"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday, 16 July 2015

☀ಹುಲಿ ಯೋಜನೆ: (ಪ್ರಾಜೆಕ್ಟ್ ಟೈಗರ್ )(ಟಿಪ್ಪಣಿ ಬರಹ) (Project Tiger in India) 

☀ಹಲಿ ಯೋಜನೆ: (ಪ್ರಾಜೆಕ್ಟ್ ಟೈಗರ್ )(ಟಿಪ್ಪಣಿ ಬರಹ)
(Project Tiger in India)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಭಾರತದ ಪ್ರಾಕೃತಿಕ ವೈವಿಧ್ಯತೆ.
(Indian Environmental Biodiversity)

★ ಜೀವಿ ವೈವಿಧ್ಯತೆ.
(Biodiversity)


●.ಪ್ರಾಜೆಕ್ಟ್ ಟೈಗರ್ ಯೋಜನೆಯನ್ನು ಭಾರತದಾದ್ಯಂತ 1973 ರಿಂದ 16.339 sq.km ವ್ಯಾಪ್ತಿ ಪ್ರದೇಶದಲ್ಲಿ ಒಂಬತ್ತು ಹುಲಿ ಮೀಸಲುಗಳೊಂದಿಗೆ ಅನುಷ್ಠಾನಗೊಳಿಸಲಾಗಿದೆ. ಪ್ರಸ್ತುತ 27 ಹುಲಿ ಮೀಸಲುಗಳಿದ್ದು, ಇದರ ವ್ಯಾಪ್ತಿ ಪ್ರದೇಶ 37.761 sq.km. ಗೆ ಹೆಚ್ಚಾಗಿದೆ.

●.ಭಾರತ ಸರ್ಕಾರವು ಶೇಕಡಾ 50%ರಷ್ಟು ಆವರ್ತನೀಯ ಬಾಬ್ತನ್ನು ಹಾಗೂ ಶೇಕಡಾ 100%ರಷ್ಟು ಆವರ್ತನೀಯವಲ್ಲದ ಬಾಬ್ತನ್ನು ಒದಗಿಸುತ್ತದೆ.

●.ವಿಶೇಷವಾಗಿ ಕರ್ನಾಟಕದಲ್ಲಿ ಬಂಡೀಪುರ ಹುಲಿ ಮೀಸಲು, ರಾಜೀವ್ ಗಾಂಧಿ (ನಾಗರಹೊಳೆ) ಹುಲಿ ಮೀಸಲು, ಭದ್ರಾ ಹುಲಿ ಮೀಸಲು ಮತ್ತು ಅನ್ಶಿ-ದಾಂಡೇಲಿ ಹುಲಿ ಮೀಸಲು, ಹುಲಿ ಯೋಜನೆ ಅಡಿಯಲ್ಲಿ ಬರುತ್ತವೆ.

●.ಈ ಯೋಜನೆಯ ಅಡಿಯಲ್ಲಿ ಕೈಗೊಳ್ಳುವ ಕಾರ್ಯಗಳು :
— ಹುಲಿ ಸಂರಕ್ಷಣಾ ಪಡೆ,
— ಮಳೆಗಾಲದ ಗಸ್ತು ದಳಗಳನ್ನು ಸ್ಥಾಪಿಸುವುದು,
— ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ ಮತ್ತು ನಿರ್ವಹಣೆ,
— ಕಳ್ಳಬೇಟೆ ನಿಗ್ರಹ ಶಿಬಿರಗಳನ್ನು ಸಂಘಟಿಸುವುದರ ಮೂಲಕ ಕಳ್ಳಬೇಟೆಯನ್ನು ತಡೆಯುವುದು,
— ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ,
— ವೈರ್ಲೆಸ್ ಸೆಟ್ಗಳ, ವಾಹನಗಳ ನಿರ್ವಹಣೆ,
— ಬೆಂಕಿ ನಿಯಂತ್ರಣದ ಕೆಲಸ,
— ಪ್ರಾಣಿಗಳಿಗೆ ಕುಡಿಯುವ ನೀರು ಒದಗಿಸಲು ನೀರಿನ ಹೊಂಡಗಳನ್ನು ನಿರ್ಮಿಸುವುದು,
— ಪ್ರಚಾರ ಕಾರ್ಯಗಳು,
— ಆವಾಸಸ್ಥಾನ ಅಭಿವೃದ್ಧಿ ಕೆಲಸಗಳು ಹಾಗೂ ಜೈವಿಕ ಪರಿಸರ ಅಭಿವೃದ್ಧಿ ಕೆಲಸಗಳು ಇತ್ಯಾದಿ.

No comments:

Post a Comment