಿಜಯ (ಲೌಕಿಕ ಕಾವ್ಯ )

*. ಸಿಂಹಾವಲೋಕನ ಕ್ರಮದಿಂದ ಕಾವ್ಯವನ್ನು  ಅರುಪಿದವನು -ರನ್ನ

*.ಚಾವುಂಡರಾಯನ ಚಾವುಂಡರಾಯ ಪುರಾಣಕ್ಕಿರುವ ಮತ್ತೊಂದು ಹೆಸರು -ತ್ರಿಷಷ್ಟಿಲಕ್ಷಣಮಹಾಪುರಾಣ

*.ಕರ್ನಾಟಕ ಕಾದಂಬರಿಯ ಕರ್ತೃ -೧ನೇ ನಾಗವರ್ಮ

*.ಕನ್ನಡದಲ್ಲಿನ ಮೊದಲನೆಯ ಛಂದಶಾಸ್ತ್ರ ಗ್ರಂಥ -ಛಂದೋಬುದಿ (೧ನೇ ನಾಗವರ್ಮ)

*. ಕನ್ನಡದ ಮೊದಲನೆಯ ಜೋತಿಷ್ಯ ಗ್ರಂಥ -ಜಾತಕ ತಿಲಕ

*. ರಾಮಚಂದ್ರ ಚರಿತ ಪುರಾಣ (ಪಂಪರಾಮಾಯಣ) ಕೃತಿಯ ಕರ್ತೃ -ನಾಗಚಂದ್ರ

*.ಮಲ್ಲಿನಾಥ ಪುರಾಣ ಗ್ರಂಥ ಬರೆದವರು -ನಾಗಚಂದ್ರ

*. ಧರ್ಮಾಮೃತ ಗ್ರಂಥದ ಕರ್ತೃ-ನಯಸೇನ

*.ಕನ್ನಡದಲ್ಲಿ ಉಪಲಬ್ದವಾದ ಮೊದಲನೆಯ ಜೈನ ರಾಮಾಯಣ -ರಾಮಚಂದ್ರಚರಿತ ಪುರಾಣ (ನಾಗಚಂದ್ರ )

*.ಅಭಿನವ ಪಂಪ ಎಂದು ಕರೆದು ಕೊಂಡಿರುವವನು -ನಾಗಚಂದ್ರ

*.ಮೊದಲನೆಯ ಗೋವೈದ್ಯ ಗ್ರಂಥವನ್ನು ಬರೆದವರು -ಕೀರ್ತಿವರ್ಮ

*. ನೇಮಿನಾಥ ಪುರಾಣದ ಆಕಾರ ಗ್ರಂಥ -ಉತ್ತರ ಪುರಾಣ

*.ನೇಮಿನಾಥ ಪುರಾಣದ ಕರ್ತೃ -ಕರ್ಣಪಾರ್ಯ

*.ಯೋಗಾಂಗ ತ್ರಿವಿಧಿಯ ಕರ್ತೃ -ಅಕ್ಕಮಹಾದೇವಿ

*. ಹರಿಹರನ ಗಿರಿಜಾಕಲ್ಯಾಣವು -ಚಂಪೂಶೈಲಿಯಲ್ಲಿದೆ

*.ಹರಿಹರನ ಪಂಪಾಶತಕ ಕೃತಿಯು -ವೃತ್ತ ಛಂದಸ್ಸಿನಲ್ಲಿದೆ

*.ರಾಘವಾಂಕನ ಉದ್ದಂಡ ಷಟ್ಪದಿಯಲ್ಲಿರುವ ಕೃತಿ -ವೀರೆಷ ಚರಿತೆ

*. ಅನಂತನಾಥ ಪುರಾಣ ದ ಕರ್ತೃ -ಜನ್ನ (ಚಂಪೂ)

 *.ಕೇಶಿರಾಜನ ಶಬ್ದಮಣಿದರ್ಪಣ ಕೃತಿಯು (ಕರ್ನಾಟಕ ಲಕ್ಷಣ ಶಬ್ದಶಾಸ್ತ್ರ ) -ಕಂದಪದ್ಯದಲ್ಲಿದೆ ೮ ಪ್ರಕರಣ

*.ಜನ್ನ ಕವಿಗೆ ಆಶ್ರಯ ನೀಡಿದ ದೊರೆ -ವೀರಬಲ್ಲಾಳ ನರಸಿಂಹ

*.ಕನ್ನಡದ ಮೊದಲನೆಯ ಸಂಕಲನ ಗ್ರಂಥ -ಸೂಕ್ತಿ ಸುಧಾರ್ಣವ

*.ಕನ್ನಡದ ಮೊದಲ ವ್ಯಾಕರಣ ಗ್ರಂಥ ಹಳಗನ್ನಡ:  -ಶಬ್ದಮಣಿದರ್ಪಣ (ಕೇಶಿರಾಜ

(Courtesy : VISION group)
... ಮುಂದುವರೆಯುವುದು. 

Wednesday, 22 July 2015

☀ UNIT: Ⅱ) ಸಂಧಿಗಳು: (ಸಂಸ್ಕೃತ ಸಂಧಿಗಳು)...ಮುಂದುವರಿದ ಭಾಗ. (Kannada Grammar)

☀ UNIT: Ⅱ) ಸಂಧಿಗಳು: (ಸಂಸ್ಕೃತ ವ್ಯಂಜನ ಸಂಧಿಗಳು)...ಮುಂದುವರಿದ ಭಾಗ.
(Kannada Grammar)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕನ್ನಡ ಸಾಹಿತ್ಯ
(Kannada Literature)

★ ಕನ್ನಡ ವ್ಯಾಕರಣ
(Kannada Grammar)


●.೨. ಸಂಸ್ಕೃತ ವ್ಯಂಜನ ಸಂಧಿಗಳು
━━━━━━━━━━━━━━━━━━━━━

●.(೧) ಜಶ್ತ್ವಸಂಧಿ
•┈┈┈┈┈┈┈┈┈┈┈┈┈┈┈┈•
— ಜಶ್ ಎಂದರೆ ಸಂಸ್ಕೃತ ವ್ಯಾಕರಣದಲ್ಲಿ ಜಬಗಡದ ಈ ಐದು ವ್ಯಂಜನಗಳನ್ನು ತಿಳಿಸುವ ಒಂದು ಸಂಜ್ಞೆ.  ಜಶ್ತ್ವ ಎಂದರೆ ಈ ಐದು ವರ್ಣಗಳಾದ ಜಬಗಡದ ವ್ಯಂಜನಗಳು ಆದೇಶವಾಗಿ ಬರುವುದು ಎಂದು ಅರ್ಥ. 

— ಯಾವ ಅಕ್ಷರಕ್ಕೆ ಇವು ಆದೇಶವಾಗಿ ಬರುತ್ತವೆ? ಎಂಬ ಬಗೆಗೆ ತಿಳಿಯೋಣ.
(೧) ದಿಗಂತದಲ್ಲಿ ಪಸರಿಸಿತು.
(೨) ಅಜಂತ ಎಂದರೆ ಸ್ವರಾಂತ ಎಂದು ಸಂಜ್ಞೆ.
(೩) ಷಣ್ಮುಖನಿಗೆ ಷಡಾನನ ಎಂಬ ಹೆಸರೂ ಉಂಟು.
(೪) ಆ ಹುಡುಗನ ಹೆಸರು ಸದಾನಂದ ಎಂದು.
(೫) ಅಬ್ಧಿ ಎಂದರೆ ಸಾಗರಕ್ಕೆ ಹೆಸರು.

— ಈ ವಾಕ್ಯಗಳಲ್ಲಿ ಬಂದಿರುವ ದಿಗಂತ, ಅಜಂತ, ಷಡಾನನ, ಸದಾನಂದ, ಅಬ್ಧಿ ಈ ಶಬ್ದಗಳನ್ನು ಬಿಡಿಸಿ ಬರೆದರೆ__
ದಿಕ್ + ಅಂತ = ದಿಗ್ + ಅಂತ = ದಿಗಂತ (ಪೂರ್ವದ ಕಕಾರಕ್ಕೆ ಗಕಾರಾದೇಶ)
(ಕ್ + ಅ = ಗ್‌ಅ)
ಅಚ್ + ಅಂತ = ಅಜ್ + ಅಂತ = ಅಜಂತ (ಚಕಾರಕ್ಕೆ ಜಕಾರಾದೇಶ)
(ಚ್ + ಅ = ಜ್‌ಅ)
ಷಟ್ + ಆನನ = ಷಡ್ + ಆನನ = ಷಡಾನನ (ಟಕಾರಕ್ಕೆ ಡಕಾರಾದೇಶ)
(ಟ್ + ಅ = ಡ್‌ಅ)
ಸತ್ + ಆನಂದ = ಸದ್ + ಆನಂದ = ಸದಾನಂದ (ತಕಾರಕ್ಕೆ ದಕಾರಾದೇಶ)
(ತ್ + ಆ = ದ್‌ಆ)
ಅಪ್ + ಧಿ = ಅಬ್ + ಧಿ = ಅಬ್ಧಿ (ಪಕಾರಕ್ಕೆ ಬಕಾರಾದೇಶ)
(ಪ್ + ಧಿ = ಬ್‌ಧಿ)

— ಮೇಲಿನ ಈ ಐದೂ ಉದಾಹರಣೆಗಳನ್ನು ಲಕ್ಷ್ಯವಿಟ್ಟು ನೋಡಿದಾಗ, ಪೂರ್ವಶಬ್ದದ ಅಂತ್ಯದಲ್ಲಿರುವ  ಕ್, ಚ್, ಟ್, ತ್, ಪ್ ಗಳಿಗೆ ಕ್ರಮವಾಗಿ ಗ್, ಜ್, ಡ್, ದ್, ಬ್ ಗಳು ಆದೇಶಗಳಾಗಿ ಬಂದಿವೆ.  ಈ ಪೂರ್ವ ಶಬ್ದದಲ್ಲಿರುವ ವರ್ಗಪ್ರಥಮವರ್ಣಗಳಿಗೆ ಅದೇ ವರ್ಗದ ಮೂರನೆಯ ವರ್ಣಗಳು ಆದೇಶಗಳಾಗಿ ಬರುವ ಸಂಧಿಯು ಸಂಸ್ಕೃತ ಶಬ್ದಗಳೇ ಎರಡೂ ಆಗಿದ್ದಾಗ ಮಾತ್ರ ಬರುವುದು.

★ ಕನ್ನಡದಲ್ಲೂ ಕತಪ ಗಳಿಗೆ ಗದಬ ಗಳು ಆದೇಶವಾಗಿ ಬರುವುದುಂಟು.  ಆದರೆ ಕತಪ ಗಳು ಉತ್ತರಪದದ ಆದಿಯಲ್ಲಿರಬೇಕು.  ಇದು ಕೇವಲ ಕನ್ನಡದ ಆದೇಶಸಂಧಿಯೆಂದು ತಿಳಿಯಬೇಕು. 
— ಹೀಗೆ ಪೂರ್ವ ಶಬ್ದದ ಕೊನೆಯ ಕಚಟತಪ ಗಳಿಗೆ ಗಜಡದಬ ಗಳು ಆದೇಶವಾಗಿ ಬರುವುದೇ ಜಶ್ತ್ವಸಂಧಿಯೆನಿಸುವುದು.

●.ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.
— (೨೪) ಪೂರ್ವಶಬ್ದದ ಕೊನೆಯಲ್ಲಿರುವ ಕಚಟತಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ (ಎದುರಿಗೆ ಬಂದರೂ) ಪ್ರಾಯಶಃ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು ಆದೇಶಗಳಾಗಿ ಬರುತ್ತವೆ. ಇದಕ್ಕೆ ಜಶ್ತ್ವಸಂಧಿಯೆನ್ನುವರು.

★ ಪ್ರಾಯಶಃ ಎಂದು ಹೇಳಿರುವುದರಿಂದ ಕಖ, ಚಛ, ಟಠ, ತಥ, ಪಫ, ಸ, ಷ, ಙ, ಞ, ಣ, ನ, ಮ ಅಕ್ಷರಗಳು ಪರವಾದರೆ (ಎದುರಿಗೆ ಬಂದರೆ) ಮೂರನೆಯ ಅಕ್ಷರಗಳು ಆದೇಶವಾಗಿ ಕೆಲವು ಕಡೆ ಬರುವುದಿಲ್ಲ. ಅಂದರೆ ಜಶ್ತ್ವಸಂಧಿಯಾಗುವುದಿಲ್ಲ.

ಉದಾಹರಣೆಗೆ:-
ವಾಕ್+ದೇವಿ=ವಾಗ್‌ದೇವಿ=ವಾಗ್ದೇವಿ(ಕಕಾರಕ್ಕೆ ಗಕಾರಾದೇಶ)

ವಾಕ್+ದಾನ=ವಾಗ್‌ದಾನ=ವಾಗ್ದಾನ(           ”            )

ವಾಕ್+ಅಧಿಪ=ವಾಗ್‌ಅಧಿಪ=ವಾಗಧಿಪ(           ”            )

ದಿಕ್+ದೇಶ=ದಿಗ್‌ದೇಶ=ದಿಗ್ದೇಶ(           ”            )

ದಿಕ್+ದಿಗಂತ=ದಿಗ್‌ದಿಗಂತ=ದಿಗ್ದಿಗಂತ(           ”            )

ದಿಕ್+ದೇವತೆ=ದಿಗ್‌ದೇವತೆ=ದಿಗ್ದೇವತೆ(           ”            )

ಅಚ್+ಅಂತ=ಅಜ್‌ಅಂತ=ಅಜಂತ(ಚಕಾರಕ್ಕೆ ಜಕಾರಾದೇಶ)

ಅಚ್+ಆದಿ=ಅಜ್‌ಆದಿ=ಅಜಾದಿ(           ”            )

ಷಟ್+ಆನನ=ಷಡ್‌ಆನನ=ಷಡಾನನ(ಟಕಾರಕ್ಕೆ ಡಕಾರಾದೇಶ)

ಷಟ್+ಅಂಗ=ಷಡ್‌ಅಂಗ=ಷಡಂಗ(           ”            )

ಷಟ್+ಅಂಗನೆ=ಷಡ್‌ಅಂಗನೆ=ಷಡಂಗನೆ(           ”            )

ವಿರಾಟ್+ರೂಪ=ವಿರಾಡ್‌ರೂಪ=ವಿರಾಡ್ರೂಪ(           ”            )

ಸತ್+ಉದ್ದೇಶ=ಸದ್‌ಉದ್ದೇಶ=ಸದುದ್ದೇಶ(ತಕಾರಕ್ಕೆ ದಕಾರಾದೇಶ)

ಸತ್+ಉತ್ತರ=ಸದ್‌ಉತ್ತರ=ಸದುತ್ತರ(           ”            )

ಚಿತ್+ಆನಂದ=ಚಿದ್‌ಆನಂದ=ಚಿದಾನಂದ(           ”            )

ಸತ್+ಭಾವ=ಸದ್‌ಭಾವ=ಸದ್ಭಾವ(           ”            )

ಸತ್+ಉದ್ಯೋಗ=ಸದ್‌ಉದ್ಯೋಗ=ಸದುದ್ಯೋಗ(           ”            )

ಅಪ್+ಆ=ಅಬ್‌ಜ=ಅಬ್ಜ(ಪಕಾರಕ್ಕೆ ಬಕಾರಾದೇಶ)

ಅಪ್+ಚ=ಅಬ್‌ದ=ಅಬ್ದ(ಪಕಾರಕ್ಕೆ ಬಕಾರಾದೇಶ)

ಅಪ್+ಅಂಶ=ಅಬ್‌ಅಂಶ=ಅಬಂಶ(ಪಕಾರಕ್ಕೆ ಬಕಾರಾದೇಶ)

ಅಪ್+ಧಿ=ಅಬ್‌ಧಿ=ಅಬ್ಧಿ(ಪಕಾರಕ್ಕೆ ಬಕಾರಾದೇಶ)


★ ಜಶ್ತ್ವಸಂಧಿಯಾಗದಿರುವುದಕ್ಕೆ ಉದಾಹರಣೆಗಳು
ದಿಕ್+ಚಕ್ರ=ದಿಕ್ಚಕ್ರಇಲ್ಲಿ ಎಲ್ಲಿಯೂ ಮೂರನೆಯ ವರ್ಣದ ಆದೇಶವಿಲ್ಲ
ದಿಕ್+ತಟ=ದಿಕ್ತಟ
ಸತ್+ಕವಿ=ಸತ್ಕವಿ
ದಿಕ್+ಸೂಚಿ=ದಿಕ್ಸೂಚಿ
ವಾಕ್+ಪತಿ=ವಾಕ್ಪತಿ


●.(೨) ಶ್ಚುತ್ವ ಸಂಧಿ
•┈┈┈┈┈┈┈┈┈┈┈┈┈┈┈┈•
ಶ್ಚು ಎಂದರೆ ಶಕಾರ ಚವರ್ಗಾಕ್ಷರಗಳು.  (ಶ್=ಶಕಾರ, ಚು=ಚ ಛ ಜ ಝ ಞ) ಈ ಆರು ಅಕ್ಷರಗಳೇ ಶ್ಚು ಎಂಬ ಸಂಜ್ಞೆಯಿಂದ ಸಂಸ್ಕೃತ ವ್ಯಾಕರಣದಲ್ಲಿ ಕರೆಯಿಸಿಕೊಳ್ಳುತ್ತವೆ.  ಇವುಗಳು ಆದೇಶವಾಗಿ ಬರುವುದೇ ಶ್ಚುತ್ವಸಂಧಿ ಎನಿಸುವುದು.

★ ಹಾಗಾದರೆ ಇವು ಯಾವ ಅಕ್ಷರಗಳಿಗೆ ಯಾವಾಗ ಅದೇಶವಾಗಿ ಬರುತ್ತವೆಂಬುದನ್ನು ಯೋಚಿಸೋಣ.

ಮನಸ್ + ಶುದ್ಧಿ = ಮನಶ್ + ಶುದ್ಧಿ = ಮನಶ್ಶುದ್ಧಿ
(ಸಕಾರಕ್ಕೆ ಶಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)

ಯಶಸ್ + ಚಂದ್ರಿಕೆ = ಯಶಶ್ + ಚಂದ್ರಿಕೆ = ಯಶಶ್ಚಂದ್ರಿಕೆ
(ಸಕಾರಕ್ಕೆ ಚಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)

ಲಸತ್ + ಚಿತ್ರ = ಲಸಚ್ + ಚಿತ್ರ = ಲಸಚ್ಚಿತ್ರ
(ತಕಾರಕ್ಕೆ ಚಕಾರ ಪರವಾಗಿ ತಕಾರಕ್ಕೆ ಚಕಾರಾದೇಶ)

ಸತ್ + ಚಿತ್ರ = ಸಚ್ + ಚಿತ್ರ = ಸಚ್ಚಿತ್ರ
(ತಕಾರಕ್ಕೆ ಚಕಾರ ಪರವಾಗಿ ತಕಾರಕ್ಕೆ ಚಕಾರಾದೇಶ)

ಬೃಹತ್ + ಛತ್ರ = ಬೃಹಚ್ + ಛತ್ರ = ಬೃಹಚ್ಛತ್ರ
(ತಕಾರಕ್ಕೆ ಛಕಾರ ಪರವಾಗಿ, ತಕಾರಕ್ಕೆ ಚಕಾರಾದೇಶ)
ಮೇಲಿನ ಎಲ್ಲ ಉದಾಹರಣೆಗಳನ್ನು ಗಮನವಿಟ್ಟು ನೋಡಿರಿ.

★ಶಬ್ದದ ಅಂತ್ಯದಲ್ಲಿ ಸಕಾರ ಇಲ್ಲವೆ ತವರ್ಗದಲ್ಲಿನ ಐದು ಅಕ್ಷರಗಳಲ್ಲಿ ಯುವುದಾದರೊಂದು ಅಕ್ಷರವಿರುತ್ತದೆ.  ಪರದಲ್ಲಿ (ಎದುರಿನಲ್ಲಿ) ಶಕಾರ ಇಲ್ಲವೆ ಚವರ್ಗದಲ್ಲಿನ ಯಾವುದಾದರೊಂದು ಅಕ್ಷರವಿದೆ.

★ಹೀಗೆ ಇವು ಒಂದಕ್ಕೊಂದು ಸಂಧಿಸಿದಾಗ ಸ ಕಾರವಿದ್ದಲ್ಲೆಲ್ಲ ಶಕಾರವು, ತವರ್ಗದ ಅಕ್ಷರಗಳಿದ್ದಲ್ಲೆಲ್ಲ ಚವರ್ಗದ ಅಕ್ಷರಗಳು ಆದೇಶಗಳಾಗಿ ಬಂದಿವೆ.
ಅಂದರೆ_ಸ ತ ಥ ದ ಧ ನ  ಗಳಿಗೆ__ಶ ಚ ಛ ಜ ಝ ಞ ಅಕ್ಷರಗಳು ಆದೇಶವಾಗಿ ಬರುತ್ತವೆ ಎಂದ ಹಾಗಾಯಿತು.

●.ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು:-
(೨೫) ಸಕಾರತವರ್ಗಾಕ್ಷರಗಳಿಗೆ ಶಕಾರ ಚವರ್ಗಾಕ್ಷರಗಳು ಪರವಾದಾಗ (ಎದುರಿಗೆ ಬಂದಾಗ) ಸಕಾರಕ್ಕೆ ಶಕಾರವೂ, ತವರ್ಗಕ್ಕೆ ಚವರ್ಗವೂ ಆದೇಶಗಳಾಗಿ ಬರುತ್ತವೆ.
ಪಯಸ್ + ಶಯನ = ಪಯಶ್ + ಶಯನ = ಪಯಶ್ಶಯನ
(ಸಕಾರಕ್ಕೆ ಶಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)
ಮನಸ್ + ಚಂಚಲ = ಮನಶ್ + ಚಂಚಲ = ಮನಶ್ಚಂಚಲ
(ಸಕಾರಕ್ಕೆ ಚಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)
ಮನಸ್ + ಚಾಪಲ್ಯ = ಮನಶ್ + ಚಾಪಲ್ಯ = ಮನಶ್ಚಾಪಲ್ಯ
(ಸಕಾರಕ್ಕೆ ಚಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)
ಶರತ್ + ಚಂದ್ರ   = ಶರಚ್ + ಚಂದ್ರ = ಶರಚ್ಚಂದ್ರ
(ತಕಾರಕ್ಕೆ ಚಕಾರ ಪರವಾಗಿ ತಕಾರಕ್ಕೆ ಚಕಾರಾದೇಶ)
ಜಗತ್ + ಜ್ಯೋತಿ = ಜಗಚ್ + ಜ್ಯೋತಿ = ಜಗಜ್ಜ್ಯೋತಿ
(ತಕಾರಕ್ಕೆ ಜಕಾರ ಪರವಾಗಿ ತಕಾರಕ್ಕೆ ಚಕಾರಾದೇಶ, ಅನಂತರ ಜಕಾರಾದೇಶ)
ಯಶಸ್ + ಶರೀರಿ = ಯಶಶ್ + ಶರೀರಿ = ಯಶಶ್ಶರೀರಿ
ಇದರ ಹಾಗೆ-ಚಲಚ್ಚಿತ್ರ, ಚಲಚ್ಚಾಮರ, ಜ್ವಲಜ್ಜ್ಯೋತಿ, ಬೃಹಜ್ಜ್ಯೋತಿ, ಮನಶ್ಯಾಂತಿ, ಮನಶ್ಚಪಲ ಇತ್ಯಾದಿಗಳು.

●.(೩) ಅನುನಾಸಿಕ ಸಂಧಿ
•┈┈┈┈┈┈┈┈┈┈┈┈┈┈┈┈•
— ಙ, ಞ, ಣ, ನ, ಮ-ಈ ಐದು ಅಕ್ಷರಗಳು ಅನುನಾಸಿಕಾಕ್ಷರಗಳೆಂದು ಹಿಂದಿನ ಸಂಜ್ಞಾಪ್ರಕರಣದಲ್ಲಿ ತಿಳಿಸಿದೆ.  ಈ ಅನುನಾಸಿಕಾಕ್ಷರಗಳು ಆದೇಶವಾಗಿ ಬರುವ ಸಂಧಿಯೇ ಅನುನಾಸಿಕ ಸಂಧಿಯೆನಿಸುವುದು.

★ ಹಾಗಾದರೆ ಇವು ಯಾವ ಅಕ್ಷರಕ್ಕೆ ಯಾವಾಗ ಆದೇಶವಾಗಿ ಬರುತ್ತವೆ? ಯಾವ ಅಕ್ಷರ ಪರವಾಗಿರಬೇಕು? ಎಂಬ ಬಗೆಗೆ ತಿಳಿಯೋಣ.
(೧) ವಾಕ್ + ಮಯ = ವಾಙ್ + ಮಯ = ವಾಙ್ಮಯ
(ಇಲ್ಲಿ ಕಕಾರಕ್ಕೆ ಮಕಾರ ಪರವಾಗಿ ಕಕಾರಕ್ಕೆ ಙಕಾರಾದೇಶವಾಗಿದೆ)
(೨) ಷಟ್ + ಮುಖ = ಷಣ್ + ಮುಖ = ಷಣ್ಮುಖ
(ಇಲ್ಲಿ ಟಕಾರಕ್ಕೆ ಮಕಾರ ಪರವಾಗಿ ಟಕಾರಕ್ಕೆ ಣಕಾರಾದೇಶವಾಗಿದೆ)
(೩) ಸತ್ + ಮಾನ = ಸನ್ + ಮಾನ = ಸನ್ಮಾನ
(ಇಲ್ಲಿ ತಕಾರಕ್ಕೆ ಮಕಾರ ಪರವಾಗಿ ತಕಾರಕ್ಕೆ ನಕಾರಾದೇಶವಾಗಿದೆ)
(೪) ಅಪ್ + ಮಯ =  ಅಮ್ + ಮಯ = ಅಮ್ಮಯ
(ಇಲ್ಲಿ ಪಕಾರಕ್ಕೆ ಮಕಾರ ಪರವಾಗಿ ಪಕಾರಕ್ಕೆ ಮಕಾರಾದೇಶವಾಗಿದೆ)

ಮೇಲಿನ ಈ ಉದಾಹರಣೆಗಳನ್ನು ಅವಲೋಕಿಸಿದಾಗ ಪೂರ್ವಶಬ್ದದ ಕೊನೆಯಲ್ಲೆಲ್ಲ ವರ್ಗದ ಮೊದಲನೆಯ ಅಕ್ಷರಗಳಾದ ಕ್, ಟ್, ತ್, ಪ್ ಇತ್ಯಾದಿ ಅಕ್ಷರಗಳಿವೆ.  ಎದುರಿಗೆ ಅನುನಾಸಿಕಾಕ್ಷರ ಬಂದಿದೆ.  ಆದ ಕಾರಣದಿಂದ ಈ ವರ್ಗದ ಮೊದಲನೆಯ ಅಕ್ಷರಗಳಾದ     ಕ ಟ ತ ಪ ಇತ್ಯಾದಿ ವ್ಯಂಜನಗಳಿಗೆ ಅದೇ ವರ್ಗದ ಅನುನಾಸಿಕಾಕ್ಷರ (ಐದನೆಯ ವರ್ಣ) ಆದೇಶವಾಗಿ ಬಂದಿದೆಯೆಂದು ತಿಳಿಯಬೇಕು.  ಅಂದರೆ ವರ್ಗದ ಮೊದಲನೆಯ ವ್ಯಂಜನಕ್ಕೆ ಅದರದೇ ಆದ ಅನುನಾಸಿಕಾಕ್ಷರ ಬರುವಿಕೆಯೇ ಅನುನಾಸಿಕ ಸಂಧಿಯೆನಿಸುವುದು.

●.ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು:-
(೨೬) ವರ್ಗ ಪ್ರಥಮ ವರ್ಣಗಳಿಗೆ ಯಾವ ಅನುನಾಸಿಕಾಕ್ಷರ ಪರವಾದರೂ, ಅವುಗಳಿಗೆ ಅಂದರೆ ಕ ಚ ಟ ತ ಪ ವ್ಯಂಜನಗಳಿಗೆ ಕ್ರಮವಾಗಿ ಙ ಞ ಣ ನ ಮ ವ್ಯಂಜನಗಳು ಆದೇಶಗಳಾಗಿ ಬರುತ್ತವೆ.

ಉದಾಹರಣೆಗೆ:-
ದಿಕ್ + ನಾಗ = ದಿಙ್ + ನಾಗ = ದಿಙ್ನಾಗ
(ಕಕಾರಕ್ಕೆ ನಕಾರ ಪರವಾಗಿ ಙಕಾರಾದೇಶ)
ಷಟ್ + ಮಾಸ = ಷಣ್ + ಮಾಸ = ಷಣ್ಮಾಸ
(ಟಕಾರಕ್ಕೆ ಮಕಾರ ಪರವಾಗಿ ಣಕಾರಾದೇಶ)
ವಾಕ್ + ಮಾಧುರ‍್ಯ = ವಾಙ್ + ಮಾಧುರ‍್ಯ = ವಾಙ್ಮಾಧುರ‍್ಯ
(ಕಕಾರಕ್ಕೆ ಮಕಾರ ಪರವಾಗಿ ಙಕಾರಾದೇಶ)
ಚಿತ್ + ಮಯ = ಚಿನ್ + ಮಯ = ಚಿನ್ಮಯ
(ತಕಾರಕ್ಕೆ ಮಕಾರ ಪರವಾಗಿ ನಕಾರಾದೇಶ)
ಚಿತ್ + ಮೂಲ = ಚಿನ್ + ಮೂಲ = ಚಿನ್ಮೂಲ
(ತಕಾರಕ್ಕೆ ಮಕಾರಪರವಾಗಿ ನಕಾರಾದೇಶ)
ಸತ್ + ಮಣಿ = ಸನ್ + ಮಣಿ = ಸನ್ಮಣಿ
(ತಕಾರಕ್ಕೆ ಮಕಾರ ಪರವಾಗಿ ನಕಾರಾದೇಶ)
ಇದರಂತೆ, ವಾಙ್ಮೂಲ, ವಾಙ್ಮಾನಸ, ಉನ್ಮಾದ, ತನ್ಮಯ ಇತ್ಯಾದಿ


★ ವಿವರಗಳು:-
[1] ಅಆ, ಇಈ, ಉಊ, ಋೠ ಈ ಸ್ವರಗಳು ಸವರ್ಣ ಸ್ವರಗಳು.  ಅಅ, ಅಆ, ಆಆ, ಆಅ-ಹೀಗೆ ಬಂದರೂ ಸವರ್ಣ ಸ್ವರಗಳು.  ಈಈ, ಇಇ, ಈಇ, ಇಈ-ಹೀಗೆ ಬಂದರೂ ಸವರ್ಣ ಸ್ವರಗಳು. ಇದರ ಹಾಗೆಯೇ ಉಊ, ಋೠ ಗಳ ಸವರ್ಣ ಸ್ವರಗಳ ವಿಚಾರ ಕೂಡ.

[2] ಅ ಆ ಕಾರಗಳಿಗೆ ಎಂದರೆ, ಅ ಅಥವಾ ಆ ಕಾರಗಳಲ್ಲಿ ಯಾವುದಾದರೊಂದು ಸ್ವರಕ್ಕೆ ಎಂದರ್ಥ.  ಏ ಐ ಕಾರಗಳು ಪರವಾದರೆ ಎಂದರೆ, ಏ ಅಥವಾ ಐ ಕಾರಗಳಲ್ಲಿ ಯಾವುದಾದರೂ ಒಂದು ಪರವಾದರೆ ಎಂದು ಅರ್ಥ.

[3] ಯಣ್ ಎಂದರೆ ಯ ವ ರ ಲ ಈ ನಾಲ್ಕು ಅಕ್ಷರಗಳೆಂದು ಹಿಂದೆ ತಿಳಿಸಿದೆಯಷ್ಟೆ.  ಲ ಕಾರವು ಆದೇಶವಾಗಿ ಬರುವ ಉದಾಹರಣೆಗಳು ಕನ್ನಡ ಭಾಷೆಯಲ್ಲಿ ಇಲ್ಲವಾದ್ದರಿಂದ ಸೂತ್ರದಲ್ಲಿ ಅದನ್ನು ಕೈಬಿಟ್ಟಿದೆ.

[4] ಅಚ್ ಎಂದರೆ ಸಂಸ್ಕೃತ ವ್ಯಾಕರಣದಲ್ಲಿ ಸ್ವರ ಎಂದು ಅರ್ಥ.
ಅಜಂತ ಎಂದರೆ ಸ್ವರಾಂತವೆಂದು ತಿಳಿಯಬೇಕು.

[5] ಅಬ್ಜ=ಕಮಲ
[6] ಅಬ್ದ=ಮೋಡ
[7] ಅಬಂಶ=ನೀರಿನ ಅಂಶ
[8] ಅಬ್ಧಿ=ಸಮುದ್ರ (ಅಪ್ ಅಂದರೆ ನೀರು)
[9] ಅಪ್‌ಮಯ=ನೀರಿನ ಮಯ, ಅಂದರೆ ಜಲಮಯ ಎಂದು ಅರ್ಥ.
[10] ಚಕಾರಕ್ಕೆ ಞ ಕಾರ ಆದೇಶವಾಗಿ ಬರುವ ಉದಾಹರಣೆಗಳು ಪ್ರಸಿದ್ಧವಲ್ಲವಾದ್ದರಿಂದ ಆ ಉದಾಹರಣೆ ಕೊಟ್ಟಿಲ್ಲ.
[11] ದಿಙ್ನಾಗ=ದಿಕ್ಕುಗಳಲ್ಲಿರುವ ಆನೆ (ಅಷ್ಟದಿಗ್ಗಜಗಳು)
[12] ವಾಙ್ಮಾಧುರ‍್ಯ=ಮಾತಿನ ಮಾಧುರ‍್ಯ
[13] ವಾಙ್ಮೂಲ=ಮಾತಿನ ಮೂಲ; ವಾಙ್ಮಾನಸ=ಮಾತು, ಮನಸ್ಸು; ಉನ್ಮಾದ=ವಿಶೇಷ ಮದದಿಂದ ಕೂಡಿದ; ತನ್ಮಯ=ಬೆರೆಯುವಿಕೆ.)


★ ಇದುವರೆಗೆ ಸಂಸ್ಕೃತ ಸ್ವರಸಂಧಿ ಮತ್ತು ವ್ಯಂಜನಸಂಧಿಗಳ ಬಗೆಗೆ ಹಲವಾರು ವಿಷಯಗಳನ್ನು ತಿಳಿದಿರುವಿರಿ.
ಅದರ ಸಾರಾಂಶವನ್ನು ಈ ಕೆಳಗಿನ ಪಟ್ಟಿಯಲ್ಲಿ ಮತ್ತೊಮ್ಮೆ  ಓದಿ  ನೆನಪಿನಲ್ಲಿಡಿರಿ.

●. ಸಂಸ್ಕೃತ ಸಂಧಿಗಳು
★ ಸ್ವರಸಂಧಿಗಳು
★ ವ್ಯಂಜನಸಂಧಿಗಳು
(i) ಸವರ್ಣದೀರ್ಘಸಂಧಿ
(ದೀರ್ಘಸ್ವರಾದೇಶ)(i) ಜಶ್ತ್ವಸಂಧಿ
(ಜಬಗಡದ ಆದೇಶ)
(ii) ಗುಣಸಂಧಿ
(ಏ, ಓ, ಅರ್ ಆದೇಶ)(ii) ಶ್ಚುತ್ವಸಂಧಿ
(ಶಕಾರ ಚವರ್ಗಾದೇಶ)
(iii) ವೃದ್ಧಿಸಂಧಿ
(ಐ, ಔ ಆದೇಶ)(iii) ಅನುನಾಸಿಕಸಂಧಿ
(ಙ,ಞ,ಣ,ನ,ಮ ಗಳ ಆದೇಶ)
(iv) ಯಣ್‌ಸಂಧಿ
(ಯ, ವ, ರ ಆದೇಶ)

(courtesy :Kannada divige) 

☀ UNIT: Ⅱ) ಸಂಧಿಗಳು: (ಸಂಸ್ಕೃತ ಸಂಧಿಗಳು) (Kannada Grammar)

☀ UNIT: Ⅱ) ಸಂಧಿಗಳು: (ಸಂಸ್ಕೃತ ಸಂಧಿಗಳು)
(Kannada Grammar)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕನ್ನಡ ಸಾಹಿತ್ಯ
(Kannada Literature)

★ ಕನ್ನಡ ವ್ಯಾಕರಣ
(Kannada Grammar)


      - ಇದುವರೆಗೆ ಕನ್ನಡ ಭಾಷೆಯಲ್ಲಿ ಬರುವ ಲೋಪ, ಆಗಮ, ಆದೇಶ ಸಂಧಿಗಳ ಬಗೆಗೆ ತಿಳಿದಿರಿ. ಸ್ವರದ ಮುಂದೆ ಸ್ವರ ಬಂದರೆ ಲೋಪ ಅಥವಾ ಆಗಮ ಸಂಧಿಗಳಾಗುತ್ತವೆ. ಸ್ವರದ ಮುಂದೆ ವ್ಯಂಜನ ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದರೆ ಆಗುವ ಆದೇಶ ಸಂಧಿಗಳ ಸ್ಥೂಲಪರಿಚಯ ಮಾಡಿಕೊಂಡಿರಿ. ಅನಂತರ ಸ್ವರದ ಮುಂದೆ ಸ್ವರ ಬಂದರೂ ಸಂಧಿಯಾಗದೆ ಇರುವ ಪ್ರಕೃತಿಭಾವವನ್ನೂ ಅರಿತಿರಿ. ಇದನ್ನು ಕೆಳಗೆ ಸೂಚಿಸಿರುವ ರೇಖಾ ಚಿತ್ರಗಳ ಮೂಲಕ ಸ್ಥೂಲವಾಗಿ ನೆನಪಿನಲ್ಲಿ ಇಟ್ಟುಕೊಳ್ಳಿರಿ.


●.(೧) ಕನ್ನಡ ಸಂಧಿಗಳು:
•┈┈┈┈┈┈┈┈┈┈┈┈┈┈┈┈•
ಲೋಪ ಸ್ವರ+ಸ್ವರ-ಪೂರ್ವದ ಸ್ವರಕ್ಕೆ ಅರ್ಥಹಾನಿಯಾಗದಾಗ ಲೋಪಆಗಮ ಸ್ವರ+ಸ್ವರ-ಮಧ್ಯದಲ್ಲಿ ಯಕಾರ ಅಥವಾ ವಕಾರಾಗಮ  ಆದೇಶ
ಸ್ವರ+ವ್ಯಂಜನ, ವ್ಯಂಜನ+ವ್ಯಂಜನ.

★ ೧. ಉತ್ತರಪದದ ಆದಿಯ ಕ ತ ಪ ಗಳು ಗ ದ ಬ ಗಳಾಗುತ್ತವೆ.
೨.  ಪ ಬ ಮ ಗಳಿಗೆ ವಕಾರ ಆದೇಶವಾಗುತ್ತದೆ.
೩.  ಸ ಕಾರಕ್ಕೆ ಚ ಜ ಛ ಗಳು ಆದೇಶವಾಗುತ್ತವೆ.

★ (೨) ಸ್ವರದ ಮುಂದೆ ಸ್ವರ ಬಂದರೂ ಸಂಧಿಯಾಗದಿರುವುದು ಪ್ರಕೃತಿಭಾವ


●.ಸಂಸ್ಕೃತ ಸಂಧಿಗಳು
━━━━━━━━━━━━━━━

೧. ಸಂಸ್ಕೃತ ಸ್ವರ ಸಂಧಿಗಳು :
━━━━━━━━━━━━━━━━━
(೧) ರಾಮಾಯಣವು ಮಹೋನ್ನತ ಗ್ರಂಥ.
(೨) ಸೂರ್ಯೋದಯ ಸಮಯವು ಅತ್ಯಂತ ಮನೋಹರವಾದುದು.
ಮೇಲಿನ ಈ ಎರಡೂ ವಾಕ್ಯಗಳು ಕನ್ನಡ ವಾಕ್ಯಗಳೇ ಅಲ್ಲವೆ?  ಆದರೆ ಇದರಲ್ಲಿ ಸಂಸ್ಕೃತದಿಂದ ಬಂದ ಶಬ್ದಗಳೇ ಹೆಚ್ಚಾಗಿವೆ.

— ರಾಮಾಯಣ  ಮಹೋನ್ನತ  ಗ್ರಂಥ  ಸೂರ‍್ವೋದಯ ಸಮಯ ಅತ್ಯಂತ ಮನೋಹರ -ಹೀಗೆ ಈ ಏಳೂ ಶಬ್ದಗಳು ಸಂಸ್ಕೃತ ಶಬ್ದಗಳೇ ಆಗಿವೆ.  ಹೀಗೆ ನಮ್ಮ ಭಾಷೆಯಲ್ಲಿ ಸಾವಿರಾರು ವರ್ಷಗಳಿಂದ ಸಂಸ್ಕೃತದ ಅನೇಕ ಶಬ್ದಗಳು ಬಂದು ಸೇರಿವೆ.  ನಮ್ಮ ಕವಿಗಳು ತಮ್ಮ ಕಾವ್ಯಗಳಲ್ಲಿ ಲೆಕ್ಕವಿಲ್ಲದಷ್ಟು ಸಂಸ್ಕೃತ ಶಬ್ದಗಳನ್ನು ಸೇರಿಸಿ ಕಾವ್ಯ ಬರೆದಿದ್ದಾರೆ. ಆದ್ದರಿಂದ ಸಂಸ್ಕೃತದಿಂದ ಕನ್ನಡಕ್ಕೆ ಬಂದು ಬಳಸಲ್ಪಡುತ್ತಿರುವ ಶಬ್ದಗಳ ಸಂಧಿಕಾರ‍್ಯಗಳೇನೆಂಬುದನ್ನು ಕನ್ನಡ ಭಾಷಾಜ್ಞಾನದ ದೃಷ್ಟಿಯಿಂದ ತಿಳಿಯುವುದು ಉಪಯುಕ್ತವಾದುದು.

★ ಎರಡು ಸಂಸ್ಕೃತ ಶಬ್ದಗಳು ಸೇರಿ ಸಂಧಿಯಾದರೆ ಸಂಸ್ಕೃತ ಸಂಧಿಯೇ ಆಗುತ್ತದೆ. ಒಂದು ಸಂಸ್ಕೃತ ಶಬ್ದವು ಕನ್ನಡ ಶಬ್ದದೊಡನೆ ಸೇರಿ ಸಂಧಿಯಾದರೆ ಕನ್ನಡ ಸಂಧಿಯೇ ಆಗುತ್ತದೆ.

★ ಸಂಸ್ಕೃತದಲ್ಲಿ ಸ್ವರಕ್ಕೆ ಸ್ವರ ಪರವಾಗಿ ಸ್ವರಸಂಧಿಗಳೂ, ವ್ಯಂಜನಕ್ಕೆ ವ್ಯಂಜನ ಪರವಾಗಿ ವ್ಯಂಜನ ಸಂಧಿಗಳೂ ಆಗುವುವು.


★ ಮೊದಲು ಸ್ವರಸಂಧಿಗಳ ವಿಚಾರ ತಿಳಿಯೋಣ.

(೧) ಸವರ್ಣ ದೀರ್ಘ ಸಂಧಿ
•┈┈┈┈┈┈┈┈┈┈┈┈┈┈┈┈•
(ಅ) ವಿದ್ಯಾಭ್ಯಾಸ ಮಾಡಿದನು.
(ಆ) ರಾಮಾಯಣವನ್ನು ಓದು.
(ಇ) ಹರೀಶ್ವರನು ಕನ್ನಡ ಕವಿ.
(ಈ) ಗುರೂಪದೇಶವನ್ನು ಪಡೆ.

ಈ ವಾಕ್ಯಗಳಲ್ಲಿ ವಿದ್ಯಾಭ್ಯಾಸ ರಾಮಾಯಣ ಹರೀಶ್ವರ ಗುರೂಪದೇಶ ಈ ಶಬ್ದಗಳಲ್ಲಿ ಆಗಿರುವ ಸಂಧಿಕಾರರ್ಯಗಳನ್ನು ಗಮನಿಸಿರಿ.
ವಿದ್ಯಾ + ಅಭ್ಯಾಸ = ವಿದ್‌ಯ್ + ಆ + ಭ್ಯಾಸ = ವಿದ್ಯಾಭ್ಯಾಸ  (ಆ + ಅ)

★ ಇಲ್ಲಿ ಆ ಎಂಬ ಸ್ವರದ ಮುಂದೆ ಅ ಎಂಬ ಸ್ವರ ಬಂದಿದೆ.  ಈ ಎರಡೂ ಸ್ವರಗಳು ಸವರ್ಣಸ್ವರಗಳು, ಅಂದರೆ ಸಮಾನ ಸ್ಥಾನದಲ್ಲಿ ಹುಟ್ಟಿದವುಗಳು.  ಒಂದು ಹ್ರಸ್ವ, ಒಂದು ದೀರ್ಘ ಅಷ್ಟೆ.

— ಇವು ಹೀಗೆ ಒಂದರ ಮುಂದೆ ಒಂದು ಬಂದಾಗ ಅವೆರಡೂ ಹೋಗಿ ಅವುಗಳ ಸ್ಥಾನದಲ್ಲಿ ಅದರದೇ ಒಂದು ದೀರ್ಘಸ್ವರವು ಬರುವುದು.  ಹೀಗೆ ಬರುವುದು ಆದೇಶವೆಂದು ಹಿಂದೆ ತಿಳಿದಿದ್ದೀರಿ.
ಇದರ ಹಾಗೆಯೇ ಹರೀಶ್ವರ ಶಬ್ದವು-
ಹರಿ + ಈಶ್ವರ = ಹರ್ + ಈ + ಶ್ವರ = ಹರೀಶ್ವರ-ಎಂಬಲ್ಲಿ (ಇ + ಈ)
ಇ ಕಾರದ ಮುಂದೆ ಈ ಕಾರ ಬಂದಿದೆ.  ಇವೆರಡೂ ಹೋಗಿ ಅವುಗಳ ಸ್ಥಾನದಲ್ಲಿ ಈ ಎಂಬ ದೀರ್ಘಸ್ವರ ಆದೇಶವಾಗಿ ಬರುವುದು.

●.ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು:-
(೨೦) ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.

— ಉದಾಹರಣೆಗೆ:-
ದೇವ + ಅಸುರ = ದೇವಾಸುರ (ಅಕಾರಕ್ಕೆ ಅಕಾರ ಪರವಾಗಿ ಆಕಾರಾದೇಶ)
(ಅ+ ಅ)
ಸುರ + ಅಸುರ = ಸುರಾಸುರ (ಅಕಾರಕ್ಕೆ ಅಕಾರ ಪರವಾಗಿ ಆಕಾರಾದೇಶ)
(ಅ+ ಅ)
ಮಹಾ + ಆತ್ಮಾ = ಮಹಾತ್ಮ (ಆಕಾರಕ್ಕೆ ಆಕಾರ ಪರವಾಗಿ ಒಂದು ದೀರ್ಘಸ್ವರ ಆದೇಶ)
(ಆ+ ಆ)
ಕವಿ + ಇಂದ್ರ = ಕವೀಂದ್ರ (ಇಕಾರಕ್ಕೆ ಇಕಾರ ಪರವಾಗಿ ಈಕಾರಾದೇಶ)
(ಇ+ ಇ)
ಗಿರಿ + ಈಶ = ಗಿರೀಶ (ಇಕಾರಕ್ಕೆ ಈಕಾರ ಪರವಾಗಿ ಈಕಾರಾದೇಶ)
(ಇ+ ಈ)
ಲಕ್ಷೀ + ಈಶ = ಲಕ್ಷೀಶ (ಈಕಾರಕ್ಕೆ ಈಕಾರಪರವಾಗಿ ಈಕಾರಾದೇಶ)
(ಈ+ ಈ)
ಗುರು + ಉಪದೇಶ = ಗರೂಪದೇಶ (ಉಕಾರಕ್ಕೆ ಉಕಾರ ಪರವಾಗಿ ಊಕಾರಾದೇಶ)
(ಉ+ ಉ)
ವಧೂ + ಉಪೇತ = ವಧೂಪೇತ (ಊಕಾರಕ್ಕೆ ಉಕಾರಪರವಾಗಿ ಊಕಾರಾದೇಶ)
(ಊ+ ಉ)


●.(೨) ಗುಣಸಂಧಿ
•┈┈┈┈┈┈┈┈┈┈┈┈•
(ಅ) ಸುರೇಶನು ಬಂದನು.
(ಆ) ದೇವೇಂದ್ರನ ಸಭೆ.
(ಇ) ಮಹೇಶನನ್ನು ನೋಡು.
(ಈ) ಸೂರ್ಯೋದಯವಾಯಿತು.
(ಉ) ವಾಲ್ಮೀಕಿ ಮಹರ್ಷಿಗಳು ಬಂದರು

— ಈ ವಾಕ್ಯಗಳಲ್ಲಿರುವ ಸುರೇಶ, ದೇವೇಂದ್ರ, ಮಹೇಶ, ಸುರ್ಯೋದಯ, ಮಹರ್ಷಿ

★ ಈ ಶಬ್ದಗಳನ್ನು ಬಿಡಿಸಿ ಬರೆದರೆ ಹೇಗಾಗುವುವು ನೋಡಿರಿ.
ಸುರ + ಈಶ = ಸುರೇಶ (ಅ + ಈ = ಏ)
(ಅ+ ಈ)
ದೇವ + ಇಂದ್ರ = ದೇವೇಂದ್ರ (ಅ + ಇ = ಏ)
(ಅ+ ಇ)
ಮಹಾ + ಈಶ = ಮಹೇಶ (ಆ + ಈ = ಏ)
(ಆ+ ಈ)
ಸೂರ‍್ಯ + ಉದಯ = ಸೂರ‍್ಯೋದಯ (ಅ + ಉ = ಓ)
(ಅ+ ಉ)
ಮಹಾ + ಋಷಿ = ಮಹರ್‌ಷಿ (ಆ + ಋ = ಆರ್)
(ಆ+ ಋ)
ಎಲ್ಲಾ ಉದಾಹರಣೆಗಳಲ್ಲೂ ಪೂರ್ವದ ಸ್ವರವು ಅ ಅಥವಾ ಆ ಆಗಿವೆ.

★ ಪರದಲ್ಲಿ (ಎದುರಿನಲ್ಲಿ) ಇ, ಈ, ಉ, ಋ ಇತ್ಯಾದಿ ಸ್ವರಗಳಿವೆ.  ಇ ಅಥವಾ ಈ ಪರವಾದಲ್ಲೆಲ್ಲಾ ಏ ಕಾರ ಬಂದಿದೆ.  ಉ ಪರವಾದಲ್ಲಿ ಓ ಕಾರ ಬಂದಿದೆ.  ಋ ಪರವಾದಲ್ಲಿ ಅರ್ ಕಾರ ಬಂದಿದೆ.  ಅಂದರೆ ಪೂರ್ವದ ಮತ್ತು ಪರದ ಎರಡೂ ಸ್ವರಗಳು ಹೋಗಿ ಅವುಗಳ ಸ್ಥಾನದಲ್ಲಿ ಏ ಓ ಅರ್ ಗಳು ಆದೇಶಗಳಾಗಿ ಬಂದಿವೆ ಎಂದ ಹಾಗಾಯಿತು.

●.ಇದಕ್ಕೆ ಸಾಮಾನ್ಯ ಸೂತ್ರವನ್ನು ಹೀಗೆ ಹೇಳಬಹುದು.
(೨೧) ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಏ ಕಾರವೂ, ಉ ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಓ ಕಾರವೂ, ಋ ಕಾರ ಪರವಾದರೆ ಅವೆರಡರ ಸ್ಥಾನದಲ್ಲಿ ಅರ್ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಗುಣಸಂಧಿ ಎಂದು ಹೆಸರು.

— ಉದಾಹರಣೆಗೆ:-
ಸುರ + ಇಂದ್ರ = ಸುರೇಂದ್ರ (ಅಕಾರಕ್ಕೆ ಇಕಾರ ಪರವಾಗಿ ಏಕಾರಾದೇಶ)
(ಅ+ ಇ)
ಧರಾ + ಇಂದ್ರ = ಧರೇಂದ್ರ (ಆಕಾರಕ್ಕೆ ಇಕಾರ ಪರವಾಗಿ ಏಕಾರಾದೇಶ)
(ಆ+ ಇ)
ಮಹಾ + ಈಶ್ವರ = ಮಹೇಶ್ವರ (ಆಕಾರಕ್ಕೆ ಈಕಾರ ಪರವಾಗಿ ಏಕಾರಾದೇಶ)
(ಆ+ ಈ)
ಚಂದ್ರ + ಉದಯ = ಚಂದ್ರೋದಯ (ಅಕಾರಕ್ಕೆ ಉಕಾರ ಪರವಾಗಿ ಓಕಾರಾದೇಶ)
(ಅ+ ಉ)
ಏಕ + ಊನ = ಏಕೋನ (ಅಕಾರಕ್ಕೆ ಊಕಾರ ಪರವಾಗಿ ಓಕಾರಾದೇಶ)
(ಅ+ ಊ)
ದೇವ + ಋಷಿ = ದೇವರ್ಷಿ (ಅಕಾರಕ್ಕೆ ಋಕಾರ ಪರವಾಗಿ ಅರ್ ಆದೇಶ)
(ಅ+ ಋ)
ಮಹಾ + ಋಷಿ = ಮಹರ್ಷಿ (ಆಕಾರಕ್ಕೆ ಋಕಾರ ಪರವಾಗಿ ಅರ್ ಆದೇಶ)
(ಆ+ ಋ)


●.(೩) ವೃದ್ಧಿ ಸಂಧಿ
•┈┈┈┈┈┈┈┈┈┈┈┈•
(೧) ಅವನು ಏಕೈಕ ವೀರನು.
(೨) ಕೃಷ್ಣದೇವರಾಯ ಅಷ್ಟೈಶ್ವರ‍್ಯದಿಂದ ಕೂಡಿದ್ದನು.
(೩) ಹಿಮಾಲಯದಲ್ಲಿ ವನೌಷಧಿಗಳುಂಟು.
(೪) ನಾರಣಪ್ಪ ಮಹೌನ್ನತ್ಯದಿಂದ ಕೂಡಿದ ಕವಿ.

★ ಈ ಮೇಲಿನ ವಾಕ್ಯಗಳಲ್ಲಿ ಬಂದಿರುವ ಏಕೈಕ, ಅಷ್ಟೈಶ್ವರ‍್ಯ, ವನೌಷದಿ, ಮಹೌನ್ನತ್ಯ ಪದಗಳನ್ನು ಬಿಡಿಸಿ ಬರೆದರೆ ಅವು ಈ ಕೆಳಗಿನಂತೆ ಆಗುವುವು:-
ಏಕ + ಏಕ = ಏಕ್ + ಐಕ (ಅ + ಏ + ಐ)
(ಅ+ ಏ)
ಅಷ್ಟ + ಐಶ್ವರ‍್ಯ = ಅಷ್ಟ್ + ಐಶ್ವರ‍್ಯ = ಅಷ್ಟೈಶ್ವರ‍್ಯ (ಅ + ಐ = ಐ)
(ಅ+ ಐ)
ವನ + ಓಷಧಿ = ವನ್ + ಔಷಧಿ = ವನೌಷಧಿ (ಅ + ಓ = ಔ)
(ಅ+ ಓ)
ಮಹಾ + ಔನ್ನತ್ಯ = ಮಹ್ + ಔನ್ನತ್ಯ = ಮಹೌನ್ನತ್ಯ (ಆ + ಔ = ಔ)
(ಆ+ ಔ)

★ ಪೂರ್ವದಲ್ಲಿ ಎಲ್ಲ ಕಡೆಗೂ ಅ ಅಥವಾ ಆ ಸ್ವರಗಳಿವೆ. ಎದುರಿಗೆ ಏ, ಐ, ಓ, ಔ ಪರವಾಗಿವೆ.  ಏ ಅಥವಾ ಐ ಪರವಾದಾಗ ಒಂದು ಐ ಕಾರವೂ, ಓ ಅಥವಾ ಔ ಪರವಾದಾಗ ಒಂದು ಔ ಕಾರವೂ ಆದೇಶಗಳಾಗಿ ಅಂದರೆ ಆ ಎರಡೂ ಸ್ವರಗಳ ಸ್ಥಾನದಲ್ಲಿ ಬಂದಿವೆ.

●.ಹಾಗಾದರೆ ಇದರ ಸೂತ್ರವನ್ನು ಹೀಗೆ ಹೇಳಬಹುದು:-
  — ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವೂ, ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಔ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿ ಯೆನ್ನುವರು.

ಉದಾಹರಣೆಗೆ:-
ಲೋಕ + ಏಕವೀರ = ಲೋಕೈಕವೀರ (ಅಕಾರಕ್ಕೆ ಏಕಾರ ಪರವಾಗಿ ಐಕಾರಾದೇಶ)
(ಅ+ ಏ)
ಜನ + ಐಕ್ಯ = ಜನೈಕ್ಯ (ಅಕಾರಾಕ್ಕೆ ಐಕಾರ ಪರವಾಗಿ ಐಕಾರಾದೇಶ)
(ಅ+ ಐ)
ವಿದ್ಯಾ + ಐಶ್ವರ‍್ಯ = ವಿದ್ಯೈಶ್ವರ‍್ಯ (ಆಕಾರಕ್ಕೆ ಐಕಾರ ಪರವಾಗಿ ಐಕಾರಾದೇಶ)
(ಆ+ ಐ)
ಜಲ + ಓಘ = ಜಲೌಘ (ಅಕಾರಕ್ಕೆ ಓಕಾರ ಪರವಾಗಿ ಔಕಾರಾದೇಶ)
(ಅ+ ಓ)
ಘನ + ಔದಾರ‍್ಯ = ಘನೌದಾರ‍್ಯ (ಅಕಾರಕ್ಕೆ ಔಕಾರ ಪರವಾಗಿ ಔಕಾರಾದೇಶ)
(ಅ+ ಔ)
ಮಹಾ + ಔದಾರ‍್ಯ = ಮಹೌದಾರ‍್ಯ (ಆಕಾರಕ್ಕೆ ಔಕಾರ ಪರವಾಗಿ ಔಕಾರಾದೇಶ)
(ಆ+ ಔ)


●.(೪) ಯಣ್ ಸಂಧಿ
•┈┈┈┈┈┈┈┈┈┈┈┈┈•
— ಸಂಸ್ಕೃತ ವ್ಯಾಕರಣದಲ್ಲಿ ಕೆಲವು ಸಂಜ್ಞೆಗಳನ್ನು ಮಾಡಿಕೊಂಡಿದ್ದಾರೆ.  ಅದರ ಪ್ರಕಾರ ಯಣ್ ಎಂದರೆ ಯ ವ ರ ಲ ಈ ನಾಲ್ಕು ವ್ಯಂಜನಗಳು. ಯಣ್ ಸಂಧಿಯೆಂದರೆ ಈ ನಾಲ್ಕು ಅಕ್ಷರಗಳು ಆದೇಶವಾಗಿ ಬರುವುದೇ ಆಗಿದೆ.

— ಈ ಅಕ್ಷರಗಳು ಯಾವ ಅಕ್ಷರಕ್ಕೆ ಆದೇಶವಾಗಿ ಬರುತ್ತವೆಂಬುದನ್ನು ನೋಡಿರಿ:-
(೧) ಅವನು ಅತ್ಯಂತ ಪರಾಕ್ರಮಿ.
(೨) ಈ ಮನ್ವಂತರದಲ್ಲಿ ನಡೆಯಿತು.
(೩) ನಮ್ಮದು ಪಿತ್ರಾರ್ಜಿತವಾದ ಆಸ್ತಿ.

★ ಈ ಮೂರು ವಾಕ್ಯಗಳಲ್ಲಿ ಬಂದಿರುವ ಅತ್ಯಂತ ಮನ್ವಂತರ ಪಿತ್ರಾರ್ಜಿತ ಈ ಶಬ್ದಗಳನ್ನು ಬಿಡಿಸಿ ಬರೆದರೆ:-
(೧) ಅತಿ + ಅಂತ = ಅತ್ + ಯ್ + ಅಂತ = ಅತ್ಯಂತ (ಇ + ಅ = ಯ್‌ಅ)
ಇಲ್ಲಿ ಇಕಾರದ ಸ್ಥಳದಲ್ಲಿ ಯ್ ಕಾರಾದೇಶವಾಗಿದೆ.

(೨) ಮನು + ಅಂತರ = ಮನ್‌ವ್ + ಅಂತರ = ಮನ್ವಂತರ (ಉ + ಅ =ವ್‌ಅ)
ಇಲ್ಲಿ ಉಕಾರದ ಸ್ಥಾನದಲ್ಲಿ ವ್ ಕಾರಾದೇಶವಾಗಿದೆ.

(೩) ಪಿತೃ + ಆರ್ಜಿತ = ಪಿತ್‌ರ್ + ಆರ್ಜಿತ = ಪಿತ್ರಾರ್ಜಿತ (ಋ + ಆ = ರ್‌ಆ)
ಇಲ್ಲಿ ಋಕಾರದ ಸ್ಥಾನದಲ್ಲಿ ರ್ ಕಾರಾದೇಶವಾಗಿದೆ.

— ಹಾಗಾದರೆ ಪೂರ್ವದಲ್ಲಿರುವ ಇ, ಉ, ಋ ಕಾರಗಳಿಗೆ, ಕ್ರಮವಾಗಿ ಯ್, ವ್, ರ್ ಗಳು ಆದೇಶವಾಗಿ ಬಂದಿವೆಯೆಂದ ಹಾಗಾಯಿತು.  ಎದುರಿಗೆ ಎಂಥ ಸ್ವರಗಳು ಇರಬೇಕೆಂಬುದಕ್ಕೂ ಒಂದು ನೇಮವಿದೆ.  ಅತಿ + ಇಚ್ಛಾ ಹೀಗೆ ಇಕಾರದ ಮುಂದೆ ಇಕಾರವೇ ಬಂದಿದ್ದರೆ ಅತೀಚ್ಛಾ ಎಂದು ಸವರ್ಣದೀರ್ಘ ಸಂಧಿಯಾಗುತ್ತಿತ್ತು.  ಆದ್ದರಿಂದ ಸವರ್ಣಸ್ವರ ಎದುರಿಗೆ ಬರಬಾರದೆಂದ ಹಾಗಾಯಿತು.

●.ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.
— (೨೩) ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ ಯ್ ಕಾರವೂ, ಉ ಊ ಕಾರಗಳಿಗೆ ವ್ ಕಾರವೂ, ಋ ಕಾರಕ್ಕೆ ರ್ (ರೇಫ)ವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಯಣ್ ಸಂಧಿಯೆಂದು ಹೆಸರು.

— ಉದಾಹರಣೆಗೆ:-
ಅತಿ + ಅವಸರ = ಅತ್ಯವಸರ    (ಇಕಾರಕ್ಕೆ ಯ್ ಕಾರಾದೇಶ)
(ಇ+ ಅ)
ಜಾತಿ + ಅತೀತ = ಜಾತ್ಯಾತೀತ  (ಇಕಾರಕ್ಕೆ ಯ್ ಕಾರಾದೇಶ)
(ಇ+ ಅ)
ಕೋಟಿ + ಅಧೀಷ = ಕೋಟ್ಯಧೀಶ (ಇಕಾರಕ್ಕೆ ಯ್ ಕಾರಾದೇಶ)
(ಇ+ ಅ)
ಗತಿ + ಅಂತರ = ಗತ್ಯಂತರ       (         “          )
(ಇ+ ಅ)
ಪ್ರತಿ + ಉತ್ತರ = ಪ್ರತ್ಯುತ್ತರ       (         “          )
(ಇ+ ಉ)
ಪತಿ + ಅರ್ಥ = ಪತ್ಯರ್ಥ           (         “           )
(ಇ+ ಅ)
ಅತಿ + ಆಶೆ = ಅತ್ಯಾಶೆ            (         “           )
(ಇ+ ಆ)
ಅಧಿ + ಆತ್ಮ = ಅಧ್ಯಾತ್ಮ          (           “           )
(ಇ+ ಆ)
ಗುರು + ಆಜ್ಞೆ = ಗುರ‍್ವಾಜ್ಞೆ       (ಉಕಾರಕ್ಕೆ ವ್ ಕಾರಾದೇಶ)
(ಉ+ ಆ)
ಮನು + ಆದಿ = ಮನ್ವಾದಿ        (ಉಕಾರಕ್ಕೆ ವ್ ಕಾರಾದೇಶ)
(ಉ+ ಆ)
ವಧೂ + ಆಭರಣ = ವಧ್ವಾಭರಣ (ಊಕಾರಕ್ಕೆ ವ್ ಕಾರಾದೇಶ)
(ಊ+ ಆ)
ವಧೂ + ಅನ್ವೇಷಣ = ವಧ್ವನ್ವೇಷಣ (ಊಕಾರಕ್ಕೆ ವ್ ಕಾರಾದೇಶ)
(ಊ+ ಅ)
ಪಿತೃ + ಅರ್ಥ = ಪಿತ್ರರ್ಥ          (ಋ ಕಾರಕ್ಕೆ ರ್ ಕಾರಾದೇಶ)
(ಋ+ ಅ)
ಮಾತೃ + ಅಂಶ = ಮಾತ್ರಂಶ    (           “           )
(ಋ+ ಅ)
ಕರ್ತೃ + ಅರ್ಥ = ಕರ್ತ್ರರ್ಥ        (         “           )
(ಋ+ ಅ)

(Courtesy :
kannada divige)

Wednesday, 15 July 2015

☀ UNIT: Ⅰ) ಸಂಧಿಗಳು: (ಸಂಸ್ಕೃತ ಸಂಧಿಗಳು )..ಮುಂದುವರಿದ ಭಾಗ. (Kannada Grammar)

☀ UNIT: Ⅰ) ಸಂಧಿಗಳು: (ಸಂಸ್ಕೃತ ಸಂಧಿಗಳು)..ಮುಂದುವರಿದ ಭಾಗ.
(Kannada Grammar)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕನ್ನಡ ಸಾಹಿತ್ಯ
(Kannada Literature)

★ ಕನ್ನಡ ವ್ಯಾಕರಣ
(Kannada Grammar)


●.೩. ಆದೇಶ ಸಂಧಿ
•┈┈┈┈┈┈┈┈┈┈┈•

— ಇದುವರೆಗೆ ಸ್ವರದ ಮುಂದೆ ಸ್ವರ ಬಂದರೆ ಲೋಪಸಂಧಿಯೋ, ಆಗಮಸಂಧಿಯೋ ಆಗುವ ವಿಚಾರ ನೋಡಿದೆವು.  ಈಗ ಸ್ವರದ ಮುಂದೆ ವ್ಯಂಜನ ಬಂದಾಗ ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದಾಗ ಏನೇನು ಸಂಧಿಕಾರ್ಯ ನಡೆಯುವುದೆಂಬುದನ್ನು ತಿಳಿಯೋಣ.

ಮಳೆ + ಕಾಲ = ಮಳೆಗಾಲ (ಮಳೆ + ಗ್‌ಆಲ)
ಚಳಿ + ಕಾಲ = ಚಳಿಗಾಲ (ಚಳಿ +ಗ್‌ಆಲ)
ಬೆಟ್ಟ + ತಾವರೆ = ಬೆಟ್ಟದಾವರೆ (ಬೆಟ್ಟ + ದ್‌ಆವರೆ)
ಕಣ್ + ಕೆಟ್ಟು = ಕಂಗೆಟ್ಟು (ಕಂ + ಗ್‌ಎಟ್ಟು)
ಕಣ್ + ಪನಿ = ಕಂಬನಿ (ಕಂ + ಬ್‌ಅನಿ)
— ಮೇಲಿನ ಉದಾಹರಣೆಗಳಲ್ಲಿರುವ, ಮಳೆ + ಕಾಲ ಎಂಬೆರಡು ಶಬ್ದಗಳಲ್ಲಿ ೨ ನೆಯ ಪದ [ಉತ್ತರಪದ] ದ ಮೊದಲನೆಯ ಕ ಕಾರಕ್ಕೆ ಗ ಕಾರ ಬಂದಿದೆ.

ಚಳಿಗಾಲ ಎಂಬಲ್ಲಿಯೂ ಇದರಂತೆಯೇ ಕಕಾರಕ್ಕೆ ಗಕಾರ ಬಂದಿದೆ.
ಬೆಟ್ಟ+ ತಾವರೆ ಎಂಬೆರಡು ಪದಗಳಲ್ಲಿ ೨ ನೆಯ ಪದದ ಮೊದಲಕ್ಷರವಾದ ತ ಕಾರಕ್ಕೆದ ಕಾರ ಬಂದಿದೆ.  [ಅಂದರೆ ತ್ ಎಂಬ ವ್ಯಂಜನಕ್ಕೆ ದ್ ಎಂಬ ವ್ಯಂಜನ ಬಂದಿದೆ]
ಕಣ್ + ಪನಿ ಎಂಬಲ್ಲಿ ಪ ಕಾರಕ್ಕೆ ಬ ಕಾರ ಬಂದಿದೆ.

— ಹೀಗೆ ಸಂಧಿ ಯಾಗುವಾಗ ಒಂದು ಅಕ್ಷರದ ಸ್ಥಳದಲ್ಲಿ ಬೇರೊಂದು ಅಕ್ಷರ ಬರುವುದೇ ಆದೇಶವೆನಿಸುವುದು.
★ ಕನ್ನಡ ಸಂಧಿಗಳಲ್ಲಿ ಈ ಆದೇಶವಾಗುವಿಕೆಯು ಉತ್ತರ ಪದದ ಆದಿಯಲ್ಲಿರುವ ವ್ಯಂಜನಕ್ಕೆ ಮಾತ್ರ ಎಂಬುದನ್ನು ಮುಖ್ಯವಾಗಿ ಗಮನದಲ್ಲಿಟ್ಟಿರಬೇಕು.
(೧೮) ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ (ಸ್ಥಳದಲ್ಲಿ) ಬೇರೊಂದು ಅಕ್ಷರವು ಬರುವುದೇ ಆದೇಶಸಂಧಿಯೆನಿಸುವುದು.

— ಹಾಗಾದರೆ ಎಲ್ಲೆಲ್ಲಿ ಈ ಆದೇಶಸಂಧಿಯಾಗುವುದು? ಯಾವ ಅಕ್ಷರಕ್ಕೆ ಯಾವ ಅಕ್ಷರ ಆದೇಶವಾಗಿ ಬರುವುದು? ಎಂಬುದನ್ನು ವಿವರವಾಗಿ ತಿಳಿಯೋಣ.

★ (i) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಕ ತ ಪ ವ್ಯಂಜನಗಳಿಗೆ ಕ್ರಮವಾಗಿ ಗ ದ ಬ ವ್ಯಂಜನಗಳು ಆದೇಶವಾಗಿ ಬರುವುವು.
ಉದಾಹರಣೆಗೆ:-
ಹುಲ್ಲು + ಕಾವಲು=*ಹುಲ್ಲು + ಗ್ ಆವಲು=ಹುಲ್ಲುಗಾವಲು
(ಕಕಾರಕ್ಕೆ ಗಕಾರಾದೇಶ)
ಹಳ + ಕನ್ನಡ=ಹಳ + ಗ್ ಅನ್ನಡ=ಹಳಗನ್ನಡ
(ಕಕಾರಕ್ಕೆ ಗಕಾರಾದೇಶ)
ಕಳೆ + ಕೂಡಿ=ಕಳೆ + ಗ್ ಊಡಿ=ಕಳೆಗೂಡಿ
(ಕಕಾರಕ್ಕೆ ಗಕಾರಾದೇಶ)
ಎಳೆ+ ಕರು=ಎಳೆ + ಗ್ ಅರು=ಎಳೆಗರು
(ಕಕಾರಕ್ಕೆ ಗಕಾರಾದೇಶ)
ಮನೆ + ಕೆಲಸ=ಮನೆ + ಗ್ ಎಲಸ=ಮನೆಗೆಲಸ
(ಕಕಾರಕ್ಕೆ ಗಕಾರಾದೇಶ)
ಮೈ+ ತೊಳೆ=ಮೈ + ದ್ ಒಳೆ=ಮೈದೊಳೆ
(ತಕಾರಕ್ಕೆ ದಕಾರಾದೇಶ)
ಮೇರೆ + ತಪ್ಪು=ಮೇರೆ + ದ್ ಅಪ್ಪು=ಮೇರೆದಪ್ಪು
(ತಕಾರಕ್ಕೆ ದಕಾರಾದೇಶ)
ಕಣ್+ ಪನಿ=ಕಣ್ + ಬ್ ಅನಿ=ಕಂಬನಿ
(ಪಕಾರಕ್ಕೆ ಬಕಾರಾದೇಶ)
ಬೆನ್ + ಪತ್ತು=ಬೆನ್ + ಬ್ ಅತ್ತು=(ಬೆಂಬತ್ತು)
(ಪಕಾರಕ್ಕೆ ಬಕಾರಾದೇಶ)
ಕೆಲವು ಕಡೆ ಈ ಆದೇಶಗಳು ಬಾರದೆ ಇರುವುದೂ ಉಂಟು
ಮನೆ + ಕಟ್ಟು     =        ಮನೆಕಟ್ಟು
ತಲೆ + ಕಟ್ಟು      =        ತಲೆಕಟ್ಟು

★ (ii) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಪ ಬ ಮ ವ್ಯಂಜನಗಳಿಗೆ ವ ಕಾರವು ಆದೇಶವಾಗಿ ಬರುವುದು
ಉದಾಹರಣೆಗೆ:-
ನೀರ್ + ಪೊನಲ್=ನೀರ್ + ವ್ ಒನಲ್ = ನೀರ‍್ವೊನಲ್
(ಪಕಾರಕ್ಕೆ ವಕಾರಾದೇಶ)
ಎಳ+ ಪೆರೆ=ಎಳ + ವ್ ಎರೆ = ಎಳವರೆ
(ಪಕಾರಕ್ಕೆ ವಕಾರಾದೇಶ)
ಬೆಮರ್ + ಪನಿ=ಬೆಮರ್ + ವ್ ಅನಿ = ಬೆಮರ್ವನಿ
(ಪಕಾರಕ್ಕೆ ವಕಾರಾದೇಶ)
ಬೇರ್ + ಬೆರಸಿ=ಬೇರ್ + ವ್ ಎರಸಿ = ಬೇರ‍್ವೆರಸಿ
(ಬಕಾರಕ್ಕೆ ವಕಾರಾದೇಶ)
ಕಡು + ಬೆಳ್ಪು=ಕಡು + ವ್ ಎಳ್ಪು =  ಕಡುವೆಳ್ಪು
(ಬಕಾರಕ್ಕೆ ವಕಾರಾದೇಶ)
ಎಳ + ಬಳ್ಳಿ=ಎಳ + ವ್ ಅಳ್ಳಿ = ಎಳವಳ್ಳಿ
(ಬಕಾರಕ್ಕೆ ವಕಾರಾದೇಶ)
ಮೆಲ್ + ಮಾತು=ಮೆಲ್ + ವ್ ಆತು = ಮೆಲ್ವಾತು
(ಮಕಾರಕ್ಕೆ ವಕಾರಾದೇಶ)
ನೆಲೆ + ಮನೆ=ನೆಲೆ + ವ್ ಅನೆ = ನೆಲೆವನೆ
(ಮಕಾರಕ್ಕೆ ವಕಾರಾದೇಶ)

— ಇದರ ಹಾಗೆ…….ಕಿಸುವಣ್, ಎಸರ‍್ವೊಯ್ದು, ಚೆಲ್ವೆಳಕು, ಕೆನೆವಾಲ್, ಕೈವಿಡಿ, ನೆರೆವೀದಿ, ಪೊರೆವೀಡು ಇತ್ಯಾದಿಗಳಲ್ಲಿ ವಕಾರಾದೇಶ ಬಂದಿರುವುದನ್ನು ಗಮನಿಸಿರಿ.

ಈ ಆದೇಶವು ಕೆಲವು ಕಡೆ ಬರುವುದಿಲ್ಲ.
ಅದಕ್ಕೆ ಉದಾಹರಣೆ:-
ಕಣ್ + ಬೇಟ = ಕಣ್ಬೇಟ (ಕಣ್ವೇಟ ಆಗುವುದಿಲ್ಲ)
ಕಿಳ್ + ಪೊಡೆ = ಕಿಳ್ಪೊಡೆ (ಕಿಳ್ವೊಡೆ ಆಗುವುದಿಲ್ಲ)
ಪಾಳ್ + ಮನೆ = ಪಾಳ್ಮನೆ (ಪಾಳ್ವನೆ ಆಗುವುದಿಲ್ಲ)

★ (iii) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಸಕಾರಕ್ಕೆ ಸಾಮಾನ್ಯವಾಗಿ ಕೆಲವು ಕಡೆ ಚಕಾರವೂ, ಕೆಲವು ಕಡೆ ಜಕಾರವೂ, ಕೆಲವು ಕಡೆ ಛಕಾರವೂ ಆದೇಶವಾಗಿ ಬರುವುದುಂಟು. ಆದರೆ ಪೂರ್ವಪದದ ಕೊನೆಯಲ್ಲಿ ಯ್, ಲ್ ಗಳು ಇರಬಾರದು.
ಉದಾಹರಣೆಗೆ:-
(೧) ಸಕಾರಕ್ಕೆ ಚಕಾರ ಬರುವುದಕ್ಕೆ__ಇನ್ + ಸರ = ಇನ್ + ಚ್ ಅರ = ಇಂಚರ
ನುಣ್ + ಸರ = ನುಣ್ + ಚ್ ಅರ = ನುಣ್ಚರ

(೨) ಸಕಾರಕ್ಕೆ ಜಕಾರ ಬರುವುದಕ್ಕೆ__ಮುನ್ + ಸೆರಂಗು = ಮುನ್ + ಜ್ ಎರಂಗು = ಮುಂಜೆರಂಗು
ಮುನ್ + ಸೊಡರ್ = ಮುನ್ + ಜ್ ಒಡರ್ = ಮುಂಜೊಡರ್
ತಣ್ + ಸೊಡರ್ = ತಣ್ + ಜ್ ಒಡರ್ = ತಣ್ಜೊಡರ್

(೩) ಸಕಾರಕ್ಕೆ ಛಕಾರ ಬರುವುದಕ್ಕೆ__
ಇರ್ + ಸಾಸಿರ = ಇರ್ + ಛ್ ಆಸಿರ = ಇರ್ಚ್ಛಾಸಿರ
ಪದಿನೆಣ್ + ಸಾಸಿರ = ಪದಿನೆಣ್ + ಛ್ ಆಸಿರ = ಪದಿನೆಣ್ಛಾಸಿರ
ನೂರ್ + ಸಾಸಿರ = ನೂರ್ + ಛ್ ಆಸಿರ = ನೂರ್ಛಾಸಿರ

— ಕೆಲವು ಕಡೆ ಈ ಸಕಾರಕ್ಕೆ ಯಾವ ಆದೇಶಗಳೂ ಬಾರದಿರುವುದುಂಟು.
ಬಾಯ್ + ಸವಿ = ಬಾಯ್ಸವಿ, ಬೆಳ್ಸರಿ, ಕಣ್ಸೋಲ, ಕಣ್ಸ್‌ವಿ, ಮೆಲ್ಸರ, ಮೆಯ್ಸವಿ, ಬಲ್ಸೋನೆ.

[1] ‘ಕಾ’ ಎಂಬುದು ‘ರಕ್ಷಣೆ ಮಾಡು’ ಎಂಬರ್ಥದಲ್ಲಿ ಏಕಾಕ್ಷರಧಾತು.  ಹೊಸಗನ್ನಡದಲ್ಲಿ ‘ಕಾ’ ಧಾತು ‘ಕಾಯ್’ ಆಗುವುದೆಂದು ಕೆಲವರು ಒಪ್ಪುತ್ತಾರೆ.

[2] ಮೀ ಎಂಬುದೂ ಕೂಡ ಸ್ನಾನಮಾಡು ಎಂಬರ್ಥದ ಕನ್ನಡ ಏಕಾಕ್ಷರ ಧಾತು.

[3] ಮೇ ಎಂಬುದೂ ಕೂಡ ಪಶುಗಳ ಆಹಾರ ಭಕ್ಷಣೆಯ ಅರ್ಥದಲ್ಲಿ ಏಕಾಕ್ಷರ ಧಾತುವಾಗಿದೆ.

[4] ಆ ಶಬ್ದವೆಂದರೆ, ಕೆಲವು ಕಡೆ ಅವನು, ಅವಳು, ಅದು ಎಂಬ ಸರ್ವನಾಮಗಳಿಗೆ ಆ ಎಂಬುದು ಆದೇಶವಾಗಿ ಬರುವುದು.  ಹಾಗೆ ಆದೇಶವಾಗಿ ಬಂದ ಆಕಾರವೇ ಆ ಶಬ್ದವೆನಿಸುವುದು.

ಉದಾ.:-ಅವನು+ಗಂಡಸು= ಆ ಗಂಡಸು; ಅವಳು+ಹೆಂಗಸು=ಆ ಹೆಂಗಸು; ಅದು+ಕಲ್ಲು= ಆ ಕಲ್ಲು ಇದರಂತೆ ಕೆಲವು ಕಡೆ – ಇವನು+ಗಂಡಸು=ಈ ಗಂಡಸು; ಇವಳು+ಹೆಂಗಸು=ಈ ಹೆಂಗಸು; ಇದು+ಕಲ್ಲು=ಈ ಕಲ್ಲು – ಇತ್ಯಾದಿ ಕಡೆಗಳಲ್ಲಿ ಇವನು, ಇವಳು, ಇದು ಎಂಬುದಕ್ಕೆ ಈ ಆದೇಶವಾಗಿ ಬಂದರೆ ಇದನ್ನು ಈ ಶಬ್ದವೆನ್ನುವರು.

[5] ಎರಡು ಪದಗಳಲ್ಲಿ ಮೊದಲನೆಯ ಪದ ಪೂರ್ವಪದ; ಎರಡನೆಯ ಪದ ಉತ್ತರಪದ.  ಸಮಾಸದಲ್ಲಿ ಹೀಗೆ ಹೇಳುವುದು ವಾಡಿಕೆ.  ಮಳೆಯ + ಕಾಲ-ಎಂಬೆರಡು ಪದಗಳಲ್ಲಿ ಮಳೆಯ ಎಂಬುದು ಪೂರ್ವಪದ; ಕಾಲ ಎಂಬುದು ಉತ್ತರ ಪದ ಹೀಗೆ ತಿಳಿಯಬೇಕು

[6] ಸಮಾಸ ಎಂದರೇನು? ಎಂಬುದನ್ನು ಮುಂದೆ ಸಮಾಸ ಪ್ರಕರಣ ಎಂಬ ಹೆಸರಿನ ಭಾಗದಲ್ಲಿ ವಿವರಿಸಿದೆ.  ಆಗ ಸ್ಪಷ್ಟವಾಗಿ ತಿಳಿದುಬರುವುದು.  ಈಗ ಸಂಧಿಕಾರ‍್ಯಗಳನ್ನಷ್ಟು ಗಮನಿಸಿದರೆ ಸಾಕು.
* ಇಲ್ಲಿ ಹುಲ್ಲು + ಕಾವಲು-ಎಂಬಲ್ಲಿ ಹುಲ್ಲು + ಕ್ + ಆವಲು = ಹುಲ್ಲುಗ್‌ಆವಲು = ಹುಲ್ಲುಗಾವಲು ಎಂದು ಕ್ ವ್ಯಂಜನಕ್ಕೆ ಗ್ ವ್ಯಂಜನ ಬಂದಿದೆ ಎಂದು ತಿಳಿಯಬೇಕು.  ಇದರಂತೆ ಉಳಿದವುಗಳನ್ನೂ ತಿಳಿಯಬೇಕು.

[7] ಪ ಬ ಮ ವ್ಯಂಜನಗಳಿಗೆ ಎಂದರೆ ಪ್, ಬ್, ಮ್‌ಗಳಿಗೆ ಎಂದೂ, ವಕಾರವೆಂದರೆ ವ್ ಎಂಬ ವ್ಯಂಜನವೆಂದೂ ತಿಳಿಯಬೇಕು.  ಉಚ್ಚಾರಣೆಯ ಸೌಲಭ್ಯ ದೃಷ್ಟಿಯಿಂದ ಪ ಬ ಮ ವ-ಇತ್ಯಾದಿ ಬರೆದಿದೆ.  ಆದೇಶ ಬರುವುದು ಕೇವಲ ವ್ಯಂಜನಾಕ್ಷರಕ್ಕೇ ಎಂದು ಎಲ್ಲ ಕಡೆಗೂ ತಿಳಿಯಬೇಕು.


●.ಪ್ರಕೃತಿ ಭಾವ
ಇದುವರೆಗೆ ಕನ್ನಡದ ಸಂಧಿಗಳಾದ ಲೋಪ, ಆಗಮ, ಆದೇಶ ಸಂಧಿಗಳ ವಿಚಾರವಾಗಿ ತಿಳಿದಿರಿ. ಸ್ವರದ ಮುಂದೆ ಸ್ವರ ಬಂದರೆ ಲೋಪ ಅಥವಾ ಆಗಮಗಳಲ್ಲಿ ಯಾವುದಾದ ರೊಂದು ಸಂಧಿಯಾಗಬೇಕು ಎಂದು ಹಿಂದೆ ಹೇಳಲಾಯಿತು.

— ಆದರೆ ಈ ಕೆಳಗಿನ ಕೆಲವು ಉದಾಹರಣೆ ನೋಡಿರಿ:-
ಅಹಹಾ+ ಎಷ್ಟು ಚೆನ್ನಾಗಿದೆ?
ಅಯ್ಯೋ+ ಇದೇನು?
ಓಹೋ+ ಇದೇನು?
ಓಹೋ+ ಅವನು ಬಂದನೇ?
ಅಕ್ಕಾ + ಇತ್ತ ಬಾ

— ಮೇಲಿನ ನಾಲ್ಕು ವಾಕ್ಯಗಳನ್ನು ನೋಡಿರಿ.

 ಅಹಹಾ + ಎಷ್ಟು ಚೆನ್ನಾಗಿದೆ, ಆ ಕಾರಕ್ಕೆ (ಹ್ ವ್ಯಂಜನದ ಮುಂದಿನ ಆಕಾರಕ್ಕೆ) ಎ ಕಾರ ಪರವಾಗಿದೆ (ಎದುರಿಗೆ ಬಂದಿದೆ).
— ಹಿಂದೆ ಹೇಳಿದ ನಿಯಮದ ಪ್ರಕಾರ ಇಲ್ಲಿ ಯಕಾರಾಗಮವಾಗಬೇಕಾಗಿತ್ತಲ್ಲವೆ? ಅದರಂತೆ, ಅಯ್ಯೋ + ಇದೇನು ಎಂಬಲ್ಲಿ ಓ ಕಾರದ ಮುಂದೆ ಇ ಕಾರ ಬಂದಿದೆ.

ಓಹೋ + ಇದೇನು ಎಂಬಲ್ಲಿ ಓ ಕಾರದ ಮುಂದೆ ಇ ಕಾರ ಬಂದಿದೆ, ಅಕ್ಕಾ + ಇತ್ತ ಎಂಬಲ್ಲಿಯೂ ಆ ಕಾರದ ಮುಂದೆ ಇ ಕಾರ ಬಂದಿದೆ.
— ಈ ನಾಲ್ಕೂ ಕಡೆಯಲ್ಲೂ ಸ್ವರದ ಮುಂದೆ ಸ್ವರ ಬಂದಿದ್ದರೂ ಲೋಪವನ್ನಾಗಲಿ, ಆಗಮವನ್ನಾಗಲಿ ಮಾಡಲೇಬಾರದು.  ಅವು ಹೇಗಿವೆಯೋ ಹಾಗೇ ಬಿಡಬೇಕು.  ಹೀಗೆ ಇದ್ದ ರೀತಿಯಲ್ಲೇ ಇರುವುದಕ್ಕೆ ಪ್ರಕೃತಿಭಾವ ಎಂದು ವ್ಯಾಕರಣದಲ್ಲಿ ಹೇಳುತ್ತಾರೆ.

★ ಆದ್ದರಿಂದ ಪ್ರಕೃತಿ ಭಾವಕ್ಕೆ ಸೂತ್ರವನ್ನು ಕೆಳಗಿನಂತೆ ಹೇಳಬಹುದು:-
(೧೯) ಸ್ವರದ ಮುಂದೆ ಸ್ವರವು ಬಂದರೂ, ಕೆಲವು ಕಡೆಗಳಲ್ಲಿ ಲೋಪ, ಆಗಮ ಮೊದಲಾದ ಸಂಧಿಕಾರ‍್ಯಗಳಾಗದೆ ಇದ್ದ ಹಾಗೆಯೇ ಇರುವುದಕ್ಕೆ ಪ್ರಕೃತಿ ಭಾವವೆನ್ನುವರು.

●.ಹಾಗಾದರೆ ಎಂಥ ಕಡೆ ಈ ಪ್ರಕೃತಿಭಾವ ಬರುವುದೆಂಬುದನ್ನು (ಸಂಧಿಕಾರ‍್ಯವಾಗದಿರು ವಿಕೆಯನ್ನು) ಗಮನಿಸಿರಿ:-

(i) ಪ್ಲುತಸ್ವರಗಳ ಮುಂದೆ ಸ್ವರಪರವಾದರೆ ಸಂಧಿಕಾರ‍್ಯ ಮಾಡಬಾರದು (ಪ್ರಕೃತಿಭಾವ ಬರುವುದು).
ಅಣ್ಣಾ(೩)+ಇತ್ತಬಾ=ಅಣ್ಣಾ, ಇತ್ತ ಬಾ
ದೇವರೇ(೩)+ಇನ್ನೇನು ಗತಿ=ದೇವರೇ, ಇನ್ನೇನು ಗತಿ
ಅಮ್ಮಾ(೩)+ಅದುಬೇಕು=ಅಮ್ಮಾ, ಅದು ಬೇಕು
ರಾಮಾ(೩)+ಅಲ್ಲಿ ನೋಡು=ರಾಮಾ, ಅಲ್ಲಿ ನೋಡು
ಗುರುವೇ(೩)+ಉದ್ಧರಿಸು=ಗುರುವೇ, ಉದ್ಧರಿಸು

(ii) ಭಾವಸೂಚಕಾವ್ಯಯಗಳಾದ ಅಹಹಾ! ಅಬ್ಬಾ! ಅಯ್ಯೋ! ಅಕ್ಕಟಾ! ಓಹೋ! ಛೇ! __ ಇತ್ಯಾದಿ ಶಬ್ದಗಳ ಮುಂದೆ ಸ್ವರ ಪರವಾದಾಗ ಸಂಧಿ ಕಾರ‍್ಯಗಳಾಗುವುದಿಲ್ಲ.
(ಬಹುಶಃ ಈ ಭಾವಸೂಚಕಾವ್ಯಯಗಳೆಲ್ಲ ಸ್ವರಾಂತಗಳಾಗಿರುತ್ತವೆ.  ಇವುಗಳ ಮುಂದೆ ಸ್ವರ ಬಂದರೆ ಪ್ರಕೃತಿಭಾವ ಬರುವುದು)
ಉದಾಹರಣೆಗೆ:-
ಅಯ್ಯೋ + ಅವನಿಗೇನಾಯಿತು?  = ಅಯ್ಯೋ! ಅವನಿಗೇನಾಯಿತು?
ಅಬ್ಬಾ + ಅದು ಹಾವೇ?  =  ಅಬ್ಬಾ! ಅದು ಹಾವೇ?
ಅಕ್ಕಟಾ + ಇಂದ್ರನಿಗೆ ಹಾನಿಯೇ?  = ಅಕ್ಕಟಾ! ಇಂದ್ರನಿಗೆ ಹಾನಿಯೇ?
ಓಹೋ + ಅವನೇನು?  =  ಓಹೋ! ಅವನೇನು?
ಎಲಾ + ಅಧಮನೇ?  =  ಎಲಾ! ಅಧಮನೇ
ಛೇ + ಅದೆಲ್ಲಿ  =  ಛೇ! ಅದೆಲ್ಲಿ.

(iii) ಆ ಎಂಬ ಶಬ್ದದ ಮುಂದೆ ಅ ಆ ಐ ಔ ಸ್ವರಗಳು ಬಂದರೆ ಸಂಧಿಕಾರ್ಯ ಮಾಡಬಾರದು (ಪ್ರಕೃತಿಭಾವ ಬರುವುದು).
ಆ + ಅಂಗಡಿ = ಆ ಅಂಗಡಿ
ಆ + ಅರಸು = ಆ ಅರಸು
ಆ + ಐಶ್ವರ್ಯ = ಆ ಐಶ್ವರ್ಯ
ಆ + ಆಡು = ಆ ಆಡು
ಆ + ಆಕಳು = ಆ ಆಕಳು
ಆ + ಔನ್ನತ್ಯ = ಆ ಔನ್ನತ್ಯ
ಆ + ಔದಾರ‍್ಯ = ಆ ಔದಾರ್ಯ
[1] ಪ್ಲುತಸ್ವರವೆಂದರೆ ಸಂಬೋಧನೆಯಲ್ಲಿ ಬರುವ ಸ್ವರ.  ಈ ಉದಾಹರಣೆಗಳಲ್ಲಿ(೩) ಈ ಗುರುತಿನಿಂದ ಸೂಚಿಸಿರುವ ಸ್ವರಗಳೆಲ್ಲ ಪ್ಲುತಗಳೆಂದು ತಿಳಿಯಬೇಕು.  ಹಿಂದೆ ಸ್ವರಗಳನ್ನು ಹೇಳಿದ ಕಡೆ ಅಂದರೆ ಸಂಜ್ಞಾಪ್ರಕರಣದಲ್ಲಿ ಈ ವಿಷಯ ತಿಳಿಸಿದೆ.

[2] ಈ ಭಾವಸೂಚಕಾವ್ಯಯಗಳನ್ನು ನಿಪಾತಾವ್ಯಯಗಳೆಂದೂ ಕರೆಯುವರು.


(Courtesy : Kannada Deevige)

Saturday, 11 July 2015

☀ UNIT: Ⅰ) ಸಂಧಿಗಳು: (ಸಂಸ್ಕೃತ ಸಂಧಿಗಳು)..ಮುಂದುವರಿದ ಭಾಗ. (Kannada Grammar)

☀ UNIT: Ⅰ) ಸಂಧಿಗಳು: (ಸಂಸ್ಕೃತ ಸಂಧಿಗಳು)..ಮುಂದುವರಿದ ಭಾಗ.
(Kannada Grammar)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕನ್ನಡ ಸಾಹಿತ್ಯ
(Kannada Literature)

★ ಕನ್ನಡ ವ್ಯಾಕರಣ
(Kannada Grammar)


●.೧. ಲೋಪಸಂಧಿ
•┈┈┈┈┈┈┈┈┈•
●. ಊರು + ಅಲ್ಲಿ ಎಂಬಲ್ಲಿ ಉ ಎಂಬ ಸ್ವರದ ಮುಂದೆ ಅ ಎಂಬ ಸ್ವರ ಬಂದಿದೆ.  ಕೂಡಿಸಿ ಬರೆದರೆ ಊರ್ ಅಲ್ಲಿ = ಊರಲ್ಲಿ ಎಂದಾಯಿತು.  ಅಂದರೆ ರಕಾರದಲ್ಲಿರುವ ಉ ಕಾರ ಬಿಟ್ಟುಹೋಯಿತು.

— ಇದರ ಹಾಗೆ ಕೆಳಗಿನ ಇನ್ನೂ ಕೆಲವು ಉದಾಹರಣೆಗಳನ್ನು ನೋಡಿರಿ:-
ಮಾತು + ಇಲ್ಲ = ಮಾತಿಲ್ಲ (ಉಕಾರ ಇಲ್ಲದಾಯಿತು)
(ಉ+ ಇ)
ಆಡು + ಇಸು = ಆಡಿಸು (ಉಕಾರ ಇಲ್ಲದಾಯಿತು)
(ಉ+ ಇ)
ಬೇರೆ + ಒಬ್ಬ = ಬೇರೊಬ್ಬ (ಎಕಾರ ಇಲ್ಲದಾಯಿತು)
(ಎ+ ಒ)
ನಿನಗೆ + ಅಲ್ಲದೆ = ನಿನಗಲ್ಲದೆ (ಎಕಾರ ಇಲ್ಲದಾಯಿತು)
(ಎ+ ಅ)
ನಾವು + ಎಲ್ಲಾ = ನಾವೆಲ್ಲಾ (ಉಕಾರ ಬಿಟ್ಟುಹೋಯಿತು)
(ಉ+ ಎ)
ಮೇಲಿನ ಉದಾಹರಣೆಗಳಲ್ಲೆಲ್ಲಾ, ಎರಡು ಸ್ವರಗಳು ಸಂಧಿಸುವಾಗ ಮೊದಲನೆಯ ಸ್ವರವು ಇಲ್ಲದಂತಾಗುವುದು (ಲೋಪವಾಗುವುದು) ಕಂಡು ಬರುತ್ತದೆ.

●.ಆದರೆ ಕೆಲವು ಕಡೆಗೆ ಸ್ವರದ ಮುಂದೆ ಸ್ವರವು ಬಂದಾಗ ಲೋಪ ಮಾಡಿದರೆ ಅರ್ಥವು ಕೆಡುವುದು.
— ಈ ಕೆಳಗಿನ ಉದಾಹರಣೆಗಳನ್ನು ನೋಡಿರಿ:-
ಮನೆ + ಇಂದ – ಇಲ್ಲಿ ಲೋಪಮಾಡಿದರೆ ಮನಿಂದ ಎಂದಾಗುವುದು
(ಎ+ ಇ)
ಗುರು + ಅನ್ನು – ಇಲ್ಲಿ ಲೋಪಮಾಡಿದರೆ ಗುರನ್ನು ಆಗುವುದು
(ಉ+ ಅ)
ಹಾಗಾದರೆ ಅರ್ಥವು ಹಾಳಾಗುವಲ್ಲಿ ಲೋಪ ಮಾಡಬಾರದು. ಅಲ್ಲಿ ಬೇರೆ ವಿಧಾನವನ್ನು (ಮಾರ್ಗವನ್ನು) ಅನುಸರಿಸಬೇಕಾಗುವುದು.

●.ಹಾಗಾದರೆ ಒಟ್ಟಿನಲ್ಲಿ ಲೋಪಸಂಧಿಗೆ ಸೂತ್ರವನ್ನು ಹೀಗೆ ಹೇಳಬಹುದು:-
— (೧೬) ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು. ಇದಕ್ಕೆ ಲೋಪಸಂಧಿಯೆಂದು ಹೆಸರು.
ಉದಾಹರಣೆಗೆ:-
ಊರು + ಅಲ್ಲಿ = ಊರಲ್ಲಿ (ಉಕಾರ ಲೋಪ)
(ಉ+ ಅ)
ದೇವರು + ಇಂದ = ದೇವರಿಂದ (ಉಕಾರ ಲೋಪ)
(ಉ+ ಇ)
ಬಲ್ಲೆನು + ಎಂದು = ಬಲ್ಲೆನೆಂದು (ಉಕಾರ ಲೋಪ)
(ಉ+ ಎ)
ಏನು + ಆದುದು = ಏನಾದುದು (ಉಕಾರ ಲೋಪ)
(ಉ+ ಆ)
ಇವನಿಗೆ + ಆನು = ಇವನಿಗಾನು (ಎಕಾರ ಲೋಪ)
(ಎ+ ಆ)
ಅವನ + ಊರು = ಅವನೂರು (ಅಕಾರ ಲೋಪ)
(ಅ+ ಊ)


●.೨. ಆಗಮಸಂಧಿ
•┈┈┈┈┈┈┈┈┈┈•

★ ಮೇಲೆ ಹೇಳಿದ ಲೋಪಸಂಧಿಯನ್ನು ಅರ್ಥವು ಕೆಡದಂತಿದ್ದರೆ ಮಾತ್ರ ಮಾಡಬೇಕು, ಇಲ್ಲದಿದ್ದರೆ ಮಾಡಬಾರದು ಎಂದು ತಿಳಿದಿದ್ದೀರಿ.
ಮನೆ + ಅನ್ನು ಎಂಬಲ್ಲಿ ಲೋಪ ಮಾಡಿದರೆ ಮನನ್ನು ಆಗುವುದು,
ಗುರು + ಅನ್ನು ಎಂಬಲ್ಲಿ ಲೋಪ ಮಾಡಿದರೆ ಗುರನ್ನು ಆಗುವುದು
ಎಂಬುದನ್ನು ಹಿಂದೆ ತಿಳಿದಿದ್ದೀರಿ.

—  ಹಾಗಾದರೆ ಮನೆ + ಅನ್ನು, ಗುರು + ಅನ್ನು ಇವು ಕೂಡುವಾಗ ಪದದ ಮಧ್ಯದಲ್ಲಿ ಸ್ವರದ ಮುಂದೆ ಸ್ವರ ಬಂದಿದೆಯಾದ್ದರಿಂದ ಅವನ್ನು ಬಿಡಿ ಬಿಡಿಸಿ ಅನ್ನಲೂ ಕೂಡ ಯೋಗ್ಯವಾಗುವುದಿಲ್ಲ.  ಆಗ ಆ ಎರಡೂ ಸ್ವರಗಳ ಮಧ್ಯದಲ್ಲಿ ಕೂಡಿಸಿ ಹೇಳಲು ಅನುಕೂಲವಾಗುವಂತಹ ಯ್ಕಾರವನ್ನೋ, ವ್ ಕಾರವನ್ನೋ ಹೊಸದಾಗಿ ಸೇರಿಸಿದಾಗ ಉಚ್ಚಾರಮಾಡಲು ಅನುಕೂಲವಾಗುವುದು.  ಹೀಗೆ ಹೊಸದಾಗಿ ಸೇರುವ ಅಕ್ಷರವೇ ಆಗಮಾಕ್ಷರ.  ಹಾಗೆ ಹೊಸ ಅಕ್ಷರವನ್ನು ಸೇರಿಸಿ ಹೇಳುವ ಸಂಧಿಯೇ ಆಗಮಸಂಧಿ.

— ಈ ಕೆಳಗಿನ ಉದಾಹರಣೆಗಳನ್ನು ನೋಡಿರಿ:-


●.ಯಕಾರಾಗಮ ಬರುವುದಕ್ಕೆ :
•┈┈┈┈┈┈┈┈┈┈┈┈┈┈┈•
ತೆನೆ+ಅನ್ನು=ತೆನೆ+ಯ್+ಅನ್ನು=ತೆನೆಯನ್ನು
ಕೈ+ಅನ್ನು=ಕೈ+ಯ್+ಅನ್ನು=ಕೈಯನ್ನು
ಚಳಿ+ಅಲ್ಲಿ=ಚಳಿ+ಯ್+ಅಲ್ಲಿ=ಚಳಿಯಲ್ಲಿ
ಮಳೆ+ಇಂದ=ಮಳೆ+ಯ್+ಇಂದ=ಮಳೆಯಿಂದ
ಗಾಳಿ+ಅನ್ನು=ಗಾಳಿ+ಯ್+ಅನ್ನು=ಗಾಳಿಯನ್ನು
ಕೆರೆ+ಅಲ್ಲಿ=ಕೆರೆ+ಯ್+ಅಲ್ಲಿ=ಕೆರೆಯಲ್ಲಿ
ಮರೆ+ಇಂದ=ಮರೆ+ಯ್+ಇಂದ=ಮರೆಯಿಂದ


●.ವಕಾರಾಗಮ ಬರುವುದಕ್ಕೆ :
•┈┈┈┈┈┈┈┈┈┈┈┈┈┈•
ಗುರು+ಅನ್ನು=ಗುರು+ವ್+ಅನ್ನು=ಗುರುವನ್ನು
ಪಿತೃ+ಅನ್ನು=ಪಿತೃ+ವ್+ಅನ್ನು=ಪಿತೃವನ್ನು
ಮಗು+ಇಗೆ=ಮಗು+ವ್+ಇಗೆ=ಮಗುವಿಗೆ
ಆ+ಉಂಗುರ=ಆ+ವ್+ಉಂಗುರ=ಆವುಂಗುರ
ಆ+ಊರು=ಆ+ವ್+ಊರು=ಆವೂರು
ಆ+ಒಲೆ=ಆ+ವ್+ಒಲೆ=ಆವೊಲೆ
ಪೂ+ಅನ್ನು=ಪೂ+ವ್+ಅನ್ನು=ಪೂವನ್ನು
ಮೇಲೆ ತೋರಿಸಿರುವ ಯಕಾರಗಮ, ವಕಾರಾಗಮ ಸಂಧಿ ಬಂದಿರುವ ಸ್ಥಳಗಳಲ್ಲೆಲ್ಲ ಲೋಪಸಂಧಿಯನ್ನು ಮಾಡಿ ಹೇಳಲೂಬಾರದು, ಬರೆಯಲೂ ಬಾರದು.  ಹಾಗೆ ಲೋಪ ಮಾಡಿದರೆ ಅರ್ಥವು ಹಾಳಾಗುವುದೆಂದು ಕಂಡಿದ್ದೀರಿ.


●.ಆದುದರಿಂದ ಈ ಆಗಮಸಂಧಿಗೆ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು:-
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
— (೧೭) ಸ್ವರದ ಮುಂದೆ ಸ್ವರವು ಬಂದಾಗ ಲೋಪಸಂಧಿ ಮಾಡಿದರೆ ಅರ್ಥವು ಕೆಡುವಂತಿದ್ದಲ್ಲಿ ಆ ಎರಡು ಸ್ವರಗಳ ಮಧ್ಯದಲ್ಲಿ ಯಕಾರವನ್ನೋ ಅಥವಾ ವಕಾರವನ್ನೋ ಹೊಸದಾಗಿ ಸೇರಿಸಿ ಹೇಳುತ್ತೇವೆ. ಇದಕ್ಕೆ ಆಗಮ ಸಂಧಿ ಎನ್ನುವರು.

●.ಯಕಾರಾಗಮ ವಕಾರಾಗಮ ಎಲ್ಲೆಲ್ಲಿ ಬರುತ್ತವೆಂಬುದನ್ನು ತೀಳಿಯೋಣ:-

●.(೧) ಯಕಾರಾಗಮ ಸಂಧಿ:-
•┈┈┈┈┈┈┈┈┈┈┈┈┈┈┈┈┈•
— ಆ, ಇ, ಈ, ಎ, ಏ, ಐ ಗಳ ಮುಂದೆ ಸ್ವರ ಬಂದರೆ ಆ ಎರಡೂ ಸ್ವರಗಳ ಮಧ್ಯದಲ್ಲಿ ಯ್ ಕಾರವು ಆಗಮವಾಗುವುದು.
— ಉದಾಹರಣೆಗೆ:-
[1]ಕಾ+ಅದೆ =ಕಾ+ಯ್+ಅದೆ=ಕಾಯದೆ
(ಆ+ಅ)
ಗಿರಿ+ಅನ್ನು=ಗಿರಿ+ಯ್+ಅನ್ನು=ಗಿರಿಯನ್ನು
(ಇ+ಅ)
[2]ಮೀ+ಅಲು=ಮೀ+ಯ್+ಅಲು=ಮೀಯಲು
(ಈ+ಅ)
ಕೆರೆ+ಅನ್ನು=ಕೆರೆ+ಯ್+ಅನ್ನು=ಕೆರೆಯನ್ನು
(ಎ+ಅ)
[3]ಮೇ+ಇಸು=ಮೇ+ಯ್+ಇಸು=ಮೇಯಿಸು
(ಏ+ಇ)
ಮೈ+ಅನ್ನು=ಮೈ+ಯ್+ಅನ್ನು=ಮೈಯನ್ನು
(ಐ+ಅ)


●.(೨) ವಕಾರಾಗಮ ಸಂಧಿ:-
•┈┈┈┈┈┈┈┈┈┈┈┈┈┈┈•
★(i) ಉ, ಊ, ಋ, ಓ ಸ್ವರಗಳ ಮುಂದೆ ಸ್ವರವು ಬಂದರೆ ನಡುವೆ ವ್ ಕಾರವು ಆಗಮವಾಗಿ ಬರುವುದು.
ಉದಾಹರಣೆಗೆ:-
ಮಡು+ಅನ್ನು=ಮಡು+ವ್+ಅನ್ನು=ಮಡುವನ್ನು
(ಉ+ಅ)
ಪೂ+ಇಂದ=ಪೂ+ವ್+ಇಂದ=ಪೂವಿಂದ
(ಊ+ಇ)
ಮಾತೃ+ಅನ್ನು=ಮಾತೃ+ವ್+ಅನ್ನು=ಮಾತೃವನ್ನು
(ಋ+ಅ)
ಗೋ+ಅನ್ನು=ಗೋ+ವ್+ಅನ್ನು=ಗೋವನ್ನು
(ಓ+ಅ)


★(ii) ಅಕಾರದ ಮುಂದೆ ಅಕಾರವೇ ಬಂದರೆ ವ್ ಕಾರಾಗಮವಾಗುವುದು.
(ಪ್ರಕೃತಿ ಪ್ರತ್ಯಯ ಸೇರುವಾಗ ಮಾತ್ರ ಈ ಸಂಧಿಯಾಗುವುದು)
ಉದಾಹರಣೆಗೆ:-
ಹೊಲ+ಅನ್ನು=ಹೊಲ+ವ್+ಅನ್ನು=ಹೊಲವನ್ನು
ನೆಲ+ಅನ್ನು= ನೆಲ+ವ್+ಅನ್ನು=ನೆಲವನ್ನು
ಕುಲ+ಅನ್ನು=ಕುಲ+ವ್+ಅನ್ನು=ಕುಲವನ್ನು
ತಿಲ+ಅನ್ನು=ತಿಲ+ವ್+ಅನ್ನು=ತಿಲವನ್ನು
ಮನ+ಅನ್ನು=ಮನ+ವ್+ಅನ್ನು=ಮನವನ್ನು


★(iii) ಆ ಎಂಬ ಶಬ್ದದ ಮುಂದೆ ಉ, ಊ, ಒ, ಓ ಗಳು ಬಂದರೆ ನಡುವೆ ವ ಕಾರವು ಆಗಮವಾಗಿ ಬರುವುದುಂಟು.
(ಸಂಧಿಯನ್ನು ಮಾಡದೆಯೂ ಹೇಳಬಹುದು)
ಉದಾಹರಣೆಗೆ:-
ಆ + ಉಂಗುರ = ಆ + ವ್ + ಉಂಗುರ = ಆವುಂಗುರ
ಆ + ಊಟ = ಆ + ವ್ + ಊಟ = ಆವೂಟ
ಆ + ಒಂಟೆ = ಆ + ವ್ + ಒಂಟೆ = ಆವೊಂಟೆ
ಆ + ಓಟ = ಆ + ವ್ + ಓಟ = ಆವೋಟ
ಸಂಧಿ ಮಾಡದಿರುವುದಕ್ಕೆ-ಆ ಉಂಗುರ, ಆ ಊಟ, ಆ ಒಂಟೆ, ಆ ಓಟ (ಹೀಗೂ ಹೇಳಬಹುದು)


★(iv) ಈ ಶಬ್ದದ ಮುಂದೆ ಉ, ಊ, ಒ, ಓಗಳು ಬಂದರೆ, ಯಕಾರಾಗಮ ವನ್ನಾದರೂ ಮಾಡಬಹುದು; ಅಥವಾ ವಕಾರಾಗಮವನ್ನಾದರೂ ಮಾಡಬಹುದು
ಉದಾಹರಣೆಗೆ:-
ಈ + ಉದಕ = ಈ + ಯ್ + ಉದಕ=ಈಯುದಕ
ಈವುದಕ
ಈ + ಊರು = ಈ + ಯ್ + ಊರು=ಈಯೂರು
ಈವೂರು
ಈ + ಊಟ = ಈ + ಯ್ + ಊಟ=ಈಯೂಟ
ಈವೂಟ
ಈ + ಒಲೆ = ಈ + ಯ್ + ಒಲೆ=ಈಯೊಲೆ
ಈವೊಲೆ
ಈ + ಒಂಟೆ = ಈ + ಯ್ + ಒಂಟೆ=ಈಯೊಂಟೆ
ಈವೊಂಟೆ
ಈ + ಓಕುಳಿ = ಈ + ಯ್ + ಓಕುಳಿ=ಈಯೋಕುಳಿ
ಈವೋಕುಳಿ
ಈ + ಓಲೆ = ಈ + ಯ್ + ಓಲೆ=ಈಯೋಲೆ
ಈವೋಲೆ

— ಈ ಮೇಲೆ ಹೇಳಿದ ಕಡೆಗಳಲ್ಲಿ ಸಂಧಿಗಳನ್ನು ಮಾಡದೆಯೆ ಈ ಉದಕ, ಈ ಊರು, ಈ ಒಂಟೆ, ಈ ಓಲೆ ಹೀಗೆಯೂ ಬರೆಯಬಹುದು.

★(v) ಓ ಕಾರದ ಮುಂದೆ ಸ್ವರ ಬಂದರೆ ವ ಕಾರಾಗಮ ಬರುವುದೆಂದು ಹಿಂದೆ ಹೇಳಿದೆಯಷ್ಟೆ. ಆದರೆ ಕೆಲವು ಕಡೆ ಯಕಾರಾಗಮ ಬರುವುದುಂಟು.
ಉದಾಹರಣೆಗೆ:-
ಗೋ + ಅನ್ನು = ಗೋವನ್ನು (ವಕಾರಾಗಮ ಬಂದಿದೆ)
(ಓ+ ಅ)
ನೋ + ಅಲು = ನೋಯಲು (ಯಕಾರಾಗಮ ಬಂದಿದೆ)
(ಓ+ ಅ)


...ಮುಂದುವರೆಯುವುದು.

Thursday, 9 July 2015

☀ UNIT: Ⅰ) ಕನ್ನಡ ವ್ಯಾಕರಣ: ಸಂಧಿಗಳು (Kannada Grammar)

☀ UNIT: Ⅰ) ಕನ್ನಡ ವ್ಯಾಕರಣ: ಸಂಧಿಗಳು
(Kannada Grammar)

━━━━━━━━━━━━━━━━━━━━━━━━━━━━━━━━━━━━━━━━━━━━━

★ ಕನ್ನಡ ಸಾಹಿತ್ಯ
(Kannada Literature)

★ ಕನ್ನಡ ವ್ಯಾಕರಣ
(Kannada Grammar)



●. ಮೊದಲ ಮಾತು:
•┈┈┈┈┈┈┈┈┈┈┈•
   — ಕನ್ನಡ ಭಾಷೆಯು ಸುಮಾರು ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿದೆ. ಅಂತೆಯೇ ಅದಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನವೂ ದೊರೆತಿದೆ. ಸಂಸ್ಕೃತದಿಂದ ಆಧುನಿಕ ಯುಗದ ಆಂಗ್ಲ ಭಾಷೆಯ ವರೆಗೂ ಹಲವಾರು ಭಾಷೆಗಳ ಪ್ರಭಾವ ಪ್ರೇರಣೆಗೆ ಒಳಗಾಗಿ ಪುಟಕ್ಕಿಟ್ಟ ಚಿನ್ನದಂತೆ ಹೊಳಪನ್ನೂ ಘನತೆಯನ್ನೂ ಪಡೆದುಕೊಂಡಿದೆ. ಕವಿರಾಜ ಮಾರ್ಗಕಾರನಿಂದ ಪ್ರಸ್ತುತ ಆಧುನಿಕ ಸಾಹಿತ್ಯದವರೆಗೂ ಸಾವಿರಾರು ಕವಿ-ಸಾಹಿತಿ-ವಿದ್ವಾಂಸರಿಂದ ಸಮೃದ್ಧವಾಗಿ ಬೆಳೆದು ನಿಂತಿದೆ. ಇದನ್ನು ಬಳಸಿ-ಉಳಿಸಿ-ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

     ●.ಒಂದು ಚಿತ್ರ ಪಟವು ಚೌಕಟ್ಟಿನಿಂದ ಹೇಗೆ ಸುರಕ್ಷಿತವೂ ಸುಂದರವೂ ಆಗಿರುತ್ತದೋ ಹಾಗೆಯೇ ಒಂದು ಭಾಷೆಯು  ಶುದ್ಧವೂ ಸುರಕ್ಷಿತವೂ ಆಗಿರಬೇಕಾದರೆ ವ್ಯಾಕರಣ ಬಹಳ ಪ್ರಮುಖವಾದುದು.

     ●.ಕನ್ನಡ ಭಾಷೆಯು ಮೂಲದಲ್ಲಿ ದ್ರಾವಿಡ ಭಾಷೆಯಿಂದ ಕವಲೊಡೆದು ಬೆಳೆದು ಬಂದಿದ್ದರೂ ಅದು ಬೆಳೆದು ಸಮೃದ್ಧವಾಗಿ ನಿಲ್ಲಲು ಸಂಸ್ಕೃತ ಭಾಷೆಯ ಪ್ರಭಾವ ಹೆಚ್ಚು ದಟ್ಟವಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಲೆಕ್ಕವಿಲ್ಲದಷ್ಟು ಪದಗಳು ಸಂಸ್ಕೃತ ಭಾಷೆಯಿಂದ ಯಥೇಚ್ಛವಾಗಿ ಹರಿದುಬಂದು ಕನ್ನಡ ನುಡಿ ಬೊಕ್ಕಸವನ್ನು ಶ್ರೀಮಂತಗೊಳಿಸಿವೆ. ಈ ಕಾರಣದಿಂದಲೇ ಕನ್ನಡ ವ್ಯಾಕರಣವು ಸಂಸ್ಕೃತ ವ್ಯಾಕರಣವನ್ನು ಅನುಸರಿಸಿಯೇ ಬೆಳೆದುಬರಬೇಕಾಯಿತು. ಇದು ಸಂಸ್ಕೃತ ವ್ಯಾಕರಣದ ಪಡಿಯಚ್ಚಾಗಿದ್ದರೂ ತನ್ನ ಜಾಯಮಾನಕ್ಕನುಗುಣವಾಗಿ ಹೊಂದಾಣಿಕೆ ಮಾಡಿಕೊಂಡು ತನ್ನ ತನವನ್ನು ಕಾಪಾಡಿಕೊಂಡಿದೆ ಎನ್ನುವುದನ್ನು ಮರೆಯುವಂತಿಲ್ಲ.

     ●.ಸು.ಕ್ರಿ.ಶ.1260 ರಲ್ಲಿ ಜೀವಿಸಿದ್ದ ಕೇಶಿರಾಜನು ಬರೆದಿರುವ 'ಶಬ್ದಮಣಿ ದರ್ಪಣ`ವು ಕನ್ನಡದಲ್ಲಿ ರಚಿತವಾದ ಮೊಟ್ಟ ಮೊದಲ ವ್ಯಾಕರಣ ಗ್ರಂಥವಾಗಿದೆ. ಈ ಗ್ರಂಥದಲ್ಲಿ ಅವನು ಸಂಧಿ, ನಾಮ, ಸಮಾಸ, ತದ್ಧಿತ, ಧಾತು, ಆಖ್ಯಾತ, ಅಪಭ್ರಂಶ, ಅವ್ಯಯ ಎಂದು ಒಟ್ಟು 8 ಪ್ರಕರಣಗಳಲ್ಲಿ ಕನ್ನಡ ವ್ಯಾಕರಣವನ್ನು ಪ್ರಸ್ತುತಪಡಿಸಿದ್ದಾನೆ.


☀ ಸಂಧಿಗಳು :
•┈┈┈┈┈┈┈┈┈┈•
— ನಾವು ಮಾತನಾಡುವಾಗ ಕೆಲವು ಶಬ್ದಗಳನ್ನು ಬಿಡಿಬಿಡಿಯಾಗಿ ಹೇಳುವುದಿಲ್ಲ.  “ಊರುಊರು” ಎಂಬೆರಡು ಶಬ್ದಗಳನ್ನು ‘ಊರೂರು' ಎಂದು ಕೂಡಿಸಿಯೇ ಮಾತನಾಡುತ್ತೇವೆ.

— ಅವನು + ಅಲ್ಲಿ ಎಂಬೆರಡು ಶಬ್ದ ರೂಪಗಳನ್ನು ಅವನಲ್ಲಿ ಎಂದು ಕೂಡಿಸಿ ಹೇಳುತ್ತೇವೆ.  ಮೇಲೆ ಹೇಳಿರುವ ಊರು + ಊರು ಎಂಬ ಶಬ್ದಗಳನ್ನೂ, ‘ಅವನು+ ಅಲ್ಲಿ' ಎಂಬ ಪ್ರಕೃತಿ ಪ್ರತ್ಯಯಗಳನ್ನೂ ಕೂಡಿಸಿಯೇ ಹೇಳುತ್ತೇವೆ. 

— ಅಂದರೆ, ಅವನ್ನು ಸಂಧಿಸಿಯೇ ಹೇಳುತ್ತೇವೆ.ಒಮ್ಮೊಮ್ಮೆ ಶಬ್ದ ಶಬ್ದಗಳನ್ನು ಬಿಡಿಬಿಡಿಸಿ ಹೇಳಿದರೂ, ಪಕೃತಿ ಪ್ರತ್ಯಯಗಳನ್ನು ಮಾತ್ರ ಸಂಧಿಸಿಯೇ ಹೇಳುತ್ತೇವೆ.  ಅವನ್ನು ಬಿಡಿಬಿಡಿಯಾಗಿ ಹೇಳಲಾಗುವುದೇ ಇಲ್ಲ.  

— ಈ ಕೆಳಗೆ ನೋಡಿ:-
•┈┈┈┈┈┈┈┈┈┈┈┈•
★ ಪ್ರಕೃತಿ + ಪ್ರತ್ಯಯ= ಕೂಡಿಸಿದ ರೂಪ
ಆಡು+ಇಸು=ಆಡಿಸು

ಮರ+ಅನ್ನು=ಮರವನ್ನು

ಪುಸ್ತಕ+ಇಂದ=ಪುಸ್ತಕದಿಂದ

ದೇವರು+ಇಗೆ=ದೇವರಿಗೆ


●.ಪದಗಳನ್ನು ಕೂಡಿಸಿಯಾದರೂ ಹೇಳಬಹುದು ಅಥವಾ ಬಿಡಿಬಿಡಿಯಾಗಿಯೂ ಹೇಳಬಹುದು.

★ ಪದ + ಪದ= ಕೂಡಿಸಿದ ರೂಪ - ಕೂಡಿಸದ ರೂಪ
•┈┈┈┈┈┈┈┈┈┈┈┈┈┈┈┈┈┈┈┈┈┈┈•
ಅವನ+ಅಂಗಡಿ=ಅವನಂಗಡಿ-ಅವನಅಂಗಡಿ

ಅವನಿಗೆ+ಇಲ್ಲ=ಅವನಿಗಿಲ್ಲ-ಅವನಿಗೆ ಇಲ್ಲ

ಹಣ್ಣಿನ+ಅಂಗಡಿ=ಹಣ್ಣಿನಂಗಡಿ-ಹಣ್ಣಿನ ಅಂಗಡಿ

ಪದ+ಪದ=ಕೂಡಿಸಿದ ರೂಪ -ಕೂಡಿಸದ ರೂಪ

ಅವನ+ಅಂಗಡಿ=ಅವನಂಗಡಿ-ಅವನಅಂಗಡಿ

ಅವನಿಗೆ+ಇಲ್ಲ=ಅವನಿಗಿಲ್ಲ-ಅವನಿಗೆ ಇಲ್ಲ

ಹಣ್ಣಿನ+ಅಂಗಡಿ=ಹಣ್ಣಿನಂಗಡಿ-ಹಣ್ಣಿನ ಅಂಗಡಿ


— ಮೇಲೆ ಹೇಳಿರುವ ಅನೇಕ ಉದಾಹರಣೆಗಳಲ್ಲಿ ಪ್ರಕೃತಿ ಪ್ರತ್ಯಯಗಳನ್ನು ಸೇರಿಸುವಲ್ಲಿ ಅವನ್ನು ಕೂಡಿಸಿಯೇ ಹೇಳುತ್ತೇವಲ್ಲದೆ ಬಿಡಿಬಿಡಿಸಿ ಹೇಳಲು ಬರುವಂತೆಯೇ ಇಲ್ಲ.
ಆಡು ಇಸು ಎಂದು ಯಾರು ಹೇಳುವುದಿಲ್ಲ.
ಪುಸ್ತಕ ಅನ್ನು ತಾ ಎನ್ನಬಾರದು.
ಆಡಿಸು ಪುಸ್ತಕವನ್ನು ಹೀಗೆ ಕೂಡಿಸಿಯೇ ಹೇಳಬೇಕು.
ಆಡಿಸು ಎಂಬಲ್ಲಿ (ಆಡು+ಇಸು) ಉ+ಇ ಸ್ವರಗಳು ಸಂಧಿಸುತ್ತವೆ.
ಪುಸ್ತಕ+ಅನ್ನು ಎಂಬಲ್ಲಿ ಅ+ಅ ಸ್ವರಗಳು ಪರಸ್ಪರ ಸಂಧಿಸುತ್ತವೆ.

●.ಅವೆರಡೂ ಸಂಧಿಸುವಾಗ ಮೊದಲಿನ ಸ್ವರಗಳು ಎರಡೂ ಕಡೆ ಹೋಗುತ್ತವೆ. 
— ಈ ಸಂಧಿಸುವಿಕೆಯು ಕಾಲವಿಳಂಬವಿಲ್ಲದೆ ಹಾಗೆ ಆಗುತ್ತದೆ.

— ಇವು ಪ್ರಕೃತಿ ಪ್ರತ್ಯಯಗಳ ಸಂಧಿಸುವಿಕೆಯನ್ನು ತಿಳಿಸುವ ಉದಾಹರಣೆಗಳು.
ಅವನ ಅಂಗಡಿ ಎಂಬ ಪದಗಳನ್ನು ಬೇಕಾದರೆ ಸಂಧಿಯಾಗುವಂತೆ ಅವನಂಗಡಿ ಎಂದಾದರೂ ಹೇಳಬಹುದು; ಅಥವಾ ಕಾಲವನ್ನು ಸ್ವಲ್ಪ ವಿಳಂಬ ಮಾಡಿ ಅವನ ಅಂಗಡಿ ಎಂದಾದರೂ ಹೇಳಬಹುದು.  ಅದು ಹೇಳುವವನ ಇಚ್ಛೆಯನ್ನು ಅವಲಂಬಿಸಿರುತ್ತದೆ.  ಅವನಂಗಡಿ ಎನ್ನುವಾಗ (ಅವನ+ಅಂಗಡಿ) ಇಲ್ಲಿ ಸಂಧಿಸುವ ಸ್ವರಗಳು ಅ+ಅ ಎಂಬುವು.

— ಇವುಗಳಲ್ಲಿ ಮೊದಲಿನ ಅಕಾರವನ್ನು ತೆಗೆದುಹಾಕುತ್ತೇವೆ.
ಆದ್ದರಿಂದ ಎರಡು ಅಕ್ಷರಗಳು ಸಂಧಿಸುವಿಕೆಯೇ ಸಂಧಿಯೆನಿಸುವುದೆಂದ ಹಾಗಾಯಿತು.

●.ಇದರ ಸೂತ್ರವನ್ನು ಹೀಗೆ ಹೇಳಬಹುದು:-
•┈┈┈┈┈┈┈┈┈┈┈┈┈┈┈┈┈┈┈┈┈•
— (೧೫) ಎರಡು ವರ್ಣಗಳು (ಅಕ್ಷರಗಳು) ಕಾಲವಿಳಂಬವಿಲ್ಲದಂತೆ ಸೇರುವುದೇ ಸಂಧಿಯೆನಿಸುವುದು.

(i) ಸ್ವರದ ಮುಂದೆ ಸ್ವರ ಬಂದು ಹೀಗೆ ಸಂಧಿಯಾದರೆ ಸ್ವರಸಂಧಿಯೆನ್ನುತ್ತೇವೆ.

(ii) ಸ್ವರದ ಮುಂದೆ ವ್ಯಂಜನ ಬಂದು ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದು ಸಂಧಿಯಾದರೆ ವ್ಯಂಜನಸಂಧಿಯೆನ್ನುತ್ತೇವೆ.

(iii) ಹೀಗೆ ಸಂಧಿಯಾಗುವಾಗ ಹಲಕೆಲವು ವ್ಯತ್ಯಾಸಗಳು ಆ ಸಂಧಿಸಿದ ಅಕ್ಷರಗಳಲ್ಲಿ ಉಂಟಾಗುವುವು. ಅವನ್ನೇ ಸಂಧಿಕಾರ್ಯಗಳು ಎನ್ನುತ್ತೇವೆ.

●.ಅವುಗಳನ್ನು ಈ ಮುಂದೆ ತಿಳಿಯೋಣ.

.... ಮುಂದುವರೆಯುವುದು.

(Courtesy :Kannada Deevige)

Wednesday, 8 July 2015

☀ ಕರ್ನಾಟಕದ ಪ್ರಥಮಗಳು:  (Firsts of the Karnataka State) 

☀ ಕರ್ನಾಟಕದ ಪ್ರಥಮಗಳು:
(Firsts of the Karnataka State)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕನ್ನಡ ಸಾಹಿತ್ಯ:
(Kannada Literature)

★ ಕನ್ನಡ ಸಾಮಾನ್ಯ ಅಧ್ಯಯನ
(Kannada General Studies)


1 ಕರ್ನಾಟಕದ ಮೊದಲ ರಾಜ್ಯಪಾಲ •┈┈┈┈┈┈┈┈┈┈┈┈┈┈• ಜಯಚಾಮರಾಜೇಂದ್ರ ಒಡೆಯರು

2 ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ •┈┈┈┈┈┈┈┈┈┈┈┈┈┈• ಕೆ.ಸಿ.ರೆಡ್ಡಿ

3 ಕರ್ನಾಟಕದಿಂದ ಆಯ್ಕೆಯಾದ ಮೊದಲ ಪ್ರಧಾನಿ •┈┈┈┈┈┈┈┈┈┈┈┈┈┈• ಹೆಚ್.ಡಿ.ದೇವೇಗೌಡ

4 ಕನ್ನಡದ ಮೊದಲ ವರ್ಣಚಿತ್ರ •┈┈┈┈┈┈┈┈┈┈┈┈┈┈• ಅಮರಶಿಲ್ಪಿ ಜಕಣಾಚಾರಿ

5 ಲೋಕಸಭೆ ಅಧ್ಯಕ್ಷರಾದ ಮೊದಲ ಕನ್ನಡಿಗ •┈┈┈┈┈┈┈┈┈┈┈┈┈┈• ಕೆ.ಎಸ್.ಹೆಗಡೆ

6 ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡದ ಗಾಯಕ •┈┈┈┈┈┈┈┈┈┈┈┈┈┈• ಶಿವಮೊಗ್ಗ ಸುಬ್ಬಣ್ಣ

7 ಕರ್ನಾಟಕದಲ್ಲಿ ಸ್ಥಾಪನೆಯಾದ ಮೊದಲ ವಿಶ್ವವಿದ್ಯಾನಿಲಯ •┈┈┈┈┈┈┈┈┈┈┈┈┈┈• ಮೈಸೂರು ವಿಶ್ವವಿದ್ಯಾನಿಲಯ

8 ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ •┈┈┈┈┈┈┈┈┈┈┈┈┈┈• ವಿ.ಶಾಂತಾರಾಂ

9 ಕರ್ನಾಟಕವನ್ನು ಆಳಿದ ಮೊದಲ ರಾಜವಂಶ •┈┈┈┈┈┈┈┈┈┈┈┈┈┈• ಕದಂಬರು

10ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ •┈┈┈┈┈┈┈┈┈┈┈┈┈┈• ಸರ್.ಎಂ.ವಿಶ್ವೇಶ್ವರಯ್ಯ

11 ಮಯಸೂರು ಸಂಸ್ಥಾನದ ಮೊದಲ ದಿವಾನರು •┈┈┈┈┈┈┈┈┈┈┈┈┈┈• ದಿವಾನ್ ಪೂರ್ಣಯ್ಯ

12 ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಮೊದಲ ಕನ್ನಡಿಗ •┈┈┈┈┈┈┈┈┈┈┈┈┈┈• ರಾಮಕೃಷ್ಣ ಹೆಗಡೆ

13 ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿದ ಮೊದಲ ಕನ್ನಡಿಗ •┈┈┈┈┈┈┈┈┈┈┈┈┈┈• ಜೆ.ಹೆಚ್.ಪಟೇಲ್

14 ಕರ್ನಾಟಕದ ಮೊದಲ ಸಂಚಾರಿ ಗ್ರಂಥಾಲಯ •┈┈┈┈┈┈┈┈┈┈┈┈┈┈• ಕುವೆಂಪು ಸಂಚಾರಿ ಗ್ರಂಥಾಲಯ

15 ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡ ಚಿತ್ರ •┈┈┈┈┈┈┈┈┈┈┈┈┈┈• ಬೇಡರ ಕಣ್ಣಪ್ಪ

16 ಕರ್ನಾಟಕದಿಂದ ಭಾರತದ ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಮೊದಲ ಕನ್ನಡಿಗ •┈┈┈┈┈┈┈┈┈┈• ಬಿ.ಡಿ.ಜತ್ತಿ

(Courtesy; kannada divige) 

ಕನ್ನಡದ ಮೊದಲುಗಳು: (FIRSTS IN KANNADA)   ಕೆಎಎಸ್ (KAS) / ಎಫ್ ಡಿ ಎ (FDA) / ಎಸ್ ಡಿ ಎ (SDA) ವಿಶೇಷಾಂಕ

☀ ಕನ್ನಡದ ಮೊದಲುಗಳು:
(FIRSTS IN KANNADA)

 ಕೆಎಎಸ್ (KAS) / ಎಫ್ ಡಿ ಎ (FDA) / ಎಸ್ ಡಿ ಎ (SDA) ವಿಶೇಷಾಂಕ
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕನ್ನಡ ಸಾಹಿತ್ಯ ವಿಶೇಷಾಂಕ
(Kannada literature Special)

★ ಕೆಎಎಸ್ / ಎಫ್ ಡಿ ಎ / ಎಸ್ ಡಿ ಎ ವಿಶೇಷಾಂಕ
(KAS / FDA / SDA Special)


1 ಅಚ್ಚ ಕನ್ನಡದ ಮೊದಲ ದೊರೆ •┈┈┈┈┈┈┈┈┈┈┈┈┈┈• ಮಯೂರವರ್ಮ

2 ಕನ್ನಡದ ಮೊದಲ ಕವಿ •┈┈┈┈┈┈┈┈┈┈┈┈┈┈• ಪಂಪ

3 ಕನ್ನಡದ ಮೊದಲ ಶಾಸನ •┈┈┈┈┈┈┈┈┈┈┈┈┈┈• ಹಲ್ಮಿಡಿ ಶಾಸನ

4 ತ್ರಿಪದಿ ಛಂದಸ್ಸಿನ ಮೊದಲ ಬಳಕೆ •┈┈┈┈┈┈┈┈┈┈┈┈┈┈• ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ

5 ಕನ್ನಡದ ಮೊದಲ ಲಕ್ಷಣ ಗ್ರಂಥ •┈┈┈┈┈┈┈┈┈┈┈┈┈┈• ಕವಿರಾಜಮಾರ್ಗ

6 ಕನ್ನಡದ ಮೊದಲ ನಾಟಕ •┈┈┈┈┈┈┈┈┈┈┈┈┈┈• ಮಿತ್ರವಿಂದ ಗೋವಿಂದ

7 ಕನ್ನಡದ ಮೊದಲ ಮಹಮದೀಯ ಕವಿ •┈┈┈┈┈┈┈┈┈┈┈┈┈┈• ಶಿಶುನಾಳ ಷರೀಪ

8 ಕನ್ನಡದ ಮೊದಲ ಕವಯಿತ್ರಿ •┈┈┈┈┈┈┈┈┈┈┈┈┈┈• ಅಕ್ಕಮಹಾದೇವಿ

9 ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ •┈┈┈┈┈┈┈┈┈┈┈┈┈┈• ಇಂದಿರಾಬಾಯಿ

10 ಕನ್ನಡದ ಮೊದಲ ಪತ್ತೆದಾರಿ ಕಾದಂಬರಿ •┈┈┈┈┈┈┈┈┈┈┈┈┈┈• ಚೊರಗ್ರಹಣ ತಂತ್ರ

11 ಕನ್ನಡದ ಮೊದಲ ಛಂದೋಗ್ರಂಥ •┈┈┈┈┈┈┈┈┈┈┈┈┈┈• ಛಂದೋಂಬುಧಿ (ನಾಗವರ್ಮ)

12 ಕನ್ನಡದ ಮೊದಲ ಸಾಮಾಜಿಕ ನಾಟಕ •┈┈┈┈┈┈┈┈┈┈┈┈┈┈• ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ

13 ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ •┈┈┈┈┈┈┈┈┈┈┈┈┈┈• ಜಾತಕತಿಲಕ

14 ಕನ್ನಡದ ಮೊದಲ ಗಣಿತಶಾಸ್ತ್ರ ಗ್ರಂಥ •┈┈┈┈┈┈┈┈┈┈┈┈┈┈• ವ್ಯವಹಾರ ಗಣಿತ

15 ಕನ್ನಡದ ಮೊದಲ ಕಾವ್ಯ •┈┈┈┈┈┈┈┈┈┈┈┈┈┈• ಆದಿಪುರಾಣ

16 ಕನ್ನಡದ ಮೊದಲ ಗದ್ಯ ಕೃತಿ •┈┈┈┈┈┈┈┈┈┈┈┈┈┈• ವಡ್ಡಾರಾಧನೆ

17 ಕನ್ನಡದಲ್ಲಿ ಮೊದಲು ಅಚ್ಚಾದ ಕೃತಿ •┈┈┈┈┈┈┈┈┈┈┈┈┈┈• ಎ ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೇಜ್

18 ಕನ್ನಡದ ಮೊದಲ ಪತ್ರಿಕೆ •┈┈┈┈┈┈┈┈┈┈┈┈┈┈• ಮಂಗಳೂರು ಸಮಾಚಾರ

19 ಹೊಸಗನ್ನಡದ ಶಬ್ದವನ್ನು ಮೊದಲು ಬಳಸಿದವರು •┈┈┈┈┈┈┈┈┈┈┈┈• ಚಂದ್ರರಾಜ

20 ಕನ್ನಡದಲ್ಲಿ ಮೊದಲು ಕಥೆ ಬರೆದವರು •┈┈┈┈┈┈┈┈┈┈┈┈┈┈• ಪಂಜೆಮಂಗೇಶರಾಯರು

21 ಕನ್ನಡದ ಮೊದಲ ಪ್ರೇಮಗೀತೆಗಳ ಸಂಕಲನ •┈┈┈┈┈┈┈┈┈┈┈┈┈┈• ಒಲುಮೆ

22 ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು •┈┈┈┈┈┈┈┈┈┈┈┈┈┈• ಹೆಚ್.ವಿ.ನಂಜುಂಡಯ್ಯ

23 ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರ •┈┈┈┈┈┈┈┈┈┈┈┈┈┈• ಆರ್.ನರಸಿಂಹಾಚಾರ್

24 ಕನ್ನಡದ ಮೊದಲ ವಚಚನಕಾರ •┈┈┈┈┈┈┈┈┈┈┈┈┈┈• ದೇವರದಾಸಿಮಯ್ಯ

25 ಹೊಸಗನ್ನಡದ ಮೊದಲ ಮಹಾಕಾವ್ಯ •┈┈┈┈┈┈┈┈┈┈┈┈┈┈• ಶ್ರೀರಾಮಾಯಣ ದರ್ಶನಂ

26 ಪಂಪಪ್ರಶಸ್ತಿ ಪಡೆದ ಮೊದಲ ಕನ್ನಡಿಗ •┈┈┈┈┈┈┈┈┈┈┈┈┈┈• ಕುವೆಂಪು

27 ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟು ರಚಿಸಿದವರು •┈┈┈┈┈┈┈┈┈┈┈┈┈┈• ಆರ್.ಎಫ್.ಕಿಟೆಲ್

28 ಕನ್ನಡದ ಮೊಟ್ಟಮೊದಲ ಸಮಕಲನ ಗ್ರಂಥ •┈┈┈┈┈┈┈┈┈┈┈┈┈┈• ಸೂಕ್ತಿ ಸುಧಾರ್ಣವ

29 ಮೊದಲ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ •┈┈┈┈┈┈┈┈┈┈┈┈┈┈• ಬೆಂಗಳೂರು (1915)

30 ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ •┈┈┈┈┈┈┈┈┈┈┈┈┈┈• ಕುವೆಂಪು

31 ಕನ್ನಡದ ಮೊದಲ ವಿಶ್ವಕೋಶ •┈┈┈┈┈┈┈┈┈┈┈┈┈┈• ವಿವೇಕ ಚಿಂತಾಮಣಿ

32 ಕನ್ನಡದ ಮೊದಲ ವೈದ್ಯಗ್ರಂಥ •┈┈┈┈┈┈┈┈┈┈┈┈┈┈• ಗೋವೈದ್ಯ

33 ಕನ್ನಡದ ಮೊದಲ ಪ್ರಾಧ್ಯಾಪಕರು •┈┈┈┈┈┈┈┈┈┈┈┈┈┈• ಟಿ.ಎಸ್.ವೆಂಕಣ್ಣಯ್ಯ

34 ಕನ್ನಡದಲ್ಲಿ ರಚಿತಗೊಂಡ ಮೊದಲರಗಳೆ •┈┈┈┈┈┈┈┈┈┈┈┈┈┈• ಮಂದಾನಿಲ ರಗಳೆ

35 ಕನ್ನಡದ ಮೊದಲ ಹಾಸ್ಯ ಪತ್ರಿಕೆ •┈┈┈┈┈┈┈┈┈┈┈┈┈┈• ವಿಕಟ ಪ್ರತಾಪ

36 ಕನ್ನಡದ ಮೊದಲ ವೀರಗಲ್ಲು •┈┈┈┈┈┈┈┈┈┈┈┈┈┈• ತಮ್ಮಟಗಲ್ಲು ಶಾಸನ

37 ಕನ್ನಡದ ಮೊದಲ ಹಾಸ್ಯ ಲೇಖಕಿ •┈┈┈┈┈┈┈┈┈┈┈┈┈┈• ಟಿ.ಸುನಂದಮ್ಮ


(Courtesy; kannada divige)

Sunday, 8 March 2015

☀ ನವ್ಯ ಕನ್ನಡ ಸಾಹಿತ್ಯ

☀ ನವ್ಯ ಕನ್ನಡ ಸಾಹಿತ್ಯ
━━━━━━━━━━━━━━━━━━━━━━━━━━━━━━━━━━━━━━━━━━━━━

●.ನವ್ಯ ಕನ್ನಡ ಸಾಹಿತ್ಯ

— ೧೯೪೭ ರ ಭಾರತದ ಸ್ವಾತಂತ್ರ್ಯಾನಂತರ ಕನ್ನಡ ಸಾಹಿತ್ಯದಲ್ಲಿ ಇನ್ನೊಂದು ಹೊಸ ಸಾಹಿತ್ಯ ಪ್ರಕಾರದ ಉಗಮವಾಯಿತು: ನವ್ಯ.

●.ಈ ಪ್ರಕಾರದ ಪಿತರೆಂದರೆ ಗೋಪಾಲಕೃಷ್ಣ ಅಡಿಗರು. ನವ್ಯ ಕವಿಗಳು ನಿರಾಶಾವಾದಿ ಬುದ್ಧಿಜೀವಿಗಳಿಗಾಗಿ ಹಾಗೂ ನಿರಾಶಾವಾದಿ ಬುದ್ಧಿಜೀವಿಗಳಂತೆ ಕಾವ್ಯ ರಚಿಸಿದರು.

—ಭಾಷಾಪ್ರಯೋಗದ ಚಮತ್ಕಾರ ಹಾಗೂ ಕಾವ್ಯತಂತ್ರ ಹೊಸ ಎತ್ತರವನ್ನು ಈ ಪ್ರಕಾರದಲ್ಲಿ ಕಂಡಿತು.


●.ಇತರ ಪ್ರಕಾರಗಳು

— ಕಳೆದ ಐದು ದಶಕಗಳಲ್ಲಿ ಕನ್ನಡ ಸಾಹಿತ್ಯದ ದಾರಿ ಸಾಮಾಜಿಕ ವಿಷಯಗಳನ್ನು ಕುರಿತದ್ದಾಗಿದೆ.

— ಜಾತಿಪದ್ಧತಿಯ ತಾರತಮ್ಯಗಳಿಂದ ಬಂಡಾಯ ಮತ್ತು ದಲಿತ ಕಾವ್ಯ ಪ್ರೇರಿತವಾಗಿದೆ.

— ಸ್ತ್ರೀ-ವಿಮೋಚನಾ ಚಳುವಳಿಗಳು ಸ್ತ್ರೀ-ಕಾವ್ಯ ಪ್ರಕಾರಕ್ಕೆ ಎಡೆ ಮಾದಿಕೊಟ್ಟಿವೆ.

— ಸಣ್ಣ ಕಥೆಗಳು ಹಾಗೂ ಭಾವಗಿತೆಗಳು ಸಹ ಇಪ್ಪತ್ತನೆ ಶತಮಾನದಲ್ಲಿ ಜನಪ್ರಿಯವಾದ ಸಾಹಿತ್ಯ ಪ್ರಕಾರಗಳು.


(Courtesy: sobagu)

☀ ದಾಸ ಸಾಹಿತ್ಯ ಅಥವಾ ಭಕ್ತಿ ಸಾಹಿತ್ಯ: (Dasa Literature)

☀ ದಾಸ ಸಾಹಿತ್ಯ ಅಥವಾ ಭಕ್ತಿ ಸಾಹಿತ್ಯ : (Dasa Literature)

━━━━━━━━━━━━━━━━━━━━━━━━━━━━━━━━━━━━━━━━━━━━━


— ದಾಸ ಸಾಹಿತ್ಯ (ಭಕ್ತಿ ಸಾಹಿತ್ಯ) ೧೫ನೇ ಶತಮಾನದಲ್ಲಿ ಆರಂಭಗೊಂಡ ಭಕ್ತಿ ಪಂಥದ ಹರಿದಾಸರಿಂದ ವಿರಚಿತವಾದದ್ದು.

— ಈ ಪದ್ಯಗಳಿಗೆ ಸಾಮಾನ್ಯವಾಗಿ ‘ಪದ’ ಗಳೆಂದು ಹೆಸರು. ಇವು ಭಗವಂತನಲ್ಲಿ ಒಂದಾಗ ಬಯಸುವ ಭಕ್ತನ ಭಾವವನ್ನು ಪ್ರತಿಬಿಂಬಿಸುತ್ತವೆ. ಈ ಸಾಹಿತ್ಯ ಸಂಗೀತದೊಂದಿಗೂ ನಿಲುಕಿದೆ.

— ದಾಸ ಸಾಹಿತ್ಯ ಭಾರತದ ಶಾಸ್ತ್ರೀಯ ಸಂಗೀತ ಪದ್ಧತಿಗಳಲ್ಲೊಂದಾದ ಕರ್ನಾಟಕ ಸಂಗೀತಕ್ಕೆ ಬುನಾದಿಯಾಗಿದೆ.
ದಾಸರ ಪದಗಳಿಗೆ ದೇವರನಾಮಗಳೆಂದೂ ಹೆಸರು.

— ಈ ಪ್ರಕಾರದ ಮುಖ್ಯ ಕನ್ನಡ ಕವಿಗಳೆಂದರೆ ಪುರಂದರದಾಸ (೧೪೯೪-೧೫೬೪) ಮತ್ತು ಕನಕದಾಸ. ಇವರನ್ನು ದಾಸ ಸಾಹಿತ್ಯದ ಅಶ್ವಿನಿದೇವತೆಗಳೆಂದು ಕರೆಯಲಾಗಿದೆ.

(To be Continued...)

(Courtesy: Honalu) 

☀ ವಚನ ಸಾಹಿತ್ಯ: (Vachana Literature)

☀ ವಚನ ಸಾಹಿತ್ಯ:
(Vachana Literature)

━━━━━━━━━━━━━━━━━━━━━━━━━━━━━━━━━━━━━━━━━━━━━

♦.ವಚನ ಸಾಹಿತ್ಯ.


●.ವಚನಗಳು ಎಂದು ಸಾಮಾನ್ಯವಾಗಿ ಕರೆಯಲಾಗುವ ವೀರಶೈವ ಶರಣರ ವಚನಗಳು ಮುಕ್ತ ಛಂದಸ್ಸಿನಲ್ಲಿವೆ.

— ಬಸವೇಶ್ವರ, ಅಕ್ಕಮಹಾದೇವಿ ಮೊದಲಾದವರ ವಚನಗಳನ್ನು ಶಾಸ್ತ್ರೀಯ ಸಂಗೀತದಲ್ಲಿ ಅಳವಡಿಸಿ ಮಲ್ಲಿಕಾರ್ಜುನ ಮನಸೂರ ಮೊದಲಾದ ಹಿಂದುಸ್ತಾನಿ ಸಂಗೀತ ಕಾರರು ಹಾಡಿದ್ದಾರೆ.

 — ಶರಣರ ನಂತರದ ಕವಿಯಾದ ಸರ್ವಜ್ಞರ ವಚನಗಳು ಮಾತ್ರ ತ್ರಿಪದಿಯಲ್ಲಿವೆ.


●.ವಚನಗಳು ಅಂದಿನ ಕಾಲದ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗೆಗಿನ ಯೋಚನಾಧಾರೆಗಳು.

— ಇನ್ನೂ ಮುಖ್ಯವಾಗಿ, ವಚನ ಸಾಹಿತ್ಯ ಅಂದಿನ ಸಾಮಾಜಿಕ ಕ್ರಾಂತಿಯ ಪ್ರಕ್ರಿಯೆಗೆ ಕನ್ನಡಿ ಹಿಡಿಯುತ್ತದೆ.

— ಬಸವಣ್ಣನವರಿಂದ ಆರಂಭವಾದ ಈ ಕ್ರಾಂತಿ ಜಾತಿ, ಮತ, ಧರ್ಮಗಳ ಯೋಚನೆಗಳ ಕ್ರಾಂತಿಕಾರಿ ಮರು-ಪರಿಶೀಲನೆಗೆ ದಾರಿ ಮಾಡಿಕೊಟ್ಟಿತು.


●.ವಚನ ಸಾಹಿತ್ಯದಿಂದ ಬಂದ ಮುಖ್ಯ ಬೋಧನೆಗಳೆಂದರೆ ಕಾಯಕವೇ ಕೈಲಾಸ ಮತ್ತು ಅಧ್ಯಾತ್ಮಿಕತೆಯ ಬಗ್ಗೆ ಹೊಸ ನೋಟ.

— ವಚನ ಸಾಹಿತ್ಯದ ಪ್ರಮುಖ ಹರಿಕಾರರೆಂದರೆ ಬಸವೇಶ್ವರ (೧೧೩೪-೧೧೯೬), ಅಲ್ಲಮಪ್ರಭು ಮತ್ತು ಕನ್ನಡದ ಮೊದಲ ಮಹಿಳಾ ಲೇಖಕಿಯಾದ ಅಕ್ಕ ಮಹಾದೇವಿ (೧೨ನೇ ಶತಮಾನ).


(To be Continued...)

(Courtesy: sobagu)

☀ ನಡುಗನ್ನಡ ಸಾಹಿತ್ಯ: (Medieval Kannada Literature)

☀ ನಡುಗನ್ನಡ ಸಾಹಿತ್ಯ:
(Medieval Kannada Literature)

━━━━━━━━━━━━━━━━━━━━━━━━━━━━━━━━━━━━━━━━━━━━━



— ನಡುಗನ್ನಡ ಸಾಹಿತ್ಯದಲ್ಲಿ ಅನೇಕ ಹೊಸ ಸಾಹಿತ್ಯ ಪ್ರಕಾರಗಳು ಬೆಳಕಿಗೆ ಬಂದವು.

— ಇವುಗಳಲ್ಲಿ ಮುಖ್ಯವಾದವು ರಗಳೆ, ಸಾಂಗತ್ಯ ಮತ್ತು ದೇಸಿ.

— ಈ ಕಾಲದ ಸಾಹಿತ್ಯ ಜೈನ, ಹಿಂದೂ ಹಾಗೂ ಜಾತ್ಯತೀತ ಬೋಧನೆಗಳ ಮೇಲೆ ಆಧಾರಿತವಾಗಿದೆ.


●.ಈ ಘಟ್ಟದ ಪ್ರಮುಖ ಲೇಖಕರಲ್ಲಿ ಇಬ್ಬರೆಂದರೆ ಹರಿಹರ ಮತ್ತು ರಾಘವಾಂಕ.

— ಇಬ್ಬರೂ ತಮ್ಮದೇ ಶೈಲಿಯಲ್ಲಿ ಕನ್ನಡ ಸಾಹಿತ್ಯದ ದಾರಿಯನ್ನು ಬೆಳಗಿದವರು.

— ಹರಿಹರ ರಗಳೆ ಸಾಹಿತ್ಯವನ್ನು ಬಳಕೆಗೆ ತಂದನು, ತನ್ನ ಶೈವ ಮತ್ತು ವೀರಶೈವ ಕೃತಿಗಳ ಮೂಲಕ.


— ರಾಘವಾಂಕ ತನ್ನ ಆರು ಕೃತಿಗಳ ಮೂಲಕ ಷಟ್‌ಪದಿ ಛಂದಸ್ಸನ್ನು ಜನಪ್ರಿಯಗೊಳಿಸಿದನು.

— ಅವನ ಮುಖ್ಯ ಕೃತಿ ಹರಿಶ್ಚಂದ್ರ ಕಾವ್ಯ, ಪೌರಾಣಿಕ ಪಾತ್ರವಾದ ಹರಿಶ್ಚಂದ್ರನ ಜೀವನವನ್ನು ಕುರಿತದ್ದು. ಈ ಕೃತಿ ಸಹ ತನ್ನ ತೀವ್ರವಾದ ಮಾನವತಾವಾದಕ್ಕೆ ಪ್ರಸಿದ್ಧವಾಗಿದೆ.

— ಇದೇ ಕಾಲದ ಇನ್ನೊಬ್ಬ ಪ್ರಸಿದ್ಧ ಜೈನ ಕವಿ ಜನ್ನ. ತನ್ನ ಕೃತಿಗಳಾದ ಯಶೋಧರ ಚರಿತೆ ಮತ್ತು ಅನಂಥನಾಥ ಪುರಾಣಗಳ ಮೂಲಕ ಜೈನ ಸಂಪ್ರದಾಯದ ಬಗ್ಗೆ ಬರೆದನು.

— ಇದೇ ಕಾಲದ ಕನ್ನಡ ವ್ಯಾಕರಣದ ಬಗೆಗಿನ ಮುಖ್ಯ ಕೃತಿ ಕೇಶಿರಾಜನ ಶಬ್ದ ಮಣಿ ದರ್ಪಣ.


(To be Continued...)

(Courtesy: sobagu)

☀ಕನ್ನಡ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಚರಿತ್ರೆಯ ಪ್ರಮುಖ ಮೂರು ಘಟ್ಟಗಳು:  (Kannada literature and the three phases of history of Kannada literature)

☀ಕನ್ನಡ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯ ಚರಿತ್ರೆಯ ಪ್ರಮುಖ ಮೂರು ಘಟ್ಟಗಳು:
(Kannada literature and the three phases of history of Kannada literature)

━━━━━━━━━━━━━━━━━━━━━━━━━━━━━━━━━━━━━━━━━━━━━


●.ಭಾರತದ ಕರ್ನಾಟಕ ರಾಜ್ಯದಲ್ಲಿ ಉಪಯೋಗಿಸಲ್ಪಡುವ ಕನ್ನಡ ಭಾಷೆಯ ಸಾಹಿತ್ಯ. ಕನ್ನಡ ಭಾಷೆ ದ್ರಾವಿಡ ಭಾಷಾ ಬಳಗಕ್ಕೆ ಸೇರುತ್ತದೆ. ಆಧುನಿಕ ಭಾರತದಲ್ಲಿ ಪ್ರಚಲಿತವಾಗಿರುವ ಭಾಷೆಗಳಲ್ಲಿ ಎರಡನೇ ಅತಿ ಹಳೆಯ ಭಾಷೆಯೂ ಹೌದು (ತಮಿಳಿನ ನಂತರ).

●.ಕನ್ನಡ ಸಾಹಿತ್ಯ ಭಾರತದಲ್ಲಿ ಮೂರನೇ ಅತಿ ಹಳೆಯ ಸಾಹಿತ್ಯಕ ಸಂಪ್ರದಾಯ, ಸಂಸ್ಕೃತ ಸಾಹಿತ್ಯ (ಮತ್ತು ಅದರ ಉಪಭಾಷೆಗಳಾದ ಪ್ರಾಕೃತ ಇತ್ಯಾದಿ) ಹಾಗೂ ತಮಿಳು ಸಾಹಿತ್ಯದ ನಂತರ.

●.ಕನ್ನಡ ಬರವಣಿಗೆಯ ಪ್ರಪ್ರಥಮ ಉದಾಹರಣೆ ದೊರಕಿರುವುದು ಹಲ್ಮಿಡಿ ಶಾಸನ ದಲ್ಲಿ (ಸು. ಕ್ರಿ.ಶ. ೪೫೦). ಪ್ರಸಿದ್ಧವಾದ ಬಾದಾಮಿ ಶಾಸನಗಳು ಪುರಾತನ ಕನ್ನಡ ಬರವಣಿಗೆಯ ಮತ್ತಷ್ಟು ಉದಾಹರಣೆಗಳನ್ನು ನೀಡುತ್ತವೆ.

●.ಉಪಲಬ್ಧವಾಗಿರುವ ಪ್ರಥಮ ಕನ್ನಡ ಪುಸ್ತಕವೆಂದರೆ ೯ ನೇ ಶತಮಾನದ ಅಮೋಘವರ್ಷ ನೃಪತುಂಗನ ಕವಿರಾಜಮಾರ್ಗ. ಈ ಪುಸ್ತಕ ಕನ್ನಡ ಕಾವ್ಯ, ಕನ್ನಡ ನಾಡು, ಮತ್ತು ಕನ್ನಡಿಗರ ಬಗ್ಗೆ ಬರೆಯಲ್ಪಟ್ಟ ಒಟ್ಟಾರೆ ಸಾರಾಂಶವೆನ್ನಬಹುದು. ಇದಕ್ಕೆ ಹಿಂದೆ ಬರೆಯಲ್ಪಟ್ಟ ಕೆಲವು ಕನ್ನಡ ಪುಸ್ತಕಗಳ ಉಲ್ಲೇಖ ಈ ಪುಸ್ತಕದಲ್ಲಿ ಬಂದಿರುವ ಆಧಾರದ ಮೇಲೆ ಕನ್ನಡ ಸಾಹಿತ್ಯದ ಉಗಮ ಸುಮಾರು ಕ್ರಿ.ಶ. ೬-೭ನೇ ಶತಮಾನಗಳಲ್ಲಿ ಆದದ್ದಿರಬಹುದು. ಆದರೆ ಕವಿರಾಜಮಾರ್ಗದ ಹಿಂದಿನ ಯಾವ ಕೃತಿಗಳೂ ಇದುವರೆಗೆ ದೊರಕಿಲ್ಲ.


●.ಕನ್ನಡ ಸಾಹಿತ್ಯದ ಚರಿತ್ರೆಯನ್ನು ಮೂರು ಘಟ್ಟಗಳಾಗಿ ವಿಂಗಡಿಸಬಹುದು:

✧.ಹಳೆಗನ್ನಡ,

✧.ನಡುಗನ್ನಡ

✧.ಆಧುನಿಕ ಕನ್ನಡ.


(To be Continued...)
(sobagu)