"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 25 July 2015

●.ಈ ದಿನದ (KAS/IAS) ಪ್ರಶ್ನೆ: ☀ಇತ್ತೀಚೆಗೆ ಜಾಗತಿಕ ಸಮುದಾಯದಲ್ಲಿ ಹೊಸದಾಗಿ ದೊಡ್ಡ ಮಟ್ಟದ ಆತಂಕ ಸೃಷ್ಟಿಸಿದ "ಮೆರ್ಸ್ ಕಾಯಿಲೆ" ಯು ವೈದ್ಯ ಲೋಕಕ್ಕೆ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಮೆರ್ಸ್ ಕಾಯಿಲೆಯ ಹರಡುವಿಕೆ ಮತ್ತು ಅದರ ವಿಶಿಷ್ಟ ಲಕ್ಷಣಗಳ ಕುರಿತು ವಿಶ್ಲೇಷಿಸಿ.  (What is MERS? analyze the spread of the MERS with its features)

●.ಈ ದಿನದ (KAS/IAS) ಪ್ರಶ್ನೆ:

☀ಇತ್ತೀಚೆಗೆ ಜಾಗತಿಕ ಸಮುದಾಯದಲ್ಲಿ ಹೊಸದಾಗಿ ದೊಡ್ಡ ಮಟ್ಟದ ಆತಂಕ ಸೃಷ್ಟಿಸಿದ "ಮೆರ್ಸ್ ಕಾಯಿಲೆ" ಯು ವೈದ್ಯ ಲೋಕಕ್ಕೆ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಮೆರ್ಸ್ ಕಾಯಿಲೆಯ ಹರಡುವಿಕೆ ಮತ್ತು ಅದರ ವಿಶಿಷ್ಟ ಲಕ್ಷಣಗಳ ಕುರಿತು ವಿಶ್ಲೇಷಿಸಿ.
(What is MERS? analyze the spread of the MERS with its features)

━━━━━━━━━━━━━━━━━━━━━━━━━━━━━━━━━━━━━━━━━━━━━

★ಸಿವಿಲ್ ಸರ್ವಿಸ್ (ಐಎಎಸ್) ಸಾಮಾನ್ಯ ಅಧ್ಯಯನ.
(IAS GENERAL STUDIES)

★ ಸಾಮಾನ್ಯ ವಿಜ್ಞಾನ
(General Science)


●.ಪ್ರಪಂಚದಾದ್ಯಂತ 2003ರಲ್ಲಿ ದೊಡ್ಡ ಮಟ್ಟದ ಆತಂಕ ಸೃಷ್ಟಿಸಿದ್ದ ಸಾರ್ಸ್ ವೈರಸ್ ಸುದ್ದಿ ತಣ್ಣಗಾದ ಬೆನ್ನಲ್ಲೇ, ಆಂಥ್ರಾಕ್ಸ್ ಕಾಯಿಲೆ ಇಡೀ ಜಗತ್ತನ್ನೇ ತಲ್ಲಣಗೊಳಿಸಿತ್ತು. ಅದು ತಹಬಂದಿಗೆ ಬರುವಷ್ಟರಲ್ಲಿ ಕಳೆದೆರಡು ವರ್ಷದಿಂದ ಎಬೋಲಾ ಕಾಯಿಲೆ ಆಫ್ರಿಕಾ ಖಂಡದಲ್ಲೇ ಮರಣಮೃದಂಗ ಬಾರಿಸಿ ಆ ರಾಷ್ಟ್ರಗಳಿಗೆ ತೆರಳಲು ಜನರು ಅಂಜುವಂತಾಯಿತು. ಎಬೋಲಾ ನಿಯಂತ್ರಣಕ್ಕೆ ಬರುತ್ತಿದೆ ಅನ್ನುವಷ್ಟರಲ್ಲಿ ದಕ್ಷಿಣ ಕೊರಿಯಾದಲ್ಲಿ ಭೀಕರ ‘ಮೆರ್ಸ್’ ಕಾಯಿಲೆ ಕಾಣಿಸಿಕೊಂಡಿದ್ದು ಜಾಗತಿಕ ಸಮುದಾಯದಲ್ಲಿ ಮತ್ತೆ ಭಯ ಸೃಷ್ಟಿಸಿದೆ.

●.ಮಧ್ಯಪ್ರಾಚ್ಯ ಉಸಿರಾಟ ತೊಂದರೆ (ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್​ ಅಥವಾ ಮೆರ್ಸ್-Middle East respiratory syndrome ) ಎಂದು ಈ ರೋಗಕ್ಕೆ ಹೆಸರಿಡಲಾಗಿದೆ. ವೃದ್ಧರಲ್ಲೇ ಈ ಕಾಯಿಲೆ ಕಾಣಿಸಿಕೊಂಡಿರುವುದು ಹೆಚ್ಚು. ದಕ್ಷಿಣ ಕೊರಿಯಾದಲ್ಲಿ ಒಟ್ಟು 750 ಮಂದಿಯಲ್ಲಿ ರೋಗದ ಲಕ್ಷಣ ಕಂಡುಬಂದಿದ್ದು,ಅವರ ಮೇಲೆ ನಿಗಾವಹಿಸಲಾಗಿದೆ.


●.ವೈದ್ಯ ಲೋಕಕ್ಕೆ ಸವಾಲು :
━━━━━━━━━━━━━━━━

✧.ಹೃದಯಕ್ಕೆ ರಕ್ತ ಒದಗಿಸುವ ರಕ್ತನಾಳಗಳಲ್ಲಿ ವೈರಸ್​ಗಳು ಸೇರಿಕೊಂಡು ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ, ಕ್ರಮೇಣ ಮನುಷ್ಯನಲ್ಲಿ ತೀವ್ರವಾದ ಜ್ವರ, ಕಫ ಕಾಣಿಸಿಕೊಳ್ಳುತ್ತವೆ. ಬಳಿಕ ಮೂತ್ರಪಿಂಡಗಳು ವೈಫಲ್ಯಗೊಂಡು ಸಾವನ್ನಪ್ಪುತ್ತಾರೆ.
✧.ಎಬೋಲಾ, ಸಾರ್ಸ್​ಗೆ ಹೋಲಿಸಿದರೆ ಸೋಂಕು ಹರಡುವಿಕೆ ನಿಧಾನ. ಆದರೆ, ರೋಗ ಕಾಣಿಸಿಕೊಂಡರೆ ಬದುಕುಳಿಯುವ ಸಾಧ್ಯತೆ ಕಡಿಮೆ.
✧.ಇದುವರೆಗೆ ಕಾಯಿಲೆ ಉಪಶಮನಕ್ಕೆ ಔಷಧಿ ಕಂಡುಹಿಡಿದಿಲ್ಲ. ಹೀಗಾಗಿ, ಡೆಡ್ಲೀ ಮೆರ್ಸ್ ವೈದ್ಯಲೋಕಕ್ಕೆ ಸವಾಲಾಗಿ ಪರಿಣಮಿಸಿದೆ.


●.ಮೆರ್ಸ್ ಹಿನ್ನೆಲೆ :
━━━━━━━━━━━

✧. ರೋಗದ ಮೂಲ: ಸೌದಿ ಅರೇಬಿಯಾ.
✧. ಬಾವಲಿ ಹಾಗೂ ಒಂಟೆಗಳ ಮುಖಾಂತರ ಸೋಂಕು ಹರಡುವಿಕೆ.

●.2012ರಲ್ಲಿ ಬೆಳಕಿಗೆ
✧.ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್​ವೈರಸ್ ಆರಂಭದಲ್ಲಿ ಬಾವಲಿಗಳಿಂದ ಒಂಟೆಗಳಿಗೆ ಹರಡಿತ್ತು. ಈ ಸೋಂಕು ಒಂಟೆಗಳ ಮುಖಾಂತರ ಮನುಷ್ಯನಿಗೆ ಹರಡಿದೆ. ✧.2012ರಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತೆರಳಿದ್ದ ಬ್ರಿಟನ್ ಪ್ರವಾಸಿ ಈ ಕಾಯಿಲೆಗೆ ತುತ್ತಾದ ಬಳಿಕ ಮೊದಲ ಬಾರಿಗೆ ವಿಶ್ವವ್ಯಾಪಿ ಈ ರೋಗ ಪರಿಚಯಿಸಲ್ಪಟ್ಟಿತು.
✧.3 ವರ್ಷದಿಂದ ಈ ಕಾಯಿಲೆ ಅಷ್ಟೇನೂ ಸುದ್ದಿಮಾಡಿರಲಿಲ್ಲ.

●.436 ಮಂದಿ ಬಲಿ
✧.ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್​ಒ) ಪ್ರಕಾರ ಜಗತ್ತಿನಲ್ಲಿ ಈ ತನಕ 1,161 ಮಂದಿ ಈ ಸೋಂಕಿನಿಂದ ಬಳಲಿದ್ದು, 436 ಮಂದಿ ಸಾವನ್ನಪ್ಪಿದ್ದಾರೆ.
✧.ವೈರಸ್​ನ ರೂಪಾಂತರ ಭೇದಿಸಲು ಈ ತನಕ ಸಾಧ್ಯವಾಗಿಲ್ಲ.
 ✧.ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸೌದಿ ಅರೇಬಿಯಾ ಹೊರತುಪಡಿಸಿದರೆ, ದಕ್ಷಿಣ ಕೊರಿಯಾದಲ್ಲಿ ಹೆಚ್ಚು ಸೋಂಕುಪೀಡಿತರಿದ್ದಾರೆ.
✧.ಸಾರ್ಸ್​ಗಿಂತಲೂ ಡೇಂಜರಸ್ ಮೆರ್ಸ್ ವೈರಸ್​ಗಳು ಸಾರ್ಸ್ ವೈರಸ್ ಗುಣಲಕ್ಷಣವನ್ನೇ ಹೊಂದಿದೆ.
✧.ಸಾರ್ಸ್ ಸೋಂಕಿಗೆ ತುತ್ತಾದ ವ್ಯಕ್ತಿಗಳಲ್ಲಿ ಸಾವಿನ ಪ್ರಮಾಣ ಶೇ.9ರಿಂದ ಶೇ.12ರಷ್ಟಿದ್ದರೆ, ಮೆರ್ಸ್​ನಲ್ಲಿ ಶೇ.50ರಷ್ಟಿದೆ.
✧.ಈಗಾಗಲೇ ಮೂತ್ರಪಿಂಡ ಹಾಗೂ ಉಸಿರಾಟದ ತೊಂದರೆ ಹೊಂದಿರುವ ವ್ಯಕ್ತಿಗಳಿಗೆ ಈ ಸೋಂಕು ತಗಲಿದರೆ ಬದುಕುಳಿಯುವುದಿಲ್ಲ ಎಂದು ಡಬ್ಲ್ಯೂಎಚ್​ಒ ವಕ್ತಾರ ಕ್ರಿಶ್ಚಿಯನ್ ತಿಳಿಸಿದ್ದಾರೆ.
 ✧2012ರಲ್ಲಿ ಕಾಣಿಸಿಕೊಂಡ ಮೆರ್ಸ್ ವೈರಸ್​ನಿಂದ ಈವರೆಗೂ 25 ದೇಶಗಳಲ್ಲಿ 444 ಮಂದಿ ಪ್ರಾಣ ಕಳೆದುಕೊಂಡಿದ್ದು, ವಿಶ್ವದೆಲ್ಲೆಡೆ 1,190ಪ್ರಕರಣಗಳು ಪತ್ತೆಯಾಗಿವೆ.


●.ಮೆರ್ಸ್ ಲಕ್ಷಣಗಳೇನು?
━━━━━━━━━━━━━━

✧. ತೀವ್ರವಾದ ಜ್ವರ
✧. ಕಫ, ಆಗಾಗ್ಗೆ ಉಗುಳುವುದು
✧. ಉಸಿರಾಟದಲ್ಲಿ ತೊಂದರೆ
✧.ವಾಂತಿ, ಭೇದಿ
✧. ಮೂತ್ರಪಿಂಡ ವೈಫಲ್ಯಹರಡುವ ಸಾಧ್ಯತೆ.
✧.ಎಬೋಲಾ, ಅಂಥ್ರಾಕ್ಸ್​ನಂತೆ ಥಟ್ಟನೇ ಹರಡುವುದಿಲ್ಲ, ರೋಗಪೀಡಿತ ವ್ಯಕ್ತಿಗಳ ಜೊತೆ ನಿಕಟ ಸಂಬಂಧ ಹೊಂದಿದ್ದರೆ ಹರಡುವ ಸಾಧ್ಯತೆಯಿರುತ್ತದೆ.


●.ಮೆರ್ಸ್ ರೋಗದ ನಿಯಂತ್ರಣ ಕ್ರಮಗಳು :
━━━━━━━━━━━━━━━━━━━━━━

✧. ವೈದ್ಯಕೀಯ ಮಾಸ್ಕ್ ಧರಿಸಲು ಆದ್ಯತೆ ನೀಡಬೇಕು.
✧. ಕಣ್ಣಿನ ರಕ್ಷಣೆಗೆ ಗಾಗಲ್ ಬಳಕೆ
✧. ಸ್ವಚ್ಛ,ಉದ್ದನೆಯ ಗೌನ್ ಧರಿಸಲು ಆದ್ಯತೆ ನೀಡಬೇಕು.
✧. ಬಳಸಿ ಬಿಸಾಕುವ ಮಾಸ್ಕ್ ಬಳಸುವುದು ಉತ್ತಮ.
✧. ಇದುವರೆಗೆ ರೋಗ ಶಮನಕ್ಕೆ ಮದ್ದು ಕಂಡುಹಿಡಿದಿಲ್ಲ.ಹೈ ಅಲರ್ಟ್ಮೆರ್ಸ್ ಕಾಣಿಸಿಕೊಂಡ ಬೆನ್ನಲ್ಲೇ, ದಕ್ಷಿಣ ಕೊರಿಯಾ ಪ್ರವಾಸೋದ್ಯಮಕ್ಕೆ ಹೊಡೆತ ನೀಡಿದೆ.
✧.ಸಾಧ್ಯವಾದಷ್ಟೂ ದಕ್ಷಿಣ ಕೊರಿಯಾ ಪ್ರವಾಸ ಕೈಗೊಳ್ಳದಂತೆ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ. ಮತ್ತೊಂದೆಡೆ ದಕ್ಷಿಣ ಕೊರಿಯಾ ಸರ್ಕಾರ ಗಡಿಭಾಗದಲ್ಲಿ ಆರೋಗ್ಯ ತಪಾಸಣೆಯನ್ನು ಬಿಗಿಗೊಳಿಸಿದೆ. ಅಲ್ಲದೆ, ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಪ್ರವಾಸ ಕೈಗೊಳ್ಳದಂತೆ ಸೂಚಿಸಲಾಗಿದೆ.

(Courtesy :Vijayavani newspaper)

No comments:

Post a Comment